logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗುಂಡ್ಲುಪೇಟೆ ಯಲ್ಲಿ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ*ಅರಣ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ* ಗುಂಡ್ಲುಪೇಟೆ : ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ವನ್ಯಜೀವಿಗಳ ಅಕ್ರಮ ಬೇಟೆ, ಶಸ್ತ್ರಾಸ್ತ್ರ ಸಂಗ್ರಹ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ ರೈತರಿಗೆ ಅರಣ್ಯಾಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಬೈಕ್ ರ‍್ಯಾಲಿ ನಡೆಸಿದ ರೈತ ಮುಖಂಡರು, ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಮುಂದೆ ಸಮಾವೇಶಗೊಂಡು ಹುಲಿ ಯೋಜನೆ ನಿರ್ದೇಶಕರು, ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೊನ್ನೂರು ಪ್ರಕಾಶ್, ಬಂಡೀಪುರದ ಕುಂದಕೆರೆ ವಲಯ ವ್ಯಾಪ್ತಿಯ ಹೋಂಸ್ಟೇಯೊಂದರಲ್ಲಿ ಜಿಂಕೆ ಕೊಂಬು, ಚರ್ಮ ಸೇರಿದಂತೆ ವನ್ಯಜೀವಿ ಅವಶೇಷಗಳು, ಬಂದೂಕುಗಳು ಹಾಗೂ ಇತರೆ ಸಾಮಗ್ರಿಗಳು ಪತ್ತೆಯಾಗಿದ್ದವು. ಈ ಬಗ್ಗೆ ಮಾಹಿತಿ ನೀಡಿ ಅಕ್ರಮ ಬಯಲಿಗೆಳೆಯಲು ನೆರವಾದ ರೈತರನ್ನು ಪ್ರಶಂಸಿಸುವ ಬದಲು ಅರಣ್ಯ ಇಲಾಖೆ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಹೋಂಸ್ಟೇ, ರೆಸಾರ್ಟ್‌ಗಳ ಪರಿಶೀಲನೆಗೆ ಆಗ್ರಹ: ಬಂಡೀಪುರ ವ್ಯಾಪ್ತಿಯಲ್ಲಿ ರೆಸಾರ್ಟ್, ಹೋಂಸ್ಟೇ ಹಾಗೂ ಫಾರಂ ಹೌಸ್‌ಗಳಿಗೆ ಅವಕಾಶ ನೀಡಲಾಗುತ್ತಿದೆ. ತಲತಲಾಂತರಗಳಿಂದ ಕಾಡಿನ ದೇವಾಲಯಗಳಿಗೆ ತೆರಳುತ್ತಿದ್ದ ಜನರಿಗೆ ಅರಣ್ಯ ಇಲಾಖೆಯ ಅನುಮತಿ ಏಕೆ ಬೇಕು ಎಂದು ಪ್ರಶ್ನಿಸಿದ ಅವರು, ಬಂಡೀಪುರ ವ್ಯಾಪ್ತಿಯ ಎಲ್ಲ ಹೋಂಸ್ಟೇ ಹಾಗೂ ರೆಸಾರ್ಟ್‌ಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಅಕ್ರಮವಾಗಿ ಜಿಂಕೆ ಕೊಂಬು, ಚರ್ಮ ಹಾಗೂ ಇತರೆ ವನ್ಯಜೀವಿ ಅವಶೇಷಗಳನ್ನು ಸಂಗ್ರಹಿಸಿಟ್ಟಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಕ್ರಮ ಬೇಟೆ ತಡೆಯುವ ನಿಟ್ಟಿನಲ್ಲಿ ಸಫಾರಿ ವಾಹನಗಳ ಎಂಜಿನ್‌ಗಳಿಗೆ ಜಿಪಿಎಸ್ ಅಳವಡಿಸಬೇಕು. ಸಫಾರಿಯಿಂದ ಬರುವ ಆದಾಯ ಹಾಗೂ ಅದರ ಖರ್ಚು-ವೆಚ್ಚಗಳ ಮಾಹಿತಿಯನ್ನು ಸಾರ್ವಜನಿಕರಿಗೆ, ರೈತ ಸಂಘಟನೆಗಳಿಗೂ ನೀಡಬೇಕು ಎಂದು ಆಗ್ರಹಿಸಿದರು. ಜಿಂಕೆ ಕೊಂಬು, ಚರ್ಮ ಸೇರಿದಂತೆ ವನ್ಯಜೀವಿ ಅವಶೇಷಗಳನ್ನು ಸಂಗ್ರಹಿಸಿರುವ ಆರೋಪಿಗಳ ವಿರುದ್ಧ ನೋಟಿಸ್ ನೀಡಲಾಗಿದೆ ಎಂಬ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಅವರ ಹೇಳಿಕೆಗೆ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಪ್ರಭಾರ ಹುಲಿ ಯೋಜನೆ ನಿರ್ದೇಶಕ ಶುಭಂಸಿಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮೈಸೂರಿನ ಸಿಸಿಎಫ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರು ಇದ್ದರು. .

3 hrs ago
user_S.Puttaswamyhonnur
S.Puttaswamyhonnur
Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
3 hrs ago
e522756e-499d-4f43-98ae-ad40ce15f0c1

ಗುಂಡ್ಲುಪೇಟೆ ಯಲ್ಲಿ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ*ಅರಣ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ* ಗುಂಡ್ಲುಪೇಟೆ : ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ವನ್ಯಜೀವಿಗಳ ಅಕ್ರಮ ಬೇಟೆ, ಶಸ್ತ್ರಾಸ್ತ್ರ ಸಂಗ್ರಹ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ ರೈತರಿಗೆ ಅರಣ್ಯಾಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಬೈಕ್ ರ‍್ಯಾಲಿ ನಡೆಸಿದ ರೈತ ಮುಖಂಡರು, ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಮುಂದೆ ಸಮಾವೇಶಗೊಂಡು ಹುಲಿ ಯೋಜನೆ ನಿರ್ದೇಶಕರು, ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೊನ್ನೂರು ಪ್ರಕಾಶ್, ಬಂಡೀಪುರದ ಕುಂದಕೆರೆ ವಲಯ ವ್ಯಾಪ್ತಿಯ ಹೋಂಸ್ಟೇಯೊಂದರಲ್ಲಿ ಜಿಂಕೆ ಕೊಂಬು, ಚರ್ಮ ಸೇರಿದಂತೆ ವನ್ಯಜೀವಿ ಅವಶೇಷಗಳು, ಬಂದೂಕುಗಳು ಹಾಗೂ ಇತರೆ ಸಾಮಗ್ರಿಗಳು ಪತ್ತೆಯಾಗಿದ್ದವು. ಈ ಬಗ್ಗೆ ಮಾಹಿತಿ ನೀಡಿ ಅಕ್ರಮ ಬಯಲಿಗೆಳೆಯಲು ನೆರವಾದ ರೈತರನ್ನು ಪ್ರಶಂಸಿಸುವ ಬದಲು ಅರಣ್ಯ ಇಲಾಖೆ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಹೋಂಸ್ಟೇ, ರೆಸಾರ್ಟ್‌ಗಳ ಪರಿಶೀಲನೆಗೆ ಆಗ್ರಹ: ಬಂಡೀಪುರ ವ್ಯಾಪ್ತಿಯಲ್ಲಿ ರೆಸಾರ್ಟ್, ಹೋಂಸ್ಟೇ ಹಾಗೂ ಫಾರಂ ಹೌಸ್‌ಗಳಿಗೆ ಅವಕಾಶ ನೀಡಲಾಗುತ್ತಿದೆ. ತಲತಲಾಂತರಗಳಿಂದ ಕಾಡಿನ ದೇವಾಲಯಗಳಿಗೆ ತೆರಳುತ್ತಿದ್ದ ಜನರಿಗೆ ಅರಣ್ಯ ಇಲಾಖೆಯ ಅನುಮತಿ ಏಕೆ ಬೇಕು ಎಂದು ಪ್ರಶ್ನಿಸಿದ ಅವರು, ಬಂಡೀಪುರ ವ್ಯಾಪ್ತಿಯ ಎಲ್ಲ ಹೋಂಸ್ಟೇ ಹಾಗೂ ರೆಸಾರ್ಟ್‌ಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಅಕ್ರಮವಾಗಿ ಜಿಂಕೆ ಕೊಂಬು, ಚರ್ಮ ಹಾಗೂ ಇತರೆ ವನ್ಯಜೀವಿ ಅವಶೇಷಗಳನ್ನು ಸಂಗ್ರಹಿಸಿಟ್ಟಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಕ್ರಮ ಬೇಟೆ ತಡೆಯುವ ನಿಟ್ಟಿನಲ್ಲಿ ಸಫಾರಿ ವಾಹನಗಳ ಎಂಜಿನ್‌ಗಳಿಗೆ ಜಿಪಿಎಸ್ ಅಳವಡಿಸಬೇಕು. ಸಫಾರಿಯಿಂದ ಬರುವ ಆದಾಯ ಹಾಗೂ ಅದರ ಖರ್ಚು-ವೆಚ್ಚಗಳ ಮಾಹಿತಿಯನ್ನು ಸಾರ್ವಜನಿಕರಿಗೆ, ರೈತ ಸಂಘಟನೆಗಳಿಗೂ ನೀಡಬೇಕು ಎಂದು ಆಗ್ರಹಿಸಿದರು. ಜಿಂಕೆ ಕೊಂಬು, ಚರ್ಮ ಸೇರಿದಂತೆ ವನ್ಯಜೀವಿ ಅವಶೇಷಗಳನ್ನು ಸಂಗ್ರಹಿಸಿರುವ ಆರೋಪಿಗಳ ವಿರುದ್ಧ ನೋಟಿಸ್ ನೀಡಲಾಗಿದೆ ಎಂಬ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಅವರ ಹೇಳಿಕೆಗೆ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಪ್ರಭಾರ ಹುಲಿ ಯೋಜನೆ ನಿರ್ದೇಶಕ ಶುಭಂಸಿಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮೈಸೂರಿನ ಸಿಸಿಎಫ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರು ಇದ್ದರು. .

