logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಪರಿಶಿಷ್ಟ ಜಾತಿ (ಎಸ್‍ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‍ಟಿ) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಜಾರಿಗೆ ತರಲಾದ 56% ಮೀಸಲಾತಿ ಕಾಯ್ದೆಯನ್ನು ತಕ್ಷಣವೇ ಸಂವಿಧಾನದ 9ನೇ ಷೆಡ್ಯೂಲ್‍ಗೆ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ಹಾಗೂ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಒತ್ತಾಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉರ್ವದಲ್ಲಿ ಮಾತನಾಡಿದ ಅವರು, ಈ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ ಒಂಬತ್ತನೇ ಷೆಡ್ಯೂಲ್‌ಗೆ ಸೇರಿಸುವ ಜೊತೆಗೆ ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳ ಹಾವಳಿಯನ್ನು ತಕ್ಷಣವೇ ತಡೆಗಟ್ಟಬೇಕು ಎಂದು ಆಗ್ರಹಿಸಿದರು.

4 hrs ago
user_Shamsheer Budoli
Shamsheer Budoli
Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
4 hrs ago

ಪರಿಶಿಷ್ಟ ಜಾತಿ (ಎಸ್‍ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‍ಟಿ) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಜಾರಿಗೆ ತರಲಾದ 56% ಮೀಸಲಾತಿ ಕಾಯ್ದೆಯನ್ನು ತಕ್ಷಣವೇ ಸಂವಿಧಾನದ 9ನೇ ಷೆಡ್ಯೂಲ್‍ಗೆ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ಹಾಗೂ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಒತ್ತಾಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉರ್ವದಲ್ಲಿ ಮಾತನಾಡಿದ ಅವರು, ಈ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ ಒಂಬತ್ತನೇ ಷೆಡ್ಯೂಲ್‌ಗೆ ಸೇರಿಸುವ ಜೊತೆಗೆ ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳ ಹಾವಳಿಯನ್ನು ತಕ್ಷಣವೇ ತಡೆಗಟ್ಟಬೇಕು ಎಂದು ಆಗ್ರಹಿಸಿದರು.

More news from ಕರ್ನಾಟಕ and nearby areas
  • ರಾಜ್ಯದಲ್ಲಿ ಮುಂಗಾರು ಮಳೆಯ ಪ್ರಭಾವ ಕ್ಷೀಣಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದ್ದು, ಇಂದು ಬಿಸಿಲು ಹೆಚ್ಚಾಗಿತ್ತು. ಆದರೆ, ಮಹಾರಾಷ್ಟ್ರ ಹಾಗೂ ಘಟ್ಟ ಪ್ರದೇಶಗಳಲ್ಲಿ ಸುರಿದ ಮಳೆಯ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ಸೇತುವೆಗಳು ಮುಳುಗಡೆಯಾಗಿವೆ. ಇದೇ ನಡುವೆ, ಶುಕ್ರವಾರದಂದು ತುಂಗಭದ್ರಾ ಜಲಾಶಯಕ್ಕೆ 4 ಟಿಎಂಸಿಗಿಂತ ಅಧಿಕ ಪ್ರಮಾಣದ ನೀರು ಹರಿದು ಬಂದಿದೆ. ಸದ್ಯ ರಾಜ್ಯದಲ್ಲಿ ಮೋಡ ಕವಿದ ವಾತಾವರಣದ ಮಧ್ಯೆ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ.
    1
    ರಾಜ್ಯದಲ್ಲಿ ಮುಂಗಾರು ಮಳೆಯ ಪ್ರಭಾವ ಕ್ಷೀಣಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದ್ದು, ಇಂದು ಬಿಸಿಲು ಹೆಚ್ಚಾಗಿತ್ತು. ಆದರೆ, ಮಹಾರಾಷ್ಟ್ರ ಹಾಗೂ ಘಟ್ಟ ಪ್ರದೇಶಗಳಲ್ಲಿ ಸುರಿದ ಮಳೆಯ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ಸೇತುವೆಗಳು ಮುಳುಗಡೆಯಾಗಿವೆ.

