logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನಿಯಮಾನುಸಾರ ಪರಿಶೀಲಿಸಿ ಬರ ಪೀಡಿತ ತಾಲ್ಲೂಕು ಘೋಷಣೆ:ಸಿಎಂ ಡಿಕೆ ಶಿವಕುಮಾರ್ ಬೆಂಗಳೂರು:ರಾಜ್ಯದಲ್ಲಿ ಈಗಾಗಲೇ ಉಪಮುಖ್ಯಂತ್ರಿ ಡಾ. ಜಿ.ಪರಮೇಶ್ವರ್ ಅವರು 102 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದಾರೆ. ಇನ್ನೂ ಕೆಲವು ತಾಲೂಕುಗಳ ಕುರಿತು ಪರಿಶೀಲನೆ ನಡೆಯುತ್ತಿದ್ದು, ಪ್ರತಿ ತಾಲೂಕಿನಿಂದ ನಿರಂತರವಾಗಿ ವರದಿ ಪಡೆದು, ನಿಯಮಾನುಸಾರ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸದಾಶಿವನಗರದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು. ಕೇಂದ್ರ ಸರಕಾರದ ತಂಡ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬರ ಪರಿಸ್ಥಿತಿ ಕುರಿತು ಸಮಗ್ರವಾಗಿ ಸಮರ್ಥನೆ ಮಾಡಿಕೊಳ್ಳಬೇಕಿರುವುದರಿಂದ ಬರ ಘೋಷಣೆಯ ಪ್ರಕ್ರಿಯೆಯಲ್ಲಿ ಯಾವುದೇ ತಾಂತ್ರಿಕ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಹೇಳಿದರು. ಧಾರವಾಡ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬರ ಘೋಷಣೆಗೆ ಸಂಬಂಧಿಸಿದಂತೆ ಮಾಹಿತಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ವರದಿ ಪಡೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ ಅವರು, ಬಾಗಲಕೋಟೆಗೂ ಭೇಟಿ ನೀಡುವುದಾಗಿ ಹೇಳಿದರು. ಯಾವ ತಾಲೂಕಿನಲ್ಲಿ, ಯಾವ ಜಿಲ್ಲೆಯಲ್ಲಿ ನಿಜವಾಗಿಯೂ ಬರ ಪರಿಸ್ಥಿತಿ ಉಂಟಾಗಿದೆಯೋ ಅದನ್ನು ಪರಿಶೀಲಿಸುತ್ತೇವೆ. ನನಗೆ ನನ್ನದೇ ಕ್ಷೇತ್ರ ಎಂಬ ಯಾವುದೇ ಪ್ರಶ್ನೆಯಿಲ್ಲ. ಬರ ಘೋಷಣೆಗೆ ಕೇಂದ್ರ ಸರಕಾರದ ನಿಯಮಗಳಿವೆ. ಕಂದಾಯ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಒಟ್ಟಾಗಿ ಪರಿಶೀಲನೆ ನಡೆಸಿ, ನಿಯಮದ ಪ್ರಕಾರವೇ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು. *ರಾಹುಲ್ ವಿರುದ್ಧ ಎಫ್ಐಆರ್ ಗೆ ಖಂಡನೆ* ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದನ್ನು ರಾಜಕೀಯ ಪ್ರೇರಿತ ಕ್ರಮ ಎಂದು ಎಂದು ಹೇಳಿದರು. ‘ರಾಹುಲ್ ಗಾಂಧಿ ಅವರು ತಪ್ಪೇನು ಮಾಡಿದ್ದಾರೆ ? ಯುವಜನತೆ ಮತ್ತು ದೇಶಕ್ಕಾಗಿ ಹೋರಾಡುವುದು ಅವರ ಹಕ್ಕು. ಅದು ಸಂವಿಧಾನ ನೀಡಿರುವ ಹಕ್ಕು. ಅವರು ಹೋರಾಡುತ್ತಿರುವ ವಿಚಾರದಲ್ಲಿ ನಾವೆಲ್ಲರೂ ಅವರೊಂದಿಗೆ ಇದ್ದೇವೆ’ ಎಂದು ಹೇಳಿದರು. ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಕುರಿತು, ‘ಅವರು ಪಾದಯಾತ್ರೆ ಮಾಡುವುದು ಒಳ್ಳೆಯದೇ. ಅವರು ನೀಡುತ್ತಿರುವುದು ನಮಗೆ ಒಳ್ಳೆಯ ಅವಕಾಶ. ಅದಕ್ಕೆ ಬೇಕಾದ ಪ್ರತಿತಂತ್ರ ರೂಪಿಸಲು ನಮ್ಮ ಪಕ್ಷವೂ ಸಿದ್ಧವಿದೆ’ ಎಂದು ಹೇಳಿದರು.

