logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿವಮೊಗ್ಗ-ರಾಜ್ಯಪ್ರಶಸ್ತಿ ವಿಜೇತರು:ಕನ್ನಡಕ್ಕಾಗಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಶಿವಮೊಗ್ಗ: ಕರ್ನಾಟಕ ನಾಡು ರಕ್ಷಣಾ ವೇದಿಕೆಯ ದಶಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಮಲೆನಾಡು ಉತ್ಸವ, ಡಾ.ಪುನೀತ್ ರಾಜ್‍ಕುಮಾರ್ ಸವಿನೆನಪಿನಲ್ಲಿ ಕರ್ನಾಟಕ ರಾಜ್ಯಪ್ರಶಸ್ತಿ ವಿಜೇತರು ಹಾಗೂ ಕನ್ನಡಕ್ಕಾಗಿ ಸಾಧನೆ ಮಾಡಿರುವ ಮಹನೀಯರಿಗೆ ಸನ್ಮಾನ ಸಮಾರಂಭವನ್ನು ಫೆ.20ರ ಸಂಜೆ 4.30ಕ್ಕೆ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ದಿನೇಶ್ ಎಸ್.ಎಂ. ತಿಳಿಸಿದರು. ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 10 ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು, ಪ್ರತೀ ವರ್ಷವೂ ಸಮಾಜಮುಖಿ ಸೇವೆ ಹಾಗೂ ಹೋರಾಟಗಳನ್ನು ನಡೆಸುತ್ತಾ ಬರಲಾಗುತ್ತಿದೆ ಎಂದರು. ಅಂದು ಮಧ್ಯಾಹ್ನ 3.30ಕ್ಕೆ ಸೈನ್ಸ್ ಮೈದಾನದಿಂದ ಭುವನೇಶ್ವರಿ ದೇವಿಯ ರಾಜಬೀದಿ ಉತ್ಸವವಿದ್ದು, ನಂತರ ನಡೆಯುವ ಸಮಾರಂಭದ ದಿವ್ಯ ಸಾನಿಧ್ಯ ವನ್ನು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಹೊನ್ನಾಳಿ ತಾಲೂಕಿನ ರಾಂಪುರದ ಬೃಹನ್ಮಠದ ಶ್ರೀ ಸದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀಕ್ಷೇತ್ರ ದಿಂಡದಹಳ್ಳಿಯ ಶ್ರೀ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷತೆಯನ್ನು ವೇದಿಕೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಪ್ರಸನ್ನಗೌಡ್ರು ವಹಿಸಲಿದ್ದಾರೆ ಎಂದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮಾಜಿ ಶಾಸಕ ಕೋಣಂದೂರು ಲಿಂಗಪ್ಪ, ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ, ಹಿರಿಯ ಜನಪದ ಕಲಾವಿದ ಬಿ.ಟಾಕಪ್ಪ ಕಣ್ಣೂರು, ಶಿವಮೊಗ್ಗದ ತಬಲ ವಾದಕ ಆರ್.ತುಕಾರಾಂ ರಾವ್ ರಂಗದೋಳ್, ಯೋಗಾಚಾರ್ಯ ಜೆ.ನಾಗರಾಜ್, ನಟನಂ ಬಾಲನಾಟ್ಯ ಕೇಂದ್ರದ ನಿರ್ದೇಶಕ ವಿದ್ವಾನ್ ಡಾ.ಎಸ್.ಕೇಶವಕುಮಾರ್ ಪಿಳ್ಳೈ, ವಯಲಿನ್ ವಿದ್ವಾಂಸಕ ಹೊಸಳ್ಳಿ ಕೆ.ವೆಂಕಟರಾವ್, ಶಿಕ್ಷಕ ಸಿ.ಹೆಚ್.ಹನುಮಂತಪ್ಪ, ಯಕ್ಷಗಾನ ಕಲಾವಿದ ಪರಮೇಶ್ವರ ಹೆಗಡೆ ಹಾಗೂ ಎಸ್.ವಿ.ಚಂದ್ರಕಲಾ ಇವರನ್ನು ಸನ್ಮಾನಿಸಲಾಗುವುದು ಎಂದರು. ಸಮಾರಂಭವನ್ನು ಚಿತ್ರನಟ ಡಾ.ಶಿವರಾಜ್‍ಕುಮಾರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಆರಗ ಜ್ಞಾನೇಂದ್ರ, ಶಾರದಾ ಪೂರ್ಯಾನಾಯ್ಕ, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಎಂಐಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ರಾಜ್ಯಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಚಲನಚಿತ್ರ ನಟರಾದ ಧರ್ಮಕೀರ್ತಿರಾಜ್, ರಘುರಾಜ್ ಮಲೆನಾಡು, ಭಾಸ್ಕರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ರಾದ ಕುಬೇರ್, ಸಚಿನ್ ಗೌಡ, ಬಾಹುದ್ದಿನ್, ಸಂಕೇತ್ ಎನ್.ಶೇಟ್, ಸುಬ್ರಹ್ಮಣ್ಯ ನಾಗರಾಜ್ ನಾಯ್ಕ್, ಪ್ರವೀಣ್‍ ಕುಮಾರ್, ಶಿವು ಇನ್ನಿತರರಿದ್ದರು.