More news from ಕರ್ನಾಟಕ and nearby areas
  • ಆ.28 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ಎಸ್ ಸಿ/ಎಸ್ ಟಿ ಜಾಗೃತ ನೌಕರರ 6ನೇ  ರಾಜ್ಯ ಮಟ್ಟದ ಐಕ್ಯತಾ ಸಮಾವೇಶ: ಸಿ.ಕೆ.ರಾಮಸ್ವಾಮಿ ಆ.28 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ಎಸ್ ಸಿ/ಎಸ್ ಟಿ ಜಾಗೃತ ನೌಕರರ 6ನೇ  ರಾಜ್ಯ ಮಟ್ಟದ ಐಕ್ಯತಾ ಸಮಾವೇಶ: ಸಿ.ಕೆ.ರಾಮಸ್ವಾಮಿ ವರದಿ: ಹೊಮ್ಮನಂಜುಂಡನಾಯಕ. ಜಿಲ್ಲೆಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ನೌಕರರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಚಾಮರಾಜನಗರ: ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿ ಕೇಂದ್ರ ನಮಿತಿ ಬೆಂಗಳೂರು ನೇತೃತ್ವದಲ್ಲಿ ಆ. 28 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ಜಾಗೃತ ನೌಕರರ 6ನೇ ರಾಜ್ಯ ಮಟ್ಟದ ಐಕ್ಯತಾ ಸಮಾವೇಶ ನಡೆಯಲಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಸಿ.ಕೆ.ರಾಮಸ್ವಾಮಿ ತಿಳಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂ.8, ಶೃಂಗಾರ್ ಪ್ಯಾಲೇನ್‌ನಲ್ಲಿ ಬೆಳಿಗ್ಗೆ 10:30 ಗಂಟೆಗೆ ಆರಂಭವಾಗುವ ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಕೊಳ್ಳೇಗಾಲ ಜೇತವನ ವಿಹಾರದ ಭೌದ್ಧ ಬಿಕ್ಕು ಮನೋರಕ್ಷಿತ ಬಂತೇಜಿ ವಹಿಸುವವರು, ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವ‌ರ್ ಅಧ್ಯಕ್ಷತೆ ವಹಿಸುವವರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ. ಸಚಿವರಾದ ಕೆ.ಚ್‌.ಮುನಿಯಪ್ಪ, ಸತೀಶ್‌ ಜಾರಕಿಹೊಳಿ, ಪ್ರಿಯಾಂಕ್‌ಖರ್ಗೆ, ಶಿವರಾಜ್ ತಂಗಡಗಿ : ಪಿ.ಎಂ.ನರೇಂದ್ರಸ್ವಾಮಿ.ಬಿ. ನಾಗೇಂದ್ರ ರುದ್ರಪ್ಪ ಲಮಾಣಿ, ಕೆ.ಎಸ್‌.ಬಸವಂತಪ್ಪ, ಟಿ.ರಘುಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸುವವರು. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 5 ಬಸ್‌ಗಳಲ್ಲಿ ಹೊರಡಲು ವ್ಯವಸ್ಥೆ. ಮಾಡಲಾಗಿದೆ. ಚಾಮರಾಜೇಶ್ವರ ದೇವಸ್ಥಾನ ‌ ಮುಂಭಾಗ, ಹೌಸಿಂಗ್ ಬೋರ್ಡ್ ಹತ್ತಿರ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಸಿ, ಎಸ್‌ಟಿ ನೌಕರರು ಭಾಗವಹಿಸಿ ಯಶಸ್ವಿಕೊಳಿಸಿಕೊಡುವಂತೆ ಮನವಿ ಮಾಡಿದರು. ಮಾಜಿ ಅಧ್ಯಕ್ಷ ಮಂಜುನಾಥಪ್ರನನ್ನ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯು ಕಳೆದ 20 ವರ್ಷಗಳಿಂದಲ್ಲೂ ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ನೌಕರರಿಗೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ. ನಾನು ಕೂಡ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದೇನೆ. ಸಮಿತಿಯು ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ಜಾಗೃತ ನೌಕರರ 6ನೇ ರಾಜ್ಯ ಮಟ್ಟದ ಐಕ್ಯತಾ ಸಮಾವೇಶ ಮಾಡಿ ನೌಕರರು, ಸಮುದಾಯದ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುತ್ತದೆ. ಈ ಸಮಾವೇಶಕ್ಕೆ ರಾಜ್ಯಾದ್ಯಂತ ಸುಮಾರು 50 ಸಾವಿರ ಜನರು ಸೇರುತ್ತಾರೆ ನಮ್ಮ ಜಿಲ್ಲೆಯಿಂದ 500 ಮಂದಿ ಭಾಗವಹಿಸುತ್ತಾರೆ. ಈ ಸಮಾವೇಶದಲ್ಲಿ ನಮ್ಮ ಮುಖ್ಯ ಬೇಡಿಕೆಗಳಾದ ಎಸ್ ಸಿ, ಎಸ್‌ಟಿಗಳಿಗೆ ಬ್ಯಾಕ್‌ಲಾಕ್ ಹುದ್ದೆಗಳನ್ನು ಭರ್ತಿ ಮಾಡುವುದು ಮೊದಲು ಆಗಬೇಕು. ಕಾನೂನು ವಿದ್ಯಾರ್ಥಿಗಳು, ಇಂಜಿನಿಯರ್‌ರಿಂಗ್ ವಿದ್ಯಾರ್ಥಿಗಳು, ಮೆಡಿಕಲ್ ವಿದ್ಯಾರ್ಥಿಗಳಿಗೆ ಒಳ ಮೀಸಲಾತಿಯಿಂದ ತುಂಬಾ ಇಕ್ಕಟ್ಟಾಗಿದ್ದು, ಸರಿಯಾಗಿ ಜಾತಿ ಪ್ರಮಾಣ ಕೊಡುತ್ತಿಲ್ಲ. ಅದಕ್ಕಾಗೆ 1 ಸಾವಿರದಿಂದ 2 ಸಾವಿರ ರೂ .ವೆಚ್ಚವಾಗುತ್ತಿದೆ. ಅದನ್ನು ಕಡಿಮೆ ಮಾಡಬೇಕು. ಬಗರ್‌ಹುಕುಂ ಸಾಗುವಳಿಯಲ್ಲಿ ವಿಳಂಬವಾಗುತ್ತಿದೆ. ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿಗಳಿಗೆ ಮಂಡಿಸಲಾಗುತ್ತದೆ ಎಂದರು. ಡಾ. ಬಿ.ಆರ್.ಅಂಬೇಡ್ಕರ್ ಮಹಾಸಭಾದ ಜಿಲ್ಲಾಧ್ಯಕ್ಷ ಉಮೇಶ್‌ಕುದರ್ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯು ಕಳೆದ 20 ವರ್ಷಗಳಿಂದಲ್ಲೂ ನಿರಂತರವಾಗಿ ಸಮುದಾಯಕ್ಕೆ ಆಗುವ ಎಲ್ಲ ಅನ್ಯಾಯಗಳನ್ನು ತಮ್ಮ ಧ್ವನಿಯ ಮುಖಾಂತರ, ಸಮಾವೇಶಗಳ ಮುಖಾಂತರ ಎಲ್ಲರಿಗೂ ನ್ಯಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ನಮ್ಮ ಸಂಘಟನೆಗಳ ವತಿಯಿಂದ ಎಲ್ಲ ರೀತಿ ಸಹಕಾರ, ಬೆಂಬಲ ನೀಡುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ನಂಜುಂಡಸ್ವಾಮಿ, ಹಿರಿಯ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಕಾರ್ಯಾಧ್ಯಕ್ಷ ಶಿವಕುಮಾರಯ್ಯ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ವಾಸು, ಎಸ್ ಸಿ, ಎಸ್ ಟಿ  ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ನಂಜುಂಡಸ್ವಾಮಿ ಹಾಜರಿದ್ದರು.
    4
    ಆ.28 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ಎಸ್ ಸಿ/ಎಸ್ ಟಿ ಜಾಗೃತ ನೌಕರರ 6ನೇ  ರಾಜ್ಯ ಮಟ್ಟದ ಐಕ್ಯತಾ ಸಮಾವೇಶ: ಸಿ.ಕೆ.ರಾಮಸ್ವಾಮಿ
ಆ.28 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ಎಸ್ ಸಿ/ಎಸ್ ಟಿ ಜಾಗೃತ ನೌಕರರ 6ನೇ  ರಾಜ್ಯ ಮಟ್ಟದ ಐಕ್ಯತಾ ಸಮಾವೇಶ: ಸಿ.ಕೆ.ರಾಮಸ್ವಾಮಿ
ವರದಿ: ಹೊಮ್ಮನಂಜುಂಡನಾಯಕ.
ಜಿಲ್ಲೆಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ನೌಕರರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ
ಚಾಮರಾಜನಗರ: ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿ ಕೇಂದ್ರ
ನಮಿತಿ ಬೆಂಗಳೂರು ನೇತೃತ್ವದಲ್ಲಿ ಆ. 28 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ಜಾಗೃತ ನೌಕರರ 6ನೇ ರಾಜ್ಯ ಮಟ್ಟದ ಐಕ್ಯತಾ ಸಮಾವೇಶ ನಡೆಯಲಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಸಿ.ಕೆ.ರಾಮಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂ.8, ಶೃಂಗಾರ್ ಪ್ಯಾಲೇನ್‌ನಲ್ಲಿ ಬೆಳಿಗ್ಗೆ 10:30 ಗಂಟೆಗೆ ಆರಂಭವಾಗುವ ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಕೊಳ್ಳೇಗಾಲ ಜೇತವನ ವಿಹಾರದ ಭೌದ್ಧ ಬಿಕ್ಕು ಮನೋರಕ್ಷಿತ ಬಂತೇಜಿ ವಹಿಸುವವರು, ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವ‌ರ್ ಅಧ್ಯಕ್ಷತೆ ವಹಿಸುವವರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ. ಸಚಿವರಾದ ಕೆ.ಚ್‌.ಮುನಿಯಪ್ಪ, ಸತೀಶ್‌ ಜಾರಕಿಹೊಳಿ, ಪ್ರಿಯಾಂಕ್‌ಖರ್ಗೆ, ಶಿವರಾಜ್ ತಂಗಡಗಿ : ಪಿ.ಎಂ.ನರೇಂದ್ರಸ್ವಾಮಿ.ಬಿ. ನಾಗೇಂದ್ರ ರುದ್ರಪ್ಪ ಲಮಾಣಿ, ಕೆ.ಎಸ್‌.ಬಸವಂತಪ್ಪ, ಟಿ.ರಘುಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸುವವರು. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 5 ಬಸ್‌ಗಳಲ್ಲಿ ಹೊರಡಲು ವ್ಯವಸ್ಥೆ. ಮಾಡಲಾಗಿದೆ. ಚಾಮರಾಜೇಶ್ವರ ದೇವಸ್ಥಾನ ‌ ಮುಂಭಾಗ, ಹೌಸಿಂಗ್ ಬೋರ್ಡ್ ಹತ್ತಿರ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಸಿ, ಎಸ್‌ಟಿ ನೌಕರರು ಭಾಗವಹಿಸಿ ಯಶಸ್ವಿಕೊಳಿಸಿಕೊಡುವಂತೆ ಮನವಿ ಮಾಡಿದರು. 
ಮಾಜಿ ಅಧ್ಯಕ್ಷ ಮಂಜುನಾಥಪ್ರನನ್ನ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯು ಕಳೆದ 20 ವರ್ಷಗಳಿಂದಲ್ಲೂ ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ನೌಕರರಿಗೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ. ನಾನು ಕೂಡ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದೇನೆ. ಸಮಿತಿಯು ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ಜಾಗೃತ ನೌಕರರ 6ನೇ ರಾಜ್ಯ ಮಟ್ಟದ ಐಕ್ಯತಾ ಸಮಾವೇಶ ಮಾಡಿ ನೌಕರರು, ಸಮುದಾಯದ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುತ್ತದೆ. ಈ ಸಮಾವೇಶಕ್ಕೆ ರಾಜ್ಯಾದ್ಯಂತ ಸುಮಾರು 50 ಸಾವಿರ ಜನರು ಸೇರುತ್ತಾರೆ ನಮ್ಮ ಜಿಲ್ಲೆಯಿಂದ 500 ಮಂದಿ ಭಾಗವಹಿಸುತ್ತಾರೆ. ಈ ಸಮಾವೇಶದಲ್ಲಿ ನಮ್ಮ ಮುಖ್ಯ ಬೇಡಿಕೆಗಳಾದ ಎಸ್ ಸಿ, ಎಸ್‌ಟಿಗಳಿಗೆ ಬ್ಯಾಕ್‌ಲಾಕ್ ಹುದ್ದೆಗಳನ್ನು ಭರ್ತಿ ಮಾಡುವುದು ಮೊದಲು ಆಗಬೇಕು. ಕಾನೂನು ವಿದ್ಯಾರ್ಥಿಗಳು, ಇಂಜಿನಿಯರ್‌ರಿಂಗ್ ವಿದ್ಯಾರ್ಥಿಗಳು, ಮೆಡಿಕಲ್ ವಿದ್ಯಾರ್ಥಿಗಳಿಗೆ ಒಳ ಮೀಸಲಾತಿಯಿಂದ ತುಂಬಾ ಇಕ್ಕಟ್ಟಾಗಿದ್ದು, ಸರಿಯಾಗಿ ಜಾತಿ ಪ್ರಮಾಣ ಕೊಡುತ್ತಿಲ್ಲ. ಅದಕ್ಕಾಗೆ 1 ಸಾವಿರದಿಂದ 2 ಸಾವಿರ ರೂ .ವೆಚ್ಚವಾಗುತ್ತಿದೆ. ಅದನ್ನು ಕಡಿಮೆ ಮಾಡಬೇಕು. ಬಗರ್‌ಹುಕುಂ ಸಾಗುವಳಿಯಲ್ಲಿ ವಿಳಂಬವಾಗುತ್ತಿದೆ. ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿಗಳಿಗೆ ಮಂಡಿಸಲಾಗುತ್ತದೆ ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ಮಹಾಸಭಾದ ಜಿಲ್ಲಾಧ್ಯಕ್ಷ ಉಮೇಶ್‌ಕುದರ್ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯು ಕಳೆದ 20 ವರ್ಷಗಳಿಂದಲ್ಲೂ ನಿರಂತರವಾಗಿ ಸಮುದಾಯಕ್ಕೆ ಆಗುವ ಎಲ್ಲ ಅನ್ಯಾಯಗಳನ್ನು ತಮ್ಮ ಧ್ವನಿಯ ಮುಖಾಂತರ, ಸಮಾವೇಶಗಳ ಮುಖಾಂತರ ಎಲ್ಲರಿಗೂ ನ್ಯಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ನಮ್ಮ ಸಂಘಟನೆಗಳ ವತಿಯಿಂದ ಎಲ್ಲ ರೀತಿ ಸಹಕಾರ, ಬೆಂಬಲ ನೀಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ನಂಜುಂಡಸ್ವಾಮಿ, ಹಿರಿಯ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಕಾರ್ಯಾಧ್ಯಕ್ಷ ಶಿವಕುಮಾರಯ್ಯ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ವಾಸು, ಎಸ್ ಸಿ, ಎಸ್ ಟಿ  ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ನಂಜುಂಡಸ್ವಾಮಿ ಹಾಜರಿದ್ದರು.
