logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೆಂಗಳೂರಿನ ಚಂದ್ರಗುಪ್ತಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ ವತಿಯಿಂದ 14ನೇ ವರ್ಷದ ಉಚಿತ ನೋಟ್‌ಬುಕ್‌ ವಿತರಣೆ, ಪ್ರತಿಭಾ ಪುರಸ್ಕಾರ, ಲ್ಯಾಪ್‌ಟಾಪ್ ವಿತರಣೆ, ಸಂಘ-ಸಂಸ್ಥೆಗಳಿಗೆ ದೇಣಿಗೆ ಮತ್ತು ವಿಕಲಚೇತನರಿಗೆ ವೀಲ್‌ಚೇರ್ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಸಂಸದರಾದ ತೇಜಸ್ವಿ ಸೂರ್ಯ, ರಕ್ಷಾ ಫೌಂಡೇಷನ್ ಅಧ್ಯಕ್ಷರು, ಶಾಸಕರಾದ ಸಿ.ಕೆ. ರಾಮಮೂರ್ತಿ, ಎಂ. ಕೃಷ್ಣಪ್ಪ, ರವಿ ಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಬಿಗ್ ಬಾಸ್ ವಿನ್ನರ್ ನಟ ಗಿಲ್ಲಿ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಜಿ. ದಿನೇಶ್, ನಿಕಟಪೂರ್ವ ಬಿಬಿಎಂಪಿ ಸದಸ್ಯೆ ಶ್ರೀಮತಿ ನಾಗರತ್ನ ರಾಮಮೂರ್ತಿ, ಕೇಂದ್ರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಪ್ತಗಿರಿಗೌಡರು ಹಾಗೂ ನಟಿ ತಾರಾ ಅನುರಾಧ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಯದೇವ ಆಸ್ಪತ್ರೆ, ಗೀತಾ ಎಜುಕೇಷನ್ ಸೊಸೈಟಿ ಮತ್ತು ವಾತ್ಯಲಪುರಂ ಸೇವಾ ಸಂಸ್ಥೆಗಳಿಗೆ ದೇಣಿಗೆ ನೀಡಲಾಯಿತು. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಮಾತನಾಡಿ, ರಕ್ಷಾ ಫೌಂಡೇಷನ್ ಪ್ರತಿ ವರ್ಷ ಮಕ್ಕಳ ಶಿಕ್ಷಣಕ್ಕಾಗಿ ಉಚಿತ ನೋಟ್‌ಬುಕ್, ಲ್ಯಾಪ್‌ಟಾಪ್ ಹಾಗೂ ವಿದ್ಯಾರ್ಥಿವೇತನ ನೀಡುವ ಪವಿತ್ರ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು. ಅಡಂಬರ ಮತ್ತು ಪ್ರಚಾರವಿಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸುವ ಗುರಿಯೊಂದಿಗೆ ರಕ್ಷಾ ಫೌಂಡೇಷನ್ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಅಲ್ಲದೆ, ರಾಜಕಾರಣಿಗಳು ಮತದ ರಾಜಕೀಯ ಮಾಡಬಾರದು, ಪ್ರತಿಯೊಬ್ಬ ಶಾಸಕರು ಸಿ.ಕೆ. ರಾಮಮೂರ್ತಿಯವರಂತೆ ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡಬೇಕು ಮತ್ತು ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು ಎಂದು ಕರೆ ನೀಡಿದರು. ಮಾಜಿ ಶಾಸಕ ವಿಜಯಕುಮಾರ್ ಜಯನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದು, ಅವರ ಶಿಷ್ಯರಾದ ಸಿ.ಕೆ. ರಾಮಮೂರ್ತಿಯವರು ಅವರ ಆದರ್ಶಗಳನ್ನು ಪಾಲಿಸುತ್ತಿದ್ದಾರೆ ಎಂದು ಹೇಳಿದರು. ಶಾಸಕ ಸಿ.ಕೆ. ರಾಮಮೂರ್ತಿಯವರು ಮಾತನಾಡಿ, ಶಿಕ್ಷಣದಿಂದ ದೇಶ ಅಭಿವೃದ್ಧಿಯಾಗಬೇಕು ಮತ್ತು ವಿದ್ಯಾವಂತ ಸಮಾಜ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ಕಳೆದ 14 ವರ್ಷಗಳಿಂದ ರಕ್ಷಾ ಫೌಂಡೇಷನ್ ಉಚಿತ ನೋಟ್‌ಬುಕ್, ಲ್ಯಾಪ್‌ಟಾಪ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು. ರಕ್ಷಾ ಫೌಂಡೇಷನ್ ಮಕ್ಕಳ ಶಿಕ್ಷಣ, ಆರೋಗ್ಯ, ಪರಿಸರ ಉಳಿಸಿ ಬೆಳೆಸಲು ಶ್ರಮಿಸುತ್ತಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ತುರುವೇಕೆರೆ ಮತ್ತು ರಾಮನಗರ ಸೇರಿದಂತೆ ವಿವಿಧೆಡೆ 2 ಲಕ್ಷ ನೋಟ್‌ಬುಕ್‌ಗಳನ್ನು ವಿತರಿಸಲಾಗುತ್ತಿದೆ. