ವೈದ್ಯರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಚಂದ್ರಪ್ಪ ಲೋಕಯುಕ್ತ ಬಲೆಗೆ..! ಲಂಚದ ಭೂತ ಅಧಿಕಾರಿಗಳ ಬೆನ್ನಟ್ಟಿ ಬಹಳಷ್ಟು ವರ್ಷಗಳೇ ಕಳೆದು ಹೋಗಿದೆ. ಅದರೆ ಇತ್ತೀಚಿನ ದಿನಗಳಲ್ಲಿ ಜನ ಕೂಡ ಧೈರ್ಯವಂತರಾಗಿದ್ದಾರೆ. ಲಂಚ ಕೇಳಿದ ಅಧಿಕಾರಿಗಳನ್ನ ಲೋಕಾಯುಕ್ತ ಅಧಿಕಾರಿಗಳ ಎದುರು ಸಿಕ್ಕಿ ಹಾಕುತ್ತಿದ್ದಾರೆ. ಇದೀಗ ದಾವಣಗೆರೆಯಲ್ಲೂ ಅಂತದ್ದೇ ಘಟನೆ ನಡೆದಿದೆ. ಭೂಮಿ ಸರ್ವೆ ಕಾರ್ಯಕ್ಕೆ ಸಂಬಂಧಿಸಿದಂತೆ ವೈದ್ಯರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಚಂದ್ರಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ದಾವಣಗೆರೆ ಜಿಲ್ಲೆಯ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಪ್ಪ ಅವರು, ಭೂಮಿಯ ಸರ್ವೆ ಕೆಲಸ ಮಾಡಿಕೊಡಲು ವೈದ್ಯರೊಬ್ಬರಿಂದ 50,000 ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಲಂಚ ನೀಡಲು ಇಚ್ಛಿಸದ ವೈದ್ಯರು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಇಂದು ವೈದ್ಯರಿಂದ 50 ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಚಂದ್ರಪ್ಪ ಅವರನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಎಂ ಎಸ್ ಕೌಲಾಪುರ ಅವರ ನೇತೃತ್ವದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ಸದ್ಯ ಆರೋಪಿ ಚಂದ್ರಪ್ಪ ಅವರನ್ನು ಬಂಧಿಸಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು, ನೌಕರರು ಲಂಚಕ್ಕೆ ಬೇಡಿಕೆಯಿಟ್ಟರೆ ತಕ್ಷಣ ಲೋಕಾಯುಕ್ತಕ್ಕೆ ದೂರು ನೀಡುವ ಮೂಲಕ ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ಸಹಕರಿಸಿ. ಸದ್ಯ ಅಧಿಕಾರಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

- ಪ್ರಕೃತಿಯಲ್ಲಿ ವಿಸ್ಮಯ ಒಂದೆ ಬುಡ ಎರಡು ಮರ. ಒಂದೆ ಜಾತಿಯ ಎರಡು ಮರಗಳು ಜತೆಯಾಗಿ ಬೆಳೆದಿರುವಂತಹ ಉದಾಹಾರಣೆಗಳಿವ ಮರಗಳ ಕೊಂಬೆಗಳು ಒಂದಕ್ಕೊಂದು ಹತ್ತಿರವಾಗಿ ಬೆಳೆದು, ಒಂದಾಗಿ ಜೋಡಣೆಯಾಗುತ್ತವೆ ಇದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಒಂದೇ ಬುಡದಲ್ಲಿ ಎರಡು ವಿಭಿನ್ನ ಪ್ರಕಾರದ ಆಳದ ಮರ ಮತ್ತು ತಾಳೆ ಮರ ಬೆಳೆದಿದ್ದು. ಇದು ಪ್ರಕೃತಿಯ ಸೌಂದರ್ಯ ಮತ್ತು ಜೀವಿಗಳ ನಡುವಿನ ಸಾಮರಸ್ಯವನ್ನು ಎತ್ತಿ ತೋರಿಸುತ್ತದೆ... ಹೀಗೆ ತಾಳೆಮರಕ್ಕೆ ಸುತ್ತಿಕೊಂಡು ಆಲದ ಮರ ಬೆಳೆದಿರುವಂತಹ ದೃಶ್ಯವನ್ನು ಚಳ್ಳಕೆರೆ ತಾಲೂಕಿನ ಕಸ್ತೂರಿ ತಿಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯಾ ಪ್ರಾಥಮಿಕ ಶಾಲೆಯಲ್ಲಿ ಕಾಣಬಹುದಾಗಿದೆ.. ಶಾಲೆಯ ಆವರಣದಲ್ಲಿನ ಆಲದ ಮರ ಹಾಗೂ ತಾಳೆ ಮರ ಒಂದೇ ಬುಡ ಎರಡು ಮರ ಎನ್ನುವಂತೆ ಬೆಳದಿದ್ದು ಎರಡು ಮರಗಳು ಒಂದಕ್ಕೊಂದು ಅಂಟಿಕೊಂಡು ಪ್ರಕೃತಿಯಲ್ಲಿನ ವಿಸ್ಮಯವನ್ನು ತೋರಿಸುತ್ತಿವೆ .. ಹುಟ್ಟಿದ ಅಣ್ಣ ತಮ್ಮಂದಿರರೇ ದಯಾದಿಗಳಾಗುವಂತಹ ಕಾಲದಲ್ಲಿ ತಾಳೆಮರಕ್ಕೆ ಆಲದ ಮರ ಆಸರೆ ಆಲದ ಮರಕ್ಕೆ ತಾಳೆಮರೆ ಆಸರೆ ಎನ್ನುವಂತೆ ಗೋಚರಿಸುತ್ತಿದೆ..1
- ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ಕ್ಷೇತ್ರದ ಕ್ರೈಸ್ತಭಾಂಧವರಿಂದ ಇಂದು ನಗರದ ಡಾ:ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರನ್ ಫಾರ್ ಜೀಸಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರು ರೈಟ್ ರೆವೆರೆಂಡ್ ಡಾ: ಜೋಸೆಫ್ ಅರಮಚ್ಚಾದತ್ ರವರು ವಿದ್ಯುಕ್ತ ವಾಗಿ ಚಾಲನೆ ನೀಡಿ ಮಾತನಾಡಿ, ಯೇಸು ಕ್ರಿಸ್ತನ ಮಾನವ ಕುಲಕ್ಕೆ ಮಾಡಿದ ತ್ಯಾಗದ ಬಲಿದಾನವನ್ನು ಸ್ಮರಿಸಿದರು. ರನ್ ಫಾರ್ ಜೀಸಸ್ ಮೆರವಣಿಗೆ ಯಲ್ಲಿ ಯೇಸುಕ್ರಿಸ್ತನ ತ್ಯಾಗ, ಬಲಿದಾನ ಜೀವನ ಚರಿತ್ರೆಯನ್ನು ನಾಟಕದ ಮೂಲಕ ಪ್ರದರ್ಶಿಸ ಲಾಯಿತು. ಕಾರ್ಯಕ್ರಮಕ್ಕೂ ಸಂವಿಧಾನ ಶಿಲ್ಪಿ ಡಾ: ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.ಮೆರವಣಿಗೆ ಯಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್ ನೇತೃತ್ವದಲ್ಲಿ ನಡೆಯಿತು. ನಗರಸಭಾ ಸದಸ್ಯ ಜಾರ್ಜ್, ವಿಲ್ಸನ್ ಬಾಬು, ಸೂಡ ಸದಸ್ಯ ಫ್ರಾನ್ಸಿಸ್, ಆಶ್ರಯ ಸಮಿತಿ ಸದಸ್ಯ ವೆಂಕಟೇಶ್ ಇಮಾನು ವೇಲ್, ಎಂ.ಜಿ ರಾಮಚಂದ್ರ, ಮೋಸಸ್ ರೋಷಯ್ಯ, ಪಾಸ್ಟರ್ ಗಳಾದ ರೇಮಂಡ್, ಅಂತೋಣಿ ಪ್ರಕಾಶ್ ಸೇರಿದಂತೆ ಸಾವಿರಾರು ಕ್ರೈಸ್ತ ಭಕ್ತರು ಭಾಗವಹಿಸಿದ್ದರು. ಮೆರವಣಿಗೆ ಹಾಲಪ್ಪ ಸರ್ಕಲ್, ಮಾಧವ ಚಾರ್ ಸರ್ಕಲ್, ರಂಗಪ್ಪ ಸರ್ಕಲ್, ಮೂಲಕ ಕನಕ ಮಂಟಪ ಮೈದಾನದಲ್ಲಿ ಮುಕ್ತಾಯ ಗೊಂಡಿತು. ಮಧ್ಯಪ್ರಾಕ್ಷದ ಯುದ್ಧಗಳು ನಿಲ್ಲುವಂತೆ ಎಲ್ಲಾ ವೃತಗಳಲ್ಲಿ ಸಮಾಧಾನಕ್ಕಾಗಿ ಪಾಸ್ಟರ್ ಗಳಿಂದ ಪ್ರಾರ್ಥಿಸಲಾಯಿತು.1
