logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ತಾಲ್ಲೂಕಿನ ಮಂಗಸೂಳಿಯಲ್ಲಿ ಎರಡು ಎಕರೆಯಲ್ಲಿ ಅಗ್ನಿಶಾಮಕ ಠಾಣೆಗೆ ಸ್ವಂತ ಕಟ್ಟಡ ನಿರ್ಮಿಸಿ, ಹಲವು ತಿಂಗಳಾಗಿವೆ. ಆದರೆ, ಉದ್ಘಾಟನೆ ಭಾಗ್ಯ ಕಂಡಿಲ್ಲ. ಅದಕ್ಕೆ ಹೊಸ ಅಗ್ನಿಶಾಮಕ ವಾಹನವನ್ನೂ ಒದಗಿಸಿಲ್ಲ. ಹಾಗಾಗಿ ಠಾಣೆ ಇದ್ದೂ ಇಲ್ಲದಂತಾಗಿದೆ. ಕಾಗವಾಡ ತಾಲ್ಲೂಕಿನಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಬೇಕು ಎಂಬ ಬೇಡಿಕೆ ಇತ್ತು. ಇದಕ್ಕೆ ಸ್ಪಂದಿಸಿದ ಬಿಜೆಪಿ ಸರ್ಕಾರ, 2022-23ನೇ ಸಾಲಿನಲ್ಲಿ ಮಂಗಸೂಳಿಯಲ್ಲಿ ಹೊಸ ಅಗ್ನಿಶಾಮಕ ಠಾಣೆ ಕಟ್ಟಡ ನಿರ್ಮಾಣಕ್ಕೆ ₹3 ಕೋಟಿ ಮಂಜೂರು ಮಾಡಿತ್ತು. ಆ ಹಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ, ಕಳೆದ ವರ್ಷ ಅಗ್ನಿಶಾಮಕ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆದರೆ, ಅದು ಕಾರ್ಯಾರಂಭ ಮಾಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದರೆ, 40 ಕಿ.ಮೀ ದೂರದ ಅಥಣಿ ಅಥವಾ ರಾಯಬಾಗ ಅಗ್ನಿಶಾಮಕ ಠಾಣೆಯಿಂದ ವಾಹನ ಬರಬೇಕಿದೆ. ಸಕಾಲಕ್ಕೆ ವಾಹನ ಬಾರದ್ದರಿಂದ ತ್ವರಿತವಾಗಿ ಬೆಂಕಿ ನಂದಿಸಲು ಕಷ್ಟವಾಗುತ್ತಿದೆ. ಕಾಗವಾಡ ತಾಲ್ಲೂಕು ಕೇಂದ್ರವಾಗಿ ಹಲವು ವರ್ಷ ಕಳೆದರೂ, ಅನೇಕ ಇಲಾಖೆಗಳ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೀಗಿರುವಾಗ ಅಗ್ನಿಶಾಮಕ ಠಾಣೆಗೆ ಸ್ವಂತ ಕಟ್ಟಡವಿದ್ದರೂ ಬಳಕೆಗೆ ಬಾರದ ಪರಿಸ್ಥಿತಿ ಇದೆ. ಇದರಲ್ಲಿ ಶಾಸಕರು ಹಾಗೂ ಸರ್ಕಾರದ ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಕಾಗವಾಡ ತಾಲ್ಲೂಕಿನಲ್ಲಿ ಮೂರು ಸಕ್ಕರೆ ಕಾರ್ಖಾನೆ ಇವೆ. ಈ ಭಾಗದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆ ಬೆಳೆಯುತ್ತಾರೆ. ಆಗಾಗ ಶಾರ್ಟ್‌ ಸರ್ಕ್ಯೂಟ್‌ ಮೊದಲಾದ ಕಾರಣಗಳಿಂದ ಕಬ್ಬಿನ ಗದ್ದೆಗಳಿಗೆ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ಹಾನಿಯಾಗುತ್ತಿದೆ. ಇದಲ್ಲದೆ, ಬೇರೆ ಅಗ್ನಿ ಅವಘಡಗಳೂ ವರದಿಯಾಗುತ್ತಿವೆ. ಆದರೆ, ದೂರದ ಅಥಣಿ ಹಾಗೂ ರಾಯಬಾಗ ಅಗ್ನಿಶಾಮಕ ಠಾಣೆಗಳಿಂದ ವಾಹನ ಬಂದು ಬೆಂಕಿ ನಂದಿಸುವಷ್ಟರಲ್ಲಿ, ಆಸ್ತಿ-ಪಾಸ್ತಿ ಸುಟ್ಟು ಕರಕಲಾಗುತ್ತಿದೆ. ಈಚೆಗೆ ತಾಲ್ಲೂಕಿನ ಜೂಗುಳ ಗ್ರಾಮದಲ್ಲಿ ಬಜಾರ್‌ ಪೇಟೆಯ ಹಲವು ಅಂಗಡಿಗಳು ಸುಟ್ಟು ಕರಕಲಾದವು. ಸಕಾಲಕ್ಕೆ ಬೆಂಕಿ ನಂದಿಸುವ ವಾಹನ ಬಾರದ್ದೇ ಹಾನಿ ಪ್ರಮಾಣ ಹೆಚ್ಚಲು ಕಾರಣವಾಗಿತ್ತು. ಹೀಗಿದ್ದರೂ ಮಂಗಸೂಳಿಯ ಠಾಣೆ ಕಾರ್ಯಾರಂಭಕ್ಕೆ ಸರ್ಕಾರ ಮನಸ್ಸು ಮಾಡುತ್ತಿಲ್ಲ. ರಾಯಬಾಗ, ಸಂಕೇಶ್ವರ ಮತ್ತು ಅಥಣಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯನ್ನು ಪಾಳೆ ಆಧಾರದಲ್ಲಿ ಕಾವಲಿಗೆ ನಿಯೋಜಿಸಿ ಸುಮ್ಮನಾಗಿದೆ. 'ಕಳೆದ ವರ್ಷ ಬೇಸಿಗೆಯಲ್ಲಿ ನಾವು ಬೆಳೆದ ಕಬ್ಬು ಬೆಳೆ ಕಟಾವಿಗೆ ಬಂದಿತ್ತು. ಆದರೆ, ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಳೆ ಸುಟ್ಟು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಇಂಥ ಘಟನೆ ಆಗಾಗ ನಡೆಯುತ್ತಲೇ ಇವೆ. ಹಾಗಾಗಿ ಮಂಗಸೂಳಿಯಲ್ಲಿರುವ ಠಾಣೆ ಕಾರ್ಯಾರಂಭಕ್ಕೆ ಕ್ರಮ ವಹಿಸಲೇಬೇಕು' ಎಂಬುದು ರೈತರ ಆಗ್ರಹ. ಮಂಗಸೂಳಿಯಲ್ಲಿ ನಿರ್ಮಿಸಿದ ಅಗ್ನಿಶಾಮಕ ಠಾಣೆಗೆ ಸಿಬ್ಬಂದಿ ನಿಯೋಜಿಸುವ ಕುರಿತು, ಈಚೆಗೆ ಸದನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ. ಶೀಘ್ರವೇ ಸಿಬ್ಬಂದಿ ನೇಮಿಸುವ ಬಗ್ಗೆ ಗೃಹ ಸಚಿವರು ಭರವಸೆ ಕೊಟ್ಟಿದ್ದಾರೆ. ಠಾಣೆ ಸದ್ಬಳಕೆಗೆ ಕ್ರಮ ವಹಿಸಲಾಗುವುದು ರಾಜು ಕಾಗೆ‌, ಶಾಸಕ, ಕಾಗವಾಡ ಉದ್ಘಾಟನೆಯಾಗದೆ ಪಾಳು ಬಿದ್ದಿರುವ ಅಗ್ನಿಶಾಮಕ ಠಾಣೆ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನಲ್ಲಿ ವರದಿಯಾಗುವ ಅಗ್ನಿ ಅವಘಡಗಳನ್ನು ತಪ್ಪಿಸಬೇಕು ಧರಿಖಾನ ಸಾವಂತ, ಸಾಮಾಜಿಕ ಕಾರ್ಯಕರ್ತ, ಮೋಳೆ ಮಂಗಸೂಳಿ ಗ್ರಾಮದ ನೂತನ ಅಗ್ನಿಶಾಮಕ ಠಾಣೆಗೆ ಸರ್ಕಾರ ಕೂಡಲೇ ಸಿಬ್ಬಂದಿ ನಿಯೋಜನೆ ಮಾಡಿ ಅಗತ್ಯ ಸಾಮಗ್ರಿಗಳನ್ನು ಪೊರೈಸಿ ಅಗ್ನಿ ಅವಘಡಗಳನ್ನು ತಡೆಯುವ ಕೆಲಸ ಮಾಡಬೇಕು ಶಶಿಕಾಂತ ಜೋಷಿ, ರೈತ ಹೋರಾಟಗಾರ, ಕಾಗವಾಡ