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದ್ದು, ಮಕ್ಕಳಿಗೆ ಗುರಿ ಹಾಗೂ ಗುರುಗಳ ಮಾರ್ಗದರ್ಶನ ಸಿಗಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು, ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ರಕ್ಷಾ ಫೌಂಡೇಷನ್ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಅವರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಜಿ. ದಿನೇಶ್, ಪದ್ಮನಾಭನಗರ ಮಂಡಲ ಬಿಜೆಪಿ ಅಧ್ಯಕ್ಷ ಲಕ್ಷ್ಮೀಕಾಂತ್, ಮಾಜಿ ಬಿಬಿಎಂಪಿ ಸದಸ್ಯರಾದ ಬಿ. ಸೋಮಶೇಖರ್, ಗೋವಿಂದನಾಯ್ಡು, ದೀಪಿಕಾ ಮಂಜುನಾಥ್ ರೆಡ್ಡಿ ಮತ್ತು ಚನ್ನಗಿರಿಯಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

6 hrs ago
user_Nataraj B P
Nataraj B P
ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
6 hrs ago
dbe5e30a-9311-4d71-b633-c2e2c32fd219

ಬೆಂಗಳೂರಿನ ಚಂದ್ರಗುಪ್ತಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ ವತಿಯಿಂದ 14ನೇ ವರ್ಷದ ಉಚಿತ ನೋಟ್‌ಬುಕ್‌ ವಿತರಣೆ, ಪ್ರತಿಭಾ ಪುರಸ್ಕಾರ, ಲ್ಯಾಪ್‌ಟಾಪ್ ವಿತರಣೆ, ಸಂಘ-ಸಂಸ್ಥೆಗಳಿಗೆ ದೇಣಿಗೆ ಮತ್ತು ವಿಕಲಚೇತನರಿಗೆ ವೀಲ್‌ಚೇರ್ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಸಂಸದರಾದ ತೇಜಸ್ವಿ ಸೂರ್ಯ, ರಕ್ಷಾ ಫೌಂಡೇಷನ್ ಅಧ್ಯಕ್ಷರು, ಶಾಸಕರಾದ ಸಿ.ಕೆ. ರಾಮಮೂರ್ತಿ, ಎಂ. ಕೃಷ್ಣಪ್ಪ, ರವಿ ಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಬಿಗ್ ಬಾಸ್ ವಿನ್ನರ್ ನಟ ಗಿಲ್ಲಿ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಜಿ. ದಿನೇಶ್, ನಿಕಟಪೂರ್ವ ಬಿಬಿಎಂಪಿ ಸದಸ್ಯೆ ಶ್ರೀಮತಿ ನಾಗರತ್ನ ರಾಮಮೂರ್ತಿ, ಕೇಂದ್ರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಪ್ತಗಿರಿಗೌಡರು ಹಾಗೂ

0be7ec4a-d6bc-494e-b390-107cbec59d8a

ನಟಿ ತಾರಾ ಅನುರಾಧ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಯದೇವ ಆಸ್ಪತ್ರೆ, ಗೀತಾ ಎಜುಕೇಷನ್ ಸೊಸೈಟಿ ಮತ್ತು ವಾತ್ಯಲಪುರಂ ಸೇವಾ ಸಂಸ್ಥೆಗಳಿಗೆ ದೇಣಿಗೆ ನೀಡಲಾಯಿತು. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಮಾತನಾಡಿ, ರಕ್ಷಾ ಫೌಂಡೇಷನ್ ಪ್ರತಿ ವರ್ಷ ಮಕ್ಕಳ ಶಿಕ್ಷಣಕ್ಕಾಗಿ ಉಚಿತ ನೋಟ್‌ಬುಕ್, ಲ್ಯಾಪ್‌ಟಾಪ್ ಹಾಗೂ ವಿದ್ಯಾರ್ಥಿವೇತನ ನೀಡುವ ಪವಿತ್ರ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು. ಅಡಂಬರ ಮತ್ತು ಪ್ರಚಾರವಿಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸುವ ಗುರಿಯೊಂದಿಗೆ ರಕ್ಷಾ ಫೌಂಡೇಷನ್ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಅಲ್ಲದೆ, ರಾಜಕಾರಣಿಗಳು ಮತದ ರಾಜಕೀಯ ಮಾಡಬಾರದು, ಪ್ರತಿಯೊಬ್ಬ ಶಾಸಕರು ಸಿ.ಕೆ.