2 hrs ago
user_ಆರ್.ವಿ.ಕೃಷ್ಣ
ಆರ್.ವಿ.ಕೃಷ್ಣ
Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
2 hrs ago
d2eadf0c-6dcd-43c5-a614-e08f042236b6

ಶಿವಮೊಗ್ಗ-ರಾಜ್ಯಪ್ರಶಸ್ತಿ ವಿಜೇತರು:ಕನ್ನಡಕ್ಕಾಗಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಶಿವಮೊಗ್ಗ: ಕರ್ನಾಟಕ ನಾಡು ರಕ್ಷಣಾ ವೇದಿಕೆಯ ದಶಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಮಲೆನಾಡು ಉತ್ಸವ, ಡಾ.ಪುನೀತ್ ರಾಜ್‍ಕುಮಾರ್ ಸವಿನೆನಪಿನಲ್ಲಿ ಕರ್ನಾಟಕ ರಾಜ್ಯಪ್ರಶಸ್ತಿ ವಿಜೇತರು ಹಾಗೂ ಕನ್ನಡಕ್ಕಾಗಿ ಸಾಧನೆ ಮಾಡಿರುವ ಮಹನೀಯರಿಗೆ ಸನ್ಮಾನ ಸಮಾರಂಭವನ್ನು ಫೆ.20ರ ಸಂಜೆ 4.30ಕ್ಕೆ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ದಿನೇಶ್ ಎಸ್.ಎಂ. ತಿಳಿಸಿದರು. ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 10 ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು, ಪ್ರತೀ ವರ್ಷವೂ ಸಮಾಜಮುಖಿ ಸೇವೆ ಹಾಗೂ ಹೋರಾಟಗಳನ್ನು ನಡೆಸುತ್ತಾ ಬರಲಾಗುತ್ತಿದೆ ಎಂದರು. ಅಂದು ಮಧ್ಯಾಹ್ನ 3.30ಕ್ಕೆ ಸೈನ್ಸ್ ಮೈದಾನದಿಂದ ಭುವನೇಶ್ವರಿ ದೇವಿಯ ರಾಜಬೀದಿ ಉತ್ಸವವಿದ್ದು, ನಂತರ ನಡೆಯುವ ಸಮಾರಂಭದ ದಿವ್ಯ ಸಾನಿಧ್ಯ ವನ್ನು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಹೊನ್ನಾಳಿ ತಾಲೂಕಿನ ರಾಂಪುರದ ಬೃಹನ್ಮಠದ ಶ್ರೀ ಸದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀಕ್ಷೇತ್ರ ದಿಂಡದಹಳ್ಳಿಯ ಶ್ರೀ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷತೆಯನ್ನು ವೇದಿಕೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಪ್ರಸನ್ನಗೌಡ್ರು ವಹಿಸಲಿದ್ದಾರೆ ಎಂದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮಾಜಿ ಶಾಸಕ ಕೋಣಂದೂರು ಲಿಂಗಪ್ಪ, ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ, ಹಿರಿಯ ಜನಪದ ಕಲಾವಿದ ಬಿ.ಟಾಕಪ್ಪ ಕಣ್ಣೂರು, ಶಿವಮೊಗ್ಗದ ತಬಲ ವಾದಕ ಆರ್.ತುಕಾರಾಂ ರಾವ್ ರಂಗದೋಳ್, ಯೋಗಾಚಾರ್ಯ ಜೆ.ನಾಗರಾಜ್, ನಟನಂ ಬಾಲನಾಟ್ಯ ಕೇಂದ್ರದ ನಿರ್ದೇಶಕ ವಿದ್ವಾನ್ ಡಾ.ಎಸ್.ಕೇಶವಕುಮಾರ್ ಪಿಳ್ಳೈ, ವಯಲಿನ್ ವಿದ್ವಾಂಸಕ ಹೊಸಳ್ಳಿ ಕೆ.ವೆಂಕಟರಾವ್, ಶಿಕ್ಷಕ ಸಿ.ಹೆಚ್.ಹನುಮಂತಪ್ಪ, ಯಕ್ಷಗಾನ ಕಲಾವಿದ ಪರಮೇಶ್ವರ ಹೆಗಡೆ ಹಾಗೂ ಎಸ್.ವಿ.ಚಂದ್ರಕಲಾ ಇವರನ್ನು ಸನ್ಮಾನಿಸಲಾಗುವುದು ಎಂದರು. ಸಮಾರಂಭವನ್ನು ಚಿತ್ರನಟ ಡಾ.ಶಿವರಾಜ್‍ಕುಮಾರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಆರಗ ಜ್ಞಾನೇಂದ್ರ, ಶಾರದಾ ಪೂರ್ಯಾನಾಯ್ಕ, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಎಂಐಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ರಾಜ್ಯಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಚಲನಚಿತ್ರ ನಟರಾದ ಧರ್ಮಕೀರ್ತಿರಾಜ್, ರಘುರಾಜ್ ಮಲೆನಾಡು, ಭಾಸ್ಕರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ರಾದ ಕುಬೇರ್, ಸಚಿನ್ ಗೌಡ, ಬಾಹುದ್ದಿನ್, ಸಂಕೇತ್ ಎನ್.ಶೇಟ್, ಸುಬ್ರಹ್ಮಣ್ಯ ನಾಗರಾಜ್ ನಾಯ್ಕ್, ಪ್ರವೀಣ್‍ ಕುಮಾರ್, ಶಿವು ಇನ್ನಿತರರಿದ್ದರು.

