ದ್ವಿತೀಯ ಪಿಯುಸಿ ಫಲಿತಾಂಶ: ಸಂಶಿ ಕೆ.ಎಲ್.ಇ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ ಕುಂದಗೋಳ: ತಾಲ್ಲೂಕಿನ ಸಂಶಿ ಗ್ರಾಮದ ಕೆ.ಎಲ್.ಇ ಸಂಸ್ಥೆಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಮೂರೂ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಶ್ರೇಷ್ಠ ಸಾಧನೆ ಮಾಡುವ ಮೂಲಕ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಅನಾವರಣಗೊಳಿಸಿದ್ದಾರೆ. ವಿಭಾಗವಾರು ಸಾಧಕರು: ಕಲಾ ವಿಭಾಗದಲ್ಲಿ ಅಶ್ವಿನಿ ಪೂಜಾರ (93.50%) ಪ್ರಥಮ ಸ್ಥಾನ ಗಳಿಸಿದರೆ, ರಶ್ಮಿ ಪಶುಪತಿಹಾಳ (91.83%) ದ್ವಿತೀಯ ಹಾಗೂ ಪ್ರಜಕ್ತಾ ಬೋಸ್ಲೆ (88.33%) ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನವ್ಯಾ ಪಾಟೀಲ (92.16%) ಪ್ರಥಮ, ಜ್ಯೋತಿ ಸೊರಟಿ (91.00%) ದ್ವಿತೀಯ ಹಾಗೂ ಅನ್ನಪೂರ್ಣಾ ಪಾಟೀಲ (90.16%) ತೃತೀಯ ಸ್ಥಾನ ಗಳಿಸಿ ಸಾಧನೆ ಮೆರೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಬಿಬಿಅಮಿನಾ ಅಲ್ಲಿಖಾನವರ (92.66%) ಪ್ರಥಮ ಸ್ಥಾನ ಪಡೆದರೆ, ಸುಶ್ಮಾ ಹಂಚಿನಾಳ (88.83%) ದ್ವಿತೀಯ ಹಾಗೂ ಪೂರ್ಣಿಮಾ ಕಾಳೆ (88.16%) ತೃತೀಯ ಸ್ಥಾನ ಪಡೆದು ಕಾಲೇಜಿನ ಹಿರಿಮೆ ಹೆಚ್ಚಿಸಿದ್ದಾರೆ. ನೂರಕ್ಕೆ ನೂರು ಅಂಕದ ಸಂಭ್ರಮ: ಕಾಲೇಜಿನ ಫಲಿತಾಂಶದ ವಿಶೇಷವೆಂದರೆ, ಕನ್ನಡ ವಿಷಯದಲ್ಲಿ ಒಬ್ಬರು, ರಾಜ್ಯಶಾಸ್ತ್ರ ವಿಷಯದಲ್ಲಿ ಒಬ್ಬರು ಹಾಗೂ ಶಿಕ್ಷಣ ಶಾಸ್ತ್ರ ವಿಷಯದಲ್ಲಿ ಐವರು ವಿದ್ಯಾರ್ಥಿನಿಯರು ನೂರಕ್ಕೆ ನೂರು ಅಂಕಗಳನ್ನು ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಪರೀಕ್ಷೆಗೆ ಕುಳಿತ ಒಟ್ಟು ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ (Distinction), 63 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 26 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ 5 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಗೆ ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿ, ಕಾಲೇಜಿನ ಪ್ರಾಚಾರ್ಯರು ಹಾಗೂ ಸಕಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

- ಭಾಲ್ಕಿಯಲ್ಲಿ ಬೃಹತ್ ಆರೋಗ್ಯ ಶಿಬಿರ: 180 ಜನರಿಗೆ ತಪಾಸಣೆ, 101 ಯುವಕರಿಂದ ರಕ್ತದಾನ ಆರೋಗ್ಯವೇ ಭಾಗ್ಯ: ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಮಾನವೀಯತೆಯ ಮೆರಗು; 101 ಯುನಿಟ್ ರಕ್ತ ಸಂಗ್ರಹ #JB_News_Kannada1
- *ರಾಯಬಾಗದಲ್ಲಿ ಬಸವ ಜಯಂತಿಯ ಹಳ್ಳಿ ಸೊಬಗು: ಶಿಕ್ಷಣ ಪ್ರೇಮಿ ಪಾಟೀಲ ಪರಿವಾರದ ಜನಸೇವೆಗೆ ಸಾಕ್ಷಿಯಾದ ಶೋಭಾಯಾತ್ರೆ* ಕಾಯಕವೇ ಕೈಲಾಸ ಎಂದು ಸಾರಿದ ಜಗಜ್ಯೋತಿ ಬಸವಣ್ಣನವರ ಜಯಂತಿಯ ನಿಮಿತ್ತ ಇಂದು ರಾಯಬಾಗ ಪಟ್ಟಣ ಭಕ್ತಿ ಮತ್ತು ಸಂಭ್ರಮದ ಕಡಲಲ್ಲಿ ತೇಲಿತು. ಪಟ್ಟಣದಾದ್ಯಂತ ಹಮ್ಮಿಕೊಳ್ಳಲಾಗಿದ್ದ ಭವ್ಯ ಶೋಭಾಯಾತ್ರೆಯು ಹಳ್ಳಿಯ ಸೊಬಗನ್ನು ಮರುಸೃಷ್ಟಿಸಿ ನೋಡುಗರ ಕಣ್ಮನ ಸೆಳೆಯಿತು. ಹಿಂದೂ ಧರ್ಮದಲ್ಲಿ ಬಸವಣ್ಣ ಅಥವಾ ನಂದಿ ಎಂದು ಪೂಜಿಸಲ್ಪಡುವ ಸುಮಾರು 170ಕ್ಕೂ ಹೆಚ್ಚು ಎತ್ತುಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿತ್ತು. ಸಾಲು ಸಾಲಾಗಿ ಸಾಗುತ್ತಿದ್ದ ಈ ಎತ್ತುಗಳ ಗಾಂಭೀರ್ಯವು ಗ್ರಾಮೀಣ ಸೊಬಗನ್ನು ಎತ್ತಿ ತೋರಿಸುವಂತಿತ್ತು. ಮೆರವಣಿಗೆಯ ಮುಂಚೂಣಿಯಲ್ಲಿ ಕಂಗೊಳಿಸುತ್ತಿದ್ದ ಬಸವಣ್ಣನವರ ಬೃಹತ್ ಪುತ್ಥಳಿಯು ಭಕ್ತರ ಪಾಲಿಗೆ ದರ್ಶನ ಭಾಗ್ಯವನ್ನೇ ನೀಡಿತು. ರಾಯಬಾಗದ ಇತಿಹಾಸದಲ್ಲಿ ವಸಂತರಾವ್ ಪಾಟೀಲ್ ಅವರ ಕುಟುಂಬದ ಹೆಸರು ಅಚ್ಚಳಿಯದಂತದ್ದು. ಅಜ್ಜನ ಕಾಲದಿಂದಲೂ ಬಡವರಿಗೆ ಅಕ್ಷರ ದಾಸೋಹ ಮಾಡುತ್ತಾ ಬಂದಿರುವ ಈ ಕುಟುಂಬ, ಸಾವಿರಾರು ಜನ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಲು ಕಾರಣವಾಗಿದೆ. ಇಂದಿಗೂ ಶಿಕ್ಷಣ ಪ್ರೇಮಿಯಾಗಿ ಬಡ ಮಕ್ಕಳ ಪಾಲಿನ ಆಶಾಕಿರಣವಾಗಿರುವ ವಸಂತರಾವ್ ಪಾಟೀಲ್ ಅವರ ಸರಳತೆ ಎಲ್ಲರಿಗೂ ಮಾದರಿ. ಈ ಮೆರವಣಿಗೆಯ ವಿಶೇಷ ಆಕರ್ಷಣೆಯೆಂದರೆ, ಹಿರಿಯರು ಮತ್ತು ಯುವಕರ ಹೃದಯದಲ್ಲಿ ಸ್ಥಾನ ಪಡೆದಿರುವ ಯುವ ನಾಯಕ ಪ್ರಣಯ್ ಅಣ್ಣ ಪಾಟೀಲ್ ಅವರ ಮೇಲಿನ ಅಭಿಮಾನ. ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಅವರ ಭಾವಚಿತ್ರವನ್ನು ಎತ್ತುಗಳ ಮೇಲೆ ಕಲಾತ್ಮಕವಾಗಿ ಬಿಡಿಸಿದ್ದು, ಜನರ ವಿಶೇಷ ಗಮನ ಸೆಳೆಯಿತು. "ಶಿಕ್ಷಣದ ಮೂಲಕ ಬದುಕು ಕಟ್ಟಿಕೊಟ್ಟ ಹಿರಿಯರು ಒಂದೆಡೆಯಾದರೆ, ಸಮಾಜ ಸೇವೆಯ ಮೂಲಕ ಯುವ ಶಕ್ತಿಯನ್ನು ಸಂಘಟಿಸುತ್ತಿರುವ ಪ್ರಣಯ್ ಅಣ್ಣ ಪಾಟೀಲ್ ಅವರ ನಾಯಕತ್ವ ರಾಯಬಾಗಕ್ಕೆ ಹೆಮ್ಮೆ."1
- Post by Onlinetv24x71
- Post by Mayur TV Hangal YouTube c1
- ಏ. 20 : ಅರಸೀಕೆರೆ ತಾಲೂಕು ರಾಮಸಾಗರ ಗ್ರಾಮದ ಬಸವ ತತ್ವ ಪ್ರಸಾರ ಕೇಂದ್ರದಲ್ಲಿ ಶರಣ ಸಿದ್ದಪ್ಪ ಶರಣೆ ಮಲ್ಲಮ್ಮನವರು ಸ್ಥಾಪಿಸಿರುವ ಶ್ರೀ ಬಸವ ತತ್ವ ಪ್ರಸಾರ ಕೇಂದ್ರವನ್ನು 2013ರಲ್ಲಿ 12ನೇ ಶತಮಾನದ ಆಗಿಹೋದ ಶರಣರ ಆಚರಣೆ ಅನುಭಾವ, ಅನುಕರಣೆ, ಪ್ರಚಾರಕ್ಕೋಸ್ಕರ ಸ್ಥಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ಯಾರ ಸಹಾಯವಿಲ್ಲದೆ ತನು-ಮನ ಧನವನ್ನು ಬಸವ ತತ್ವ ಪ್ರಚಾರಕ್ಕೆ ಮುಡುಪಾಗಿಟ್ಟಂತಹ ದಂಪತಿಗಳಿವರು. ಈವರು ಸ್ಥಾಪಿಸಲ್ಪಟ್ಟ ಬಸವ ತತ್ವ ಪ್ರಸಾರ ಕೇಂದ್ರದಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆ ಮಾಡಲಾಯಿತು. ಪ್ರತಿ ತಿಂಗಳು ಒಂದರಂದು ಲಿಂಗ ಪೂಜೆ, ಅನುಭಾವ, ಪ್ರಸಾದ, ಪ್ರಚಾರ ಈತರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ ಈ ಕಾರ್ಯಕ್ರಮಗಳಿಗೆ ನಾವೆಲ್ಲರೂ ಅಭಿನಂದಿಸೋಣ. ಇಂದು ಈ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಶರಣ ಹಾಲಪ್ಪ ಹಿರಿಯೂರ್, ಶರಣ ಸಿದ್ದೇಶ, ಪುಟಾಣಿ ಮಕ್ಕಳು ಹಾಗೂ ಶರಣ ಶ್ರೀ ವಿನಯ್ ಪಾಟೀಲ್ ರವರು ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರಾಮಸಾಗರ ಗ್ರಾಮಸ್ಥರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.2