20d2423b-a3e5-48a1-baa8-6d032089ff3e

ರಾಮಮೂರ್ತಿಯವರಂತೆ ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡಬೇಕು ಮತ್ತು ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು ಎಂದು ಕರೆ ನೀಡಿದರು. ಮಾಜಿ ಶಾಸಕ ವಿಜಯಕುಮಾರ್ ಜಯನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದು, ಅವರ ಶಿಷ್ಯರಾದ ಸಿ.ಕೆ. ರಾಮಮೂರ್ತಿಯವರು ಅವರ ಆದರ್ಶಗಳನ್ನು ಪಾಲಿಸುತ್ತಿದ್ದಾರೆ ಎಂದು ಹೇಳಿದರು. ಶಾಸಕ ಸಿ.ಕೆ. ರಾಮಮೂರ್ತಿಯವರು ಮಾತನಾಡಿ, ಶಿಕ್ಷಣದಿಂದ ದೇಶ ಅಭಿವೃದ್ಧಿಯಾಗಬೇಕು ಮತ್ತು ವಿದ್ಯಾವಂತ ಸಮಾಜ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ಕಳೆದ 14 ವರ್ಷಗಳಿಂದ ರಕ್ಷಾ ಫೌಂಡೇಷನ್ ಉಚಿತ ನೋಟ್‌ಬುಕ್, ಲ್ಯಾಪ್‌ಟಾಪ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು. ರಕ್ಷಾ ಫೌಂಡೇಷನ್ ಮಕ್ಕಳ ಶಿಕ್ಷಣ, ಆರೋಗ್ಯ, ಪರಿಸರ ಉಳಿಸಿ ಬೆಳೆಸಲು ಶ್ರಮಿಸುತ್ತಿದೆ.

110b0921-2b60-4e1c-a158-0981fff6b7a2

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ತುರುವೇಕೆರೆ ಮತ್ತು ರಾಮನಗರ ಸೇರಿದಂತೆ ವಿವಿಧೆಡೆ 2 ಲಕ್ಷ ನೋಟ್‌ಬುಕ್‌ಗಳನ್ನು ವಿತರಿಸಲಾಗುತ್ತಿದೆ. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದ್ದು, ಮಕ್ಕಳಿಗೆ ಗುರಿ ಹಾಗೂ ಗುರುಗಳ ಮಾರ್ಗದರ್ಶನ ಸಿಗಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು, ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ರಕ್ಷಾ ಫೌಂಡೇಷನ್ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಅವರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಜಿ. ದಿನೇಶ್, ಪದ್ಮನಾಭನಗರ ಮಂಡಲ ಬಿಜೆಪಿ ಅಧ್ಯಕ್ಷ ಲಕ್ಷ್ಮೀಕಾಂತ್, ಮಾಜಿ ಬಿಬಿಎಂಪಿ ಸದಸ್ಯರಾದ ಬಿ. ಸೋಮಶೇಖರ್, ಗೋವಿಂದನಾಯ್ಡು, ದೀಪಿಕಾ ಮಂಜುನಾಥ್ ರೆಡ್ಡಿ ಮತ್ತು ಚನ್ನಗಿರಿಯಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

More news from Bengaluru Urban and nearby areas
  • ಬಳ್ಳಾರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸರ್ವ ಸಂಘಗಳ ಒಕ್ಕೂಟವು ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ಒಕ್ಕೂಟದ ಜಿಲ್ಲಾಧ್ಯಕ್ಷ ಮಲ್ಲೇಶ್ ಅವರು ಮಾತನಾಡಿ, ಕಾರ್ಮಿಕರ ಸಹಾಯಧನ ವಿತರಣೆಯಲ್ಲಿ ವಿಳಂಬ, ಪಿಂಚಣಿ ಸ್ಥಗಿತಗೊಳಿಸುವ ಸಂಚು ಹಾಗೂ ಸೇಫ್ಟಿ ಕಿಟ್‌ಗಳು ಮತ್ತು ಸೇವಾ ಕೇಂದ್ರಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳ ದುರುಪಯೋಗ ನಡೆಯುತ್ತಿದೆ ಎಂದು ಆಪಾದಿಸಿದ್ದಾರೆ. ಈ ಆರೋಪಗಳು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಕಾರ್ಮಿಕರ ಸಾವಿರಾರು ಕೋಟಿ ಹಣದ ದುರುಪಯೋಗದ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಈ ಅಕ್ರಮಗಳ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ಒಕ್ಕೂಟವು ಎಚ್ಚರಿಕೆ ನೀಡಿದೆ, ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಹೋರಾಟವನ್ನು ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದೆ.
    1
    ಬಳ್ಳಾರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸರ್ವ ಸಂಘಗಳ ಒಕ್ಕೂಟವು ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ಒಕ್ಕೂಟದ ಜಿಲ್ಲಾಧ್ಯಕ್ಷ ಮಲ್ಲೇಶ್ ಅವರು ಮಾತನಾಡಿ, ಕಾರ್ಮಿಕರ ಸಹಾಯಧನ ವಿತರಣೆಯಲ್ಲಿ ವಿಳಂಬ, ಪಿಂಚಣಿ ಸ್ಥಗಿತಗೊಳಿಸುವ ಸಂಚು ಹಾಗೂ ಸೇಫ್ಟಿ ಕಿಟ್‌ಗಳು ಮತ್ತು ಸೇವಾ ಕೇಂದ್ರಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳ ದುರುಪಯೋಗ ನಡೆಯುತ್ತಿದೆ ಎಂದು ಆಪಾದಿಸಿದ್ದಾರೆ.

