ಕಲ್ಲನ್ನು ಶಿಲೆಯಾಗಿಸುವ ಕಲೆ ಉಪನ್ಯಾಸಕರಲ್ಲಿರಲಿ: ಶಾಸಕ ದೊಡ್ಡನಗೌಡ ಪಾಟೀಲ ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ 4ನೇ ಶೈಕ್ಷಣಿಕ ಸಮ್ಮೇಳನ ಸಂಪನ್ನ ಕುಷ್ಟಗಿ: ಉಪನ್ಯಾಸಕರು ಕೇವಲ ಪಠ್ಯ ಬೋಧನೆಗೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಗುಣಮಟ್ಟದ ಶಿಕ್ಷಣದ ಮೂಲಕ ಅವರನ್ನು ಸಮಾಜದ ಉನ್ನತ ಸ್ಥಾನಗಳಿಗೆ ಕೊಂಡೊಯ್ಯುವ ಜವಾಬ್ದಾರಿ ನಿರ್ವಹಿಸಬೇಕು. ವಿದ್ಯಾರ್ಥಿಗಳು ಉನ್ನತ ಹುದ್ದೆಗೇರಿದಾಗಲೇ ಉಪನ್ಯಾಸಕರ ವೃತ್ತಿಗೆ ನೈಜ ಸಾರ್ಥಕತೆ ದೊರೆಯುತ್ತದೆ ಎಂದು ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು. ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಎನ್.ಸಿ.ಎಚ್. ಪ್ಯಾಲೇಸ್‌ನಲ್ಲಿ ನಡೆದ ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ 4ನೇ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಸಾಮಾನ್ಯ ಕಲ್ಲನ್ನು ಶಿಲೆಯನ್ನಾಗಿ ರೂಪಿಸುವ ಶಿಲ್ಪಿಯಂತೆ, ವಿದ್ಯಾರ್ಥಿಗಳ ಬದುಕಿಗೆ ಉತ್ತಮ ರೂಪ ನೀಡುವ ಕಲೆ ಪ್ರತಿಯೊಬ್ಬ ಉಪನ್ಯಾಸಕರಲ್ಲೂ ಸದಾ ಜಾಗೃತವಾಗಿರಬೇಕು ಎಂದರು. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವಲ್ಲಿ ಉಪನ್ಯಾಸಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಜ್ಞಾನ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಮೂಲಕ ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸಬೇಕು ಎಂದು ಅವರು ಕರೆ ನೀಡಿದರು. ಶಿಕ್ಷಣವೇ ಬಡತನ ನಿರ್ಮೂಲನೆಗೆ ಅಸ್ತ್ರ: ಬಯ್ಯಾಪೂರ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ಬಡತನ ನಿವಾರಣೆಗೆ ಶಿಕ್ಷಣವೇ ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಜ್ಞಾನವನ್ನು ನೀಡುವ ಮೂಲಕ ಅವರ ಭವಿಷ್ಯ ರೂಪಿಸುವುದು ಶಿಕ್ಷಕರ ಪ್ರಮುಖ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು. 371(ಜೆ) ಸೌಲಭ್ಯಗಳ ಸದುಪಯೋಗಕ್ಕೆ ಮಾರ್ಗದರ್ಶನ ಅಗತ್ಯ ವಿಶೇಷ ಉಪನ್ಯಾಸಕ ರಝಾಕ್ ಉಸ್ತಾದ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಅಗತ್ಯವಿದೆ. ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನದಡಿ ದೊರೆಯುವ ಶೈಕ್ಷಣಿಕ ಸೌಲಭ್ಯಗಳು ಹಾಗೂ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸಮರ್ಪಕ ಮಾಹಿತಿ ನೀಡಿ, ಅವುಗಳ ಸದುಪಯೋಗ ಪಡೆಯುವಂತೆ ಉಪನ್ಯಾಸಕರು ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಬಸಪ್ಪ ನಾಗೋಲಿ ವಹಿಸಿದ್ದರು. ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಭೀಮಪ್ಪ ಗೊಲ್ಲರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಅಧ್ಯಕ್ಷ ಹನಮಂತಪ್ಪ ಚೌಧರಿ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಸೋಮಶೇಖರಗೌಡ ಆಶಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮುಖಂಡರಾದ ಶರಣಪ್ಪ ಮಟ್ಟೂರು, ನಿಂಗನಗೌಡ ಎ.ಎಚ್., ರಾಜಶೇಖರಗೌಡ ಪಾಟೀಲ, ಶಿವಕುಮಾರ್ ಆರಾಳಗೌಡ್ರ, ಪ್ರಿಯದರ್ಶಿನಿ, ಸುಭಾಸಗೌಡ್ರ ಸೇರಿದಂತೆ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ನೂರಾರು ಉಪನ್ಯಾಸಕರು, ಪ್ರಾಚಾರ್ಯರು ಹಾಗೂ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.