- ಗುಳೇದಗುಡ್ಡ: ಜಗತ್ತಿನಲ್ಲಿ ತುಂಬಿದ್ದ ಅಜ್ಞಾನ, ಮೂಢನಂಬಿಕೆ, ಕಂದಾಚಾರ, ಜಾತಿಯತೆಯಂತಹ ಅಂಧಕಾರವನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡಿದ ಜಗಜ್ಯೋತಿ ಬಸವಣ್ಣನವರು ಸಮಾಜದಲ್ಲಿ ಸಮಾನತೆಯನ್ನು ಸಾರಿದವರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಬಸವಣ್ಣ ಈ ನೆಲದ ಸಾಂಸ್ಕೃತಿಕ ನಾಯಕರು ಎಂದು ಸಾಹಿತಿ ರವಿ ಕಂಗಳ ಹೇಳಿದರು. ಅವರು ಸೋಮವಾರ ಪಟ್ಟಣದ ಬಸವ ಕೇಂದ್ರ ವತಿಯಿಂದ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾನತೆ ಸಾರಿದ ಕ್ರಾಂತಿ ಪುರುಷ ಬಸವಣ್ಣನವರು. ಕಾಯಕವೇ ಕೈಲಾಸ ಎಂಬ ತತ್ವಬೋಧಿಸಿ, ಸರ್ವಜಾತಿ ಜನಾಂಗಗಳ ಸಮಾನತೆಯ ಕನಸು ಕಂಡು ಕಲ್ಯಾಣದಲ್ಲಿ ಕಟ್ಟಿದ ಅನುಭವ ಮಂಟಪ ಜಗತ್ತಿಗೆ ಸರ್ವಧರ್ಮ ಸಮಾನತೆ ಸಾರುತ್ತಿದೆ ಎಂದರು. ಪ್ರೊ.ಸಿದ್ದಲಿಂಗಪ್ಪ ಬರಗುಂಡಿ ಮಾತನಾಡಿ, ನಮ್ಮೆಲ್ಲರ ಮನೆಯೂ ಮಹಾಮನೆಯಾಗವ ಮೂಲಕ ಶರಣ ವಚನ,ತತ್ವಗಳು ಮನೆಮನೆಗೂ ಪಸರಿಸಬೇಕು ಎಂಬ ಉದ್ದೇಶದಿಂದ ಬಸವಕೇಂದ್ರದಿಂದ ಪಟ್ಟಣದಲ್ಲಿ ಪ್ರತಿವಾರವೂ ಒಬ್ಬೊಬ್ಬ ಶರಣರ ಮನೆಯಲ್ಲಿ ಮಹಾಮನೆಕಾರ್ಯಕ್ರಮ ಕಳೆದ 30 ವರ್ಷಗಳಿಂದ ನಡೆಸಲಾಗುತ್ತಿದೆ ಎಂದರು. ಕಾರ್ಯಕ್ರಮಕ್ಕೂ ಮೊದಲು ಮುರಗೇಶ ಶೇಖಾ, ಗೀತಾ ತಿಪ್ಪಾ ಅವರಿಂದ ಸಾಮೂಹಿಕ ಸಹಜ ಶಿವಯೋಗ ಕಾರ್ಯಕ್ರಮ ನಡೆಯಿತು. ಅಕ್ಕಮಹಾದೇವಿ ದೇವಸ್ಥಾನದ ಶರಣಮ್ಮತಾಯಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಬಸವ ಕೇಂದ್ರದ ಗೌರವಾಧ್ಯಕ್ಷ ಎಚ್.ಎಸ್. ಹುಳಿಪಲ್ಲೇದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಚಣ್ಣ ಕೆರೂರ, ರವೀಂದ್ರ ಪಟ್ಟಣಶೆಟ್ಟಿ, ರವಿ ಅಂಗಡಿ, ಪ್ರೊ.ಎಸ್.ಐ.ರಾಜನಾಳ, ಪ್ರೊ.