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    1 hr ago
  • ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಬ್ಲಾಕ್ ಚಿಕ್ಕುಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಶಾಸಕ ಎಂ.ಆರ್. ಮಂಜುನಾಥ್: ರೈತ ಸಂಘದಿಂದ ಧನ್ಯವಾದ ಹನೂರು: ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕುಡಿ ಗ್ರಾಮದಲ್ಲಿ ತೀವ್ರವಾಗಿದ್ದ ಕುಡಿಯುವ ನೀರಿನ ಅಭಾವವನ್ನು ಆಲಿಸಿ, ತಕ್ಷಣವೇ ಕೊಳವೆ ಬಾವಿ ಕೊರೆಯಿಸಿ ನೀರು ಪೂರೈಸಲು ಕ್ರಮ ಕೈಗೊಂಡ ಹನೂರು ಕ್ಷೇತ್ರದ ಶಾಸಕರಾದ ಎಂ.ಆರ್. ಮಂಜುನಾಥ್ ಅವರಿಗೆ ಮೂಲ ಸಿದ್ಧಾಂತದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ. ಚಿಕ್ಕುಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದ ಹಿನ್ನೆಲೆಯಲ್ಲಿ, ರೈತ ಸಂಘದ ಮುಖಂಡರು ಶಾಸಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು. ಗ್ರಾಮಸ್ಥರ ಹಾಗೂ ರೈತ ಮುಖಂಡರ ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕ ಎಂ.ಆರ್. ಮಂಜುನಾಥ್ ಅವರು, ಗ್ರಾಮದಲ್ಲಿ ಹೊಸ ಕೊಳವೆ ಬಾವಿ ಕೊರೆಯಿಸಲು ಇಂದು ಬೋರ್‌ವೆಲ್ ವಾಹನವನ್ನು ಕಳುಹಿಸಿಕೊಟ್ಟಿದ್ದರು. ಗ್ರಾಮದಲ್ಲಿ ಕೈಗೊಂಡ ಬೋರ್‌ವೆಲ್ ಕೊರೆತದ ಸಂದರ್ಭದಲ್ಲಿ ಸುಮಾರು ಎರಡು ಇಂಚು ಉತ್ತಮ ಪ್ರಮಾಣದ ನೀರು ಬಿದ್ದಿದ್ದು, ಗ್ರಾಮಸ್ಥರಲ್ಲಿ ಮತ್ತು ರೈತರ ಮುಖಂಡರಲ್ಲಿ ಸಂತಸ ಮೂಡಿಸಿದೆ. ಹಲವು ದಿನಗಳಿಂದ ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದ್ದು, ಶಾಸಕರ ಶೀಘ್ರ ಸ್ಪಂದನೆ ಮತ್ತು ಜನಪರ ಕಾಳಜಿಗೆ ರೈತ ಸಂಘದ ತಾಲೂಕು ಹಾಗೂ ಗ್ರಾಮ ಮಟ್ಟದ ಮುಖಂಡರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮೂಲ ಸಿದ್ಧಾಂತದ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖ ಮುಖಂಡರು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
    1
    ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಬ್ಲಾಕ್ ಚಿಕ್ಕುಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಶಾಸಕ ಎಂ.ಆರ್. ಮಂಜುನಾಥ್: ರೈತ ಸಂಘದಿಂದ ಧನ್ಯವಾದ
ಹನೂರು: ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕುಡಿ ಗ್ರಾಮದಲ್ಲಿ ತೀವ್ರವಾಗಿದ್ದ ಕುಡಿಯುವ ನೀರಿನ ಅಭಾವವನ್ನು ಆಲಿಸಿ, ತಕ್ಷಣವೇ ಕೊಳವೆ ಬಾವಿ ಕೊರೆಯಿಸಿ ನೀರು ಪೂರೈಸಲು ಕ್ರಮ ಕೈಗೊಂಡ ಹನೂರು ಕ್ಷೇತ್ರದ ಶಾಸಕರಾದ ಎಂ.ಆರ್. ಮಂಜುನಾಥ್ ಅವರಿಗೆ ಮೂಲ ಸಿದ್ಧಾಂತದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.
ಚಿಕ್ಕುಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದ ಹಿನ್ನೆಲೆಯಲ್ಲಿ, ರೈತ ಸಂಘದ ಮುಖಂಡರು ಶಾಸಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು. ಗ್ರಾಮಸ್ಥರ ಹಾಗೂ ರೈತ ಮುಖಂಡರ ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕ ಎಂ.ಆರ್. ಮಂಜುನಾಥ್ ಅವರು, ಗ್ರಾಮದಲ್ಲಿ ಹೊಸ ಕೊಳವೆ ಬಾವಿ ಕೊರೆಯಿಸಲು ಇಂದು ಬೋರ್‌ವೆಲ್ ವಾಹನವನ್ನು ಕಳುಹಿಸಿಕೊಟ್ಟಿದ್ದರು.
ಗ್ರಾಮದಲ್ಲಿ ಕೈಗೊಂಡ ಬೋರ್‌ವೆಲ್ ಕೊರೆತದ ಸಂದರ್ಭದಲ್ಲಿ ಸುಮಾರು ಎರಡು ಇಂಚು ಉತ್ತಮ ಪ್ರಮಾಣದ ನೀರು ಬಿದ್ದಿದ್ದು, ಗ್ರಾಮಸ್ಥರಲ್ಲಿ ಮತ್ತು ರೈತರ ಮುಖಂಡರಲ್ಲಿ ಸಂತಸ ಮೂಡಿಸಿದೆ. ಹಲವು ದಿನಗಳಿಂದ ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದ್ದು, ಶಾಸಕರ ಶೀಘ್ರ ಸ್ಪಂದನೆ ಮತ್ತು ಜನಪರ ಕಾಳಜಿಗೆ ರೈತ ಸಂಘದ ತಾಲೂಕು ಹಾಗೂ ಗ್ರಾಮ ಮಟ್ಟದ ಮುಖಂಡರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮೂಲ ಸಿದ್ಧಾಂತದ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖ ಮುಖಂಡರು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
    user_Vijay kumar
    Vijay kumar
    ಕೊಳ್ಳೇಗಾಲ, ಚಾಮರಾಜನಗರ, ಕರ್ನಾಟಕ•
    20 hrs ago
  • ಕತ್ತಲೆಯಿಂದ ಬೆಳಕಿನೆಡೆಗೆ: ಈದ್ ಮಿಲಾದ್-ಉನ್-ನಬಿ ಹುಟ್ಟಿದ ಕಥೆ ​ಸುಮಾರು 1400 ವರ್ಷಗಳ ಹಿಂದಿನ ಮಾತು. ಅರೇಬಿಯಾದ ಮರಳುಗಾಡು ಸಂಪೂರ್ಣ ಅಂಧಕಾರದಲ್ಲಿ ಮುಳುಗಿತ್ತು. ಅನ್ಯಾಯ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಮೂಢನಂಬಿಕೆಗಳು ಮತ್ತು ಪರಸ್ಪರ ಕಚ್ಚಾಡುವಿಕೆಗಳು ಸಮಾಜವನ್ನು ಆವರಿಸಿದ್ದವು. ಇಂತಹ ಸಂದರ್ಭದಲ್ಲಿ ಇಡೀ ಮಾನವಕುಲಕ್ಕೆ ಶಾಂತಿ ಮತ್ತು ಕರುಣೆಯ ಸಂದೇಶ ನೀಡಲು ಒಬ್ಬ ಮಾರ್ಗದರ್ಶಿಯ ಅಗತ್ಯವಿತ್ತು. ​ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಾದ ‘ರಬೀ-ಉಲ್-ಅವ್ವಲ್’ 12 ರಂದು, ಮೆಕ್ಕಾ ನಗರದಲ್ಲಿ ಪವಿತ್ರ ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನನವಾಯಿತು. ತಂದೆ ಅಬ್ದುಲ್ಲಾ ಅವರ ಅಗಲಿಕೆಯ ನಂತರ ಜನಿಸಿದ ಈ ಮಗುವಿಗೆ ತಾಯಿ ಆಮಿನಾ ಮತ್ತು ಅಜ್ಜ ಅಬ್ದುಲ್ ಮುತ್ತಲಿಬ್ ಪ್ರೀತಿಯಿಂದ ಆಸರೆಯಾದರು. ಬೆಳೆಯುತ್ತಾ ತಮ್ಮ ಅಸಾಧಾರಣ ಸತ್ಯಸಂಧತೆ ಮತ್ತು ಪ್ರಾಮಾಣಿಕತೆಯಿಂದಾಗಿ ಜನರು ಅವರನ್ನು ‘ಅಲ್-ಅಮೀನ್’ (ನಂಬಿಕಸ್ಥ) ಎಂದು ಗೌರವದಿಂದ ಕರೆದರು. ​ಮುಂದೆ ಅವರು ಸಮಾಜಕ್ಕೆ ಕೇವಲ ಧರ್ಮವನ್ನಷ್ಟೇ ಬೋಧಿಸಲಿಲ್ಲ; ಬದಲಿಗೆ: ​ಹೆಣ್ಣು ಮಕ್ಕಳಿಗೆ ಗೌರವ ಮತ್ತು ಹಕ್ಕುಗಳನ್ನು ನೀಡಿದರು. ​ಬಡವರು, ಅನಾಥರು ಮತ್ತು ಗುಲಾಮರ ಮೇಲಿನ ಶೋಷಣೆಯನ್ನು ನಿಲ್ಲಿಸಿ ಸಮಾನತೆಯನ್ನು ಸಾರಿದರು. ​"ನಿಮ್ಮ ನೆರೆಹೊರೆಯವರು ಹಸಿದಿರುವಾಗ ನೀವು ಹೊಟ್ಟೆ ತುಂಬ ಉಣ್ಣುವುದು ಸರಿಯಲ್ಲ" ಎಂದು ಸಹಾನುಭೂತಿಯ ಪಾಠ ಕಲಿಸಿದರು. ​ಈ ಆಚರಣೆ ಆರಂಭವಾಗಿದ್ದು ಹೇಗೆ? ​ಪ್ರವಾದಿಯವರ ಕಾಲದ ನಂತರ, ಶತಮಾನಗಳು ಕಳೆದಂತೆ ಜನರು ಅವರ ತ್ಯಾಗ, ಬೋಧನೆ ಮತ್ತು ಮಾನವೀಯ ಸಂದೇಶಗಳನ್ನು ಮುಂದಿನ ಪೀಳಿಗೆಗೆ ನೆನಪಿಸಲು ಒಂದು ವಿಶೇಷ ದಿನವನ್ನು ಮೀಸಲಿಡಲು ಬಯಸಿದರು. ​12ನೇ ಶತಮಾನದ ಸುಮಾರಿಗೆ ಇಸ್ಲಾಮಿಕ್ ಜಗತ್ತಿನ ವಿದ್ವಾಂಸರು ಹಾಗೂ ಆಡಳಿತಗಾರರು ಪ್ರವಾದಿಯವರ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಲು ಆರಂಭಿಸಿದರು. ​ಇರ್ಬಿಲ್ (ಇಂದಿನ ಇರಾಕ್) ನಗರದ ರಾಜ ಮುಜಫ್ಫರ್ ಅಲ್-ದಿನ್ ಈ ದಿನವನ್ನು ದೊಡ್ಡ ಉತ್ಸವದಂತೆ ಆಯೋಜಿಸಿ, ಬಡವರಿಗೆ ಆಹಾರ ವಿತರಿಸಿ, ಪ್ರವಾದಿಯವರ ಜೀವನ ಚರಿತ್ರೆ ಮತ್ತು ಕವಿತೆಗಳನ್ನು ವಾಚಿಸುವ ಸಂಪ್ರದಾಯವನ್ನು ವ್ಯಾಪಕವಾಗಿ ಬೆಳೆಸಿದನು. ​ಕಾಲಾನಂತರದಲ್ಲಿ ಈ ಸಂಪ್ರದಾಯ ಈಜಿಪ್ಟ್, ಟರ್ಕಿ ಸೇರಿದಂತೆ ಇಡೀ ವಿಶ್ವದಾದ್ಯಂತ ಹರಡಿತು. ​ಇಂದು ಏಕೆ ಆಚರಿಸಲಾಗುತ್ತದೆ? ​ಮಿಲಾದ್-ಉನ್-ನಬಿ ಎಂದರೆ ಕೇವಲ ಹಬ್ಬದ ಸಡಗರವಲ್ಲ; ಅದು ಪ್ರವಾದಿಯವರ ಬದುಕನ್ನು ಸ್ಮರಿಸುವ ದಿನ. ​ಕೃತಜ್ಞತೆ: ಪ್ರವಾದಿಯವರ ಮೂಲಕ ಸಮಾಜಕ್ಕೆ ಸಿಕ್ಕ ಶಾಂತಿ ಮತ್ತು ಜ್ಞಾನದ ಸಂದೇಶಕ್ಕೆ ಕೃತಜ್ಞತೆ ಸಲ್ಲಿಸುವುದು. ​ದಾನ-ಧರ್ಮ: ಹಸಿದವರಿಗೆ ಅನ್ನದಾನ ಮಾಡುವುದು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವುದು. ​ಸೌಹಾರ್ದತೆ: ಮೆರವಣಿಗೆ ಮತ್ತು ಪ್ರಾರ್ಥನೆಗಳ ಮೂಲಕ ಸಮಾಜದಲ್ಲಿ ಸೋದರತ್ವ ಮತ್ತು ಪ್ರೀತಿಯನ್ನು ಸಾರುವುದು. ​ಕತ್ತಲೆಯನ್ನು ಹೋಗಲಾಡಿಸಿ ಮಾನವೀಯತೆಯ ಬೆಳಕು ಚೆಲ್ಲಿದ ಪ್ರವಾದಿಯವರ ಜನ್ಮದಿನವನ್ನು ಇಂದು ವಿಶ್ವದಾದ್ಯಂತ ಅತ್ಯಂತ ಶ್ರದ್ಧೆಯಿಂದ ‘ಈದ್ ಮಿಲಾದ್-ಉನ್-ನಬಿ’ ಎಂದು ಆಚರಿಸಲಾಗುತ್ತದೆ.
