ಗದಗ ಜಿಲ್ಲೆಯ ರೋಣ ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಸಂವಿಧಾನವನ್ನು ಗೌರವಿಸುವುದು ಅದರ ಅಡಿಯಲ್ಲಿ ನಾವೆಲ್ಲ ಬದುಕುವುದು ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರೋಣ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ ಹೇಳಿದರು, ಅವರು ರೋಣ ಪಟ್ಟಣದ ಗುರುಭವಣದಲ್ಲಿ ತಾಲೂಕು ಆಡಳಿತದ ವತಿಯಿಂದ ಜರುಗಿದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಸಿಗೆ ನೀರು ಹಾಯಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಈಗಾಗಲೇ ಸರ್ಕಾರದ ವತಿಯಿಂದ ಯುವ ಜನತೆ ಮತ್ತು ನಾಗರಿಕರಲ್ಲಿ ಮತದಾನದ ಹಕ್ಕು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ, ನಮ್ಮ ಭಾರತ ಸಂವಿಧಾನದಿಂದ ನಾವೆಲ್ಲರೂ ಸ್ವತಂತ್ರವಾಗಿ ಬದುಕುತ್ತಿದ್ದೇವೆ ಅದರಿಂದ ನಮಗೆ ನಮ್ಮದೇ ಆದ ಹಕ್ಕುಗಳು ದೊರೆತಿವೆ , ನಮ್ಮ ಭಾರತ ಸಂವಿಧಾನವು ಅತ್ಯಂತ ಶ್ರೇಷ್ಠವಾಗಿದ್ದು ನಾವೆಲ್ಲರೂ ಸಂವಿಧಾನವನ್ನು ಗೌರವಿಸಬೇಕು, ಪ್ರಜಾಪ್ರಭುತ್ವ ದಿನಾಚರಣೆಯು ಸರ್ಕಾರಗಳು ಹಾಗೂ ನಾಗರಿಕರು ಜವಾಬ್ದಾರಿಯುತ ಆಡಳಿತಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಇದು ಸಹಕಾರಿಯಾಗಿದೆ ಎಂದರು, ಇದೇ ಸಂದರ್ಭದಲ್ಲಿ ತಹಸೀಲ್ದಾರ್ ನಾಗರಾಜ್ ಕೆ ಮಾತನಾಡಿ ಈ ಕಾರ್ಯಕ್ರಮವು ಯುವ ಸಮುದಾಯಕ್ಕೆ ಪ್ರಜಾಪ್ರಭುತ್ವದ ಮಹತ್ವ, ಸಂವಿಧಾನ ಮೌಲ್ಯ ಮತ್ತು ನಾಗರಿಕರ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ತುಂಬಾ ಸಹಕಾರಿಯಾಗಿದ್ದು ಯುವ ಜನತೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದ ಬಗ್ಗೆ ಹೆಚ್ಚು ತಿಳಿದುಕೊಂಡರೆ ತಮ್ಮ ಶೈಕ್ಷಣಿಕ ಜೀವನ ಮತ್ತು ಮುಂದಿನ ವೃತ್ತಿ ಜೀವನಕ್ಕೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ ಎಂದರು, ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕರು ಹಾಗೂ ವಕೀಲರು ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ ಆಲೂರ, ಪುರಸಭೆ ಮುಖ್ಯ ಅಧಿಕಾರಿ ರಮೇಶ್ ಹೊಸಮನಿ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಹಣಸಿ, ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ, ಪಶು ಸಂಗೋಪನ ಇಲಾಖೆ, ಕೃಷಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಅರಣ್ಯ ಇಲಾಖೆ,ಪೊಲೀಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ದಲಿತ ಮುಖಂಡರು, ಸಾರ್ವಜನಿಕರು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಹಾರಿದ್ದರು.
