logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ತುರುವೇಕೆರೆಯ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ, ರೋಟರಿ ಸಂಸ್ಥೆಯ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಿ. ಸಂತೋಷ್ ಹಾಗೂ ಅವರ ತಂಡವನ್ನು ಸರ್ವ ಸದಸ್ಯರು ಆಯ್ಕೆ ಮಾಡಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 16, 2026ರ ಗುರುವಾರ ಸಂಜೆ 5:00 ಗಂಟೆಗೆ ಚೌದ್ರಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಶಾಸಕ ಎಂ.ಟಿ. ಕೃಷ್ಣಪ್ಪ, ನಿಕಟಪೂರ್ವ ಶಾಸಕ ಮಸಾಲ ಜಯರಾಮ್ ಮತ್ತು ರೋಟರಿ ಕ್ಲಬ್‌ನ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ನಿಕಟಪೂರ್ವ ಅಧ್ಯಕ್ಷ ಬಿ.ಎಂ. ಉಮೇಶ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿಯೋಜಿತ ಅಧ್ಯಕ್ಷ ಡಿ. ಸಂತೋಷ್, ರೋಟರಿ ಕ್ಲಬ್ ತಾಲೂಕಿನಲ್ಲಿ 12 ವರ್ಷಗಳ ಸೇವೆಯನ್ನು ಪೂರೈಸಿರುವ ನೆನಪಿಗಾಗಿ 'ಸಂತೋಷ ಸೇವಾ ಸ್ಪರ್ಶ @ 12' ಎಂಬ ಶೀರ್ಷಿಕೆಯಡಿ 12 ವಿಶಿಷ್ಟ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಘೋಷಿಸಿದರು. ಇದರ ಭಾಗವಾಗಿ 1200 ಗಿಡಗಳನ್ನು ನೆಡುವುದು (ಹಸಿರೇ ಉಸಿರು), ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಶಾಲೆ ಹಾಗೂ ಬಸ್ ನಿಲ್ದಾಣಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷೀನ್ ಅಳವಡಿಕೆ, ಬಡ ಮಕ್ಕಳ ಶಿಕ್ಷಣಕ್ಕೆ ನೆರವು, ಪ್ರೌಢಶಾಲೆಗಳಿಗೆ ನೋಟ್ ಬುಕ್ ವಿತರಣೆ ಹಾಗೂ ಪತ್ರಿಕೆ ಹಂಚುವ ಹುಡುಗರಿಗೆ ರೈನ್ ಕೋಟ್ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲದೆ, ಸಾರ್ವಜನಿಕರ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ರಿಯಾಯಿತಿ ದರದ ಆಂಬುಲೆನ್ಸ್ ಸೇವೆಗೆ ಸಂಸದ ಹಾಗೂ ಹೃದಯ ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರು ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಸನ್ನ ಮಾವಿನ ಕೆರೆ, ಗ್ಯಾಸ್ ಪ್ರಭು, ಸಾಶಿ ದೇವರಾಜ್, ಜಯರಾಮ್, ಬಸವರಾಜು, ಸತ್ಯನಾರಾಯಣ, ಉಪೇಂದ್ರ, ಶಿವರಾಜ್, ಮೇಘನಾ, ಸಂತೋಷ್, ಶೋಭಾ ಉಮೇಶ್, ಪವಿತ್ರ, ಕುಸುಮ, ನೇತ್ರ ಸಿದ್ದಲಿಂಗ ಸ್ವಾಮಿ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಡಿ. ಸಂತೋಷ್ ಮನವಿ ಮಾಡಿಕೊಂಡಿದ್ದಾರೆ.

