logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅಂಬೇಡ್ಕರ್–ಜಗಜೀವನ್ ರಾಮ್ ಜಯಂತಿ ಅಂಗವಾಗಿ ಪೌರಕಾರ್ಮಿಕರಿಗೆ ಸನ್ಮಾನ* ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಉತ್ತಮ ಪೌರಕಾರ್ಮಿಕ” ಪ್ರಶಸ್ತಿ ವಿತರಣೆ* ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಮಂತ್ರಿ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿ ಉತ್ಸವದ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಭಾವಪೂರ್ಣ ವೇದಿಕೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ವಿವಿಧ ನಗರಸಭೆ ಹಾಗೂ ಪುರಸಭೆಗಳಲ್ಲಿನ ಶ್ರಮಜೀವಿ ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ “ಉತ್ತಮ ಪೌರಕಾರ್ಮಿಕ” ಪ್ರಶಸ್ತಿಯನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಪ್ರಧಾನ ಮಾಡಿ ಗೌರವಿಸಿದರು. ಸಮಾಜದ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ತರವಾಗಿದ್ದು, ಅವರ ಸೇವೆ ಅಮೂಲ್ಯ ಎಂದು ಗಣ್ಯರು ತಮ್ಮ ಮಾತುಗಳಲ್ಲಿ ಅಭಿಪ್ರಾಯಪಟ್ಟರು. ಪ್ರಶಸ್ತಿ ಪಡೆದ ಪೌರಕಾರ್ಮಿಕರು: ಮುದಕಪ್ಪ ಬಚ್ಚೇನಹಳ್ಳಿ – ಪುರಸಭೆ ಮುಂಡರಗಿ, ಮರಿಯಪ್ಪ ಬಾನಪ್ಪ ಗುಡಿಮನಿ – ಪಟ್ಟಣ ಪಂಚಾಯತ್ ಶಿರಹಟ್ಟಿ, ದುರುಗಪ್ಪ ಪಾದಗಟ್ಟಿ – ಪಟ್ಟಣ ಪಂಚಾಯತ್ ನರೇಗಲ್ಲ, ಬಸವರಾಜ ಎಸ್. ಜೋಗಣ್ಣವರ್ – ಪುರಸಭೆ ರೋಣ, ಮಹೇಶ್ ಎಮ್. ಚಲವಾದಿ – ಪುರಸಭೆ ನರಗುಂದ, ದಾವಲಪ್ಪ ತಾಯಿ ದ್ಯಾಮವ್ವ ನಡೆಗೇರಿ – ಪಂಚಾಯತ್ ಮುಳಗುಂದ, ರೇಣಪ್ಪ ಕಮತದ – ಪುರಸಭೆ ಲಕ್ಷ್ಮೇಶ್ವರ, ಶಿವಪ್ಪ ಮಾದರ – ಪುರಸಭೆ ಗಜೇಂದ್ರಗಡ ಅಶೋಕ್ ಚಲವಾದಿ – ಗದಗ-ಬೆಟಗೇರಿ ನಗರಸಭೆ.

1 day ago
user_Udachappa tigari
Udachappa tigari
Photographer ಮುಂಡರಗಿ, ಗದಗ, ಕರ್ನಾಟಕ•
1 day ago
bd23cc27-2aa4-4fb3-99dc-a2129aeb240b

ಅಂಬೇಡ್ಕರ್–ಜಗಜೀವನ್ ರಾಮ್ ಜಯಂತಿ ಅಂಗವಾಗಿ ಪೌರಕಾರ್ಮಿಕರಿಗೆ ಸನ್ಮಾನ* ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಉತ್ತಮ ಪೌರಕಾರ್ಮಿಕ” ಪ್ರಶಸ್ತಿ ವಿತರಣೆ* ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಮಂತ್ರಿ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿ ಉತ್ಸವದ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಭಾವಪೂರ್ಣ ವೇದಿಕೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ವಿವಿಧ ನಗರಸಭೆ ಹಾಗೂ ಪುರಸಭೆಗಳಲ್ಲಿನ ಶ್ರಮಜೀವಿ ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ “ಉತ್ತಮ ಪೌರಕಾರ್ಮಿಕ” ಪ್ರಶಸ್ತಿಯನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಪ್ರಧಾನ ಮಾಡಿ ಗೌರವಿಸಿದರು. ಸಮಾಜದ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ತರವಾಗಿದ್ದು, ಅವರ ಸೇವೆ ಅಮೂಲ್ಯ ಎಂದು ಗಣ್ಯರು ತಮ್ಮ ಮಾತುಗಳಲ್ಲಿ ಅಭಿಪ್ರಾಯಪಟ್ಟರು. ಪ್ರಶಸ್ತಿ ಪಡೆದ ಪೌರಕಾರ್ಮಿಕರು: ಮುದಕಪ್ಪ ಬಚ್ಚೇನಹಳ್ಳಿ – ಪುರಸಭೆ ಮುಂಡರಗಿ, ಮರಿಯಪ್ಪ ಬಾನಪ್ಪ ಗುಡಿಮನಿ – ಪಟ್ಟಣ ಪಂಚಾಯತ್ ಶಿರಹಟ್ಟಿ, ದುರುಗಪ್ಪ ಪಾದಗಟ್ಟಿ – ಪಟ್ಟಣ ಪಂಚಾಯತ್ ನರೇಗಲ್ಲ, ಬಸವರಾಜ ಎಸ್. ಜೋಗಣ್ಣವರ್ – ಪುರಸಭೆ ರೋಣ, ಮಹೇಶ್ ಎಮ್. ಚಲವಾದಿ – ಪುರಸಭೆ ನರಗುಂದ, ದಾವಲಪ್ಪ ತಾಯಿ ದ್ಯಾಮವ್ವ ನಡೆಗೇರಿ – ಪಂಚಾಯತ್ ಮುಳಗುಂದ, ರೇಣಪ್ಪ ಕಮತದ – ಪುರಸಭೆ ಲಕ್ಷ್ಮೇಶ್ವರ, ಶಿವಪ್ಪ ಮಾದರ – ಪುರಸಭೆ ಗಜೇಂದ್ರಗಡ ಅಶೋಕ್ ಚಲವಾದಿ – ಗದಗ-ಬೆಟಗೇರಿ ನಗರಸಭೆ.

More news from ಕರ್ನಾಟಕ and nearby areas
  • ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ, ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ಅವಧಿಯನ್ನು ​ಹೊಸ ಸಮಯ: ಇನ್ಮುಂದೆ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಿಗದಿ ಮಾಡಿ ಯಂದು ಕೇಳಿಕೊಳ್ಳುತ್ತಿದ್ದಾರೆ ಮಧ್ಯಾಹ್ನದ ಸುಡುವ ಬಿಸಿಲಿನಿಂದ ನೌಕರರನ್ನು ಮತ್ತು ದೂರದ ಊರುಗಳಿಂದ ಬರುವ ಜನರನ್ನು ರಕ್ಷಿಸುವುದು ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ​ "ಜನಸಾಮಾನ್ಯರ ಆರೋಗ್ಯ ಮತ್ತು ಕೆಲಸದ ದಕ್ಷತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಲು ಕಡಿಮೆಯಾಗುವವರೆಗೆ ಈ ಹೊಸ ವೇಳಾಪಟ್ಟಿ ಜಾರಿಗೆ ತರಬಹುದು ​ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಅನಗತ್ಯವಾಗಿ ಮಧ್ಯಾಹ್ನ ಹೊರಬರಬಾರದು ಎಂದು ಆರೋಗ್ಯ ಇಲಾಖೆ ಕೂಡ ಸೂಚಿಸಿದೆ. ಈ ಸಮಯದ ಬದಲಾವಣೆಯನ್ನ ಮಾಡುವಂತೆ ಸರ್ಕಾರಕ್ಕೆ ಬಸವರಾಜ ಬಳ್ಳಾರಿ ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷೆರು ಸರ್ಕಾರ ಕ್ಕೆ ಮನವಿ ಮಾಡಿದ್ದಾರೆ ಸರ್ಕಾರ ಸಮಯ ಬದಲಾವಣೆ ಮಾಡುತ್ತಾ ಕಾದು ನೋಡಬೇಕಿದೆ ಮತ್ತು ಸರ್ಕಾರಿ ಕೆಲಸಗಳಿಗೆ ಬರುವ ಜನರಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
    1
    ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ, ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ಅವಧಿಯನ್ನು 
​ಹೊಸ ಸಮಯ: ಇನ್ಮುಂದೆ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಿಗದಿ ಮಾಡಿ ಯಂದು ಕೇಳಿಕೊಳ್ಳುತ್ತಿದ್ದಾರೆ 
ಮಧ್ಯಾಹ್ನದ ಸುಡುವ ಬಿಸಿಲಿನಿಂದ ನೌಕರರನ್ನು ಮತ್ತು ದೂರದ ಊರುಗಳಿಂದ ಬರುವ ಜನರನ್ನು ರಕ್ಷಿಸುವುದು ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ.
