ನಮ್ಮ ಸಮಯಕ್ಕೂ ಒಂದು ಬೆಲೆ ಇದೆ. ನಮ್ಮ ಸಮಯ ಎಷ್ಟು ಅಮೂಲ್ಯವಾದದ್ದು ಎಂದು ತಿಳಿದಿದ್ದೀಯಾ ವಕೀಲರ ಈ ಒಂದು ಉದಾಹರಣೆ ಅತಿ ಮುಖ್ಯ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಆರಂಭಕ್ಕೂ ಮುಂಚೆ ಬರುವ ಜಾಹೀರಾತುಗಳಿಂದ ಬೇಸತ್ತ ವೀಕ್ಷಕರಿಗೆ ಇಲ್ಲೊಂದು ಸ್ಪೂರ್ತಿದಾಯಕ ಹಾಗೂ ಮಾದರಿ ಘಟನೆ ನಡೆದಿದೆ. ಸಿನಿಮಾಗಿಂತ ಮುಂಚೆ ಬರುವ ಅನಗತ್ಯ ಜಾಹೀರಾತುಗಳ ವಿರುದ್ಧ ಕಾನೂನು ಸಮರ ಸಾರಿದ ಬೆಂಗಳೂರಿನ ವಕೀಲರೊಬ್ಬರು ಮಲ್ಟಿಪ್ಲೆಕ್ಸ್ ದೈತ್ಯ PVR INOX ಸಂಸ್ಥೆಗೆ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರಿನ 31 ವರ್ಷದ ವಕೀಲರಾದ ಎಂ.ಆರ್. ಅಭಿಷೇಕ್, 2023ರ ಡಿಸೆಂಬರ್ 26ರಂದು ಮಧ್ಯಾಹ್ನದ 'ಸ್ಯಾಮ್ ಬಹದ್ದೂರ್' ಸಿನಿಮಾಗಾಗಿ ಮೂರು ಟಿಕೆಟ್‌ಗಳನ್ನು ಖರೀದಿಸಿದ್ದರು. ಸಮಯಕ್ಕೆ ಸರಿಯಾಗಿ ಥಿಯೇಟರ್‌ಗೆ ತೆರಳಿ ಪಾಪ್‌ಕಾರ್ನ್ ಹಿಡಿದು ತಮ್ಮ ಸೀಟಿನಲ್ಲಿ ಕುಳಿತರು. ಆದರೆ ನಿಗದಿತ ಸಮಯಕ್ಕೆ ಸಿನಿಮಾ ಆರಂಭವಾಗುವ ಬದಲು ಬ್ರೇಕ್ ಇಲ್ಲದೆ ಸೌಂದರ್ಯವರ್ಧಕಗಳು, ಸಾಬೂನುಗಳು ಮತ್ತು ಇತರೆ ಉತ್ಪನ್ನಗಳ 25 ನಿಮಿಷಗಳ ಕಾಲ ನಾನ್ ಸ್ಟಾಪ್ ಜಾಹೀರಾತುಗಳು ಪ್ರದರ್ಶಿಸಲ್ಪಟ್ಟವು. ಪ್ರತಿ ಬಾರಿಯೂ ಚಿತ್ರಮಂದಿರಗಳಲ್ಲಿ ಈ ರೀತಿ ಜಾಹೀರಾತುಗಳನ್ನು ಸಹಿಸಿಕೊಂಡು ಹೋಗುವುದು ಸಾಮಾನ್ಯ ಎಂಬಂತೆ ಎಲ್ಲರೂ ಮೌನವಾಗುತ್ತಾರೆ. ಆದರೆ ವಕೀಲರಾದ ಅಭಿಷೇಕ್ ಮಾತ್ರ ಇದನ್ನು ಪ್ರಶ್ನಿಸಿದರು. "ಟಿಕೆಟ್‌ನಲ್ಲಿ ನಮೂದಿಸಿದ ಸಮಯಕ್ಕೆ ಸಿನಿಮಾ ಆರಂಭಿಸಬೇಕು. ನನ್ನ ಅನುಮತಿಯಿಲ್ಲದೆ ನನ್ನ 25 ನಿಮಿಷಗಳನ್ನು ವ್ಯರ್ಥ ಮಾಡಲಾಗಿದೆ. ಈ ವಿಳಂಬದಿಂದಾಗಿ ನನ್ನ ಪ್ರಮುಖ ಕಚೇರಿ ಕರೆಗಳೂ ರದ್ದಾಗಿವೆ" ಎಂದು ಬೆಂಗಳೂರು ಜಿಲ್ಲಾ ಗ್ರಾಹಕರ ವೇದಿಕೆಯನ್ನು ಮೆಟ್ಟಿಲೇರಿದರು. ವಿಚಾರಣೆ ವೇಳೆ ಪ್ರತಿಕ್ರಿಯಿಸಿದ PVR INOX ಸಂಸ್ಥೆಯು, "ಕಾಯ್ದೆಯ ಪ್ರಕಾರ 10 ನಿಮಿಷಗಳ ಕಾಲ ಸಾರ್ವಜನಿಕ ಹಿತಾಸಕ್ತಿ ಜಾಹೀರಾತುಗಳನ್ನು