More news from ಕರ್ನಾಟಕ and nearby areas
  • ಶಿವಮೊಗ್ಗ: ನಗರದಲ್ಲಿ ಜೀವ ತೆಗೆಯುತ್ತಿರುವ ಹಂಪ್ ಗಳ ಹಿಂದೆ ಇದೀಗ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಪ್ರತ್ಯೇಕ ಪ್ರತ್ಯೇಕವಾಗಿಯೇ ಬೆನ್ನು ಬಿದ್ದು ಹಂಪ್ ಗಳ ನಿರ್ಮಾಣಗಳಲ್ಲಿ ಆಗಿರುವ ತಪ್ಪು ಹುಡುಕಿ ಸರಿ ಮಾಡುತ್ತಿವೆ. ಒಂದು ಕಡೆ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡರು ಶಿವಮೊಗ್ಗದ ಹಂಪ್ ಗಳನ್ನು ಹುಡುಕಿ ಪರಿಶೀಲಿಸುತ್ತಿ ದ್ದಾರೆ. ಮತ್ತೊಂದು ಕಡೆ ಪೊಲೀಸ್ ಇಲಾಖೆಯ ಎಸ್ ಪಿ ನಿಖಿಲ್ ಬಿ. ಮತ್ತು ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಸಿಬ್ಬಂದಿ ಗಳೊಂದಿಗೆ ಅವೈಜ್ಞಾನಿಕ ಹಂಪ್ ಗಳ ಹುಡುಕಾಟ ಆರಂಭಿಸಿ ಸ್ಥಳ ಪರಿಶೀಲಿಸಿ, ಸರಿ ಪಡಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿಸುವ ಉದ್ದೇಶದಿಂದ ಹಾಕಲಾದ ಹಂಪ್ ಗಳೇ ಜನರ ಜೀವಗಳ ಜೊತೆ ಆಟವಾಡಲಾರಂಭಿಸಿದ್ದು ಜನಾಕ್ರೋಶಕ್ಕೆ ಕಾರಣವಾಗುತ್ತಿದೆ. ಒಂದೆರಡು ಕಡೆ ಪ್ರಮುಖ ಜಾಗಗಳಲ್ಲಿ ಹಂಪ್ ಗಳನ್ನು ಹಾಕಲು ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಜಂಟಿ ಕಾರ್ಯಾಚರಣೆ ಆರಂಭಿಸಿದಾಗ ಕೆಲವು ಕಡೆ ಜನರೇ ಒತ್ತಡ ಮಾಡಿ ಹಲವು ಕಡೆ ಹಂಪ್ ಗಳನ್ನು ಹಾಕಿಸಿಕೊಂಡಿದ್ದರು. ಅಪಘಾತ ಸಂಭವಿಸಿದ ರಸ್ತೆಗಳಲ್ಲಿರುವ ಹಂಪ್ ಗಳ ಬಳಿ ಎರಡೂ ಇಲಾಖೆಯ ಅಧಿಕಾರಿಗಳು ತೆರಳಿ ಪರಿಶೀಲಿಸಿ ಅವುಗಳನ್ನು ತೆಗೆಸುವ ಅಥವಾ ಸರಿ ಮಾಡುವ ಕೆಲಸ ತಕ್ಷಣದಿಂದ ಮಾಡುತ್ತಿರುವುದರಿಂದ ಬಹಳಷ್ಟು ಜೀವಗಳು ಉಳಿಯುವುದರಲ್ಲಿ ಸಂದೇಹವಿಲ್ಲ.
    1
    ಶಿವಮೊಗ್ಗ: ನಗರದಲ್ಲಿ ಜೀವ ತೆಗೆಯುತ್ತಿರುವ ಹಂಪ್ ಗಳ ಹಿಂದೆ ಇದೀಗ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಪ್ರತ್ಯೇಕ ಪ್ರತ್ಯೇಕವಾಗಿಯೇ ಬೆನ್ನು ಬಿದ್ದು ಹಂಪ್ ಗಳ ನಿರ್ಮಾಣಗಳಲ್ಲಿ ಆಗಿರುವ ತಪ್ಪು ಹುಡುಕಿ ಸರಿ ಮಾಡುತ್ತಿವೆ.
ಒಂದು ಕಡೆ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡರು ಶಿವಮೊಗ್ಗದ ಹಂಪ್ ಗಳನ್ನು ಹುಡುಕಿ ಪರಿಶೀಲಿಸುತ್ತಿ ದ್ದಾರೆ. ಮತ್ತೊಂದು ಕಡೆ ಪೊಲೀಸ್ ಇಲಾಖೆಯ ಎಸ್ ಪಿ ನಿಖಿಲ್ ಬಿ. ಮತ್ತು ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಸಿಬ್ಬಂದಿ ಗಳೊಂದಿಗೆ ಅವೈಜ್ಞಾನಿಕ ಹಂಪ್ ಗಳ ಹುಡುಕಾಟ ಆರಂಭಿಸಿ ಸ್ಥಳ ಪರಿಶೀಲಿಸಿ, ಸರಿ ಪಡಿಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿಸುವ ಉದ್ದೇಶದಿಂದ ಹಾಕಲಾದ ಹಂಪ್ ಗಳೇ ಜನರ ಜೀವಗಳ ಜೊತೆ ಆಟವಾಡಲಾರಂಭಿಸಿದ್ದು ಜನಾಕ್ರೋಶಕ್ಕೆ ಕಾರಣವಾಗುತ್ತಿದೆ.
ಒಂದೆರಡು ಕಡೆ ಪ್ರಮುಖ ಜಾಗಗಳಲ್ಲಿ ಹಂಪ್ ಗಳನ್ನು ಹಾಕಲು ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಜಂಟಿ ಕಾರ್ಯಾಚರಣೆ ಆರಂಭಿಸಿದಾಗ ಕೆಲವು ಕಡೆ ಜನರೇ ಒತ್ತಡ ಮಾಡಿ ಹಲವು ಕಡೆ ಹಂಪ್ ಗಳನ್ನು ಹಾಕಿಸಿಕೊಂಡಿದ್ದರು. 