​
"ಜನಸಾಮಾನ್ಯರ ಆರೋಗ್ಯ ಮತ್ತು ಕೆಲಸದ ದಕ್ಷತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಲು ಕಡಿಮೆಯಾಗುವವರೆಗೆ ಈ ಹೊಸ ವೇಳಾಪಟ್ಟಿ ಜಾರಿಗೆ ತರಬಹುದು 
​
ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಅನಗತ್ಯವಾಗಿ ಮಧ್ಯಾಹ್ನ ಹೊರಬರಬಾರದು ಎಂದು ಆರೋಗ್ಯ ಇಲಾಖೆ ಕೂಡ ಸೂಚಿಸಿದೆ. ಈ ಸಮಯದ ಬದಲಾವಣೆಯನ್ನ ಮಾಡುವಂತೆ ಸರ್ಕಾರಕ್ಕೆ ಬಸವರಾಜ ಬಳ್ಳಾರಿ ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷೆರು ಸರ್ಕಾರ ಕ್ಕೆ ಮನವಿ ಮಾಡಿದ್ದಾರೆ ಸರ್ಕಾರ ಸಮಯ ಬದಲಾವಣೆ ಮಾಡುತ್ತಾ ಕಾದು ನೋಡಬೇಕಿದೆ ಮತ್ತು ಸರ್ಕಾರಿ ಕೆಲಸಗಳಿಗೆ ಬರುವ ಜನರಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    18 hrs ago
  • Post by Onlinetv24x7
    1
    Post by Onlinetv24x7
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    8 hrs ago
  • ಮನೆ ಕಳ್ಳತನ ಮಾಡಿದ್ದ ಆರೋಪಿ ಬಂಧನ; ₹1,90,000 ಜಪ್ತಿ ಕೂಡ್ಲಿಗಿ ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಾನಹೊಸಹಳ್ಳಿಯ ಪೊಲೀಸರು ಯಶಸ್ವಿಯಾಗಿದರೆ. ನಜೀರ್ ಶಫಿ ಬಂಧಿತ ಆರೋಪಿ, ಕಾನಹೊಸಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ಮಂಗಾಪುರ ಗ್ರಾಮದಲ್ಲಿ ಜನವರಿ ಹಾಗು ಡಿಸೆಂಬರ್ ತಿಂಗಳಲ್ಲಿ ಎರಡು ಪ್ರತ್ಯಕ ಮನೆಗಳ್ಳತಾನವಾದ ಕುರಿತು ಪ್ರಕರಣ ದಾಕಲಾಗಿದ್ದವು, ಪ್ರಕರಣದ ಜಾಡು ಹಿಡಿದ ಕಾನಾಹೊಸಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ₹1,90000 ಹಣವನ್ನು ವಶಕ್ಕೆ ಪಡೆದಿದ್ದಾರೆ. ಮಂಗಪುರದ ಬಸವರಾಜ ಎಂಬುವವರ ಮನೆಯಲ್ಲಿ ಬೀರುವಿನಲ್ಲಿದ್ದ 145000 ಹಾಗೂ ಗುರುಬಸವರಾಜ್ ಎಂಬುವವರ ಮನೆಯಲ್ಲಿ ₹55000 ಹಣವನ್ನು ಯಾರು ಇಲ್ಲದ ವೇಳೆ ಕಳ್ಳತನ ಮಾಡಿರುವ ಬಗ್ಗೆ ಪ್ರಕರಣ ದಾಕಲಾಗಿತ್ತು. ಎಸ್ಪಿ ಜಾಹ್ನವಿ ಎಸ್, ಎಎಸ್ಪಿ ಮಂಜುನಾಥ, ಡಿವೈಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ಡಿ ದುರುಗಪ್ಪ ಮಾರ್ಗದರ್ಶನದಲ್ಲಿ ಪಿಎಸ್ಐ ಸಿದ್ರಾಮ್ ಬಿದರಾಣಿ ನೇತೃತ್ವದಲ್ಲಿ ಸಿಬಂದ್ದಿ ಕೃಷ್ಣಪ್ಪ, ಸುರೇಶ್, ಕೊಟ್ರೇಶ ಅಂಗಡಿ, ಸಿದ್ದಲಿಂಗಪ್ಪ, ವಿನಾಯಕ್, ಸಂದೀಪ್, ರವಿಚಂದ್ರ ಗೌಡ, ಕೃಷ್ಣ ನಾಯಕ್ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ ಹಾಗೂ ಸಿಬಂದ್ದಿ ವರ್ಗಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಜಾಹ್ನವಿ ಅಭಿನಂದಿಸಿದ್ದಾರೆ.