ಜಿ.ಜಿ.ಹೂಗಾರ, ಶಿವಾನಂದ ಸಿಂದಗಿ, ಬಸವರಾಜ ಬರಗುಂಡಿ, ಸುರೇಶ ರಾಜನಾಳ, ರಾಚಪ್ಪ ಯಂಡಿಗೇರಿ, ಶಿವಕುಮಾರ ಶಿಪ್ರಿ, ಮಹಾಲಿಂಗಪ್ಪ ಕರನಂದಿ, ಗಿರೀಶ ನೀಲಕಂಠಮಠ, ಬಸವರಾಜ ಗೆದ್ದಲಮರಿ, ಸಂಗಮೇಶ ಯಳಮೇಲಿ, ಮಹಾಂತೇಶ ಸಿಂದಗಿ, ಶ್ರೀದೇವಿ ಶೇಖಾ, ಜಯಶ್ರೀ ಬರಗುಂಡಿ, ಚನ್ನಮ್ಮ ಜವಳಿ, ಸುರೇಖಾ ಗೆದ್ದಲಮರಿ, ನಿರ್ಮಲಾ ಬರಗುಂಡಿ, ಕವಿತಾ ಬರಗುಂಡಿ, ವಿಶಾಲಾಕ್ಷಿ ಗಾಳಿ, ಗಾಯತ್ರಿ ಕಲ್ಯಾಣಿ, ಸುರೇಖಾ ಕಲ್ಯಾಣಿ, ಸೌಮ್ಯಾ ಯಳಮೇಲಿ, ಲಕ್ಷ್ಮೀ ತೊರಲಿ ಮತ್ತಿತರರು ಇದ್ದರು.1
- ಮಹಿಳಾ ಮೀಸಲಾತಿ ಬಿಲ್ ವಿಚಾರದಲ್ಲಿ ದಕ್ಷಿಣ ಭಾರತದ ಸೀಟ್ ಕಡಿಮೆ ಮಾಡಲು ಇದು ಷಡ್ಯಂತ್ರ. ಒಬ್ಬನೇ ಒಬ್ಬ ಬಿಜೆಪಿಯವರು ಮಾತಾಡುತ್ತಿಲ್ಲ. ದಕ್ಷಿಣ ಭಾರತದವರು ಇಲ್ಲದೇ ಇದ್ದರೂ ಅವರದೇ ಸರ್ಕಾರ ತರೋ ಹುನ್ನಾರ ಮಾಡಿದ್ದಾರೆ ಎಂದು ಹುಬ್ಬಳ್ಳಿ ವಿಮಾನನಿಲ್ದಾಣದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ಹುಬ್ಬಳ್ಳಿ ನಗರದಲ್ಲಿ ಭಾನುವಾರ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಬಿಲ್ ಅನ್ನು ನಾವು ಸೋಲಿಸಿದ್ದೇವೆ. ಇದು ಅವರ ಸೋಲಿನ ಆರಂಭ, ಇದು ಮುಂದುವರಿಯಲಿದೆ ಎಂದರು. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಸರ್ಕಾರ ಪರವಾನಗಿ ಕೊಡಿಸುತ್ತಿಲ್ಲ, ಬಿಜೆಪಿ ಎಂಪಿ ಗಳು ಕರ್ನಾಟಕ ನೀರಾವರಿಗೆ ಯಾವುದೇ ಕೊಡುಗೆ ನೀಡುತ್ತಿಲ್ಲ. ಎಲ್ಲರೂ ಅಡ್ವಾಂಟೇಜ್ ತೆಗೆದುಕೊಳ್ಳಲು ಹೋಗುತ್ತಿದ್ದಾರೆ. ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಬಿಜೆಪಿ ಈ ವಿಚಾರದಲ್ಲಿ ಪೇಲ್ ಆಗಿದೆ. ಪಿಎಂ ಭೇಟಿ ಮಾಡಿ ಮಾತಾಡುವಷ್ಟು ಶಕ್ತಿ ಬಿಜೆಪಿ ಎಂಪಿ ಗಳಿಗೆ ಇಲ್ಲ ಎಂದು ಕಿಡಿಕಾರಿದರು.1
- Post by Onlinetv24x71
- |ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆ ಹಳೇ ಮುರನಾಳ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆ|1