14 hrs ago
user_Manohara
Manohara
Local News Reporter ತುರುವೇಕೆರೆ, ತುಮಕೂರು, ಕರ್ನಾಟಕ•
14 hrs ago
fb092202-e079-4e5c-8b13-317540bc7e4e

ತುರುವೇಕೆರೆಯ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ, ರೋಟರಿ ಸಂಸ್ಥೆಯ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಿ. ಸಂತೋಷ್ ಹಾಗೂ ಅವರ ತಂಡವನ್ನು ಸರ್ವ ಸದಸ್ಯರು ಆಯ್ಕೆ ಮಾಡಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 16, 2026ರ ಗುರುವಾರ ಸಂಜೆ 5:00 ಗಂಟೆಗೆ ಚೌದ್ರಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಶಾಸಕ ಎಂ.ಟಿ. ಕೃಷ್ಣಪ್ಪ, ನಿಕಟಪೂರ್ವ ಶಾಸಕ ಮಸಾಲ ಜಯರಾಮ್ ಮತ್ತು ರೋಟರಿ ಕ್ಲಬ್‌ನ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ನಿಕಟಪೂರ್ವ ಅಧ್ಯಕ್ಷ ಬಿ.ಎಂ. ಉಮೇಶ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿಯೋಜಿತ ಅಧ್ಯಕ್ಷ ಡಿ. ಸಂತೋಷ್, ರೋಟರಿ ಕ್ಲಬ್ ತಾಲೂಕಿನಲ್ಲಿ 12 ವರ್ಷಗಳ ಸೇವೆಯನ್ನು ಪೂರೈಸಿರುವ ನೆನಪಿಗಾಗಿ 'ಸಂತೋಷ ಸೇವಾ ಸ್ಪರ್ಶ @ 12' ಎಂಬ ಶೀರ್ಷಿಕೆಯಡಿ 12 ವಿಶಿಷ್ಟ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಘೋಷಿಸಿದರು. ಇದರ ಭಾಗವಾಗಿ 1200 ಗಿಡಗಳನ್ನು

ನೆಡುವುದು (ಹಸಿರೇ ಉಸಿರು), ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಶಾಲೆ ಹಾಗೂ ಬಸ್ ನಿಲ್ದಾಣಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷೀನ್ ಅಳವಡಿಕೆ, ಬಡ ಮಕ್ಕಳ ಶಿಕ್ಷಣಕ್ಕೆ ನೆರವು, ಪ್ರೌಢಶಾಲೆಗಳಿಗೆ ನೋಟ್ ಬುಕ್ ವಿತರಣೆ ಹಾಗೂ ಪತ್ರಿಕೆ ಹಂಚುವ ಹುಡುಗರಿಗೆ ರೈನ್ ಕೋಟ್ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲದೆ, ಸಾರ್ವಜನಿಕರ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ರಿಯಾಯಿತಿ ದರದ ಆಂಬುಲೆನ್ಸ್ ಸೇವೆಗೆ ಸಂಸದ ಹಾಗೂ ಹೃದಯ ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರು ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಸನ್ನ ಮಾವಿನ ಕೆರೆ, ಗ್ಯಾಸ್ ಪ್ರಭು, ಸಾಶಿ ದೇವರಾಜ್, ಜಯರಾಮ್, ಬಸವರಾಜು, ಸತ್ಯನಾರಾಯಣ, ಉಪೇಂದ್ರ, ಶಿವರಾಜ್, ಮೇಘನಾ, ಸಂತೋಷ್, ಶೋಭಾ ಉಮೇಶ್, ಪವಿತ್ರ, ಕುಸುಮ, ನೇತ್ರ ಸಿದ್ದಲಿಂಗ ಸ್ವಾಮಿ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಡಿ. ಸಂತೋಷ್ ಮನವಿ ಮಾಡಿಕೊಂಡಿದ್ದಾರೆ.

More news from ಕರ್ನಾಟಕ and nearby areas
  • ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ದುಮ್ಮನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಪ್ರೊ|| ಎಮ್.ಡಿ. ನಂಜುಂಡಸ್ವಾಮಿಯವರ ಮೂಲ ಸಂಘಟನೆ) ನೂತನ ಗ್ರಾಮ ಶಾಖೆಯನ್ನು ಅಧಿಕೃತವಾಗಿ ಉದ್ಘಾಟಿಸಲಾಗಿದೆ. ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಕಣಕೂರು ಚಂದ್ರಶೇಖರ್ ಅವರು ಈ ಶಾಖೆಯ ಉದ್ಘಾಟನೆಯನ್ನು ನೆರವೇರಿಸಿದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಕೆ.ಸಿ. ಚಂದ್ರಶೇಖರ್, ರಂಗಪ್ಪ, ಕೃಷ್ಣಪ್ಪ, ಶಿವಕುಮಾರ್, ಲಕ್ಕಣ್ಣಪ್ಪ, ಪುಟ್ಟಣ್ಣ ಹಾಗೂ ಮತ್ತೊಬ್ಬ ಶಿವಕುಮಾರ್ ಸೇರಿದಂತೆ ದುಮ್ಮನಹಳ್ಳಿ ಗ್ರಾಮದ ಹಲವಾರು ರೈತರುಗಳು ಉಪಸ್ಥಿತರಿದ್ದರು.