    1
    ಮನೆ ಕಳ್ಳತನ ಮಾಡಿದ್ದ ಆರೋಪಿ ಬಂಧನ; ₹1,90,000 ಜಪ್ತಿ 
ಕೂಡ್ಲಿಗಿ 
ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಾನಹೊಸಹಳ್ಳಿಯ ಪೊಲೀಸರು ಯಶಸ್ವಿಯಾಗಿದರೆ.
ನಜೀರ್ ಶಫಿ ಬಂಧಿತ ಆರೋಪಿ, ಕಾನಹೊಸಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ಮಂಗಾಪುರ ಗ್ರಾಮದಲ್ಲಿ ಜನವರಿ ಹಾಗು ಡಿಸೆಂಬರ್ ತಿಂಗಳಲ್ಲಿ ಎರಡು ಪ್ರತ್ಯಕ ಮನೆಗಳ್ಳತಾನವಾದ ಕುರಿತು ಪ್ರಕರಣ ದಾಕಲಾಗಿದ್ದವು, ಪ್ರಕರಣದ ಜಾಡು ಹಿಡಿದ ಕಾನಾಹೊಸಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ₹1,90000 ಹಣವನ್ನು ವಶಕ್ಕೆ ಪಡೆದಿದ್ದಾರೆ.
ಮಂಗಪುರದ ಬಸವರಾಜ ಎಂಬುವವರ ಮನೆಯಲ್ಲಿ ಬೀರುವಿನಲ್ಲಿದ್ದ 145000 ಹಾಗೂ ಗುರುಬಸವರಾಜ್ ಎಂಬುವವರ ಮನೆಯಲ್ಲಿ ₹55000 ಹಣವನ್ನು ಯಾರು ಇಲ್ಲದ ವೇಳೆ ಕಳ್ಳತನ ಮಾಡಿರುವ ಬಗ್ಗೆ ಪ್ರಕರಣ ದಾಕಲಾಗಿತ್ತು.
ಎಸ್ಪಿ ಜಾಹ್ನವಿ ಎಸ್, ಎಎಸ್ಪಿ ಮಂಜುನಾಥ, ಡಿವೈಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ಡಿ ದುರುಗಪ್ಪ ಮಾರ್ಗದರ್ಶನದಲ್ಲಿ ಪಿಎಸ್ಐ ಸಿದ್ರಾಮ್ ಬಿದರಾಣಿ ನೇತೃತ್ವದಲ್ಲಿ ಸಿಬಂದ್ದಿ ಕೃಷ್ಣಪ್ಪ, ಸುರೇಶ್, ಕೊಟ್ರೇಶ ಅಂಗಡಿ, ಸಿದ್ದಲಿಂಗಪ್ಪ, ವಿನಾಯಕ್, ಸಂದೀಪ್, ರವಿಚಂದ್ರ ಗೌಡ, ಕೃಷ್ಣ ನಾಯಕ್ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.
ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ ಹಾಗೂ ಸಿಬಂದ್ದಿ ವರ್ಗಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಜಾಹ್ನವಿ ಅಭಿನಂದಿಸಿದ್ದಾರೆ.
    user_KHANAHOSALLI NEWS SMAGRA SUDDI
    KHANAHOSALLI NEWS SMAGRA SUDDI
    Kudligi, Vijayanagar•
    12 hrs ago
  • ನಿರಂತರ ಕುಡಿಯುವ ನೀರಿನ ಯೋಜನೆ 24x7 ಹೊಂದಿರುವ ನಗರ ಇಳಕಲ್ ಆಗಿದೆ.ಆದರೆ ಅದೇ ಇಳಕಲ್ ನಲ್ಲಿ ನೀರಿಗಾಗಿ ಪ್ರತಿಭಟನೆಗಳು ದಿನನಿತ್ಯ ನಡೆಯುತ್ತಿವೆ. ಇದಕ್ಕೆ ಪರಿಹಾರ ಹುಡುಕಬೇಕಾದ ಅಧಿಕಾರಿಗಳು ಪ್ರತಿಭಟನೆ ನಡೆದ ಸ್ಥಳಕ್ಕೆ ಬಂದು ನೀರು ಬಿಡುತ್ತೇವೆ ಎಂದು ಹೇಳಿ ಹೋಗುತ್ತಾರೆ, ನಂತರ ಮತ್ತೆ ಅದೇ ಸ್ಥಿತಿ, ಹೀಗಾಗಿ ಬೇಸತ್ತ ಸಾರ್ವಜನಿಕರು ರಸ್ತೆಯಲ್ಲಿ ಖಾಲಿ ಕೊಡ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಇಡಕಲ್ ನಗರದಲ್ಲಿ ನಡೆದಿದೆ.