1 day ago
user_Shiva
Shiva
Photographer ಅಥಣಿ, ಬೆಳಗಾವಿ, ಕರ್ನಾಟಕ•
1 day ago
5d0046b9-8712-4e22-b06f-8040b6f51247

ತಾಲ್ಲೂಕಿನ ಮಂಗಸೂಳಿಯಲ್ಲಿ ಎರಡು ಎಕರೆಯಲ್ಲಿ ಅಗ್ನಿಶಾಮಕ ಠಾಣೆಗೆ ಸ್ವಂತ ಕಟ್ಟಡ ನಿರ್ಮಿಸಿ, ಹಲವು ತಿಂಗಳಾಗಿವೆ. ಆದರೆ, ಉದ್ಘಾಟನೆ ಭಾಗ್ಯ ಕಂಡಿಲ್ಲ. ಅದಕ್ಕೆ ಹೊಸ ಅಗ್ನಿಶಾಮಕ ವಾಹನವನ್ನೂ ಒದಗಿಸಿಲ್ಲ. ಹಾಗಾಗಿ ಠಾಣೆ ಇದ್ದೂ ಇಲ್ಲದಂತಾಗಿದೆ. ಕಾಗವಾಡ ತಾಲ್ಲೂಕಿನಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಬೇಕು ಎಂಬ ಬೇಡಿಕೆ ಇತ್ತು. ಇದಕ್ಕೆ ಸ್ಪಂದಿಸಿದ ಬಿಜೆಪಿ ಸರ್ಕಾರ, 2022-23ನೇ ಸಾಲಿನಲ್ಲಿ ಮಂಗಸೂಳಿಯಲ್ಲಿ ಹೊಸ ಅಗ್ನಿಶಾಮಕ ಠಾಣೆ ಕಟ್ಟಡ ನಿರ್ಮಾಣಕ್ಕೆ ₹3 ಕೋಟಿ ಮಂಜೂರು ಮಾಡಿತ್ತು. ಆ ಹಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ, ಕಳೆದ ವರ್ಷ ಅಗ್ನಿಶಾಮಕ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆದರೆ, ಅದು ಕಾರ್ಯಾರಂಭ ಮಾಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದರೆ, 40 ಕಿ.ಮೀ ದೂರದ ಅಥಣಿ ಅಥವಾ ರಾಯಬಾಗ ಅಗ್ನಿಶಾಮಕ ಠಾಣೆಯಿಂದ ವಾಹನ ಬರಬೇಕಿದೆ. ಸಕಾಲಕ್ಕೆ ವಾಹನ ಬಾರದ್ದರಿಂದ ತ್ವರಿತವಾಗಿ ಬೆಂಕಿ ನಂದಿಸಲು ಕಷ್ಟವಾಗುತ್ತಿದೆ. ಕಾಗವಾಡ ತಾಲ್ಲೂಕು ಕೇಂದ್ರವಾಗಿ ಹಲವು ವರ್ಷ ಕಳೆದರೂ, ಅನೇಕ ಇಲಾಖೆಗಳ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೀಗಿರುವಾಗ ಅಗ್ನಿಶಾಮಕ ಠಾಣೆಗೆ ಸ್ವಂತ ಕಟ್ಟಡವಿದ್ದರೂ ಬಳಕೆಗೆ ಬಾರದ ಪರಿಸ್ಥಿತಿ ಇದೆ. ಇದರಲ್ಲಿ ಶಾಸಕರು ಹಾಗೂ ಸರ್ಕಾರದ ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಕಾಗವಾಡ ತಾಲ್ಲೂಕಿನಲ್ಲಿ ಮೂರು ಸಕ್ಕರೆ ಕಾರ್ಖಾನೆ ಇವೆ. ಈ ಭಾಗದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆ ಬೆಳೆಯುತ್ತಾರೆ. ಆಗಾಗ ಶಾರ್ಟ್‌ ಸರ್ಕ್ಯೂಟ್‌ ಮೊದಲಾದ ಕಾರಣಗಳಿಂದ ಕಬ್ಬಿನ ಗದ್ದೆಗಳಿಗೆ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ಹಾನಿಯಾಗುತ್ತಿದೆ. ಇದಲ್ಲದೆ, ಬೇರೆ ಅಗ್ನಿ ಅವಘಡಗಳೂ ವರದಿಯಾಗುತ್ತಿವೆ. ಆದರೆ,

378c9e08-22fe-4545-b7dd-ebac51bff236

ದೂರದ ಅಥಣಿ ಹಾಗೂ ರಾಯಬಾಗ ಅಗ್ನಿಶಾಮಕ ಠಾಣೆಗಳಿಂದ ವಾಹನ ಬಂದು ಬೆಂಕಿ ನಂದಿಸುವಷ್ಟರಲ್ಲಿ, ಆಸ್ತಿ-ಪಾಸ್ತಿ ಸುಟ್ಟು ಕರಕಲಾಗುತ್ತಿದೆ. ಈಚೆಗೆ ತಾಲ್ಲೂಕಿನ ಜೂಗುಳ ಗ್ರಾಮದಲ್ಲಿ ಬಜಾರ್‌ ಪೇಟೆಯ ಹಲವು ಅಂಗಡಿಗಳು ಸುಟ್ಟು ಕರಕಲಾದವು. ಸಕಾಲಕ್ಕೆ ಬೆಂಕಿ ನಂದಿಸುವ ವಾಹನ ಬಾರದ್ದೇ ಹಾನಿ ಪ್ರಮಾಣ ಹೆಚ್ಚಲು ಕಾರಣವಾಗಿತ್ತು. ಹೀಗಿದ್ದರೂ ಮಂಗಸೂಳಿಯ ಠಾಣೆ ಕಾರ್ಯಾರಂಭಕ್ಕೆ ಸರ್ಕಾರ ಮನಸ್ಸು ಮಾಡುತ್ತಿಲ್ಲ. ರಾಯಬಾಗ, ಸಂಕೇಶ್ವರ ಮತ್ತು ಅಥಣಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯನ್ನು ಪಾಳೆ ಆಧಾರದಲ್ಲಿ ಕಾವಲಿಗೆ ನಿಯೋಜಿಸಿ ಸುಮ್ಮನಾಗಿದೆ. 'ಕಳೆದ ವರ್ಷ ಬೇಸಿಗೆಯಲ್ಲಿ ನಾವು ಬೆಳೆದ ಕಬ್ಬು ಬೆಳೆ ಕಟಾವಿಗೆ ಬಂದಿತ್ತು. ಆದರೆ, ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಳೆ ಸುಟ್ಟು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಇಂಥ ಘಟನೆ ಆಗಾಗ ನಡೆಯುತ್ತಲೇ ಇವೆ. ಹಾಗಾಗಿ ಮಂಗಸೂಳಿಯಲ್ಲಿರುವ ಠಾಣೆ ಕಾರ್ಯಾರಂಭಕ್ಕೆ ಕ್ರಮ ವಹಿಸಲೇಬೇಕು' ಎಂಬುದು ರೈತರ ಆಗ್ರಹ. ಮಂಗಸೂಳಿಯಲ್ಲಿ ನಿರ್ಮಿಸಿದ ಅಗ್ನಿಶಾಮಕ ಠಾಣೆಗೆ ಸಿಬ್ಬಂದಿ ನಿಯೋಜಿಸುವ ಕುರಿತು, ಈಚೆಗೆ ಸದನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ. ಶೀಘ್ರವೇ ಸಿಬ್ಬಂದಿ ನೇಮಿಸುವ ಬಗ್ಗೆ ಗೃಹ ಸಚಿವರು ಭರವಸೆ ಕೊಟ್ಟಿದ್ದಾರೆ. ಠಾಣೆ ಸದ್ಬಳಕೆಗೆ ಕ್ರಮ ವಹಿಸಲಾಗುವುದು ರಾಜು ಕಾಗೆ‌, ಶಾಸಕ, ಕಾಗವಾಡ ಉದ್ಘಾಟನೆಯಾಗದೆ ಪಾಳು ಬಿದ್ದಿರುವ ಅಗ್ನಿಶಾಮಕ ಠಾಣೆ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನಲ್ಲಿ ವರದಿಯಾಗುವ ಅಗ್ನಿ ಅವಘಡಗಳನ್ನು ತಪ್ಪಿಸಬೇಕು ಧರಿಖಾನ ಸಾವಂತ, ಸಾಮಾಜಿಕ ಕಾರ್ಯಕರ್ತ, ಮೋಳೆ ಮಂಗಸೂಳಿ ಗ್ರಾಮದ ನೂತನ ಅಗ್ನಿಶಾಮಕ ಠಾಣೆಗೆ ಸರ್ಕಾರ ಕೂಡಲೇ ಸಿಬ್ಬಂದಿ ನಿಯೋಜನೆ ಮಾಡಿ ಅಗತ್ಯ ಸಾಮಗ್ರಿಗಳನ್ನು ಪೊರೈಸಿ ಅಗ್ನಿ ಅವಘಡಗಳನ್ನು ತಡೆಯುವ ಕೆಲಸ ಮಾಡಬೇಕು ಶಶಿಕಾಂತ ಜೋಷಿ, ರೈತ ಹೋರಾಟಗಾರ, ಕಾಗವಾಡ