10 hrs ago
user_ಶಿವನಿ
ಶಿವನಿ
Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•

More news from ಕರ್ನಾಟಕ and nearby areas
  • ರಾಪಿಡೋ ಬೈಕ್ ಟ್ಯಾಕ್ಸಿ ಮಾತ್ರ ಬ್ಯಾನ್ ಆಗಬೇಕಾ? ಅಥವಾ ಎಲ್ಲಾ ಆಪ್ಗಳು ಬ್ಯಾನ್ ಆಗ್ಬೇಕಾ? ರಾಪಿಡೋ ಬೈಕ್ ಟ್ಯಾಕ್ಸಿ ಮಾತ್ರ ಬ್ಯಾನ್ ಆಗಬೇಕಾ? ಅಥವಾ ಎಲ್ಲಾ ಆಪ್ಗಳು ಬ್ಯಾನ್ ಆಗ್ಬೇಕಾ?
    1
    ರಾಪಿಡೋ ಬೈಕ್ ಟ್ಯಾಕ್ಸಿ ಮಾತ್ರ ಬ್ಯಾನ್ ಆಗಬೇಕಾ?
ಅಥವಾ ಎಲ್ಲಾ ಆಪ್ಗಳು ಬ್ಯಾನ್ ಆಗ್ಬೇಕಾ?
ರಾಪಿಡೋ ಬೈಕ್ ಟ್ಯಾಕ್ಸಿ ಮಾತ್ರ ಬ್ಯಾನ್ ಆಗಬೇಕಾ?
ಅಥವಾ ಎಲ್ಲಾ ಆಪ್ಗಳು ಬ್ಯಾನ್ ಆಗ್ಬೇಕಾ?
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 hr ago
  • ಕೆಎಂಡಬ್ಲ್ಯೂಎ ವಿದ್ಯಾನಿಕೇತನದಲ್ಲಿ ನೂತನ ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಉದ್ಘಾಟನೆ ಬೆಂಗಳೂರು: ಮಹಾಲಕ್ಷ್ಮೀಪುರಂನ ಕೆಎಂಡಬ್ಲ್ಯೂಎ ವಿದ್ಯಾನಿಕೇತನದಲ್ಲಿ ನೂತನವಾಗಿ ಸ್ಥಾಪಿಸಿರುವ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯವನ್ನು ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಹಾಗೂ ಮಾಜಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಉದ್ಘಾಟಿಸಿದರು. ಸೆಪ್ಟೆಂಬರ್ 2ರಂದು ಬೆಳಗ್ಗೆ 10.30ಕ್ಕೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಡಾ. ಅಶ್ವತ್ಥನಾರಾಯಣ ಅವರು, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ, ವಿಜ್ಞಾನ ಮತ್ತು ಜ್ಞಾನ ಸಂಪನ್ಮೂಲಗಳ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ತಾಂತ್ರಿಕ ಹಾಗೂ ವೈಜ್ಞಾನಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಕೆಎಂಡಬ್ಲ್ಯೂಎ ವಿದ್ಯಾನಿಕೇತನವು ತನ್ನ ಶೈಕ್ಷಣಿಕ ಪ್ರಗತಿಗೆ ದೀಕ್ಷಾ–ವೇದಾಂತು ಸಂಸ್ಥೆಯನ್ನು ಶೈಕ್ಷಣಿಕ ಪಾಲುದಾರ ಹಾಗೂ ಮಾರ್ಗದರ್ಶಕ ಶಕ್ತಿಯಾಗಿ ಪರಿಗಣಿಸಿದೆ. ದೀಕ್ಷಾ–ವೇದಾಂತು ಮುಖ್ಯಸ್ಥ ಡಾ. ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಬೋರ್ಡ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಸೇರಿದಂತೆ ಗಮನಾರ್ಹ ಫಲಿತಾಂಶಗಳನ್ನು ದಾಖಲಿಸಿದೆ ಎಂದು ಸಂಸ್ಥೆ ತಿಳಿಸಿದೆ. ನೂತನ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯವು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸುವುದರ ಜತೆಗೆ, ಪ್ರಾಯೋಗಿಕ ಜ್ಞಾನ ಮತ್ತು ಸಂಶೋಧನಾ ಮನೋಭಾವ ಬೆಳೆಸಲು ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೆಎಂಡಬ್ಲ್ಯೂಎ ವಿದ್ಯಾನಿಕೇತನದ ಗೌರವ ಅಧ್ಯಕ್ಷರಾದ ಮನೋಜ್ ಕುಮಾರ್, ಅಧ್ಯಕ್ಷ ಸುನಿಲ್ ಎಸ್., ಪ್ರಧಾನ ಕಾರ್ಯದರ್ಶಿ ಶ್ರೀಧರ್ ಬಿ, ಖಜಾಂಚಿ ಗಣೇಶ್ ರಾವ್ ಕೇಸರ್ಕರ್, ವ್ಯವಸ್ಥಾಪಕ ಕಾರ್ಯದರ್ಶಿ ಸುರೇಶ್ ರಾವ್, ಮೇಘಲ ವೀರೇಶ್, ಕೃಷ್ಣ, ವೀಣಾ ಮೋಹನ್ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
    4
    ಕೆಎಂಡಬ್ಲ್ಯೂಎ ವಿದ್ಯಾನಿಕೇತನದಲ್ಲಿ ನೂತನ ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಉದ್ಘಾಟನೆ

ಬೆಂಗಳೂರು: ಮಹಾಲಕ್ಷ್ಮೀಪುರಂನ ಕೆಎಂಡಬ್ಲ್ಯೂಎ ವಿದ್ಯಾನಿಕೇತನದಲ್ಲಿ ನೂತನವಾಗಿ ಸ್ಥಾಪಿಸಿರುವ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯವನ್ನು ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಹಾಗೂ ಮಾಜಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಉದ್ಘಾಟಿಸಿದರು.
ಸೆಪ್ಟೆಂಬರ್ 2ರಂದು ಬೆಳಗ್ಗೆ 10.30ಕ್ಕೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಡಾ. ಅಶ್ವತ್ಥನಾರಾಯಣ ಅವರು, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ, ವಿಜ್ಞಾನ ಮತ್ತು ಜ್ಞಾನ ಸಂಪನ್ಮೂಲಗಳ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ತಾಂತ್ರಿಕ ಹಾಗೂ ವೈಜ್ಞಾನಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕೆಎಂಡಬ್ಲ್ಯೂಎ ವಿದ್ಯಾನಿಕೇತನವು ತನ್ನ ಶೈಕ್ಷಣಿಕ ಪ್ರಗತಿಗೆ ದೀಕ್ಷಾ–ವೇದಾಂತು ಸಂಸ್ಥೆಯನ್ನು ಶೈಕ್ಷಣಿಕ ಪಾಲುದಾರ ಹಾಗೂ ಮಾರ್ಗದರ್ಶಕ ಶಕ್ತಿಯಾಗಿ ಪರಿಗಣಿಸಿದೆ. ದೀಕ್ಷಾ–ವೇದಾಂತು ಮುಖ್ಯಸ್ಥ ಡಾ. ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಬೋರ್ಡ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಸೇರಿದಂತೆ ಗಮನಾರ್ಹ ಫಲಿತಾಂಶಗಳನ್ನು ದಾಖಲಿಸಿದೆ ಎಂದು ಸಂಸ್ಥೆ ತಿಳಿಸಿದೆ.