    1
    ನಿರಂತರ ಕುಡಿಯುವ ನೀರಿನ ಯೋಜನೆ 24x7 ಹೊಂದಿರುವ ನಗರ ಇಳಕಲ್ ಆಗಿದೆ.ಆದರೆ  ಅದೇ ಇಳಕಲ್ ನಲ್ಲಿ ನೀರಿಗಾಗಿ ಪ್ರತಿಭಟನೆಗಳು  ದಿನನಿತ್ಯ ನಡೆಯುತ್ತಿವೆ. ಇದಕ್ಕೆ ಪರಿಹಾರ ಹುಡುಕಬೇಕಾದ ಅಧಿಕಾರಿಗಳು  ಪ್ರತಿಭಟನೆ ನಡೆದ ಸ್ಥಳಕ್ಕೆ ಬಂದು ನೀರು ಬಿಡುತ್ತೇವೆ ಎಂದು ಹೇಳಿ ಹೋಗುತ್ತಾರೆ, ನಂತರ ಮತ್ತೆ ಅದೇ ಸ್ಥಿತಿ, ಹೀಗಾಗಿ ಬೇಸತ್ತ ಸಾರ್ವಜನಿಕರು ರಸ್ತೆಯಲ್ಲಿ ಖಾಲಿ ಕೊಡ ಇಟ್ಟು ಪ್ರತಿಭಟನೆ ನಡೆಸಿದ  ಘಟನೆ ಇಡಕಲ್ ನಗರದಲ್ಲಿ ನಡೆದಿದೆ.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    2 hrs ago
  • ದಾವಣಗೆರೆ ವಚನಾನಂದ ಶ್ರೀಗಳು ಮಠ ತೊಲಗುವಂತೆ ಒತ್ತಾಯ ಪಂಚಮಸಾಲಿ ಸಮಾಜ ಯುವ ಘಟಕ ಅಧ್ಯಕ್ಷರ ಕೊಟ್ರೇಶ್‌ ಆಗ್ರಹ ರೆಕ್ಮಂಡ್‌ ಮೇಲೆ ಪೀಠಾಧ್ಯಕ್ಷರಾಗಿದ್ದ ವಚನಾನಂದ ಸ್ವಾಮೀಜಿ ದಿಂಗಾಲೇಶ್ವರ ಸ್ವಾಮೀಜಿ ಶಿಫಾರಸ್ಸಿನಿಂದ ಬಂದಿದ್ದ ಸ್ವಾಮೀಜಿ ತಕ್ಷಣ ಮಠದಿಂದ ಹೊರಗಡೆ ಹೋಗುವಂತೆ ಒತ್ತಾಯ ಸಮಾಜದ ಹಿರಿಯರು ನಿರ್ಧರಿಸಿ ಪದಚ್ಯುತಿಗೊಳಿಸಿದ್ದಾರೆ ಗೌರವದಿಂದ ಮಠ ಖಾಲಿ ಮಾಡಿ ಇಲ್ಲ ನಾವೇ ಖಾಲಿ ಮಾಡಿಸುತ್ತೇವೆ ಎಂದು ಎಚ್ಚರಿಕೆ ಈ ಹಿಂದೆ ಸಿದ್ದಲಿಂಗಸ್ವಾಮೀಜಿ ಪದಚ್ಯುತಿಯಾದ ವೇಳೆ ನೀವೆ ಹೊರಗಡೆ ಹೋಗುವಂತೆ ಹೇಳಿದ್ದೀರಾ ಇದೀಗ ನೀವು ಪದಚ್ಯುತಿಯಾಗಿದ್ದೀರಾ ಗೌರವದಿಂದ ಮಠ ಬಿಟ್ಟು ತೊಲಗಿ ಎಂದು ಆಗ್ರಹ
    1
    ದಾವಣಗೆರೆ
ವಚನಾನಂದ ಶ್ರೀಗಳು ಮಠ ತೊಲಗುವಂತೆ ಒತ್ತಾಯ
ಪಂಚಮಸಾಲಿ ಸಮಾಜ ಯುವ ಘಟಕ ಅಧ್ಯಕ್ಷರ ಕೊಟ್ರೇಶ್‌ ಆಗ್ರಹ
ರೆಕ್ಮಂಡ್‌ ಮೇಲೆ ಪೀಠಾಧ್ಯಕ್ಷರಾಗಿದ್ದ ವಚನಾನಂದ ಸ್ವಾಮೀಜಿ
ದಿಂಗಾಲೇಶ್ವರ ಸ್ವಾಮೀಜಿ ಶಿಫಾರಸ್ಸಿನಿಂದ ಬಂದಿದ್ದ ಸ್ವಾಮೀಜಿ