ಇದೇ ನಡುವೆ, ಶುಕ್ರವಾರದಂದು ತುಂಗಭದ್ರಾ ಜಲಾಶಯಕ್ಕೆ 4 ಟಿಎಂಸಿಗಿಂತ ಅಧಿಕ ಪ್ರಮಾಣದ ನೀರು ಹರಿದು ಬಂದಿದೆ. ಸದ್ಯ ರಾಜ್ಯದಲ್ಲಿ ಮೋಡ ಕವಿದ ವಾತಾವರಣದ ಮಧ್ಯೆ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    4 hrs ago
  • Available for Sale Item : ಅಕ್ಕಿ Quantity Available : 500 Price : 60 City / Locality : ಹೊಸನಗರ Farming Sector : Crops ಕೆಂಪಕ್ಕಿ ದೊರೆಯುತ್ತದೆ
    1
    Available for Sale
Item : ಅಕ್ಕಿ
Quantity Available : 500
Price : 60
City / Locality : ಹೊಸನಗರ 
Farming Sector : Crops
ಕೆಂಪಕ್ಕಿ ದೊರೆಯುತ್ತದೆ
    user_Krishnamurthy
    Krishnamurthy
    ಹೊಸನಗರ, ಶಿವಮೊಗ್ಗ, ಕರ್ನಾಟಕ•
    11 hrs ago
  • ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನೆಲ್ಲಿಹುದಿಕೇರಿಯ ಎಂ.ಜಿ ಕಾಲೋನಿಯಲ್ಲಿ ತಡರಾತ್ರಿ 11 ಗಂಟೆ ಸುಮಾರಿಗೆ ಕಾಡಾನೆ ಪ್ರತ್ಯಕ್ಷವಾಗಿದೆ. ಜನನಿಬಿಡ ಪ್ರದೇಶವಾಗಿರುವ ಎಂ.ಜಿ ಕಾಲೋನಿಯ ಒಂಟಿಸಲಗ ರಸ್ತೆಯಲ್ಲಿ ಈ ಆನೆ ರಾಜಾರೋಷವಾಗಿ ಸಂಚರಿಸುತ್ತಾ ವಾಕಿಂಗ್ ಮಾಡಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ನಗರದ ಮಧ್ಯಭಾಗದಲ್ಲಿ ಕಾಡಾನೆ ಈ ರೀತಿ ಮುಕ್ತವಾಗಿ ಓಡಾಡುತ್ತಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ. ರಾತ್ರೋರಾತ್ರಿ ಆನೆ ರಸ್ತೆಯಲ್ಲಿ ನಡೆದುಕೊಂಡು ಸಾಗಿದ ದೃಶ್ಯಗಳು ಭೀತಿಯನ್ನು ಹುಟ್ಟುಹಾಕಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ.
    1
    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನೆಲ್ಲಿಹುದಿಕೇರಿಯ ಎಂ.ಜಿ ಕಾಲೋನಿಯಲ್ಲಿ ತಡರಾತ್ರಿ 11 ಗಂಟೆ ಸುಮಾರಿಗೆ ಕಾಡಾನೆ ಪ್ರತ್ಯಕ್ಷವಾಗಿದೆ. ಜನನಿಬಿಡ ಪ್ರದೇಶವಾಗಿರುವ ಎಂ.ಜಿ ಕಾಲೋನಿಯ ಒಂಟಿಸಲಗ ರಸ್ತೆಯಲ್ಲಿ ಈ ಆನೆ ರಾಜಾರೋಷವಾಗಿ ಸಂಚರಿಸುತ್ತಾ ವಾಕಿಂಗ್ ಮಾಡಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ.

ನಗರದ ಮಧ್ಯಭಾಗದಲ್ಲಿ ಕಾಡಾನೆ ಈ ರೀತಿ ಮುಕ್ತವಾಗಿ ಓಡಾಡುತ್ತಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ. ರಾತ್ರೋರಾತ್ರಿ ಆನೆ ರಸ್ತೆಯಲ್ಲಿ ನಡೆದುಕೊಂಡು ಸಾಗಿದ ದೃಶ್ಯಗಳು ಭೀತಿಯನ್ನು ಹುಟ್ಟುಹಾಕಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ.
