Shuru
Apke Nagar Ki App…
ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿಯಲ್ಲಿ ಸಕಲ ಸೌಲಭ್ಯಗಳೊಂದಿಗೆ ಅರಿವು ಕೇಂದ್ರ! ಗ್ರಾಮೀಣ ಮಕ್ಕಳ ಶಿಕ್ಷಣ–ಜ್ಞಾನ ವೃದ್ಧಿಗೆ ಹೊಸ ನಾಂದಿ!
NAYAN NEWS
ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿಯಲ್ಲಿ ಸಕಲ ಸೌಲಭ್ಯಗಳೊಂದಿಗೆ ಅರಿವು ಕೇಂದ್ರ! ಗ್ರಾಮೀಣ ಮಕ್ಕಳ ಶಿಕ್ಷಣ–ಜ್ಞಾನ ವೃದ್ಧಿಗೆ ಹೊಸ ನಾಂದಿ!
More news from Chamarajanagara and nearby areas
- ಹನೂರು : ಹನೂರು ವಿಧಾನ ಸಭಾ ಕ್ಷೇತ್ರದ ಮಲೆ ಮಹದೇಶ್ವರ ಮಂಡಲದ ನೂತನ ಮಂಡಲ ಅಧ್ಯಕ್ಷರನ್ನಾಗಿ ಮಲೆ ಮಹದೇಶ್ವರ ಬೆಟ್ಟದ ಎಂ. ಮುರುಗೇಶ್ ರವರನ್ಮು ನೇಮಕ ಮಾಡಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ಆದೇಶ ಪತ್ರವನ್ನು ವಿತರಿಸಿದ್ದಾರೆ. ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷರಾದ ನಿರಂಜನ್ ಕುಮಾರ್ ರವರು ಶುಕ್ರವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆದೇಶ ಪ್ರತಿ ವಿತರಣೆ ಮಾಡಿ ಶುಭ ಹಾರೈಸಿದರು. ಆದೇಶ ಪ್ರತಿ ಸ್ವೀಕರಿಸಿ ನಂತರ ಮಾತನಾಡಿದ ಮುರುಗೇಶ್ ಪಕ್ಷ ನನಗೆ ವಹಿಸಿದಂತಹ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ. ಪಕ್ಷಕ್ಕೆ ನಿಷ್ಠೆಯಿಂದ ದುಡಿದು ಬೂತ್ ಮಟ್ಟದಲ್ಲೇ ಪಕ್ಷ ಸಂಘಟನೆಗೆ ಹೆಚ್ಚು ಒತ್ತುಕೊಟ್ಟು ನಮ್ಮ ಪಕ್ಷದ ಯಾವುದೇ ಅಭ್ಯರ್ಥಿಗಳಾದವರ ಪರವಾಗಿ ಅತ್ಯಂತ ಪ್ರಾಮಾಣಿಕತೆ ಕೆಲಸ ಮಾಡುತ್ತೇನೆ. ಪ್ರಮುಖವಾಗಿ ಹಳ್ಳಿ ಹಳ್ಳಿಗಳಲ್ಲಿ ಹಿರಿಯರ ಸಹಕಾರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಗೆ ಮುಂದಾಗುತ್ತೇನೆ ಎಂದರು. ಈ ಸಂದರ್ಭದಲ್ಲಿ ಮಲೆ ಮಹದೇಶ್ವರ ಮಂಡಲ ಪ್ರಧಾನಕಾರ್ಯದರ್ಶಿ ಗಳಾದ ಬಿದರಳ್ಳಿ ಶಿವಕುಮಾರ, ದಂಟಳ್ಳಿ ಮುರುಗೇಶ್ ಚಾಮರಾಜನಗರ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಎಲ್ಲಾ ಮಂಡಲ ಅಧ್ಯಕ್ಷರು ಮತ್ತು ಪ್ರಧಾನಕಾರ್ಯದರ್ಶಿಗಳು ಉಪಸ್ಥಿತರಿದ್ದರು.1