ತಕ್ಷಣ ಮಠದಿಂದ ಹೊರಗಡೆ ಹೋಗುವಂತೆ ಒತ್ತಾಯ
ಸಮಾಜದ ಹಿರಿಯರು ನಿರ್ಧರಿಸಿ ಪದಚ್ಯುತಿಗೊಳಿಸಿದ್ದಾರೆ
ಗೌರವದಿಂದ ಮಠ ಖಾಲಿ ಮಾಡಿ ಇಲ್ಲ ನಾವೇ ಖಾಲಿ ಮಾಡಿಸುತ್ತೇವೆ ಎಂದು ಎಚ್ಚರಿಕೆ 
ಈ ಹಿಂದೆ ಸಿದ್ದಲಿಂಗಸ್ವಾಮೀಜಿ ಪದಚ್ಯುತಿಯಾದ ವೇಳೆ ನೀವೆ ಹೊರಗಡೆ ಹೋಗುವಂತೆ ಹೇಳಿದ್ದೀರಾ
ಇದೀಗ ನೀವು ಪದಚ್ಯುತಿಯಾಗಿದ್ದೀರಾ ಗೌರವದಿಂದ ಮಠ ಬಿಟ್ಟು ತೊಲಗಿ ಎಂದು ಆಗ್ರಹ
    user_Nandheesh kumar ac
    Nandheesh kumar ac
    ದಾವಣಗೆರೆ, ದಾವಣಗೆರೆ, ಕರ್ನಾಟಕ•
    4 hrs ago
  • ಗುಳೇದಗುಡ್ಡ: ಪಟ್ಟಣದ ಶ್ರೀಕಾಡಸಿದ್ದೇಶ್ವರ ಮರಡಿಮಠದ ಮೌನಯೋಗಿ 10ನೇ ಶ್ರೀ ಕಾಡಸಿದ್ದೇಶ್ವರರ ಪುಣ್ಯಸ್ಮರಣೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ಮರಡಿಮಠದಲ್ಲಿ ಜಂಗಮ ಸಮಾಜದ ವಟುಗಳಿಗೆ ಅಯ್ಯಾಚಾರ ಹಾಗೂ ಶಿವಧೀಕ್ಷೆ ನಡೆಯಿತು. ಕಾರ್ಯಕ್ರಮದಲ್ಲಿ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು, ರುದ್ರಮುನಿ ದೇವರು, ಚರಮೂರ್ತಿ ದೇವರು ನಿರುಪಾದಿ,ದೇವರು, ಶಿವಾನಂದ ದೇವರು ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಗಂಗಯ್ಯ ಪೂಜಾರಿ, ವಿ.ಎಸ್ ಹಿರೇಮಠ, ಸಿದ್ದಲಿಂಗಯ್ಯ ಬೂದಿಹಾಳಮಠ, ಚಂದ್ರಶೇಖರ ಜಂಗಮರ ಮತ್ತಿತರರು ಇದ್ದರು.
    1
    ಗುಳೇದಗುಡ್ಡ: ಪಟ್ಟಣದ ಶ್ರೀಕಾಡಸಿದ್ದೇಶ್ವರ ಮರಡಿಮಠದ  ಮೌನಯೋಗಿ 10ನೇ ಶ್ರೀ ಕಾಡಸಿದ್ದೇಶ್ವರರ ಪುಣ್ಯಸ್ಮರಣೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ಮರಡಿಮಠದಲ್ಲಿ  ಜಂಗಮ ಸಮಾಜದ ವಟುಗಳಿಗೆ ಅಯ್ಯಾಚಾರ ಹಾಗೂ ಶಿವಧೀಕ್ಷೆ ನಡೆಯಿತು.