ಈ ಆರೋಪಗಳು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಕಾರ್ಮಿಕರ ಸಾವಿರಾರು ಕೋಟಿ ಹಣದ ದುರುಪಯೋಗದ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಈ ಅಕ್ರಮಗಳ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ಒಕ್ಕೂಟವು ಎಚ್ಚರಿಕೆ ನೀಡಿದೆ, ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಹೋರಾಟವನ್ನು ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದೆ.
    user_A News24Kannada
    A News24Kannada
    Newsagent Bengaluru East, Bengaluru Urban•
    20 hrs ago
  • ತನ್ನನ್ನು 'ಪಾಕಿಸ್ತಾನಿ' ಎಂದು ನಿಂದಿಸಿದ ವ್ಯಕ್ತಿಗೆ ಒಬ್ಬ ಯುವಕ ಖಡಕ್ ಉತ್ತರ ನೀಡಿದ್ದಾರೆ. ಈ ಯುವಕ, ತಾನು ಭಾರತೀಯ ಎಂದು ದೃಢವಾಗಿ ಹೇಳಿದ್ದಲ್ಲದೆ, ತಮ್ಮ ತಾತ ದೇಶವನ್ನು ಕಾಯ್ದಿದ್ದಾರೆ ಎಂದು ಹೆಮ್ಮೆಯಿಂದ ತಿಳಿಸಿದ್ದಾರೆ. ಈ ಮೂಲಕ ನಿಂದಿಸಿದ ವ್ಯಕ್ತಿಗೆ ತೀಕ್ಷ್ಣವಾದ ತಿರುಗೇಟು ನೀಡಿದ್ದಾರೆ.
    1
    ತನ್ನನ್ನು 'ಪಾಕಿಸ್ತಾನಿ' ಎಂದು ನಿಂದಿಸಿದ ವ್ಯಕ್ತಿಗೆ ಒಬ್ಬ ಯುವಕ ಖಡಕ್ ಉತ್ತರ ನೀಡಿದ್ದಾರೆ. ಈ ಯುವಕ, ತಾನು ಭಾರತೀಯ ಎಂದು ದೃಢವಾಗಿ ಹೇಳಿದ್ದಲ್ಲದೆ, ತಮ್ಮ ತಾತ ದೇಶವನ್ನು ಕಾಯ್ದಿದ್ದಾರೆ ಎಂದು ಹೆಮ್ಮೆಯಿಂದ ತಿಳಿಸಿದ್ದಾರೆ. ಈ ಮೂಲಕ ನಿಂದಿಸಿದ ವ್ಯಕ್ತಿಗೆ ತೀಕ್ಷ್ಣವಾದ ತಿರುಗೇಟು ನೀಡಿದ್ದಾರೆ.
    user_JB NEWS ಕನ್ನಡ
    JB NEWS ಕನ್ನಡ
    Kolar, Karnataka•
    6 hrs ago
  • ಕೌಸರ್ ಅವರನ್ನು 'ಕೋಲಾರದ ಧ್ವನಿ' ಎಂದು ಗುರುತಿಸಲಾಗಿದೆ.
    1
    ಕೌಸರ್ ಅವರನ್ನು 'ಕೋಲಾರದ ಧ್ವನಿ' ಎಂದು ಗುರುತಿಸಲಾಗಿದೆ.
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    12 hrs ago
  • ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನವನ್ನು ಕೋಲಾರದಲ್ಲಿ ಆಚರಿಸಲಾಯಿತು.
    1
    ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನವನ್ನು ಕೋಲಾರದಲ್ಲಿ ಆಚರಿಸಲಾಯಿತು.
    user_True news kolar Ayub Pasha
    True news kolar Ayub Pasha
    Advertising agency ಕೋಲಾರ, ಕೋಲಾರ, ಕರ್ನಾಟಕ•
    22 hrs ago
  • ಜೆಡಿಎಸ್ ಮುಖಂಡ ಅಬ್ದುಲ್ ಸಮ್ಮದ್ ಅವರು ಸಿ ಕೆ ಎಲ್ ಚಂದ್ ಪಾಷಾ ಅವರಿಗೆ ಸಲಹೆ ನೀಡಿದ್ದಾರೆ. ಚಂದ್ ಪಾಷಾ ಅವರಿಗೆ ಮಾಹಿತಿಯ ಕೊರತೆ ಇದೆ ಎಂದು ಹೇಳಿರುವ ಅಬ್ದುಲ್ ಸಮ್ಮದ್, ಯಾವುದೇ ವಿಷಯದ ಬಗ್ಗೆ ಮಾತನಾಡುವ ಮೊದಲು ಅದನ್ನು ತಿಳಿದುಕೊಂಡು ಮಾತನಾಡಬೇಕು ಎಂದು ಸೂಚಿಸಿದ್ದಾರೆ.