ನೂತನ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯವು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸುವುದರ ಜತೆಗೆ, ಪ್ರಾಯೋಗಿಕ ಜ್ಞಾನ ಮತ್ತು ಸಂಶೋಧನಾ ಮನೋಭಾವ ಬೆಳೆಸಲು ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆಎಂಡಬ್ಲ್ಯೂಎ ವಿದ್ಯಾನಿಕೇತನದ ಗೌರವ ಅಧ್ಯಕ್ಷರಾದ ಮನೋಜ್ ಕುಮಾರ್, ಅಧ್ಯಕ್ಷ ಸುನಿಲ್ ಎಸ್., ಪ್ರಧಾನ ಕಾರ್ಯದರ್ಶಿ ಶ್ರೀಧರ್ ಬಿ, ಖಜಾಂಚಿ ಗಣೇಶ್ ರಾವ್ ಕೇಸರ್ಕರ್, ವ್ಯವಸ್ಥಾಪಕ ಕಾರ್ಯದರ್ಶಿ ಸುರೇಶ್ ರಾವ್, ಮೇಘಲ ವೀರೇಶ್, ಕೃಷ್ಣ, ವೀಣಾ ಮೋಹನ್ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
    user_Nataraj B P
    Nataraj B P
    ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    3 hrs ago
  • ದಲಿತರ ಜಮೀನು ಕಬಳಿಸಲು ಸುಳ್ಳು ಅರ್ಜಿಗಳಿಂದ ಎದುರಿಸುತ್ತಿರುವ ಆರೋಪ:ಸುಳ್ಳು ಅರ್ಜಿಗಳನ್ನ ಕೊಡಿಸಿರುವ ವ್ಯಕ್ತಿಗಳಿಗೆ ದಲಿತ ನಾಯಕ ನಂದಿಗುಂದ ವೆಂಕಟೇಶ ಎಚ್ಚರಿಕೆ ಬೆಂಗಳೂರು:ಜಮೀನು ಕೊಡದ ಹಿನ್ನಲೆ ದಲಿತ ರೈತರ ಜಮೀನಿನ ಮೇಲೆ ಭೂ ಮಾಫೀಯ ಕಣ್ಣು ಬಿದ್ದಿದೆ.ದಲಿತರ ಜಮೀನು ಕಬಳಿಸಲು ಸುಳ್ಳು ಅರ್ಜಿಗಳಿಂದ ಎದುರಿಸುತ್ತಿರುವ ಆರೋಪವನ್ನ ದಲಿತ ನಾಯಕ ನಂದಿಗುಂದ ವೆಂಕಟೇಶ್ ಮಾಡಿದ್ದಾರೆ.ದೊಡ್ಡಬಳ್ಳಾಪುರ ತಾಲ್ಲೂಕಿನ ಗೂಳ್ಯನಂದಿಗುಂದ ಗ್ರಾಮದ ದಲಿತ ರೈತರಿಗೆ ಸುಳ್ಳು ಅರ್ಜಿಗಳಿಂದ ಧಮ್ಕಿ.? ಹಾಕಲಾಗಿದೆ.ಗ್ರಾಮದ ಸರ್ವೇ ನಂಬರ್ 28 ಮತ್ತು 30ರ ಸುಮಾರು ಎಂಟು ಎಕರೆ ಜಮೀನಿನ ಮೇಲೆ ಕಣ್ಣು ಬಿದ್ದಿದ್ದು,ಜಮೀನು ಕಬಳಿಸಲು ನಮ್ಮ ಸಮುದಾಯದ ನಾಯಕರನ್ನ ಅರ್ಜಿ ಕೊಡಿಸಿದ್ದಾರೆ .