ಕಲ್ಲನ್ನು ಶಿಲೆಯಾಗಿಸುವ ಕಲೆ ಉಪನ್ಯಾಸಕರಲ್ಲಿರಲಿ: ಶಾಸಕ ದೊಡ್ಡನಗೌಡ ಪಾಟೀಲ ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ 4ನೇ ಶೈಕ್ಷಣಿಕ ಸಮ್ಮೇಳನ ಸಂಪನ್ನ ಕುಷ್ಟಗಿ: ಉಪನ್ಯಾಸಕರು ಕೇವಲ ಪಠ್ಯ ಬೋಧನೆಗೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಗುಣಮಟ್ಟದ ಶಿಕ್ಷಣದ ಮೂಲಕ ಅವರನ್ನು ಸಮಾಜದ ಉನ್ನತ ಸ್ಥಾನಗಳಿಗೆ ಕೊಂಡೊಯ್ಯುವ ಜವಾಬ್ದಾರಿ ನಿರ್ವಹಿಸಬೇಕು. ವಿದ್ಯಾರ್ಥಿಗಳು ಉನ್ನತ ಹುದ್ದೆಗೇರಿದಾಗಲೇ ಉಪನ್ಯಾಸಕರ ವೃತ್ತಿಗೆ ನೈಜ ಸಾರ್ಥಕತೆ ದೊರೆಯುತ್ತದೆ ಎಂದು ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು. ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಎನ್.ಸಿ.ಎಚ್. ಪ್ಯಾಲೇಸ್‌ನಲ್ಲಿ ನಡೆದ ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ 4ನೇ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಸಾಮಾನ್ಯ ಕಲ್ಲನ್ನು ಶಿಲೆಯನ್ನಾಗಿ ರೂಪಿಸುವ ಶಿಲ್ಪಿಯಂತೆ, ವಿದ್ಯಾರ್ಥಿಗಳ ಬದುಕಿಗೆ ಉತ್ತಮ ರೂಪ ನೀಡುವ ಕಲೆ ಪ್ರತಿಯೊಬ್ಬ ಉಪನ್ಯಾಸಕರಲ್ಲೂ ಸದಾ ಜಾಗೃತವಾಗಿರಬೇಕು ಎಂದರು. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವಲ್ಲಿ ಉಪನ್ಯಾಸಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಜ್ಞಾನ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಮೂಲಕ ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸಬೇಕು ಎಂದು ಅವರು ಕರೆ ನೀಡಿದರು. ಶಿಕ್ಷಣವೇ ಬಡತನ ನಿರ್ಮೂಲನೆಗೆ ಅಸ್ತ್ರ: ಬಯ್ಯಾಪೂರ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ,
ಬಡತನ ನಿವಾರಣೆಗೆ ಶಿಕ್ಷಣವೇ ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಜ್ಞಾನವನ್ನು ನೀಡುವ ಮೂಲಕ ಅವರ ಭವಿಷ್ಯ ರೂಪಿಸುವುದು ಶಿಕ್ಷಕರ ಪ್ರಮುಖ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು. 371(ಜೆ) ಸೌಲಭ್ಯಗಳ ಸದುಪಯೋಗಕ್ಕೆ ಮಾರ್ಗದರ್ಶನ ಅಗತ್ಯ ವಿಶೇಷ ಉಪನ್ಯಾಸಕ ರಝಾಕ್ ಉಸ್ತಾದ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಅಗತ್ಯವಿದೆ. ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನದಡಿ ದೊರೆಯುವ ಶೈಕ್ಷಣಿಕ ಸೌಲಭ್ಯಗಳು ಹಾಗೂ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸಮರ್ಪಕ ಮಾಹಿತಿ ನೀಡಿ, ಅವುಗಳ ಸದುಪಯೋಗ ಪಡೆಯುವಂತೆ ಉಪನ್ಯಾಸಕರು ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಬಸಪ್ಪ ನಾಗೋಲಿ ವಹಿಸಿದ್ದರು. ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಭೀಮಪ್ಪ ಗೊಲ್ಲರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಅಧ್ಯಕ್ಷ ಹನಮಂತಪ್ಪ ಚೌಧರಿ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಸೋಮಶೇಖರಗೌಡ ಆಶಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮುಖಂಡರಾದ ಶರಣಪ್ಪ ಮಟ್ಟೂರು, ನಿಂಗನಗೌಡ ಎ.ಎಚ್., ರಾಜಶೇಖರಗೌಡ ಪಾಟೀಲ, ಶಿವಕುಮಾರ್ ಆರಾಳಗೌಡ್ರ, ಪ್ರಿಯದರ್ಶಿನಿ, ಸುಭಾಸಗೌಡ್ರ ಸೇರಿದಂತೆ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ನೂರಾರು ಉಪನ್ಯಾಸಕರು, ಪ್ರಾಚಾರ್ಯರು ಹಾಗೂ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.
- ಮಸೀದಿಯ ಪಕ್ಕದಲ್ಲಿ ಕೂತ ‘ಹುಡಿಯದ ಓಣಿಯ ಸಾಮ್ರಾಟ್’! ಮುಂಡರಗಿಯಲ್ಲಿ ಸೌಹಾರ್ದತೆಯ ಗಣೇಶೋತ್ಸವ ಮೆರೆದ ಮುಸ್ಲಿಂ ಮಕ್ಕಳು! ಮಸೀದಿಯ ಪಕ್ಕದಲ್ಲಿ ಕೂತ ‘ಹುಡಿಯದ ಓಣಿಯ ಸಾಮ್ರಾಟ್’! ಮುಂಡರಗಿಯಲ್ಲಿ ಸೌಹಾರ್ದತೆಯ ಗಣೇಶೋತ್ಸವ ಮೆರೆದ ಮುಸ್ಲಿಂ ಮಕ್ಕಳು! ನಮಸ್ಕಾರ ಬಂಧುಗಳೇ... ನಾಡಿನಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದೆ. ಬೀದಿ ಬೀದಿಗಳಲ್ಲಿ ವಿಘ್ನನಿವಾರಕನ ಜಯಘೋಷ ಮೊಳಗುತ್ತಿದೆ. ಆದರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ 'ಹುಡಿಯದ ಓಣಿ'ಯಲ್ಲಿ ಕಂಡುಬಂದ ಈ ದೃಶ್ಯ ಮಾತ್ರ ಇಡೀ ನಾಡಿನ ಗಮನ ಸೆಳೆಯುವಂತಿದೆ, ಪ್ರತಿಯೊಬ್ಬರ ಮನ ಮುಟ್ಟುವಂತಿದೆ! ಹೌದು, ಇಲ್ಲಿ ಒಂದೆಡೆ ಅಲ್ಲಾಹನ ಪ್ರಾರ್ಥನೆ ನಡೆಯುವ ಮಸೀದಿ ಇದ್ದರೆ... ಅದೇ ಮಸೀದಿಯ ಅಂಗಳದ ಪಕ್ಕದಲ್ಲೇ ಸಿದ್ದಿವಿನಾಯಕ ವಿರಾಜಮಾನನಾಗಿದ್ದಾನೆ! ವಿಶೇಷ ಎಂದರೆ, ಯಾವುದೇ ಜಾತಿ-ಧರ್ಮದ ಹಂಗಿಲ್ಲದೆ, ಇಲ್ಲಿನ ಮುಸ್ಲಿಂ ಸಮುದಾಯದ ಪುಟ್ಟ ಮಕ್ಕಳು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ತಮ್ಮ ಕೈಯಾರೆ ಕಾಯಿ ಒಡೆದು, ಪೂಜೆ ಸಲ್ಲಿಸಿ, ಪ್ರಸಾದ ಹಂಚಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಇನ್ನು ಅತ್ಯಂತ ಖುಷಿಯ ವಿಷಯ ಎಂದರೆ... ಇಲ್ಲಿನ ಮಕ್ಕಳು ಕೇವಲ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿಲ್ಲ, ಬದಲಾಗಿ ಅತ್ಯಂತ ಪ್ರೀತಿಯಿಂದ ಈ ಮೂರ್ತಿಗೆ 'ಹುಡಿಯದ ಓಣಿಯ ಸಾಮ್ರಾಟ್' ಎಂದೇ ನಾಮಕರಣ ಮಾಡಿದ್ದಾರೆ! ಸಾಮ್ರಾಟ್ ಎಂಬ ಹೆಸರಿನಲ್ಲಿ ಗಣಪತಿಯನ್ನು ನೆನೆಯುತ್ತಿರುವ ಈ ಮಕ್ಕಳ ಮನಸ್ಸಿನಲ್ಲಿ 'ನಾವೆಲ್ಲರೂ ಒಂದೇ' ಎನ್ನುವ ಭ್ರಾತೃತ್ವದ ಸದ್ಭಾವನೆ ಆಳವಾಗಿ ಬೇರೂರಿದೆ. ಧರ್ಮಗಳ ಹೆಸರಿನಲ್ಲಿ ಕಹಿ ವಾತಾವರಣ ಸೃಷ್ಟಿಯಾಗುವ ಈ ದಿನಗಳಲ್ಲಿ, ಮುಂಡರಗಿಯ ಈ ಪುಟ್ಟ ಮಕ್ಕಳು ಇಡೀ ಸಮಾಜಕ್ಕೇ ಪ್ರೀತಿ ಮತ್ತು ಸೌಹಾರ್ದತೆಯ ದೊಡ್ಡ ಪಾಠ ಹೇಳಿಕೊಡುತ್ತಿದ್ದಾರೆ. ಶರೀಫ-ಶಿವಯೋಗಿಗಳು ನಡೆದ ಸೌಹಾರ್ದತೆಯ ನೆಲದಲ್ಲಿ, ಮುಂಡರಗಿಯ ಹುಡಿಯದ ಓಣಿಯ ಈ ಪುಟ್ಟ ಮಕ್ಕಳ ನಡೆ ಇಡೀ ನಾಡಿಗೆ ಭಾವೈಕ್ಯತೆಯ ಹೊಸ ಬೆಳಕನ್ನು ತೋರುತ್ತಿದೆ. ನಾವೆಲ್ಲರೂ ಒಂದೇ ಎನ್ನುವ ಈ ಮಕ್ಕಳ ಪ್ರೀತಿಗೆ ಕನ್ನಡಿಗರ ಪರವಾಗಿ ಹೃದಯಪೂರ್ವಕ ಸಾಷ್ಟಾಂಗ ನಮನಗಳು1