ಕಾರ್ಯಕ್ರಮದಲ್ಲಿ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು,  ರುದ್ರಮುನಿ ದೇವರು, ಚರಮೂರ್ತಿ ದೇವರು ನಿರುಪಾದಿ,ದೇವರು,  ಶಿವಾನಂದ  ದೇವರು ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಗಂಗಯ್ಯ ಪೂಜಾರಿ, ವಿ.ಎಸ್  ಹಿರೇಮಠ, ಸಿದ್ದಲಿಂಗಯ್ಯ ಬೂದಿಹಾಳಮಠ, ಚಂದ್ರಶೇಖರ ಜಂಗಮರ ಮತ್ತಿತರರು ಇದ್ದರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    5 hrs ago
  • ​ಕುಂದಗೋಳ: ಗ್ರಾಮೀಣ ಭಾಗದ ಜನರಿಗೆ ವಿಶೇಷವಾಗಿ ಮಳೆಗಾಲದಲ್ಲಿ ಎದುರಾಗುವ ಸಂಚಾರದ ಸಂಕಷ್ಟಗಳನ್ನು ತಪ್ಪಿಸಲು, ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣಕ್ಕೆ ನನ್ನ ಅಧಿಕಾರ ಅವಧಿಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಂ.ಆರ್. ಪಾಟೀಲ್ ಅವರು ಪ್ರತಿಪಾದಿಸಿದರು. ಮಂಗಳವಾರದಂದು ​ತಾಲ್ಲೂಕಿನ ಕಳಸ-ಸಂಕ್ಲೀಪೂರ ರಸ್ತೆಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಮನವಿ ಸಲ್ಲಿಸಿದಾಗ ಉತ್ತಮ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ್ದೆ. ಅದರಂತೆ ಇಂದು ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಲೆಕ್ಕ ಶೀರ್ಷಿಕೆ 5054ರ ಅಡಿಯಲ್ಲಿ ಅಂದಾಜು 1 ಕೋಟಿ 50 ಲಕ್ಷ ರೂಪಾಯಿಗಳ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು. ​ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ರಸ್ತೆ ಬೇಡಿಕೆ ಈಗ ಈಡೇರುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಅಲಿ ಚಾಂದಖಾನವರ, ಮಲ್ಲಿಕಾರ್ಜುನ ಪ್ಯಾಟಿ, ಯಲ್ಲರೆಡ್ಡಿ ಯರಗುಪ್ಪಿ, ಅಖಂಡಪ್ಪ ಕಳಸೂರ, ಯಲ್ಲಪ್ಪ ಹೊಸಮನಿ, ಬಸವರಾಜ ಅಂಗಡಿ, ಅಶೋಕ ದೊಡ್ಡಮಲ್ಲಪ್ಪನವರ, ಸತೀಶ್ ಪಾಟೀಲ್ ಸೇರಿದಂತೆ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು
    1
    ​ಕುಂದಗೋಳ: ಗ್ರಾಮೀಣ ಭಾಗದ ಜನರಿಗೆ ವಿಶೇಷವಾಗಿ ಮಳೆಗಾಲದಲ್ಲಿ ಎದುರಾಗುವ ಸಂಚಾರದ ಸಂಕಷ್ಟಗಳನ್ನು ತಪ್ಪಿಸಲು, ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣಕ್ಕೆ ನನ್ನ ಅಧಿಕಾರ ಅವಧಿಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಂ.ಆರ್. ಪಾಟೀಲ್ ಅವರು ಪ್ರತಿಪಾದಿಸಿದರು.