ನಮ್ಮ ಜಮೀನಿನ ಸುತ್ತಲೂ ದಾಸರಥಿ ಎಂಬ ಬಿಲ್ಡರ್ ಜಮೀನುಗಳು ಇದ್ದಾವೆ,ನಾವು ದಾಸರಥಿ ಅವರಿಗೆ ಜಮೀನು ಕ್ರಯ ಮಾಡಲು ಒಪ್ಪಲಿಲ್ಲ,ಆಗ ನಮ್ಮ ಜಮೀನಿನ್ನು ಹೇಗಾದ್ರು ಪಡೆಯಬೇಕು ಎಂದು ಸುಳ್ಳು ಅರ್ಜಿಗಳನ್ನ ಕೊಡ್ತಿದ್ದಾರೆ,ನಾವು ನಮ್ಮ ತಂದೆಯವರ ಕಾಲದಿಂದಲೂ ಶಾಂತಿಯುತ ಸ್ವಾಧೀನದಲ್ಲಿ ಇದ್ದೇವೆ,ಈಗ ನಮ್ಮಿಂದ ಜಮೀನನ್ನು ಕಬಳಿಸಲು ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ,ಸುತ್ತಮುತ್ತಲಿನ ಜಮೀನುಗಳಿಗೆ ರೈತರು ಹೋಗದಂತೆ ತಡೆಗೋಡೆ ನಿರ್ಮಿಸಿದ್ದಾರೆ,ಇದು ಈಗೆ ಮುಂದುವರೆದರೆ ಪ್ರತಿಭಟನೆ ಮಾಡಲಾವುದು ಎಂದು ನಂದಿಗುಂದ ವೆಂಕಟೇಶ್ ಎಚ್ಚರಿಕೆ ಕೊಟ್ಟಿದ್ದಾರೆ.
    1
    ದಲಿತರ ಜಮೀನು ಕಬಳಿಸಲು ಸುಳ್ಳು ಅರ್ಜಿಗಳಿಂದ ಎದುರಿಸುತ್ತಿರುವ ಆರೋಪ:ಸುಳ್ಳು ಅರ್ಜಿಗಳನ್ನ ಕೊಡಿಸಿರುವ ವ್ಯಕ್ತಿಗಳಿಗೆ ದಲಿತ ನಾಯಕ ನಂದಿಗುಂದ ವೆಂಕಟೇಶ ಎಚ್ಚರಿಕೆ
ಬೆಂಗಳೂರು:ಜಮೀನು ಕೊಡದ ಹಿನ್ನಲೆ ದಲಿತ ರೈತರ ಜಮೀನಿನ ಮೇಲೆ ಭೂ ಮಾಫೀಯ ಕಣ್ಣು ಬಿದ್ದಿದೆ.ದಲಿತರ ಜಮೀನು ಕಬಳಿಸಲು ಸುಳ್ಳು ಅರ್ಜಿಗಳಿಂದ ಎದುರಿಸುತ್ತಿರುವ ಆರೋಪವನ್ನ  ದಲಿತ ನಾಯಕ ನಂದಿಗುಂದ ವೆಂಕಟೇಶ್ ಮಾಡಿದ್ದಾರೆ.ದೊಡ್ಡಬಳ್ಳಾಪುರ ತಾಲ್ಲೂಕಿನ ಗೂಳ್ಯನಂದಿಗುಂದ ಗ್ರಾಮದ ದಲಿತ ರೈತರಿಗೆ ಸುಳ್ಳು ಅರ್ಜಿಗಳಿಂದ ಧಮ್ಕಿ.? ಹಾಕಲಾಗಿದೆ.ಗ್ರಾಮದ ಸರ್ವೇ ನಂಬರ್ 28 ಮತ್ತು 30ರ ಸುಮಾರು ಎಂಟು ಎಕರೆ ಜಮೀನಿನ ಮೇಲೆ ಕಣ್ಣು ಬಿದ್ದಿದ್ದು,ಜಮೀನು ಕಬಳಿಸಲು ನಮ್ಮ ಸಮುದಾಯದ ನಾಯಕರನ್ನ ಅರ್ಜಿ ಕೊಡಿಸಿದ್ದಾರೆ .ನಮ್ಮ ಜಮೀನಿನ ಸುತ್ತಲೂ ದಾಸರಥಿ ಎಂಬ ಬಿಲ್ಡರ್ ಜಮೀನುಗಳು ಇದ್ದಾವೆ,ನಾವು ದಾಸರಥಿ ಅವರಿಗೆ ಜಮೀನು ಕ್ರಯ ಮಾಡಲು ಒಪ್ಪಲಿಲ್ಲ,ಆಗ ನಮ್ಮ ಜಮೀನಿನ್ನು ಹೇಗಾದ್ರು ಪಡೆಯಬೇಕು ಎಂದು ಸುಳ್ಳು ಅರ್ಜಿಗಳನ್ನ ಕೊಡ್ತಿದ್ದಾರೆ,ನಾವು ನಮ್ಮ ತಂದೆಯವರ ಕಾಲದಿಂದಲೂ ಶಾಂತಿಯುತ ಸ್ವಾಧೀನದಲ್ಲಿ ಇದ್ದೇವೆ,ಈಗ ನಮ್ಮಿಂದ ಜಮೀನನ್ನು ಕಬಳಿಸಲು ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ,ಸುತ್ತಮುತ್ತಲಿನ ಜಮೀನುಗಳಿಗೆ ರೈತರು ಹೋಗದಂತೆ ತಡೆಗೋಡೆ ನಿರ್ಮಿಸಿದ್ದಾರೆ,ಇದು ಈಗೆ ಮುಂದುವರೆದರೆ ಪ್ರತಿಭಟನೆ ಮಾಡಲಾವುದು ಎಂದು ನಂದಿಗುಂದ ವೆಂಕಟೇಶ್ ಎಚ್ಚರಿಕೆ ಕೊಟ್ಟಿದ್ದಾರೆ.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    8 hrs ago
  • ಪತ್ನಿ ಕಣ್ಣೆದುರೆ ನರಳಾಡಿ ಪ್ರಾಣ ಬಿಟ್ಟ ಪತಿ 3 ತಿಂಗಳ ಗರ್ಬಿಣಿ ಪತ್ನಿಯೊಂದಿಗೆ ಬರ್ತಿದ್ದ ವೇಳೆ ಅವಘಡ 8 ತಿಂಗಳ ಹಿಂದೆ ಲವ್ ಕಂ ಆರೆಂಜ್ ಮ್ಯಾರೇಜ್ ಆಗಿದ್ದ ದಂಪತಿ ನೆಲಮಂಗಲ ಪತ್ನಿ ಕಣ್ಣೆದುರೆ ನರಳಾಡಿ ಪ್ರಾಣ ಬಿಟ್ಟ ಪತಿ 3 ತಿಂಗಳ ಗರ್ಬಿಣಿ ಪತ್ನಿಯೊಂದಿಗೆ ಬರ್ತಿದ್ದ ವೇಳೆ ಅವಘಡ 8 ತಿಂಗಳ ಹಿಂದೆ ಲವ್ ಕಂ ಆರೆಂಜ್ ಮ್ಯಾರೇಜ್ ಆಗಿದ್ದ ದಂಪತಿ ನೆಲಮಂಗಲ ತಾಲೂಕು ಕಚೇರಿಗೆ ಬರುತಿದ್ದ ದಂಪತಿ ಯಶವಂತಪುರದಿಂದ ಬರ್ತಿದ್ದ ಬಿಎಂಟಿಸಿ ಬಸ್ಸಿಗೆ ಬಲಿ ಮುಂಬದಿ ಇದ್ದ ಬೈಕಿಗೆ ರಭಸವಾಗಿ ಬಿಎಂಟಿಸಿ ಬಸ್ ಡಿಕ್ಕಿ ಪತಿ ಮನುಗೌಡ ಬಸ್ಸಿಗೆ ಸಿಲುಕಿ ಸಾವು, ಪತ್ನಿ ಜೀವಪಾಯದಿಂದ ಪಾರು ಪತ್ನಿ ಮಮತಾ ರಸ್ತೆ ಬದಿಗೆ ಬಿದ್ದಿದ್ದರಿಂದ ಪಾರು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾರ್ವಜನಿಕರಿಂದ ರವಾನೆ ಅಷ್ಟರಲ್ಲಾಗಲೇ ಪ್ರಾಣ ಬಿಟ್ಟಿರುವ ಮನುಗೌಡ ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು.