    2
    ಕತ್ತಲೆಯಿಂದ ಬೆಳಕಿನೆಡೆಗೆ: ಈದ್ ಮಿಲಾದ್-ಉನ್-ನಬಿ ಹುಟ್ಟಿದ ಕಥೆ
​ಸುಮಾರು 1400 ವರ್ಷಗಳ ಹಿಂದಿನ ಮಾತು. ಅರೇಬಿಯಾದ ಮರಳುಗಾಡು ಸಂಪೂರ್ಣ ಅಂಧಕಾರದಲ್ಲಿ ಮುಳುಗಿತ್ತು. ಅನ್ಯಾಯ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಮೂಢನಂಬಿಕೆಗಳು ಮತ್ತು ಪರಸ್ಪರ ಕಚ್ಚಾಡುವಿಕೆಗಳು ಸಮಾಜವನ್ನು ಆವರಿಸಿದ್ದವು. ಇಂತಹ ಸಂದರ್ಭದಲ್ಲಿ ಇಡೀ ಮಾನವಕುಲಕ್ಕೆ ಶಾಂತಿ ಮತ್ತು ಕರುಣೆಯ ಸಂದೇಶ ನೀಡಲು ಒಬ್ಬ ಮಾರ್ಗದರ್ಶಿಯ ಅಗತ್ಯವಿತ್ತು.
​ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಾದ ‘ರಬೀ-ಉಲ್-ಅವ್ವಲ್’ 12 ರಂದು, ಮೆಕ್ಕಾ ನಗರದಲ್ಲಿ ಪವಿತ್ರ ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನನವಾಯಿತು. ತಂದೆ ಅಬ್ದುಲ್ಲಾ ಅವರ ಅಗಲಿಕೆಯ ನಂತರ ಜನಿಸಿದ ಈ ಮಗುವಿಗೆ ತಾಯಿ ಆಮಿನಾ ಮತ್ತು ಅಜ್ಜ ಅಬ್ದುಲ್ ಮುತ್ತಲಿಬ್ ಪ್ರೀತಿಯಿಂದ ಆಸರೆಯಾದರು. ಬೆಳೆಯುತ್ತಾ ತಮ್ಮ ಅಸಾಧಾರಣ ಸತ್ಯಸಂಧತೆ ಮತ್ತು ಪ್ರಾಮಾಣಿಕತೆಯಿಂದಾಗಿ ಜನರು ಅವರನ್ನು ‘ಅಲ್-ಅಮೀನ್’ (ನಂಬಿಕಸ್ಥ) ಎಂದು ಗೌರವದಿಂದ ಕರೆದರು.
​ಮುಂದೆ ಅವರು ಸಮಾಜಕ್ಕೆ ಕೇವಲ ಧರ್ಮವನ್ನಷ್ಟೇ ಬೋಧಿಸಲಿಲ್ಲ; ಬದಲಿಗೆ:
​ಹೆಣ್ಣು ಮಕ್ಕಳಿಗೆ ಗೌರವ ಮತ್ತು ಹಕ್ಕುಗಳನ್ನು ನೀಡಿದರು.
​ಬಡವರು, ಅನಾಥರು ಮತ್ತು ಗುಲಾಮರ ಮೇಲಿನ ಶೋಷಣೆಯನ್ನು ನಿಲ್ಲಿಸಿ ಸಮಾನತೆಯನ್ನು ಸಾರಿದರು.
​"ನಿಮ್ಮ ನೆರೆಹೊರೆಯವರು ಹಸಿದಿರುವಾಗ ನೀವು ಹೊಟ್ಟೆ ತುಂಬ ಉಣ್ಣುವುದು ಸರಿಯಲ್ಲ" ಎಂದು ಸಹಾನುಭೂತಿಯ ಪಾಠ ಕಲಿಸಿದರು.
​ಈ ಆಚರಣೆ ಆರಂಭವಾಗಿದ್ದು ಹೇಗೆ?
​ಪ್ರವಾದಿಯವರ ಕಾಲದ ನಂತರ, ಶತಮಾನಗಳು ಕಳೆದಂತೆ ಜನರು ಅವರ ತ್ಯಾಗ, ಬೋಧನೆ ಮತ್ತು ಮಾನವೀಯ ಸಂದೇಶಗಳನ್ನು ಮುಂದಿನ ಪೀಳಿಗೆಗೆ ನೆನಪಿಸಲು ಒಂದು ವಿಶೇಷ ದಿನವನ್ನು ಮೀಸಲಿಡಲು ಬಯಸಿದರು.
​12ನೇ ಶತಮಾನದ ಸುಮಾರಿಗೆ ಇಸ್ಲಾಮಿಕ್ ಜಗತ್ತಿನ ವಿದ್ವಾಂಸರು ಹಾಗೂ ಆಡಳಿತಗಾರರು ಪ್ರವಾದಿಯವರ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಲು ಆರಂಭಿಸಿದರು.
​ಇರ್ಬಿಲ್ (ಇಂದಿನ ಇರಾಕ್) ನಗರದ ರಾಜ ಮುಜಫ್ಫರ್ ಅಲ್-ದಿನ್ ಈ ದಿನವನ್ನು ದೊಡ್ಡ ಉತ್ಸವದಂತೆ ಆಯೋಜಿಸಿ, ಬಡವರಿಗೆ ಆಹಾರ ವಿತರಿಸಿ, ಪ್ರವಾದಿಯವರ ಜೀವನ ಚರಿತ್ರೆ ಮತ್ತು ಕವಿತೆಗಳನ್ನು ವಾಚಿಸುವ ಸಂಪ್ರದಾಯವನ್ನು ವ್ಯಾಪಕವಾಗಿ ಬೆಳೆಸಿದನು.
​ಕಾಲಾನಂತರದಲ್ಲಿ ಈ ಸಂಪ್ರದಾಯ ಈಜಿಪ್ಟ್, ಟರ್ಕಿ ಸೇರಿದಂತೆ ಇಡೀ ವಿಶ್ವದಾದ್ಯಂತ ಹರಡಿತು.
​ಇಂದು ಏಕೆ ಆಚರಿಸಲಾಗುತ್ತದೆ?
​ಮಿಲಾದ್-ಉನ್-ನಬಿ ಎಂದರೆ ಕೇವಲ ಹಬ್ಬದ ಸಡಗರವಲ್ಲ; ಅದು ಪ್ರವಾದಿಯವರ ಬದುಕನ್ನು ಸ್ಮರಿಸುವ ದಿನ.
​ಕೃತಜ್ಞತೆ: ಪ್ರವಾದಿಯವರ ಮೂಲಕ ಸಮಾಜಕ್ಕೆ ಸಿಕ್ಕ ಶಾಂತಿ ಮತ್ತು ಜ್ಞಾನದ ಸಂದೇಶಕ್ಕೆ ಕೃತಜ್ಞತೆ ಸಲ್ಲಿಸುವುದು.
​ದಾನ-ಧರ್ಮ: ಹಸಿದವರಿಗೆ ಅನ್ನದಾನ ಮಾಡುವುದು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವುದು.
​ಸೌಹಾರ್ದತೆ: ಮೆರವಣಿಗೆ ಮತ್ತು ಪ್ರಾರ್ಥನೆಗಳ ಮೂಲಕ ಸಮಾಜದಲ್ಲಿ ಸೋದರತ್ವ ಮತ್ತು ಪ್ರೀತಿಯನ್ನು ಸಾರುವುದು.
​ಕತ್ತಲೆಯನ್ನು ಹೋಗಲಾಡಿಸಿ ಮಾನವೀಯತೆಯ ಬೆಳಕು ಚೆಲ್ಲಿದ ಪ್ರವಾದಿಯವರ ಜನ್ಮದಿನವನ್ನು ಇಂದು ವಿಶ್ವದಾದ್ಯಂತ ಅತ್ಯಂತ ಶ್ರದ್ಧೆಯಿಂದ ‘ಈದ್ ಮಿಲಾದ್-ಉನ್-ನಬಿ’ ಎಂದು ಆಚರಿಸಲಾಗುತ್ತದೆ.
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    3 hrs ago
  • ಟಾಕ್ಸಿಕ್ ಯಶಸ್ಸಿಗೆ ರಕ್ತದಾನ; ಯಶ್ ಅಭಿಮಾನಿಗಳ ವಿಭಿನ್ನ ಶುಭಾಶಯ ಮೈಸೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ವಿಶ್ವದಾದ್ಯಂತ ತೆರೆಕಾಣುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಯಶ್ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಶುಭಕೋರಿದ್ದಾರೆ. ಸಿನಿಮಾ ಯಶಸ್ಸಿಗಾಗಿ ಕೇವಲ ಸಂಭ್ರಮಾಚರಣೆ ನಡೆಸುವುದಕ್ಕೆ ಸೀಮಿತವಾಗದೆ, ರಕ್ತದಾನ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ನಗರದ ಸಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಯಶ್ ಅಭಿಮಾನಿಗಳು ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ವಿಶೇಷ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ನೂರಾರು ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ರಕ್ತದಾನ ಮಾಡಿದರು. ಯುವಕರು, ಮಹಿಳೆಯರು ಸೇರಿದಂತೆ ವಿವಿಧ ವಯೋಮಾನದ ಅಭಿಮಾನಿಗಳು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯ ಸಂದೇಶ ಸಾರಿದರು. ಸಾಮಾನ್ಯವಾಗಿ ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಅಭಿಮಾನಿಗಳು ಪೋಸ್ಟರ್‌ಗಳಿಗೆ ಹಾಲಿನ ಅಭಿಷೇಕ, ಕಟೌಟ್‌ಗಳಿಗೆ ಹಾರ ಹಾಕುವುದು, ಪಟಾಕಿ ಸಿಡಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಆದರೆ ಮೈಸೂರಿನ ಯಶ್ ಅಭಿಮಾನಿಗಳು ಈ ಬಾರಿ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯದ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿರುವುದು ವಿಶೇಷವಾಗಿತ್ತು. ರಕ್ತದಾನದ ಮೂಲಕ ಅಗತ್ಯವಿರುವವರಿಗೆ ನೆರವಾಗುವ ಉದ್ದೇಶದಿಂದ ಶಿಬಿರ ನಡೆಸಲಾಗಿದೆ. ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಯಶ್ ಅವರು ಯುವಜನತೆಗೆ ಪ್ರೇರಣೆಯಾಗಿದ್ದು, ಅವರ ‘ಟಾಕ್ಸಿಕ್’ ಚಿತ್ರ ವಿಶ್ವಮಟ್ಟದಲ್ಲಿ ಯಶಸ್ಸು ಸಾಧಿಸಲಿ ಎಂಬ ಆಶಯದಿಂದ ಈ ಮಾನವೀಯ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಅಭಿಮಾನ ಎಂದರೆ ಕೇವಲ ಸಂಭ್ರಮಿಸುವುದಲ್ಲ; ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡುವುದೂ ಅಭಿಮಾನದ ಒಂದು ರೂಪ ಎಂಬ ಸಂದೇಶವನ್ನು ಶಿಬಿರದ ಮೂಲಕ ಸಾರಲಾಗಿದೆ ಎಂದರು. ಶಿಬಿರದಲ್ಲಿ ಪಾಲ್ಗೊಂಡ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಟನಿಗೆ ವಿಭಿನ್ನ ರೀತಿಯಲ್ಲಿ ಶುಭಾಶಯ ಸಲ್ಲಿಸಿದರು. ಸಿನಿಮಾ ಯಶಸ್ವಿಯಾಗುವುದರ ಜೊತೆಗೆ ರಕ್ತದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವೂ ಇದರಿಂದ ನಡೆಯಿತು. ಯಶ್ ಅವರ ಚಿತ್ರ ಬಿಡುಗಡೆ ಸಂಭ್ರಮವನ್ನು ಸಾಮಾಜಿಕ ಸೇವೆಯೊಂದಿಗೆ ಬೆಸೆದ ಅಭಿಮಾನಿಗಳ ಈ ನಡೆ ಸಾರ್ವಜನಿಕರ ಗಮನ ಸೆಳೆಯಿತು.
    1
    ಟಾಕ್ಸಿಕ್ ಯಶಸ್ಸಿಗೆ ರಕ್ತದಾನ; ಯಶ್ ಅಭಿಮಾನಿಗಳ ವಿಭಿನ್ನ ಶುಭಾಶಯ
ಮೈಸೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ವಿಶ್ವದಾದ್ಯಂತ ತೆರೆಕಾಣುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಯಶ್ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಶುಭಕೋರಿದ್ದಾರೆ. ಸಿನಿಮಾ ಯಶಸ್ಸಿಗಾಗಿ ಕೇವಲ ಸಂಭ್ರಮಾಚರಣೆ ನಡೆಸುವುದಕ್ಕೆ ಸೀಮಿತವಾಗದೆ, ರಕ್ತದಾನ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ನಗರದ ಸಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಯಶ್ ಅಭಿಮಾನಿಗಳು ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ವಿಶೇಷ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ನೂರಾರು ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ರಕ್ತದಾನ ಮಾಡಿದರು. ಯುವಕರು, ಮಹಿಳೆಯರು ಸೇರಿದಂತೆ ವಿವಿಧ ವಯೋಮಾನದ ಅಭಿಮಾನಿಗಳು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯ ಸಂದೇಶ ಸಾರಿದರು.
ಸಾಮಾನ್ಯವಾಗಿ ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಅಭಿಮಾನಿಗಳು ಪೋಸ್ಟರ್‌ಗಳಿಗೆ ಹಾಲಿನ ಅಭಿಷೇಕ, ಕಟೌಟ್‌ಗಳಿಗೆ ಹಾರ ಹಾಕುವುದು, ಪಟಾಕಿ ಸಿಡಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಆದರೆ ಮೈಸೂರಿನ ಯಶ್ ಅಭಿಮಾನಿಗಳು ಈ ಬಾರಿ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯದ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿರುವುದು ವಿಶೇಷವಾಗಿತ್ತು. ರಕ್ತದಾನದ ಮೂಲಕ ಅಗತ್ಯವಿರುವವರಿಗೆ ನೆರವಾಗುವ ಉದ್ದೇಶದಿಂದ ಶಿಬಿರ ನಡೆಸಲಾಗಿದೆ.
ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಯಶ್ ಅವರು ಯುವಜನತೆಗೆ ಪ್ರೇರಣೆಯಾಗಿದ್ದು, ಅವರ ‘ಟಾಕ್ಸಿಕ್’ ಚಿತ್ರ ವಿಶ್ವಮಟ್ಟದಲ್ಲಿ ಯಶಸ್ಸು ಸಾಧಿಸಲಿ ಎಂಬ ಆಶಯದಿಂದ ಈ ಮಾನವೀಯ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಅಭಿಮಾನ ಎಂದರೆ ಕೇವಲ ಸಂಭ್ರಮಿಸುವುದಲ್ಲ; ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡುವುದೂ ಅಭಿಮಾನದ ಒಂದು ರೂಪ ಎಂಬ ಸಂದೇಶವನ್ನು ಶಿಬಿರದ ಮೂಲಕ ಸಾರಲಾಗಿದೆ ಎಂದರು.
ಶಿಬಿರದಲ್ಲಿ ಪಾಲ್ಗೊಂಡ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಟನಿಗೆ ವಿಭಿನ್ನ ರೀತಿಯಲ್ಲಿ ಶುಭಾಶಯ ಸಲ್ಲಿಸಿದರು. ಸಿನಿಮಾ ಯಶಸ್ವಿಯಾಗುವುದರ ಜೊತೆಗೆ ರಕ್ತದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವೂ ಇದರಿಂದ ನಡೆಯಿತು. ಯಶ್ ಅವರ ಚಿತ್ರ ಬಿಡುಗಡೆ ಸಂಭ್ರಮವನ್ನು ಸಾಮಾಜಿಕ ಸೇವೆಯೊಂದಿಗೆ ಬೆಸೆದ ಅಭಿಮಾನಿಗಳ ಈ ನಡೆ ಸಾರ್ವಜನಿಕರ ಗಮನ ಸೆಳೆಯಿತು.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Farmer Nanjangud, Mysuru•
    7 hrs ago
  • ಮಳವಳ್ಳಿಯಲ್ಲಿ ಮಾಮರ ಸೌಹಾರ್ದ ಸಹಕಾರ ಸಂಘದ ಪ್ರಥಮ ವರ್ಷದ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಮೈಸೂರು ಕೊಡಗು ಜಿಲ್ಲಾ ಸಹಕಾರ ಒಕ್ಕೂಟಗಳ ಸಂಯೋಜಕರಾದ ಬಲರಾಮ್ ಚಾಲನೆ ಮಳವಳ್ಳಿ;ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅರ್ಥಿಕ ಸೌಲಭ್ಯಗಳನ್ನು ನೀಡುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ--ಸಂಯೋಜಕ ಬಲರಾಂ ಹೇಳಿಕೆ ಮಳವಳ್ಳಿ:ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅರ್ಥಿಕ ಸೌಲಭ್ಯಗಳನ್ನು ನೀಡುವಲ್ಲಿ ಸಹಕಾರಿ ಸಂಘಗಳ ಪಾತ್ರ ಅಪಾರವಾಗಿದೆ ಎಂದು ಮೈಸೂರು ಕೊಡಗು ಸೌಹರ್ಧ ಸಹಕಾರಿ ಒಕ್ಕೂಟದ ವಿಭಾಗದ ಸಂಯೋಜಕ ಎನ್.ಬಲರಾಂ ಹೇಳಿದರು. ಪಟ್ಟಣದ ಶ್ರೀವೀರಭದ್ರೇಶ್ವರ ದೇವಸ್ಥಾನದ ಅವರಣದಲ್ಲಿ ಮಾಮರ ಸೌಹರ್ಧ ಸಹಕಾರಿ ಸಂಘ ಅಯೋಜಿಸಿದ್ದ ಪ್ರಥಮ ವರ್ಷದ ಸರ್ವ ಸದಸ್ಯರ ಸಭೆಗೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸಹಕಾರಿ ಸಂಘಗಳ ಮೂಲ ಉದ್ದೇಶವೇ ಸದಸ್ಯರಿಗೆ ಮೂಲ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿದೆ ಎಂದರು. ಮಾಮರ ಸೌಹರ್ದ ಸಹಕಾರ ಸಂಘ ಅರಂಭದ ವರ್ಷದಲ್ಲೆ ಉತ್ತಮ ಪ್ರಗತಿಯತ್ತ ಸಾಗಿದೆ,೧ ಕೋಟಿ ವಹಿವಾಟು ನಡೆಸಿರುವುದು,೫೦ ಲಕ್ಷಕ್ಕೂ ಮೂಲ ಬಂಡವಾಳ ಹೊಂದಿರುವುದು ಸೇರಿದಂತೆ ಸಂಘದ ಪಾರದರ್ಶಕ ಅರ್ಥಿಕ ವರದಿ ಭವಿಷ್ಯದಲ್ಲಿ ಉನ್ನತ ಸ್ಥಾನದ ಪಡೆಯಲಿದೆ ಎಂದ ಅವರು ಅಭಿವೃದ್ದಿ ಪಥದತ್ತ ಸಾಗುತ್ತಿರುವ ಸಂಘಕ್ಕೆ ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕು,ಸಂಘದ ಸೌಲಭ್ಯಗಳನ್ನು ಪಡೆಯುವುದಲ್ಲದೇ ಅಕ್ಕಪಕ್ಕದ ಜನರಿಗೂ ಸೌಲಭ್ಯ ಕೊಡಿಸುವತ್ತ ಮುಂದಾಗುವAತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಲೆಕಪರಿಶೋಧಕರಾದ ರಾಜೇಶ್ ಸಂಘದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಕವಿತಾ ಶ್ರೀಕಂಠಸ್ವಾಮಿ ಹಾಗೂ ಕು.ಕುಸುಮ ಸಂಘದ ವಾರ್ಷಿಕ ಲೆಕ್ಕ ಪರಿಶೋಧನ ವರದಿಯನ್ನು ಸಭೆಯಲ್ಲಿ ಮಂಡಿಸಿದರು.ಸAಘದ ಸೌಲಭ್ಯಗಳ ಬಗ್ಗೆ ಸಂಘದ ಅಪಾಧ್ಯಕ್ಷರಾದ ಗುರುಮೂರ್ತಿ ಮಾಹಿತಿ ನೀಡಿದರು.ಸಂಘದ ಸೇವೆಗಳ ಕುರಿತು ನಿರ್ದೇಶಕ ಶಿವಕುಮಾರ್ ಮಾತನಾಡಿದರು.ಮುಖ್ಯ ಕಾರ್ಯನಿರ್ವಹಣಾಧಿಕಶಾರಿ ಪೂರ್ಣಿಮ ಸಂಘ ಬೆಳೆದು ಬಂದ ಹಾದಿಯ ಕುರಿತು ವರದಿ ಮಂಡಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಶಿವಕುಮಾರ್ ಸಂಘದ ಅರಂಭ ಹಾಗೂ ಮುಂಗಡ ವರ್ಷದ ಯೋಜನೆಗಳು ಬಗ್ಗೆ ಸಭೆಯಲ್ಲಿ ಮಂಡಿಸಿದರು. ಬಾಕ್ಸ್ ಸುದ್ದಿ: ಹೋಸ ಯೋಜನೆಗಳ ಅನುಷ್ಠಾನ್ಕಕೆ ಅನುಮೋಧನೆ: ಸಹಕಾರ ಸಂಘದಿAದ ಸೂಪರ್ ಮಾರ್ಕೆಟ್ ಅರಂಭ,ಹಲಗೂರಿನಲ್ಲಿ ಹೊಸ ಉಪ ಶಾಖೆ ತೆರಯುವುದು,ಬಂಕ್ ಉದ್ಯಮ ಸೇರಿದಂತೆ ಸಹಕಾರ ಸಂಘದ ಪ್ರಗತಿಗೆ ಕೈಗೊಳ್ಳಬೇಕಾದ ಹೊಸ ಯೋಜನೆಗಳ ಅನುಷ್ಠಾನ ಹಾಗೂ ಲೆಕ್ಕ ಪರಿಶೋಧಕರ ನಿಯೋಜನೆ.ಹೊಸ ಕಛೇರಿ ತೆರೆಯುವುದು,ಸಾಮಾನ್ಯ ಸೇವಾ ಕೇಂದ್ರದ ಸೇವೆಗಳನ್ನು ಸದಸ್ಯರ ಮನೆಗೆ ನೀಡುವುದು ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಸಭೆಯಲ್ಲಿ ವಿಷಯ ಮಂಡಿಸಿ ಅನುಮೋಧನೆ ಪಡೆಯಲಾಯಿತು. ಇದೇ ಸಂದರ್ಭದಲ್ಲಿ ಸಂಘಕ್ಕೆ ನೂತನ ವೃತ್ತಿ ಪರ ನಿರ್ದೇಶಕರಾಗಿ ಅಯ್ಕಯಾಗಿದ್ದ ಬೆಳಕವಾಡಿ ಚೇತನ್ ಹಾಗೂ ರೇಷ್ಮೆ ಕೃಷಿಕ ಮೂಗನಕೊಪ್ಪಲು ತ್ಯಾಗರಾಜುರವರನ್ನು ಅಭಿನಂಧಿಸಿ ಆಢಳಿತ ಮಂಡಳಿಗೆ ಬರಮಾಡಿಕೊಳ್ಳಲಾಯಿತು. ಸಭೆಯಲ್ಲಿ ಸಂಯೋಜಕ ಬಲರಾಂ,ಲೆಕ್ಕ ಪರಿಶೋಧಕರಾದ ರಾಜೆಶ್.ಪಿ ಹಾಗೂ ಹಿರಿಯ ಸದಸ್ಯರು ಹಾಗೂ ಶಿಕ್ಷಣ ತಜ್ಞೆ ಶಾಂತ ಬಸವರಾಜು,ವೈದ್ಯರಾದ ಗೀರೀಶ್,ಪತ್ರಬರಹಗಾರ ಸದಾಶಿವಮೂರ್ತಿ,ಬಸವೇಶ್ ಮೂರ್ತಿ,ನಿವೃತ್ತ ಉಪ ತಹಶೀಲ್ದಾರ್ ಶಿವಮೂರ್ತಿಯವರನ್ನು ಅಭಿನಂಧಿಸಲಾಯಿತು. ಸಭೆಗೂ ಮುನ್ನ ಶ್ರೀ ವೀರಭದ್ರೇಶ್ವರಸ್ವಾಮಿಗೆ ಸಂಘದವತಿಯಿAದ ವಿಶೇಷ ಪೂಜೆ ಸಲ್ಲಿಸಲಾಯಿತು,ಅರ್ಚಕರಾದ ಮಲ್ಲಯ್ಯನವರು ದೇವರಿಗೆ ಪೂಜೆ ಸಲ್ಲಿಸಿ ಅಗಮಿಸಿದ ಜನರಿಗೆ ಮಹಾಮಂಗಳಾರತಿ ನೀಡಿ ಪ್ರಸಾದ ನೀಡಿದರು. ಸಭೆಯಲ್ಲಿ ಅಢಳಿತ ಮಂಡಳಿಯ ನಿರ್ದೇಶಕರಾದ ಎಸ್ ನಾಗಭೂಷಣಾರಾದ್ಯ,ಎನ್.ಮಂಟ್ಯೆಸ್ವಾಮಿ,ಕವಿತ.ಎಸ್,ಮಾನಸ.ಪಿ,ಗAಗಾಧರ್,ವ್ಯವಸ್ಥಾಪಕಿ ರಮ್ಯ,ಸೇವಾ ಪ್ರತಿನಿಧಿ ಕುಸುಮ,ಸಿಇಓ ಪೂರ್ಣಿಮಾ, ಪಿಗ್ಮಿ ಸಂಗ್ರಾಹಕ ಸುಬ್ರಮಣ್ಯ ಎಂ.ಅರ್ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.
