logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅವಳ ಮಾಂಸಕ್ಕಾಗಿ ಹಸಿದ ತೋಳಗಳಂತೆ ಮುಗಿಬಿದ್ದಿದ್ದರಂತೆ... ಅಬ್ಬಾ...! ಸರಾಸರಿ ನಾನು ದಿನಕ್ಕೆ ಐದು ಜನ ಗಂಡಸರ ಜೊತೆ ಮಲಗಲೇ ಬೇಕಿತ್ತು. ಅಂದರೆ ತಿಂಗಳಿಗೆ ನೂರೈವತ್ತು ಜನ ! ವರ್ಷಕ್ಕೆ ಸಾವಿರದ ಎಂಟುನೂರು ಜನ !! ನನ್ನ ಇಪ್ಪತೈದು ವರ್ಷಗಳ ವೇಶ್ಯಾ ವೃತ್ತಿಯಲ್ಲಿ ಹತ್ತಿರತ್ತಿರ ಅರ್ಧ ಲಕ್ಷ ಗಿರಾಕಿಗಳ ಜೊತೆಯಲ್ಲಿ ದೇಹವನ್ನು ಹಂಚಿಕೊಂಡಿದ್ದೇನೆ !!! ಅವರ್ಯಾರೂ ನನ್ನ ಪರಿಚಯದವರಲ್ಲ. ನೆಂಟರಿಷ್ಟರೂ ಅಲ್ಲ. ಎಲ್ಲರೂ ಅಪರಿಚಿತರೇ. ಅವರ್ಯಾರೂ ನನ್ನನ್ನು ನೋಡಲು ಹೂಗುಚ್ಚವನ್ನಾಗಲೀ, ಉಡುಗೊರೆಯನ್ನಾಗಲಿ ತಂದವರಲ್ಲ. ಬದಲಾಗಿ, ಹಾಸಿಗೆಯಲ್ಲಿ ಹೊಸ ಹೊಸ ಪ್ರಯೋಗದ ಬಗ್ಗೆ ವಿಕೃತ ಕಲ್ಪನೆಯೊಂದಿಗೆ ಬಂದವರು. ನನ್ನ ದೇಹವನ್ನು ಅಕ್ಷರಶಃ ಟಾಯ್ಲೆಟ್ ಥರ ಉಪಯೋಗಿಸಿ ಎದ್ದು ಹೋದವರು. ನನ್ನೆರೆಡು ಮಕ್ಕಳ ಎರಡು ಹೊತ್ತಿನ ಊಟಕ್ಕಾಗಿ ನಾನಿದನ್ನು ಮಾಡಲೇಬೇಕಿತ್ತು. ನ್ಯೂಯಾರ್ಕ್ ನ ಅಥೇನಾ ಫಿಲಂ ಫೆಸ್ಟಿವಲ್ ನ ಸಮಾರೋಪ ಸಮಾರಂಭದಲ್ಲಿ, ತನ್ನ ಬಗ್ಗೆಯೇ ಮಾಡಿದ ಸಾಕ್ಷ್ಯ ಚಿತ್ರಕ್ಕೆ ಪ್ರಶಸ್ತಿ ಸಂದ ಸಂದರ್ಭದಲ್ಲಿ ಅವಳು ಮಾತನಾಡುತ್ತಿದ್ದಳು. ಹೊರ ಪ್ರಪಂಚದಲ್ಲಿ ತೋರಿಸಿಕೊಳ್ಳಲಾಗದ, ತೀರಿಸಿಕೊಳ್ಳಲಾಗದ,ಸಿಟ್ಟುಗಳನ್ನೂ,ಮಾನಸಿಕ ವಿಕೃತಿಗಳನ್ನೂ ತಣಿಸುವ ಜಾಗವೆಂದೇ ತಿಳಿದಿದ್ದ ಹಸಿದ ವಿಟ ವೃಂದವದು. ಇಲ್ಲಿ, ಕಾಸು ಕೊಟ್ಟಿದ್ದೇನೆ ಎಂಬ ಒಂದೇ ಅಹಂನಿಂದ ನನ್ನ ಮೇಲೆ ಅಪರಿಮಿತ ದೌರ್ಜನ್ಯಗಳನ್ನೆಸಗಿದ ಗಿರಾಕಿಗಳನ್ನೂ ನೋಡಿದ್ದೇನೆ. "ಹದಿಮೂರು ಬಾರಿ ಇರಿತಕ್ಕೊಳಗಾಗಿದ್ದೇನೆ. ಐದು ಬಾರಿ ನನ್ನ ಮೇಲೆ ಗುಂಡಿನ ದಾಳಿಗಳಾಗಿವೆ. ಇದರಲ್ಲಿ ನನ್ನ ಖಾಸಗಿ ಅಂಗಗಳೂ ಹೊರತಾಗಿಲ್ಲ." ಎಂದು ಕಣ್ಣೀರಿನ ಹನಿಗಳನ್ನು ಅನಾಮತ್ತು ಬೆರಳುಗಳಿಂದ ಒರೆಸುತ್ತಾ ಕಿರುನಗೆ ಬೀರುತ್ತಿದ್ದರೆ, ತುಂಬಿದ ಸಭಾಂಗಣದ ಎಲ್ಲಾ ಕಣ್ಣುಗಳೂ ಒದ್ದೆಯಾಗಿದ್ದವು. ಇಪ್ಪತೈದು ವರ್ಷಗಳಲ್ಲಿ ಹಲವು ಬಾರಿ ತಪ್ಪಿಸಿಕೊಳ್ಳಲು ವಿಪಲ ಪ್ರಯತ್ನಗಳಾಗಿವೆ.ಆದರೆ ಪಿಂಪ್ ಗಳ ಕೈಗೆ ಒಮ್ಮೆ ಸಿಕ್ಕಿಬಿದ್ದರೆ ಅಲ್ಲಿಂದ ಹೊರಬರುವುದು ಅಸಾಧ್ಯದ ಮಾತೇ ಸರಿ. ಇದೆಲ್ಲದರ ನಡುವೆ ಕೊನೆಗೂ ಒಮ್ಮೆ ಈ ಪಾಪ ಕೂಪದಿಂದ ತಪ್ಪಿಸಿಕೊಳ್ಳುವ ಸುವರ್ಣಾವಕಾಶ ಬಂದೇ ಬಿಟ್ಟಿತು. ಒಮ್ಮೆ ಗಿರಾಕಿಯೊಬ್ಬ ಕಾರಿನಲ್ಲಿ ಅವನ ಜಾಗಕ್ಕೆ ಕರೆದೊಯ್ಯುತ್ತಿದ್ದಾಗ, ನನ್ನ ಸಹಕಾರ ಸಾಕಾಗಲಿಲ್ಲವೋ, ಅಥವಾ ಅವನ ಮಾನಸಿಕ ವಿಕೃತಿ ಸಕ್ರಿಯವಾಯಿತೋ, ಚಲಿಸುವ ಕಾರಿನ ಬಾಗಿಲು ತೆರೆದು ಜಾಡಿಸಿ ಒದ್ದಿದ್ದ ! ಕೆಳಗೆ ಬಿದ್ದ ನನ್ನ ಬಟ್ಟೆ ಕಾರಿನ ಬಾಗಿಲಿಗೆ ಸಿಕ್ಕಿಕೊಂಡು ಎಷ್ಟೋ ದೂರ ನನ್ನನ್ನು ಎಳೆದೊಯ್ದಿತ್ತು. ನನ್ನ ಎಡ ಭಾಗದ ಮುಖ ರಸ್ತೆಗೆ ಉಜ್ಜಿ ವಿಕಾರ ಮುಖಭಾವವನ್ನು ಮೂಡಿಸಿತ್ತು. ಇನ್ನು ಇವಳಿಂದ ಪ್ರಯೋಜನವಿಲ್ಲವೆಂದು ಭಾವಿಸಿ ಆ ಕರಾಳ ಜಗತ್ತು ನನಗೆ ಬಿಡುಗಡೆಯ ಭಾಗ್ಯವನ್ನು ಕರುಣಿಸಿತು ಎಂದು "ಬ್ರೆoಡಾ " ಕಣ್ಣು ಹೊಡೆದು ನಗುತ್ತಾ,ಉಮ್ಮಳಿಸಿದ ನೋವನ್ನು ತಡೆದು ಕೊಂಡರೆ, ಸಭಾಂಗಣದಲ್ಲಿದ್ದ ಗಂಡಸರು ತಮ್ಮ ಹೆಂಡತಿಯರ ಮುಂಗೈ ಹಿಡಿದು ಸಮಾಧಾನ ಮಾಡಲು ಪ್ರಯತ್ನಿಸುತ್ತಿದ್ದರು......! ಹಾಸ್ಯ ಚಟಾಕಿ ಹಾರಿಸುವಲ್ಲಿ ಪರಿಣಿತಳಾದ ಬ್ರೆoಡಾ ಸನ್ಯಾಸಿನಿಯಂತೆ ಮಾತನಾಡುತ್ತಿದ್ದರೆ ಪ್ರೇಕ್ಷಕರು ಮಂತ್ರ ಮುಗ್ಧರಾದಂತೆ ಕುಳಿತಿದ್ದರು.ಅಳುತ್ತಾ, ನಗುತ್ತಾ ಹಾವಭಾವಗಳಲ್ಲಿ ತನ್ನ ಅಸಹಾಯಕತೆಯನ್ನು ತೋರಿಸುತ್ತಾ ಮುಂದುವರಿಸುತ್ತಾಳೆ ಅವಳು........