Shuru
Apke Nagar Ki App…
ಮಂಗಳೂರು: ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುಸ್ತಕ ಬಿಡುಗಡೆಗೆ ಆಹ್ವಾನ ಮಂಗಳೂರು: ಮಾರ್ಚ್ 27 ಮತ್ತು 28 ರಂದು ನಡೆಯಲಿರುವ ದ.ಕ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃತಿ ಬಿಡುಗಡೆಗೆ ಅವಕಾಶ ಕಲ್ಪಿಸಿದ್ದು ಆಸಕ್ತ ಲೇಖಕರು / ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಮ್ಮೇಳನವು ಸ್ಪರ್ಶಾ ಕಲಾಮಂದಿರ ಬಂಟ್ವಾಳ, ಬಿ.ಸಿ ರೋಡ್ ಇಲ್ಲಿ ನಡೆಯಲಿದ್ದು ಯಾವುದೇ ಪ್ರಕಾರದ ಕನ್ನಡ ಪುಸ್ತಕಗಳ ಬಿಡುಗಡೆಗೆ ಅವಕಾಶವಿದೆ. ಆಸಕ್ತರು ವಿವರಗಳಿಗೆ ಶ್ರೀಮತಿ ಗೀತಾ ಎಸ್. ಕೊಂಕೋಡಿ 9480367856 ಅಥವಾ ಶ್ರೀಮತಿ ರಜನಿ ಚಿಕ್ಕಯ್ಯ ಮಠ 7022183946 ಇವರನ್ನು 25 .2.2026 ರ ಮುಂಚಿತವಾಗಿ ಸಂಪರ್ಕಿಸಬಹುದು ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ: ಶಂಶೀರ್ ಬುಡೋಳಿ
Shamsheer Budoli
ಮಂಗಳೂರು: ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುಸ್ತಕ ಬಿಡುಗಡೆಗೆ ಆಹ್ವಾನ ಮಂಗಳೂರು: ಮಾರ್ಚ್ 27 ಮತ್ತು 28 ರಂದು ನಡೆಯಲಿರುವ ದ.ಕ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃತಿ ಬಿಡುಗಡೆಗೆ ಅವಕಾಶ ಕಲ್ಪಿಸಿದ್ದು ಆಸಕ್ತ ಲೇಖಕರು / ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಮ್ಮೇಳನವು ಸ್ಪರ್ಶಾ ಕಲಾಮಂದಿರ ಬಂಟ್ವಾಳ, ಬಿ.ಸಿ ರೋಡ್ ಇಲ್ಲಿ ನಡೆಯಲಿದ್ದು ಯಾವುದೇ ಪ್ರಕಾರದ ಕನ್ನಡ ಪುಸ್ತಕಗಳ ಬಿಡುಗಡೆಗೆ ಅವಕಾಶವಿದೆ. ಆಸಕ್ತರು ವಿವರಗಳಿಗೆ ಶ್ರೀಮತಿ ಗೀತಾ ಎಸ್. ಕೊಂಕೋಡಿ 9480367856 ಅಥವಾ ಶ್ರೀಮತಿ ರಜನಿ ಚಿಕ್ಕಯ್ಯ ಮಠ 7022183946 ಇವರನ್ನು 25 .2.2026 ರ ಮುಂಚಿತವಾಗಿ ಸಂಪರ್ಕಿಸಬಹುದು ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ: ಶಂಶೀರ್ ಬುಡೋಳಿ
More news from ಕರ್ನಾಟಕ and nearby areas
- ತೀರ್ಥಹಳ್ಳಿ: ಪಟ್ಟಣಕ್ಕೆ ಹತ್ತಿರವಿರುವ ಕುರುವಳ್ಳಿಯ ಪುತ್ತಿಗೆ ಮಠದ ಪಕ್ಕದಲ್ಲಿರುವ ಗೌರಿಶಂಕರ ದೇವಸ್ಥಾನದಲ್ಲಿ ನಿನ್ನೆ ಶಿವರಾತ್ರಿಯ ಪ್ರಯುಕ್ತ ಶಿವನಿಗೆ ಮಹಾಪೂಜೆ ಸಲ್ಲಿಸಲಾಯಿತು.1