ಪ್ರದರ್ಶಿಸಬೇಕಾಗುತ್ತದೆ, ಹಾಗಾಗಿ ಸ್ವಲ್ಪ ವಿಳಂಬವಾಯಿತು" ಎಂದು ವಾದಿಸಿತು. ಆದರೆ ಇದನ್ನು ತಳ್ಳಿಹಾಕಿದ ಗ್ರಾಹಕರ ಆಯೋಗ, "ಹೌದು, 10 ನಿಮಿಷಗಳ ಕಾಲ ಜನಪರ ಜಾಹೀರಾತುಗಳೆಂದರೆ ಅರ್ಥಮಾಡಿಕೊಳ್ಳಬಹುದು. ಆದರೆ ಉಳಿದ 15 ನಿಮಿಷಗಳ ಕಾಲ ವಾಣಿಜ್ಯ ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದು ಯಾವ ಸಾರ್ವಜನಿಕ ಹಿತಾಸಕ್ತಿ?" ಎಂದು ಪ್ರಶ್ನಿಸಿತು. ಅಂತಿಮವಾಗಿ ಅಭಿಷೇಕ್ ಪರವಾಗಿ ತೀರ್ಪು ನೀಡಿದ ಆಯೋಗವು PVR INOXಗೆ ಬಾಸುಮತಿ ಕಲಿಸಿತು. ನ್ಯಾಯಾಲಯದ ಆದೇಶದ ಮುಖ್ಯಾಂಶಗಳು: ಗ್ರಾಹಕನಿಗೆ ಆದ ಮಾನಸಿಕ ವೇದನೆಗೆ ಪರಿಹಾರವಾಗಿ - ರೂ. 20,000 ಕಾನೂನು ಹೋರಾಟದ ಖರ್ಚಿಗಾಗಿ - ರೂ. 8,000 ಇಂತಹ ತಪ್ಪು ಮರುಕಳಿಸದಂತೆ ಸರ್ಕಾರದ ಗ್ರಾಹಕ ಕಲ್ಯಾಣ 2 (Consumer Welfare Fund) - . 1,00,000 ៨៨ ಪಾವತಿಸುವಂತೆ PVR INOXಗೆ ಆದೇಶಿಸಲಾಯಿತು. "ಈ ಆಧುನಿಕ ಯುಗದಲ್ಲಿ ಸಮಯವೇ ಹಣ, ಪ್ರತಿಯೊಬ್ಬರ ಸಮಯವೂ ಅತ್ಯಮೂಲ್ಯವಾದದ್ದು. ವೀಕ್ಷಕರನ್ನು ಬಲವಂತವಾಗಿ 25-30 ನಿಮಿಷಗಳ ಕಾಲ ಖಾಲಿ ಕುಳಿತುಕೊಳ್ಳುವಂತೆ ಮಾಡಿ ಅನಗತ್ಯ ಜಾಹೀರಾತುಗಳನ್ನು ತೋರಿಸುವುದು ಸರಿಯಲ್ಲ" ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಕಟುವಾಗಿ ಎಚ್ಚರಿಸಿದೆ.ಸಾಮಾನ್ಯವಾಗಿ ನಾವೆಲ್ಲರೂ "ಜಾಹೀರಾತುಗಳು ಮುಗಿದ ಮೇಲೆಯೇ ಥಿಯೇಟರ್‌ಗೆ ಹೋಗೋಣ" ಎಂದು ಲೇಟಾಗಿ ತೆರಳುತ್ತೇವೆ. ಆದರೆ ಅಭಿಷೇಕ್ ಮಾತ್ರ "ನಮ್ಮ ಸಮಯಕ್ಕೂ ಬೆಲೆ ಇದೆ" ಎಂಬುದನ್ನು ಕೋರ್ಟ್ ಮೂಲಕ ಸಾಬೀತುಪಡಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

- ನಾರಗೊಂಡ ಶಿಕ್ಷಣ ಸಂಸ್ಥೆಯಲ್ಲಿ ಅದ್ದೂರಿ ಗಣೇಶೋತ್ಸವ ಮೂರನೇ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಪ್ರಯತ್ನದಲ್ಲಿದ್ದೇವೆ: ವಿವೇಕ ನಾರಗೊಂಡ1