ಅಪಘಾತವಾದ ಎಷ್ಟೋ ಹೊತ್ತು ಚಿಕಿತ್ಸೆಯೇ ಸಿಗದೇ ಡ್ರೆಸ್ಸಿಂಗ್ ರೂಮ್ನಲ್ಲಿ ಹಾಗೇ ಕುಳಿತಿದ್ದೆ. ನನ್ನನ್ನು ನೋಡಿದ ಡಾಕ್ಟರ್ ಒಬ್ಬ " ಓ ಇವಳಾ, ಇರಲಿ ಬಿಡು ಎಂದು ತಾತ್ಸಾರದಿಂದ ನೋಡಿದ್ದ. ಪ್ರತೀ ಬಾರಿ ನನಗೆ ಹೊಲಿಗೆ ಹಾಕಿ ಡ್ರೆಸ್ಸಿಂಗ್ ಮಾಡುತ್ತಿದ್ದದ್ದು ಇದೇ ಡಾಕ್ಟರ್.ಅಂತೂ ಎಷ್ಟೋ ಹೊತ್ತಾದಮೇಲೆ ಲೋಕಲ್ ಅನೆಸ್ತೀಶಿಯಾ ಕೂಡ ಕೊಡದೆ ಹೊಲಿಗೆ ಹಾಕಿದ್ದ ಭೂಪ...!ಡಾಕ್ಟರ್ ಎಂಬ ಗೌರವ ನನಗಿದ್ದರೆ, ಇದೊಂದು ಪೀಡೆ ಎನ್ನುವ ಅಸಡ್ಡೆ ಅವನಿಗೆ. ವಿರುದ್ಧ ದಿಕ್ಕಿನೆಡೆಗೆ ತಿರುಗಿದ ಎರಡು ಮಾನಸಿಕ ವೈರುದ್ಧಗಳ ಮಹಾ ಸಮಾಗಮವದು ! ಅವನು ಕೂಡ ಗಂಡಸೇ... ಗಂಡಸರೆಂದರೆ ವಾಕರಿಕೆ ಬರುವಂತಾಗಿತ್ತು ಆ ಹೊತ್ತಿಗೆ. ನಾನೇನು ಮಾಡಲಿ ಪ್ರತಿಯೊಬ್ಬ ಗಂಡಸಿನ ಕಣ್ಣುಗಳಲ್ಲಿ ವಿಟಪುರುಷನ ಚಹರೆಯೇ ಕಾಣುತ್ತಿತ್ತು. ಬಹುಶಃ ನಮ್ಮಪ್ಪ ಇದ್ದಿದ್ದರೆ ಅವನ ಬಗ್ಗೆಯೂ ಅದೇ ಅಸಹ್ಯ ಭಾವನೆ ಮೂಡುತ್ತಿತ್ತೇನೊ ಎಂದು ಮಗುವಿನಂತೆ ಅತ್ತೇಬಿಟ್ಟಳು ಬ್ರೆoಡಾ. "ಗಂಡಸಾಗಿ ಹುಟ್ಟಿದ್ದಕ್ಕೆ ಕ್ಷಮೆ ಇರಲಿ ಎಂಬಂತೆ ಸಭಾಂಗಣದಲ್ಲಿದ್ದ ಪುರುಷ ಸಂಕುಲ ಹೆಂಡತಿಯರ ಮುಂದೆ ಕಣ್ಣಲ್ಲೇ ಅಂಗಲಾಚಿದ್ದವು "....!! ಇಂತಹ ನಿಕೃಷ್ಠ ಹಾಗೂ ರೋಚಕ ಬದುಕನ್ನ ಕಂಡ ಒಂದು ವ್ಯಕ್ತಿತ್ವದ ಬಗ್ಗೆ ಡಾಕ್ಯುಮೆಂಟೇಷನ್ ಮಾಡುವುದು ಸವಾಲಿನ ಕೆಲಸವೇ ಸರಿ. ಈ ಅಪೂರ್ವವಾದ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದವಳೂ ಕೂಡ ಹೆಣ್ಣೇ ಆಗಿದ್ದರಿಂದ ಬೇರಿನ ಮಟ್ಟದಿಂದ ಸುಳಿಯ ವರೆಗೂ ಇಡೀ ವಿಷಪರಿಣಾಮಕಾರಿಯೆನಿಸುತ್ತದೆ. ಭಾರತದ ಸಾಮಾಜಿಕ ಪೀಡನೆಯ ವಸ್ತುಗಳನ್ನಾಧರಿಸಿ ಈಗಾಗಲೇ ಎರಡು ಸಾಕ್ಷ್ಯ ಚಿತ್ರಗಳನ್ನು ಮಾಡಿರುವ ಈ ನಿರ್ದೇಶಕಿಯ ಹೆಸರು " ಕಿಮ್ ಲಿಂಗೊನೊಟ್ಟೋ ". ಬ್ರೆoಡಾ ಜೀವನದ ಬಗ್ಗೆ ಅವಳ ಅಧ್ಯಯನ ಹಾಗೂ ಸಂಶೋಧನೆ ಸೋಜಿಗವನ್ನುoಟು ಮಾಡುತ್ತದೆ. ಪ್ರತಿ ಘಟನೆಯನ್ನು ನಿರ್ಭಡೆಯಿಂದ ಹೇಳಿಕೊಳ್ಳುವ ಬ್ರೆoಡಾ ಇನ್ನೂ ಅಚ್ಚರಿಯನ್ನುoಟು ಮಾಡುತ್ತಾಳೆ! ಆ ಹೆಣ್ಣುಮಗಳ ಪೂರ್ಣ ಹೆಸರು ಬ್ರೆoಡಾ ಮೇಯರ್ಸ್ ಪೋವೆಲ್. ಆರು ತಿಂಗಳ ಹಸುಳೆಯಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿದ್ದ ಬ್ರೆoಡಾಗೆ, ನಾಲ್ಕೈದು ವರ್ಷದವಳಾಗಿದ್ದಾಗಲೇ ಲೈಂಗಿಕ ಕಿರುಕುಳ ಪ್ರಾರಂಭವಾಗಿತ್ತಂತೆ. ಕಡುಕುಡುಕಿ ಅಜ್ಜಿ,ಕುಡಿಯಲು ತನ್ನೊಟ್ಟಿಗೆ ಸ್ನೇಹಿತರನ್ನೂ ಮನೆಗೆ ಕರೆತರುತ್ತಿದ್ದಳಂತೆ. ಅವರಿಂದ ಬ್ರೆoಡಾಗೆ ಕರಾಳ ಜಗತ್ತಿನ ಪರಿಚಯ ಶುರುವಾಯ್ತಂತೆ. ಹದಿನಾಲ್ಕು ವರ್ಷ ಆಗುವಷ್ಟರಲ್ಲಿ ಕೇರಿಯ ಹುಡುಗರಿಂದ ಎರಡು ಮಕ್ಕಳಾದವೆಂದು ಯಾವುದೇ ಎಗ್ಗಿಲ್ಲದೆ ಹೇಳಿಕೊಳ್ಳುತ್ತಾಳೆ ಅವಳು!. ಮೊದಲ ಬಾರಿ ಕೇವಲ ನಾಲ್ಕು ಡಾಲರ್ ಬೆಲೆಯ ಟೂ ಪೀಸ್ ಉಡುಗೆ ತೊಟ್ಟು,ಅಗ್ಗದ ಪ್ಲಾಸ್ಟಿಕ್ ಚಪ್ಪಲಿ ಧರಿಸಿ,ಕಿತ್ತಳೆ ಬಣ್ಣದ ಲಿಪ್ಸ್ಟಿಕ್ ಹಾಕಿ,ಇಳಿಸಂಜೆ ರಸ್ತೆ ಬದಿಯಲ್ಲಿ ನಿಂತ ನೆನಪು. ಒಂದೇ ರಾತ್ರಿ ಐದು ಜನರೊಂದಿಗೆ ಡೇಟಿಂಗ್ ಮಾಡಿ ನಾನ್ನೂರು ಡಾಲರ್ ಗಳಿಸಿದ್ದೆ. ಎಲ್ಲಿಂದ ತಂದೆ ಎಂದು ಅಜ್ಜಿ ಕೇಳಲೂ ಇಲ್ಲ, ನಾನು ಹೇಳಲೂ ಇಲ್ಲ. ನಮ್ಮಮ್ಮನೂ ಹೀಗೇ ತರುತಿದ್ದಳೆಂದು ನನಗೆ ತಡವಾಗಿ ತಿಳಿಯಿತಷ್ಟೇ ಎನ್ನುತ್ತಾಳೆ. ವಯಸ್ಸು ಕಡಿಮೆ ಇದ್ದಷ್ಟೂ ಬೆಲೆ ಹೆಚ್ಚು ಎಂದು ನನಗೆ ತಿಳಿದದ್ದೂ ಕೂಡ ನಂತರದಲ್ಲಿ ಎಂದು ನಗುತ್ತಾಳೆ ಅವಳು.ಆರು ತಿಂಗಳು ಜೀವನ ಚೆನ್ನಾಗಿಯೇ ಇತ್ತು. ಹುಲ್ಲಿನ ಹಾಸಿನಿಂದ ಹಿಡಿದು ಸ್ಟಾರ್ ಹೋಟೆಲ್ನ ಸುಪ್ಪತ್ತಿಗೆಯವರೆಗೆ ಎಲ್ಲವನ್ನೂ ಅನುಭವಿಸಿಯಾಗಿತ್ತು. ಭೂಗತ ಮಾರುಕಟ್ಟೆಯಲ್ಲಿ ಎಲ್ಲರಿಗೂ ಕಣ್ಣಾಗಿಹೋದೆ.