ಬಳ್ಳಾರಿ ಘರ್ಷಣೆ: ಸಿಐಡಿಯಿಂದ ದಾಖಲೆ ಸಂಗ್ರಹ ಬಹುತೇಕ ಪೂರ್ಣ ಬಳ್ಳಾರಿ:ಹೊಸ ವರ್ಷದ ಮೊದಲ ದಿನ ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯ ಅವ್ವಂಬಾವಿಯಲ್ಲಿ ನಡೆದ ಘರ್ಷಣೆ ಪ್ರಕರಣದ ತನಿಖೆ ಹೊಣೆ ಹೊತ್ತಿರುವ ಅಪರಾಧ ತನಿಖಾ ದಳ (ಸಿಐಡಿ) ಅಧಿಕಾರಿಗಳು, ದಾಖಲೆ ಹಾಗೂ ಮಾಹಿತಿ ಸಂಗ್ರಹವನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. ಸಿಐಡಿ ಎಸ್‌ಪಿ ಹರ್ಷಾ ಪ್ರಿಯಂವಾದ, ಒಬ್ಬರು ಡಿಎಸ್‌ಪಿ, ಇಬ್ಬರು ಸಿಪಿಐಗಳು ಸೇರಿದಂತೆ ಸಿಬ್ಬಂದಿಯೊಂದಿಗೆ ಬಳ್ಳಾರಿಗೆ ಭಾನುವಾರ ಆಗಮಿಸಿರುವ ತಂಡ, ಪೊಲೀಸ್ ಇಲಾಖೆಯಿಂದ ಎಲ್ಲ ದಾಖಲೆಗಳನ್ನೂ ಕೂಲಂಕಷವಾಗಿ ಪರಿಶೀಲಿಸಿ ಸುಪರ್ದಿಗೆ ಪಡೆಯಿತು. ಸೋಮವಾರ ಸಂಜೆಯ ಹೊತ್ತಿಗೆ ದಾಖಲೆಗಳ ಹಸ್ತಾಂತರ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಮಂಗಳವಾರ ಬೆಂಗಳೂರಿಗೆ ಮರಳುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ. ಸಿರುಗುಪ್ಪ ರಸ್ತೆಯ ಜನಾರ್ದನ ರೆಡ್ಡಿ ಮನೆ ಸುತ್ತಮುತ್ತಲ ಸಿಸಿ ಟಿವಿ ಕ್ಯಾಮೆರಾಗಳ ವಿಡಿಯೊಗಳನ್ನು ತನಿಖಾ ತಂಡ ವಶಕ್ಕೆ ಪಡೆಯುತ್ತಿದೆ. ಆದರೆ, ಈ ವರೆಗೆ ಸಿಕ್ಕಿರುವುದು ಮೂರು ಕ್ಯಾಮೆರಾಗಳ ವಿಡಿಯೊಗಳು ಮಾತ್ರ. ಉಳಿದ ಮನೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇರಲಿಲ್ಲ. ಹೀಗಾಗಿ ಮಾಧ್ಯಮಗಳು, ಸ್ಥಳದಲ್ಲಿದ್ದವರು ಸಂಗ್ರಹಿಸಿದ ವಿಡಿಯೊಗಳನ್ನು ಮಾತ್ರವೇ ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಲಾಗಿದೆ. 'ಸಿಐಡಿ ಅಧಿಕಾರಿಗಳು ಪೊಲೀಸ್ ಇಲಾಖೆಯಿಂದ ಸಂಗ್ರಹಿಸಿದ ದಾಖಲೆಗಳನ್ನು ಬೆಂಗಳೂರಿಗೆ ಕೊಂಡೊಯ್ದು ಅಲ್ಲಿ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಬಳಿಕ ಯಾರನ್ನು ವಿಚಾರಣೆಗೆ ಕರೆಯಬೇಕು ಎಂಬುದರ ಪಟ್ಟಿ ಮಾಡಿಕೊಂಡು ಎಲ್ಲರನ್ನೂ ಬೆಂಗಳೂರಿಗೇ ಕರೆಸಿಕೊಂಡು ಪ್ರಶ್ನೆ ಮಾಡುತ್ತಾರೆ' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಅಗತ್ಯ ಎದುರಾದರೆ ಇಲ್ಲವೇ ಸರ್ಕಾರ ಸೂಚನೆ ನೀಡಿದರೆ ಸಿಐಡಿಗೆ ಬಳ್ಳಾರಿಯಲ್ಲೇ ಕಚೇರಿ ಮಾಡಿಕೊಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನಾ ಪನ್ನೇಕರ್ 'ಪ್ರಜಾವಾಣಿ'ಗೆ ತಿಳಿಸಿದರು. ಗನ್‌ಮ್ಯಾನ್‌ಗಳ ಪರಿಶೀಲನೆ: ಈ ಮಧ್ಯೆ, ಭರತ್ ರೆಡ್ಡಿ ಮತ್ತು ಸತೀಶ್ ರೆಡ್ಡಿ ಅವರ ಖಾಸಗಿ ಅಂಗರಕ್ಷಕರ ಬಂದೂಕು ಪರವಾನಗಿಯನ್ನೂ ಪರಿಶೀಲಿಸಲಾಗುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ಕೋರಿ ಜಮ್ಮು ಕಾಶ್ಮೀರಕ್ಕೆ ಮನವಿ ಸಲ್ಲಿಸಲಾಗಿದೆ ಎಂದೂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. 4 ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸುತ್ತಿದೆ. ಪೊಲೀಸ್ ಇಲಾಖೆಯಿಂದ ದಾಖಲೆಗಳನ್ನು ಒದಗಿಸಲಾಗಿದೆ. ತನಿಖೆ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ಇಲಾಖೆ ಬಳಿ ಇಲ್ಲ. ಉಳಿದ ಎರಡು ಪ್ರಕರಣಗಳು ಜಾತಿನಿಂದನೆಗೆ ಸಂಬಂಧಿಸಿದ್ದಾಗಿದ್ದು ಡಿಸಿಆರ್‌ಇ ತನಿಖೆ ಮಾಡುತ್ತಿದೆ. - ಸುಮನ್ ಪನ್ನೇಕರ್ ಎಸ್‌ಪಿ ಬಳ್ಳಾರಿ ಕಾಲಾಯ ತಸ್ಮೈ ನಮಃ ಬಳ್ಳಾರಿ: ಘರ್ಷಣೆ ಪ್ರಕರಣ ಮತ್ತು ತನಿಖೆಯ ಕುರಿತು ಮಾತನಾಡಿದ ಶಾಸಕ ಭರತ್ ರೆಡ್ಡಿ 'ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ. ಕಾಲಾಯ ತಸ್ಮೈ ನಮಃ' ಎಂದು ಮಾರ್ಮಿಕವಾಗಿ ನುಡಿದರು. ಬಳ್ಳಾರಿ ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿದ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. 'ತನಿಖೆ ನಡೆಯುತ್ತಿದೆ. ನಾನೂ ಕೆಲ ದಿನಗಳಿಂದ ಕ್ಷೇತ್ರದಲ್ಲಿ ಇರಲಿಲ್ಲ. ಸರ್ಕಾರ ಪ್ರಕರಣವನ್ನು ಸಿಐಡಿಗೆ ನೀಡಿದೆ. ಸತ್ಯಾಸತ್ಯತೆ ಹೊರಬರಲಿದೆ' ಎಂದು ಹೇಳಿದರು. ಗಲಭೆ ನಿಯಂತ್ರಣ ಅಣಕು ಕಸರತ್ತು ಜ.1ರಂದು ನಡೆದಿದ್ದ ಘರ್ಷಣೆ ವೇಳೆ ಪೊಲೀಸ್ ಸಿಬ್ಬಂದಿ ತೋರಿದ ಪ್ರತಿರೋಧ ತೃಪ್ತಿಕರವಾಗಿರಲಿಲ್ಲ ಎಂದು ಹೇಳಲಾಗಿದೆ. ಇದೇ ಉದ್ದೇಶಕ್ಕೆ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿಯು ತಮ್ಮ ಸಿಬ್ಬಂದಿಯಿಂದ ಸೋಮವಾರ ಗಲಭೆ ನಿಯಂತ್ರಣ ಅಣಕು ಕಸರತ್ತು ಮಾಡಿಸಿದರು. ಈ ವೇಳೆ ಮಾತನಾಡಿದ ಅವರು 'ಆಂತರಿಕ ಭದ್ರತೆ ಕಾನೂನು ಸುವ್ಯವಸ್ಥೆಗೆ ಪೊಲೀಸರೇ ಹೊಣೆಗಾರರಾಗಿರುತ್ತಾರೆ. ಆದ್ದರಿಂದಲೇ ಸಿಬ್ಬಂದಿಯಿಂದ ಅಣಕು ಪ್ರದರ್ಶನ ಮಾಡಿಸಲಾಗಿದೆ' ಎಂದರು. 'ಸಿಬ್ಬಂದಿ ಈ ಕಸರತ್ತನ್ನು ನಿಯಮಿತವಾಗಿ ಮಾಡುತ್ತಿರಬೇಕು. ತುರ್ತು ಸ್ಥಿತಿ ಯಾವಾಗ ಸೃಷ್ಟಿಯಾಗುತ್ತವೆ ಎಂಬುದನ್ನು ಹೇಳಲಾಗದು. ಅದಕ್ಕೆ ಸದಾ ಸಿದ್ಧವಾಗಿರಬೇಕು. ಕಸರತ್ತಿನಲ್ಲಿ ಇನ್ನಷ್ಟು ಪರಿಪೂರ್ಣತೆ ಬರಬೇಕು' ಎಂದು ತಿಳಿಸಿದರು. 'ಬಳ್ಳಾರಿಯಲ್ಲಿ ಶಾಂತಿ ಸ್ಥಾಪಿಸುವ ಕಾರಣಕ್ಕೆ ಭದ್ರತೆಯನ್ನು ನಿಯೋಜಿಸಲಾಗಿದೆ. ಅದನ್ನು ಹಂತ ಹಂತವಾಗಿ ಕಡಿತ ಮಾಡಲಾಗುವುದು' ಎಂದು ಇದೇ ವೇಳೆ ಹೇಳಿದರು.

- ಚಿತ್ರದುರ್ಗ ಹೊರವಲಯದ ನಗರಸಭೆ ವ್ಯಾಪ್ತಿಯ ಕವಾಡಿಗರಹಟ್ಟಿ ಬಡಾವಣೆಯಲ್ಲಿ ರಸ್ತೆ ಅಗಲೀಕರಣಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾದೀಕಾರದ ಅಧಿಕಾರಿಗಳು ಬಂದು ಜೆಸಿಬಿ ಬಳಸಿ ಕಟ್ಟಡಗಳನ್ನ ತೆರವು ಮಾಡುತ್ತಿದ್ದು ಇದರಿಂದಾಗಿ ರೊಚ್ಚಿಗೆದ್ದ ಬಡಾವಣೆಯ ನಿವಾಸಿಗಳು ಆಕ್ರೋಷವನ್ನ ಹೊರ ಹಾಕಿದ್ದು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ.1
- ಗ್ರಾಮಕ್ಕೆ ಯಾರು ಬಾರದಂತೆ ಕಳ್ಳೆ ಮುಳ್ಳು ಬೇಲಿ ಹಾಕಿ ದಿಗ್ಭಂಧನ... ಕಾವಲುಗಾರರ ನೇಮಕ. ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ನಗಂಗೆರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದಲ್ಲಿ ಈ ವಿಶಿಷ್ಟ ಆಚರಣೆ ಮಾಡಲಾಗಿತ್ತಿದೆ.. ಈ ಗ್ರಾಮದ ಜನರು ಐದು ವರ್ಷಕ್ಕೊಮ್ಮೆ ಗ್ರಾಮ ದೇವತೆ ಶೂನ್ಯದ ಮಾರಮ್ಮ ಜಾತ್ರೆ ಮಾಡುತ್ತಿದ್ದಾರೆ. ಜನವರಿ 12ರಿಂದ 17ರವರೆಗೆ ಬುಡಕಟ್ಟು ಸಂಸ್ಕೃತಿಯ ಉತ್ಸವ ನಡೆಯಲಿದೆ. ಅದಕ್ಕೂ ಮುನ್ನ ಮೂರು ದಿನಗಳ ಕಾಲ ಗ್ರಾಮದ ಪ್ರತಿ ದಿಕ್ಕಿನ ಮಾರ್ಗಗಳಿಗೂ ಕಳ್ಳೆ ಮುಳ್ಳು ಬೇಲಿ ಹಾಕಿ ಗ್ರಾಮಕ್ಕೆ ಬೇರೆ ಯಾರು ಬಾರದಂತೆ ದಿಗ್ಭಂಧನ ಹಾಕುತ್ತಾರೆ. ಜನವರಿ 