- ತಳುಕಿನಲ್ಲಿ ಸರಣಿ ಕಳ್ಳತನ ಬೆಚ್ಚಿ ಬಿದ್ದ ಜನ.. ಚಳ್ಳಕೆರೆ: ತಾಲ್ಲೂಕಿನ ತಳಕು ಗ್ರಾಮದಲ್ಲಿ ಸರಣಿಕಳ್ಳತನವಾಗಿದ್ದು ಒಂದು ಗೊಬ್ಬರದ ಅಂಗಡಿ ಹಾಗೂ ಪ್ರಾವಿಜನ್ ಸ್ಟೋರ್ ಬೀಗ ಮುರಿದು ಒಳ್ಳ ನುಗ್ಗಿದ ಕಳ್ಳ ಕೈಗಿ ಸಿಕ್ಕ 3 ಸಾವಿರ ಹಣ ಕಳ್ಳತನ ಮಾಡಿದ್ದು ಉಳಿದಂತೆ 5 ಗೂಡಂಗಡಿಗಳ ಬೀಗ ಮುರಿದಿದ್ದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾನೆ.. ಕಳ್ಳನ ಚಲನ ಒಲನ ಕೆಲವು ಕಡೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ . ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಿತು ತಜ್ಞರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.. ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..1
- ಬಾಣಗೆರೆ ಗ್ರಾಮದಲ್ಲಿ ಬೈಕ್ ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಹೊಳಲ್ಕೆರೆ ತಾಲ್ಲೂಕಿನ ಬಾಣಗೆರೆ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದ್ದು 70 ವರ್ಷದ ಜಯಪ್ಪ ಮೃತಪಟ್ಟಿದ್ದಾರೆ.1
- *ಭಾರತ ನಲ್ಲಿ ವೈರಲ್*1
- Post by ದಯಾನಂದ ಡಿ ಎಚ್1
- ಭದ್ರಾವತಿ: ನಗರದ ಹಿರಿಯ ಹೋರಾಟ ಗಾರ, ಸಿಪಿಐ ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ಡಿ.ಸಿ ಮಾಯಣ್ಣ(92) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು. ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಕೆಲವು ದಿನಗಳಿಂದ ಅನಾ ರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಕರ್ತವ್ಯ ನಿವೃತ್ತಿ ಹೊಂದಿದ್ದರು. ಆರಂಭದಿಂದಲೂ ಕಾರ್ಮಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದು, ಪ್ರಸ್ತುತ ಸಿಪಿಐ ರಾಜ್ಯ ಸಮಿತಿ ಸದಸ್ಯ ರಾಗಿದ್ದರು. ಕಾರ್ಮಿಕ ಹೋರಾಟಗಳಲ್ಲಿ ಮಾತ್ರವಲ್ಲದೆ ಪ್ರಗತಿಪರ ಸಂಘಟನೆಗಳ ಬಹುತೇಕ ಹೋರಾಟಗಳಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಗರದ ವಿವಿಧ ರಾಜಕೀಯ ಪಕ್ಷಗಳ, ಪ್ರಗತಿಪರ ಹಾಗು ದಲಿತ ಮತ್ತು ಕಾರ್ಮಿಕ ಸಂಘಟನೆಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಕಾರ್ಮಿಕ ಹೋರಾಟಗಾರು, ಕಾರ್ಮಿಕ ವರ್ಗದವರು, ಡಿ.