ಅಳ್ನಾವರದ ಎಸ್‌ಎಸ್‌ಟಿ ಬಾಲಿಕಾ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರ ಬೀಳ್ಕೂಡುಗೆ ಕಾರ್ಯಕ್ರವನ್ನು ಸರ್ವೋದಯ ಶಿಕ್ಷಣ ಟ್ರಸ್ಟ್ನ ಸಹ ಕಾರ್ಯದರ್ಶಿ ಎಸ್.ಆರ್. ಮುರಕಟ್ಟಿ ಉದ್ಘಾಟಿಸಿದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರ ಬೀಳ್ಕೂಡುಗೆ " ಕಲಿಕೆ ಜೊತೆಗೆ ಸಂಸ್ಕಾರ ರೂಡಿಸಿಕೊಂಡು ಬದುಕು ಸಾಗಿಸಿ" ಅಳ್ಳಾವರ(ಧಾರವಾಡ):ಅಳ್ನಾವರಜೀವನ ನಡೆಸುವ ಕಲೆಯನ್ನು ವಿದ್ಯಾರ್ಥಿನಿಯರು ಕರಗತ ಮಾಡಿಕೊಂಡಲ್ಲಿ ಪ್ರಪಂಚವನ್ನೆ ಗೆಲ್ಲುವ ಶಕ್ತಿ ನಿಮ್ಮಲ್ಲಿ ಅಡಗುತ್ತದೆ, ಪ್ರಸ್ತುತ್ ಸ್ಪರ್ಧಾತ್ಮಕ ಪ್ರಪಂಚದ ಸವಾಲುಗಳನ್ನು ಮೆಟ್ಟಿ ನಿಂತು ಶಿಕ್ಷಣ ಜೊತೆಗೆ ಸಂಸ್ಕಾರ ರೂಡಿಸಿಕೊಂಡು ಸಮಾಜದ ಉತ್ತಮ ವ್ಯಕ್ತಿಗಳಾಗಿ ಹೊರ ಹೊಮ್ಮಿ ಎಂದು ಸರ್ವೋದಯ ಶಿಕ್ಷಣ ಟ್ಟಸ್ಟ್ನ ಸಹ ಕಾರ್ಯದರ್ಶಿ ಎಸ್.ಆರ್. ಮುರಕಟ್ಟಿ ಹೇಳಿದರು. ಸರ್ವೋದಯ ಶಿಕ್ಷಣ ಟ್ರಸ್ಟ್ನ ಅಂಗ ಸಂಸ್ಥೆಯಾದ ಇಲ್ಲಿನ ಎಸ್‌ಎಸ್‌ಟಿ ಬಾಲಿಕಾ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರಿಗೆ ಶಾಲಾ ಆವರಣದಲ್ಲಿ ಸೋಮವಾರ ಹಮ್ಮಿಕೊಂಡ ಬೀಳ್ಕೂಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸತತ ಅಧ್ಯಯನದಿಂದ ಯಶಸ್ಸು ಸಾದಿಸಿ, ಶಾಲೆಗೆ, ಗುರುಗಳಿಗೆ, ತಂದೆ ತಾಯಿಗೆ ಕೀರ್ತಿ ತನ್ನಿ. ಎಸ್‌ಎಸ್‌ಎಲ್‌ಸಿ ಘಟ್ಟ ಜೀವನದ ಮೌಲ್ಯ ಕಲಿಕೆಯ ಪ್ರಥಮ ಮೆಟ್ಟಿಲು ಇದ್ದಂತೆ, ಇದನ್ನು ಸಮರ್ಥವಾಗಿ ಹತ್ತುವ ಮೂಲಕ ಮುಂದಿನ ಜೀವನ ಗಟ್ಟಿಗೊಳಿಸಿಕೊಳ್ಳಿ ಎಂದರು. ಎನ್‌ಇಎಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವಿ.ಎಚ್. ಲಕ್ಷಾಣಿ ಮಾತನಾಡಿ, ಸಮಾಜಿಕ ವ್ಯವಸ್ಥೆಯಲ್ಲಿ ಜ್ಞಾನ ಮತ್ತು ಬುದ್ದಿಯನ್ನು ಸರಿಯಾಗಿ ಬಳಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು. ಸತತ ಅಧ್ಯಯನ, ಪರಿಶ್ರಮದ ಮೂಲಕ ಸಾಧನೆಯ ಮೆಟ್ಟಿಲು ತುಳಿಯಲು ಸನ್ನದ್ದರಾಗಬೇಕು ಎಂದರು. ಎಸ್‌ಎಸ್‌ಟಿ ಬಾಲಿಕಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಚ್.ಜಿ.ದಶವಂತ ಅಧ್ಯಕ್ಷತೆ ವಹಿಸಿದ್ದರು. ಎನ್‌ಇಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಜಿ. ಜಾನಮಟ್ಟಿ, ಉಧ್ಯಮಿ ಸುಪ್ರಿತ್ ಜಿತೂರಿ, ಕಸ್ತೂರಭಾ ಗಾಂಧಿ ಬಾಲಕಿಯರ ವಸತಿ ಶಾಲೆಯ ಮುಖ್ಯ ಶಿಕ್ಷಕಿ ದೀಪಾ ಲಾಡ್, ಕಸಮಳಗಿ, ಗಂಗಾ ಇದ್ದರು. ವಿದ್ಯಾರ್ಥಿನಿಯರಾದ ಕೀರ್ತಿ ತಿಗಡಿ, ರೇಣುಕಾ ಜೋರೆ, ಸಂಪದಾ ದುರ್ಗದ, ಸೃಷ್ಟಿ ಕಾದರವಳ್ಳಿ, ನೀಲಮ್ ಕಾಮಾತಿ ವಿದ್ಯಾರ್ಥಿ ಜೀವನದ ಅನಿಸಿಕೆ ಹಂಚಿಕೊAಡರು. ತನುಜಾ ಮತ್ತು ಐಶ್ವರ್ಯ ಕವನ ವಾಚನ ಮಾಡಿದರು. ಕೀರ್ತಿ ಪುಡಕಲಕಟ್ಟಿ, ವೈಶಾಲಿ ಬೇಕನೆ ಶಾಲೆಯ ದಿನಗಳನ್ನು ಮೆಲಕು ಹಾಕುವ ಹಾಡು ಹಾಡಿ ರಂಜಿಸಿದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ಹಾಗೂ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಶಿಕ್ಷಕಿಯ ಗೌರವ ಧನವನ್ನು ಶಾಲಾ ಆವರಣದಲ್ಲಿನ ವೇದಿಕೆ ನಿರ್ಮಾಣಕ್ಕೆ ಬಳಸಲು ಮಹಾದೇವಿ ಹಿರೇಮಠ ಕಾಣಿಕೆ ನೀಡಿ ಮಾನವೀಯತೆ ತೋರಿದರು. ಎನ್.ಕೆ.ಚೌಹಾನ ಸ್ವಾಗತಿಸಿದರು. ರವಿ.ವೈ ಅಳ್ನಾವರ ಅತಿಥಿ ಪರಿಚಯಿಸಿದರು. ಶ್ರೀದೇವಿ ಹೂಗಾರ ನಿರೂಪಿಸಿದರು .ವರ್ಗ ಶಿಕ್ಷಕಿ ಎಲ್.ಎಚ್. ರಾಠೋಡ ವಂದಿಸಿದರು.