12ರವರೆಗೆ ಮಾರ್ಗಗಳು ಬಂದ್ ಆಗಿರುತ್ತವೆ. ಗ್ರಾಮದಿಂದ ಯಾವುದೇ ವಸ್ತುಗಳನ್ನು ಹೊರಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ವಾಹನಗಳು ಸಂಚರಿಸುವಂತಿಲ್ಲ ಎಂಬ ನಿಯಮಗಳಿವೆ. ಉತ್ಸವದ ಸಂದರ್ಭದಲ್ಲಿ ಆರೋಗ್ಯ, ಶಾಂತಿ, ಸುವ್ಯವಸ್ಥೆ ಮತ್ತು ದೈವ ಭಾವನೆ, ನೆಮ್ಮದಿಗಾಗಿ ಈ ಆಚರಣೆ ಜಾರಿಯಲ್ಲಿದೆ ಯಾರೂ ಹೊರಗೆ, ಒಳಗೆ ಬರುವಂತ್ತಿಲ್ಲ ನಗರಂಗೆರೆ ಗ್ರಾಮದ ಶೂನ್ಯದ ಮಾರಮ್ಮ ಉತ್ಸವವನ್ನು ಐದು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಈ ವಿಶಿಷ್ಟ ಆಚರಣೆ ನೂರಾರು ವರ್ಷಗಳಿಂದ ಪೂರ್ವಿಕರು ಆಚರಿಸಿಕೊಂಡು ಬಂದಿದ್ದಾರೆ. ಪ್ರತಿ ರಸ್ತೆಗೆ ಸಾರು (ಮುಳ್ಳು ಬೇಲಿ) ಹಾಕಿ ಸರದಿ ಪ್ರಕಾರ ಕಾವಲುಗಾರರು ಇರುತ್ತಾರೆ. ಊರಿನಿಂದ ಯಾವುದೇ ವಸ್ತು ಹೊರಗೆ ಹೋಗುವಂತಿಲ್ಲ. ಹೊರಗಿನವರು ಊರೊಳಕ್ಕೆ ಬರುವಂತಿಲ್ಲ. ಪ್ರತಿಯೊಬ್ಬರನ್ನು ಸಹ ಚೆಕ್ ಮಾಡಿ ಬಿಡಲಾಗುತ್ತದೆ. ಜ.13ರಂದು ನಾಳೆ ಮಂಗಳವಾರ ಮಾರಮ್ಮ ದೇವಿಯ ಪ್ರತಿಷ್ಠಾಪನೆ ಬಳಿಕ ಭಕ್ತರು ಬಂದು ದರ್ಶನ ಪಡಯಬಹುದಾಗಿದೆ. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ನಗರಂಗೆರೆ ಗ್ರಾಮದಲ್ಲಿ ಕಾಲಾನುಕಾಲದಿಂದ ಐದು ವರ್ಷಕ್ಕೊಮ್ಮೆ ದೇವಿಯ ಉತ್ಸವ ನಡೆದುಕೊಂಡು ಬಂದಿದೆ. ಅಲ್ಲದೆ ಇಡೀ ಊರಿಗೆ ಮುಳ್ಳು ಬೇಲಿ ಹಾಕುವ ವಿಶಿಷ್ಟ ಆಚರಣೆಯನ್ನೂ ಆಚರಿಸಲಾಗುತ್ತಿದೆ. ಆ ಮೂಲಕ ಈ ವಿಶಿಷ್ಟ ಮಾರಿಕಾಂಬ ದೇವಿಯ ಉತ್ಸವ ನಾಡಿನ ಗಮನ ಸೆಳೆದಿದೆ... ಸುರೇಶಬೆಳಗೆರೆ1
- ಸ್ವಚ್ಛ ಭಾರತ ಮಿಷನ್ ಹಾಗೂ ರಾಯಚೂರು ಉತ್ಸವ–2026ರ ಅಂಗವಾಗಿ ರಾಯಚೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಇಂದು ನಗರದಾದ್ಯಂತ ಭವ್ಯವಾದ ಸ್ವಚ್ಛತಾ ಓಟ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಸಂಸದ ಜಿ.ಕುಮಾರ್ ನಾಯಕ್ ಅವರು ನೇತೃತ್ವವಹಿಸಿ ಸ್ವಚ್ಛತಾ ಓಟಕ್ಕೆ ಅಧಿಕೃತ ಚಾಲನೆ ನೀಡಿದರು. ಸ್ವಚ್ಛತಾ ಓಟದ ಅಂಗವಾಗಿ ಮಾತನಾಡಿದ ಸಂಸದರು, ಯುವಜನತೆಗೆ ಸ್ವಾಮಿ ವಿವೇಕಾನಂದರ ಆದರ್ಶಗಳು, ಸದೃಢ ದೇಹ–ಮನಸ್ಸಿನ ಮಹತ್ವ ಹಾಗೂ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣದ ಅಗತ್ಯತೆಯನ್ನು ನೆನಪಿಸಿದರು.1