    1
    ಮಳವಳ್ಳಿಯಲ್ಲಿ ಮಾಮರ ಸೌಹಾರ್ದ ಸಹಕಾರ ಸಂಘದ ಪ್ರಥಮ ವರ್ಷದ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಮೈಸೂರು ಕೊಡಗು ಜಿಲ್ಲಾ ಸಹಕಾರ ಒಕ್ಕೂಟಗಳ ಸಂಯೋಜಕರಾದ ಬಲರಾಮ್ ಚಾಲನೆ
ಮಳವಳ್ಳಿ;ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅರ್ಥಿಕ ಸೌಲಭ್ಯಗಳನ್ನು ನೀಡುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ--ಸಂಯೋಜಕ ಬಲರಾಂ ಹೇಳಿಕೆ
ಮಳವಳ್ಳಿ:ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅರ್ಥಿಕ ಸೌಲಭ್ಯಗಳನ್ನು ನೀಡುವಲ್ಲಿ ಸಹಕಾರಿ ಸಂಘಗಳ ಪಾತ್ರ ಅಪಾರವಾಗಿದೆ ಎಂದು ಮೈಸೂರು ಕೊಡಗು ಸೌಹರ್ಧ ಸಹಕಾರಿ ಒಕ್ಕೂಟದ ವಿಭಾಗದ ಸಂಯೋಜಕ ಎನ್.ಬಲರಾಂ ಹೇಳಿದರು.
ಪಟ್ಟಣದ ಶ್ರೀವೀರಭದ್ರೇಶ್ವರ ದೇವಸ್ಥಾನದ ಅವರಣದಲ್ಲಿ ಮಾಮರ ಸೌಹರ್ಧ ಸಹಕಾರಿ ಸಂಘ ಅಯೋಜಿಸಿದ್ದ ಪ್ರಥಮ ವರ್ಷದ ಸರ್ವ ಸದಸ್ಯರ ಸಭೆಗೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸಹಕಾರಿ ಸಂಘಗಳ ಮೂಲ ಉದ್ದೇಶವೇ ಸದಸ್ಯರಿಗೆ  ಮೂಲ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿದೆ ಎಂದರು.
ಮಾಮರ ಸೌಹರ್ದ ಸಹಕಾರ ಸಂಘ ಅರಂಭದ ವರ್ಷದಲ್ಲೆ ಉತ್ತಮ ಪ್ರಗತಿಯತ್ತ ಸಾಗಿದೆ,೧ ಕೋಟಿ ವಹಿವಾಟು ನಡೆಸಿರುವುದು,೫೦ ಲಕ್ಷಕ್ಕೂ ಮೂಲ ಬಂಡವಾಳ ಹೊಂದಿರುವುದು ಸೇರಿದಂತೆ ಸಂಘದ ಪಾರದರ್ಶಕ ಅರ್ಥಿಕ ವರದಿ ಭವಿಷ್ಯದಲ್ಲಿ ಉನ್ನತ ಸ್ಥಾನದ ಪಡೆಯಲಿದೆ ಎಂದ ಅವರು ಅಭಿವೃದ್ದಿ ಪಥದತ್ತ ಸಾಗುತ್ತಿರುವ ಸಂಘಕ್ಕೆ ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕು,ಸಂಘದ ಸೌಲಭ್ಯಗಳನ್ನು ಪಡೆಯುವುದಲ್ಲದೇ ಅಕ್ಕಪಕ್ಕದ ಜನರಿಗೂ ಸೌಲಭ್ಯ ಕೊಡಿಸುವತ್ತ ಮುಂದಾಗುವAತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಲೆಕಪರಿಶೋಧಕರಾದ ರಾಜೇಶ್ ಸಂಘದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಕವಿತಾ ಶ್ರೀಕಂಠಸ್ವಾಮಿ ಹಾಗೂ ಕು.ಕುಸುಮ ಸಂಘದ ವಾರ್ಷಿಕ ಲೆಕ್ಕ ಪರಿಶೋಧನ ವರದಿಯನ್ನು ಸಭೆಯಲ್ಲಿ ಮಂಡಿಸಿದರು.ಸAಘದ ಸೌಲಭ್ಯಗಳ ಬಗ್ಗೆ ಸಂಘದ ಅಪಾಧ್ಯಕ್ಷರಾದ ಗುರುಮೂರ್ತಿ ಮಾಹಿತಿ ನೀಡಿದರು.ಸಂಘದ ಸೇವೆಗಳ ಕುರಿತು ನಿರ್ದೇಶಕ ಶಿವಕುಮಾರ್ ಮಾತನಾಡಿದರು.ಮುಖ್ಯ ಕಾರ್ಯನಿರ್ವಹಣಾಧಿಕಶಾರಿ ಪೂರ್ಣಿಮ ಸಂಘ ಬೆಳೆದು ಬಂದ ಹಾದಿಯ ಕುರಿತು ವರದಿ ಮಂಡಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಶಿವಕುಮಾರ್ ಸಂಘದ ಅರಂಭ ಹಾಗೂ ಮುಂಗಡ ವರ್ಷದ ಯೋಜನೆಗಳು ಬಗ್ಗೆ ಸಭೆಯಲ್ಲಿ ಮಂಡಿಸಿದರು.
ಬಾಕ್ಸ್ ಸುದ್ದಿ: ಹೋಸ ಯೋಜನೆಗಳ ಅನುಷ್ಠಾನ್ಕಕೆ ಅನುಮೋಧನೆ: ಸಹಕಾರ ಸಂಘದಿAದ ಸೂಪರ್ ಮಾರ್ಕೆಟ್ ಅರಂಭ,ಹಲಗೂರಿನಲ್ಲಿ ಹೊಸ ಉಪ ಶಾಖೆ ತೆರಯುವುದು,ಬಂಕ್ ಉದ್ಯಮ ಸೇರಿದಂತೆ ಸಹಕಾರ ಸಂಘದ ಪ್ರಗತಿಗೆ ಕೈಗೊಳ್ಳಬೇಕಾದ ಹೊಸ ಯೋಜನೆಗಳ ಅನುಷ್ಠಾನ ಹಾಗೂ ಲೆಕ್ಕ ಪರಿಶೋಧಕರ ನಿಯೋಜನೆ.ಹೊಸ ಕಛೇರಿ ತೆರೆಯುವುದು,ಸಾಮಾನ್ಯ ಸೇವಾ ಕೇಂದ್ರದ ಸೇವೆಗಳನ್ನು ಸದಸ್ಯರ ಮನೆಗೆ ನೀಡುವುದು ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಸಭೆಯಲ್ಲಿ ವಿಷಯ ಮಂಡಿಸಿ ಅನುಮೋಧನೆ ಪಡೆಯಲಾಯಿತು.
ಇದೇ ಸಂದರ್ಭದಲ್ಲಿ ಸಂಘಕ್ಕೆ ನೂತನ ವೃತ್ತಿ ಪರ ನಿರ್ದೇಶಕರಾಗಿ ಅಯ್ಕಯಾಗಿದ್ದ ಬೆಳಕವಾಡಿ ಚೇತನ್ ಹಾಗೂ ರೇಷ್ಮೆ ಕೃಷಿಕ ಮೂಗನಕೊಪ್ಪಲು ತ್ಯಾಗರಾಜುರವರನ್ನು ಅಭಿನಂಧಿಸಿ ಆಢಳಿತ ಮಂಡಳಿಗೆ ಬರಮಾಡಿಕೊಳ್ಳಲಾಯಿತು.
ಸಭೆಯಲ್ಲಿ ಸಂಯೋಜಕ ಬಲರಾಂ,ಲೆಕ್ಕ ಪರಿಶೋಧಕರಾದ ರಾಜೆಶ್.ಪಿ ಹಾಗೂ ಹಿರಿಯ ಸದಸ್ಯರು ಹಾಗೂ ಶಿಕ್ಷಣ ತಜ್ಞೆ  ಶಾಂತ ಬಸವರಾಜು,ವೈದ್ಯರಾದ ಗೀರೀಶ್,ಪತ್ರಬರಹಗಾರ ಸದಾಶಿವಮೂರ್ತಿ,ಬಸವೇಶ್ ಮೂರ್ತಿ,ನಿವೃತ್ತ ಉಪ ತಹಶೀಲ್ದಾರ್ ಶಿವಮೂರ್ತಿಯವರನ್ನು ಅಭಿನಂಧಿಸಲಾಯಿತು.
ಸಭೆಗೂ ಮುನ್ನ ಶ್ರೀ ವೀರಭದ್ರೇಶ್ವರಸ್ವಾಮಿಗೆ ಸಂಘದವತಿಯಿAದ ವಿಶೇಷ ಪೂಜೆ ಸಲ್ಲಿಸಲಾಯಿತು,ಅರ್ಚಕರಾದ ಮಲ್ಲಯ್ಯನವರು ದೇವರಿಗೆ ಪೂಜೆ ಸಲ್ಲಿಸಿ ಅಗಮಿಸಿದ ಜನರಿಗೆ ಮಹಾಮಂಗಳಾರತಿ ನೀಡಿ ಪ್ರಸಾದ ನೀಡಿದರು.