    user_Kodagu Updates
    Kodagu Updates
    ಮಡಿಕೇರಿ, ಕೊಡಗು, ಕರ್ನಾಟಕ•
    22 hrs ago
  • ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಕಂಬಳ ಆಯೋಜಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. ಮೈಸೂರು ದಸರಾವನ್ನು ಬೇರೆ ಕಡೆ ಆಯೋಜಿಸಿದರೆ ಹೇಗೋ, ಹಾಗೆಯೇ ದಸರಾ ಸಮಯದಲ್ಲಿ ಮೈಸೂರಿನಲ್ಲಿ ಕಂಬಳ ಮಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟ ಅವರು, ಈ ವಿಚಾರದಲ್ಲಿ ಕಂಬಳ ಬೇಡ ಎಂಬ ಯದುವೀರ್ ಒಡೆಯರ್ ಅವರ ನಿಲುವಿಗೆ ತಾವು ಸಹಮತ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ. ಈ ವಿಷಯದಲ್ಲಿ ಹಠಮಾರಿತನ ಬಿಟ್ಟು ಜನರ ಮಾತಿಗೆ ಮನ್ನಣೆ ನೀಡುವಂತೆ ಡಿಕೆ ಶಿವಕುಮಾರ್ ಅವರಿಗೆ ವಿಜಯೇಂದ್ರ ಸಲಹೆ ನೀಡಿದ್ದಾರೆ. ತಮಗೆ ಕಂಬಳದ ಮೇಲೆ ಯಾವುದೇ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಜ್ಯ ಸರ್ಕಾರವು ದಕ್ಷಿಣ ಕನ್ನಡದಲ್ಲಿ ಅದ್ದೂರಿಯಾಗಿ ಕಂಬಳ ಆಯೋಜಿಸಲಿ, ಅದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಕಂಬಳಕ್ಕೆ ಅನುದಾನ ನೀಡಿದ್ದನ್ನು ಸ್ಮರಿಸಿದ ಅವರು, ಮೈಸೂರಿನಲ್ಲಿ ದಸರಾ ಸಂಭ್ರಮದ ವೇಳೆ ಕಂಬಳ ಬೇಡ ಎಂಬುದು ಸ್ಥಳೀಯರ ಆಗ್ರಹವಾಗಿದೆ ಎಂದು ಹೇಳಿದ್ದಾರೆ.
    1
    ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಕಂಬಳ ಆಯೋಜಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. ಮೈಸೂರು ದಸರಾವನ್ನು ಬೇರೆ ಕಡೆ ಆಯೋಜಿಸಿದರೆ ಹೇಗೋ, ಹಾಗೆಯೇ ದಸರಾ ಸಮಯದಲ್ಲಿ ಮೈಸೂರಿನಲ್ಲಿ ಕಂಬಳ ಮಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟ ಅವರು, ಈ ವಿಚಾರದಲ್ಲಿ ಕಂಬಳ ಬೇಡ ಎಂಬ ಯದುವೀರ್ ಒಡೆಯರ್ ಅವರ ನಿಲುವಿಗೆ ತಾವು ಸಹಮತ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.

ಈ ವಿಷಯದಲ್ಲಿ ಹಠಮಾರಿತನ ಬಿಟ್ಟು ಜನರ ಮಾತಿಗೆ ಮನ್ನಣೆ ನೀಡುವಂತೆ ಡಿಕೆ ಶಿವಕುಮಾರ್ ಅವರಿಗೆ ವಿಜಯೇಂದ್ರ ಸಲಹೆ ನೀಡಿದ್ದಾರೆ. ತಮಗೆ ಕಂಬಳದ ಮೇಲೆ ಯಾವುದೇ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಜ್ಯ ಸರ್ಕಾರವು ದಕ್ಷಿಣ ಕನ್ನಡದಲ್ಲಿ ಅದ್ದೂರಿಯಾಗಿ ಕಂಬಳ ಆಯೋಜಿಸಲಿ, ಅದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಕಂಬಳಕ್ಕೆ ಅನುದಾನ ನೀಡಿದ್ದನ್ನು ಸ್ಮರಿಸಿದ ಅವರು, ಮೈಸೂರಿನಲ್ಲಿ ದಸರಾ ಸಂಭ್ರಮದ ವೇಳೆ ಕಂಬಳ ಬೇಡ ಎಂಬುದು ಸ್ಥಳೀಯರ ಆಗ್ರಹವಾಗಿದೆ ಎಂದು ಹೇಳಿದ್ದಾರೆ.