    1
    ಜೆಡಿಎಸ್ ಮುಖಂಡ ಅಬ್ದುಲ್ ಸಮ್ಮದ್ ಅವರು ಸಿ ಕೆ ಎಲ್ ಚಂದ್ ಪಾಷಾ ಅವರಿಗೆ ಸಲಹೆ ನೀಡಿದ್ದಾರೆ. ಚಂದ್ ಪಾಷಾ ಅವರಿಗೆ ಮಾಹಿತಿಯ ಕೊರತೆ ಇದೆ ಎಂದು ಹೇಳಿರುವ ಅಬ್ದುಲ್ ಸಮ್ಮದ್, ಯಾವುದೇ ವಿಷಯದ ಬಗ್ಗೆ ಮಾತನಾಡುವ ಮೊದಲು ಅದನ್ನು ತಿಳಿದುಕೊಂಡು ಮಾತನಾಡಬೇಕು ಎಂದು ಸೂಚಿಸಿದ್ದಾರೆ.
    user_Md mansoor
    Md mansoor
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    1 hr ago
  • ಮಂಡ್ಯ ಜಿಲ್ಲಾ ಕಾರ್ಯನಿರತ‌ ಪತ್ರಕರ್ತರ ಸಂಘವು ಇಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮಾಜಿ ಮುಖ್ಯಮಂತ್ರಿಯವರ ಪುತ್ರರಾಗಿರುವ, ಹಿಂದೆ ಆ್ಯಕ್ಷನ್ ಚಿತ್ರಗಳಿಂದ ಹೆಸರು ಮಾಡಿದ್ದ ಮತ್ತು ಹಾಲಿ ಕ್ರೀಡಾಪಟು ಆಗಿರುವ ಕುಮಾರ್ ಬಂಗಾರಪ್ಪ, ಮಾಧ್ಯಮ ಮಿತ್ರರೊಂದಿಗೆ ಒಂದಿಷ್ಟು ಮಾತುಕತೆ ನಡೆಸಿ, ಒಂದು ಕಾಫಿ ಸೇವಿಸಿದರು. ಈ ಸಂವಾದದಲ್ಲಿ ಕುಮಾರ್ ಬಂಗಾರಪ್ಪ ರಾಜಕೀಯ, ಕ್ರೀಡೆ ಮತ್ತು ನಟನೆ ವಿಷಯಗಳ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅತ್ಯಂತ ಸಂತೋಷದಿಂದ ಉತ್ತರ ನೀಡಿದರು. ಕಾವೇರಿ ನೀರು ವಿಚಾರದಲ್ಲಿ ತಮಿಳುನಾಡಿಗೆ ತರಾಟೆ ಮತ್ತು ಕೊಂಕು ನುಡಿದರು, ಹಾಗೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು. ಇದಲ್ಲದೆ, ಕ್ರೀಡಾ ಲೋಕದಲ್ಲಿ ಆಗುತ್ತಿರುವ ಬದಲಾವಣೆಗಳು, ರಾಜಕೀಯದಲ್ಲಿನ ಇಂದಿನ ಹಗ್ಗಜಗ್ಗಾಟ, ಬೀಡಿ ಟೌನ್‌ಶಿಪ್‌ನ ಪರಾಮರ್ಶೆಯ ಅಗತ್ಯತೆ ಮತ್ತು ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯ ಆಂತರಿಕ ರಾಜಕೀಯದ ಕುರಿತು ಹರಟೆ ನಡೆಸಿದರು. ಈ ವೇಳೆ, ಕುಮಾರ್ ಬಂಗಾರಪ್ಪ ಹೆಚ್ಚು ಓದಿಕೊಂಡಿರುವ, ಸರಳ ಮತ್ತು ಮೃದುಭಾಷಿ ವ್ಯಕ್ತಿ ಎಂದು ತಿಳಿದುಬಂತು. ಸಂವಾದದ ಕೊನೆಯಲ್ಲಿ, ಪ್ರೆಸ್ ಕ್ಲಬ್‌ನಿಂದ ಕುಮಾರ್ ಬಂಗಾರಪ್ಪ ಅವರಿಗೆ ಸಣ್ಣ ಅಭಿನಂದನೆ ಸಲ್ಲಿಸಲಾಯಿತು. ಈ ಅಪರೂಪದ ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅರುಣ ಪ್ರಸಾದ್ ಗರುಡನಹಳ್ಳಿ ಅವರು, ಕುಮಾರ್ ಬಂಗಾರಪ್ಪ ನಗುತ್ತಲೇ ಪ್ರೆಸ್ ಕ್ಲಬ್‌ನಿಂದ ಹೊರಟರು ಎಂದು ತಿಳಿಸಿದ್ದು, ಪ್ರತಿ ದಿನವೂ ಇಂತಹ ಉತ್ತಮ ವಾತಾವರಣ ಪ್ರೆಸ್ ಕ್ಲಬ್‌ನಲ್ಲಿ ಇರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
    1
    ಮಂಡ್ಯ ಜಿಲ್ಲಾ ಕಾರ್ಯನಿರತ‌ ಪತ್ರಕರ್ತರ ಸಂಘವು ಇಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮಾಜಿ ಮುಖ್ಯಮಂತ್ರಿಯವರ ಪುತ್ರರಾಗಿರುವ, ಹಿಂದೆ ಆ್ಯಕ್ಷನ್ ಚಿತ್ರಗಳಿಂದ ಹೆಸರು ಮಾಡಿದ್ದ ಮತ್ತು ಹಾಲಿ ಕ್ರೀಡಾಪಟು ಆಗಿರುವ ಕುಮಾರ್ ಬಂಗಾರಪ್ಪ, ಮಾಧ್ಯಮ ಮಿತ್ರರೊಂದಿಗೆ ಒಂದಿಷ್ಟು ಮಾತುಕತೆ ನಡೆಸಿ, ಒಂದು ಕಾಫಿ ಸೇವಿಸಿದರು.