    2
    ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ದುಮ್ಮನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಪ್ರೊ|| ಎಮ್.ಡಿ. ನಂಜುಂಡಸ್ವಾಮಿಯವರ ಮೂಲ ಸಂಘಟನೆ) ನೂತನ ಗ್ರಾಮ ಶಾಖೆಯನ್ನು ಅಧಿಕೃತವಾಗಿ ಉದ್ಘಾಟಿಸಲಾಗಿದೆ. ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಕಣಕೂರು ಚಂದ್ರಶೇಖರ್ ಅವರು ಈ ಶಾಖೆಯ ಉದ್ಘಾಟನೆಯನ್ನು ನೆರವೇರಿಸಿದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಕೆ.ಸಿ. ಚಂದ್ರಶೇಖರ್, ರಂಗಪ್ಪ, ಕೃಷ್ಣಪ್ಪ, ಶಿವಕುಮಾರ್, ಲಕ್ಕಣ್ಣಪ್ಪ, ಪುಟ್ಟಣ್ಣ ಹಾಗೂ ಮತ್ತೊಬ್ಬ ಶಿವಕುಮಾರ್ ಸೇರಿದಂತೆ ದುಮ್ಮನಹಳ್ಳಿ ಗ್ರಾಮದ ಹಲವಾರು ರೈತರುಗಳು ಉಪಸ್ಥಿತರಿದ್ದರು.
    user_Manohara
    Manohara
    Local News Reporter ತುರುವೇಕೆರೆ, ತುಮಕೂರು, ಕರ್ನಾಟಕ•
    4 hrs ago
  • ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸುಮಾರು ಆರು ದಶಕಗಳ ಸುದೀರ್ಘ ಸಂಗೀತ ಪಯಣ ಹೊಂದಿದ್ದ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ 17ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದರು. ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದ ಅವರ ನಿಧನವು ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ಅಪಾರ ನಷ್ಟವನ್ನುಂಟು ಮಾಡಿದೆ. ಅಪ್ರತಿಮ ಗಾಯಕಿಯ ನಿಧನಕ್ಕೆ ಅಭಿಮಾನಿಗಳು, ಕಲಾವಿದರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸುತ್ತಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
    3
    ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸುಮಾರು ಆರು ದಶಕಗಳ ಸುದೀರ್ಘ ಸಂಗೀತ ಪಯಣ ಹೊಂದಿದ್ದ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ 17ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದರು. ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದ ಅವರ ನಿಧನವು ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ಅಪಾರ ನಷ್ಟವನ್ನುಂಟು ಮಾಡಿದೆ.

ಅಪ್ರತಿಮ ಗಾಯಕಿಯ ನಿಧನಕ್ಕೆ ಅಭಿಮಾನಿಗಳು, ಕಲಾವಿದರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸುತ್ತಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
    user_ಚಂದನ್ ಕುಮಾರ್ M S ಮಿರ್ಲೆ
    ಚಂದನ್ ಕುಮಾರ್ M S ಮಿರ್ಲೆ
    Grain Trader ಸಾಲಿಗ್ರಾಮ, ಮೈಸೂರು, ಕರ್ನಾಟಕ•
    4 hrs ago
  • ಮಂಡ್ಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದಕ್ಕಾಗಿ ಪೊಲೀಸರು ಬಂಧಿಸಿರುವ ವ್ಯಕ್ತಿಯನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿವೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಷಣ್ಮುಖೇ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ನಾಗಣ್ಣಗೌಡ ಅವರ ನೇತೃತ್ವದಲ್ಲಿ ಹೋರಾಟ ನಡೆಸಲಾಗಿದೆ.
    1