ಅಪಘಾತ ಸಂಭವಿಸಿದ ರಸ್ತೆಗಳಲ್ಲಿರುವ ಹಂಪ್ ಗಳ ಬಳಿ ಎರಡೂ ಇಲಾಖೆಯ ಅಧಿಕಾರಿಗಳು ತೆರಳಿ ಪರಿಶೀಲಿಸಿ ಅವುಗಳನ್ನು ತೆಗೆಸುವ ಅಥವಾ ಸರಿ ಮಾಡುವ ಕೆಲಸ ತಕ್ಷಣದಿಂದ ಮಾಡುತ್ತಿರುವುದರಿಂದ ಬಹಳಷ್ಟು ಜೀವಗಳು ಉಳಿಯುವುದರಲ್ಲಿ ಸಂದೇಹವಿಲ್ಲ.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    5 hrs ago
  • ಭದ್ರಾವತಿ ತಾಲ್ಲೂಕು ಬಂಜಾರ ಸಂಘ ಹಾಗೂ ಸಮಾಜದ ವತಿಯಿಂದ ಅದ್ದೂರಿಯಾಗಿ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ
    1
    ಭದ್ರಾವತಿ ತಾಲ್ಲೂಕು ಬಂಜಾರ ಸಂಘ ಹಾಗೂ ಸಮಾಜದ ವತಿಯಿಂದ ಅದ್ದೂರಿಯಾಗಿ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ
    user_ಪ್ರವೀಣ್ ಅಧ್ಯಕ್ಷ NAYAKA
    ಪ್ರವೀಣ್ ಅಧ್ಯಕ್ಷ NAYAKA
    Local News Reporter ಭದ್ರಾವತಿ, ಶಿವಮೊಗ್ಗ, ಕರ್ನಾಟಕ•
    2 hrs ago
  • ತೀರ್ಥಹಳ್ಳಿ: ಪಟ್ಟಣದ ಹೃದಯ ಭಾಗದಲ್ಲಿ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯು ನಿನ್ನೆಯಿಂದ ನಡೆಯುತ್ತಿದ್ದು ಎರಡನೇ ದಿನವಾದ ಇಂದು ಬುಧವಾರದ ಶ್ರೀ ದೇವಿಯ ಅಲಂಕಾರ ಮತ್ತು ಪೂಜೆ
    2
    ತೀರ್ಥಹಳ್ಳಿ:  ಪಟ್ಟಣದ ಹೃದಯ ಭಾಗದಲ್ಲಿ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯು ನಿನ್ನೆಯಿಂದ ನಡೆಯುತ್ತಿದ್ದು ಎರಡನೇ ದಿನವಾದ ಇಂದು ಬುಧವಾರದ ಶ್ರೀ ದೇವಿಯ ಅಲಂಕಾರ ಮತ್ತು ಪೂಜೆ
    user_ರಶ್ಮಿ ಶ್ರೀಕಾಂತ್ ನಾಯಕ್
    ರಶ್ಮಿ ಶ್ರೀಕಾಂತ್ ನಾಯಕ್
    Local News Reporter ತೀರ್ಥಹಳ್ಳಿ, ಶಿವಮೊಗ್ಗ, ಕರ್ನಾಟಕ•
    2 hrs ago
  • ದಾವಣಗೆರೆ : ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡುವ ಹಾಗೂ ಜನರಲ್ಲಿ ಸುರಕ್ಷತೆ ಭಾವನೆ ಕಾಪಾಡುವ ನಿಟ್ಟಿನಲ್ಲಿ ಇಂದು ಬೆಳಗ್ಗೆ ದಾವಣಗೆರೆ ನಗರದಲ್ಲಿ ಎಸ್ಪಿ ಶೇಖರ್ ಹೆಚ್ ಟಿ ಐಪಿಎಸ್ ರವರ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು. ಪೊಲೀಸ್ ಫಥ ಸಂಚಲನವು ನಗರದ ಹೊಂಡದ ವೃತ್ತದಿಂದ ಆರಂಭವಾಗಿ ಅಂಬೇಡ್ಕರ್ ವೃತ್ತ, ಹಗೆದಿಬ್ಬ ವೃತ್ತ, ಕಾಳಿಕ ದೇವಿ ರಸ್ತೆ, ಗ್ಯಾಸ್ ಕಟ್ಟೆ ವೃತ್ತ, ಎಸ್ ಕೆ ಪಿ ರಸ್ತೆ ಮೂಲಕ ದರ್ಗಾಂಬಿಕಾ ದೇವಾಸ್ಥಾನ ಮೂಲಕ ನೇರವಾಗಿ ಹೊಂಡದ ವೃತ್ತಕ್ಕೆ ಮುಕ್ತಾಯವಾಗಿತು. ಹಗೆದಿಬ್ಬ ವೃತ್ತ, ಕಾಳಿಕ ದೇವಿ ರಸ್ತೆ, ಗ್ಯಾಸ್ ಕಟ್ಟೆ ವೃತ್ತ, ಎಸ್ ಕೆ ಪಿ ರಸ್ತೆ ಮೂಲಕ ದರ್ಗಾಂಬಿಕಾ ದೇವಾಸ್ಥಾನ ಮೂಲಕ ನೇರವಾಗಿ ಹೊಂಡದ ವೃತ್ತದಲ್ಲಿ ಸಮಾಪ್ತಿಯಾಯಿತು. ಪೊಲೀಸ್ ಪಥ ಸಂಚಲನದಲ್ಲಿ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ ರವರು, ಪೊಲೀಸ್ ನಿರೀಕ್ಷಕರಾದ ಶ್ರೀ ವಸಂತ್, ಶ್ರೀ ಸುನೀಲ್ ಕುಮಾರ್, ಶ್ರೀಮತಿ ಶಿಲ್ಪಾ, ಶ್ರೀ ನಂಜುಂಡಸ್ವಾಮಿ, ಶ್ರೀ ಮಂಜುನಾಥ ಕುಪ್ಪೇಲೂರು, ಪಿ ಎಸ್ ಐ ರವರಾದ ಶ್ರೀ ರವಿನಾಯ್ಕ, ಶ್ರೀ ಸಚಿನ್, ಶ್ರೀ ಮತಿ ಶಕುಂತಲಾ ಇತರರು, ಆರ್ ಎ ಎಫ್ ತಂಡದ ಪೊಲೀಸ್ ನಿರೀಕ್ಷಕರಾದ ಶ್ರೀ ರಾಜು ಹಾಗೂ ಸಿಬ್ಬಂದಿಗಳು, ನಗರ ಪೊಲೀಸ್ ಹಾಗೂ ಡಿ ಎ ಆರ್ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು. ರಾಜು
    4
    ದಾವಣಗೆರೆ : ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡುವ ಹಾಗೂ ಜನರಲ್ಲಿ ಸುರಕ್ಷತೆ ಭಾವನೆ ಕಾಪಾಡುವ ನಿಟ್ಟಿನಲ್ಲಿ ಇಂದು ಬೆಳಗ್ಗೆ ದಾವಣಗೆರೆ ನಗರದಲ್ಲಿ ಎಸ್ಪಿ ಶೇಖರ್ ಹೆಚ್ ಟಿ  ಐಪಿಎಸ್ ರವರ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು. 
