ಬಿಸಿಲ ಝಳ-ಜನ ಹೈರಾಣು ತಂಪು ನೀರಿನ ಅರವಟ್ಟಿಗೆ ವ್ಯವಸ್ಥೆ ಮಾಡಿದ ಗೆಳೆಯರ ಬಳಗೆ ಚಿತ್ರದುರ್ಗ, ಬಿಸಿಲ ಝಳ-ಜನರಿಗೆ ತಂಪು ನೀರಿನ ವ್ಯವಸ್ಥೆ ಚಿತ್ರದುರ್ಗ ಜಿಲ್ಲೆ,ಮೊಳಕಾಲ್ಮೂರಲ್ಲಿ ಬಿಸಿಲಿನ ತಾಪಕ್ಕೆ ಜನ ಹೈರಾಣಾಗಿದ್ದು, ಜನರ ತಾಪ ತಣ್ಣಗಾಗಿಸಲು ಹಾನಗಲ್ ಗೆಳೆಯರ ಬಳಗದಿಂದ ಶುದ್ಧ ಹಾಗೂ ತಂಪು ನಿರಿನ ಅರವಟ್ಟಿಗೆ ನಿರ್ಮಿಸಿ ವಿನೂತನ ಪ್ರಯತ್ನ ಮಾಡಿದ್ದಾರೆ. ಮೊಳಕಾಲ್ಮೂರು ತಾಲೂಕಿನ ಹಾನಗಲ್ ಕ್ರಾಸ್ ನಲ್ಲಿ ಜನರ ತೃಷೆ ಇಂಗಿಸಲು ಹಾನಗಲ್ ಗೆಳೆಯರ ಬಳಗದಿಂದ ಅರಟಿಕೆ ನಿರ್ಮಾಣ ಮಾಡಿದ್ದಾರೆ. ತೆಂಗಿನ ಗರಿಗಳಿಂದ ಚಪ್ಪರ ಹಾಕಿ, ಮಣ್ಣಿನ ಮಡಿಕೆಗಳಲ್ಲಿ ತಂಪಾದ ಶುದ್ಧ ಕುಡಿಯುವ ನಿರನ್ನು ಇಟ್ಟಿದ್ದಾರೆ. ಮೊಳಕಾಲ್ಮೂರು ತಾಲೂಕು ಮೊದಲೇ ಹೆಚ್ವು ಬಿಸಿಲು ದಾಖಲಾಗೋದ್ರಿಂದ ಜನರ ಬಾಯಾರಿಕೆ ನೋಗಿಸಲು ಪ್ರತಿನಿತ್ಯ ಈ ಮಡಕೆಗಳಿಗೆ ಶುದ್ಧ ಕುಡಿಯುವ ನೀರನ್ನು ತುಂಬಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಇದರಿಂದ ತುಂಬಾ ಸಹಾಯವಾಗಿದೆ. ಹಾನಗಲ್ ಗೆಳೆಯರ ಬಳಗದ ಈ ಪ್ರಯತ್ನಕ್ಕೆ ಸಾರ್ವಜನಿಕರು ಭೇಷ್ ಎಂದಿದ್ದಾರೆ....
ಬಿಸಿಲ ಝಳ-ಜನ ಹೈರಾಣು ತಂಪು ನೀರಿನ ಅರವಟ್ಟಿಗೆ ವ್ಯವಸ್ಥೆ ಮಾಡಿದ ಗೆಳೆಯರ ಬಳಗೆ ಚಿತ್ರದುರ್ಗ, ಬಿಸಿಲ ಝಳ-ಜನರಿಗೆ ತಂಪು ನೀರಿನ ವ್ಯವಸ್ಥೆ ಚಿತ್ರದುರ್ಗ ಜಿಲ್ಲೆ,ಮೊಳಕಾಲ್ಮೂರಲ್ಲಿ ಬಿಸಿಲಿನ ತಾಪಕ್ಕೆ ಜನ ಹೈರಾಣಾಗಿದ್ದು, ಜನರ ತಾಪ ತಣ್ಣಗಾಗಿಸಲು ಹಾನಗಲ್ ಗೆಳೆಯರ ಬಳಗದಿಂದ ಶುದ್ಧ ಹಾಗೂ ತಂಪು ನಿರಿನ ಅರವಟ್ಟಿಗೆ ನಿರ್ಮಿಸಿ ವಿನೂತನ ಪ್ರಯತ್ನ ಮಾಡಿದ್ದಾರೆ. ಮೊಳಕಾಲ್ಮೂರು ತಾಲೂಕಿನ ಹಾನಗಲ್ ಕ್ರಾಸ್ ನಲ್ಲಿ ಜನರ ತೃಷೆ ಇಂಗಿಸಲು ಹಾನಗಲ್ ಗೆಳೆಯರ ಬಳಗದಿಂದ ಅರಟಿಕೆ ನಿರ್ಮಾಣ ಮಾಡಿದ್ದಾರೆ. ತೆಂಗಿನ ಗರಿಗಳಿಂದ ಚಪ್ಪರ ಹಾಕಿ, ಮಣ್ಣಿನ ಮಡಿಕೆಗಳಲ್ಲಿ ತಂಪಾದ ಶುದ್ಧ ಕುಡಿಯುವ ನಿರನ್ನು ಇಟ್ಟಿದ್ದಾರೆ. ಮೊಳಕಾಲ್ಮೂರು ತಾಲೂಕು ಮೊದಲೇ ಹೆಚ್ವು ಬಿಸಿಲು ದಾಖಲಾಗೋದ್ರಿಂದ ಜನರ ಬಾಯಾರಿಕೆ ನೋಗಿಸಲು ಪ್ರತಿನಿತ್ಯ ಈ ಮಡಕೆಗಳಿಗೆ ಶುದ್ಧ ಕುಡಿಯುವ ನೀರನ್ನು ತುಂಬಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಇದರಿಂದ ತುಂಬಾ ಸಹಾಯವಾಗಿದೆ. ಹಾನಗಲ್ ಗೆಳೆಯರ ಬಳಗದ ಈ ಪ್ರಯತ್ನಕ್ಕೆ ಸಾರ್ವಜನಿಕರು ಭೇಷ್ ಎಂದಿದ್ದಾರೆ....
- Post by Suresh Belagere1
- ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೊಗೇರಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು ಬೆಳಗ್ಗೆ ಗಂಗೆ ಹೋಗುವುದರಿಂದ ಪ್ರಾರಂಭವಾಯಿತು ಮಧ್ಯಾಹ್ನ ಮುಳ್ಳು ಪವಾಡ ಸಾಯಂಕಾಲ ಅಗ್ನಿ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು1
- ಶಾಸಕರ ದೆಹಲಿ ಭೇಟಿ ಅವರ ಹಕ್ಕು - ಸಚಿವ ಎಚ್.ಕೆ. ಪಾಟೀಲ್ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಶಾಸಕರ ದೆಹಲಿ ಭೇಟಿ ಈಗ ಭಾರಿ ಚರ್ಚೆಗೆ ಪ್ರತಿಕ್ರಿಯಿಸಿರುವ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು, ಶಾಸಕರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. "ದೆಹಲಿಗೆ ಹೋಗುವುದು ಅವರ ಹಕ್ಕು" ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ. ದೆಹಲಿಗೆ ಹೋಗುವುದು ಮತ್ತು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಪ್ರಜಾಪ್ರಭುತ್ವದಲ್ಲಿ ಶಾಸಕರಿಗಿರುವ ಮುಕ್ತ ಅವಕಾಶ. ಅಸಮಾಧಾನದ ಪ್ರಶ್ನೆಯಿಲ್ಲ: ಈ ಭೇಟಿಯನ್ನು ಕೇವಲ ಅಸಮಾಧಾನ ಅಥವಾ ಬಂಡಾಯ ಎಂದು ಬಿಂಬಿಸುವುದು ತಪ್ಪು. ಕ್ಷೇತ್ರದ ಅಭಿವೃದ್ಧಿ ಅಥವಾ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿರುತ್ತಾರೆ. ಗದಗ ಜಿಲ್ಲಾ ಪ್ರವಾಸದಲ್ಲಿರುವ ಸಚಿವ ಎಚ್.ಕೆ. ಪಾಟೀಲ್ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದ ಹಲವು ಕಾಂಗ್ರೆಸ್ ಶಾಸಕರು ತಂಡೋಪತಂಡವಾಗಿ ದೆಹಲಿಗೆ ತೆರಳುತ್ತಿರುವ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಸ್ಪಷ್ಟನೆ ನೀಡಿದರು.1
- Post by Onlinetv24x71