- Tandav by Small Child ?1
- ಹುಬ್ಬಳ್ಳಿ ರಣಹದ್ದು ಜಾಗೃತಿ ಸಿಟಿ ನೆಷ್ಟ ನ್ಯೂಸ್ 24/7 ಕನ್ನಡವಾಗಿದೆ ಸುದ್ದಿ ವಾಹಿನಿ. ಕನ್ನಡ ಟೆಲಿವಿಷನ್ ನ್ಯೂಸ್‌ನಲ್ಲಿ ಹಿಂದೆಂದೂ ಕಾಣದ ಉತ್ತಮ ಗುಣಮಟ್ಟದ ಸುದ್ದಿ ವಿಷಯವನ್ನು ತಲುಪಿಸುವುದು. 'ಲೈವ್' ಕನ್ನಡ ಹಾಗೂ ಹಿಂದಿ ಸುದ್ದಿಯನ್ನು ಕರ್ನಾಟಕದ ಮನೆ ಬಾಗಿಲಿಗೆ ತಂದ ತಂಡದಿಂದ ಪ್ರಚಾರ. ಈ ಧೈರ್ಯಶಾಲಿ, ವಿಶ್ವಾಸಾರ್ಹ ಮತ್ತು ದೃಢನಿರ್ಧಾರದ ತಂಡವು ನಿಮಗೆ 'ಯಾವುದೇ ವೆಚ್ಚದಲ್ಲಿ' ವಿಶ್ವಾಸಾರ್ಹ ಸುದ್ದಿಯನ್ನು ತರುತ್ತದೆ ಪಡೆಯುವಲ್ಲಿ ಮೊದಲಿಗರಾಗಿರಿ: - ಸ್ಥಳೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳನ್ನು ಬ್ರೇಕಿಂಗ್ - ವ್ಯಾಪಕವಾದ ಹೈಪರ್ ಸ್ಥಳೀಯ ಸುದ್ದಿ - ಕರ್ನಾಟಕದ ರಾಜಕೀಯದ ಆಳವಾದ ಕವರೇಜ್ - ವಿವರವಾದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿ - ಇತ್ತೀಚಿನ ಕ್ರೀಡಾ ಪಂದ್ಯಗಳು, ಅಂಕಗಳು ಮತ್ತು ಇನ್ನಷ್ಟು - ವಿಶಾಲವಾದ ಸಿನಿಮಾ ವ್ಯಾಪ್ತಿ ಮತ್ತು ದೊಡ್ಡದು ಸ್ಟಾರ್ ಕಥೆಗಳು - ಪ್ರಪಂಚದಾದ್ಯಂತ ಆಸಕ್ತಿದಾಯಕ ಕಥೆಗಳು *PLEASE SUBSCRIBE CITY NEXT NEWS 24 7*1
- Post by Nitishgoud Tadas Patil press r2
- ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಸುರಪಗಟ್ಟಿ ಗ್ರಾಮದ ಶ್ರೀ ಹನುಮಂತಪ್ಪ ಮೆತ್ತಿಗಟ್ಟಿ ಇವರಿಗೆ ಸೇರಿದ ಮೆಕ್ಕೆ ಜೋಳದ ಮೇವುಗೆ ಆಕಸ್ಮಿಕ ಬೆಂಕಿ ತಗಲಿ ಅಪಾರ ಪ್ರಮಾಣದ ಮೇವು ಸುಟ್ಟು ಕರಲಾಗಿದೆ, ಗ್ರಾಮದ ನಾಗರಿಕರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸೇರಿ ಬೆಂಕಿ ಆರಿಸಿದ್ದರು, ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಹಾನಿಯಾದ ಬಗ್ಗೆ ತಹಶೀಲ್ದಾರ್ ಗೆ ಮಾಹಿತಿ ನೀಡಲಾಯಿತು,2
- ರಾಮದುರ್ಗ : ಸುರೇಬಾನ ನಾಡಕಚೇರಿ ಮುಂಭಾಗದಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ತಿಂದು ಉಗುಳಲು ಬಕೆಟ್ ಇಡುತ್ತಿರುವ ದೃಶ್ಯ ಕಂಡು ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತಿ ದಿನ ಸಾವಿರಾರು ಜನರು ವಿವಿಧ ಸರ್ಕಾರಿ ಕೆಲಸಗಳಿಗಾಗಿ ನಾಡಕಚೇರಿಗೆ ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕಾದ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದರೂ, ಆವರಣದಲ್ಲಿ ಅಸ್ವಚ್ಛತೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಇನ್ನೂ ಆತಂಕಕಾರಿ ವಿಷಯವೆಂದರೆ, ನಾಡಕಚೇರಿ ಆವರಣದಲ್ಲೇ ಪೂರ್ವ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ದಿನನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ಉಗುಳುವಿಕೆ ಮಕ್ಕಳ ಆರೋಗ್ಯಕ್ಕೂ ಹಾನಿಕಾರಕವಾಗುವ ಸಾಧ್ಯತೆ ಇದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಮತ್ತು ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯವೇ ಈ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ. ತಕ್ಷಣವೇ ಸ್ವಚ್ಛತಾ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಿಕೆ ನಿಷೇಧಿಸಲು ಕಠಿಣ ಕ್ರಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.3
- ಇಂದು ಶಿವರಾತ್ರಿ ಅಮಾವಾಸ್ಯೆ ನಿಮಿತ್ತ ಸವದತ್ತಿ ತಾಲೂಕಿನ ಎಕ್ಕೇರಿ ಗ್ರಾಮದ ಶ್ರೀ ಕರಿಯಮ್ಮ ದೇವಿಯ ದರ್ಶನಕ್ಕೆ ವಿವಿಧ ಹಳ್ಳಿಗಳಿಂದ ಭಕ್ತರು ಆಗಮಿಸಿ ತಮ್ಮ ಹರಿಕೆಗಳನ್ನು ಕಟ್ಟಿಕೊಂಡು ತಾಯಿಯಲ್ಲಿ ತಮ್ಮ ಕೋರಿಕೆಗಳನ್ನು ಈಡೇರಿಸಿವಂತೆ ಬೇಡಿಕೊಂಡರು.ಪ್ರತಿ ಅಮವಾಸ್ಯಯಂತೆ ಈ ಅಮಾವಾಸ್ಯೆಯು ಬಹಳಷ್ಟು ಭಕ್ತರಿಂದ ತುಂಬಿ ತುಳುಕಿತು.1
- ಬೆಳಗಾಂವ ಜಿಲ್ಲಾ ರಾಮದುರ್ಗ ತಾಲೂಕಿನ ಹೊಸಕೋಟೆ ಗ್ರಾಮದ ಸಾರ್ವಜನಿಕರು ರಾಮದುರ್ಗ ತಾಲೂಕಿಗೆ ಬಂದಂತ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿ ತಮ್ಮ ಅಳಿಲನ್ನು ಮಾಧ್ಯಮದವರ ಮುಂದೆ ಹೇಳಿಕೊಂಡರು. ಹೊಸಕೋಟೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಬ್ಬ ಡಾಕ್ಟರ್ ಇದ್ದು ಎರಡು ವರ್ಷದಿಂದ ಅವರ ಸೇವೆ ಒಳ್ಳೆ ತರಹ ಮಾಡುತ್ತಾ ಬಂದಿದ್ದು ಹೊಸಕೋಟೆ ಗ್ರಾಮದ ಸುತ್ತು ಮುತ್ತಿಲಿನ ಹಳ್ಳಿಗಳಿಗೆ ಇವರ ಸೇವೆ ಅಚ್ಚುಮೆಚ್ಚಿಗೆ ಪಾತ್ರರಾಗಿದ್ದಾರೆ. ಈಗ ಸರ್ಕಾರದವರು ಇವರನ್ನು ವರ್ಗಾವಣೆ ಮಾಡಿದ್ದಕ್ಕೆ ಹೊಸಕೋಟೆ ಗ್ರಾಮಸ್ಥರು ಅವರನ್ನು ವರ್ಗಾವಣೆ ಮಾಡದಂತೆ ಮನವಿ ಸಲ್ಲಿಸಿ ತಮ್ಮ ಅನಿಸಿಕೆಗಳನ್ನು ಮಾಧ್ಯಮದವರು ಮುಂದೆ ಹೇಳಿಕೊಂಡು ಅವರನ್ನು ವರ್ಗಾವಣೆ ಮಾಡಿದಲ್ಲಿ ಜಿಲ್ಲಾಮಟ್ಟದಲ್ಲಿ ಸತ್ಯಾಗ್ರಹ ಮಾಡಲಾಗುವುದೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.1
- This is new rumors spreading by Pakistani media, Shame1