ಈ ಸಂವಾದದಲ್ಲಿ ಕುಮಾರ್ ಬಂಗಾರಪ್ಪ ರಾಜಕೀಯ, ಕ್ರೀಡೆ ಮತ್ತು ನಟನೆ ವಿಷಯಗಳ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅತ್ಯಂತ ಸಂತೋಷದಿಂದ ಉತ್ತರ ನೀಡಿದರು. ಕಾವೇರಿ ನೀರು ವಿಚಾರದಲ್ಲಿ ತಮಿಳುನಾಡಿಗೆ ತರಾಟೆ ಮತ್ತು ಕೊಂಕು ನುಡಿದರು, ಹಾಗೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು. ಇದಲ್ಲದೆ, ಕ್ರೀಡಾ ಲೋಕದಲ್ಲಿ ಆಗುತ್ತಿರುವ ಬದಲಾವಣೆಗಳು, ರಾಜಕೀಯದಲ್ಲಿನ ಇಂದಿನ ಹಗ್ಗಜಗ್ಗಾಟ, ಬೀಡಿ ಟೌನ್‌ಶಿಪ್‌ನ ಪರಾಮರ್ಶೆಯ ಅಗತ್ಯತೆ ಮತ್ತು ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯ ಆಂತರಿಕ ರಾಜಕೀಯದ ಕುರಿತು ಹರಟೆ ನಡೆಸಿದರು. ಈ ವೇಳೆ, ಕುಮಾರ್ ಬಂಗಾರಪ್ಪ ಹೆಚ್ಚು ಓದಿಕೊಂಡಿರುವ, ಸರಳ ಮತ್ತು ಮೃದುಭಾಷಿ ವ್ಯಕ್ತಿ ಎಂದು ತಿಳಿದುಬಂತು.

ಸಂವಾದದ ಕೊನೆಯಲ್ಲಿ, ಪ್ರೆಸ್ ಕ್ಲಬ್‌ನಿಂದ ಕುಮಾರ್ ಬಂಗಾರಪ್ಪ ಅವರಿಗೆ ಸಣ್ಣ ಅಭಿನಂದನೆ ಸಲ್ಲಿಸಲಾಯಿತು. ಈ ಅಪರೂಪದ ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅರುಣ ಪ್ರಸಾದ್ ಗರುಡನಹಳ್ಳಿ ಅವರು, ಕುಮಾರ್ ಬಂಗಾರಪ್ಪ ನಗುತ್ತಲೇ ಪ್ರೆಸ್ ಕ್ಲಬ್‌ನಿಂದ ಹೊರಟರು ಎಂದು ತಿಳಿಸಿದ್ದು, ಪ್ರತಿ ದಿನವೂ ಇಂತಹ ಉತ್ತಮ ವಾತಾವರಣ ಪ್ರೆಸ್ ಕ್ಲಬ್‌ನಲ್ಲಿ ಇರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    1 hr ago
  • ಹೊಸಕೋಟೆಯಲ್ಲಿ ಹೂಡಿಕೆದಾರರಿಗೆ ಭಾರಿ ಲಾಭಾಂಶದ ಆಮಿಷವೊಡ್ಡಿ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಒಟ್ಟು 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
    1
    ಹೊಸಕೋಟೆಯಲ್ಲಿ ಹೂಡಿಕೆದಾರರಿಗೆ ಭಾರಿ ಲಾಭಾಂಶದ ಆಮಿಷವೊಡ್ಡಿ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಒಟ್ಟು 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
    user_Veega News Kannada
    Veega News Kannada
    Newspaper advertising department ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಭವಿಸಿದ ಸಾರಿಗೆ ಬಸ್ ಅಪಘಾತದಲ್ಲಿ ದೊಡ್ಡ ಅನಾಹುತವೊಂದು ಅದೃಷ್ಟವಶಾತ್ ತಪ್ಪಿಹೋಗಿದೆ. ಈ ಘಟನೆಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದು, ಅಪಘಾತಕ್ಕೆ ಬಸ್‌ನ ಬ್ರೇಕ್ ವೈಫಲ್ಯವೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
    1
    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಭವಿಸಿದ ಸಾರಿಗೆ ಬಸ್ ಅಪಘಾತದಲ್ಲಿ ದೊಡ್ಡ ಅನಾಹುತವೊಂದು ಅದೃಷ್ಟವಶಾತ್ ತಪ್ಪಿಹೋಗಿದೆ. ಈ ಘಟನೆಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದು, ಅಪಘಾತಕ್ಕೆ ಬಸ್‌ನ ಬ್ರೇಕ್ ವೈಫಲ್ಯವೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