ಸಭೆಯಲ್ಲಿ ಅಢಳಿತ ಮಂಡಳಿಯ ನಿರ್ದೇಶಕರಾದ ಎಸ್ ನಾಗಭೂಷಣಾರಾದ್ಯ,ಎನ್.ಮಂಟ್ಯೆಸ್ವಾಮಿ,ಕವಿತ.ಎಸ್,ಮಾನಸ.ಪಿ,ಗAಗಾಧರ್,ವ್ಯವಸ್ಥಾಪಕಿ ರಮ್ಯ,ಸೇವಾ ಪ್ರತಿನಿಧಿ ಕುಸುಮ,ಸಿಇಓ ಪೂರ್ಣಿಮಾ, ಪಿಗ್ಮಿ ಸಂಗ್ರಾಹಕ ಸುಬ್ರಮಣ್ಯ ಎಂ.ಅರ್ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    20 hrs ago
  • ರಾಕಿಂಗ್ ಸ್ಟಾರ್ ಅಭಿನಯದ ಟಾಕ್ಸಿಕ್ ರಿಲೀಸ್...ಅಭಿಮಾನಿಗಳು ಫುಲ್ ಖುಷ್...ಚಿತ್ರಮಂದಿರಗಳು ಹೌಸ್ ಫುಲ್ ವಿಶ್ವದಾದ್ಯಂತ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಿದೆ. ಮೈಸೂರಿನ ಹಲವು ಚಿತ್ರಮಂದಿರಗಳಲ್ಲಿ ಟಾಕ್ಸಿಕ್ ಮೊದಲ ಶೋ ಪ್ರದರ್ಶನವಾಗಲಿದೆ. 6 ಗಂಟೆಗೆ ಮೊದಲ ಶೋ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಡಿ.ಆರ್.ಸಿ ಐನಾಕ್ಸ್ ಸೇರಿ ಹಲವು ಮಲ್ಟಿ ಪ್ಲೆಕ್ಸ್ ನಲ್ಲಿ ಚಿತ್ರ ಬಿಡುಗಡೆಯಾಗಿದೆ. ಸಿನಿಮಾ ಥಿಯೇಟರ್ ನತ್ತ ಬರುತ್ತಿರುವ ಅಭಿಮಾನಿಗಳ ದಂಡು ಹರಿದುಬಂದಿದೆ. ಬೆಳ್ಳಿತೆರೆಮೇಲೆ ಯಶ್ ಕಾಣುತ್ತಿದ್ದಂತೆಯೇ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಮೊದಲ ಶೋಗೆ ಭರ್ಜರಿ ಸ್ವಾಗತ ದೊರೆತಿದೆ.
    1
    ರಾಕಿಂಗ್ ಸ್ಟಾರ್ ಅಭಿನಯದ ಟಾಕ್ಸಿಕ್ ರಿಲೀಸ್...ಅಭಿಮಾನಿಗಳು ಫುಲ್ ಖುಷ್...ಚಿತ್ರಮಂದಿರಗಳು ಹೌಸ್ ಫುಲ್
ವಿಶ್ವದಾದ್ಯಂತ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಿದೆ. ಮೈಸೂರಿನ ಹಲವು ಚಿತ್ರಮಂದಿರಗಳಲ್ಲಿ  ಟಾಕ್ಸಿಕ್ ಮೊದಲ ಶೋ ಪ್ರದರ್ಶನವಾಗಲಿದೆ. 6 ಗಂಟೆಗೆ ಮೊದಲ ಶೋ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ.
ಡಿ.ಆರ್.ಸಿ ಐನಾಕ್ಸ್ ಸೇರಿ ಹಲವು ಮಲ್ಟಿ ಪ್ಲೆಕ್ಸ್ ನಲ್ಲಿ ಚಿತ್ರ ಬಿಡುಗಡೆಯಾಗಿದೆ.
ಸಿನಿಮಾ  ಥಿಯೇಟರ್ ನತ್ತ ಬರುತ್ತಿರುವ ಅಭಿಮಾನಿಗಳ ದಂಡು ಹರಿದುಬಂದಿದೆ. ಬೆಳ್ಳಿತೆರೆಮೇಲೆ ಯಶ್ ಕಾಣುತ್ತಿದ್ದಂತೆಯೇ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಮೊದಲ ಶೋಗೆ ಭರ್ಜರಿ ಸ್ವಾಗತ ದೊರೆತಿದೆ.
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    5 hrs ago
  • ಕರ್ನಾಟಕದ ಪಾಲಿಗೆ ಕಾವೇರಿ ನೀರು ನಿರ್ವಹಣಾ ಸಮಿತಿ ಸತ್ತುಹೋಗಿದೆ ಎಂದು ಎಳ್ಳು, ನೀರು ಬಿಟ್ಟು ರಸ್ತೆತಡೆ ನಡೆಸಿ ಅಕ್ರೋಶ ಕಾವೇರಿ ನೀರು ನಿರ್ವಹಣಾ ಸಮಿತಿ ವಿರುದ್ದ ಪ್ರತಿಭಟನೆ ವರದಿ: ಹೊಮ್ಮನಂಜುಂಡನಾಯಕ ಕರ್ನಾಟಕದ ಪಾಲಿಗೆ ಕಾವೇರಿ ನೀರು ನಿರ್ವಹಣಾ ಸಮಿತಿ ಸತ್ತುಹೋಗಿದೆ ಎಂದು ಎಳ್ಳು, ನೀರು ಬಿಟ್ಟು ಅಕ್ರೋಶ ರಾಷ್ಟ್ರೀಯ ಜಲನೀತಿ ಜಾರಿಗೆ ಶ್ರೀನಿವಾಸಗೌಡ ಆಗ್ರಹ ಚಾಮರಾಜನಗರ: ಕಾವೇರಿ ನೀರು ನಿರ್ವಹಣಾ ಸಮಿತಿಯು ಕರ್ನಾಟಕದ ಪಾಲಿಗೆ ಸತ್ತು ಹೋಗಿದೆ ಎಂದು ಆರೋಪಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಎಳ್ಳು, ನೀರು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ನಗರದ ಭುವನೇಶ್ವರಿ ವೃತ್ತದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ್ದ ಪ್ರತಿಭಟನಾನಿರತರು ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಕಾವೇರಿ ನೀರು ನಿರ್ವಹಣಾ ಸಮಿತಿಯು ಕರ್ನಾಟಕದ ಪಾಲಿಗೆ ಸತ್ತು ಹೋಗಿದೆ ಎಂದು  ಎಳ್ಳು, ನೀರು ಬಿಟ್ಟು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕದ ಪಾಲಿಗೆ ಕಾವೇರಿ ನೀರು ನಿರ್ವಹಣಾ ಮಂಡಳಿ  ಸತ್ತು ಹೋಗಿದೆ ಎಂದು  ಎಳ್ಳು, ನೀರು ಬಿಟ್ಟು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ. ನಿರ್ವಹಣಾ ಸಮಿತಿಯ ಒಬ್ಬ ಸದಸ್ಯರು ಕರ್ನಾಟಕಕ್ಕೆ ಭೇಟಿ ನೀಡಿ ಇಲ್ಲಿನ ಜಲಾಶಯಗಳ ಸ್ಥಿತಿಗತಿಗಳನ್ನು ಪರಿಶೀಲಿಸಿಲ್ಲ. ಅಧ್ಯಯನ ಮಾಡಿಲ್ಲ. ಕರ್ನಾಟಕದಲ್ಲಿ ಮಳೆ ಆಗಿದೆಯೋ, ಇಲ್ಲವೋ ಪರಿಶೀಲನೆ ಮಾಡಿಲ್ಲ ಅದನ್ನು ಬಿಟ್ಟು ದೆಹಲಿಯಲ್ಲಿ ಕುಳಿತು ನೀರು ಬಿಡಿ, ನೀರು ಬಿಡಿ ಎಂದರೆ ಎಲ್ಲಿಂದ ನೀರು ಬಿಡುವುದು ಎಂದು ಕಿಡಿಕಾರಿದರು. ಕರ್ನಾಟಕದ ಜಲಾಶಯಗಳು ಬತ್ತಿ ಹೋಗುತ್ತಿವೆ. ರಾಜ್ಯದಲ್ಲಿ ಜನತೆ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ.ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿ ರಾಜ್ಯದ ಜನತೆ ಇದ್ದಾರೆ. ಎರಡು ರಾಜ್ಯಗಳ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಿದೆ ಕಾವೇರಿ ನೀರು ನಿರ್ವಹಣಾ ಸಮಿತಿ ತೀರ್ಪು ನೀಡುವುದು ಅತ್ಯಂತ ಖಂಡನೀಯ ವಾದದ್ದು,ತಕ್ಷಣವೇ ಕಾವೇರಿ ನೀರು ನಿರ್ವಹಣಾ ಮಂಡಳಿ ವಜಾ‌ಮಾಡಿ ರಾಷ್ಟ್ರೀಯ ಜಲನೀತಿಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ತಮಿಳುನಾಡಿನವರು ಕಾವೇರಿ ನೀರಿನ ವಿಚಾರದಲ್ಲಿ  ಪದೇಪದೇ ಖ್ಯಾತೆ ತೆಗೆಯುವುದು ಸರಿಯಲ್ಲ. ಇದು ಮುಂದುವರೆದರೆ  ಮುಂದಿನ ದಿನಗಳಲ್ಲಿ ಪುಣಜನೂರು ಗೇಟ್ ಬಂದ್ ಮಾಡಿ ತಮಿಳುನಾಡಿನ ವಾಹನ, ಉತ್ಪನ್ನ, ಸಿನಿಮಾ ಪ್ರದರ್ಶನ ತಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ  ಶಾ.ಮುರಳಿ, ನಿಜಧ್ವನಿಗೋವಿಂದರಾಜು, ಪಣ್ಯದಹುಂಡಿ ರಾಜು, ರಾಚಪ್ಪ, ಜಗದೀಶ್, ತಾಂಡವಮೂರ್ತಿ, ಆಟೋ ಲಿಂಗರಾಜು, ನಂಜುಂಡಸ್ವಾಮಿ,  ಮುತ್ತಿಗೆ ಗೋವಿಂದ ರಾಜು,  ಇತರರು ಭಾಗವಹಿಸಿದ್ದರು.
    3
    ಕರ್ನಾಟಕದ ಪಾಲಿಗೆ ಕಾವೇರಿ ನೀರು ನಿರ್ವಹಣಾ ಸಮಿತಿ ಸತ್ತುಹೋಗಿದೆ ಎಂದು ಎಳ್ಳು, ನೀರು ಬಿಟ್ಟು ರಸ್ತೆತಡೆ ನಡೆಸಿ ಅಕ್ರೋಶ
ಕಾವೇರಿ ನೀರು ನಿರ್ವಹಣಾ ಸಮಿತಿ ವಿರುದ್ದ ಪ್ರತಿಭಟನೆ
ವರದಿ: ಹೊಮ್ಮನಂಜುಂಡನಾಯಕ
ಕರ್ನಾಟಕದ ಪಾಲಿಗೆ ಕಾವೇರಿ ನೀರು ನಿರ್ವಹಣಾ ಸಮಿತಿ ಸತ್ತುಹೋಗಿದೆ ಎಂದು ಎಳ್ಳು, ನೀರು ಬಿಟ್ಟು ಅಕ್ರೋಶ
ರಾಷ್ಟ್ರೀಯ ಜಲನೀತಿ ಜಾರಿಗೆ ಶ್ರೀನಿವಾಸಗೌಡ ಆಗ್ರಹ
ಚಾಮರಾಜನಗರ: ಕಾವೇರಿ ನೀರು ನಿರ್ವಹಣಾ ಸಮಿತಿಯು ಕರ್ನಾಟಕದ ಪಾಲಿಗೆ ಸತ್ತು ಹೋಗಿದೆ ಎಂದು ಆರೋಪಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಎಳ್ಳು, ನೀರು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ನಗರದ ಭುವನೇಶ್ವರಿ ವೃತ್ತದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ್ದ ಪ್ರತಿಭಟನಾನಿರತರು ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಕಾವೇರಿ ನೀರು ನಿರ್ವಹಣಾ ಸಮಿತಿಯು ಕರ್ನಾಟಕದ ಪಾಲಿಗೆ ಸತ್ತು ಹೋಗಿದೆ ಎಂದು  ಎಳ್ಳು, ನೀರು ಬಿಟ್ಟು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕದ ಪಾಲಿಗೆ ಕಾವೇರಿ ನೀರು ನಿರ್ವಹಣಾ ಮಂಡಳಿ  ಸತ್ತು ಹೋಗಿದೆ ಎಂದು  ಎಳ್ಳು, ನೀರು ಬಿಟ್ಟು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ. ನಿರ್ವಹಣಾ ಸಮಿತಿಯ ಒಬ್ಬ ಸದಸ್ಯರು ಕರ್ನಾಟಕಕ್ಕೆ ಭೇಟಿ ನೀಡಿ ಇಲ್ಲಿನ ಜಲಾಶಯಗಳ ಸ್ಥಿತಿಗತಿಗಳನ್ನು ಪರಿಶೀಲಿಸಿಲ್ಲ. ಅಧ್ಯಯನ ಮಾಡಿಲ್ಲ. ಕರ್ನಾಟಕದಲ್ಲಿ ಮಳೆ ಆಗಿದೆಯೋ, ಇಲ್ಲವೋ ಪರಿಶೀಲನೆ ಮಾಡಿಲ್ಲ ಅದನ್ನು ಬಿಟ್ಟು ದೆಹಲಿಯಲ್ಲಿ ಕುಳಿತು ನೀರು ಬಿಡಿ, ನೀರು ಬಿಡಿ ಎಂದರೆ ಎಲ್ಲಿಂದ ನೀರು ಬಿಡುವುದು ಎಂದು ಕಿಡಿಕಾರಿದರು.