    2
    ಪತ್ನಿ ಕಣ್ಣೆದುರೆ ನರಳಾಡಿ ಪ್ರಾಣ ಬಿಟ್ಟ ಪತಿ
3 ತಿಂಗಳ ಗರ್ಬಿಣಿ ಪತ್ನಿಯೊಂದಿಗೆ ಬರ್ತಿದ್ದ ವೇಳೆ ಅವಘಡ
8 ತಿಂಗಳ ಹಿಂದೆ ಲವ್ ಕಂ ಆರೆಂಜ್ ಮ್ಯಾರೇಜ್ ಆಗಿದ್ದ ದಂಪತಿ
ನೆಲಮಂಗಲ ಪತ್ನಿ ಕಣ್ಣೆದುರೆ ನರಳಾಡಿ ಪ್ರಾಣ ಬಿಟ್ಟ ಪತಿ
3 ತಿಂಗಳ ಗರ್ಬಿಣಿ ಪತ್ನಿಯೊಂದಿಗೆ ಬರ್ತಿದ್ದ ವೇಳೆ ಅವಘಡ
8 ತಿಂಗಳ ಹಿಂದೆ ಲವ್ ಕಂ ಆರೆಂಜ್ ಮ್ಯಾರೇಜ್ ಆಗಿದ್ದ ದಂಪತಿ
ನೆಲಮಂಗಲ ತಾಲೂಕು ಕಚೇರಿಗೆ ಬರುತಿದ್ದ ದಂಪತಿ
ಯಶವಂತಪುರದಿಂದ ಬರ್ತಿದ್ದ ಬಿಎಂಟಿಸಿ ಬಸ್ಸಿಗೆ ಬಲಿ 
ಮುಂಬದಿ ಇದ್ದ ಬೈಕಿಗೆ ರಭಸವಾಗಿ ಬಿಎಂಟಿಸಿ ಬಸ್ ಡಿಕ್ಕಿ
ಪತಿ ಮನುಗೌಡ ಬಸ್ಸಿಗೆ ಸಿಲುಕಿ ಸಾವು, ಪತ್ನಿ ಜೀವಪಾಯದಿಂದ ಪಾರು
ಪತ್ನಿ ಮಮತಾ ರಸ್ತೆ ಬದಿಗೆ ಬಿದ್ದಿದ್ದರಿಂದ ಪಾರು
ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾರ್ವಜನಿಕರಿಂದ ರವಾನೆ
ಅಷ್ಟರಲ್ಲಾಗಲೇ ಪ್ರಾಣ ಬಿಟ್ಟಿರುವ ಮನುಗೌಡ
ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    1 hr ago
  • ಸೂಲಿಬೆಲೆ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ಶಾಸಕ ಶರತ್ ಬಚ್ಚೇಗೌಡ ಹೊಸಕೋಟೆ ತಾಲೂಕಿನಲ್ಲಿ ಗೋಮಾಳ ಜಾಗ ಗುರುತಿಸಿ ಹಸಿರು ಮೇವು ಬೆಳೆಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ಶಾಸಕ ಶರತ್ ಬಚ್ಚೇಗೌಡ ಹೇಳಿದರು. ಸೂಲಿಬೆಲೆಯಲ್ಲಿ ನಡೆದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣಕೃಷಿ ಸಹಕಾರ ಸಂಘದ 51ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾ ಡಿದ ಅವರು, ಸೆಪ್ಟೆಂಬರ್ ತಿಂಗಳಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆ ಯಲ್ಲಿ ರೈತರು ಹಾಗೂ ಜಾನುವಾರು ಸಾಕಣೆ ದಾರರು ಸಂಕಷ್ಟ ಎದುರಿಸುವಂತಾಗಿದೆ. ಮಳೆ ಕೊರತೆಯಿಂದ ಮುಂದಿನ ದಿನಗಳಲ್ಲಿ ಮೇವಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ, ರ್ಪಾರ್ಯಕ್ರಮ ಕೈಗೊಳ್ಳಬೇಕಿದೆ ಎಂದರು.