    user_Md mansoor
    Md mansoor
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    5 hrs ago
  • ಮಂಡ್ಯ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಚಲನಚಿತ್ರ ನಟ, ಮಾಜಿ ಸಚಿವ ಹಾಗೂ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಅಧ್ಯಕ್ಷ ಕುಮಾರ್ ಬಂಗಾರಪ್ಪ ಅವರು, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬ್ಯಾಡ್ಮಿಂಟನ್ ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರವು ೫ರಿಂದ ೧೦ ಎಕರೆ ಭೂಮಿಯನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಭವಿಷ್ಯದ ಒಲಂಪಿಕ್ ಕ್ರೀಡೆಗಳಿಗಾಗಿ ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ಕ್ರೀಡಾಂಗಣ ನಿರ್ಮಿಸಲು ೫೦ ಎಕರೆ ಭೂಮಿ ಒದಗಿಸುವುದಾಗಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದಕ್ಕೆ ಸ್ಪಂದಿಸುವ ನಿರೀಕ್ಷೆಯಿದೆ ಎಂದು ಕುಮಾರ್ ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ೯.೫ರಿಂದ ೧೦ ಸಾವಿರ ಬ್ಯಾಡ್ಮಿಂಟನ್ ಕೋರ್ಟ್‌ಗಳಿದ್ದು, ಉತ್ತಮ ಅಂತರಾಷ್ಟ್ರೀಯ ಮಟ್ಟದ ಆಟಗಾರರನ್ನು ರಾಜ್ಯವು ಸಿದ್ಧಪಡಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಜಿಲ್ಲೆಯ ಅಸೋಸಿಯೇಷನ್‌ಗೆ ಭೂಮಿ ಒದಗಿಸುವ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ರಾಜ್ಯದೆಲ್ಲೆಡೆ ಇರುವ ಸರ್ಕಾರಿ ಸಮುಚ್ಚಯಗಳಲ್ಲಿ ೪ರಿಂದ ೫ ಸಾವಿರ ಚದರ ಅಡಿಯ ಸ್ಥಳಾವಕಾಶ ಸಿಕ್ಕರೂ ಒಂದು ಸುಸಜ್ಜಿತ ಬ್ಯಾಡ್ಮಿಂಟನ್ ಕೋರ್ಟ್ ಸ್ಥಾಪಿಸಬಹುದು ಎಂದು ಕುಮಾರ್ ಬಂಗಾರಪ್ಪ ಸಲಹೆ ನೀಡಿದ್ದಾರೆ. ರ್ಯಾಂಕಿಂಗ್ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಮಕ್ಕಳ ಪೋಷಕರು ಅಸೋಸಿಯೇಷನ್ ಮೂಲಕ ಪಾಲ್ಗೊಳ್ಳುವುದು ಸೂಕ್ತ. ಇದರಿಂದ ಅವರಿಗೆ ಶೇ.೪೦ರಿಂದ ೫೦ರಷ್ಟು ಆರ್ಥಿಕ ನೆರವು ದೊರೆಯುವುದರ ಜೊತೆಗೆ ಊಟ ಮತ್ತು ವಸತಿಯ ಜವಾಬ್ದಾರಿಯನ್ನು ಕೂಡ ಅಸೋಸಿಯೇಷನ್ ವಹಿಸಿಕೊಳ್ಳಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬ್ಯಾಡ್ಮಿಂಟನ್ ಆಟದ ಸ್ವರೂಪ ಬದಲಾಗುತ್ತಿದ್ದು, ೨ ಸರ್ವಿಸ್ ಮಾದರಿಯಿಂದ ೨೧ ಪಾಯಿಂಟ್ ರೀತಿಗೆ ಬದಲಾದ ಪಂದ್ಯವು ಈಗ ೧೫ ಪಾಯಿಂಟ್‌ನ ಮೂರು ಸೆಟ್‌ಗಳ ಪಂದ್ಯಾವಳಿಯಾಗಿ ರೂಪಾಂತರಗೊಳ್ಳುತ್ತಿದೆ. ಕ್ರೀಡೆಗೆ ಪ್ರೋತ್ಸಾಹ ನೀಡಲು ಹೊಸ ಕ್ರೀಡಾ ನೀತಿಯನ್ನು ಜಾರಿಗೆ ತರಲಾಗುವುದು. ಎಲ್ಲಾ ಕ್ರೀಡೆಗಳಿಗೆ ಅಗತ್ಯಕ್ಕೆ ತಕ್ಕಂತೆ ಅನುದಾನ ಒದಗಿಸಲು ಈ ನೀತಿಯನ್ನು ರೂಪಿಸಲಾಗುತ್ತಿದೆ. ಕ್ರೀಡಾ ಸಮಿತಿಗಳಲ್ಲಿ ಮಹಿಳೆಯರನ್ನು ಒಳಗೊಂಡಂತೆ ೫ ಮಂದಿ ಕ್ರೀಡಾಪಟುಗಳು ಇರುವಂತೆ ರಚನೆ ಮಾಡಲಾಗುವುದು. ಈ ಹೊಸ ಕ್ರೀಡಾ ನೀತಿಯು ಇದೇ ಡಿಸೆಂಬರ್‌ನಿಂದ ಜಾರಿಯಾಗುವ ನಿರೀಕ್ಷೆಯಿದೆ ಎಂದು ಕುಮಾರ್ ಬಂಗಾರಪ್ಪ ಮಾಹಿತಿ ನೀಡಿದರು.