    user_Ravikumar
    Ravikumar
    Local News Reporter ಹುಣಸೂರು, ಮೈಸೂರು, ಕರ್ನಾಟಕ•
    8 hrs ago
  • ತುರುವೇಕೆರೆ ಪಟ್ಟಣದ ತಾಲೂಕು ಕಚೇರಿಯ ಹಿಂಭಾಗದಲ್ಲಿರುವ ಇಂದಿರಾ ಕ್ಯಾಂಟೀನ್ ಹಲವು ದಿನಗಳಿಂದ ಅನಿಶ್ಚಿತವಾಗಿ ಬಾಗಿಲು ಮುಚ್ಚುತ್ತಿದ್ದು, ಇದರಿಂದ ಬಡ ಕೂಲಿ ಕಾರ್ಮಿಕರು, ಆಶಕ್ತರು, ವಯೋವೃದ್ಧರು ಮತ್ತು ಬೀದಿ ವ್ಯಾಪಾರಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದಿಂದ ಹಸಿವು ನೀಗಿಸಿಕೊಳ್ಳಲು ಬರುವವರಿಗೆ ಗೇಟಿಗೆ ಬೀಗ ಹಾಕಿರುವುದು ನಿತ್ಯದ ಗೋಳಾಗಿದೆ. ಯಾವುದೇ ನಾಮಫಲಕವಿಲ್ಲದ ಈ ಕ್ಯಾಂಟೀನ್ ಮುಂದೆ ಬರುವ ಜನರು, ಗೇಟ್ ಬಂದ್ ಆಗಿರುವುದನ್ನು ಕಂಡು ಹತಾಶರಾಗಿ ಹಿಂತಿರುಗುತ್ತಿದ್ದಾರೆ. ಕ್ಯಾಂಟೀನ್ ಸಿಬ್ಬಂದಿಯನ್ನು ವಿಚಾರಿಸಿದಾಗ ಅವರು ಉಡಾಫೆಯ ಉತ್ತರ ನೀಡುತ್ತಿದ್ದು, ನಾನಾ ನೆಪಗಳನ್ನು ಒಡ್ಡಿ ಆಹಾರ ತಯಾರಿಸದೇ ಸಾರ್ವಜನಿಕರನ್ನು ಕಣ್ಣುಮುಚ್ಚಾಲೆ ಆಟವಾಡಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಸಿದು ಬರುವ ಜನರು ಬಾಗಿಲು ತೆಗೆಯುವಂತೆ ಅಂಗಲಾಚಿದರೂ ಅಧಿಕಾರಿಗಳಿಗೆ ಆ ಆರ್ತನಾದ ಕೇಳಿಸುತ್ತಿಲ್ಲ. ನಿರ್ವಹಣೆಗಾರರ ನಿರ್ಲಕ್ಷ್ಯ ಮತ್ತು ಮನಸೋ ಇಚ್ಛೆಯ ವರ್ತನೆಯಿಂದಾಗಿ ಸರ್ಕಾರ ಹಾಗೂ ವ್ಯವಸ್ಥಾಪಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಮತ್ತೆ ಎಂದಿಗೂ ಕಾರ್ಯನಿರ್ವಹಿಸುತ್ತದೆ ಮತ್ತು ಈ ಸಮಸ್ಯೆಗಳಿಗೆ ಯಾವಾಗ ಶಾಶ್ವತ ಪರಿಹಾರ ಸಿಗುತ್ತದೆ ಎಂಬುದೇ ಈಗ ಸಾರ್ವಜನಿಕರ ಪ್ರಶ್ನೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
    2
    ತುರುವೇಕೆರೆ ಪಟ್ಟಣದ ತಾಲೂಕು ಕಚೇರಿಯ ಹಿಂಭಾಗದಲ್ಲಿರುವ ಇಂದಿರಾ ಕ್ಯಾಂಟೀನ್ ಹಲವು ದಿನಗಳಿಂದ ಅನಿಶ್ಚಿತವಾಗಿ ಬಾಗಿಲು ಮುಚ್ಚುತ್ತಿದ್ದು, ಇದರಿಂದ ಬಡ ಕೂಲಿ ಕಾರ್ಮಿಕರು, ಆಶಕ್ತರು, ವಯೋವೃದ್ಧರು ಮತ್ತು ಬೀದಿ ವ್ಯಾಪಾರಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದಿಂದ ಹಸಿವು ನೀಗಿಸಿಕೊಳ್ಳಲು ಬರುವವರಿಗೆ ಗೇಟಿಗೆ ಬೀಗ ಹಾಕಿರುವುದು ನಿತ್ಯದ ಗೋಳಾಗಿದೆ. ಯಾವುದೇ ನಾಮಫಲಕವಿಲ್ಲದ ಈ ಕ್ಯಾಂಟೀನ್ ಮುಂದೆ ಬರುವ ಜನರು, ಗೇಟ್ ಬಂದ್ ಆಗಿರುವುದನ್ನು ಕಂಡು ಹತಾಶರಾಗಿ ಹಿಂತಿರುಗುತ್ತಿದ್ದಾರೆ.