- 👉 AEE ವೀರೇಶ್ ಮೇಲೆ ದಾಳಿ ಆರೋಪ 💥 📍 “ಸಲಾಂ ಬಳ್ಳಾರಿ” ಕಾರ್ಯಕ್ರಮದ ವೇಳೆ 👉 ಮಾತಿನ ಚಕಮಕಿ 🔥 👉 ನಂತರ ಹಲ್ಲೆ ನಡೆದಿದೆಯಂತೆ 😮 🗣️ ಶಾಸಕ ನಾರಾ ಭರತ್ ರೆಡ್ಡಿ: 👉 “ಅಧಿಕಾರಿಗಳ ಮೇಲೆ ಹಲ್ಲೆ ತಪ್ಪು” 👉 “ಪೂರ್ಣ ಮಾಹಿತಿ ಪಡೆದು ನ್ಯಾಯ ಕೊಡುತ್ತೇವೆ” ⚖️ 🗣️ ನೌಕರರ ಸಂಘ ಅಧ್ಯಕ್ಷ ಗೋವಿಂದ ಬಾಬು: 👉 “ಇದು ದುರ್ಘಟನೆ ಸಂಗತಿ” 👉 “ಅಧಿಕಾರಿಗಳಿಗೆ ಭದ್ರತೆ ಅಗತ್ಯ” ಅಧಿಕಾರಿಗಳ ಸುರಕ್ಷತೆ ಬಗ್ಗೆ ಚರ್ಚೆ ಹೆಚ್ಚಾಗಿದೆ ರಾಜಕೀಯವಾಗಿ ಪ್ರಕರಣಕ್ಕೆ ಮಹತ್ವ ಬಂದಿದೆ1
- ಸೂರ್ಯನ ಬಿಸಿಲಿನ ತಾಪಕ್ಕೆ ನೀರನ್ನು ಅರಸಿ ಬಂದ ನಾಯಿಗೆ. ನೀರುಣಿಸಿ ಮಾನವೀಯತೆ ಮೆರೆದ ಮಾನವ ನೀರನ್ನು ಅರಸಿ ಬಂದ ನಾಯಿಗೆ ಬಸ್ಸಿನಲ್ಲಿ ವ್ಯಕ್ತಿಯೊಬ್ಬರು ನಾಯಿ ಯ ಬಾಯಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾರೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ ಸಾರ್ವಜನಿಕರು ತಮ್ಮ ತಮ್ಮ ಮನೆಯ ಮುಂದೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವುದಕ್ಕೆ ನೀರಿ ನ ವ್ಯವಸ್ಥೆ ಮಾಡಬೇಕಾಗಿರುವುದು ಮಾನವ ಧರ್ಮ ದಯವಿಟ್ಟು ಪ್ರಾಣಿ ಪಕ್ಷಿಗಳಿಗೆ ನಿಮ್ಮ ಮನೆ ಹಾಗೂ ಊರಿನಲ್ಲಿ ಕುಡಿಯುವುದಕ್ಕೆ ವ್ಯವಸ್ಥೆ ಮಾಡಿ .1
- Post by Mayur TV Hangal YouTube c1
- Snake rauf 99164034481
- ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್. ಗದಗ ಸಮಾಜ ಕಲ್ಯಾಣ ಇಲಾಖೆ, ಮುಂಡರಗಿ ಮುಂಡರಗಿ ತಾಲೂಕ ದಲಿತಪರ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರವರ 135ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ. ರಾಷ್ಟ್ರ ನಾಯಕ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ರವರ 119ನೇ ಜನ್ಮ ದಿನಾಚರಣೆ ನಿಮಿತ್ಯ ಚಿಂತನ ಮಂಥನ ಕಾರ್ಯಕ್ರಮ1