ಮುಂದೊಂದು ದಿನ ಪಿಂಪ್ ಗಳ ದಾಳಿಗೊಳಗಾಗಿ ದೈಹಿಕವಾಗಿ ನರಕ ದರ್ಶನವಾಯ್ತು. ಅಲ್ಲಿನ ಕೆಲವು ಘಟನೆಗಳನ್ನ ಮರೆಯಲೆತ್ನಿಸಿದಷ್ಟೂ ಎಷ್ಟೋ ದಿನಗಳು ದುಸ್ವಪ್ನವಾಗಿ ಕಾಡುತ್ತಲೇ ಇದ್ದವು.ನಂತರ ಪಿಂಪ್ ನಿಂದ ಪಿಂಪ್ ಗೆ ಕೈಬದಲಾವಣೆಯಾಗಿ ಪೂರ್ಣ ಮಟ್ಟದ ಪ್ರೊಫೆಷನಲ್ ಆದೆ ಎನ್ನುತ್ತಾಳೆ ನತದೃಷ್ಟೆ ಬ್ರೆoಡಾ.ಅವಳ ವೃತ್ತಿ ಬದುಕು ಧಾರುಣವಾಗಿ ಅಂತ್ಯವಾದ ಮೇಲೆ "ಜೆನೆಸಿಸ್ ಹೌಸ್ " ಎಂಬ ಸಮಾಜ ಸುಧಾರಣಾ ಸಂಘದ ಆಶ್ರಯದಲ್ಲಿ ಚೇತರಿಸಿಕೊಳ್ಳುತ್ತಾಳೆ. "ಎಡ್ವಿನ್ ಗೇಟ್ಲಿ " ಸ್ಥಾಪಿಸಿದ ಈ ಸಂಸ್ಥೆ ಚಿಕಾಗೋ ನಗರದ ಸಂತ್ರಸ್ತ ಮಹಿಳೆಯರ ಆಶ್ರಯ ತಾಣ. ಬ್ರೆoಡಾಗೀಗ ಜ್ಞಾನೋದಯವಾಗಿದೆ. ಮುಂದಿನ ಅವಳ ಬದುಕು, ಅವಳಂತೆಯೇ ದೌರ್ಜನ್ಯಕ್ಕೀಡಾಗಿ ನೆಲೆ ಕಳೆದುಕೊಂಡ ಸಂತ್ರಸ್ತೆಯರ ಬೆಂಬಲವಾಗಿ ಸವೆಸಿದ ಅಮೋಘ ಸಾಧನೆಯಾಗಿ ದಾಖಲಾಗುತ್ತದೆ. "ಡ್ರೀಮ್ ಕ್ಯಾಚರ್ " ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿ, ಅದರಡಿಯಲ್ಲಿ ಬಲುದೊಡ್ಡ ಮಟ್ಟದ ಸುಧಾರಣೆಗಳನ್ನು ತಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆಯುತ್ತಾಳೆ. ಅವಳೀಗ ಮಹಿಳಾ ಶಾಲಾ ಕಾಲೇಜುಗಳಿಗೆ ಭೇಟಿ ಕೊಡುತ್ತಾಳೆ. ಹರೆಯದ ಮತ್ತಿನಲ್ಲಿ ಏನೆಲ್ಲಾ ಅವಘಡಗಳಾಗುತ್ತವೆ, ಅದು ಏನೆಲ್ಲಾ ಅನಾಹುತಗಳಿಗೆ ಕಾರಣವಾಗಬಹುದೆಂದು ಮನಮುಟ್ಟುವಂತೆ ವಿವರಿಸಿ ಹೇಳುತ್ತಾಳೆ. ಜೈಲಿನ ಮಹಿಳಾ ಖೈದಿಗಳೊಂದಿಗೆ ಚರ್ಚಿಸುತ್ತಾಳೆ. ಸಾಮಾನ್ಯವಾಗಿ ಮಹಿಳೆಯರು ಅವರ ಬಾಯ್ ಫ್ರೆಂಡ್ಸ್ ಗಳ ಜೊತೆಯಲ್ಲಿ ಸೆಕ್ಸ್ ಮಾಡುವುದನ್ನೊ, ಅವರಿಂದ ಹೊಡೆತ ತಿನ್ನುವುದನ್ನೊ ನೋಡಿದ ಶೋಡಶಿ ಪುತ್ರಿಯರು ಆತ್ಮವಿಶ್ವಾಸವನ್ನೇ ಕಳೆದುಕೊಂಡು ಕುಡಿತದ ಹಾಗೂ ಡ್ರಗ್ಸ್ ದಾಸರಾಗುತ್ತಾರೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡ ಪಿಂಪ್ ಗಳು ಅವರನ್ನು ಹಿಡಿದು ಪಳಗಿಸುತ್ತಾರೆ ಎಂಬಂತ ಮಾಹಿತಿಗಳೆಲ್ಲವೂ ಅವಳ ಮಾತಿನಲ್ಲಿರುತ್ತವೆ.ಅವಳು ಚಿಕಾಗೋ ನಗರದ ಅಪಾಯಕಾರಿ ರಸ್ತೆಗಳಲ್ಲಿ ತಿರುಗುತ್ತಾಳೆ.ರಸ್ತೆಬದಿ ನಿಂತಿರುವ ಬೆಲೆವೆಣ್ಣುಗಳಿಗೆ ತಿಳಿಹೇಳುತ್ತಾಳೆ. ಅವರ ಮನವೊಲಿಸಲು ಸಾಧ್ಯವಾಗದಿದ್ದರೆ ಕನಿಷ್ಠ ಉಚಿತ ಕಾಂಡೊಮ್ ಗಳನ್ನು ಹಂಚುತ್ತಾಳೆ.ಈ ಸಾಕ್ಷ್ಯಚಿತ್ರದ ಆಸಕ್ತಿದಾಯಕ ವಿಷಯವೆಂದರೆ, ಅವಳು ಹೋದೆಡೆಯೆಲ್ಲಾ ಜೊತೆಯಲ್ಲಿ ಅವಳ ಮಾಜಿ ಪಿಂಪ್ ಹೋಮರ್ಸ್ ನನ್ನು ಜೊತೆಗೆ ಕರೆದೊಯ್ಯುತ್ತಾಳೆ.ಅವನೀಗ ಬ್ರೆoಡಾಳಿಂದ ನೈತಿಕ ಸುಧಾರಣೆಯನ್ನು ಕಂಡಿದ್ದಾನೆ. ಪಿಂಪ್ ಗಳು ಹೇಗೆಲ್ಲ ಹುಡುಗಿಯರನ್ನು ಟ್ರ್ಯಾಪ್ ಮಾಡುತ್ತಾರೆಂದು ಎಚ್ಚರಿಸುತ್ತಾನೆ. ಒಂದೊಮ್ಮೆ ಅವರ ಕೈಗೆ ಸಿಕ್ಕಿಹಾಕಿಕೊಂಡರೆ ಎಂತಹ ಕ್ರೂರ ಪರಿಸ್ಥಿತಿಗೆ ತಳ್ಳಲ್ಪಡುತ್ತಾರೆ ಎಂಬುದನ್ನು ವಿವರಿಸುತ್ತಾನೆ.ಅನಿವಾರ್ಯವಾಗೋ,ಆಕರ್ಷಣೆಗೆ ಒಳಗಾಗೋ, ಬದುಕನ್ನೇ ಕಳೆದುಕೊಂಡ ಸಾವಿರಾರು ಹೆಣ್ಣುಗಳ ಜೀವನದ ಪುನರನಿರ್ಮಾಣ ಕೆಲಸದಲ್ಲಿ ಈ ಸಂಸ್ಥೆ ಬಲು ದೊಡ್ಡ ಪಾತ್ರ ವಹಿಸಿದೆ.ಅಮೇರಿಕಾದಲ್ಲಿ ಪ್ರತಿ ವರ್ಷ ಒಂದು ಲಕ್ಷ ಮಹಿಳೆಯರು ಹಾಗೂ ಮಕ್ಕಳ ಕಳ್ಳಸಾಗಣಿಕೆ ನಡೆಯುತ್ತದೆ ಎಂಬ ಮಾಹಿತಿಯಿದೆ. ಮೂಲಭೂತ ವ್ಯವಸ್ಥೆಯಲ್ಲಿ ಸುಧಾರಣೆಯಾಗದೆ, ಕಾನೂನಾತ್ಮಕವಾಗಿ ಅದನ್ನು ತಡೆಗಟ್ಟುವುದು ಅಸಾಧ್ಯದ ಮಾತು. ಇಂಥ ಹೊತ್ತಿನಲ್ಲಿ ಬ್ರೆoಡಾ ಮತ್ತು ಅವಳ ಡ್ರೀಮ್ ಕ್ಯಾಚರ್ ಸಂಸ್ಥೆ ತುಂಬಾ ಪ್ರಸ್ತುತವೆನಿಸುತ್ತದೆ. (ಗಹನ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವಿದು - ಪ್ರಕಟಿಸಿದ ಪತ್ರಿಕೆಯ ಎಲ್ಲಾ ಸಿಬ್ಬಂದಿ ವರ್ಗಕ್ಕೂ ಧನ್ಯವಾದಗಳು ) - ಗಂಧರ್ವ ರಾಯರಾವುತ್.

2 hrs ago
user_Press Narashimha swamy SN
Press Narashimha swamy SN
Cultural landmark ಶಿಕಾರಿಪುರ, ಶಿವಮೊಗ್ಗ, ಕರ್ನಾಟಕ•
2 hrs ago
a4ff93ab-105e-41a7-8c78-0cec08b8b73d

More news from ಕರ್ನಾಟಕ and nearby areas
  • ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಮಲೆನಾಡಿನ ರೈತರು ಆತಂಕ ಪಡುವ ಅಗತ್ಯವಿಲ್ಲ: ಸಚಿವ ಮಧು ಬಂಗಾರಪ್ಪ ಕಸ್ತೂರಿ ರಂಗನ್ ಸಮಿತಿ ವರದಿಯ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಈಗಾಗಲೇ ವಿಧಾನಸಭೆಯಲ್ಲಿ ಈ ವರದಿಯನ್ನು ತಿರಸ್ಕರಿಸುವ ತೀರ್ಮಾನವನ್ನು ತೆಗೆದುಕೊಂಡು ಕೇಂದ್ರಕ್ಕೆ ಕಳುಹಿಸಿರುವುದರಿಂದ ಈ ವರದಿಯ ಜಾರಿಗೆ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ರಾಜ್ಯ ಸರ್ಕಾರ ಈ ವರದಿಯನ್ನು ತಿರಸ್ಕರಿಸಿರುವುದಾಗಿ ಕೇಂದ್ರಕ್ಕೆ ಅಧಿಕೃತವಾಗಿ ಮಾಹಿತಿ ನೀಡಿದ್ದರೂ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈಗ ಮತ್ತೆ ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ಪ್ರದೇಶ (ESA) ಗುರುತಿಸಿ, ಹೊಸ ಕರಡು ಅಧಿಸೂಚನೆ ಪ್ರಕಟಿಸಿದೆ. ಇದು ಖಂಡನೀಯ. ಈ ಕರಡು ಅಧಿಸೂಚನೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಈಗಾಗಲೇ ಈ ವಿಷಯದ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ತೀರ್ಮಾನ ತೆಗೆದುಕೊಂಡಿದೆ. ಅರಣ್ಯ ಸಚಿವರಾದ ಶ್ರೀ ರಾಮಲಿಂಗರೆಡ್ಡಿಯವರು ಸಹ ವಿಧಾನಸಭೆಯಲ್ಲಿಯೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ಕಸ್ತೂರಿ ರಂಗನ್ ಸಮಿತಿ ವರದಿ ಹೇಳಿರುವಂತೆಯೇ ಕರ್ನಾಟಕದ ರಾಜ್ಯದ 1,576 ಗ್ರಾಮ ವ್ಯಾಪ್ತಿಯ 20,668 ಚದರ ಕಿ.ಮೀ. ಪ್ರದೇಶವನ್ನು ʻಪರಿಸರ ಸೂಕ್ಷ್ಮ ಪ್ರದೇಶʼ ಎಂದು ಈ ಕರಡು ಅಧಿಸೂಚನೆಯಲ್ಲಿ ಗುರುತಿಸಲಾಗಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ 484 ಗ್ರಾಮಗಳು ಪ್ರಸ್ತಾವಿತ ಪಟ್ಟಿಯಲ್ಲಿವೆ. ಜನವಸತಿ ಪ್ರದೇಶ, ಕೃಷಿ ಭೂಮಿ ಇರುವ ಪ್ರದೇಶವನ್ನೂ ʻಪರಿಸರ ಸೂಕ್ಷ್ಮ ಪ್ರದೇಶʼ ಎಂದು ಗುರುತಿಸಿರುವುದರಿಂದ ಮಲೆನಾಡಿನ ರೈತರು ಸಹಜವಾಗಿಯೇ ಆತಂಕಗೊಂಡಿದ್ದಾರೆ. ಆದರೆ ಸರ್ಕಾರ ಈ ವರದಿಯ ಜಾರಿಗೆ ಅವಕಾಶ ನೀಡುವುದಿಲ್ಲ. ಈ ಕರಡು ಅಧಿಸೂಚನೆಯನ್ನು ವಿರೋಧಿಸಲಿದೆ. ಹೀಗಾಗಿ ಮಲೆನಾಡಿನ ಜನರು ಆತಂಕ ಪಡುವ ಅಗತ್ಯ ಇಲ್ಲ. ಮಲೆನಾಡಿನ ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮಕ್ಕೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ನಮ್ಮ ಸರ್ಕಾರ ರೈತರ ಪರವಾಗಿದೆ. ಈ ವಿಚಾರವನ್ನು ಈಗಾಗಲೇ ನಮ್ಮ ಪಕ್ಷದ ಹಿರಿಯ ನಾಯಕರಾದ ಶ್ರೀ ಆರ್.ವಿ. ದೇಶಪಾಂಡೆ, ಶಾಸಕ ಮಿತ್ರರಾದ ಶ್ರೀ ಭೀಮಣ್ಣ ಟಿ. ನಾಯಕ್, ಶ್ರೀ ಟಿ.ಡಿ. ರಾಜೇಗೌಡ, ಶ್ರೀ ಎಚ್. ಡಿ. ತಮ್ಮಯ್ಯ ಹಾಗೂ ಶ್ರೀ ಎ.ಎಸ್. ಪೊನ್ನಣ್ಣ ಅವರು ಸದನದ ಒಳಗೂ ಮತ್ತು ಹೊರಗೆ ಪ್ರಸ್ತಾಪಿಸಿ ಚರ್ಚಿಸಿದ್ದಾರೆ. ಸರ್ಕಾರ ಈ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಕೆ ನೀಡಿದೆ. ವಿಪಕ್ಷ ನಾಯಕರು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ತೀರ್ಮಾನವನ್ನು ಖಂಡಿಸುವುದಕ್ಕೆ ಬದಲಾಗಿ ಗೊಂದಲ ಉಂಟುಮಾಡುವ ಹೇಳಿಕೆ ನೀಡುತ್ತಿದ್ದಾರೆ. ಅನಗತ್ಯವಾಗಿ ಮಲೆನಾಡು ಭಾಗದ ರೈತರಲ್ಲಿ ಆತಂಕ ಸೃಷ್ಟಿಸುತ್ತಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಅತ್ಯಂತ ಮಹತ್ವದ ಈ ವಿಷಯದ ಕುರಿತು ಚರ್ಚೆಗೆ ಮುಂದಾಗುವ ಬದಲು ಗದ್ದಲ ನಡೆಸಿ ಅಧಿವೇಶನದ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದ ಅವರಿಗೆ ಜನರ ಸಮಸ್ಯೆಗಳ ಬಗ್ಗೆ ಕಾಳಜಿಯೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ವಿಚಾರವಾಗಿ ನಾನು ವೈಯಕ್ತಿಕವಾಗಿಯೂ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳು ಸಹ ಈ ಕರಡು ಅಧಿಸೂಚನೆಯನ್ನು ವಿರೋಧಿಸುವ ತೀರ್ಮಾನ ಪ್ರಕಟಿಸಿದ್ದಾರೆ. ರೈತರ ಜೊತೆ ನಿಲ್ಲುವುದಾಗಿ ಅಭಯ ನೀಡಿದ್ದಾರೆ. ಹೀಗಾಗಿ ಮಲೆನಾಡಿನ ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಆದ್ದರಿಂದ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ರೈತರು ಯಾವುದೇ ಆತಂಕ ಪಡಬಾರದು. ನಮ್ಮ ತಂದೆ ಎಸ್. ಬಂಗಾರಪ್ಪ ಅವರು ಸದಾ ರೈತರು ಹಾಗೂ ಜನಸಾಮಾನ್ಯರ ಪರವಾಗಿ ನಿಂತವರು. ಅವರ ಆಶಯಗಳನ್ನು ಎತ್ತಿಹಿಡಿಯುವುದೇ ನನ್ನ ಗುರಿ. ಅವರ ಮಾರ್ಗದಲ್ಲಿಯೇ ನಾನು ನಡೆಯುತ್ತಿದ್ದೇನೆ. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ.
    1
    ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಮಲೆನಾಡಿನ ರೈತರು ಆತಂಕ ಪಡುವ ಅಗತ್ಯವಿಲ್ಲ: ಸಚಿವ ಮಧು ಬಂಗಾರಪ್ಪ
ಕಸ್ತೂರಿ ರಂಗನ್ ಸಮಿತಿ ವರದಿಯ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಈಗಾಗಲೇ ವಿಧಾನಸಭೆಯಲ್ಲಿ ಈ ವರದಿಯನ್ನು ತಿರಸ್ಕರಿಸುವ ತೀರ್ಮಾನವನ್ನು ತೆಗೆದುಕೊಂಡು ಕೇಂದ್ರಕ್ಕೆ ಕಳುಹಿಸಿರುವುದರಿಂದ ಈ ವರದಿಯ ಜಾರಿಗೆ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ರಾಜ್ಯ ಸರ್ಕಾರ ಈ ವರದಿಯನ್ನು ತಿರಸ್ಕರಿಸಿರುವುದಾಗಿ ಕೇಂದ್ರಕ್ಕೆ ಅಧಿಕೃತವಾಗಿ ಮಾಹಿತಿ ನೀಡಿದ್ದರೂ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈಗ ಮತ್ತೆ ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ಪ್ರದೇಶ (ESA) ಗುರುತಿಸಿ, ಹೊಸ ಕರಡು ಅಧಿಸೂಚನೆ ಪ್ರಕಟಿಸಿದೆ. ಇದು ಖಂಡನೀಯ. ಈ ಕರಡು ಅಧಿಸೂಚನೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಈಗಾಗಲೇ ಈ ವಿಷಯದ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ತೀರ್ಮಾನ ತೆಗೆದುಕೊಂಡಿದೆ. ಅರಣ್ಯ ಸಚಿವರಾದ ಶ್ರೀ ರಾಮಲಿಂಗರೆಡ್ಡಿಯವರು ಸಹ ವಿಧಾನಸಭೆಯಲ್ಲಿಯೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ.