- ಅರಕಲಗೂಡಿನಲ್ಲಿ ನಡೆದ ಈ ಘಟನೆ ನಿಜಕ್ಕೂ ಆತಂಕಕಾರಿ. ಅದೃಷ್ಟವಶಾತ್ ಟ್ರ್ಯಾಕ್ಟರ್ ನಿಧಾನವಾಗಿ ಚಲಿಸುತ್ತಿದ್ದರಿಂದ ಮತ್ತು ಸಮಯಪ್ರಜ್ಞೆ ಮೆರೆದ ಸಾರ್ವಜನಿಕರಿಂದ ದೊಡ್ಡ ಅನಾಹುತ ತಪ್ಪಿದೆ. ಅರಕಲಗೂಡು : ಪಟ್ಟಣದಿಂದ ರಾಮನಾಥಪುರ ಕಡೆಗೆ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ ವ್ಯಕ್ತಿಯೋರ್ವ ಹಠಾತ್ತನೆ ಮೂರ್ಚೆಹೋದ ಪ್ರಕರಣ ನಡೆದಿದೆ. ಬುಧವಾರ ಮಧ್ಯಾಹ್ನ 12-15ರ ವೇಳೆ ಪಟ್ಟಣದ ಖಾಸಗಿ ಅಂಗಡಿಯೊಂದರಲ್ಲಿ ಪಶು ಆಹಾರದ ಚೀಲಗಳನ್ನು ಟ್ರ್ಯಾಕ್ಟರ್ ನಲ್ಲಿ ತುಂಬಿಸಿಕೊಂಡು ಶಿರಂಗಾಲ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಚಾಲನೆ ಮಾಡುವ ವೇಳೆಯೇ ಮೂರ್ಚೆ ಹೋಗಿದ್ದಾನೆ.ಈ ವೇಳೆ ವಾಹನದ ಚಾಲನೆ ಮುಂದೆ ಸಾಗುತ್ತಿತ್ತು.ಪಟ್ಟಣದ ಚನ್ನಬಸವೇಶ್ವರ ಸಮುದಾಯದ ಸರ್ಕಲ್‌ನಲ್ಲಿ ಗಾಡಿಯನ್ನು ರಾಮನಾಥಪುರ ಮಾರ್ಗಕ್ಕೆ ತಿರುಗಿಸಿದ್ದಾನೆ.ಈ ಭಾಗ ಸ್ವಲ್ಪಮಟ್ಟಿದೆ ದಿಬ್ಬದಿಂದ ಕೂಡಿರುವ ಪರಿಣಾಮ ನಿಧಾನವಾಗಿ ಟ್ರ್ಯಾಕ್ಟರ್ ಚಲಿಸುತ್ತಿದೆ.ಆದರೆ ಚಾಲಕ ಮಾತ್ರ ಸೀಟ್‌ಗೆ ಒರೆಗಿಕೊಂಡು ಪ್ರಜ್ಞಾ ಹೀನ ಸ್ಥಿತಿಯಲ್ಲಿ ತಲೆ ಹೊರಭಾಗಕ್ಕೆ ಭಾಗಿರುವುದು ಕಂಡುಬಂದೆ.ಕೂಡಲೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ನಿಧಾನಗತಿಯಲ್ಲಿ ಚಲಿಸುತ್ತಿದ್ದ ಟ್ರ್ಯಾಕ್ಟರ್‌ನ್ನು ತಡೆದು ಮುಂದೆ ಸಂಭವಿಸಬಹುದಾಗಿದ್ದ ಅಪಘಾತ,ಪ್ರಾಣ ಹಾನಿಯನ್ನು ತಪ್ಪಿಸಿದ್ದಾರೆ. ಒಬ್ಬ ವ್ಯಕ್ತಿ ಚಾಲನೆ ಮಾಡುವಾಗ ಈ ರೀತಿ ಮೂರ್ಛೆ ಹೋಗಲು ಅಥವಾ ಪ್ರಜ್ಞೆ ತಪ್ಪಲು ಹಲವು ಕಾರಣಗಳಿರಬಹುದು: ತೀವ್ರ ಬಿಸಿಲು ಮತ್ತು ನಿರ್ಜಲೀಕರಣ: ಬೇಸಿಗೆಯ ತಾಪಮಾನ ಹೆಚ್ಚಾಗಿರುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗಿ (Dehydration) ತಲೆಸುತ್ತು ಬರಬಹುದು. ರಕ್ತದೊತ್ತಡದ ಏರುಪೇರು: ಲೋ ಬಿಪಿ ಅಥವಾ ಸಕ್ಕರೆ ಅಂಶ ಕಡಿಮೆಯಾಗುವುದು (Hypoglycemia) ಕೂಡ ಹಠಾತ್ ಪ್ರಜ್ಞೆ ತಪ್ಪಲು ಕಾರಣವಾಗುತ್ತದೆ. ಅಪಸ್ಮಾರ (Epilepsy): ವ್ಯಕ್ತಿಗೆ ಮೊದಲೇ ಫಿಟ್ಸ್ ಅಥವಾ ಅಪಸ್ಮಾರದ ಸಮಸ್ಯೆ ಇದ್ದರೆ ಈ ರೀತಿ ಸಂಭವಿಸುವ ಸಾಧ್ಯತೆ ಇರುತ್ತದೆ. ಅತಿಯಾದ ಆಯಾಸ: ಸರಿಯಾದ ವಿಶ್ರಾಂತಿ ಇಲ್ಲದೆ ದೀರ್ಘಕಾಲ ಕೆಲಸ ಮಾಡುವುದು ಸಹ ಮೆದುಳಿನ ಮೇಲೆ ಪರಿಣಾಮ ಬೀರಬಹುದು. #ArkalgudNews #tractorlife #news5kannada #NewsUpdate1