More news from ಕರ್ನಾಟಕ and nearby areas
  • ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಭೀಮ್ ಆರ್ಮಿ ಬೃಹತ್ ಹೋರಾಟ ಮುಧೋಳ : ನಗರದ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ಜರುಗಿತು. ಡಾ.ಅಂಬೇಡ್ಕರ್ ವೃತ್ತದಿಂದ ಸರ್ಕಾರಿ ಆಸ್ಪತ್ರೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ಮಾರ್ಗದುದ್ದಕ್ಕೂ‌ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಒದಗಿಸಬೇಕು, ಗುಣಮಟ್ಟದ ಚಿಕಿತ್ಸೆಗೆ‌ ನೀಡಬೇಕು ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆಸ್ಪತ್ರೆ ಆವರಣದಲ್ಲಿನ ಸಭೆಯಲ್ಲಿ ಮಾತನಾಡಿದ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುನೀಲ ಕಂಬೋಗಿ, ವಿವಿಧ ರೋಗಗಳಿಗೆ ಸಂಬಂಧಿಸಿದ ತಜ್ಞ ವೈದ್ಯರ ಕೊರತೆ, ವೈದ್ಯಕೀಯ ಸಿಬ್ಬಂದಿಯ ಅಸಮರ್ಪಕ ಲಭ್ಯತೆ, ಅಗತ್ಯ ಚಿಕಿತ್ಸೆಯಲ್ಲಿ ವಿಳಂಬ ಹಾಗೂ ಆಸ್ಪತ್ರೆಯ ಕೆಲ ವೈದ್ಯರನ್ನು ನಿಯೋಜನೆಯ ಮೇಲೆ ಬೇರೆ ಸರ್ಕಾರಿ ಆಸ್ಪತ್ರೆಗಳಿಗೆ ನಿಯೋಜಿಸಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಬೇರೆ ಆಸ್ಪತ್ರೆಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರಿಗೆ ಸೂಕ್ತ ಆರೋಗ್ಯ ಸೇವೆಗಳು ಸಿಗದೆ ಪರದಾಡುವಂತಾಗಿದೆ ಎಂದು ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆಯು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರಿಗೆ ಪ್ರಮುಖ ಸರ್ಕಾರಿ ಆರೋಗ್ಯ ಸೇವಾ ಕೇಂದ್ರವಾಗಿದೆ. ಆದರೆ ಆಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಲಭ್ಯವಿಲ್ಲದಿರುವುದರಿಂದ ಸಾರ್ವಜನಿಕರು ಸೂಕ್ತ ಚಿಕಿತ್ಸೆ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಅಸಮಾಧಾನ ಹೊರಹಾಕಿದರು. ರಾಜ್ಯ ಸಂಚಾಲಕ ಅನಿಲ ಬರಗಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ. ಮುಧೋಳ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಬೇರೆ ಆಸ್ಪತ್ರೆಗೆ ನಿಯೋಜನೆ ಮಾಡಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಖಾಲಿ ಇರುವ ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ಭರ್ತಿ ಮಾಡಿ ಆಸ್ಪತ್ರೆಯ ಅವಶ್ಯಕತೆಯನ್ನು ಶೀಘ್ರದಲ್ಲಿಯೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರಿಗೆ ಗುಣಮಟ್ಟದ ಮತ್ತು ಸಮಯೋಚಿತ ಚಿಕಿತ್ಸೆ ದೊರೆಯುವಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಹಾಗೂ ಮುಧೋಳ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ಎಂದು ಆಗ್ರಹಿಸಿದರು. ರಾಜ್ಯ ಘಟಕದ ಅಧ್ಯಕ್ಷ ಲವಿತ ಮೇತ್ರಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬರುವ ಬಡವರಿಗೆ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ. ಕೂಡಲೇ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನಮಾನದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಡಿಎಚ್‍ಒ ಡಾ.ರಾಜಕುಮಾರ ಯರಗಲ್ ಮಾತನಾಡಿ, ಇಲ್ಲಿಂದ ನಿಯೋಜನೆಗೊಂಡ ನಾಲ್ಕು ವೈದ್ಯರ ನಿಯೋಜನೆ ಆದೇಶವನ್ನು ರದ್ದು ಮಾಡಲಾಗಿದೆ ಎಂದು ಪತ್ರಗಳನ್ನು ಪ್ರತಿಭಟನಾ ಕಾರರಿಗೆ ತೋರಿಸಿದರು. ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಿಕ ಮನವಿ ಸ್ವೀಕರಿಸಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ, ಡಾ, ಅಶೋಕ ಸೂರ್ಯವಂಶಿ, ಮುಖಂಡರಾದ ಸದಾಶಿವ ಬಾಡಗಂಡಿ, ಸುಂದರ ದೊಡಮನಿ, ಪುಟ್ಟು ಮೇತ್ರಿ, ಮಹಾದೇವಿ ಅಮಲಝರಿ, ಗೀತಾ, ರವಿ ಬೆಳಗಲಿ, ಮಹಾದೇವ ಮೀಸಿ, ಭೀಮಸಿ ಭಜಂತ್ರಿ, ಶೇಖರ ಬಾಗಿ ಮುಂತಾದವರು ಇದ್ದರು.
    1
    ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಭೀಮ್ ಆರ್ಮಿ ಬೃಹತ್ ಹೋರಾಟ
ಮುಧೋಳ : ನಗರದ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ಜರುಗಿತು.
ಡಾ.ಅಂಬೇಡ್ಕರ್ ವೃತ್ತದಿಂದ ಸರ್ಕಾರಿ ಆಸ್ಪತ್ರೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ಮಾರ್ಗದುದ್ದಕ್ಕೂ‌ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಒದಗಿಸಬೇಕು, ಗುಣಮಟ್ಟದ ಚಿಕಿತ್ಸೆಗೆ‌ ನೀಡಬೇಕು ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆಸ್ಪತ್ರೆ ಆವರಣದಲ್ಲಿನ ಸಭೆಯಲ್ಲಿ ಮಾತನಾಡಿದ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುನೀಲ ಕಂಬೋಗಿ, ವಿವಿಧ ರೋಗಗಳಿಗೆ ಸಂಬಂಧಿಸಿದ ತಜ್ಞ ವೈದ್ಯರ ಕೊರತೆ, ವೈದ್ಯಕೀಯ ಸಿಬ್ಬಂದಿಯ ಅಸಮರ್ಪಕ ಲಭ್ಯತೆ, ಅಗತ್ಯ ಚಿಕಿತ್ಸೆಯಲ್ಲಿ ವಿಳಂಬ ಹಾಗೂ ಆಸ್ಪತ್ರೆಯ ಕೆಲ ವೈದ್ಯರನ್ನು ನಿಯೋಜನೆಯ ಮೇಲೆ ಬೇರೆ ಸರ್ಕಾರಿ ಆಸ್ಪತ್ರೆಗಳಿಗೆ ನಿಯೋಜಿಸಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಬೇರೆ ಆಸ್ಪತ್ರೆಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರಿಗೆ ಸೂಕ್ತ ಆರೋಗ್ಯ ಸೇವೆಗಳು ಸಿಗದೆ ಪರದಾಡುವಂತಾಗಿದೆ ಎಂದು ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರಿಗೆ ಪ್ರಮುಖ ಸರ್ಕಾರಿ ಆರೋಗ್ಯ ಸೇವಾ ಕೇಂದ್ರವಾಗಿದೆ. ಆದರೆ ಆಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಲಭ್ಯವಿಲ್ಲದಿರುವುದರಿಂದ ಸಾರ್ವಜನಿಕರು ಸೂಕ್ತ ಚಿಕಿತ್ಸೆ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಅಸಮಾಧಾನ ಹೊರಹಾಕಿದರು.
ರಾಜ್ಯ ಸಂಚಾಲಕ ಅನಿಲ ಬರಗಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ.  ಮುಧೋಳ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಬೇರೆ ಆಸ್ಪತ್ರೆಗೆ ನಿಯೋಜನೆ ಮಾಡಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಖಾಲಿ ಇರುವ ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ಭರ್ತಿ ಮಾಡಿ ಆಸ್ಪತ್ರೆಯ ಅವಶ್ಯಕತೆಯನ್ನು ಶೀಘ್ರದಲ್ಲಿಯೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರಿಗೆ ಗುಣಮಟ್ಟದ ಮತ್ತು ಸಮಯೋಚಿತ ಚಿಕಿತ್ಸೆ ದೊರೆಯುವಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಹಾಗೂ ಮುಧೋಳ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ಎಂದು ಆಗ್ರಹಿಸಿದರು.
ರಾಜ್ಯ ಘಟಕದ ಅಧ್ಯಕ್ಷ ಲವಿತ ಮೇತ್ರಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬರುವ ಬಡವರಿಗೆ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ. ಕೂಡಲೇ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನಮಾನದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಡಿಎಚ್‍ಒ ಡಾ.ರಾಜಕುಮಾರ ಯರಗಲ್ ಮಾತನಾಡಿ, ಇಲ್ಲಿಂದ ನಿಯೋಜನೆಗೊಂಡ ನಾಲ್ಕು ವೈದ್ಯರ ನಿಯೋಜನೆ ಆದೇಶವನ್ನು ರದ್ದು ಮಾಡಲಾಗಿದೆ ಎಂದು ಪತ್ರಗಳನ್ನು ಪ್ರತಿಭಟನಾ ಕಾರರಿಗೆ ತೋರಿಸಿದರು.  ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಿಕ ಮನವಿ ಸ್ವೀಕರಿಸಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ, ಡಾ, ಅಶೋಕ ಸೂರ್ಯವಂಶಿ, ಮುಖಂಡರಾದ ಸದಾಶಿವ ಬಾಡಗಂಡಿ, ಸುಂದರ ದೊಡಮನಿ, ಪುಟ್ಟು ಮೇತ್ರಿ, ಮಹಾದೇವಿ ಅಮಲಝರಿ, ಗೀತಾ, ರವಿ ಬೆಳಗಲಿ, ಮಹಾದೇವ ಮೀಸಿ, ಭೀಮಸಿ ಭಜಂತ್ರಿ, ಶೇಖರ ಬಾಗಿ ಮುಂತಾದವರು ಇದ್ದರು.