ಪೊಲೀಸ್ ಫಥ ಸಂಚಲನವು  ನಗರದ ಹೊಂಡದ ವೃತ್ತದಿಂದ ಆರಂಭವಾಗಿ  ಅಂಬೇಡ್ಕರ್ ವೃತ್ತ, ಹಗೆದಿಬ್ಬ ವೃತ್ತ, ಕಾಳಿಕ ದೇವಿ ರಸ್ತೆ, ಗ್ಯಾಸ್ ಕಟ್ಟೆ ವೃತ್ತ, ಎಸ್ ಕೆ ಪಿ ರಸ್ತೆ ಮೂಲಕ ದರ್ಗಾಂಬಿಕಾ ದೇವಾಸ್ಥಾನ ಮೂಲಕ ನೇರವಾಗಿ ಹೊಂಡದ ವೃತ್ತಕ್ಕೆ ಮುಕ್ತಾಯವಾಗಿತು.  ಹಗೆದಿಬ್ಬ ವೃತ್ತ, ಕಾಳಿಕ ದೇವಿ ರಸ್ತೆ, ಗ್ಯಾಸ್ ಕಟ್ಟೆ ವೃತ್ತ, ಎಸ್ ಕೆ ಪಿ ರಸ್ತೆ ಮೂಲಕ ದರ್ಗಾಂಬಿಕಾ ದೇವಾಸ್ಥಾನ ಮೂಲಕ ನೇರವಾಗಿ ಹೊಂಡದ ವೃತ್ತದಲ್ಲಿ ಸಮಾಪ್ತಿಯಾಯಿತು. ಪೊಲೀಸ್ ಪಥ ಸಂಚಲನದಲ್ಲಿ  ನಗರ ಡಿವೈಎಸ್ಪಿ  ಶರಣಬಸವೇಶ್ವರ ಬಿ ರವರು, ಪೊಲೀಸ್ ನಿರೀಕ್ಷಕರಾದ ಶ್ರೀ ವಸಂತ್, ಶ್ರೀ ಸುನೀಲ್ ಕುಮಾರ್, ಶ್ರೀಮತಿ ಶಿಲ್ಪಾ, ಶ್ರೀ ನಂಜುಂಡಸ್ವಾಮಿ, ಶ್ರೀ ಮಂಜುನಾಥ ಕುಪ್ಪೇಲೂರು, ಪಿ ಎಸ್ ಐ ರವರಾದ ಶ್ರೀ ರವಿನಾಯ್ಕ, ಶ್ರೀ ಸಚಿನ್, ಶ್ರೀ ಮತಿ ಶಕುಂತಲಾ ಇತರರು,  ಆರ್ ಎ ಎಫ್ ತಂಡದ ಪೊಲೀಸ್ ನಿರೀಕ್ಷಕರಾದ ಶ್ರೀ ರಾಜು ಹಾಗೂ  ಸಿಬ್ಬಂದಿಗಳು,  ನಗರ ಪೊಲೀಸ್ ಹಾಗೂ ಡಿ ಎ ಆರ್ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು. ರಾಜು
    user_Nandheesh kumar ac
    Nandheesh kumar ac
    ದಾವಣಗೆರೆ, ದಾವಣಗೆರೆ, ಕರ್ನಾಟಕ•
    5 hrs ago
  • ಕಡೂರು : ಬಹುತೇಕ ಮಾರ್ಚ್ ತಿಂಗಳಲ್ಲಿ ಕಡೂರಿನಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್ ತಿಳಿಸಿದರು. ಪಟ್ಟಣದ ಕನ್ನಡ ಭವನದಲ್ಲಿ ಸಮ್ಮೇಳನದ ಪೂರ್ವಭಾವಿ ಸಿದ್ದತೆಯ ಮೊದಲ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಭೂತಪೂರ್ವ ಯಶಸ್ವಿಗೆ ಒತ್ತುಕೊಡಲಾಗಿದೆ. ಈಗಾಗಲೇ ಸಮ್ಮೇಳನಾಧ್ಯಕ್ಷರ ಆಯ್ಕೆಯ ಕುರಿತು ಜಿಲ್ಲೆಯ ಕಾರ್ಯಕಾರಿಣಿ ಸಭೆಯಲ್ಲಿ ಒಮ್ಮತ ನಿರ್ಣಯದೊಂದಿಗೆ ಆಯ್ಕೆಗೊಳಿಸಲಾಗುತ್ತದೆ. ಸಮ್ಮೇಳನದ ಮಹಾಪೋಷಕರಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಚಿಕ್ಕಮಗಳೂರು, ಹಾಸನ ಕ್ಷೇತ್ರದ ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರುಗಳನ್ನು ಮತ್ತು ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಅವರನ್ನು ಸಮಿತಿಯ ಪೋಷಕರನ್ನಾಗಿ ಆಯ್ಕೆಗೊಳಿಸಲಾಗಿದೆ. ಕ್ಷೇತ್ರದ ಮಾಜಿ ಶಾಸಕರು ಒಳಗೊಂಡAತೆ ವಿವಿಧ ಉಪಸಮಿತಿಗಳಲ್ಲಿ ಪದಾಧಿಕಾರಿಗಳನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಶಾಸಕರ ನೇತೃತ್ವ ಹಾಗೂ ಸ್ವಾಗತಸಮಿತಿ ಅಧ್ಯಕ್ಷರ ಸಮ್ಮುಖದಲ್ಲಿ ಸಿದ್ದತೆ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದರು. ಈ ಬಾರಿಯ ಸಮ್ಮೇಳನದಲ್ಲಿ ಅಂತರಾಷ್ಟಿçÃಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಬಾನುಮುಷ್ತಾಕ್ ಅವರನ್ನು ಆಹ್ವಾನಿಸಲಾಗುತ್ತದೆ. ಶೋಷಿತ ಸಮುದಾಯದ ಜಿಲ್ಲೆಯ ಸೂಕ್ತ ವ್ಯಕ್ತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆಗೊಳಿಸಲು ಪೂರ್ವಭಾವಿ ಸಭೆಯಲ್ಲಿ ಆಶಯವ್ಯಕ್ತಗೊಂಡಿದ್ದು, ಫೆ.22ರಂದು ಎನ್.ಆರ್.ಪುರದಲ್ಲಿ ನಡೆಯುವ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅಂತಿಮವಾಗಿ ಆಯ್ಕೆಗೊಳಿಸಲಾಗುತ್ತದೆ ಎಂದರು. ಸ್ವಾಗತ ಸಮಿತಿಯ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಈ ಹಿಂದೆ ತಾಲ್ಲೂಕಿನ ಚಟ್ನಳ್ಳಿ ಹಾಗೂ ಬೀರೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸಮ್ಮೇಳನವು ಈ ಬಾರಿ ವಿಶೇಷವಾಗಿ ಕಡೂರಿಗೆ 21ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡದ ಕೆಲಸಕ್ಕೆ ಎಲ್ಲರ ವಿಶ್ವಾಸವನ್ನು ಪಡೆದು ಸಮ್ಮೇಳನದ ಯಶಸ್ವಿಗೆ ಒತ್ತುಕೊಡಲಾಗುತ್ತದೆ. ಮುಖ್ಯವಾಗಿ ಸಮ್ಮೇಳನಾಧ್ಯಕ್ಷರನ್ನಾಗಿ ಶೋಷಿತ ಸಮುದಾಯಕ್ಕೆ ಪ್ರಾತಿನಿಧ್ಯ ದೊರಕಬೇಕೆಂಬುದು ಸಮಿತಿಯ ಒಕ್ಕೂರಲ ಅಭಿಪ್ರಾಯವಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸುವ ಮೂಲಕ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸಿ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲು ತಿರ್ಮಾನಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷರಾದ ಚಿಕ್ಕನಲ್ಲೂರು ಪರಮೇಶ್, ರವಿದಳವಾಯಿ, ಯರದಕೆರೆ ರಾಜಪ್ಪ, ಸಿಂಗಟಗೆರೆ ಸಿದ್ದಪ್ಪ, ಸೀತಾಲಕ್ಷಿö್ಮÃ, ಟಿ.ಆರ್. ರೇಣುಕಯ್ಯ, ಗೋವಿಂದಸ್ವಾಮಿ, ಕೆ.ಜಿ. ವಸಂತಕುಮಾರ್, ಪುರಸಭೆ ಮಾಜಿ ಸದಸ್ಯ ಗೋವಿಂದರಾಜು, ಗೆದ್ಲೇಹಳ್ಳಿ ಜಗದೀಶ್, ಎನ್.ಎಚ್. ನಂಜುAಡಸ್ವಾಮಿ, ಷಣ್ಮುಖಪ್ಪ, ನಾಗರಾಜ್, ಆರ್.ಜಿ. ಕೃಷ್ಣಸ್ವಾಮಿ, ಹಿರೇನಲ್ಲೂರು ಶ್ರೀನಿವಾಸ್, ಶಿವಲಿಂಗಸ್ವಾಮಿ ಮತ್ತಿತರಿದ್ದರು.
    4
    ಕಡೂರು : ಬಹುತೇಕ ಮಾರ್ಚ್ ತಿಂಗಳಲ್ಲಿ ಕಡೂರಿನಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ  ಸಮ್ಮೇಳನದ ಪೂರ್ವಭಾವಿ ಸಿದ್ದತೆಯ ಮೊದಲ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಭೂತಪೂರ್ವ ಯಶಸ್ವಿಗೆ ಒತ್ತುಕೊಡಲಾಗಿದೆ. ಈಗಾಗಲೇ ಸಮ್ಮೇಳನಾಧ್ಯಕ್ಷರ ಆಯ್ಕೆಯ ಕುರಿತು ಜಿಲ್ಲೆಯ ಕಾರ್ಯಕಾರಿಣಿ ಸಭೆಯಲ್ಲಿ ಒಮ್ಮತ ನಿರ್ಣಯದೊಂದಿಗೆ ಆಯ್ಕೆಗೊಳಿಸಲಾಗುತ್ತದೆ. ಸಮ್ಮೇಳನದ ಮಹಾಪೋಷಕರಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಚಿಕ್ಕಮಗಳೂರು, ಹಾಸನ ಕ್ಷೇತ್ರದ ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರುಗಳನ್ನು ಮತ್ತು ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಅವರನ್ನು ಸಮಿತಿಯ ಪೋಷಕರನ್ನಾಗಿ ಆಯ್ಕೆಗೊಳಿಸಲಾಗಿದೆ. ಕ್ಷೇತ್ರದ ಮಾಜಿ ಶಾಸಕರು ಒಳಗೊಂಡAತೆ ವಿವಿಧ ಉಪಸಮಿತಿಗಳಲ್ಲಿ ಪದಾಧಿಕಾರಿಗಳನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಶಾಸಕರ ನೇತೃತ್ವ ಹಾಗೂ ಸ್ವಾಗತಸಮಿತಿ ಅಧ್ಯಕ್ಷರ ಸಮ್ಮುಖದಲ್ಲಿ ಸಿದ್ದತೆ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದರು. 
ಈ ಬಾರಿಯ ಸಮ್ಮೇಳನದಲ್ಲಿ ಅಂತರಾಷ್ಟಿçÃಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಬಾನುಮುಷ್ತಾಕ್ ಅವರನ್ನು ಆಹ್ವಾನಿಸಲಾಗುತ್ತದೆ. ಶೋಷಿತ ಸಮುದಾಯದ ಜಿಲ್ಲೆಯ ಸೂಕ್ತ ವ್ಯಕ್ತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆಗೊಳಿಸಲು ಪೂರ್ವಭಾವಿ ಸಭೆಯಲ್ಲಿ ಆಶಯವ್ಯಕ್ತಗೊಂಡಿದ್ದು, ಫೆ.22ರಂದು ಎನ್.ಆರ್.ಪುರದಲ್ಲಿ ನಡೆಯುವ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅಂತಿಮವಾಗಿ ಆಯ್ಕೆಗೊಳಿಸಲಾಗುತ್ತದೆ ಎಂದರು.