ಕ್ಯಾಂಟೀನ್ ಸಿಬ್ಬಂದಿಯನ್ನು ವಿಚಾರಿಸಿದಾಗ ಅವರು ಉಡಾಫೆಯ ಉತ್ತರ ನೀಡುತ್ತಿದ್ದು, ನಾನಾ ನೆಪಗಳನ್ನು ಒಡ್ಡಿ ಆಹಾರ ತಯಾರಿಸದೇ ಸಾರ್ವಜನಿಕರನ್ನು ಕಣ್ಣುಮುಚ್ಚಾಲೆ ಆಟವಾಡಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಸಿದು ಬರುವ ಜನರು ಬಾಗಿಲು ತೆಗೆಯುವಂತೆ ಅಂಗಲಾಚಿದರೂ ಅಧಿಕಾರಿಗಳಿಗೆ ಆ ಆರ್ತನಾದ ಕೇಳಿಸುತ್ತಿಲ್ಲ. ನಿರ್ವಹಣೆಗಾರರ ನಿರ್ಲಕ್ಷ್ಯ ಮತ್ತು ಮನಸೋ ಇಚ್ಛೆಯ ವರ್ತನೆಯಿಂದಾಗಿ ಸರ್ಕಾರ ಹಾಗೂ ವ್ಯವಸ್ಥಾಪಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಮತ್ತೆ ಎಂದಿಗೂ ಕಾರ್ಯನಿರ್ವಹಿಸುತ್ತದೆ ಮತ್ತು ಈ ಸಮಸ್ಯೆಗಳಿಗೆ ಯಾವಾಗ ಶಾಶ್ವತ ಪರಿಹಾರ ಸಿಗುತ್ತದೆ ಎಂಬುದೇ ಈಗ ಸಾರ್ವಜನಿಕರ ಪ್ರಶ್ನೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
    user_Manohara
    Manohara
    Local News Reporter ತುರುವೇಕೆರೆ, ತುಮಕೂರು, ಕರ್ನಾಟಕ•
    9 hrs ago
  • ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಮುತ್ತುಗದಹಳ್ಳಿ ಸರ್ವೆ ನಂಬರ್ 31ರಲ್ಲಿರುವ ಬುಕ್ಕಾಪಟ್ಟಣ ಅರಣ್ಯ ವಲಯದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ಈ ತೆರವು ಪ್ರಕ್ರಿಯೆಯು ರೈತನೊಬ್ಬನಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ತಮ್ಮ ಬೆಳೆ ಕಟಾವಿಗೆ ಬರಲು ಕೇವಲ ಮೂರು ತಿಂಗಳು ಬಾಕಿ ಇರುವಾಗ ಅಧಿಕಾರಿಗಳು ತೆರವು ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ತಾವು ಇಷ್ಟು ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿದ ಫಸಲನ್ನು ಕಟಾವು ಮಾಡಲು ಅವಕಾಶ ನೀಡುವಂತೆ ರೈತರು ಅಧಿಕಾರಿಗಳ ಮುಂದೆ ಕೈಮುಗಿದು ಕಾಡಿ ಬೇಡಿಕೊಂಡರೂ, ಅಧಿಕಾರಿಗಳು ತಮ್ಮ ಪಟ್ಟು ಬಿಡದೆ ಜಮೀನನ್ನು ತೆರವುಗೊಳಿಸಿದ್ದಾರೆ. ಅಧಿಕಾರಿಗಳು ಮಾಡಿದ ತಪ್ಪಿಗೆ ರೈತ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    1
    ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಮುತ್ತುಗದಹಳ್ಳಿ ಸರ್ವೆ ನಂಬರ್ 31ರಲ್ಲಿರುವ ಬುಕ್ಕಾಪಟ್ಟಣ ಅರಣ್ಯ ವಲಯದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ಈ ತೆರವು ಪ್ರಕ್ರಿಯೆಯು ರೈತನೊಬ್ಬನಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ.