    1
    ಮಂಡ್ಯ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಚಲನಚಿತ್ರ ನಟ, ಮಾಜಿ ಸಚಿವ ಹಾಗೂ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಅಧ್ಯಕ್ಷ ಕುಮಾರ್ ಬಂಗಾರಪ್ಪ ಅವರು, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬ್ಯಾಡ್ಮಿಂಟನ್ ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರವು ೫ರಿಂದ ೧೦ ಎಕರೆ ಭೂಮಿಯನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಭವಿಷ್ಯದ ಒಲಂಪಿಕ್ ಕ್ರೀಡೆಗಳಿಗಾಗಿ ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ಕ್ರೀಡಾಂಗಣ ನಿರ್ಮಿಸಲು ೫೦ ಎಕರೆ ಭೂಮಿ ಒದಗಿಸುವುದಾಗಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದಕ್ಕೆ ಸ್ಪಂದಿಸುವ ನಿರೀಕ್ಷೆಯಿದೆ ಎಂದು ಕುಮಾರ್ ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ೯.೫ರಿಂದ ೧೦ ಸಾವಿರ ಬ್ಯಾಡ್ಮಿಂಟನ್ ಕೋರ್ಟ್‌ಗಳಿದ್ದು, ಉತ್ತಮ ಅಂತರಾಷ್ಟ್ರೀಯ ಮಟ್ಟದ ಆಟಗಾರರನ್ನು ರಾಜ್ಯವು ಸಿದ್ಧಪಡಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಜಿಲ್ಲೆಯ ಅಸೋಸಿಯೇಷನ್‌ಗೆ ಭೂಮಿ ಒದಗಿಸುವ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ರಾಜ್ಯದೆಲ್ಲೆಡೆ ಇರುವ ಸರ್ಕಾರಿ ಸಮುಚ್ಚಯಗಳಲ್ಲಿ ೪ರಿಂದ ೫ ಸಾವಿರ ಚದರ ಅಡಿಯ ಸ್ಥಳಾವಕಾಶ ಸಿಕ್ಕರೂ ಒಂದು ಸುಸಜ್ಜಿತ ಬ್ಯಾಡ್ಮಿಂಟನ್ ಕೋರ್ಟ್ ಸ್ಥಾಪಿಸಬಹುದು ಎಂದು ಕುಮಾರ್ ಬಂಗಾರಪ್ಪ ಸಲಹೆ ನೀಡಿದ್ದಾರೆ.

ರ್ಯಾಂಕಿಂಗ್ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಮಕ್ಕಳ ಪೋಷಕರು ಅಸೋಸಿಯೇಷನ್ ಮೂಲಕ ಪಾಲ್ಗೊಳ್ಳುವುದು ಸೂಕ್ತ. ಇದರಿಂದ ಅವರಿಗೆ ಶೇ.೪೦ರಿಂದ ೫೦ರಷ್ಟು ಆರ್ಥಿಕ ನೆರವು ದೊರೆಯುವುದರ ಜೊತೆಗೆ ಊಟ ಮತ್ತು ವಸತಿಯ ಜವಾಬ್ದಾರಿಯನ್ನು ಕೂಡ ಅಸೋಸಿಯೇಷನ್ ವಹಿಸಿಕೊಳ್ಳಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬ್ಯಾಡ್ಮಿಂಟನ್ ಆಟದ ಸ್ವರೂಪ ಬದಲಾಗುತ್ತಿದ್ದು, ೨ ಸರ್ವಿಸ್ ಮಾದರಿಯಿಂದ ೨೧ ಪಾಯಿಂಟ್ ರೀತಿಗೆ ಬದಲಾದ ಪಂದ್ಯವು ಈಗ ೧೫ ಪಾಯಿಂಟ್‌ನ ಮೂರು ಸೆಟ್‌ಗಳ ಪಂದ್ಯಾವಳಿಯಾಗಿ ರೂಪಾಂತರಗೊಳ್ಳುತ್ತಿದೆ. ಕ್ರೀಡೆಗೆ ಪ್ರೋತ್ಸಾಹ ನೀಡಲು ಹೊಸ ಕ್ರೀಡಾ ನೀತಿಯನ್ನು ಜಾರಿಗೆ ತರಲಾಗುವುದು. ಎಲ್ಲಾ ಕ್ರೀಡೆಗಳಿಗೆ ಅಗತ್ಯಕ್ಕೆ ತಕ್ಕಂತೆ ಅನುದಾನ ಒದಗಿಸಲು ಈ ನೀತಿಯನ್ನು ರೂಪಿಸಲಾಗುತ್ತಿದೆ. ಕ್ರೀಡಾ ಸಮಿತಿಗಳಲ್ಲಿ ಮಹಿಳೆಯರನ್ನು ಒಳಗೊಂಡಂತೆ ೫ ಮಂದಿ ಕ್ರೀಡಾಪಟುಗಳು ಇರುವಂತೆ ರಚನೆ ಮಾಡಲಾಗುವುದು. ಈ ಹೊಸ ಕ್ರೀಡಾ ನೀತಿಯು ಇದೇ ಡಿಸೆಂಬರ್‌ನಿಂದ ಜಾರಿಯಾಗುವ ನಿರೀಕ್ಷೆಯಿದೆ ಎಂದು ಕುಮಾರ್ ಬಂಗಾರಪ್ಪ ಮಾಹಿತಿ ನೀಡಿದರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.