ಕರ್ನಾಟಕದ ಜಲಾಶಯಗಳು ಬತ್ತಿ ಹೋಗುತ್ತಿವೆ. ರಾಜ್ಯದಲ್ಲಿ ಜನತೆ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ.ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿ ರಾಜ್ಯದ ಜನತೆ ಇದ್ದಾರೆ. ಎರಡು ರಾಜ್ಯಗಳ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಿದೆ ಕಾವೇರಿ ನೀರು ನಿರ್ವಹಣಾ ಸಮಿತಿ ತೀರ್ಪು ನೀಡುವುದು ಅತ್ಯಂತ ಖಂಡನೀಯ ವಾದದ್ದು,ತಕ್ಷಣವೇ ಕಾವೇರಿ ನೀರು ನಿರ್ವಹಣಾ ಮಂಡಳಿ ವಜಾ‌ಮಾಡಿ ರಾಷ್ಟ್ರೀಯ ಜಲನೀತಿಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ತಮಿಳುನಾಡಿನವರು ಕಾವೇರಿ ನೀರಿನ ವಿಚಾರದಲ್ಲಿ  ಪದೇಪದೇ ಖ್ಯಾತೆ ತೆಗೆಯುವುದು ಸರಿಯಲ್ಲ. ಇದು ಮುಂದುವರೆದರೆ  ಮುಂದಿನ ದಿನಗಳಲ್ಲಿ ಪುಣಜನೂರು ಗೇಟ್ ಬಂದ್ ಮಾಡಿ ತಮಿಳುನಾಡಿನ ವಾಹನ, ಉತ್ಪನ್ನ, ಸಿನಿಮಾ ಪ್ರದರ್ಶನ ತಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ  ಶಾ.ಮುರಳಿ,
ನಿಜಧ್ವನಿಗೋವಿಂದರಾಜು, ಪಣ್ಯದಹುಂಡಿ ರಾಜು, ರಾಚಪ್ಪ, ಜಗದೀಶ್, ತಾಂಡವಮೂರ್ತಿ, ಆಟೋ ಲಿಂಗರಾಜು, ನಂಜುಂಡಸ್ವಾಮಿ,  ಮುತ್ತಿಗೆ ಗೋವಿಂದ ರಾಜು,  ಇತರರು ಭಾಗವಹಿಸಿದ್ದರು.
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    2 hrs ago
  • ಮರಿಯಮಂಗಲ ಶೂಟೌಟ್ ಪ್ರಕರಣ ಸಿಐಡಿಗೆ : ಹನೂರು: ತಾಲೂಕಿನ ಕಾವೇರಿ ವನ್ಯಜೀವಿಧಾಮದ ಮರಿಯಮಂಗಲ ಬೀಟ್‌ನಲ್ಲಿ ಆಗಸ್ಟ್ 15ರಂದು ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಹನೂರು, ರಾಮಾಪುರ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ನಾಲ್ಕು ಎಫ್‌ಐಆರ್‌ಗಳ ತನಿಖೆಯನ್ನೂ ಸಿಐಡಿಗೆ ವರ್ಗಾಯಿಸಲಾಗಿದೆ. ಸಿಐಡಿ ವಿಶೇಷ ಘಟಕವು ಗುಂಡಿನ ದಾಳಿಗೆ ಕಾರಣ, ಘಟನೆಯ ಸಂದರ್ಭ ಹಾಗೂ ಸಂಪೂರ್ಣ ಹಿನ್ನೆಲೆಯ ಕುರಿತು ತನಿಖೆ ನಡೆಸಲಿದೆ. ಘಟನೆಯಲ್ಲಿ ಹನೂರು ತಾಲೂಕಿನ ತೋಮಿಯರ್ಪಾಳ್ಯದ ಕುಮಾರ್, ಆಂಥೋಣಿಸ್ವಾಮಿ ಹಾಗೂ ಪೀಟರ್ ಮೃತಪಟ್ಟಿದ್ದರು. ಅರಣ್ಯ ಪ್ರದೇಶದಲ್ಲಿ ಬೇಟೆಗೆ ತೆರಳಿದ್ದ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಮೃತರ ನಡುವೆ ಸಂಘರ್ಷ ನಡೆದಿದ್ದು, ಈ ವೇಳೆ ಗುಂಡಿನ ದಾಳಿ ನಡೆದಿತ್ತು ಎನ್ನಲಾಗಿದೆ. ಪ್ರಕರಣದ ಕುರಿತು ಹಲವು ಅನುಮಾನಗಳು ಹಾಗೂ ರಾಜಕೀಯ ಚರ್ಚೆಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಸಿಐಡಿ ತನಿಖೆ ನಿರ್ಧಾರ ಮಹತ್ವ ಪಡೆದಿದೆ. ಮರಿಯಮಂಗಲ ಶೂಟೌಟ್ ಪ್ರಕರಣ ಸಿಐಡಿಗೆ : ಹನೂರು: ತಾಲೂಕಿನ ಕಾವೇರಿ ವನ್ಯಜೀವಿಧಾಮದ ಮರಿಯಮಂಗಲ ಬೀಟ್‌ನಲ್ಲಿ ಆಗಸ್ಟ್ 15ರಂದು ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಹನೂರು, ರಾಮಾಪುರ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ನಾಲ್ಕು ಎಫ್‌ಐಆರ್‌ಗಳ ತನಿಖೆಯನ್ನೂ ಸಿಐಡಿಗೆ ವರ್ಗಾಯಿಸಲಾಗಿದೆ. ಸಿಐಡಿ ವಿಶೇಷ ಘಟಕವು ಗುಂಡಿನ ದಾಳಿಗೆ ಕಾರಣ, ಘಟನೆಯ ಸಂದರ್ಭ ಹಾಗೂ ಸಂಪೂರ್ಣ ಹಿನ್ನೆಲೆಯ ಕುರಿತು ತನಿಖೆ ನಡೆಸಲಿದೆ. ಘಟನೆಯಲ್ಲಿ ಹನೂರು ತಾಲೂಕಿನ ತೋಮಿಯರ್ಪಾಳ್ಯದ ಕುಮಾರ್, ಆಂಥೋಣಿಸ್ವಾಮಿ ಹಾಗೂ ಪೀಟರ್ ಮೃತಪಟ್ಟಿದ್ದರು. ಅರಣ್ಯ ಪ್ರದೇಶದಲ್ಲಿ ಬೇಟೆಗೆ ತೆರಳಿದ್ದ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಮೃತರ ನಡುವೆ ಸಂಘರ್ಷ ನಡೆದಿದ್ದು, ಈ ವೇಳೆ ಗುಂಡಿನ ದಾಳಿ ನಡೆದಿತ್ತು ಎನ್ನಲಾಗಿದೆ. ಪ್ರಕರಣದ ಕುರಿತು ಹಲವು ಅನುಮಾನಗಳು ಹಾಗೂ ರಾಜಕೀಯ ಚರ್ಚೆಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಸಿಐಡಿ ತನಿಖೆ ನಿರ್ಧಾರ ಮಹತ್ವ ಪಡೆದಿದೆ.
    1
    ಮರಿಯಮಂಗಲ ಶೂಟೌಟ್ ಪ್ರಕರಣ ಸಿಐಡಿಗೆ

: ಹನೂರು: ತಾಲೂಕಿನ ಕಾವೇರಿ ವನ್ಯಜೀವಿಧಾಮದ ಮರಿಯಮಂಗಲ ಬೀಟ್‌ನಲ್ಲಿ ಆಗಸ್ಟ್ 15ರಂದು ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.

ಹನೂರು, ರಾಮಾಪುರ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ನಾಲ್ಕು ಎಫ್‌ಐಆರ್‌ಗಳ ತನಿಖೆಯನ್ನೂ ಸಿಐಡಿಗೆ ವರ್ಗಾಯಿಸಲಾಗಿದೆ. ಸಿಐಡಿ ವಿಶೇಷ ಘಟಕವು ಗುಂಡಿನ ದಾಳಿಗೆ ಕಾರಣ, ಘಟನೆಯ ಸಂದರ್ಭ ಹಾಗೂ ಸಂಪೂರ್ಣ ಹಿನ್ನೆಲೆಯ ಕುರಿತು ತನಿಖೆ ನಡೆಸಲಿದೆ.

ಘಟನೆಯಲ್ಲಿ ಹನೂರು ತಾಲೂಕಿನ ತೋಮಿಯರ್ಪಾಳ್ಯದ ಕುಮಾರ್, ಆಂಥೋಣಿಸ್ವಾಮಿ ಹಾಗೂ ಪೀಟರ್ ಮೃತಪಟ್ಟಿದ್ದರು. ಅರಣ್ಯ ಪ್ರದೇಶದಲ್ಲಿ ಬೇಟೆಗೆ ತೆರಳಿದ್ದ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಮೃತರ ನಡುವೆ ಸಂಘರ್ಷ ನಡೆದಿದ್ದು, ಈ ವೇಳೆ ಗುಂಡಿನ ದಾಳಿ ನಡೆದಿತ್ತು ಎನ್ನಲಾಗಿದೆ.

ಪ್ರಕರಣದ ಕುರಿತು ಹಲವು ಅನುಮಾನಗಳು ಹಾಗೂ ರಾಜಕೀಯ ಚರ್ಚೆಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಸಿಐಡಿ ತನಿಖೆ ನಿರ್ಧಾರ ಮಹತ್ವ ಪಡೆದಿದೆ.
ಮರಿಯಮಂಗಲ ಶೂಟೌಟ್ ಪ್ರಕರಣ ಸಿಐಡಿಗೆ
: ಹನೂರು: ತಾಲೂಕಿನ ಕಾವೇರಿ ವನ್ಯಜೀವಿಧಾಮದ ಮರಿಯಮಂಗಲ ಬೀಟ್‌ನಲ್ಲಿ ಆಗಸ್ಟ್ 15ರಂದು ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.
ಹನೂರು, ರಾಮಾಪುರ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ನಾಲ್ಕು ಎಫ್‌ಐಆರ್‌ಗಳ ತನಿಖೆಯನ್ನೂ ಸಿಐಡಿಗೆ ವರ್ಗಾಯಿಸಲಾಗಿದೆ. ಸಿಐಡಿ ವಿಶೇಷ ಘಟಕವು ಗುಂಡಿನ ದಾಳಿಗೆ ಕಾರಣ, ಘಟನೆಯ ಸಂದರ್ಭ ಹಾಗೂ ಸಂಪೂರ್ಣ ಹಿನ್ನೆಲೆಯ ಕುರಿತು ತನಿಖೆ ನಡೆಸಲಿದೆ.
ಘಟನೆಯಲ್ಲಿ ಹನೂರು ತಾಲೂಕಿನ ತೋಮಿಯರ್ಪಾಳ್ಯದ ಕುಮಾರ್, ಆಂಥೋಣಿಸ್ವಾಮಿ ಹಾಗೂ ಪೀಟರ್ ಮೃತಪಟ್ಟಿದ್ದರು. ಅರಣ್ಯ ಪ್ರದೇಶದಲ್ಲಿ ಬೇಟೆಗೆ ತೆರಳಿದ್ದ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಮೃತರ ನಡುವೆ ಸಂಘರ್ಷ ನಡೆದಿದ್ದು, ಈ ವೇಳೆ ಗುಂಡಿನ ದಾಳಿ ನಡೆದಿತ್ತು ಎನ್ನಲಾಗಿದೆ.
ಪ್ರಕರಣದ ಕುರಿತು ಹಲವು ಅನುಮಾನಗಳು ಹಾಗೂ ರಾಜಕೀಯ ಚರ್ಚೆಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಸಿಐಡಿ ತನಿಖೆ ನಿರ್ಧಾರ ಮಹತ್ವ ಪಡೆದಿದೆ.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    22 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.