    user_ಗೋವಿಂದಪ್ಪ ತಳವಾರ
    ಗೋವಿಂದಪ್ಪ ತಳವಾರ
    ಮುಧೋಳ, ಬಾಗಲಕೋಟೆ, ಕರ್ನಾಟಕ•
    11 hrs ago
  • ಮಾಂಜರಿಯಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟ ಆರೋಪ! ಕಡಿಮೆ ಬೆಲೆಗೆ ಮಾರಾಟದ ಆರೋಪ – ಆಹಾರ ಇಲಾಖೆಯಿಂದ ದಿಢೀರ್ ಪರಿಶೀಲನೆ, ಅಂಗಡಿಗೆ ನೋಟಿಸ್! ಮಾಂಜರಿಯಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟ ಆರೋಪ! ಕಡಿಮೆ ಬೆಲೆಗೆ ಮಾರಾಟದ ಆರೋಪ – ಆಹಾರ ಇಲಾಖೆಯಿಂದ ದಿಢೀರ್ ಪರಿಶೀಲನೆ, ಅಂಗಡಿಗೆ ನೋಟಿಸ್! ಮಾಂಜರಿ: ಮಾಂಜರಿ ಗ್ರಾಮದ ಶ್ರೀ ರಾಜಾರಾಮ್ ಕಿರಾಣಾ ಸ್ಟೋರ್‌ನಲ್ಲಿ ಅವಧಿ ಮುಗಿದ ಬಿಸ್ಕೆಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಇದೀಗ ಗ್ರಾಮದಲ್ಲಿ ಆತಂಕ ಹಾಗೂ ಚರ್ಚೆಗೆ ಕಾರಣವಾಗಿದೆ. ಮಾಂಜರಿ ಗ್ರಾಮದ ವಕೀಲರಾದ ಪ್ರಭಾಕ‌ರ್ ಕುರಣೆ ಅವರು ಈ ಅಂಗಡಿಯಿಂದ ಬಿಸ್ಕೆಟ್‌ಗಳನ್ನು ಖರೀದಿಸಿ, ನಂತರ ಅವುಗಳ ಪ್ಯಾಕೆಟ್‌ಗಳನ್ನು ಪರಿಶೀಲಿಸಿದಾಗ Expiry Date ಮುಗಿದಿರುವುದು ಕಂಡುಬಂದಿದೆ ಎಂದು ಆರೋಪಿಸಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ವಕೀಲರಾದ ಪ್ರಭಾಕ‌ರ್ ಕುರಣೆ ಅವರು ಸಂಬಂಧಪಟ್ಟ ಆಹಾರ ಪರಿಶೀಲನಾ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮಾಹಿತಿ ಹಿನ್ನೆಲೆಯಲ್ಲಿ ಆಹಾರ ಪರಿಶೀಲನಾ ಇಲಾಖೆಯ ಅಧಿಕಾರಿಗಳು ದಿಢೀರ್ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂಗಡಿ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದೂರು ದಾಖಲಿಸಲು ವಕೀಲರಾದ ಪ್ರಭಾಕ‌ರ್ ಕುರಣೆ ಅವರು ಮುಂದಾಗಿದ್ದಾರೆ ಎನ್ನಲಾಗಿದೆ. ಗ್ರಾಹಕರೇ ಎಚ್ಚರ! ಆಹಾರ ಪದಾರ್ಥಗಳನ್ನು ಖರೀದಿಸುವಾಗ ಕೇವಲ ಬೆಲೆಯನ್ನು ផ, Manufacturing Date, Expiry/Best Before Date, MRP ಹಾಗೂ ಪ್ಯಾಕೆಟ್‌ನ ಸೀಲ್ ಅನ್ನು ಕಡ್ಡಾಯವಾಗಿ ಪರಿಶೀಲಿಸಿ. “ಕಡಿಮೆ ಬೆಲೆ” ಎಂಬ ಕಾರಣಕ್ಕೆ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಖರೀದಿಸಬೇಡಿ. ಅವಧಿ ಮೀರಿದ ಆಹಾರ ಪದಾರ್ಥಗಳು ಕಂಡುಬಂದರೆ ಅವುಗಳನ್ನು ಸೇವಿಸದೆ, ಬಿಲ್ ಮತ್ತು ಪ್ಯಾಕೆಟ್‌ಗಳನ್ನು ಸಂರಕ್ಷಸಿ, ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳ ಗಮನಕ್ಕೆ ತನ್ನಿ. ನಿಮ್ಮ ಒಂದು ಕ್ಷಣದ ಪರಿಶೀಲನೆ - ನಿಮ್ಮ ಕುಟುಂಬದ ಆರೋಗ್ಯದ ರಕ್ಷಣೆ! ಜಾಗೃತ ಗ್ರಾಹಕರಾಗಿ... ಸುರಕ್ಷತ ಆಹಾರವನ್ನೇ ಸೇವಿಸಿ
    4
    ಮಾಂಜರಿಯಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟ ಆರೋಪ!
ಕಡಿಮೆ ಬೆಲೆಗೆ ಮಾರಾಟದ ಆರೋಪ – ಆಹಾರ ಇಲಾಖೆಯಿಂದ ದಿಢೀರ್ ಪರಿಶೀಲನೆ, ಅಂಗಡಿಗೆ ನೋಟಿಸ್!
ಮಾಂಜರಿಯಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟ ಆರೋಪ!
ಕಡಿಮೆ ಬೆಲೆಗೆ ಮಾರಾಟದ ಆರೋಪ – ಆಹಾರ ಇಲಾಖೆಯಿಂದ ದಿಢೀರ್ ಪರಿಶೀಲನೆ, ಅಂಗಡಿಗೆ ನೋಟಿಸ್!
ಮಾಂಜರಿ:
ಮಾಂಜರಿ ಗ್ರಾಮದ ಶ್ರೀ ರಾಜಾರಾಮ್ ಕಿರಾಣಾ ಸ್ಟೋರ್‌ನಲ್ಲಿ ಅವಧಿ ಮುಗಿದ ಬಿಸ್ಕೆಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಇದೀಗ ಗ್ರಾಮದಲ್ಲಿ ಆತಂಕ ಹಾಗೂ ಚರ್ಚೆಗೆ ಕಾರಣವಾಗಿದೆ.
ಮಾಂಜರಿ ಗ್ರಾಮದ ವಕೀಲರಾದ ಪ್ರಭಾಕ‌ರ್ ಕುರಣೆ ಅವರು ಈ ಅಂಗಡಿಯಿಂದ ಬಿಸ್ಕೆಟ್‌ಗಳನ್ನು ಖರೀದಿಸಿ, ನಂತರ ಅವುಗಳ ಪ್ಯಾಕೆಟ್‌ಗಳನ್ನು ಪರಿಶೀಲಿಸಿದಾಗ Expiry Date ಮುಗಿದಿರುವುದು ಕಂಡುಬಂದಿದೆ ಎಂದು ಆರೋಪಿಸಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ವಕೀಲರಾದ ಪ್ರಭಾಕ‌ರ್ ಕುರಣೆ ಅವರು ಸಂಬಂಧಪಟ್ಟ ಆಹಾರ ಪರಿಶೀಲನಾ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಹಿನ್ನೆಲೆಯಲ್ಲಿ ಆಹಾರ ಪರಿಶೀಲನಾ ಇಲಾಖೆಯ ಅಧಿಕಾರಿಗಳು ದಿಢೀರ್ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂಗಡಿ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದೂರು ದಾಖಲಿಸಲು ವಕೀಲರಾದ ಪ್ರಭಾಕ‌ರ್ ಕುರಣೆ ಅವರು ಮುಂದಾಗಿದ್ದಾರೆ ಎನ್ನಲಾಗಿದೆ.
ಗ್ರಾಹಕರೇ ಎಚ್ಚರ!
ಆಹಾರ ಪದಾರ್ಥಗಳನ್ನು ಖರೀದಿಸುವಾಗ ಕೇವಲ ಬೆಲೆಯನ್ನು ផ, Manufacturing Date, Expiry/Best Before Date, MRP ಹಾಗೂ ಪ್ಯಾಕೆಟ್‌ನ ಸೀಲ್ ಅನ್ನು ಕಡ್ಡಾಯವಾಗಿ ಪರಿಶೀಲಿಸಿ.
“ಕಡಿಮೆ ಬೆಲೆ” ಎಂಬ ಕಾರಣಕ್ಕೆ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಖರೀದಿಸಬೇಡಿ.
ಅವಧಿ ಮೀರಿದ ಆಹಾರ ಪದಾರ್ಥಗಳು ಕಂಡುಬಂದರೆ ಅವುಗಳನ್ನು ಸೇವಿಸದೆ, ಬಿಲ್ ಮತ್ತು ಪ್ಯಾಕೆಟ್‌ಗಳನ್ನು ಸಂರಕ್ಷಸಿ, ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳ ಗಮನಕ್ಕೆ ತನ್ನಿ.