- ED. IT. ಯಾವಾಗ ಬೇಕಾದರೂ ನನ್ನ ಮನೆಗೆ ಬರಬಹುದು ಸಚಿವ ವಿಜಯಾನಂದ ಕಾಶಪ್ಪನವರ ಬಾಗಲಕೋಟೆ: ಕೈ ಶಾಸಕರನ್ನು ಬಿಜೆಪಿಗೆ ಸೆಳೆಯುವ ಹುನ್ನಾರ ವಿಚಾರಕ್ಕೆ ಸಚಿವ ಕಾಶಪ್ಪನವರ ಪ್ರತಿಕ್ರಿಯಿಸಿದರು ಈ ಹಿಂದೆ ಬಿಜೆಪಿ ಕಾಂಗ್ರೆಸ್ನ 55 ಜನರ ಪಟ್ಟಿ ರೆಡಿ ಮಾಡಿತ್ತು ಕಾಂಗ್ರೆಸ್ ಶಾಸಕರ ಆಪರೇಷನ್ ಪಟ್ಟಿಯಲ್ಲಿ ನನ್ನ ಹೆಸರು ಇತ್ತು ಬಿಜೆಪಿ ಪಕ್ಷಕ್ಕೆ ಸೆಳೆಯುವುದು, ಬರೋಲ್ಲ ಅಂದರೆ ಹಿಡಿ ದಾಳಿ ಅಂಜಿಕೆ ಹಾಕುವುದು ಮಾಡಿದ್ದರು. ನಾ ಬಿಜೆಪಿಗರಿಗೆ ಹೇಳಿದ್ದೇನೆ ನನ್ನ ಮೇಲೆ ಇಡಿ ಐಟಿ ದಾಳಿ ಮಾಡಿದರು ಅಂಜಿಕೆ ಇಲ್ಲ ಎಂದು ಸಚಿವ ಕಾಶಪ್ಪನವರ ಬಾಗಲಕೋಟೆಯಲ್ಲಿ ಹೇಳಿದರು.1
- *ಕೂಡ್ಲಿಗಿ : ನಾಗರೀಕ ಹಿತರಕ್ಷಣಾ ವೇದಿಕೆಯಿಂದ , ಅದ್ಧೂರಿ ಊರಗಣಪ ಪ್ರತಿಷ್ಠಾನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಸೆಪ್ಟೆಂಬರ್ 14ರಂದು ಪಟ್ಟಣದ ಮೇನ್ ಬಾಯ್ಸ್ ಶಾಲೆಯ ಆವರಣದಲ್ಲಿ , ಶ್ರೀಗಣೇಶ ಚತುರ್ಥಿ ಪ್ರಯುಕ್ತ ನಾಗರೀಕ ಹಿತರಕ್ಷಣೆ ವೇದಿಕೆ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಮನೆ ಅದ್ಧೂರಿಯಾಗಿ ಜರುಗಿತು. ನಾಗರೀಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ನೇತೃತ್ವದಲ್ಲಿ , ಪ್ರತಿ ವರ್ಷಗಳಂತೆಯೇ ಗಣೇಶ ಮೂರ್ತಿ ದಾನಿಗಳು. ಹಾಗೂ ಗೌಡ ಮನೆತನದ ಮುಖಂಡರಾದ , ಪಟ್ಟಣದ ಹೆಚ್.ವೀರನಗೌಡ ರವರ ಮನೆಯಿಂದ , ಗಣೇಶನ ಬೃಹತ್ ಗಾತ್ರದ ಗಣೇಶ ಮೂರ್ತಿಯನ್ನು. ಶಾಸ್ತ್ರೋಕ್ತವಾಗಿ ಪೂಜಿಸಿ ವಾಹನದಲ್ಲಿರಿಸಿಕೊಂಡು , ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಬಹು ಅದ್ಧೂರಿಯಾಗಿ ಮೆರವಣಿಗೆ ಸಾಗಿ ವೇದಿಕೆಗೆ ಕರೆತರಲಾಯಿತು. ಪಟ್ಟಣದ ಶ್ರೀಚಂದ್ರಶೇಖರ ಆಜಾದ್ ರಂಗಮಂದಿರದ ವೇದಿಕೆ ಯಲ್ಲಿ , ಪುರೋಹಿತರಾದ ಎಮ್ ಎಮ್ ಉಮೇಶರವರ ನೇತೃತ್ವದಲ್ಲಿ. ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜಿಸಿ ಪ್ರತಿಷ್ಠಾಪಿಸಲಾಯಿತು, ತದನಂತರ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ನಂತರ ವೇದಭ್ರಾಹ್ಮಣ ಆರಾಧಕರಾದ ಬ್ರಹ್ಮಲಿಂಗಾಚಾರಿಗಳ ಪುರೋಹಿತ್ವದಲ್ಲಿ , ಪೂಜಾ ಕೈಂ ಕರ್ಯಗಳಾದಿಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಾಗರೀಕರ ಹಿತರಕ್ಷಣಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು , ಹಿರಿಯನಾಗರೀಕರು , ಹಿರಿಯರು , ಗಣ್ಯರು ಮುಖಂಡರು , ನೂರಾರು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಇಂದು ನಡಿದ ನಮ್ಮ್ ಊರಿನ ಅಲ್ಲಿ ಸಣ್ಣ ಮಕ್ಕಳನು ಹೊಡೆದು ವಿರುದ ಪಡಿಸಲ ಆಯ್ತು ಗಣಪತಿ ಕೂರಿಸಿವ ಜಾಗವನ್ನು ಮುಸ್ಲಿಂ ಸಮುದಾಯದದಿಂದ ವಿರುದ ಆದ ಕಾರಣ ಪೊಲೀಸರ ಸಮ್ಮುಖದಲ್ಲಿ ಗಣಪತಿ ಕುರಿಸುವದನು ಸ್ಥಗಿತಗೊಳಿಸಲತು ಇನ್ನು ಮುಂದೆ ನಮ್ಮ ಹಿಂದೂ ಜನಾಂಗ ಎಚ್ಚತುಕೊಳ್ಳಿ ನಮ್ಮಗೆ ಅವರು ಹೇಗೆ ವಿರುದ ಮಾಡತಿರೂ ಅರ್ಥ ಮಾಡಿ ಕೊಳ್ಳಿ ಹಿಂದೂ ಜನಗಳೇ ಜೈ ಶ್ರೀ ರಾಮ🚩 🚩🕉 ಇಂದು ನಡಿದ ನಮ್ಮ್ ಊರಿನ ಅಲ್ಲಿ ಸಣ್ಣ ಮಕ್ಕಳನು ಹೊಡೆದು ವಿರುದ ಪಡಿಸಲ ಆಯ್ತು ಗಣಪತಿ ಕೂರಿಸಿವ ಜಾಗವನ್ನು ಮುಸ್ಲಿಂ ಸಮುದಾಯದದಿಂದ ವಿರುದ ಆದ ಕಾರಣ ಪೊಲೀಸರ ಸಮ್ಮುಖದಲ್ಲಿ ಗಣಪತಿ ಕುರಿಸುವದನು ಸ್ಥಗಿತಗೊಳಿಸಲತು ಇನ್ನು ಮುಂದೆ ನಮ್ಮ ಹಿಂದೂ ಜನಾಂಗ ಎಚ್ಚತುಕೊಳ್ಳಿ ನಮ್ಮಗೆ ಅವರು ಹೇಗೆ ವಿರುದ ಮಾಡತಿರೂ ಅರ್ಥ ಮಾಡಿ ಕೊಳ್ಳಿ ಹಿಂದೂ ಜನಗಳೇ ಜೈ ಶ್ರೀ ರಾಮ🚩 🚩🕉1
- ಯುವಕರೇ, ನಿಮ್ಮ ಕನಸೇ ನನ್ನ ಭರವಸೆ: ಯುವಶಕ್ತಿಗೆ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಕರೆ ಕೂಡ್ಲಿಗಿ: ಯುವಕರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು. ಶಿಕ್ಷಣ, ಶ್ರಮ, ಶಿಸ್ತು ಹಾಗೂ ಉತ್ತಮ ಚಿಂತನೆಗಳನ್ನು ಬದುಕಿನ ಬಂಡವಾಳವನ್ನಾಗಿಸಿಕೊಂಡು ಮುನ್ನಡೆಯಬೇಕು ಎಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಯುವಜನತೆಗೆ ಕರೆ ನೀಡಿದರು. ಯುವಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಿಮ್ಮ ಕಣ್ಣಲ್ಲಿ ನಾನು ಕೇವಲ ಯುವಕರನ್ನು ನೋಡುವುದಿಲ್ಲ; ಒಂದು ಹೊಸ ಕನಸನ್ನು ನೋಡುತ್ತೇನೆ. ನಿಮ್ಮ ಆಲೋಚನೆಗಳು ಒಂದು ಊರನ್ನೇ ಬೆಳಗಿಸುವ ಶಕ್ತಿ ಹೊಂದಿವೆ. ಆ ಶಕ್ತಿಯನ್ನು ರಾಜಕೀಯದ ಬಲೆಗೆ ಸಿಲುಕಿಸಿ, ನಿಮ್ಮನ್ನು ದಾರಿ ತಪ್ಪಿಸುವ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ. ಇದು ನನ್ನ ಮಾತಲ್ಲ, ನನ್ನ ಹೃದಯದ ಪ್ರತಿಜ್ಞೆ” ಎಂದು ಹೇಳಿದರು. ಯುವಕರು ತಮ್ಮ ಬದುಕಿನ ಶಿಲ್ಪಿಗಳಾಗಬೇಕು. ಯಾರೋ ಬಂದು ತಮ್ಮ ಬದುಕನ್ನು ಬದಲಿಸುತ್ತಾರೆ ಎಂದು ಕಾಯದೆ, ಸ್ವಂತ ಶ್ರಮ ಮತ್ತು ಪ್ರತಿಭೆಯ ಮೂಲಕ ಭವಿಷ್ಯ ಕಟ್ಟಿಕೊಳ್ಳಬೇಕು. ಕಾಲೇಜು ಶಿಕ್ಷಣ, ಪುಸ್ತಕ ಓದು, ಕಠಿಣ ಪರಿಶ್ರಮ ಹಾಗೂ ಉತ್ತಮ ನಡೆ-ನುಡಿಗಳೇ ಯುವಕರ ನಿಜವಾದ ಬಂಡವಾಳ ಎಂದು ಅವರು ತಿಳಿಸಿದರು. ದುಶ್ಚಟಗಳಿಂದ ದೂರವಿರಿ ದುಶ್ಚಟಗಳು ಯುವಕರ ಅಮೂಲ್ಯವಾದ ಯೌವನವನ್ನು ಹಾಳು ಮಾಡುವುದಲ್ಲದೆ, ಕುಟುಂಬದ ನೆಮ್ಮದಿಯನ್ನೂ ಕಸಿದುಕೊಳ್ಳುತ್ತವೆ. ಅವು ಕನಸುಗಳನ್ನು ಕಳ್ಳತನ ಮಾಡುತ್ತವೆ. ಆದ್ದರಿಂದ ಯುವಕರು ಯಾವುದೇ ದುಶ್ಚಟಗಳಿಗೆ ಒಳಗಾಗದೆ, ಆರೋಗ್ಯಕರ ಮತ್ತು ಸಕಾರಾತ್ಮಕ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಸಲಹೆ ನೀಡಿದರು.1