ಸಿ ಮಾಯಣ್ಣ ಅಭಿಮಾನಿ ಬಳಗದವರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಗಣ್ಯರು ಜಾತಿ-ಬೇಧ, ಪಕ್ಷ ಬೇಧ ಮರೆತು ಸಂತಾಪ ಸೂಚಿಸಿದ್ದಾರೆ. ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಯಿಂದ ಡಿ.ಸಿ.ಮಾಯಣ್ಣನವರ ಹಿರಿಯೂರಿನ ನಿವಾಸದವರೆಗೂ ಡಿ.ಸಿ ಮಾಯಣ್ಣನವರ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಡಿ.ಸಿ ಮಾಯಣ್ಣನವರ ಅಂತ್ಯ ಸಂಸ್ಕಾರ ಶನಿವಾರ ಸಂಜೆ ಹಿರಿಯೂರಿನ ಅವರ ತೋಟದಲ್ಲಿ ನೆರವೇರಲಿದೆ.2
- ಕೊಳ್ಳೇಗಾಲ. ಸುತ್ತೂರು ಜಾತ್ರಾ ಮಹೋತ್ಸವ ಪ್ರಚಾರ ರಥಯಾತ್ರೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಪದಾಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿದರು. ಪಟ್ಟಣದ ಜೆ.ಎಸ್.ಎಸ್ ಕಾಲೇಜು ಮುಂಭಾಗದಲ್ಲಿ ರಥಯಾತ್ರೆಗೆ ಅ.ಭಾ.ವೀ.ಲಿ.ಮಹಾಸಭೆ ಗೌರವಧ್ಯಕ್ಷರು ಮತ್ತು ಗುಂಡೇಗಾಲ ಮಠದ ಶ್ರೀ ಮಲ್ಲಿಕಾರ್ಜುನಸ್ವಾಮಿ ರವರು ಚಾಲನೆ ನೀಡಿದರು. ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷರು ತಿಮ್ಮರಾಜೀಪುರ ಪುಟ್ಟಣ್ಣ ಮಾತನಾಡಿ, ಅಖಿಲ ಭಾರತ ವೀರೇಶ್ವರ ಲಿಂಗಾಯತ. ಮಹಾಸಭೆ ಕಾರ್ಯದರ್ಶಿ ಮಹೇಶ್, ಮಾಜಿ ಅಧ್ಯಕ್ಷ ಎಂ.ಬಸವರಾಜು, ಪದಾಧಿಕಾರಿಗಳು ಜಿ.ನಟರಾಜು, ಕೆಂಪನಪಾಳ್ಯ ಮಂಜುನಾಥ್, ಜೆಎಸ್ಎಸ್ ಕಾಲೇಜು ಪ್ರಾಂಶುಪಾಲರು ಕೊಂಗಳಪ್ಪ, ಜಾಗತಿಕ ಲಿಂಗಾಯತ ಸಂಘದ ಬಿಂದು ಲೋಕೇಶ್ , ಮಧುವನಹಳ್ಳಿ ಸುಂದರಪ್ಪ, ಯುಪಿಎಸ್ ಮಹದೇವಸ್ವಾಮಿ, ಗೌಡಹಳ್ಳಿ ಶಿವಕುಮಾರ್, ಅಪ್ಪು ಟೀಮ್ ರಾಜೇಶ್, ಮುಖಂಡ ನಿಶಾಂತ್, ತೋಟೇಶ್, ಮಹದೇವ ಪ್ರಸಾದ್, ದೇವಾಂಗಪೇಟೆ ಅಚ್ಗಾಲ್ ನಾಗರಾಜಯ್ಯ ಹಾಗೂ ಇತರರು ಇದ್ದರು.2
- ಸಂತೆ ಮೇಳದಲ್ಲಿ ವಿವಿಧ ಸೊಪ್ಪು ತರಕಾರಿ ಹಣ್ಣು ಮಾರಾಟ ಮಾಡಿ ಗಮನ ಸೆಳೆದ ಉರ್ದು ಶಾಲೆಯ.. ಚಳ್ಳಕೆರೆ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ವ್ಯವಹಾರ ಜ್ಞಾನ ಅಭಿವೃದ್ಧಿಗಾಗಿ ಸಂತೆ ಮೇಳ ಕಾರ್ಯಕ್ರಮ.. ಚಳ್ಳಕೆರೆ ನಗರದ ಬಿಇಓ ಕಚೇರಿ ಆವರಣದಲ್ಲಿನ ಸರ್ಕಾರಿ ಉರ್ದು ಶಾಲೆಯಲ್ಲಿ ಸಂತೆ ಮೇಳ..1
- Post by ದಯಾನಂದ ಡಿ ಎಚ್1