ನಿಮ್ಮ ಒಂದು ಕ್ಷಣದ ಪರಿಶೀಲನೆ - ನಿಮ್ಮ ಕುಟುಂಬದ ಆರೋಗ್ಯದ ರಕ್ಷಣೆ!
ಜಾಗೃತ ಗ್ರಾಹಕರಾಗಿ... ಸುರಕ್ಷತ ಆಹಾರವನ್ನೇ ಸೇವಿಸಿ
    user_SAMATA NEWS KANNADA 1
    SAMATA NEWS KANNADA 1
    Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    1 hr ago
  • ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ‌ ಯರಗಲ್ಲ ಭೇಟಿನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ‌ ಯರಗಲ್ಲ ಭೇಟಿ ಮುಧೋಳ : ನಗರದಲ್ಲಿನ ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿನ ಸಿಬ್ಬಂದಿ‌ ಕೊರತೆ ಹಾಗೂ ಅವ್ಯವಸ್ಥೆ ವಿರುದ್ಧ ಭೀಮ್ ಆರ್ಮಿ ಮೂಲ‌ ನಿವಾಸಿ ಏಕತಾ ಪರಿಷತ್‌ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ರಾಜಕುಮಾರ ಯರಗಲ್ಲ ಅವರು ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು.
    1
    ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ‌ ಯರಗಲ್ಲ ಭೇಟಿನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ‌ ಯರಗಲ್ಲ ಭೇಟಿ
ಮುಧೋಳ : ನಗರದಲ್ಲಿನ ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿನ ಸಿಬ್ಬಂದಿ‌ ಕೊರತೆ ಹಾಗೂ ಅವ್ಯವಸ್ಥೆ ವಿರುದ್ಧ ಭೀಮ್ ಆರ್ಮಿ ಮೂಲ‌ ನಿವಾಸಿ ಏಕತಾ ಪರಿಷತ್‌ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ರಾಜಕುಮಾರ ಯರಗಲ್ಲ ಅವರು ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು.
    user_Ambarish M Hadapad
    Ambarish M Hadapad
    Newspaper advertising department ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    10 hrs ago
  • ಜನಪ್ರತಿನಿಧಿಗಳು, ರಾಜಕೀಯ ನಾಯಕರು ಹಾಗೂ ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ನೇರ ಸಂವಾದ. 🔹 ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ 🔹 ಜನರ ಪ್ರಮುಖ ಸಮಸ್ಯೆಗಳು 🔹 ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು 🔹 ಭವಿಷ್ಯದ ಯೋಜನೆಗಳು 🔹 ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳು 🔹 ರೈತರು, ಮಹಿಳೆಯರು ಹಾಗೂ ಬಡವರ ಸಮಸ್ಯೆಗಳು 🔹 ಜನರಿಂದ ನೇರ ಪ್ರಶ್ನೆಗಳು – ನಾಯಕರಿಂದ ನೇರ ಉತ್ತರಗಳು “ನಾಯಕರು ಏನು ಹೇಳುತ್ತಾರೆ ಎನ್ನುವುದಷ್ಟೇ ಅಲ್ಲ… ಜನರು ಏನು ಕೇಳಬೇಕು ಎಂಬುದಕ್ಕೂ ವೇದಿಕೆ!” 📺 ನಿಮ್ಮ ಸಿಂಪಲ್ ಸಿದ್ದು ವಾಹಿನಿ 🎤 ನಿಮ್ಮ ನಾಯಕ – ನಿಮ್ಮ ಮುಂದೆ 📍 ನೇರ ಮಾತು • ನೇರ ಪ್ರಶ್ನೆ • ನೇರ ಉತ್ತರ 🎙️ ನಿಮ್ಮ ಸಿಂಪಲ್ ಸಿದ್ದು ವಾಹಿನಿ “ನಿಮ್ಮ ನಾಯಕ – ನಿಮ್ಮ ಮುಂದೆ” ವಿಶೇಷ ಸಂದರ್ಶನ ಕಾರ್ಯಕ್ರಮ ಜನಪ್ರತಿನಿಧಿಗಳು, ರಾಜಕೀಯ ನಾಯಕರು ಹಾಗೂ ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ನೇರ ಸಂವಾದ. 🔹 ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ 🔹 ಜನರ ಪ್ರಮುಖ ಸಮಸ್ಯೆಗಳು 🔹 ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು 🔹 ಭವಿಷ್ಯದ ಯೋಜನೆಗಳು 🔹 ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳು 🔹 ರೈತರು, ಮಹಿಳೆಯರು ಹಾಗೂ ಬಡವರ ಸಮಸ್ಯೆಗಳು 🔹 ಜನರಿಂದ ನೇರ ಪ್ರಶ್ನೆಗಳು – ನಾಯಕರಿಂದ ನೇರ ಉತ್ತರಗಳು “ನಾಯಕರು ಏನು ಹೇಳುತ್ತಾರೆ ಎನ್ನುವುದಷ್ಟೇ ಅಲ್ಲ… ಜನರು ಏನು ಕೇಳಬೇಕು ಎಂಬುದಕ್ಕೂ ವೇದಿಕೆ!” 📺 ನಿಮ್ಮ ಸಿಂಪಲ್ ಸಿದ್ದು ವಾಹಿನಿ 🎤 ನಿಮ್ಮ ನಾಯಕ – ನಿಮ್ಮ ಮುಂದೆ 📍 ನೇರ ಮಾತು • ನೇರ ಪ್ರಶ್ನೆ • ನೇರ ಉತ್ತರ 9743340230 shuru news ನಿಮ್ಮ ಸಿಂಪಲ್ ಸಿದ್ದು 9743340230
    1
    ಜನಪ್ರತಿನಿಧಿಗಳು, ರಾಜಕೀಯ ನಾಯಕರು ಹಾಗೂ ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ನೇರ ಸಂವಾದ.

🔹 ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ
🔹 ಜನರ ಪ್ರಮುಖ ಸಮಸ್ಯೆಗಳು
🔹 ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು
🔹 ಭವಿಷ್ಯದ ಯೋಜನೆಗಳು
🔹 ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳು
🔹 ರೈತರು, ಮಹಿಳೆಯರು ಹಾಗೂ ಬಡವರ ಸಮಸ್ಯೆಗಳು
🔹 ಜನರಿಂದ ನೇರ ಪ್ರಶ್ನೆಗಳು – ನಾಯಕರಿಂದ ನೇರ ಉತ್ತರಗಳು

“ನಾಯಕರು ಏನು ಹೇಳುತ್ತಾರೆ ಎನ್ನುವುದಷ್ಟೇ ಅಲ್ಲ… ಜನರು ಏನು ಕೇಳಬೇಕು ಎಂಬುದಕ್ಕೂ ವೇದಿಕೆ!”

📺 ನಿಮ್ಮ ಸಿಂಪಲ್ ಸಿದ್ದು ವಾಹಿನಿ
🎤 ನಿಮ್ಮ ನಾಯಕ – ನಿಮ್ಮ ಮುಂದೆ
📍 ನೇರ ಮಾತು • ನೇರ ಪ್ರಶ್ನೆ • ನೇರ ಉತ್ತರ

🎙️ ನಿಮ್ಮ ಸಿಂಪಲ್ ಸಿದ್ದು ವಾಹಿನಿ
“ನಿಮ್ಮ ನಾಯಕ – ನಿಮ್ಮ ಮುಂದೆ”
ವಿಶೇಷ ಸಂದರ್ಶನ ಕಾರ್ಯಕ್ರಮ
ಜನಪ್ರತಿನಿಧಿಗಳು, ರಾಜಕೀಯ ನಾಯಕರು ಹಾಗೂ ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ನೇರ ಸಂವಾದ.