ಕಸ್ತೂರಿ ರಂಗನ್ ಸಮಿತಿ ವರದಿ ಹೇಳಿರುವಂತೆಯೇ  ಕರ್ನಾಟಕದ ರಾಜ್ಯದ 1,576 ಗ್ರಾಮ ವ್ಯಾಪ್ತಿಯ 20,668 ಚದರ ಕಿ.ಮೀ. ಪ್ರದೇಶವನ್ನು ʻಪರಿಸರ ಸೂಕ್ಷ್ಮ ಪ್ರದೇಶʼ ಎಂದು ಈ ಕರಡು ಅಧಿಸೂಚನೆಯಲ್ಲಿ ಗುರುತಿಸಲಾಗಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ 484 ಗ್ರಾಮಗಳು ಪ್ರಸ್ತಾವಿತ ಪಟ್ಟಿಯಲ್ಲಿವೆ. ಜನವಸತಿ ಪ್ರದೇಶ, ಕೃಷಿ ಭೂಮಿ ಇರುವ ಪ್ರದೇಶವನ್ನೂ ʻಪರಿಸರ ಸೂಕ್ಷ್ಮ ಪ್ರದೇಶʼ ಎಂದು ಗುರುತಿಸಿರುವುದರಿಂದ  ಮಲೆನಾಡಿನ ರೈತರು ಸಹಜವಾಗಿಯೇ ಆತಂಕಗೊಂಡಿದ್ದಾರೆ. ಆದರೆ ಸರ್ಕಾರ ಈ ವರದಿಯ ಜಾರಿಗೆ ಅವಕಾಶ ನೀಡುವುದಿಲ್ಲ. ಈ ಕರಡು ಅಧಿಸೂಚನೆಯನ್ನು ವಿರೋಧಿಸಲಿದೆ. ಹೀಗಾಗಿ ಮಲೆನಾಡಿನ ಜನರು ಆತಂಕ ಪಡುವ ಅಗತ್ಯ ಇಲ್ಲ.
ಮಲೆನಾಡಿನ ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮಕ್ಕೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ನಮ್ಮ ಸರ್ಕಾರ ರೈತರ ಪರವಾಗಿದೆ. ಈ ವಿಚಾರವನ್ನು ಈಗಾಗಲೇ ನಮ್ಮ ಪಕ್ಷದ ಹಿರಿಯ ನಾಯಕರಾದ ಶ್ರೀ ಆರ್.ವಿ. ದೇಶಪಾಂಡೆ, ಶಾಸಕ ಮಿತ್ರರಾದ ಶ್ರೀ ಭೀಮಣ್ಣ ಟಿ. ನಾಯಕ್, ಶ್ರೀ ಟಿ.ಡಿ. ರಾಜೇಗೌಡ, ಶ್ರೀ ಎಚ್. ಡಿ. ತಮ್ಮಯ್ಯ ಹಾಗೂ ಶ್ರೀ ಎ.ಎಸ್. ಪೊನ್ನಣ್ಣ ಅವರು ಸದನದ ಒಳಗೂ ಮತ್ತು ಹೊರಗೆ ಪ್ರಸ್ತಾಪಿಸಿ ಚರ್ಚಿಸಿದ್ದಾರೆ. ಸರ್ಕಾರ ಈ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಕೆ ನೀಡಿದೆ.
ವಿಪಕ್ಷ ನಾಯಕರು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ತೀರ್ಮಾನವನ್ನು ಖಂಡಿಸುವುದಕ್ಕೆ ಬದಲಾಗಿ ಗೊಂದಲ ಉಂಟುಮಾಡುವ ಹೇಳಿಕೆ ನೀಡುತ್ತಿದ್ದಾರೆ. ಅನಗತ್ಯವಾಗಿ ಮಲೆನಾಡು ಭಾಗದ ರೈತರಲ್ಲಿ ಆತಂಕ ಸೃಷ್ಟಿಸುತ್ತಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಅತ್ಯಂತ ಮಹತ್ವದ ಈ ವಿಷಯದ ಕುರಿತು ಚರ್ಚೆಗೆ ಮುಂದಾಗುವ ಬದಲು ಗದ್ದಲ ನಡೆಸಿ ಅಧಿವೇಶನದ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದ ಅವರಿಗೆ ಜನರ ಸಮಸ್ಯೆಗಳ ಬಗ್ಗೆ ಕಾಳಜಿಯೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಈ ವಿಚಾರವಾಗಿ ನಾನು ವೈಯಕ್ತಿಕವಾಗಿಯೂ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳು ಸಹ ಈ ಕರಡು ಅಧಿಸೂಚನೆಯನ್ನು ವಿರೋಧಿಸುವ ತೀರ್ಮಾನ ಪ್ರಕಟಿಸಿದ್ದಾರೆ. ರೈತರ ಜೊತೆ ನಿಲ್ಲುವುದಾಗಿ ಅಭಯ ನೀಡಿದ್ದಾರೆ. ಹೀಗಾಗಿ ಮಲೆನಾಡಿನ ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಆದ್ದರಿಂದ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ರೈತರು ಯಾವುದೇ ಆತಂಕ ಪಡಬಾರದು.
ನಮ್ಮ ತಂದೆ ಎಸ್. ಬಂಗಾರಪ್ಪ ಅವರು ಸದಾ ರೈತರು ಹಾಗೂ ಜನಸಾಮಾನ್ಯರ ಪರವಾಗಿ ನಿಂತವರು. ಅವರ ಆಶಯಗಳನ್ನು ಎತ್ತಿಹಿಡಿಯುವುದೇ ನನ್ನ ಗುರಿ. ಅವರ ಮಾರ್ಗದಲ್ಲಿಯೇ ನಾನು ನಡೆಯುತ್ತಿದ್ದೇನೆ. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ.
    user_SANDEEP U. L
    SANDEEP U. L
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    5 hrs ago
  • ಆಂಜನೇಯ ದೇವಾಲಯದ ಆವರಣದಲ್ಲಿ ಅಪವಿತ್ರ ಕೃತ್ಯ – ಸ್ವಯಂಪ್ರೇರಿತ ಬಂದ್‌ಗೆ ಅಭೂತಪೂರ್ವ ಬೆಂಬಲ; ಪೊಲೀಸ್ ಇಲಾಖೆಯ ಧೋರಣೆಗೆ ಬಿಜೆಪಿ ಆಕ್ರೋಶ ಆಂಜನೇಯ ದೇವಾಲಯದ ಆವರಣದಲ್ಲಿ ಅಪವಿತ್ರ ಕೃತ್ಯ – ಸ್ವಯಂಪ್ರೇರಿತ ಬಂದ್‌ಗೆ ಅಭೂತಪೂರ್ವ ಬೆಂಬಲ; ಪೊಲೀಸ್ ಇಲಾಖೆಯ ಧೋರಣೆಗೆ ಬಿಜೆಪಿ ಆಕ್ರೋಶ ಶಿಗ್ಗಾವಿ: ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಅನ್ಯ ಕೋಮಿನ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿ, ಅಪವಿತ್ರಗೊಳಿಸಿದ ಘಟನೆಯನ್ನು ಖಂಡಿಸಿ ಪ್ರಮೋದ್ ಮುತಾಲಿಕ್ ಹಾಗೂ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ನೀಡಿದ್ದ ಬಂದ ಕರೆಗೆ ಸಾರ್ವಜನಿಕರು ಹಾಗೂ ವರ್ತಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಬಿಜೆಪಿ ತಾಲೂಕಾ ಅಧ್ಯಕ್ಷ ವಿಶ್ವನಾಥ ಹರವಿ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದಲ್ಲಿ ನಡೆದ ಘಟನೆಯಿಂದ ಭಕ್ತಾದಿಗಳ ಮನಸ್ಸಿನಲ್ಲಿ ಆತಂಕ ಉಂಟಾಗಿದ್ದು, ಶಾಂತಿಯುತವಾಗಿ ಬಂದ್ ಆಚರಿಸುವ ಮೂಲಕ, ಆರೋಪಿಗೆ ಕಠಿಣಾತಿ ಕಠೀಣ ಶಿಕ್ಷೆ ಯಾಗಲೇಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಅಪರಾಧಿಗೆ ರಕ್ಷಣೆ ನೀಡುವ ಹುನ್ನಾರ ನಡೆದರೆ ಮತ್ತು ತಾಲೂಕಿನಲ್ಲಿ ಅವನಿಗೆ ನೀಡಿರುವ ಸೌಲತ್ತುಗಳನ್ನು ಹಿಂಪಡೆದು ಗಡಿಪಾರು ಮಾಡದಿದ್ದರೆ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನರಹರಿ ಕಟ್ಟಿ ಮಾತನಾಡಿ, ಘಟನೆಗೆ ಸಂಬಂಧವಿಲ್ಲದ ಸಣ್ಣ ಹುಡುಗರು, ಬಿಜೆಪಿ ನಾಯಕರು ಸೇರಿದಂತೆ ಇತರರಿಗೆ ಪೊಲೀಸ್ ನೋಟಿಸ್ ಜಾರಿ ಮಾಡಿ ನಮ್ಮ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಲು ಪೊಲೀಸರ ಮೂಲ ಪ್ರಯತ್ನಿಸಲಾಗಿದ್ದು ತೀವ್ರ ಖಂಡನೀಯ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಪೊಲೀಸ್ ಇಲಾಖೆಯು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜ್ಯ ನಾಯಕರ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ರೇಣಕನಗೌಡ ಪಾಟೀಲ, ಅನೀಲ ಸಾತಣ್ಣನವರ ಸೇರಿದಂತೆ ಇತರರಿದ್ದರು.