    1
    ಸೂಲಿಬೆಲೆ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ಶಾಸಕ ಶರತ್ ಬಚ್ಚೇಗೌಡ
ಹೊಸಕೋಟೆ ತಾಲೂಕಿನಲ್ಲಿ ಗೋಮಾಳ ಜಾಗ ಗುರುತಿಸಿ ಹಸಿರು ಮೇವು ಬೆಳೆಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಸೂಲಿಬೆಲೆಯಲ್ಲಿ ನಡೆದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣಕೃಷಿ ಸಹಕಾರ ಸಂಘದ 51ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾ ಡಿದ ಅವರು, ಸೆಪ್ಟೆಂಬರ್ ತಿಂಗಳಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆ ಯಲ್ಲಿ ರೈತರು ಹಾಗೂ ಜಾನುವಾರು ಸಾಕಣೆ ದಾರರು ಸಂಕಷ್ಟ ಎದುರಿಸುವಂತಾಗಿದೆ. ಮಳೆ ಕೊರತೆಯಿಂದ ಮುಂದಿನ ದಿನಗಳಲ್ಲಿ ಮೇವಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ, ರ್ಪಾರ್ಯಕ್ರಮ ಕೈಗೊಳ್ಳಬೇಕಿದೆ ಎಂದರು.
    user_Narayanaswamy cs PRESS Reporter
    Narayanaswamy cs PRESS Reporter
    Press advisory ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    9 hrs ago
  • ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಕೆಐಎಡಿಬಿಗೆ ಜಮೀನು ನೀಡುವುದಿಲ್ಲವೆಂದು ಪಟ್ಟು ಹಿಡಿದ ರೈತರು
    1
    ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಕೆಐಎಡಿಬಿಗೆ ಜಮೀನು ನೀಡುವುದಿಲ್ಲವೆಂದು ಪಟ್ಟು ಹಿಡಿದ ರೈತರು
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    1 hr ago
  • Post by Chand Pasha
    1
    Post by Chand Pasha
    user_Chand Pasha
    Chand Pasha
    ಕೋಲಾರ, ಕೋಲಾರ, ಕರ್ನಾಟಕ•
    10 hrs ago
  • ಸರಕು ವಾಹನಗಳಿಂದ ₹30, ಲಾರಿಗಳಿಂದ ₹3 ಸಾವಿರ ವಸೂಲಿ ಆರೋಪ| Veega News Kannada ಸರಕು ವಾಹನಗಳಿಂದ ₹30, ಲಾರಿಗಳಿಂದ ₹3 ಸಾವಿರ ವಸೂಲಿ ಆರೋಪ
    1
    ಸರಕು ವಾಹನಗಳಿಂದ ₹30, ಲಾರಿಗಳಿಂದ 
₹3 ಸಾವಿರ ವಸೂಲಿ ಆರೋಪ| Veega News Kannada 
ಸರಕು ವಾಹನಗಳಿಂದ ₹30, ಲಾರಿಗಳಿಂದ 
₹3 ಸಾವಿರ ವಸೂಲಿ ಆರೋಪ
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.