🔹 ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ
🔹 ಜನರ ಪ್ರಮುಖ ಸಮಸ್ಯೆಗಳು
🔹 ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು
🔹 ಭವಿಷ್ಯದ ಯೋಜನೆಗಳು
🔹 ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳು
🔹 ರೈತರು, ಮಹಿಳೆಯರು ಹಾಗೂ ಬಡವರ ಸಮಸ್ಯೆಗಳು
🔹 ಜನರಿಂದ ನೇರ ಪ್ರಶ್ನೆಗಳು – ನಾಯಕರಿಂದ ನೇರ ಉತ್ತರಗಳು
“ನಾಯಕರು ಏನು ಹೇಳುತ್ತಾರೆ ಎನ್ನುವುದಷ್ಟೇ ಅಲ್ಲ… ಜನರು ಏನು ಕೇಳಬೇಕು ಎಂಬುದಕ್ಕೂ ವೇದಿಕೆ!”
📺 ನಿಮ್ಮ ಸಿಂಪಲ್ ಸಿದ್ದು ವಾಹಿನಿ
🎤 ನಿಮ್ಮ ನಾಯಕ – ನಿಮ್ಮ ಮುಂದೆ
📍 ನೇರ ಮಾತು • ನೇರ ಪ್ರಶ್ನೆ • ನೇರ ಉತ್ತರ
9743340230
shuru news
ನಿಮ್ಮ ಸಿಂಪಲ್ ಸಿದ್ದು 
9743340230
    user_ನಮ್ಮ ಬೆಳಗಾವಿ  ವಾರ್ತಾ
    ನಮ್ಮ ಬೆಳಗಾವಿ ವಾರ್ತಾ
    Photographer ಬೆಳಗಾವಿ, ಬೆಳಗಾವಿ, ಕರ್ನಾಟಕ•
    9 hrs ago
  • *ವಿಜಯಪುರ ವಿಮಾನ ನಿಲ್ದಾಣಕ್ಕೆ ಮುಹೂರ್ತ; 2027ರ ಆರಂಭದಲ್ಲೇ ವಿಮಾನ ಹಾರಾಟಕ್ಕೆ ಸಿದ್ಧತೆ* *ವಿಜಯಪುರ ವಿಮಾನ ನಿಲ್ದಾಣಕ್ಕೆ ಮುಹೂರ್ತ; 2027ರ ಆರಂಭದಲ್ಲೇ ವಿಮಾನ ಹಾರಾಟಕ್ಕೆ ಸಿದ್ಧತೆ* ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, 2027ರ ಆರಂಭದಲ್ಲೇ ವಿಮಾನ ಹಾರಾಟ ಆರಂಭಿಸುವ ಪ್ರಯತ್ನ ನಡೆದಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದರು. ವಿಜಯಪುರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದ ಕಾರ್ಯಾರಂಭಕ್ಕೆ ಅಗತ್ಯವಿರುವ ಕೇಂದ್ರ ಪರಿಸರ ಇಲಾಖೆಯ ಅನುಮತಿಗಾಗಿ ಕೋರಲಾಗಿದೆ. ಸದ್ಯ ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಅನುಮತಿ ಪಡೆಯಲು ಕೊಂಚ ವಿಳಂಬವಾಗಬಹುದು. ಆದರೆ ಶೀಘ್ರದಲ್ಲೇ ಅನುಮತಿ ದೊರೆಯುವ ವಿಶ್ವಾಸವಿದೆ ಎಂದರು. ವಿಮಾನ ನಿಲ್ದಾಣದಲ್ಲಿ ನೈಟ್‌ ಲ್ಯಾಂಡಿಂಗ್‌ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೊಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಭೂಸ್ವಾಧೀನ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಹೇಳಿದರು. ವಿಜಯಪುರ ವಿಮಾನ ನಿಲ್ದಾಣವನ್ನು ಏರ್‌ಬಸ್-320 ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ ₹618.75 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ರಾಜ್ಯ ಸರ್ಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ಕಾಮಗಾರಿಗೆ ಅನುದಾನ ಒದಗಿಸಲಾಗುತ್ತಿದೆ. ಕಾಮಗಾರಿಯ ಮೇಲ್ವಿಚಾರಣೆಗೆ ಕೆಎಸ್‌ಐಐಡಿಸಿಯನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ ಎಂದು ವಿವರಿಸಿದರು. ಲೋಕೋಪ ಯೋಗಿ ಇಲಾಖೆಯಿಂದಲೇ ಕಾಮಗಾರಿ ಅನುಷ್ಠಾನಗೊಳ್ಳುತ್ತಿದ್ದು, ಬೆಂಗಳೂರಿನ ಐಡೆಕ್ ಸಂಸ್ಥೆಯನ್ನು ಕಾಮಗಾರಿ ನಿರ್ವಹಣೆ ಮತ್ತು ಸಲಹೆಗಾರರನ್ನಾಗಿ (PMC) ನೇಮಕ ಮಾಡಲಾಗಿದೆ ಎಂದರು. ಪರಿಸರ ಇಲಾಖೆಯ ಅನುಮತಿ ಇಲ್ಲದಿರುವುದು ಹಾಗೂ ಸುಪ್ರೀಂಕೋರ್ಟ್ ತಡೆಯಾಜ್ಞೆಯಿಂದಾಗಿ ವಿಮಾನ ನಿಲ್ದಾಣ ಕಾಮಗಾರಿ ವಿಳಂಬವಾಗಿತ್ತು. ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮೂರು ವಾರಗಳ ಹಿಂದೆಯಷ್ಟೇ ತಡೆಯಾಜ್ಞೆ ತೆರವಾಗಿದೆ ಎಂದು ನಂಜಯ್ಯನಮಠ ತಿಳಿಸಿದರು.
    1
    *ವಿಜಯಪುರ ವಿಮಾನ ನಿಲ್ದಾಣಕ್ಕೆ ಮುಹೂರ್ತ; 2027ರ ಆರಂಭದಲ್ಲೇ ವಿಮಾನ ಹಾರಾಟಕ್ಕೆ ಸಿದ್ಧತೆ*
*ವಿಜಯಪುರ ವಿಮಾನ ನಿಲ್ದಾಣಕ್ಕೆ ಮುಹೂರ್ತ; 2027ರ ಆರಂಭದಲ್ಲೇ ವಿಮಾನ ಹಾರಾಟಕ್ಕೆ ಸಿದ್ಧತೆ*
ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, 2027ರ ಆರಂಭದಲ್ಲೇ ವಿಮಾನ ಹಾರಾಟ ಆರಂಭಿಸುವ ಪ್ರಯತ್ನ ನಡೆದಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದರು. ವಿಜಯಪುರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದ ಕಾರ್ಯಾರಂಭಕ್ಕೆ ಅಗತ್ಯವಿರುವ ಕೇಂದ್ರ ಪರಿಸರ ಇಲಾಖೆಯ ಅನುಮತಿಗಾಗಿ ಕೋರಲಾಗಿದೆ. ಸದ್ಯ ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಅನುಮತಿ ಪಡೆಯಲು ಕೊಂಚ ವಿಳಂಬವಾಗಬಹುದು. ಆದರೆ ಶೀಘ್ರದಲ್ಲೇ ಅನುಮತಿ ದೊರೆಯುವ ವಿಶ್ವಾಸವಿದೆ ಎಂದರು. ವಿಮಾನ ನಿಲ್ದಾಣದಲ್ಲಿ ನೈಟ್‌ ಲ್ಯಾಂಡಿಂಗ್‌ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೊಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಭೂಸ್ವಾಧೀನ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಹೇಳಿದರು.