- ಕಡೂರು : ಬಹುತೇಕ ಮಾರ್ಚ್ ತಿಂಗಳಲ್ಲಿ ಕಡೂರಿನಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್ ತಿಳಿಸಿದರು. ಪಟ್ಟಣದ ಕನ್ನಡ ಭವನದಲ್ಲಿ ಸಮ್ಮೇಳನದ ಪೂರ್ವಭಾವಿ ಸಿದ್ದತೆಯ ಮೊದಲ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಭೂತಪೂರ್ವ ಯಶಸ್ವಿಗೆ ಒತ್ತುಕೊಡಲಾಗಿದೆ. ಈಗಾಗಲೇ ಸಮ್ಮೇಳನಾಧ್ಯಕ್ಷರ ಆಯ್ಕೆಯ ಕುರಿತು ಜಿಲ್ಲೆಯ ಕಾರ್ಯಕಾರಿಣಿ ಸಭೆಯಲ್ಲಿ ಒಮ್ಮತ ನಿರ್ಣಯದೊಂದಿಗೆ ಆಯ್ಕೆಗೊಳಿಸಲಾಗುತ್ತದೆ. ಸಮ್ಮೇಳನದ ಮಹಾಪೋಷಕರಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಚಿಕ್ಕಮಗಳೂರು, ಹಾಸನ ಕ್ಷೇತ್ರದ ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರುಗಳನ್ನು ಮತ್ತು ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಅವರನ್ನು ಸಮಿತಿಯ ಪೋಷಕರನ್ನಾಗಿ ಆಯ್ಕೆಗೊಳಿಸಲಾಗಿದೆ. ಕ್ಷೇತ್ರದ ಮಾಜಿ ಶಾಸಕರು ಒಳಗೊಂಡAತೆ ವಿವಿಧ ಉಪಸಮಿತಿಗಳಲ್ಲಿ ಪದಾಧಿಕಾರಿಗಳನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಶಾಸಕರ ನೇತೃತ್ವ ಹಾಗೂ ಸ್ವಾಗತಸಮಿತಿ ಅಧ್ಯಕ್ಷರ ಸಮ್ಮುಖದಲ್ಲಿ ಸಿದ್ದತೆ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದರು. ಈ ಬಾರಿಯ ಸಮ್ಮೇಳನದಲ್ಲಿ ಅಂತರಾಷ್ಟಿçÃಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಬಾನುಮುಷ್ತಾಕ್ ಅವರನ್ನು ಆಹ್ವಾನಿಸಲಾಗುತ್ತದೆ. ಶೋಷಿತ ಸಮುದಾಯದ ಜಿಲ್ಲೆಯ ಸೂಕ್ತ ವ್ಯಕ್ತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆಗೊಳಿಸಲು ಪೂರ್ವಭಾವಿ ಸಭೆಯಲ್ಲಿ ಆಶಯವ್ಯಕ್ತಗೊಂಡಿದ್ದು, ಫೆ.22ರಂದು ಎನ್.ಆರ್.ಪುರದಲ್ಲಿ ನಡೆಯುವ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅಂತಿಮವಾಗಿ ಆಯ್ಕೆಗೊಳಿಸಲಾಗುತ್ತದೆ ಎಂದರು. ಸ್ವಾಗತ ಸಮಿತಿಯ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಈ ಹಿಂದೆ ತಾಲ್ಲೂಕಿನ ಚಟ್ನಳ್ಳಿ ಹಾಗೂ ಬೀರೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸಮ್ಮೇಳನವು ಈ ಬಾರಿ ವಿಶೇಷವಾಗಿ ಕಡೂರಿಗೆ 21ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡದ ಕೆಲಸಕ್ಕೆ ಎಲ್ಲರ ವಿಶ್ವಾಸವನ್ನು ಪಡೆದು ಸಮ್ಮೇಳನದ ಯಶಸ್ವಿಗೆ ಒತ್ತುಕೊಡಲಾಗುತ್ತದೆ. ಮುಖ್ಯವಾಗಿ ಸಮ್ಮೇಳನಾಧ್ಯಕ್ಷರನ್ನಾಗಿ ಶೋಷಿತ ಸಮುದಾಯಕ್ಕೆ ಪ್ರಾತಿನಿಧ್ಯ ದೊರಕಬೇಕೆಂಬುದು ಸಮಿತಿಯ ಒಕ್ಕೂರಲ ಅಭಿಪ್ರಾಯವಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸುವ ಮೂಲಕ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸಿ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲು ತಿರ್ಮಾನಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷರಾದ ಚಿಕ್ಕನಲ್ಲೂರು ಪರಮೇಶ್, ರವಿದಳವಾಯಿ, ಯರದಕೆರೆ ರಾಜಪ್ಪ, ಸಿಂಗಟಗೆರೆ ಸಿದ್ದಪ್ಪ, ಸೀತಾಲಕ್ಷಿö್ಮÃ, ಟಿ.ಆರ್. ರೇಣುಕಯ್ಯ, ಗೋವಿಂದಸ್ವಾಮಿ, ಕೆ.ಜಿ. ವಸಂತಕುಮಾರ್, ಪುರಸಭೆ ಮಾಜಿ ಸದಸ್ಯ ಗೋವಿಂದರಾಜು, ಗೆದ್ಲೇಹಳ್ಳಿ ಜಗದೀಶ್, ಎನ್.ಎಚ್. ನಂಜುAಡಸ್ವಾಮಿ, ಷಣ್ಮುಖಪ್ಪ, ನಾಗರಾಜ್, ಆರ್.ಜಿ. ಕೃಷ್ಣಸ್ವಾಮಿ, ಹಿರೇನಲ್ಲೂರು ಶ್ರೀನಿವಾಸ್, ಶಿವಲಿಂಗಸ್ವಾಮಿ ಮತ್ತಿತರಿದ್ದರು.4
- ಅರಕಲಗೂಡು ತಾಲೂಕು ಕೊಡಕಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀ ದೇವಿ, ಶ್ರೀ ಮಾರಮ್ಮ ಮತ್ತು ಶ್ರೀ ಗ್ರಾಮ ದೇವತೆ, ದೇವರುಗಳ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನಗಳ ಉದ್ಘಾಟನಾ ಸಮಾರಂಭ ಫೆಬ್ರವರಿ 19ರಿಂದ 27ರ ತನಕ ಜರುಗಲಿದೆ ಎಂದು ಗ್ರಾಮದ ಮುಖಂಡ ಕೊಡಕಹಳ್ಳಿ ಅಶೋಕ್ ತಿಳಿಸಿದರು. ನೂತನವಾಗಿ ನಿರ್ಮಾಣಗೊಂಡಿರುವ ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕಾರ್ಯಗಳು, ಉತ್ಸವ ಅದ್ದೂರಿಯಾಗಿ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಎ. ಮಂಜು ಸೇರಿದಂತೆ ವಿವಿಧ ಗಣ್ಯರು, ಮಠಾಧೀಶರು, ಮುಖಂಡರು ಭಾಗವಹಿಸುವರು. ಈ ದೇವರ ಕಾರ್ಯದಲ್ಲಿ ಕೊಡಕಹಳ್ಳಿ ಸೇರಿದಂತೆ ಸುತ್ತಾಮುತ್ತಲ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು. #templeopening #Kodakahalli #villegevibes❤️ #Arkalgud #temple #News5Kannada1
- *ಭಾರತ ನಲ್ಲಿ ವೈರಲ್*1
- ಆಶೀರ್ವಾದ್ ಟ್ರೇಡರ್ಸ್ ಗೋಡನ್ ಮೇಲೆ ಕೃಷಿ ಇಲಾಖೆಯ ಅಧಿಕಾರಿ ಅನಿಲ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ ಜಂಟಿ ಕಾರ್ಯಾಚರಣೆ ಸುಮಾರು 18 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಯೂರಿಯಾ ವಶ ಯೂರಿಯಾ ಅಕ್ರಮ ದಾಸ್ತಾನು ಗೋದಾಮುಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳ ದಾಳಿ...18 ಲಕ್ಷ ಮೌಲ್ಯದ ಗೊಬ್ಬರ ವಶ..1296 ಮೂಟೆ ಯೂರಿಯಾ ವಶ... ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದ ಗೋದಾಮುಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 18 ಲಕ್ಷ ಮೌಲ್ಯದ 1296 ಮೂಟೆ ಯೂರಿಯಾ ವಶಪಡಿಸಿಕೊಂಡಿದ್ದಾರೆ.ಹುಣಸೂರಿನ ಸಾಲುಮರದ ತಿಮ್ಮಕ್ಕ ಉದ್ಯಾನವನದ ಮುಂಭಾಗವಿರುವ ಶೆಡ್ ಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮಾಹಿತಿ ಅರಿತು ದಾಳಿ ನಡೆಸಿದ್ದಾರೆ.ಸರ್ಕಾರದಿಂದ ಬಿಡುಗಡೆಯಾಗಿ ರೈತರಿಗೆ ಸೇರಬೇಕಿದ್ದ ಗೊಬ್ಬರ ಖದೀಮ ದಂಧೆಕೋರರಿಂದ ವಶಪಡಿಸಿಕೊಂಡಿದ್ದಾರೆ.ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಸ್ಥಳದಲ್ಲಿದ್ದ ವ್ಯಕ್ತಿಗಳು ಪರಾರಿಯಾಗಿದ್ದಾರೆ.ಮೂರು ಲಾರಿಗಳನ್ನ ವಶಪಡಿಸಿಕೊಳ್ಳಲಾಗಿದೆ.ಖಾಸಗಿ ಕಂಪನಿ ಹೆಸರಿನ ಚೀಲಗಳಿಗೆ ಬದಲಾಯಿಸಿ ಮಾರಾಟ ಮಾಡುವ ದಂಧೆ ಎಂದು ಶಂಕಿಸಲಾಗಿದೆ.ಚೀಲ ಬದಲಿಸಿವಕೇರಳಾ ರಾಜ್ಯಕ್ಕೆ ಸಾಗಿಸುವ ಶಂಕೆ ವ್ಯಕ್ತವಾಗಿದೆ.ಸಹಾಯಕ ಕೃಷಿ ಅಧಿಕಾರಿ ಅನಿಲ್ ಹಾಗೂ ಕೃಷಿ ಅಧಿಕಾರಿ ಜಯಕುಮಾರ್ ರವರು ಪೊಲೀಸರ ನೆರವಿನಿಂದ ದಾಳಿ ನಡೆಸಿದ್ದಾರೆ.ಖಾಸಗಿ ಸಂಸ್ಥೆಯ ಬ್ರಾಂಡ್ ಇರುವ ಚೀಲಗಳು ಸ್ಥಳದಲ್ಲಿ ಪತ್ತೆಯಾಗಿದೆ.ಗೊಬ್ಬರ ಕಾಳಸಂತೆ ರಾಕೆಟ್ ಹುಣಸೂರಿನಲ್ಲಿ ಬೆಳಕಿಗೆ ಬಂದಿದೆ.ರಾಕೆಟ್ ಹಿಂದೆ ಪ್ರಭಾವಿ ಕೈಗಳ ಬೆಂಬಲ ಇರುವ ಶಂಕೆ ಇದೆ.ಇದರ ಹಿಂದಿನ ಜಾಲ ಪತ್ತೆ ಹಚ್ಚಲು ಕೃಷಿ ಇಲಾಖೆ ಅಧಿಕಾರಿಗಳು ಒತ್ತು ನೀಡಬೇಕಿದೆ.ಬಡ ರೈತರಿಗೆ ಸೇರಬೇಕಾದ ಗೊಬ್ಬರ ಕಾಳಸಂತೆಕೋರರ ಪಾಲಾಗಿರುವ ಬಗ್ಗೆ ತೆನಿಖೆ ನಡೆಸಬೇಕಿದೆ.ಹುಣಸೂರು ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ...2
- ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ?ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ? ಎಂತಾ ಕಾಲವಯ್ಯ ?1
- ಸಮರ್ಥ ಶಿವಯೋಗಿ ಕಾಗಿನಲ್ಲಿ ಎಂಬ ಆರು ವರ್ಷದ ಬಾಲಕ ಗುತ್ತಲ ಪಟ್ಟಣದಿಂದ ಕುರವತ್ತಿ ಬಸವೇಶ್ವರ ರಥೋತ್ಸವಕ್ಕೆ ಬರಿಗಾಲಲ್ಲಿ ಪಾದಯಾತ್ರೆಯನ್ನು 2. ತಾಸು 30 ನಿಮಿಷ್ಯಕ್ಕೆ ಕುರವತ್ತಿ ತಲುಪಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.4
- ತೀರ್ಥಹಳ್ಳಿ: ತಾಲೂಕಿನ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಬೆಳಿಗ್ಗೆ ಅಪಘಾತವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿರುವುದಿಲ್ಲ ಎಂಬುದು ತಿಳಿದು ಬಂದಿದೆ.1