- ಬನಹಟ್ಟಿ ಸತ್ಯಾಗ್ರಹ ಸ್ಥಳಕ್ಕೆ ಪೊಲೀಸರ ಭೇಟಿ - ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನ ಪ್ರಜಾಸೌಧ ಕುರಿತು ಬನಹಟ್ಟಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದವರ ಆರೋಗ್ಯದಲ್ಲಿ ಏರುಪೇರಾಗಿದ್ದು ವೈದ್ಯಕೀಯ ಶಿಪಾರಸ್ಸು ಮೇರೆಗೆ ಅವರನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು1
- ಅದ್ದೂರಿಯಾಗಿ ಜರುಗಿದ ಹಲ್ಯಾಳ ಶ್ರೀ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವ ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಹಲ್ಯಾಳ ಗ್ರಾಮದ ಆರಾಧ್ಯ ದೈವ ಶ್ರೀ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವವು ಅತ್ಯಂತ ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಅದ್ದೂರಿಯಾಗಿ ಜರುಗಿತು. ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಪ್ರವಚನ ಕಾರ್ಯಕ್ರಮ: ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ದೇಶ್ವರ ಸ್ವಾಮೀಜಿ ಅವರಿಂದ ಘತರಗಿ ಭಾಗ್ಯವತಿ ದೇವಿಯ ಜೀವನ ಚರಿತ್ರೆ ಕುರಿತು ಪ್ರವಚನ ಜರುಗಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರವಚನ ಆಲಿಸಿದರು. ಕುಂಭಮೇಳ: ಜಾತ್ರೆಯ ಪೂರ್ವಭಾವಿಯಾಗಿ ಕೃಷ್ಣಾ ನದಿಯಿಂದ ಹಲ್ಯಾಳ ಗ್ರಾಮದವರೆಗೆ ಮುತ್ತೈದೆಯರಿಂದ ವಿಜೃಂಭಣೆಯ ಕುಂಭಮೇಳ ನಡೆಯಿತು. ಮಹಿಳೆಯರು ಕುಂಭ ಹೊತ್ತು ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿಶೇಷ ಪೂಜೆ ಮತ್ತು ಮಹಾಭಿಷೇಕ: ಜಾತ್ರೆಯ ದಿನ ಮುಂಜಾನೆ ಶ್ರೀ ಶಿವರಾಯ ಮುತ್ಯಾ ದೇವಸ್ಥಾನದ ಪೂಜಾರಿ ಸೋಮಣ್ಣ ಪೂಜಾರಿ ಅವರ ನೇತೃತ್ವದಲ್ಲಿ ದೇವಸ್ಥಾನದ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಮಹಾಭಿಷೇಕ ನೆರವೇರಿಸಲಾಯಿತು. ಪಲ್ಲಕ್ಕಿ ಉತ್ಸವ: ಶ್ರೀ ಶಿವರಾಯ ಮುತ್ಯಾ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಡೊಳ್ಳಿನ ಮೇಳದ ತಂಡಗಳು ಜಾತ್ರೆಗೆ ವಿಶೇಷ ಮೆರುಗು ನೀಡಿದವು. ಭಕ್ತರು ಭಕ್ತಿಗೀತೆ ಹಾಗೂ ಘೋಷಣೆಗಳೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು. ವಿಶೇಷ ಆಚರಣೆಗಳು ಮತ್ತು ಪ್ರಸಾದ ವಿನಿಯೋಗ ಗ್ರಾಮದ ಹೃದಯಭಾಗದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಪೂಜಾರಿಗಳಿಂದ ಅಲಗ ಹಾಯುವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಈ ವೇಳೆ ದೇವರಲ್ಲಿ ಹರಕೆ ಹೊತ್ತ ಭಕ್ತರು ಶಿವರಾಯ ಮುತ್ಯಾ ಮೂರ್ತಿಗೆ ಭಂಡಾರ ಅರ್ಪಿಸಿ ತಮ್ಮ ಹರಕೆ ತೀರಿಸಿದರು. ನಂತರ ಆಗಮಿಸಿದ್ದ ಸಮಸ್ತ ಭಕ್ತರು ವಿಶೇಷ ಪ್ರಸಾದ ಸ್ವೀಕರಿಸಿ ಶ್ರೀ ಶಿವರಾಯ ಮುತ್ಯಾ ಆಶೀರ್ವಾದಕ್ಕೆ ಪಾತ್ರರಾದರು. ಗಣ್ಯರ ಉಪಸ್ಥಿತಿ ಈ ಜಾತ್ರಾ ಮಹೋತ್ಸವದಲ್ಲಿ ಗುಂಡು ಹಿರೇಕುರುಬರ, ಮುತ್ತಣ್ಣ ಸನದಿ, ಮುದುಕಣ್ಣ ಶೇಗುಣಸಿ, ಕಾಕಾಸಾಹೇಬ್ ಪಾಟೀಲ, ಚಂದ್ರಕಾಂತ ಕಾಗವಾಡ, ಸಿದ್ದಪ್ಪ ಲೋಕರ, ಕಾಂತೇಶ ಬಾಗಿ, ರಾಯಪ್ಪ ಬಾಗಿ, ಅಣ್ಣಪ್ಪ ಬಾಗಿ, ಗುಳ್ಳಪ್ಪ ನಾಯಿಕ, ಸಿದ್ದು ಮಗದುಮ, ಆಕಾಶ ಬಾಗಿ, ಪರಶುರಾಮ ಡಂಗಿ ಹಾಗೂ ಸಚಿನ್ ಮೆಂಡಿಗೇರಿ ಸೇರಿದಂತೆ ಗ್ರಾಮದ ಗಣ್ಯರು, ಹಲ್ಯಾಳ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಿದರು.4
- 2ಜನರ ನಡುವಿನ ಕ್ಷುಲ್ಲಕ ಕಾರಣಕ್ಕೆ ದೊಡ್ಡ ಗಲಾಟೆಗೆ ಕಾರಣ ಎನ್ನುವ ಮಾಹಿತಿ | ಮೂಡಲಗಿ ಸಿಪಿಐ ಶ್ರೀಶೈಲ್ ಬ್ಯಾಕೋಡ್ ರವರು ಸ್ಥಳಕ್ಕೆ ಬೇಟಿ ಮಾಡಿ ಜನರನ್ನು ಲಾಠಿ ಬೀಸಿ ಚದುರಿಸಿ ಕಳಿಸಿದ ಬಗ್ಗೆ ತಿಳಿದು ಬಂದಿರುತ್ತದೆ. ಅದಕ್ಕೆ ಜನರು ನಮಗೇಕೆ ಹಾಗೆ ಲಾಠಿ ಬೀಸುತ್ತಿರಿ ಅಂತಾ ಕೇಳಿ ಹೋಗಿರುತ್ತಾರೆ, ಎನ್ನುವ ಮಾಹಿತಿ ಇದೆ | ಈ ಕುರಿತು ಪೊಲೀಸ್ ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ತಿಳಿಯಬೇಕಿದೆ | ಈ ಘಟನೆಯು ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದ ಘಟನೆ | suddi point 📢 2ಜನರ ನಡುವಿನ ಕ್ಷುಲ್ಲಕ ಕಾರಣಕ್ಕೆ ದೊಡ್ಡ ಗಲಾಟೆಗೆ ಕಾರಣ ಎನ್ನುವ ಮಾಹಿತಿ | ಮೂಡಲಗಿ ಸಿಪಿಐ ಶ್ರೀಶೈಲ್ ಬ್ಯಾಕೋಡ್ ರವರು ಸ್ಥಳಕ್ಕೆ ಬೇಟಿ ಮಾಡಿ ಜನರನ್ನು ಲಾಠಿ ಬೀಸಿ ಚದುರಿಸಿ ಕಳಿಸಿದ ಬಗ್ಗೆ ತಿಳಿದು ಬಂದಿರುತ್ತದೆ. ಅದಕ್ಕೆ ಜನರು ನಮಗೇಕೆ ಹಾಗೆ ಲಾಠಿ ಬೀಸುತ್ತಿರಿ ಅಂತಾ ಕೇಳಿ ಹೋಗಿರುತ್ತಾರೆ, ಎನ್ನುವ ಮಾಹಿತಿ ಇದೆ | ಈ ಕುರಿತು ಪೊಲೀಸ್ ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ತಿಳಿಯಬೇಕಿದೆ | ಈ ಘಟನೆಯು ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದ ಘಟನೆ | suddi point 📢 #suddipoint #crimenews #crime SP Belagavi District1
- ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ಸಚಿವರಾದ ಸತೀಶ್ ಜಾರಕಿಹೊಳಿ ಸಾಹುಕಾರ್. 🏏❤️ ಯಾವುದೇ ರೀತಿಯ ಒತ್ತಡವಿಲ್ಲದೆ, ಮಕ್ಕಳೊಂದಿಗೆ ಬೆರೆತು ಆರಾಮಾಗಿ ಕೆಲ ಸಮಯ ಕಳೆದು, ಅವರ ಉತ್ಸಾಹವನ್ನು ಹೆಚ್ಚಿಸಿದರು. Satish Jarkiholi1
- ಭಾವೈಕ್ಯತೆ ಸಾರುವ ಅಥಣಿಯ ಭವ್ಯ "ಅಥಣಿ ಚಾ ರಾಜಾ" ಗಣಪತಿ ವೈಭವದ ಪ್ರತಿಷ್ಠಾಪನೆ ಅಥಣಿ :: ತಾಲೂಕಿನ ಗ್ರಾಮೀಣ ಹಾಗೂ ಪಟ್ಟಣ ಸೇರಿದಂತೆ ವಿವಿಧೆಡೆ ಗಣೇಶ ಉತ್ಸವವನ್ನು ಸರಳ ಮತ್ತು ಶ್ರದ್ಧಾ, ಭಕ್ತಿಯಿಂದ ಭಾವೈಕ್ಯತೆಯ ಮೂಲಕ ಹಲವೆಡೆ ಹಿಂದೂ ಮುಸ್ಲಿಂ ಹಾಗೂ ವಿವಿಧ ಕೋಮಿನ ಯುವಕರು ಸಾಮರಸ್ಯದಿಂದ ಗಣೇಶ ಹಬ್ಬ ಆಚರಿಸಲಾಗುತ್ತಿದೆ . ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ಸುಪುತ್ರ ಚಿದಾನಂದ ಸವದಿ ಸ್ವತಹ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಗಣೇಶನ ಬರಮಾಡಿಕೊಂಡರು. ಯುವಕರು ಕುಣಿದು ಕುಪ್ಪಳಿಸುತ್ತಾ ಸಂಭ್ರಮದಿಂದ ಭವ್ಯ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದರು. ಈ ವೇಳೆ ಮುಖಂಡ ಚಿದಾನಂದ ಸವದಿ ಅವರು "ಅಥಣಿ ಚಾ ರಾಜಾ" ಜಾತ್ಯಾತೀತವಾಗಿ ಅಥಣಿಯ ಎಲ್ಲಾ ಯುವಕರ ಹೆಮ್ಮೆಯ ಗಣಪತಿ ಉತ್ಸವ ವಾಗಿದ್ದು ಯುವಕರ ಒಗ್ಗಟ್ಟು ಭಕ್ತಿ ಹಾಗೂ ಸಂಭ್ರಮ ಸಂತಸವನ್ನುಂಟು ಮಾಡುತ್ತದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಯುವಕರು ಸೇರಿಕೊಂಡು ಪ್ರತಿ ವರ್ಷ ಈ ಗಣಪತಿ ಉತ್ಸವ ಆಚರಿಸುತ್ತಿದ್ದು ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು. ಈ ವರ್ಷವೂ ವಿಜೃಂಭಣೆಯಿಂದ ಭವ್ಯ ಮೆರವಣಿಗೆ ಮೂಲಕ ಹಾಡು ನೃತ್ಯ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮದಿಂದ ಗಣೇಶನನ್ನು ಪ್ರತಿಷ್ಠಾಪಿಸಿದರು.1
- ಬೆಳಗಾವಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿ 4ಜನ ಸಜೀವ ದಹನ ಬೆಳಗಾವಿಯ ಡೋಹರ್ ಗಲ್ಲಿಯಲ್ಲಿ ನಿನ್ನೆ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿ 4 ಜನ ಸಜೀವ ದಹನ ಸರಕಾರದಿಂದ ಪರಿಹಾರ್ ಕೊಡಿಸಿಲೂ ಯೊಚನೆ ಮಾಡುತ್ತಿದ್ದೇವೆ ಸಚಿವ ಸತೀಶ ಜಾರಕಿಹೊಳಿ . . .. .... . . .. .. .. .. .. .. .. .. . . . . . . .. .. .. .. .. . . . . .... .. . . #reel #india #hindu #kannada #ಮುಸ್ಲಿಂ #BelagaviNews #instagramreel #SatishJarkiholi #ನಿಪ್ಪಾಣಿ #gokak #mudalgi #chikkodi #hukkeri #nippani #khaagwaad #ಸವದತ್ತಿ #kudachi #athani #yaragtti #ರಾಮದುರ್ಗ #khanapur #kittur #bailhongal Indian National Congress ಕರ್ನಾಟಕ ಕಾಂಗ್ರೆಸ್ ಕರ್ನಾಟಕ ಕಾಂಗ್ರೆಸ್ Satish Jarkiholi Narendra Modi ಬಿಜೆಪಿ ಕರ್ನಾಟಕ Rastriya Swatantra Party - RSP #muslim SP Belagavi District Chunappa Pujeri Rashtriya Swayamsevak Sangh (RSS) ಜಾರಕಿಹೊಳಿ ಅಭಿಮಾನಿಗಳ ಬಳಗ ಕರ್ನಾಟಕ1
- ಹಳ್ಳೂರ ಗ್ರಾಮದಲ್ಲಿ 2ಜನರ ನಡುವಿನ ಗಲಾಟೆ ದೊಡ್ಡ ಸಂಘರ್ಷಕ್ಕೆ ಕಾರಣ ಪೊಲೀಸರು ಲಾಟಿ ಬೀಸಿ ಜನರನ್ನು ಚದುರಿಸಿದ್ದಾರೆ1