ತಮ್ಮ ಬೆಳೆ ಕಟಾವಿಗೆ ಬರಲು ಕೇವಲ ಮೂರು ತಿಂಗಳು ಬಾಕಿ ಇರುವಾಗ ಅಧಿಕಾರಿಗಳು ತೆರವು ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ತಾವು ಇಷ್ಟು ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿದ ಫಸಲನ್ನು ಕಟಾವು ಮಾಡಲು ಅವಕಾಶ ನೀಡುವಂತೆ ರೈತರು ಅಧಿಕಾರಿಗಳ ಮುಂದೆ ಕೈಮುಗಿದು ಕಾಡಿ ಬೇಡಿಕೊಂಡರೂ, ಅಧಿಕಾರಿಗಳು ತಮ್ಮ ಪಟ್ಟು ಬಿಡದೆ ಜಮೀನನ್ನು ತೆರವುಗೊಳಿಸಿದ್ದಾರೆ. ಅಧಿಕಾರಿಗಳು ಮಾಡಿದ ತಪ್ಪಿಗೆ ರೈತ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    23 hrs ago
  • ಮೈಸೂರಿನ ಕೆ.ಆರ್. ಮೊಹಲ್ಲಾದ 100 ಅಡಿ ಚಾಮರಾಜ ಡಬಲ್ ರಸ್ತೆಯಲ್ಲಿರುವ ಜೀನತ್ ಉಲ್ ಮಸೀದಿಯ ಅಕ್ರಮಗಳಿಗೆ ಸಂಬಂಧಿಸಿದ ವಾಸ್ತವಾಂಶ ವರದಿಯನ್ನು ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಮತ್ತು ಜಿಲ್ಲಾ ವಕ್ಫ್ ಅಧಿಕಾರಿಗಳು ತಡೆಹಿಡಿದಿರುವುದರ ಹಿಂದೆ ಯಾವ ಕಾರಣವಿದೆ ಎಂಬ ಗಂಭೀರ ಪ್ರಶ್ನೆ ಮೂಡಿದೆ. ಈ ಮಸೀದಿಯಲ್ಲಿ ನಡೆದಿರುವ ಅಕ್ರಮಗಳ ವರದಿಯನ್ನು ತಡೆಹಿಡಿದಿರುವುದರ ಬಗ್ಗೆ ತೀವ್ರ ಚರ್ಚೆಯಾಗುತ್ತಿದ್ದು, ಇದು ಭಾರತದಲ್ಲಿ ವೈರಲ್ ಆಗುತ್ತಿದೆ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಜಿಲ್ಲಾ ವಕ್ಫ್ ಅಧಿಕಾರಿಗಳು ಈ ವಾಸ್ತವಾಂಶ ವರದಿಯನ್ನು ಯಾವ ಕಾರಣಕ್ಕಾಗಿ ತಡೆಹಿಡಿದಿದ್ದಾರೆ ಎಂದು ಪ್ರಶ್ನಿಸಲಾಗುತ್ತಿದೆ.
    1
    ಮೈಸೂರಿನ ಕೆ.ಆರ್. ಮೊಹಲ್ಲಾದ 100 ಅಡಿ ಚಾಮರಾಜ ಡಬಲ್ ರಸ್ತೆಯಲ್ಲಿರುವ ಜೀನತ್ ಉಲ್ ಮಸೀದಿಯ ಅಕ್ರಮಗಳಿಗೆ ಸಂಬಂಧಿಸಿದ ವಾಸ್ತವಾಂಶ ವರದಿಯನ್ನು ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಮತ್ತು ಜಿಲ್ಲಾ ವಕ್ಫ್ ಅಧಿಕಾರಿಗಳು ತಡೆಹಿಡಿದಿರುವುದರ ಹಿಂದೆ ಯಾವ ಕಾರಣವಿದೆ ಎಂಬ ಗಂಭೀರ ಪ್ರಶ್ನೆ ಮೂಡಿದೆ. ಈ ಮಸೀದಿಯಲ್ಲಿ ನಡೆದಿರುವ ಅಕ್ರಮಗಳ ವರದಿಯನ್ನು ತಡೆಹಿಡಿದಿರುವುದರ ಬಗ್ಗೆ ತೀವ್ರ ಚರ್ಚೆಯಾಗುತ್ತಿದ್ದು, ಇದು ಭಾರತದಲ್ಲಿ ವೈರಲ್ ಆಗುತ್ತಿದೆ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಜಿಲ್ಲಾ ವಕ್ಫ್ ಅಧಿಕಾರಿಗಳು ಈ ವಾಸ್ತವಾಂಶ ವರದಿಯನ್ನು ಯಾವ ಕಾರಣಕ್ಕಾಗಿ ತಡೆಹಿಡಿದಿದ್ದಾರೆ ಎಂದು ಪ್ರಶ್ನಿಸಲಾಗುತ್ತಿದೆ.