    ಮಂಡ್ಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದಕ್ಕಾಗಿ ಪೊಲೀಸರು ಬಂಧಿಸಿರುವ ವ್ಯಕ್ತಿಯನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿವೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಷಣ್ಮುಖೇ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ನಾಗಣ್ಣಗೌಡ ಅವರ ನೇತೃತ್ವದಲ್ಲಿ ಹೋರಾಟ ನಡೆಸಲಾಗಿದೆ.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    12 hrs ago
  • ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿ ರೆಡ್ಡಿಹಳ್ಳಿ ಗ್ರಾಮದ ಸರ್ವೆ ನಂಬರ್ 76 ಹಾಗೂ ಬೆಟ್ಟದ ಸುತ್ತಮುತ್ತಲಿನ ಸರ್ವೆ ನಂಬರ್‌ಗಳಲ್ಲಿ ಸ್ಪೋಟಕ ಸಾಮಗ್ರಿಗಳು ಹಾಗೂ ಜೆಸಿಪಿ, ಹಿಟಾಚಿ, ಕಂಪ್ರೆಸರ್, ಕ್ರೇನ್ ಬಳಸಿ ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆ ನಡೆಸುವ ಸಮಯದಲ್ಲಿ ಬೃಹತಾಕಾರದ ಬಂಡೆಯೊಂದು ಜಾರಿ ಜೆಸಿಪಿ ಮೇಲೆ ಕುಸಿದಿದ್ದು, ಅದರಲ್ಲಿದ್ದ ಕಾರ್ಮಿಕರು ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲ್ಲಿನ ಸುತ್ತ ಮಣ್ಣು ತೆಗೆಯುವಾಗ ಈ ಬೃಹತ್ ಕಲ್ಲು ದಿಮ್ಮಿ ಕುಸಿದು ಬಿದ್ದಿದ್ದರಿಂದ ಜೆಸಿಪಿ ಯಂತ್ರ ತೀವ್ರವಾಗಿ ಜಖಂಗೊಂಡಿದೆ. ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಮೀನಿನಲ್ಲಿ ತಮಿಳುನಾಡು ಮೂಲದ ವ್ಯಕ್ತಿಗಳು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಈ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ತಮಿಳುನಾಡು ಮೂಲದವರಾದ ಶ್ರೀಧರ್, ಕುಮಾರ್, ಈಶ್ವರ್ ಮತ್ತು ಮಂಜ ಎಂಬುವರು ಈ ಅಕ್ರಮ ದಂಧೆಯ ಕಿಂಗ್‌ಪಿನ್‌ಗಳು ಎಂದು ಗ್ರಾಮಸ್ಥರಿಂದ ತಿಳಿದುಬಂದಿದೆ. ಇವರು ಯಂತ್ರೋಪಕರಣ ಹಾಗೂ ಸಿಡಿಮದ್ದುಗಳನ್ನು ಬಳಸಿ ದಿಮ್ಮಿ ಕಲ್ಲುಗಳನ್ನು ತೆಗೆದು, ಕ್ರೇನ್ ಮೂಲಕ ಲಾರಿಗಳಿಗೆ ಲೋಡ್ ಮಾಡಿ ತಮಿಳುನಾಡಿಗೆ ಸಾಗಿಸುತ್ತಿದ್ದಾರೆ. ಅಲ್ಲದೆ, ವೇಸ್ಟೇಜ್ ಕಲ್ಲುಗಳಲ್ಲಿ ಸೈಜ್ ಕಲ್ಲು ಹಾಗೂ ಕಂಬದ ಕಲ್ಲುಗಳನ್ನು ಮಾಡಿ ಸಾಗಾಣಿಕೆ ಮಾಡುತ್ತಿದ್ದಾರೆ. ಈ ಜಾಗದಲ್ಲಿ ನಿರಂತರವಾಗಿ ಅಕ್ರಮ ದಂಧೆ ನಡೆಯುತ್ತಿದ್ದರೂ ಕಂದಾಯ ಇಲಾಖೆಯ ಆರ್‌ಐ ಹಾಗೂ ವಿಎ ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ಯಾವುದೇ ಸರ್ಕಾರಿ ಇಲಾಖೆಗಳಿಂದ ಅನುಮತಿ ಪಡೆಯದೆ, ಕಾರ್ಮಿಕರ ಸುರಕ್ಷತೆಯನ್ನೂ ನಿರ್ಲಕ್ಷಿಸಿ ಅಕ್ರಮವಾಗಿ ಬ್ಲಾಸ್ಟಿಂಗ್ ನಡೆಸುತ್ತಿರುವ ಈ ಕಲ್ಲು ಕಳ್ಳರ ವಿರುದ್ಧ ಜಿಲ್ಲಾಧಿಕಾರಿಗಳು ಅಥವಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.
    1
    ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿ ರೆಡ್ಡಿಹಳ್ಳಿ ಗ್ರಾಮದ ಸರ್ವೆ ನಂಬರ್ 76 ಹಾಗೂ ಬೆಟ್ಟದ ಸುತ್ತಮುತ್ತಲಿನ ಸರ್ವೆ ನಂಬರ್‌ಗಳಲ್ಲಿ ಸ್ಪೋಟಕ ಸಾಮಗ್ರಿಗಳು ಹಾಗೂ ಜೆಸಿಪಿ, ಹಿಟಾಚಿ, ಕಂಪ್ರೆಸರ್, ಕ್ರೇನ್ ಬಳಸಿ ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆ ನಡೆಸುವ ಸಮಯದಲ್ಲಿ ಬೃಹತಾಕಾರದ ಬಂಡೆಯೊಂದು ಜಾರಿ ಜೆಸಿಪಿ ಮೇಲೆ ಕುಸಿದಿದ್ದು, ಅದರಲ್ಲಿದ್ದ ಕಾರ್ಮಿಕರು ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲ್ಲಿನ ಸುತ್ತ ಮಣ್ಣು ತೆಗೆಯುವಾಗ ಈ ಬೃಹತ್ ಕಲ್ಲು ದಿಮ್ಮಿ ಕುಸಿದು ಬಿದ್ದಿದ್ದರಿಂದ ಜೆಸಿಪಿ ಯಂತ್ರ ತೀವ್ರವಾಗಿ ಜಖಂಗೊಂಡಿದೆ.

ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಮೀನಿನಲ್ಲಿ ತಮಿಳುನಾಡು ಮೂಲದ ವ್ಯಕ್ತಿಗಳು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಈ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ತಮಿಳುನಾಡು ಮೂಲದವರಾದ ಶ್ರೀಧರ್, ಕುಮಾರ್, ಈಶ್ವರ್ ಮತ್ತು ಮಂಜ ಎಂಬುವರು ಈ ಅಕ್ರಮ ದಂಧೆಯ ಕಿಂಗ್‌ಪಿನ್‌ಗಳು ಎಂದು ಗ್ರಾಮಸ್ಥರಿಂದ ತಿಳಿದುಬಂದಿದೆ. ಇವರು ಯಂತ್ರೋಪಕರಣ ಹಾಗೂ ಸಿಡಿಮದ್ದುಗಳನ್ನು ಬಳಸಿ ದಿಮ್ಮಿ ಕಲ್ಲುಗಳನ್ನು ತೆಗೆದು, ಕ್ರೇನ್ ಮೂಲಕ ಲಾರಿಗಳಿಗೆ ಲೋಡ್ ಮಾಡಿ ತಮಿಳುನಾಡಿಗೆ ಸಾಗಿಸುತ್ತಿದ್ದಾರೆ. ಅಲ್ಲದೆ, ವೇಸ್ಟೇಜ್ ಕಲ್ಲುಗಳಲ್ಲಿ ಸೈಜ್ ಕಲ್ಲು ಹಾಗೂ ಕಂಬದ ಕಲ್ಲುಗಳನ್ನು ಮಾಡಿ ಸಾಗಾಣಿಕೆ ಮಾಡುತ್ತಿದ್ದಾರೆ.

ಈ ಜಾಗದಲ್ಲಿ ನಿರಂತರವಾಗಿ ಅಕ್ರಮ ದಂಧೆ ನಡೆಯುತ್ತಿದ್ದರೂ ಕಂದಾಯ ಇಲಾಖೆಯ ಆರ್‌ಐ ಹಾಗೂ ವಿಎ ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ಯಾವುದೇ ಸರ್ಕಾರಿ ಇಲಾಖೆಗಳಿಂದ ಅನುಮತಿ ಪಡೆಯದೆ, ಕಾರ್ಮಿಕರ ಸುರಕ್ಷತೆಯನ್ನೂ ನಿರ್ಲಕ್ಷಿಸಿ ಅಕ್ರಮವಾಗಿ ಬ್ಲಾಸ್ಟಿಂಗ್ ನಡೆಸುತ್ತಿರುವ ಈ ಕಲ್ಲು ಕಳ್ಳರ ವಿರುದ್ಧ ಜಿಲ್ಲಾಧಿಕಾರಿಗಳು ಅಥವಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.
    user_Madhugiri news
    Madhugiri news
    Local News Reporter ಮಧುಗಿರಿ, ತುಮಕೂರು, ಕರ್ನಾಟಕ•
    3 hrs ago
  • ಮೈಸೂರಿನ ಕೆ.ಆರ್. ಮೊಹಲ್ಲಾದ 100 ಅಡಿ ಚಾಮರಾಜ ಡಬಲ್ ರಸ್ತೆಯಲ್ಲಿರುವ ಜೀನತ್ ಉಲ್ ಮಸೀದಿಯ ಅಕ್ರಮಗಳಿಗೆ ಸಂಬಂಧಿಸಿದ ವಾಸ್ತವಾಂಶ ವರದಿಯನ್ನು ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಮತ್ತು ಜಿಲ್ಲಾ ವಕ್ಫ್ ಅಧಿಕಾರಿಗಳು ತಡೆಹಿಡಿದಿರುವುದರ ಹಿಂದೆ ಯಾವ ಕಾರಣವಿದೆ ಎಂಬ ಗಂಭೀರ ಪ್ರಶ್ನೆ ಮೂಡಿದೆ. ಈ ಮಸೀದಿಯಲ್ಲಿ ನಡೆದಿರುವ ಅಕ್ರಮಗಳ ವರದಿಯನ್ನು ತಡೆಹಿಡಿದಿರುವುದರ ಬಗ್ಗೆ ತೀವ್ರ ಚರ್ಚೆಯಾಗುತ್ತಿದ್ದು, ಇದು ಭಾರತದಲ್ಲಿ ವೈರಲ್ ಆಗುತ್ತಿದೆ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಜಿಲ್ಲಾ ವಕ್ಫ್ ಅಧಿಕಾರಿಗಳು ಈ ವಾಸ್ತವಾಂಶ ವರದಿಯನ್ನು ಯಾವ ಕಾರಣಕ್ಕಾಗಿ ತಡೆಹಿಡಿದಿದ್ದಾರೆ ಎಂದು ಪ್ರಶ್ನಿಸಲಾಗುತ್ತಿದೆ.