ಮಂಗಳವಾರದಂದು ​ತಾಲ್ಲೂಕಿನ ಕಳಸ-ಸಂಕ್ಲೀಪೂರ ರಸ್ತೆಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಮನವಿ ಸಲ್ಲಿಸಿದಾಗ ಉತ್ತಮ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ್ದೆ. ಅದರಂತೆ ಇಂದು ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಲೆಕ್ಕ ಶೀರ್ಷಿಕೆ 5054ರ ಅಡಿಯಲ್ಲಿ ಅಂದಾಜು 1 ಕೋಟಿ 50 ಲಕ್ಷ ರೂಪಾಯಿಗಳ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
​ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ರಸ್ತೆ ಬೇಡಿಕೆ ಈಗ ಈಡೇರುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಅಲಿ ಚಾಂದಖಾನವರ, ಮಲ್ಲಿಕಾರ್ಜುನ ಪ್ಯಾಟಿ, ಯಲ್ಲರೆಡ್ಡಿ ಯರಗುಪ್ಪಿ, ಅಖಂಡಪ್ಪ ಕಳಸೂರ, ಯಲ್ಲಪ್ಪ ಹೊಸಮನಿ, ಬಸವರಾಜ ಅಂಗಡಿ, ಅಶೋಕ ದೊಡ್ಡಮಲ್ಲಪ್ಪನವರ, ಸತೀಶ್ ಪಾಟೀಲ್ ಸೇರಿದಂತೆ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು
    user_Girish Ghatage
    Girish Ghatage
    Reporter in media line ಧಾರವಾಡ, ಧಾರವಾಡ, ಕರ್ನಾಟಕ•
    13 hrs ago
  • ಧಾರವಾಡ: ಎಲ್ಲ ಶಾಸಕರು ಸಚಿವರಾಗಲು ಅರ್ಹತೆ ಪಡೆದಿದ್ದಾರೆ. ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲ ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ. ಅದು ಹೊಸಬರಿರಲಿ, ಫಸ್ಟ್ ಟೈಮ್ ಶಾಸಕರಾದವರಿರಲಿ. ಅವರಿಗೆ ಸಚಿವರಾಗಬೇಕು ಎಂಬ ಆಸೆ ಇದೆ. ಡಿಕೆಶಿ ಅವರ ಹೇಳಿಕೆ ಕೂಡ ನಾನು ನೋಡಿದೆ. ಏನೇ ಮಾಡಿದರೂ ಒಂದು ಲಿಮಿಟ್ಸ್ ಹಾಗೂ ಪಾರ್ಟಿ ಚೌಕಟ್ಟಿನಲ್ಲೇ ಎಲ್ಲವನ್ನೂ ಮಾತನಾಡಬೇಕು ಎಂದಿದ್ದಾರೆ. ಪಾರ್ಟಿ ಚೌಕಟ್ಟು ಬಿಟ್ಟು ವಿಷಯಗಳು ಹೊರ ಹೋಗಬಾರದು ಎಂದು ಅವರು ಹೇಳಿದ್ದಾರೆ. ಹೈಕಮಾಂಡ್‌ಗೆ ನಮ್ಮನ್ನೂ ಸಚಿವರನ್ನಾಗಿ ಮಾಡಲಿ ಎಂದು ಶಾಸಕರು ಹೋಗಿದ್ದಾರೆ. ಕೇಳುವ ಅಧಿಕಾರ ಎಲ್ಲರಿಗೂ ಇದೆ. ಅದೇ ಕಾರಣಕ್ಕೆ ಶಾಸಕರು ಹೋಗಿದ್ದಾರೆ ಅದೇನು ತಪ್ಪಲ್ಲ ಎಂದು ತಿಳಿಸಿದರು.
    1
    ಧಾರವಾಡ: ಎಲ್ಲ ಶಾಸಕರು ಸಚಿವರಾಗಲು ಅರ್ಹತೆ ಪಡೆದಿದ್ದಾರೆ. ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲ ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ. ಅದು ಹೊಸಬರಿರಲಿ, ಫಸ್ಟ್ ಟೈಮ್ ಶಾಸಕರಾದವರಿರಲಿ. ಅವರಿಗೆ ಸಚಿವರಾಗಬೇಕು ಎಂಬ ಆಸೆ ಇದೆ. ಡಿಕೆಶಿ ಅವರ ಹೇಳಿಕೆ ಕೂಡ ನಾನು ನೋಡಿದೆ. ಏನೇ ಮಾಡಿದರೂ ಒಂದು ಲಿಮಿಟ್ಸ್ ಹಾಗೂ ಪಾರ್ಟಿ ಚೌಕಟ್ಟಿನಲ್ಲೇ ಎಲ್ಲವನ್ನೂ ಮಾತನಾಡಬೇಕು ಎಂದಿದ್ದಾರೆ. ಪಾರ್ಟಿ ಚೌಕಟ್ಟು ಬಿಟ್ಟು ವಿಷಯಗಳು ಹೊರ ಹೋಗಬಾರದು ಎಂದು ಅವರು ಹೇಳಿದ್ದಾರೆ. ಹೈಕಮಾಂಡ್‌ಗೆ ನಮ್ಮನ್ನೂ ಸಚಿವರನ್ನಾಗಿ ಮಾಡಲಿ ಎಂದು ಶಾಸಕರು ಹೋಗಿದ್ದಾರೆ. ಕೇಳುವ ಅಧಿಕಾರ ಎಲ್ಲರಿಗೂ ಇದೆ. ಅದೇ ಕಾರಣಕ್ಕೆ ಶಾಸಕರು ಹೋಗಿದ್ದಾರೆ ಅದೇನು ತಪ್ಪಲ್ಲ  ಎಂದು ತಿಳಿಸಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    22 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.