    4
    ಆಂಜನೇಯ ದೇವಾಲಯದ ಆವರಣದಲ್ಲಿ ಅಪವಿತ್ರ ಕೃತ್ಯ – ಸ್ವಯಂಪ್ರೇರಿತ ಬಂದ್‌ಗೆ ಅಭೂತಪೂರ್ವ ಬೆಂಬಲ; ಪೊಲೀಸ್ ಇಲಾಖೆಯ ಧೋರಣೆಗೆ ಬಿಜೆಪಿ ಆಕ್ರೋಶ
ಆಂಜನೇಯ ದೇವಾಲಯದ ಆವರಣದಲ್ಲಿ ಅಪವಿತ್ರ ಕೃತ್ಯ – ಸ್ವಯಂಪ್ರೇರಿತ ಬಂದ್‌ಗೆ ಅಭೂತಪೂರ್ವ ಬೆಂಬಲ; ಪೊಲೀಸ್ ಇಲಾಖೆಯ ಧೋರಣೆಗೆ ಬಿಜೆಪಿ ಆಕ್ರೋಶ
ಶಿಗ್ಗಾವಿ: ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಅನ್ಯ ಕೋಮಿನ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿ, ಅಪವಿತ್ರಗೊಳಿಸಿದ ಘಟನೆಯನ್ನು ಖಂಡಿಸಿ ಪ್ರಮೋದ್ ಮುತಾಲಿಕ್ ಹಾಗೂ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ನೀಡಿದ್ದ ಬಂದ ಕರೆಗೆ ಸಾರ್ವಜನಿಕರು ಹಾಗೂ ವರ್ತಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಬಿಜೆಪಿ ತಾಲೂಕಾ ಅಧ್ಯಕ್ಷ ವಿಶ್ವನಾಥ ಹರವಿ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದಲ್ಲಿ ನಡೆದ ಘಟನೆಯಿಂದ ಭಕ್ತಾದಿಗಳ ಮನಸ್ಸಿನಲ್ಲಿ ಆತಂಕ ಉಂಟಾಗಿದ್ದು, ಶಾಂತಿಯುತವಾಗಿ ಬಂದ್ ಆಚರಿಸುವ ಮೂಲಕ, ಆರೋಪಿಗೆ ಕಠಿಣಾತಿ ಕಠೀಣ ಶಿಕ್ಷೆ ಯಾಗಲೇಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಅಪರಾಧಿಗೆ ರಕ್ಷಣೆ ನೀಡುವ ಹುನ್ನಾರ ನಡೆದರೆ ಮತ್ತು ತಾಲೂಕಿನಲ್ಲಿ ಅವನಿಗೆ ನೀಡಿರುವ ಸೌಲತ್ತುಗಳನ್ನು ಹಿಂಪಡೆದು ಗಡಿಪಾರು ಮಾಡದಿದ್ದರೆ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನರಹರಿ ಕಟ್ಟಿ ಮಾತನಾಡಿ, ಘಟನೆಗೆ ಸಂಬಂಧವಿಲ್ಲದ ಸಣ್ಣ ಹುಡುಗರು, ಬಿಜೆಪಿ ನಾಯಕರು ಸೇರಿದಂತೆ ಇತರರಿಗೆ ಪೊಲೀಸ್ ನೋಟಿಸ್ ಜಾರಿ ಮಾಡಿ ನಮ್ಮ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಲು ಪೊಲೀಸರ ಮೂಲ ಪ್ರಯತ್ನಿಸಲಾಗಿದ್ದು ತೀವ್ರ ಖಂಡನೀಯ. 
ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಪೊಲೀಸ್ ಇಲಾಖೆಯು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜ್ಯ ನಾಯಕರ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ರೇಣಕನಗೌಡ ಪಾಟೀಲ, ಅನೀಲ ಸಾತಣ್ಣನವರ ಸೇರಿದಂತೆ ಇತರರಿದ್ದರು.
    user_ವಿಶ್ವನಾಥ ಬಂಡಿವಡ್ಡರ
    ವಿಶ್ವನಾಥ ಬಂಡಿವಡ್ಡರ
    Local News Reporter ಹಾವೇರಿ, ಹಾವೇರಿ, ಕರ್ನಾಟಕ•
    21 hrs ago
  • ನಮ್ಮ ಚನ್ನಗಿರಿ ತಾಲ್ಲೂಕು ತುಮಕೊಸ್ ಅಧ್ಯಕ್ಷರು ಸಗಾರಪೇಟೆಯಲ್ಲಿ ನೂತನ ವಾಗಿ ಸೂಪರ್ ಮಾರ್ಕೆಟ್ ಉದ್ಘಾಟನೆ ನೆರವೇರಿಸಿದರು.
    1
    ನಮ್ಮ ಚನ್ನಗಿರಿ ತಾಲ್ಲೂಕು ತುಮಕೊಸ್ ಅಧ್ಯಕ್ಷರು ಸಗಾರಪೇಟೆಯಲ್ಲಿ ನೂತನ ವಾಗಿ ಸೂಪರ್ ಮಾರ್ಕೆಟ್ ಉದ್ಘಾಟನೆ ನೆರವೇರಿಸಿದರು.
    user_ಸುರೇಶ್ ಕೆ ಆರ್
    ಸುರೇಶ್ ಕೆ ಆರ್
    Farmer ಚನ್ನಗಿರಿ, ದಾವಣಗೆರೆ, ಕರ್ನಾಟಕ•
    17 min ago
  • ಈದ್ ಮಿಲಾದ್ ಸಂಭ್ರಮದ ಆಚರಣೆ : ರಕ್ತದಾನ, ಅನ್ನದಾನ ಸೇರಿದಂತೆ ವಿವಿಧ ಸೇವಾ ಕಾರ್ಯಗಳು. ಯುವ ಮುಖಂಡ ಬಿ.ಎಸ್ ಗಣೇಶ್ ಬಾಗಿ ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ದೇಶಪ್ರೇಮಿ ಟಿಪ್ಪು ಸುಲ್ತಾನ್ ಯುವಕರ ಸಂಘದಿಂದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪ ಸಾವಿರಾರು ಮಂದಿಗೆ ಮಜ್ಜಿಗೆ ವಿತರಿಸಲಾಯಿತು. ಯುವ ಮುಖಂಡ ಬಿ.ಎಸ್ ಗಣೇಶ್ ಸೇವಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಸೇವಾ ಕಾರ್ಯವನ್ನು ಅಭಿನಂದಿಸಿದರು. ಇದೆ ಸಂದರ್ಭದಲ್ಲಿ ಬಡಮಹಿಳೆಯರಿಗೆ ಸೀರೆ ಮತ್ತು ರವಿಕೆ ವಿತರಿಸಲಾಯಿತು.  ಅನ್ನದಾನ, ತಂಪು ಪಾನೀಯ ವಿತರಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಜರುಗಿದವು. ಮಧ್ಯಾಹ್ನ ಸುಮಾರು ೩.೩೦ ಸಮಯಕ್ಕೆ ಹೊಳೆಹೊನ್ನೂರು ವೃತ್ತದಿಂದ ಮರ್ಕಜೀ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಅಯೂಬ್ ಖಾನ್‌ರವರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಯಲ್ಲಿ ಮಹಮ್ಮದ್ ಫೈಗಂಬರರ ಜನ್ಮಸ್ಥಳ ಮೆಕ್ಕಾ-ಮದೀನಾ ಮಾದರಿಗಳು, ಹಸಿರು ದ್ವಜಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ಮಕ್ಕಳು, ಯುವಕರು, ವಯಸ್ಕರು ಬೇಧಭಾವವಿಲ್ಲದೆ ಅಬ್ಬರದ ಹಾಡಿನ ಸದ್ದಿಗೆ ಕುಣಿದು ಸಂಭ್ರಮಿಸಿದರು.   ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಮಹಾತ್ಮಗಾಂಧಿ ವೃತ್ತ ಮೂಲಕ ಸಾದತ್ ದರ್ಗಾವರೆಗೂ ಮೆರವಣಿಗೆ ನಡೆಯಿತು. ನಗರದ ವಿವಿಧೆಡೆಗಳ ಮಸೀದಿಗಳ ಧರ್ಮಗುರುಗಳು, ಆಡಳಿತ ಮಂಡಳಿಯವರು, ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಮುಖಂಡರು,  ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಮೆರವಣಿಗೆ ಹಿನ್ನಲೆಯಲ್ಲಿ ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಹಬ್ಬದ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚಿನ ಅಲಂಕಾರ ಕೈಗೊಳ್ಳಲಾಗಿತ್ತು.  ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಮಕ್ಕಳು, ಯುವಕರು, ವಯಸ್ಕರು ಬೇಧಭಾವವಿಲ್ಲದೆ ಅಬ್ಬರದ ಹಾಡಿನ ಸದ್ದಿಗೆ ಕುಣಿದು ಸಂಭ್ರಮಿಸಿದರು
    3
    ಈದ್ ಮಿಲಾದ್ ಸಂಭ್ರಮದ ಆಚರಣೆ : ರಕ್ತದಾನ, ಅನ್ನದಾನ ಸೇರಿದಂತೆ ವಿವಿಧ ಸೇವಾ ಕಾರ್ಯಗಳು. ಯುವ ಮುಖಂಡ ಬಿ.ಎಸ್ ಗಣೇಶ್ ಬಾಗಿ 

ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ದೇಶಪ್ರೇಮಿ ಟಿಪ್ಪು ಸುಲ್ತಾನ್ ಯುವಕರ ಸಂಘದಿಂದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪ ಸಾವಿರಾರು ಮಂದಿಗೆ ಮಜ್ಜಿಗೆ ವಿತರಿಸಲಾಯಿತು. ಯುವ ಮುಖಂಡ ಬಿ.ಎಸ್ ಗಣೇಶ್ ಸೇವಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಸೇವಾ ಕಾರ್ಯವನ್ನು ಅಭಿನಂದಿಸಿದರು.