- ಖಳ ನಟ ವಜ್ರಮುನಿ ಜೀವನ ಚರಿತ್ರೆ ಬಣ್ಣ ಮಾಸದ ಮೇಲೆ ಎಪಿಸೋಡ್-1 #onlinetv24x7 #ವಜ್ರಮುನಿ #ಕನ್ನಡಚಿತ್ರರಂಗ #ಖಳನಟವಜ್ರಮುನಿ #ರಂಗಭೂಮಿಕಲಾವಿದರು1
- ಯಾದಗಿರಿ ಜಿಲ್ಲೆಯಲ್ಲಿ ಇಂದು ಪತ್ರಿಕ ಭವನದಲ್ಲಿ ಮಾತನಾಡುತ್ತಾ ನರೇಂದ್ರ ಮೋದಿಯವರು ಎಂ ನರೇಗಾ ಯೋಜನೆ ಹೆಸರು ತೆಗೆದು ಅದಕ್ಕೆ ಜಿ ರಾಮ್ ಜಿ ಎಂದು ಕೇಂದ್ರ ಸರ್ಕಾರದಿಂದ ಈ ಹೆಸರನ್ನು ಇಡಲಾಗಿದೆ1
- ಇತಿಹಾಸ ಸೃಷ್ಟಿಸಿದ ಶೌರ್ಯಗಾಥೆಯ ಸ್ಮರಣಾರ್ಥವಾಗಿ… ಭೀಮ ಕೋರೆಗಾವ್ ವಿಜಯೋತ್ಸವವನ್ನು ಇಂದು ಬಾಗಲಕೋಟೆ ನಗರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.1
- ಬಾಗಲಕೋಟೆ: ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಹಲವು ನಾಟಕ ಕಂಪನಿಗಳು ಬಂದಿವೆ. ಎಲ್ಲ ನಾಟಕಗಳನ್ನು ವೀಕ್ಷಿಸಿ ಕಲಾವಿದರಿಗೆ ಪ್ರೋತ್ಸಾಹಿಸಿ ಎಂದು ನಯನಾ ಮನವಿ ಮಾಡಿದ್ದಾರೆ1
- ಚರಂಡಿ ಸ್ವಚ್ಛಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಇದಕ್ಕೆ ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯಕ್ಕೆ ಬೇಸತ್ತು ತಾಲ್ಲೂಕಿನ ಕುಪ್ಪಿಗುಡ್ಡ ಗ್ರಾಮದ ವೃದ್ಧ ತಾನೇ ಚರಂಡಿ ಸ್ವಚ್ಛತೆಗೆ ಮುಂದಾಗಿದ್ದಾರೆ. ಕುಪ್ಪಿಗುಡ್ಡ ಗ್ರಾಮದಲ್ಲಿ ಚರಂಡಿಗಳು ತುಂಬಿ ರಸ್ತೆಗೆ ಹರಿಯುತ್ತಿದ್ದರೂ ಚರಂಡಿ ಸ್ವಚ್ಛತೆಗೆ ಗ್ರಾಮಸ್ಥರು ಹಲವಾರು ಭಾರಿ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಪಿಡಿಒ ಗಮನಕ್ಕೆ ತಂದರೂ ಜನರ ಸಮಸ್ಯೆಗೆ ಸ್ಪಂದಿಸದೇ ನಿರ್ಲಕ್ಷ್ಯ ಮಾಡುತ್ತಿದ್ದರಿಂದ ಕೊನೆಗೆ ತಾವೇ ಸ್ವಚ್ಛತೆಗೆ ಮುಂದಾಗುತ್ತಿರುವುದು ಗ್ರಾಮದಲ್ಲಿ ಕಂಡುಬಂದಿದೆ. ಗ್ರಾಮದ 80 ವರ್ಷದ ಹೊನ್ನಪ್ಪ ಚಲುವಾದಿ ವೃದ್ಧ ತನ್ನ ಮನೆಯ ಮುಂದಿನ ಚರಂಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.1