ವಿಜಯಪುರ ವಿಮಾನ ನಿಲ್ದಾಣವನ್ನು ಏರ್‌ಬಸ್-320 ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ ₹618.75 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ರಾಜ್ಯ ಸರ್ಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ಕಾಮಗಾರಿಗೆ ಅನುದಾನ ಒದಗಿಸಲಾಗುತ್ತಿದೆ. ಕಾಮಗಾರಿಯ ಮೇಲ್ವಿಚಾರಣೆಗೆ ಕೆಎಸ್‌ಐಐಡಿಸಿಯನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ ಎಂದು ವಿವರಿಸಿದರು. ಲೋಕೋಪ ಯೋಗಿ ಇಲಾಖೆಯಿಂದಲೇ ಕಾಮಗಾರಿ ಅನುಷ್ಠಾನಗೊಳ್ಳುತ್ತಿದ್ದು, ಬೆಂಗಳೂರಿನ ಐಡೆಕ್ ಸಂಸ್ಥೆಯನ್ನು ಕಾಮಗಾರಿ ನಿರ್ವಹಣೆ ಮತ್ತು ಸಲಹೆಗಾರರನ್ನಾಗಿ (PMC) ನೇಮಕ ಮಾಡಲಾಗಿದೆ ಎಂದರು.
ಪರಿಸರ ಇಲಾಖೆಯ ಅನುಮತಿ ಇಲ್ಲದಿರುವುದು ಹಾಗೂ ಸುಪ್ರೀಂಕೋರ್ಟ್ ತಡೆಯಾಜ್ಞೆಯಿಂದಾಗಿ ವಿಮಾನ ನಿಲ್ದಾಣ ಕಾಮಗಾರಿ ವಿಳಂಬವಾಗಿತ್ತು. ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮೂರು ವಾರಗಳ ಹಿಂದೆಯಷ್ಟೇ ತಡೆಯಾಜ್ಞೆ ತೆರವಾಗಿದೆ ಎಂದು ನಂಜಯ್ಯನಮಠ ತಿಳಿಸಿದರು.
    user_Vajramani nasalapure
    Vajramani nasalapure
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    18 hrs ago
  • ದಲಿತರು ಬೇಕಾ?ನಾಗೇಂದ್ರ ಬೇಕಾ? ವಿಪಕ್ಷಗಳ ಪ್ರಶ್ನೆಗೆ ಉತ್ತರವೇ ಸಿಗ್ಲಿಲ್ಲ
    1
    ದಲಿತರು ಬೇಕಾ?ನಾಗೇಂದ್ರ ಬೇಕಾ? ವಿಪಕ್ಷಗಳ ಪ್ರಶ್ನೆಗೆ ಉತ್ತರವೇ ಸಿಗ್ಲಿಲ್ಲ
    user_ತಾಯ್ನಾಡು ನ್ಯೂಸ್ ಕನ್ನಡ
    ತಾಯ್ನಾಡು ನ್ಯೂಸ್ ಕನ್ನಡ
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    20 hrs ago
  • ಈದ್ ಮಿಲಾದ್ ಹಿನ್ನೆಲೆ ಜಮಖಂಡಿಯಲ್ಲಿ ಪೊಲೀಸ್ ಪರೇಡ್ ! ಅಹಿತಕರ ಘಟನೆ ತಡೆಗೆ ಪೊಲೀಸರ ಕಟ್ಟೆಚ್ಚರ ! ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಪಡೆ ಬಲ ಪ್ರದರ್ಶನ ! ಡಿವೈಎಸ್‌ಪಿ ಸಯ್ಯದ ರೋಷನ್ ಜಮೀರ ಮಾರ್ಗದರ್ಶನದಲ್ಲಿ ಪರೇಡ್
    1
    ಈದ್ ಮಿಲಾದ್ ಹಿನ್ನೆಲೆ ಜಮಖಂಡಿಯಲ್ಲಿ ಪೊಲೀಸ್ ಪರೇಡ್ ! ಅಹಿತಕರ ಘಟನೆ ತಡೆಗೆ ಪೊಲೀಸರ ಕಟ್ಟೆಚ್ಚರ ! ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಪಡೆ ಬಲ ಪ್ರದರ್ಶನ ! ಡಿವೈಎಸ್‌ಪಿ ಸಯ್ಯದ ರೋಷನ್ ಜಮೀರ ಮಾರ್ಗದರ್ಶನದಲ್ಲಿ ಪರೇಡ್
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    15 hrs ago
  • ಜೂನಿಯರ್ ರಾಜಕುಮಾರ್ ಪಾತ್ರ ಮಾಡುತ್ತಿರುವ ಸಕಲಕಲಾವಲ್ಲಭ ಪ್ರಶಸ್ತಿ ಪುರಸ್ಕೃತರಾದ ಬಸವರಾಜ್ ಪಟ್ಟಣಶೆಟ್ಟಿ ಅವರ ಕಲೆ ತುಂಬಾ ಅದ್ಭುತವಾದದ್ದು ಜೂನಿಯರ್ ರಾಜಕುಮಾರ್ ಪಾತ್ರ ಮಾಡುತ್ತಿರುವ ಸಕಲಕಲಾವಲ್ಲಭ ಪ್ರಶಸ್ತಿ ಪುರಸ್ಕೃತರಾದ ಬಸವರಾಜ್ ಪಟ್ಟಣಶೆಟ್ಟಿ ಅವರ ಕಲೆ ತುಂಬಾ ಅದ್ಭುತವಾದದ್ದು
    1
    ಜೂನಿಯರ್ ರಾಜಕುಮಾರ್ ಪಾತ್ರ ಮಾಡುತ್ತಿರುವ ಸಕಲಕಲಾವಲ್ಲಭ ಪ್ರಶಸ್ತಿ ಪುರಸ್ಕೃತರಾದ ಬಸವರಾಜ್ ಪಟ್ಟಣಶೆಟ್ಟಿ ಅವರ ಕಲೆ ತುಂಬಾ ಅದ್ಭುತವಾದದ್ದು 
ಜೂನಿಯರ್ ರಾಜಕುಮಾರ್ ಪಾತ್ರ ಮಾಡುತ್ತಿರುವ ಸಕಲಕಲಾವಲ್ಲಭ ಪ್ರಶಸ್ತಿ ಪುರಸ್ಕೃತರಾದ ಬಸವರಾಜ್ ಪಟ್ಟಣಶೆಟ್ಟಿ ಅವರ ಕಲೆ ತುಂಬಾ ಅದ್ಭುತವಾದದ್ದು
    user_SAMATA NEWS KANNADA 1
    SAMATA NEWS KANNADA 1
    Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    19 hrs ago
  • ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ಬ್ಯಾರಿಕೇಡ್ ಮುರಿದು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು.. ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ಬ್ಯಾರಿಕೇಡ್ ಮುರಿದು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು..
    1
    ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ಬ್ಯಾರಿಕೇಡ್ ಮುರಿದು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು.. 
ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ಬ್ಯಾರಿಕೇಡ್ ಮುರಿದು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು..
    user_Ambarish M Hadapad
    Ambarish M Hadapad
    Newspaper advertising department ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    14 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.