ಸ್ವಾಗತ ಸಮಿತಿಯ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಈ ಹಿಂದೆ ತಾಲ್ಲೂಕಿನ ಚಟ್ನಳ್ಳಿ ಹಾಗೂ ಬೀರೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸಮ್ಮೇಳನವು ಈ ಬಾರಿ ವಿಶೇಷವಾಗಿ ಕಡೂರಿಗೆ 21ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡದ ಕೆಲಸಕ್ಕೆ ಎಲ್ಲರ ವಿಶ್ವಾಸವನ್ನು ಪಡೆದು ಸಮ್ಮೇಳನದ ಯಶಸ್ವಿಗೆ ಒತ್ತುಕೊಡಲಾಗುತ್ತದೆ. ಮುಖ್ಯವಾಗಿ ಸಮ್ಮೇಳನಾಧ್ಯಕ್ಷರನ್ನಾಗಿ ಶೋಷಿತ ಸಮುದಾಯಕ್ಕೆ ಪ್ರಾತಿನಿಧ್ಯ ದೊರಕಬೇಕೆಂಬುದು ಸಮಿತಿಯ ಒಕ್ಕೂರಲ ಅಭಿಪ್ರಾಯವಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸುವ ಮೂಲಕ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸಿ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲು ತಿರ್ಮಾನಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷರಾದ ಚಿಕ್ಕನಲ್ಲೂರು ಪರಮೇಶ್, ರವಿದಳವಾಯಿ, ಯರದಕೆರೆ ರಾಜಪ್ಪ, ಸಿಂಗಟಗೆರೆ ಸಿದ್ದಪ್ಪ, ಸೀತಾಲಕ್ಷಿö್ಮÃ, ಟಿ.ಆರ್. ರೇಣುಕಯ್ಯ, ಗೋವಿಂದಸ್ವಾಮಿ, ಕೆ.ಜಿ. ವಸಂತಕುಮಾರ್, ಪುರಸಭೆ ಮಾಜಿ ಸದಸ್ಯ ಗೋವಿಂದರಾಜು, ಗೆದ್ಲೇಹಳ್ಳಿ ಜಗದೀಶ್, ಎನ್.ಎಚ್. ನಂಜುAಡಸ್ವಾಮಿ, ಷಣ್ಮುಖಪ್ಪ, ನಾಗರಾಜ್, ಆರ್.ಜಿ. ಕೃಷ್ಣಸ್ವಾಮಿ, ಹಿರೇನಲ್ಲೂರು ಶ್ರೀನಿವಾಸ್, ಶಿವಲಿಂಗಸ್ವಾಮಿ ಮತ್ತಿತರಿದ್ದರು.
    user_Kadur News
    Kadur News
    ಪತ್ರಕರ್ತ Kadur, Chikkamagaluru•
    20 hrs ago
  • ಬೀದಿದನಗಳ ಕಾಟಕ್ಕೆ ಬೆಸತ್ತ ಸಾರ್ವಜನಿಕ ರು ಬೀದಿದನಗಳನ್ನ ಹಿಡಿದು ಗೋಶಾಲೆಗೆ ಬಿಡಲು ಮುಂದಾದ ನಗರಸಭೆ.. ಚಳ್ಳಕೆರೆ ನಗರದ ತರಕಾರಿ ಮಾರುಕಟ್ಟೆ ಮುಖ್ಯರಸ್ತೆ ಸೇರಿದಂತೆ ನಗರದ ತುಂಬೆಲ್ಲಾ ಸಾರ್ವಜನಿಕರಿಗೆ ‌ಉಪಟಲ ನೀಡುತ್ತಿದ್ದ ಬೀದಿದನಗಳನ್ನ ಹಿಡಿದು ಗೋಶಾಲೆಗೆ ಬೀಡಲು‌ ನಗರಸಭೆ ಮುಂದಾಗಿದೆ. ನಗರಸಭೆ ಪ್ರಭಾರ ಪೌರಯಿಕರಾದ ಡಾ.ನಾಗವೇಣಿ (ಕೆಎಎಸ್) ಇವರ ಸೂಚನೆ ಮೇರೆಗೆ‌ ನಗರಸಭೆ ಇಂಜಿನಿಯರ್ ನರೇಂದ್ರಬಾಬು ಆರೋಗ್ಯ ನಿರೀಕ್ಷಕರಾದ ಗೀತಾ, ಗಣೇಶ್ ಹಾಗೂ ಸಾಗರ್ ಇವರ ನೇತೃತ್ವದಲ್ಲಿ ಚಳ್ಳಕೆರೆ ಪಶು ಸಂಗೋಪನ ಇಲಾಖೆ ಹಾಗೂ ಪೋಲಿಸ್ ಇಲಾಖೆ ಸಹಾಯಯೋಗದೊಂದಿಗೆ ಇಂದು ಬೀದಿ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸಲು ಮುಂದಾಗಿದ್ದಾರೆ.. ಇದೆ ತಿಂಗಳು 24 ನೇ ತಾರೀಖಿನ ವರೆಗೆ ಬೀದಿದನಗಳನ್ನ ಹಿಡಿದು ಗೋಶಾಲೆಗೆ ಬಿಡಲಾಗುವುದು ಬೀದಿದನಗಳ‌ ಮಾಲೀಕರು ಹೆಚ್ಚೆತ್ತುಕೊಂಡು ತಮ್ಮ ಜಾನುವಾರುಗಳನ್ನ ಬೀದಿಗೆ ಬೀಡದಂತೆ ನೋಡಿಕೊಳ್ಳಬೇಕು ಇಲ್ಲವಾದರೆ ಬೀದಿದನಗಳನ್ನ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಪೌರಹಿತರು ಎಚ್ಚರಿಕೆಯನ್ನು ನೀಡಿದ್ದಾರೆ..