- ದಕ್ಷಿಣ ಭಾರತದಲ್ಲೇ ಅತ್ಯಂತ ಅಭೂತಪೂರ್ವವಾದ ಮಹಾಶಿಲಾ ತಾಣವೆಂದರೆ ರಾಜನಕೊಲ್ಲೂರು. ಇಲ್ಲಿ ಅನೇಕ ಬಗೆಯ ಮರಳುಗಲ್ಲಿನ ಮಹಾಶಿಲೆಗಳು ಇವೆ. ಕರ್ನಾಟಕದ ಅತ್ಯಂತ ಸುಪ್ರಸಿದ್ದ ತಾಣಗಳು ದಕ್ಷಿಣ ಭಾರತದಲ್ಲೇ ಅತ್ಯಂತ ಅಭೂತಪೂರ್ವವಾದ ಮಹಾಶಿಲಾ ತಾಣವೆಂದರೆ ರಾಜನಕೊಲ್ಲೂರು. ಇಲ್ಲಿ ಅನೇಕ ಬಗೆಯ ಮರಳುಗಲ್ಲಿನ ಮಹಾಶಿಲೆಗಳು ಇವೆ. ಡೋಲ್ಡನ್‌ಗಳೆಂಬ ಜಾವಡಿಗೆ ಆಧಾರವಾಗಿ ನಿಂತ ಬದಿಯ ಚಪ್ಪಡಿಗಳುಳ್ಳ ಆಯತಾಕಾರದ ರಚನೆಗಳನ್ನು ಡೋಲೈನ್ ಗಳೆಂದು ಕರೆಯುತ್ತಾರೆ. ಇಲ್ಲಿ ಕಾಣುವ ವಿವಿಧ ಬಗೆಗಳನ್ನು ಗಮನಿಸಿ, ಕೆಲವಕ್ಕೆ ಮೂರು ಅಥವಾ ನಾಲ್ಕು ಬದಿಗಳಿವೆ. ಹಾಗೂ ಸಣ್ಣ ಕಿಟಕಿ-ರಂಧ್ರವು ಅದರಲ್ಲಿ ಇರಬಹುದು ಅಥವಾ ಇಲ್ಲದಿರಬಹುದು. ಡೋಲೈನ್‌ಗಳ ಮಧ್ಯೆ ಇರುವ ಭಾಗಶಃ ಹೂತಿರುವ, ಡಬ್ಬಿ ಆಕಾರದ ರಚನೆಗಳನ್ನು ಸಿಸ್ಟ್‌ಗಳೆಂದು ಕರೆಯುತ್ತಾರೆ. ಸಿಸ್ಟ್ ತನ್ನೊಳಗೇ ಕುಸಿದು ಬೀಳದಂತೆ ತಡೆಗಟ್ಟುವ ರೀತಿಯಲ್ಲಿ, ರಾಜನಕೊಲ್ಲೂರಿನ ಎಲ್ಲ ಸಿಸ್ಟ್‌ಗಳಲ್ಲೂ ಅದರ ಬದಿಯ ಉದ್ದನೆಯ ಚಪ್ಪಡಿಗಳು, ಸ್ವಲ್ಪ ಚಿಕ್ಕ ಚಪ್ಪಡಿಗಳಿಗಿಂತ ಮುಂದಕ್ಕೆ ಚಾಚಿವೆ.1
- ಬಾಗಲಕೋಟೆ: ಸರ್ವರ್ ಸಮಸ್ಯೆ: ಇ-ಕೆವೈಸಿ ವಿಳಂಬ ಖಂಡಿಸಿ ಪಡಿತರ ವಿತರಕರ ಪ್ರತಿಭಟನೆ ಬಾಗಲಕೋಟೆ: ಸರ್ವರ್ ಸಮಸ್ಯೆ: ಇ-ಕೆವೈಸಿ ವಿಳಂಬ ಖಂಡಿಸಿ ಪಡಿತರ ವಿತರಕರ ಪ್ರತಿಭಟನೆ ಜಿಲ್ಲಾಡಳಿತ ಭವನದ ಎದುರು ಸರಕಾರಿ ಪಡಿತರ ವಿತರಕರ ಸಂಘದಿಂದ ಪ್ರತಿಭಟನೆ ಸರ್ವರ್ ಸಮಸ್ಯೆಯಿಂದ ದಿನಕ್ಕೆ ಕೇವಲ 5–10 ಪಡಿತರ ಚೀಟಿಗಳ ಇ-ಕೆವೈಸಿ ಇ-ಕೆವೈಸಿಗಾಗಿ ಗಂಟೆಗಟ್ಟಲೆ ಕಾಯುತ್ತಿರುವ ಪಡಿತರ ಚೀಟಿದಾರರು ಸರ್ವರ್ ಸಮಸ್ಯೆಯಿಂದ ಪಡಿತರ ವಿತರಕರು–ಚೀಟಿದಾರರ ನಡುವೆ ವಾಗ್ವಾದ ವಿತರಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳ ಒತ್ತಡ: ಆರೋಪ ಇ-ಕೆವೈಸಿ ಪ್ರಕ್ರಿಯೆಯಿಂದ ವಿತರಕರಿಗೆ ಮಾನಸಿಕ ಒತ್ತಡ ಹೆಚ್ಚಳ ವಿತರಕರ ಆರೋಗ್ಯದ ಮೇಲೂ ದುಷ್ಪರಿಣಾಮ: ಸಂಘದ ಆರೋಪ ಐಹೊಳೆ ಗ್ರಾಮದ ವಿತರಕಿ ಗುರುದೇವಿ ಪ್ಯಾಟಿಶೆಟ್ಟರ ಅವರಿಗೆ ಅನಾರೋಗ್ಯ: ಸಂಘದ ಉಲ್ಲೇಖ ಇ-ಕೆವೈಸಿ ಸರ್ವರ್ ಸಮಸ್ಯೆ ಕೂಡಲೇ ಪರಿಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ1
- ಕೂಡ್ಲಿಗಿ : ಶಾಲಾ ಕ್ಷೇಮಾವೃದ್ಧಿಗಾಗಿ ತ್ಯಾಗ ಬಲಿದಾನಕ್ಕೆ ಸಿದ್ಧ- ರಾಘವೇಂದ್ರ , ಶಾಲಾ ಕ್ಷೇಮಾಭಿವೃದ್ಧಿಗೆ ಸದಾ ಬದ್ಧ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ *ಕೂಡ್ಲಿಗಿ : ಶಾಲಾ ಕ್ಷೇಮಾವೃದ್ಧಿಗಾಗಿ ತ್ಯಾಗ ಬಲಿದಾನಕ್ಕೆ ಸಿದ್ಧ- ರಾಘವೇಂದ್ರ , ಶಾಲಾ ಕ್ಷೇಮಾಭಿವೃದ್ಧಿಗೆ ಸದಾ ಬದ್ಧ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಐತಿಹಾಸಿಕ ಸರ್ಕಾರಿ ಮೇನ್ ಬಾಯ್ಸ್ ಸ್ಕೂಲ್ ಕ್ಷೇಮಾಭಿವೃದ್ಧಿಗಾಗಿ ತಾವು ಯಾವುದೇ ಹಂತದ ಕಾನೂನಾತ್ಮಕ ಹೋರಾಟಕ್ಕೆ , ಹಾಗೂ ಎಲ್ಲಾ ರೀತಿಯ ತ್ಯಾಗ ಬಲಿದಾನಕ್ಕೆ ಸಿದ್ಧರಿರುವುದಾಗಿ ಹೋರಾಟಗಾರರು ಘೋಷಿಸಿದ್ದಾರೆ. ಅದೇ ರೀತಿಯಾಗಿ ಸರ್ಕಾರಿ ಶಾಲಾಭಿವೃದ್ಧಿಗಾಗಿ , ತಾವು ಸದಾ ಭದ್ಧರಾಗಿರುವುದಾಗಿ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ನುಡಿದಿದ್ದಾರೆ. ಪತ್ರಕರ್ತರೊಂದಿಗೆ ಹೋರಾಟಗಾರರಾದ ರಾಘವೇಂದ್ರರವರು ಮಾತನಾಡಿದ್ದು , ಮೇನ್ ಬಾಯ್ಸ್ ಸ್ಕೂಲ್ ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣಮಾಗಿದ್ದು. ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ಕುತಂತ್ರದಿಂದಾಗಿ , ನಿರಂತರವಾಗಿ ಶೋಷಣೆಗೆ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದೆ. ಆ ಅವ್ಯವಸ್ಥೆಯ ವಿರುದ್ಧ ತಾವು ಮೌನ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ , ಶಾಲಾಕ್ಷೇಮಾಭಿವೃದ್ಧಿ ಹೋರಾಟಗಾರರು. ಎಸ್ಡಿ ಎಮ್ಸಿ ಮೇಲುಸ್ತುವಾರಿ ಸಮಿತಿ ರಾಜ್ಯ ಉಪಾಧ್ಯಕ್ಷರಾದ , ಗುನ್ನಳ್ಳಿ ರಾಘವೇಂದ್ರ ನುಡಿದಿದ್ದಾರೆ. ಅವರು ಶಾಲಾ ಆವರಣದಲ್ಲಿ , ಯಾವುದೇ ಖಾಸಗೀ ಕಾರ್ಯಕ್ರಮ ಜರುಗುವುದನ್ನು ವಿರೋಧಿಸುತ್ತಿದ್ದು. ಮತ್ತು ಶಾಲಾವರಣ ಕೆಲ ಪಟ್ಟಭದ್ರರ ಕಪಿಮುಷ್ಠಿಯಲ್ಲಿ ನಲುಗುತ್ತಿದೆ , ಇದರಿಂದಾಗಿ ಶಾಲಾವಾತಾರಣದಲ್ಲಿ ಶಾಂತಿಗೆ ಭಂಗವಾಗಲಿದೆ. ಇದರ ವಿರುದ್ಧ ತಾವು ಮೌನ ಪ್ರತಿಭಟನೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಶಾಸಕರ ಮನವಿಯ ಮೇರೆಗೆ ಹೋರಾಟವನ್ನು ತಾವು , ತಾತ‍್ಕಾಲಿಕ ಸಮಯ ಮಾತ್ರ ಹಿಂಪಡೆಯುತ್ತಿದ್ದು. ಗಣೇಶೋತ್ಸವ ನಂತರದಲ್ಲಿ ಹೋರಾಟ ಮುಂದುವರೆಯಲಿದ್ದು , ಬೀದಿಗಿಳಿದು ಹೋರಾಟಗಳನ್ನು ನಡೆಸಲಾಗುವುದು. ಶಾಲೆ ಸ್ಥಳಾಂತರಕ್ಕೆ ಯಾವುದೇ ಕಾರಣಕ್ಕೆ ಅವಕಾಶ ಕೊಡೋದಿಲ್ಲ , ಶಾಲಾ ಆವರಣ ಉಳಿವಿಗಾಗಿ ಕ್ಷೇಮಾಭಿವೃದ್ಧಿಗೆ ತಾವು ಎಂತಹ ತ್ಯಾಗ ಬಲಿದಾನಕ್ಕೂ ಸಿದ್ಧರಿರುವುದಾಗಿ ಅವರು ಘೋಷಿಸಿದರು. ಶಾಲೆಯ ಉಳಿವಿಗಾಗಿ ಶಾಲಾ ಆವರಣ ಉಳಿವಿಗಾಗಿ , ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘಟನೆ ಮಾಡಿ ಜಾಗೃತಿ ಆಂದೊಲನ ಹೋರಾಟಗಳನ್ನಿ ಹಮ್ಮಿಕೊಳ್ಳಲಾಗುವುದು. ಮತ್ತು ಶಾಲಾ ಕ್ಷೇಮಾಭಿವೃದ್ಧಿಗಾಗಿ , ನ್ಯಾಯಲಯದ ಮೊರೆ ಹೋಗಲಾಗುವುದು. ತಾವು ಕಾನೂನಾತ್ಮಕವಾಗಿ ಹೋರಾಡಲು ಸರ್ವಸಿದ್ಧವಿದ್ದು , ಎಲ್ಲಾ ಹಂತದ ಹೋರಾಟಕ್ಕೆ ಪೂರ್ವ ತಯಾರಿ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಅಭಿವೃದ್ಧಿ ನೆಪದಲ್ಲಿ ಶಾಲಾ ಮೂಲ ಆಕರಕ್ಕೆ ಯಾವುದೇ ದಕ್ಕೆಯಾಗಬಾರದು , ಅದು ಕಾನೂನು ಬಾಹೀರವಾಗಲಿದ್ದು. ಆಭಿವೃದ್ಧಿಯ ಹರಿಕಾರರಾದ ಶಾಸಕರ ಮನವಿಗೆ ಮಾನ್ಯತೆ ನೀಡಿ , ಅವರ ಅಭಿವೃದ್ಧಿ ಪರನಿಲುವಿನ ಮೇಲೆ ವಿಶ್ವಾಸವಿಟ್ಟು ತಾವು ಮೌನ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದೆಂದು ಅವರು ತಿಳಿಸಿದರು. ಹಿಂದೆ ಶಾಸಕರು ಸಮ್ಮುಖದಲ್ಲಿ ಪ್ರತಿಭಟನೆ ಮಾಡುತ್ತಿರುವವರನ್ನುದ್ಧೇಶಿಸಿ ಮಾತನಾಡಿದ ಶಾಸಕರು , ಹೋರಾಟಗಾರರಲ್ಲಿರುವ ಶಾಲಾಕಾಳಜಿಯನ್ನು ಪ್ರಶಂಸಿದರು. ಮತ್ತು ಶೀಘ್ರವೇ ಶಾಲೆಯ ಕ್ಷೇಮಾಭಿವೃದ್ಧಿಗೆ ಚಾಲನೆ ನೀಡಲಾಗುವುದು. ಸರ್ಕಾರಿ ಶಾಲೆಗಳ ಕ್ಷೇಮಾಭಿವೃದ್ಧಿಗೆ ತಾವು ಸದಾ ಬದ್ಧರಿರುವುದಾಗಿ , ಶಾಸಕರು ಹೋರಾಟಗಾರರಿಗೆ ಮನವರಿಕೆ ಮಾಡಿಕೊಟ್ಟರು. ಶಾಲೆಯನ್ನು ಐತಿಹಾಸಿಕ ಶಾಲೆಯನ್ನಾಗಿ ಮಾಡುತ್ತೇನೆಂದು ಭರವಸೆ ನೀಡಿದರು , ಸುಸಜ್ಜಿತವಾದಂತಹ ಗುಣ ಮಟ್ಟದ ಶಿಕ್ಷಣ ಒದಗಿಸುವುದಕ್ಕೆ. ಅಗತ್ಯ ಸೌಕರ್ಯಗಳನ್ನು ಒಸಗಿಸುವುದಾಗಿ ನುಡಿದರು. ಶಾಲೆಯ ಮೂಲ ಆಕಾರಕ್ಕೆ ಧಕ್ಕೆ ತರದೇ ಉನ್ನತೀಕರಿಸಲಾಗುವುದೆಂದು , ಶಾಲಾ ಆವರಣವನ್ನು ಮತ್ತಷ್ಟು ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದೆಂದು ಶಾಸಕರು ಭರವಸೆ ನೀಡಿದ್ದಾರೆನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಹತ್ತಾರು ಪ್ರಮುಖ ಸಂಘಟನೆಗಳ , ಮುಖಂಡರು ಗಣ್ಯರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಅಸಹಾಯಕ ದಿವ್ಯಾಂಗ ಯುವಕನ ನೋವಿಗೆ ತಕ್ಷಣ ಸ್ಪಂದನೆ; ಶೌಚಾಲಯ ಹಾಗೂ ವಾಹನದ ನೆರವಿಗೆ ಶಾಸಕ ಭರವಸೆ ಕೂಡ್ಲಿಗಿ: ಅಧಿಕಾರವೆಂಬುದು ಕೇವಲ ಆಡಳಿತ ನಡೆಸುವ ಹೊಣೆಗಾರಿಕೆಯಲ್ಲ; ಸಂಕಷ್ಟದಲ್ಲಿರುವವರ ಕಣ್ಣೀರೊರೆಸುವ ಮಾನವೀಯ ಹೊಣೆಗಾರಿಕೆಯೂ ಹೌದು ಎಂಬುದನ್ನು ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಮತ್ತೊಮ್ಮೆ ತೋರಿಸಿದ್ದಾರೆ. ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮದ ದಿವ್ಯಾಂಗ ಯುವಕನೊಬ್ಬ ಹಲವು ದಿನಗಳಿಂದ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ ಅಸಹಾಯಕ ಬದುಕು ಸಾಗಿಸುತ್ತಿದ್ದ. ಮನೆಯಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲದೆ ಮುಜುಗರ ಹಾಗೂ ಸಂಕಷ್ಟ ಅನುಭವಿಸುತ್ತಿದ್ದ ಈತನಿಗೆ, ಓಡಾಡಲು ಸೂಕ್ತ ವಾಹನವೂ ಇರಲಿಲ್ಲ. ಇದರಿಂದ ದಿನನಿತ್ಯದ ಬದುಕೇ ಸವಾಲಾಗಿ ಪರಿಣಮಿಸಿತ್ತು. ಇದಕ್ಕಿಂತಲೂ ನೋವಿನ ಸಂಗತಿಯೆಂದರೆ, ದ್ವಿಚಕ್ರ ವಾಹನ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ ಪರಿಣಾಮ ಯುವಕನ ಕುಟುಂಬದ ಸಂಕಷ್ಟ ಮತ್ತಷ್ಟು ಹೆಚ್ಚಾಗಿತ್ತು. ಒಂದು ಕಡೆ ದೈಹಿಕ ಅಸಹಾಯಕತೆ, ಮತ್ತೊಂದೆಡೆ ಆರ್ಥಿಕ ಸಂಕಷ್ಟ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ—ಇವೆಲ್ಲವೂ ಆತನ ಬದುಕನ್ನು ಕತ್ತಲೆಯತ್ತ ತಳ್ಳಿದ್ದವು. ಸ್ನೇಹಿತರ ಮನವಿಗೆ ಸ್ಪಂದಿಸಿದ ಶಾಸಕ ಯುವಕನ ಪರಿಸ್ಥಿತಿಯನ್ನು ಆತನ ಸ್ನೇಹಿತರು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರ ಗಮನಕ್ಕೆ ತಂದರು. ವಿಷಯ ತಿಳಿದ ತಕ್ಷಣವೇ ಶಾಸಕ ಸ್ಪಂದಿಸಿದ್ದು, ಯಾವುದೇ ವಿಳಂಬ ಮಾಡದೆ ಯುವಕನ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.1