- ನೆಲಮಂಗಲ ನಾಪತ್ತೆಯಾಗಿದ್ದ ಮಹಿಳೆ ಅಸ್ಥಿಪಂಜರವಾಗಿ ಪತ್ತೆ! ಅನೈತಿಕ ಸಂಬಂಧ ಹಿನ್ನೆಲೆ ಮಹಿಳೆಯ ಕೊಲೆ ಶಂಕೆ ದಾಬಸ್ ಪೇಟೆ ಹಳೆನಿಜಗಲ್ ಬಳಿಯ ಜಮೀನಿನಲ್ಲಿ ಅಸ್ತಿಪಂಜರ ಪತ್ತೆ 38 ವರ್ಷದ ಯಮುನಾ ಕೊಲೆಯಾದ ಮಹಿಳೆ ರಾಘವೇಂದ್ರ ಎಂಬುವನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ 19 ವರ್ಷಗಳ ಹಿಂದೆ ಮಲ್ಲಿಕಾರ್ಜುನ ಜೊತೆ ಮದುವೆ ದಂಪತಿಗಳಿಗೆ ಒಂದು ಗಂಡು, ಒಂದು ಹೆಣ್ಣು ಮಗು ನಂದಿಹಳ್ಳಿ ರಿಲಯನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯಮುನಾ ಮಾರ್ಚ್ 21 ರಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಮಹಿಳೆ ಪತ್ನಿಯನ್ನು ಹುಡುಕಿ ಕೊಡುವಂತೆ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದ ಪತಿ ಜಮೀನಿನಲ್ಲಿ ತಲೆಬುರುಡೆ ಹಾಗೂ ಮಹಿಳೆಯ ಬ್ಯಾಗ್ ಪತ್ತೆ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ದಾಬಸ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ.3
- ಬಾರಿ ಮಳೆಗೆ ಕೆ ಎಸ್ ಆರ್ ಟಿ ಸಿ ಬಸ್ ಸೋರಿ ಪ್ರಯಾಣಿಕರು ಹೈರಾಣಾಗಿದ್ದಾರೆ. ಇನ್ನೂ ಚಿತ್ರದುರ್ಗ ತಾಲ್ಲೂಕಿನ ಸೀಭಾರ ಬಳಿ ಘಟನೆ ನಡೆದಿದ್ದು ಕೆ ಎಸ್ ಆರ್ ಟಿ ಸಿ ಬಸ್ ನ ಬಂಡವಾಳ ಮತ್ತೊಮ್ಮೆ ಬಯಲಾಗಿದೆ. ಇನ್ನೂ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಇದಾಗಿದ್ದು ಚಿತ್ರದುರ್ಗ ತಾಲ್ಲೂಕಿನ ಸೀಭಾರ ಬಳಿ ಬಾರಿ ಮಳೆಗೆ ಬಸ್ ಸೋರುತ್ತಿದ್ದು ಪ್ರಯಾಣಿಕರ ಮೊಬೈಲ್ ನಲ್ಲಿ ದೃಶ್ಯ ಸೆರೆಯಾಗಿದ್ದು ಕೆ ಎಸ್ ಆರ್ ಟಿ ಸಿ ಬಸ್ ನ ಅವಾಂರತಕ್ಕೆ ಪ್ರಯಾಣಿಕರು ಹೈರಾಣಾದ್ದಾರೆ.1
- Post by Suresh Belagere1
- Post by Venu Gopal1