    1
    ಬೀದಿದನಗಳ ಕಾಟಕ್ಕೆ ಬೆಸತ್ತ ಸಾರ್ವಜನಿಕ ರು 
ಬೀದಿದನಗಳನ್ನ ಹಿಡಿದು ಗೋಶಾಲೆಗೆ ಬಿಡಲು ಮುಂದಾದ ನಗರಸಭೆ..
ಚಳ್ಳಕೆರೆ ನಗರದ  ತರಕಾರಿ ಮಾರುಕಟ್ಟೆ ಮುಖ್ಯರಸ್ತೆ ಸೇರಿದಂತೆ ನಗರದ
ತುಂಬೆಲ್ಲಾ ಸಾರ್ವಜನಿಕರಿಗೆ ‌ಉಪಟಲ ನೀಡುತ್ತಿದ್ದ ಬೀದಿದನಗಳನ್ನ ಹಿಡಿದು  ಗೋಶಾಲೆಗೆ ಬೀಡಲು‌ ನಗರಸಭೆ ಮುಂದಾಗಿದೆ.
ನಗರಸಭೆ  ಪ್ರಭಾರ ಪೌರಯಿಕರಾದ ಡಾ.ನಾಗವೇಣಿ  (ಕೆಎಎಸ್) ಇವರ ಸೂಚನೆ ಮೇರೆಗೆ‌
ನಗರಸಭೆ ಇಂಜಿನಿಯರ್ ನರೇಂದ್ರಬಾಬು ಆರೋಗ್ಯ ನಿರೀಕ್ಷಕರಾದ ಗೀತಾ, ಗಣೇಶ್ ಹಾಗೂ ಸಾಗರ್ ಇವರ ನೇತೃತ್ವದಲ್ಲಿ ಚಳ್ಳಕೆರೆ ಪಶು ಸಂಗೋಪನ ಇಲಾಖೆ ಹಾಗೂ ಪೋಲಿಸ್ ಇಲಾಖೆ ಸಹಾಯಯೋಗದೊಂದಿಗೆ ಇಂದು ಬೀದಿ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸಲು ಮುಂದಾಗಿದ್ದಾರೆ..
ಇದೆ ತಿಂಗಳು 24 ನೇ ತಾರೀಖಿನ ವರೆಗೆ ಬೀದಿದನಗಳನ್ನ ಹಿಡಿದು ಗೋಶಾಲೆಗೆ ಬಿಡಲಾಗುವುದು ಬೀದಿದನಗಳ‌ ಮಾಲೀಕರು ಹೆಚ್ಚೆತ್ತುಕೊಂಡು  ತಮ್ಮ ಜಾನುವಾರುಗಳನ್ನ ಬೀದಿಗೆ ಬೀಡದಂತೆ  ನೋಡಿಕೊಳ್ಳಬೇಕು
ಇಲ್ಲವಾದರೆ ಬೀದಿದನಗಳನ್ನ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಪೌರಹಿತರು ಎಚ್ಚರಿಕೆಯನ್ನು ನೀಡಿದ್ದಾರೆ..
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • ಚಳ್ಳಕೆರೆ ನಗರದ ಸೂಪರ್ ಮಾರ್ಟ್ ನಲ್ಲಿ ಅವದಿ ಮುಗಿದ ಆಹಾರ ಪದಾರ್ಥಗಳ ಮಾರಾಟಕ್ಕೆ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್ ಮೇಲ್ಭಾಗದ ಮೆಟ್ರೋ ಪ್ರೋರ್ಟ್ ಸೂಪರ್ ಮಾರ್ಕೇಟ್ ನಲ್ಲಿ ಅವಧಿ ಮುಗಿದ ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ
    1
    ಚಳ್ಳಕೆರೆ ನಗರದ ಸೂಪರ್ ಮಾರ್ಟ್ ನಲ್ಲಿ ಅವದಿ ಮುಗಿದ ಆಹಾರ ಪದಾರ್ಥಗಳ ಮಾರಾಟಕ್ಕೆ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್ ಮೇಲ್ಭಾಗದ ಮೆಟ್ರೋ ಪ್ರೋರ್ಟ್ ಸೂಪರ್ ಮಾರ್ಕೇಟ್ ನಲ್ಲಿ ಅವಧಿ ಮುಗಿದ ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • ತೀರ್ಥಹಳ್ಳಿ: ಪಟ್ಟಣಕ್ಕೆ ಹತ್ತಿರವಿರುವ ಕುರುವಳ್ಳಿಯ ಪುತ್ತಿಗೆ ಮಠದ ಪಕ್ಕದಲ್ಲಿರುವ ಗೌರಿಶಂಕರ ದೇವಸ್ಥಾನದಲ್ಲಿ ನಿನ್ನೆ ಶಿವರಾತ್ರಿಯ ಪ್ರಯುಕ್ತ ಶಿವನಿಗೆ ಮಹಾಪೂಜೆ ಸಲ್ಲಿಸಲಾಯಿತು.
    1
    ತೀರ್ಥಹಳ್ಳಿ: ಪಟ್ಟಣಕ್ಕೆ ಹತ್ತಿರವಿರುವ ಕುರುವಳ್ಳಿಯ ಪುತ್ತಿಗೆ ಮಠದ ಪಕ್ಕದಲ್ಲಿರುವ ಗೌರಿಶಂಕರ ದೇವಸ್ಥಾನದಲ್ಲಿ ನಿನ್ನೆ ಶಿವರಾತ್ರಿಯ ಪ್ರಯುಕ್ತ ಶಿವನಿಗೆ ಮಹಾಪೂಜೆ ಸಲ್ಲಿಸಲಾಯಿತು.
    user_ರಶ್ಮಿ ಶ್ರೀಕಾಂತ್ ನಾಯಕ್
    ರಶ್ಮಿ ಶ್ರೀಕಾಂತ್ ನಾಯಕ್
    Local News Reporter ತೀರ್ಥಹಳ್ಳಿ, ಶಿವಮೊಗ್ಗ, ಕರ್ನಾಟಕ•
    20 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.