    1
    ಮೈಸೂರಿನ ಕೆ.ಆರ್. ಮೊಹಲ್ಲಾದ 100 ಅಡಿ ಚಾಮರಾಜ ಡಬಲ್ ರಸ್ತೆಯಲ್ಲಿರುವ ಜೀನತ್ ಉಲ್ ಮಸೀದಿಯ ಅಕ್ರಮಗಳಿಗೆ ಸಂಬಂಧಿಸಿದ ವಾಸ್ತವಾಂಶ ವರದಿಯನ್ನು ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಮತ್ತು ಜಿಲ್ಲಾ ವಕ್ಫ್ ಅಧಿಕಾರಿಗಳು ತಡೆಹಿಡಿದಿರುವುದರ ಹಿಂದೆ ಯಾವ ಕಾರಣವಿದೆ ಎಂಬ ಗಂಭೀರ ಪ್ರಶ್ನೆ ಮೂಡಿದೆ. ಈ ಮಸೀದಿಯಲ್ಲಿ ನಡೆದಿರುವ ಅಕ್ರಮಗಳ ವರದಿಯನ್ನು ತಡೆಹಿಡಿದಿರುವುದರ ಬಗ್ಗೆ ತೀವ್ರ ಚರ್ಚೆಯಾಗುತ್ತಿದ್ದು, ಇದು ಭಾರತದಲ್ಲಿ ವೈರಲ್ ಆಗುತ್ತಿದೆ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಜಿಲ್ಲಾ ವಕ್ಫ್ ಅಧಿಕಾರಿಗಳು ಈ ವಾಸ್ತವಾಂಶ ವರದಿಯನ್ನು ಯಾವ ಕಾರಣಕ್ಕಾಗಿ ತಡೆಹಿಡಿದಿದ್ದಾರೆ ಎಂದು ಪ್ರಶ್ನಿಸಲಾಗುತ್ತಿದೆ.
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    10 hrs ago
  • ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ದಸರಾ ಪಾಸ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಮೈಸೂರು ಸಂಸದ ಯದುವೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ದಸರಾ ಸಂದರ್ಭದಲ್ಲಿ ಪ್ರತಿವರ್ಷ ಪಾಸ್ ವಿತರಣೆಯ ವಿಚಾರವೇ ದೊಡ್ಡ ಗೊಂದಲಕ್ಕೆ ಕಾರಣವಾಗುತ್ತಿದೆ ಎಂದಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮ್ಮ ಮುಖ್ಯ ಕೆಲಸ ಬಿಟ್ಟು ಪಾಸ್‌ಗಳ ಹಂಚಿಕೆ ವಿಚಾರದಲ್ಲೇ ಸಮಯ ಕಳೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಗೊಂದಲಕ್ಕೆ ಶಾಶ್ವತ ಪರಿಹಾರವಾಗಿ ಗ್ಲೋಬಲ್ ಟೆಂಡರ್ ಮಾದರಿಯಲ್ಲಿ ಪಾಸ್ ವ್ಯವಸ್ಥೆ ಜಾರಿಗೊಳಿಸುವ ಕುರಿತು ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಿರುವುದಾಗಿ ಯದುವೀರ್ ತಿಳಿಸಿದ್ದಾರೆ. ಇದೇ ವೇಳೆ, 'ಸರಳ ದಸರಾ' ಎಂಬ ಹೆಸರಿನಲ್ಲಿ ಆಚರಣೆ ನಡೆಸುವುದರಿಂದ ಮೈಸೂರಿನ ಪ್ರವಾಸೋದ್ಯಮಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಆ ರೀತಿಯ ಹೆಸರು ಅಥವಾ ಪರಿಕಲ್ಪನೆಯನ್ನು ಬಳಸಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಈ ಸರ್ಕಾರವು ಸಾರ್ವಜನಿಕರ ಮಾತನ್ನು ಕೇಳುವುದಿಲ್ಲ ಎಂದು ಯದುವೀರ್ ಒಡೆಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    1
    ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ದಸರಾ ಪಾಸ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಮೈಸೂರು ಸಂಸದ ಯದುವೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ದಸರಾ ಸಂದರ್ಭದಲ್ಲಿ ಪ್ರತಿವರ್ಷ ಪಾಸ್ ವಿತರಣೆಯ ವಿಚಾರವೇ ದೊಡ್ಡ ಗೊಂದಲಕ್ಕೆ ಕಾರಣವಾಗುತ್ತಿದೆ ಎಂದಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮ್ಮ ಮುಖ್ಯ ಕೆಲಸ ಬಿಟ್ಟು ಪಾಸ್‌ಗಳ ಹಂಚಿಕೆ ವಿಚಾರದಲ್ಲೇ ಸಮಯ ಕಳೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಗೊಂದಲಕ್ಕೆ ಶಾಶ್ವತ ಪರಿಹಾರವಾಗಿ ಗ್ಲೋಬಲ್ ಟೆಂಡರ್ ಮಾದರಿಯಲ್ಲಿ ಪಾಸ್ ವ್ಯವಸ್ಥೆ ಜಾರಿಗೊಳಿಸುವ ಕುರಿತು ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಿರುವುದಾಗಿ ಯದುವೀರ್ ತಿಳಿಸಿದ್ದಾರೆ. ಇದೇ ವೇಳೆ, 'ಸರಳ ದಸರಾ' ಎಂಬ ಹೆಸರಿನಲ್ಲಿ ಆಚರಣೆ ನಡೆಸುವುದರಿಂದ ಮೈಸೂರಿನ ಪ್ರವಾಸೋದ್ಯಮಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಆ ರೀತಿಯ ಹೆಸರು ಅಥವಾ ಪರಿಕಲ್ಪನೆಯನ್ನು ಬಳಸಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಈ ಸರ್ಕಾರವು ಸಾರ್ವಜನಿಕರ ಮಾತನ್ನು ಕೇಳುವುದಿಲ್ಲ ಎಂದು ಯದುವೀರ್ ಒಡೆಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    11 hrs ago
  • ಮೈಸೂರಿನ ಅಪೋಲೋ ಆಸ್ಪತ್ರೆಯ ವೈದ್ಯರು ಎಸ್ ಜಾನಕಿ ಅವರ ಕುರಿತು ಏನು ಹೇಳಿದ್ದಾರೆ ಎಂಬ ಕುತೂಹಲಕಾರಿ ಪ್ರಶ್ನೆ ಮೂಡಿದೆ. ಎಸ್ ಜಾನಕಿ ಅವರ ಬಗ್ಗೆ ಆಸ್ಪತ್ರೆಯ ವೈದ್ಯರು ನೀಡಿರುವ ಹೇಳಿಕೆಯ ಕುರಿತು ತೀವ್ರ ಕುತೂಹಲ ವ್ಯಕ್ತವಾಗಿದೆ.
    1
    ಮೈಸೂರಿನ ಅಪೋಲೋ ಆಸ್ಪತ್ರೆಯ ವೈದ್ಯರು ಎಸ್ ಜಾನಕಿ ಅವರ ಕುರಿತು ಏನು ಹೇಳಿದ್ದಾರೆ ಎಂಬ ಕುತೂಹಲಕಾರಿ ಪ್ರಶ್ನೆ ಮೂಡಿದೆ. ಎಸ್ ಜಾನಕಿ ಅವರ ಬಗ್ಗೆ ಆಸ್ಪತ್ರೆಯ ವೈದ್ಯರು ನೀಡಿರುವ ಹೇಳಿಕೆಯ ಕುರಿತು ತೀವ್ರ ಕುತೂಹಲ ವ್ಯಕ್ತವಾಗಿದೆ.
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ತುರುವೇಕೆರೆ ಪಟ್ಟಣದ ತಾಲೂಕು ಕಚೇರಿಯ ಹಿಂಭಾಗದಲ್ಲಿರುವ ಇಂದಿರಾ ಕ್ಯಾಂಟೀನ್ ಹಲವು ದಿನಗಳಿಂದ ಅನಿಶ್ಚಿತವಾಗಿ ಬಾಗಿಲು ಮುಚ್ಚುತ್ತಿದ್ದು, ಇದರಿಂದ ಬಡ ಕೂಲಿ ಕಾರ್ಮಿಕರು, ಆಶಕ್ತರು, ವಯೋವೃದ್ಧರು ಮತ್ತು ಬೀದಿ ವ್ಯಾಪಾರಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದಿಂದ ಹಸಿವು ನೀಗಿಸಿಕೊಳ್ಳಲು ಬರುವವರಿಗೆ ಗೇಟಿಗೆ ಬೀಗ ಹಾಕಿರುವುದು ನಿತ್ಯದ ಗೋಳಾಗಿದೆ. ಯಾವುದೇ ನಾಮಫಲಕವಿಲ್ಲದ ಈ ಕ್ಯಾಂಟೀನ್ ಮುಂದೆ ಬರುವ ಜನರು, ಗೇಟ್ ಬಂದ್ ಆಗಿರುವುದನ್ನು ಕಂಡು ಹತಾಶರಾಗಿ ಹಿಂತಿರುಗುತ್ತಿದ್ದಾರೆ. ಕ್ಯಾಂಟೀನ್ ಸಿಬ್ಬಂದಿಯನ್ನು