ಇದೆ ಸಂದರ್ಭದಲ್ಲಿ ಬಡಮಹಿಳೆಯರಿಗೆ ಸೀರೆ ಮತ್ತು ರವಿಕೆ ವಿತರಿಸಲಾಯಿತು.  ಅನ್ನದಾನ, ತಂಪು ಪಾನೀಯ ವಿತರಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಜರುಗಿದವು.
ಮಧ್ಯಾಹ್ನ ಸುಮಾರು ೩.೩೦ ಸಮಯಕ್ಕೆ ಹೊಳೆಹೊನ್ನೂರು ವೃತ್ತದಿಂದ ಮರ್ಕಜೀ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಅಯೂಬ್ ಖಾನ್‌ರವರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಯಲ್ಲಿ ಮಹಮ್ಮದ್ ಫೈಗಂಬರರ ಜನ್ಮಸ್ಥಳ ಮೆಕ್ಕಾ-ಮದೀನಾ ಮಾದರಿಗಳು, ಹಸಿರು ದ್ವಜಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ಮಕ್ಕಳು, ಯುವಕರು, ವಯಸ್ಕರು ಬೇಧಭಾವವಿಲ್ಲದೆ ಅಬ್ಬರದ ಹಾಡಿನ ಸದ್ದಿಗೆ ಕುಣಿದು ಸಂಭ್ರಮಿಸಿದರು.  
ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಮಹಾತ್ಮಗಾಂಧಿ ವೃತ್ತ ಮೂಲಕ ಸಾದತ್ ದರ್ಗಾವರೆಗೂ ಮೆರವಣಿಗೆ ನಡೆಯಿತು. ನಗರದ ವಿವಿಧೆಡೆಗಳ ಮಸೀದಿಗಳ ಧರ್ಮಗುರುಗಳು, ಆಡಳಿತ ಮಂಡಳಿಯವರು, ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಮುಖಂಡರು,  ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಮೆರವಣಿಗೆ ಹಿನ್ನಲೆಯಲ್ಲಿ ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಹಬ್ಬದ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚಿನ ಅಲಂಕಾರ ಕೈಗೊಳ್ಳಲಾಗಿತ್ತು. 
ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಮಕ್ಕಳು, ಯುವಕರು, ವಯಸ್ಕರು ಬೇಧಭಾವವಿಲ್ಲದೆ ಅಬ್ಬರದ ಹಾಡಿನ ಸದ್ದಿಗೆ ಕುಣಿದು ಸಂಭ್ರಮಿಸಿದರು
    user_ಪ್ರವೀಣ್ ಅಧ್ಯಕ್ಷ NAYAKA
    ಪ್ರವೀಣ್ ಅಧ್ಯಕ್ಷ NAYAKA
    Local News Reporter Bhadravati, Shivamogga•
    21 hrs ago
  • ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ಲಿ ಪೂಜೆ ನೆರವೇರಿಸಿದ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ
    1
    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ಲಿ ಪೂಜೆ ನೆರವೇರಿಸಿದ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    1 hr ago
  • ಉತ್ತಮ ಗುಣಮಟ್ಟದ ಆಹಾರ ಸೇವಿಸಿ ಕಿಡ್ನಿ(ಮೂತ್ರಪಿಂಡ)ಖಾಯಿಲೆಯಿಂದ ದೂರವಿರಿ : ಡಾ.ಪ್ರಮೋದ್ ಕುಮಾರ್ ಜಗಳೂರು.25 ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮೂತ್ರಪಿಂಡ ಖಾಯಿಲೆಗೆ ಸಂಬಂಧಿಸಿದ ವೈಧ್ಯ ರೋಗಿಗಳ ಡೈಯಾಲೀಸಿಸ್ ಕೇಂದ್ರಕ್ಕೆ ಇತ್ತಿಚೇಗೆ ಭೇಟಿ ನೀಡಿ ಕಿಡ್ನಿ ವೈಪಲ್ಯ ರೋಗಿಗಳನ್ನು ಉದ್ದೇಶಿಸಿ ಮಾತನಾಡಿದರು. ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲೀಸಿಸ್ ಕೇಂದ್ರ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದು ಸಿಬ್ಬಂದಿಗಳು ಸಹ ರೋಗಿಗಳ ಮಧ್ಯೆ ಉತ್ತಮ ಬಾಂಧವ್ಯ ಹೊಂದಿದ್ದು ರೋಗಿಗಳು ಸಹ ಇವರ ಜೊತೆ ಸಹಕಾರ ನೀಡುವುದರಿಂದ ಯಾವುದೇ ತೊಂದೆರೆಯಿಲ್ಲ ಎಂದರು. ಜಿಲ್ಲೆಯಾದ್ಯಂತ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಲ್ಲಿ ಖಾಸಗಿ ಕಂಪನಿಯಿಂದ ನಡೆಯುತ್ತಿರುವ ಡಯಾಲೀಸ್ ಕೇಂದ್ರಗಳು ನಡೆಯುತ್ತಿವೆ ನಾವು ರೋಗಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದರು. ಕಿಡ್ನಿ ವೈಫ್ಯಲ್ಯಕ್ಜೆ ಮುಖ್ಯ ಲಕ್ಷಣಗಳು :ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ಇರುವಾಗ ಬೆನ್ನು, ಪಾರ್ಶ್ವ ಅಥವಾ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ಮತ್ತು ಅಲೆ ಅಲೆಯಾದ ನೋವು ಕಾಣಿಸಿಕೊಳ್ಳುವುದು ಮುಖ್ಯ ಲಕ್ಷಣವಾಗಿದೆ ಎಂದರು. ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದಲ್ಲಿ ಉಪ್ಪು ಮತ್ತು ಖನಿಜಗಳ ಗಟ್ಟಿಯಾದ ನಿಕ್ಷೇಪಗಳಾಗಿವೆ. ಈ ಕಲ್ಲುಗಳು ಸಾಮಾನ್ಯವಾಗಿ ಮೂತ್ರನಾಳವನ್ನು ಚಲಿಸಿದಾಗ ಅಥವಾ ಅಡ್ಡಿಪಡಿಸಿದಾಗ ಅಪಾರ ನೋವನ್ನು ಉಂಟುಮಾಡುತ್ತವೆ. ಮೂತ್ರಪಿಂಡದ ಕಲ್ಲುಗಳು ಗಾತ್ರದಲ್ಲಿ ಭಿನ್ನವಾಗಿರುತ್ತವೆ. ಕೆಲವು ಕಲ್ಲುಗಳು ಕೆಲವು ಮಿಮೀ ಗಾತ್ರದಲ್ಲಿರಬಹುದು, ಇನ್ನು ಕೆಲವು ಇಂಚುಗಳಷ್ಟು ಬೆಳೆಯಬಹುದು. ಕಿಡ್ನಿ ಕಲ್ಲುಗಳು ಸಾಕಷ್ಟು ಸಮಾನವಾಗಿ ಹರಡುತ್ತವೆ ಮತ್ತು ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುತ್ತವೆ. ಕಿಡ್ನಿ ಕಲ್ಲುಗಳನ್ನು ನಾಲ್ಕು ಪ್ರಮುಖ ವಿಧಗಳಾಗಿ ವಿಂಗಡಿಸಬಹುದು- ಕ್ಯಾಲ್ಸಿಯಂ ಕಲ್ಲುಗಳು, ಯೂರಿಕ್ ಆಸಿಡ್ ಕಲ್ಲುಗಳು, ಸ್ಟ್ರುವೈಟ್ ಕಲ್ಲುಗಳು ಮತ್ತು ಸಿಸ್ಟೈನ್ ಕಲ್ಲುಗಳು ಲಕ್ಷಣಗಳು ಎದ್ದು ಕಾಣುತ್ತವೆಂದರು. ಬೆನ್ನು, ಹೊಟ್ಟೆ ಅಥವಾ ಬದಿಯಲ್ಲಿ ನೋವು ಮೂತ್ರಪಿಂಡದ ಕಲ್ಲಿನ ನೋವು - ಇದನ್ನು ಮೂತ್ರಪಿಂಡದ ಕೊಲಿಕ್ ಎಂದೂ ಕರೆಯುತ್ತಾರೆ - ಇದು ಊಹಿಸಬಹುದಾದ ಅತ್ಯಂತ ತೀವ್ರವಾದ ನೋವಿನ ವಿಧಗಳಲ್ಲಿ ಒಂದಾಗಿದೆ ಎಂದರು. ಮೂತ್ರಪಿಂಡದ ಕಲ್ಲಿನ ನೋವು ಹೆಚ್ಚಾಗಿ ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ. ಕಲ್ಲು ಚಲಿಸಿದಂತೆ ನೋವು ಸ್ಥಳ ಮತ್ತು ತೀವ್ರತೆಯನ್ನು ಬದಲಾಯಿಸುತ್ತದೆ. ನೋವು ಆಗಾಗ್ಗೆ ಅಲೆಗಳಲ್ಲಿ ಬಂದು ಹೋಗುತ್ತದೆ, ಮೂತ್ರನಾಳವು ಕಲ್ಲನ್ನು ಹೊರಗೆ ತಳ್ಳಲು ಪ್ರಯತ್ನಿಸುವಾಗ ಸಂಕುಚಿತಗೊಳ್ಳುವುದರಿಂದ ಇದು ಇನ್ನಷ್ಟು ಹದಗೆಡುತ್ತದೆ. ಪ್ರತಿಯೊಂದು ಅಲೆಯು ಕೆಲವು ನಿಮಿಷಗಳ ಕಾಲ ಇರುತ್ತದೆ, ಕಣ್ಮರೆಯಾಗಬಹುದು ಮತ್ತು ನಂತರ ಮತ್ತೆ ಬರಬಹುದು ಎಂದರು.