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    5 hrs ago
  • ಪುತ್ತೂರಿನ ನರಿಮೊಗರಿನ ಪುರುಷರಕಟ್ಟೆಯಲ್ಲಿ ನಡೆದಿರುವ ಘಟನೆಯ ಸತ್ಯಾಸತ್ಯತೆ ತಿಳಿಯದೆ, ಕೇವಲ ರಾಜಕೀಯ ಉದ್ದೇಶಕ್ಕಾಗಿ ಹೆಣದ ಮೇಲೆ ಹೊಲಸು ರಾಜಕೀಯ ಮಾಡಲು ಹೊರಟಿರುವವರ ವಿರುದ್ಧ ಶಾಸಕ ಅಶೋಕ್ ಕುಮಾರ್ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಈ ನಡವಳಿಕೆಯನ್ನು ಕಟುವಾಗಿ ಖಂಡಿಸಿದ್ದಾರೆ. ಸಮಾಜದ ಸೌಹಾರ್ದಯುತ ವಾತಾವರಣವನ್ನು ಹಾಳು ಮಾಡಲು ಹಾಗೂ ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿಗೆ ಕಳಂಕ ತರಲು ಹೊರಟಿರುವ ಇವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಬುದ್ಧಿ ಕಲಿಸಲಿದ್ದಾರೆ ಎಂದು ಶಾಸಕರು ಎಚ್ಚರಿಸಿದ್ದಾರೆ. ನಿಮ್ಮ ರಾಜಕೀಯ ಏನಿದ್ದರೂ ಅಭಿವೃದ್ಧಿ ವಿಚಾರದಲ್ಲಿ ತೋರಿಸಿ ಹಾಗೂ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಇಂತಹ ಪ್ರವೃತ್ತಿಯನ್ನು ಕೈಬಿಡಿ ಎಂದು ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
    1
    ಪುತ್ತೂರಿನ ನರಿಮೊಗರಿನ ಪುರುಷರಕಟ್ಟೆಯಲ್ಲಿ ನಡೆದಿರುವ ಘಟನೆಯ ಸತ್ಯಾಸತ್ಯತೆ ತಿಳಿಯದೆ, ಕೇವಲ ರಾಜಕೀಯ ಉದ್ದೇಶಕ್ಕಾಗಿ ಹೆಣದ ಮೇಲೆ ಹೊಲಸು ರಾಜಕೀಯ ಮಾಡಲು ಹೊರಟಿರುವವರ ವಿರುದ್ಧ ಶಾಸಕ ಅಶೋಕ್ ಕುಮಾರ್ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಈ ನಡವಳಿಕೆಯನ್ನು ಕಟುವಾಗಿ ಖಂಡಿಸಿದ್ದಾರೆ.

ಸಮಾಜದ ಸೌಹಾರ್ದಯುತ ವಾತಾವರಣವನ್ನು ಹಾಳು ಮಾಡಲು ಹಾಗೂ ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿಗೆ ಕಳಂಕ ತರಲು ಹೊರಟಿರುವ ಇವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಬುದ್ಧಿ ಕಲಿಸಲಿದ್ದಾರೆ ಎಂದು ಶಾಸಕರು ಎಚ್ಚರಿಸಿದ್ದಾರೆ. ನಿಮ್ಮ ರಾಜಕೀಯ ಏನಿದ್ದರೂ ಅಭಿವೃದ್ಧಿ ವಿಚಾರದಲ್ಲಿ ತೋರಿಸಿ ಹಾಗೂ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಇಂತಹ ಪ್ರವೃತ್ತಿಯನ್ನು ಕೈಬಿಡಿ ಎಂದು ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.