ವಿಚಾರಿಸಿದಾಗ ಅವರು ಉಡಾಫೆಯ ಉತ್ತರ ನೀಡುತ್ತಿದ್ದು, ನಾನಾ ನೆಪಗಳನ್ನು ಒಡ್ಡಿ ಆಹಾರ ತಯಾರಿಸದೇ ಸಾರ್ವಜನಿಕರನ್ನು ಕಣ್ಣುಮುಚ್ಚಾಲೆ ಆಟವಾಡಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಸಿದು ಬರುವ ಜನರು ಬಾಗಿಲು ತೆಗೆಯುವಂತೆ ಅಂಗಲಾಚಿದರೂ ಅಧಿಕಾರಿಗಳಿಗೆ ಆ ಆರ್ತನಾದ ಕೇಳಿಸುತ್ತಿಲ್ಲ. ನಿರ್ವಹಣೆಗಾರರ ನಿರ್ಲಕ್ಷ್ಯ ಮತ್ತು ಮನಸೋ ಇಚ್ಛೆಯ ವರ್ತನೆಯಿಂದಾಗಿ ಸರ್ಕಾರ ಹಾಗೂ ವ್ಯವಸ್ಥಾಪಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಮತ್ತೆ ಎಂದಿಗೂ ಕಾರ್ಯನಿರ್ವಹಿಸುತ್ತದೆ ಮತ್ತು ಈ ಸಮಸ್ಯೆಗಳಿಗೆ ಯಾವಾಗ ಶಾಶ್ವತ ಪರಿಹಾರ ಸಿಗುತ್ತದೆ ಎಂಬುದೇ ಈಗ ಸಾರ್ವಜನಿಕರ ಪ್ರಶ್ನೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
    2
    ತುರುವೇಕೆರೆ ಪಟ್ಟಣದ ತಾಲೂಕು ಕಚೇರಿಯ ಹಿಂಭಾಗದಲ್ಲಿರುವ ಇಂದಿರಾ ಕ್ಯಾಂಟೀನ್ ಹಲವು ದಿನಗಳಿಂದ ಅನಿಶ್ಚಿತವಾಗಿ ಬಾಗಿಲು ಮುಚ್ಚುತ್ತಿದ್ದು, ಇದರಿಂದ ಬಡ ಕೂಲಿ ಕಾರ್ಮಿಕರು, ಆಶಕ್ತರು, ವಯೋವೃದ್ಧರು ಮತ್ತು ಬೀದಿ ವ್ಯಾಪಾರಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದಿಂದ ಹಸಿವು ನೀಗಿಸಿಕೊಳ್ಳಲು ಬರುವವರಿಗೆ ಗೇಟಿಗೆ ಬೀಗ ಹಾಕಿರುವುದು ನಿತ್ಯದ ಗೋಳಾಗಿದೆ. ಯಾವುದೇ ನಾಮಫಲಕವಿಲ್ಲದ ಈ ಕ್ಯಾಂಟೀನ್ ಮುಂದೆ ಬರುವ ಜನರು, ಗೇಟ್ ಬಂದ್ ಆಗಿರುವುದನ್ನು ಕಂಡು ಹತಾಶರಾಗಿ ಹಿಂತಿರುಗುತ್ತಿದ್ದಾರೆ.

ಕ್ಯಾಂಟೀನ್ ಸಿಬ್ಬಂದಿಯನ್ನು ವಿಚಾರಿಸಿದಾಗ ಅವರು ಉಡಾಫೆಯ ಉತ್ತರ ನೀಡುತ್ತಿದ್ದು, ನಾನಾ ನೆಪಗಳನ್ನು ಒಡ್ಡಿ ಆಹಾರ ತಯಾರಿಸದೇ ಸಾರ್ವಜನಿಕರನ್ನು ಕಣ್ಣುಮುಚ್ಚಾಲೆ ಆಟವಾಡಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಸಿದು ಬರುವ ಜನರು ಬಾಗಿಲು ತೆಗೆಯುವಂತೆ ಅಂಗಲಾಚಿದರೂ ಅಧಿಕಾರಿಗಳಿಗೆ ಆ ಆರ್ತನಾದ ಕೇಳಿಸುತ್ತಿಲ್ಲ. ನಿರ್ವಹಣೆಗಾರರ ನಿರ್ಲಕ್ಷ್ಯ ಮತ್ತು ಮನಸೋ ಇಚ್ಛೆಯ ವರ್ತನೆಯಿಂದಾಗಿ ಸರ್ಕಾರ ಹಾಗೂ ವ್ಯವಸ್ಥಾಪಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಮತ್ತೆ ಎಂದಿಗೂ ಕಾರ್ಯನಿರ್ವಹಿಸುತ್ತದೆ ಮತ್ತು ಈ ಸಮಸ್ಯೆಗಳಿಗೆ ಯಾವಾಗ ಶಾಶ್ವತ ಪರಿಹಾರ ಸಿಗುತ್ತದೆ ಎಂಬುದೇ ಈಗ ಸಾರ್ವಜನಿಕರ ಪ್ರಶ್ನೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
    user_Manohara
    Manohara
    Local News Reporter ತುರುವೇಕೆರೆ, ತುಮಕೂರು, ಕರ್ನಾಟಕ•
    14 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.