    2
    ಉತ್ತಮ ಗುಣಮಟ್ಟದ ಆಹಾರ ಸೇವಿಸಿ ಕಿಡ್ನಿ(ಮೂತ್ರಪಿಂಡ)ಖಾಯಿಲೆಯಿಂದ ದೂರವಿರಿ : ಡಾ.ಪ್ರಮೋದ್ ಕುಮಾರ್
ಜಗಳೂರು.25
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ  ಮೂತ್ರಪಿಂಡ ಖಾಯಿಲೆಗೆ ಸಂಬಂಧಿಸಿದ ವೈಧ್ಯ ರೋಗಿಗಳ ಡೈಯಾಲೀಸಿಸ್ ಕೇಂದ್ರಕ್ಕೆ ಇತ್ತಿಚೇಗೆ ಭೇಟಿ ನೀಡಿ ಕಿಡ್ನಿ ವೈಪಲ್ಯ ರೋಗಿಗಳನ್ನು ಉದ್ದೇಶಿಸಿ ಮಾತನಾಡಿದರು.
ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ  ಡಯಾಲೀಸಿಸ್ ಕೇಂದ್ರ ಅತ್ಯುತ್ತಮ
ಕಾರ್ಯನಿರ್ವಹಣೆ  ಮಾಡುತ್ತಿದ್ದು ಸಿಬ್ಬಂದಿಗಳು ಸಹ ರೋಗಿಗಳ ಮಧ್ಯೆ ಉತ್ತಮ ಬಾಂಧವ್ಯ ಹೊಂದಿದ್ದು ರೋಗಿಗಳು ಸಹ ಇವರ ಜೊತೆ ಸಹಕಾರ ನೀಡುವುದರಿಂದ ಯಾವುದೇ ತೊಂದೆರೆಯಿಲ್ಲ ಎಂದರು.
ಜಿಲ್ಲೆಯಾದ್ಯಂತ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಲ್ಲಿ ಖಾಸಗಿ ಕಂಪನಿಯಿಂದ ನಡೆಯುತ್ತಿರುವ ಡಯಾಲೀಸ್ ಕೇಂದ್ರಗಳು ನಡೆಯುತ್ತಿವೆ ನಾವು ರೋಗಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದರು.
ಕಿಡ್ನಿ ವೈಫ್ಯಲ್ಯಕ್ಜೆ ಮುಖ್ಯ ಲಕ್ಷಣಗಳು :ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ಇರುವಾಗ ಬೆನ್ನು, ಪಾರ್ಶ್ವ ಅಥವಾ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ಮತ್ತು ಅಲೆ ಅಲೆಯಾದ ನೋವು ಕಾಣಿಸಿಕೊಳ್ಳುವುದು ಮುಖ್ಯ ಲಕ್ಷಣವಾಗಿದೆ ಎಂದರು.
ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದಲ್ಲಿ ಉಪ್ಪು ಮತ್ತು ಖನಿಜಗಳ ಗಟ್ಟಿಯಾದ ನಿಕ್ಷೇಪಗಳಾಗಿವೆ. ಈ ಕಲ್ಲುಗಳು ಸಾಮಾನ್ಯವಾಗಿ ಮೂತ್ರನಾಳವನ್ನು ಚಲಿಸಿದಾಗ ಅಥವಾ ಅಡ್ಡಿಪಡಿಸಿದಾಗ ಅಪಾರ ನೋವನ್ನು ಉಂಟುಮಾಡುತ್ತವೆ. 
ಮೂತ್ರಪಿಂಡದ ಕಲ್ಲುಗಳು ಗಾತ್ರದಲ್ಲಿ ಭಿನ್ನವಾಗಿರುತ್ತವೆ. ಕೆಲವು ಕಲ್ಲುಗಳು ಕೆಲವು ಮಿಮೀ ಗಾತ್ರದಲ್ಲಿರಬಹುದು, ಇನ್ನು ಕೆಲವು ಇಂಚುಗಳಷ್ಟು ಬೆಳೆಯಬಹುದು. ಕಿಡ್ನಿ ಕಲ್ಲುಗಳು ಸಾಕಷ್ಟು ಸಮಾನವಾಗಿ ಹರಡುತ್ತವೆ ಮತ್ತು ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುತ್ತವೆ. 
ಕಿಡ್ನಿ ಕಲ್ಲುಗಳನ್ನು ನಾಲ್ಕು ಪ್ರಮುಖ ವಿಧಗಳಾಗಿ ವಿಂಗಡಿಸಬಹುದು- ಕ್ಯಾಲ್ಸಿಯಂ ಕಲ್ಲುಗಳು, ಯೂರಿಕ್ ಆಸಿಡ್ ಕಲ್ಲುಗಳು, ಸ್ಟ್ರುವೈಟ್ ಕಲ್ಲುಗಳು ಮತ್ತು ಸಿಸ್ಟೈನ್ ಕಲ್ಲುಗಳು ಲಕ್ಷಣಗಳು ಎದ್ದು ಕಾಣುತ್ತವೆಂದರು.
ಬೆನ್ನು, ಹೊಟ್ಟೆ ಅಥವಾ ಬದಿಯಲ್ಲಿ ನೋವು
ಮೂತ್ರಪಿಂಡದ ಕಲ್ಲಿನ ನೋವು - ಇದನ್ನು ಮೂತ್ರಪಿಂಡದ ಕೊಲಿಕ್ ಎಂದೂ ಕರೆಯುತ್ತಾರೆ - ಇದು ಊಹಿಸಬಹುದಾದ ಅತ್ಯಂತ ತೀವ್ರವಾದ ನೋವಿನ ವಿಧಗಳಲ್ಲಿ ಒಂದಾಗಿದೆ ಎಂದರು.
ಮೂತ್ರಪಿಂಡದ ಕಲ್ಲಿನ ನೋವು ಹೆಚ್ಚಾಗಿ ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ. ಕಲ್ಲು ಚಲಿಸಿದಂತೆ ನೋವು ಸ್ಥಳ ಮತ್ತು ತೀವ್ರತೆಯನ್ನು ಬದಲಾಯಿಸುತ್ತದೆ.
ನೋವು ಆಗಾಗ್ಗೆ ಅಲೆಗಳಲ್ಲಿ ಬಂದು ಹೋಗುತ್ತದೆ, ಮೂತ್ರನಾಳವು ಕಲ್ಲನ್ನು ಹೊರಗೆ ತಳ್ಳಲು ಪ್ರಯತ್ನಿಸುವಾಗ ಸಂಕುಚಿತಗೊಳ್ಳುವುದರಿಂದ ಇದು ಇನ್ನಷ್ಟು ಹದಗೆಡುತ್ತದೆ. ಪ್ರತಿಯೊಂದು ಅಲೆಯು ಕೆಲವು ನಿಮಿಷಗಳ ಕಾಲ ಇರುತ್ತದೆ, ಕಣ್ಮರೆಯಾಗಬಹುದು ಮತ್ತು ನಂತರ ಮತ್ತೆ ಬರಬಹುದು ಎಂದರು.
    user_Basavaraja B Press Reporter AP
    Basavaraja B Press Reporter AP
    Social Media Manager ಜಗಳೂರು, ದಾವಣಗೆರೆ, ಕರ್ನಾಟಕ•
    8 hrs ago
  • ರಸ್ತೆಗೆ ಚಾಚಿದ ಕಳ್ಳೆ ಬೈಕ್ ಸವಾರರು ಸ್ವಲ್ಪ ಯಾಮಾರಿದರೆ ಕಳ್ಳೆಯೋಳಗೆ ಬೈಕ್.
    1
    ರಸ್ತೆಗೆ ಚಾಚಿದ ಕಳ್ಳೆ ಬೈಕ್ ಸವಾರರು ಸ್ವಲ್ಪ ಯಾಮಾರಿದರೆ  ಕಳ್ಳೆಯೋಳಗೆ ಬೈಕ್.
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    9 hrs ago
  • ಗುಟ್ಕಾ ನಿಷೇಧ ತಡೆಯಲು ಚನ್ನಗಿರಿ ಯಿಂದ ದಾವಣಗೆರೆ ಗೆ ದಿನಾಂಕ 26/8/2026 ರಿಂದ 28/8/2026 ರಾ ವರೆಗೆ ಬೃಹತ್ ಪಾದ ಯಾತ್ರೆ ಮಾಡುತ್ತಿರುವ ಮಾಡಳ್ ಮಲ್ಲಿಕಾರ್ಜುನ ರವರು ಮತ್ತು ರೈತರು
    1
    ಗುಟ್ಕಾ ನಿಷೇಧ ತಡೆಯಲು ಚನ್ನಗಿರಿ ಯಿಂದ ದಾವಣಗೆರೆ ಗೆ ದಿನಾಂಕ 26/8/2026 ರಿಂದ 28/8/2026 ರಾ ವರೆಗೆ ಬೃಹತ್ ಪಾದ ಯಾತ್ರೆ ಮಾಡುತ್ತಿರುವ ಮಾಡಳ್ ಮಲ್ಲಿಕಾರ್ಜುನ ರವರು ಮತ್ತು ರೈತರು
    user_ಸುರೇಶ್ ಕೆ ಆರ್
    ಸುರೇಶ್ ಕೆ ಆರ್
    Farmer ಚನ್ನಗಿರಿ, ದಾವಣಗೆರೆ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.