- ಬೀದಿನಾಯಿಗಳಿಗೆ ಆಹಾರ ಇಡಲು ವ್ಯವಸ್ಥೆ.... ಚಳ್ಳಕೆರೆ: ಬೀದಿ ನಾಯಿಗಳ ಕಲ್ಯಾಣ ಮತ್ತು ನಿರ್ವಹಣೆ ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಸ್ಟ್ರೀಟ್ ಡಾಗ್ಸ್‌ಗೆ ಆಹಾರ ನೀಡಲು ಚಳ್ಳಕೆರೆ ನಗರದದಲ್ಲಿ 20 ಸ್ಥಳಗಳನ್ನು ‘ಫೀಡಿಂಗ್ ಸ್ಪಾಟ್’ಗಳ ಗುರುತಿಸಲಾಗಿದ್ದು ಈಗಾಗಲೆ 9 ಸ್ಥಳಗಳಲ್ಲಿ ಬೀದಿನಾಯಿಗಳಿಗೆ ಆಹಾರ ಇಡಲು ವ್ಯವಸ್ಥೆ ಮಾಡಲಗಿದೆ ಎಂದು ಪೌರಯುಕ್ತೆ ಡಾ.ನಾಗವೇಣಿ (ಕೆ.ಎ.ಎಸ್)ತಿಳಿಸಿದ್ದಾರೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಾನವ ಮತ್ತು ಸಮುದಾಯ ಪ್ರಾಣಿಗಳ ನಡುವೆ ಸಹ ಕಾಳ ದ ಗೆ ವೃದ್ಧಿಸಲು ಮತ್ತು ಸಂಘರ್ಷ ಕಡಿಮೆಗೊಳಿಸಲು ಬೀದಿ/ಸಮುದಾಯ ನಾಯಿಗಳಿಗೆ ಆಹಾರ ನೀಡುವ ಕಾರ್ಯವು ಮಹತ್ತರವಾಗಿದೆ. ಈ ರೀತಿ ವ್ಯವಸ್ಥಿತವಾಗಿ ಆಹಾರ ಒದಗಿಸುವುದರಿಂದ ಶ್ವಾನಗಳ ಹಸಿವು ನೀಗಿಸುವ ಮೂಲಕ ಅವುಗಳ ಕ್ರೂರಸ್ವಭಾವ ಮತ್ತು ಕಚ್ಚುವ ಪ್ರವೃತ್ತಿಯನ್ನು ಕಡಿಮೆಗೊಳಿಸಬಹುದಾಗಿದೆ. ಜತೆಗೆ ಬೀದಿನಾಯಿಗಳ ಸಂತಾನಹರಣ ಶಸ್ತಚಿಕಿತ್ಸೆಗೆ ಹಾಗೂ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ನಿರ್ವಹಿಸಲು ಇದು ಸಹಕಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ . ಫೀಡಿಂಗ್ ಸ್ಪಾಟ್‌ಗಳನ್ನು ಗುರುತಿಸಿರುವ ರಾಗಗಳಲ್ಲಿ ಸೂಚನಾ ಫಲಕ ಅಳವಡಿಸಿ ನಾಗರಿಕರಿಗೆ ಮಾಹಿತಿ ಒದಗಿಸಲಾಗಿದೆ . ಯೋಜನೆ ಕೇವಲ ಪ್ರಾಣಿಗಳ ಕಲ್ಯಾಣಕ್ಕೆ ಮಾತ್ರವಲ್ಲ, ನಗರದಲ್ಲಿ ಮಾನವ-ಪ್ರಾಣಿ ಸಹಬಾಳ್ವೆಯತ್ತ ಒತ್ತು ನೀಡುತ್ತದೆ. ಬೀದಿ ನಾಯಿಗಳ ಸಮರ್ಥ ನಿರ್ವಹಣೆ ಮತ್ತು ನಿಯಂತ್ರಿತ ಬೆಳವಣಿಗೆ, ರಸ್ತೆ ಅಪಘಾತಗಳು ಮತ್ತು ಜನತೆ ನಡುವಿನ ಸಂಘರ್ಷವನ್ನು ಕಡಿಮೆ ಮಾಡಲು ಸಹಾಯಕ ಮಾಡುತ್ತದೆ. ಜೊತೆಗೆ, ಸಾರ್ವಜನಿಕರಲ್ಲಿ ಪ್ರಾಣಿಗಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಇದು ಪ್ರೇರಣೆಯಾಗಿದೆ. ಜನ ವಸತಿ ಕಡಿಮೆ ಇರುವ ಪ್ರದೇಶಗಳಲ್ಲಿ ನಾಯಿಗಳು ಇರುವಂತಹ ಸ್ಥಳಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿ ಆಹಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು ಹಾಗೂ ಪ್ರಾಣಿ ಪ್ರಿಯರು ಆಹಾರವನ್ನು ತಂದು ಇಲ್ಲಿ ಹಾಕುವುದರ ಮೂಲಕ ಬೀದಿ ನಾಯಿಗಳ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ಅವರು ಮಾಹಿತಿ ನೀಡಿದರು..1