ಗದಗ ಜಿಲ್ಲೆಯ ರೋಣ ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಸಂವಿಧಾನವನ್ನು ಗೌರವಿಸುವುದು ಅದರ ಅಡಿಯಲ್ಲಿ ನಾವೆಲ್ಲ ಬದುಕುವುದು ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರೋಣ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ ಹೇಳಿದರು, ಅವರು ರೋಣ ಪಟ್ಟಣದ ಗುರುಭವಣದಲ್ಲಿ ತಾಲೂಕು ಆಡಳಿತದ ವತಿಯಿಂದ ಜರುಗಿದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಸಿಗೆ ನೀರು ಹಾಯಿಸಿ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಈಗಾಗಲೇ ಸರ್ಕಾರದ ವತಿಯಿಂದ ಯುವ ಜನತೆ ಮತ್ತು ನಾಗರಿಕರಲ್ಲಿ ಮತದಾನದ ಹಕ್ಕು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ, ನಮ್ಮ ಭಾರತ ಸಂವಿಧಾನದಿಂದ ನಾವೆಲ್ಲರೂ ಸ್ವತಂತ್ರವಾಗಿ ಬದುಕುತ್ತಿದ್ದೇವೆ ಅದರಿಂದ ನಮಗೆ ನಮ್ಮದೇ ಆದ ಹಕ್ಕುಗಳು ದೊರೆತಿವೆ , ನಮ್ಮ ಭಾರತ ಸಂವಿಧಾನವು ಅತ್ಯಂತ ಶ್ರೇಷ್ಠವಾಗಿದ್ದು ನಾವೆಲ್ಲರೂ ಸಂವಿಧಾನವನ್ನು ಗೌರವಿಸಬೇಕು, ಪ್ರಜಾಪ್ರಭುತ್ವ ದಿನಾಚರಣೆಯು ಸರ್ಕಾರಗಳು ಹಾಗೂ ನಾಗರಿಕರು ಜವಾಬ್ದಾರಿಯುತ ಆಡಳಿತಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ
ಮೂಡಿಸಲು ಇದು ಸಹಕಾರಿಯಾಗಿದೆ ಎಂದರು, ಇದೇ ಸಂದರ್ಭದಲ್ಲಿ ತಹಸೀಲ್ದಾರ್ ನಾಗರಾಜ್ ಕೆ ಮಾತನಾಡಿ ಈ ಕಾರ್ಯಕ್ರಮವು ಯುವ ಸಮುದಾಯಕ್ಕೆ ಪ್ರಜಾಪ್ರಭುತ್ವದ ಮಹತ್ವ, ಸಂವಿಧಾನ ಮೌಲ್ಯ ಮತ್ತು ನಾಗರಿಕರ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ತುಂಬಾ ಸಹಕಾರಿಯಾಗಿದ್ದು ಯುವ ಜನತೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದ ಬಗ್ಗೆ ಹೆಚ್ಚು ತಿಳಿದುಕೊಂಡರೆ ತಮ್ಮ ಶೈಕ್ಷಣಿಕ ಜೀವನ ಮತ್ತು ಮುಂದಿನ ವೃತ್ತಿ ಜೀವನಕ್ಕೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ ಎಂದರು, ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕರು ಹಾಗೂ ವಕೀಲರು
ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ ಆಲೂರ, ಪುರಸಭೆ ಮುಖ್ಯ ಅಧಿಕಾರಿ ರಮೇಶ್ ಹೊಸಮನಿ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಹಣಸಿ, ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ, ಪಶು ಸಂಗೋಪನ ಇಲಾಖೆ, ಕೃಷಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಅರಣ್ಯ ಇಲಾಖೆ,ಪೊಲೀಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ದಲಿತ ಮುಖಂಡರು, ಸಾರ್ವಜನಿಕರು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಹಾರಿದ್ದರು.
- ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ. ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ. ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ. ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ. ಗದಗ : ಪವಿತ್ರ ಶ್ರಾವಣ ಮಾಸದ ನಿಮಿತ್ಯ ತಿಂಗಳ ಪರ್ಯಂತ ಆರಂಭವಾದ ಪುರಾಣ ಪ್ರವಚನ,ಭಜನೆಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆಯುವುದು ಸರ್ವೇ ಸಾಮಾನ್ಯವಾಗಿ ನಡೆಯುತ್ತಿರುವುದು ಕಂಡು ಬರುತ್ತವೆ ಅದರಂತೆ ಶ್ರೀ ಮಾರುತೇಶ್ವರ ಭಜನಾ ಮುಕ್ತಾಯದ ಮಹಾ ಮಂಗಲ ನಿಮಿತ್ಯವಾಗಿ ಭರ್ಜರಿ ತಯಾರಿ ನಡೆಸಿರುವ ದೃಶ್ಯಗಳು ನೋಡುಗರ ಕಣ್ಮಣ ಸೆಳೆಯಿತು. ತಾಲೂಕಿನ ಕದಡಿ ಗ್ರಾಮದ ಶ್ರೀ ಮಾರುತೇಶ್ವರ ಭಜನಾ ಮುಕ್ತಾಯದ ಅಂಗವಾಗಿ ಮಹಾ ಮಂಗಲವು ಬುಧವಾರ ಜರುಗಿವುದರ ಪೂರ್ವದಲ್ಲಿ ಮಂಗಳವಾರ ರಾತ್ರಿ ಸಂಪೂರ್ಣ ಸಪ್ತಾಹ ಕಾರ್ಯಕ್ರಮ ನೆರವೇರಸಲಾಗುವುದು,ಅದರ ಪ್ರಯುಕ್ತ ಗ್ರಾಮದ ಶ್ರೀ ಮಾರುತಿ ಮಂದಿರವನ್ನೊಳಗೊಂಡು ಗ್ರಾಮ ಪಂಚಾಯತ ಮುಂದಿನ ಆವರಣದಲ್ಲಿ ಮಹಿಳೆಯರು ಸೇರಿ ರಂಗೋಲಿ ಬಿಡಿಸುತ್ತಿರುವುದು ಹಾಗೂ ದಾರಿ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಅಳವಡಿಸಿರಿ ಶೃಂಗರಿಸಿರುವುದು ಬಹು ಸುಂದರವಾಗಿ ಕಂಗೊಳಿಸುತ್ತಿರುವುದು. ನೋಡುಗರ ಕಣ್ಮಣಿ ಸೆಳೆಯಿತು. ಸಂಘದ ಸಮಿತ್ರರು ಮಾಸ ಪರ್ಯಂತ ಗ್ರಾಮದಲ್ಲಿ ಭಜನೆ ಮಾಡುತ್ತಾ ಭಕ್ತಿಯ ಪದಗಳನ್ನು ಪಠಿಸುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಗ್ರಾಮದ ಅದಿದೇವ ದೇವತೆಗಳಿಗೆ ಕಾಯಿ ಕರ್ಪುರ ದೀಪಗಳ ಬೆಳಗುತ್ತಾ ಭಕ್ತಿಯ ಗಾನ ಸುಧೆಗಳನ್ನು ಪ್ರತಿ ದಿನ ಬೆಳಗಿನ ಜಾವ ಮೊಳಗಿಸುತ್ತಿರುವುದು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿದ್ದವು.. ಶ್ರಾವಣ ಮಾಸದ ಕೊನೆಯ ದಿವಸ ಭಜನಾ ಮುಕ್ತಾಯದ ಹಿಂದಿನ ದಿನ ಭರ್ಜರಿ ತಯಾರಿ ನಡೆಸಿರುವುದು ಗ್ರಾಮದ ತುಂಬೆಲ್ಲಾ ಹಬ್ಬದ ಸಂಭ್ರಮದ ವಾತಾವರಣ ಆವರಿಸಿತ್ತು...2
- *ಭಕ್ತರ ಇಷ್ಟಾರ್ಥ ಈಡೇರಿಸುವ ದ್ಯಾಮವ್ವನ ಮಗನಾಗಿ ಮೂಡಿಬಂದ ಗೌರಿ-ಗಣೇಶ - ತೆಗ್ಗಿನ ಓಣಿಯಲ್ಲಿ ಭಕ್ತಿ ಸಾಗರ!* ಕುಷ್ಟಗಿ:* ಪಟ್ಟಣದಲ್ಲಿ ಈ ಬಾರಿಯ ಗಣೇಶೋತ್ಸವದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ತೆಗ್ಗಿನ ಓಣಿಯ ಸರ್ವ ಧರ್ಮಗಳ ಗೆಳೆಯರ ಬಳಗದ ವಿಶೇಷ ಗಣೇಶ ಮೂರ್ತಿ. ಪ್ರತಿ ವರ್ಷ ಒಂದೊಂದು ವಿಭಿನ್ನ ಪರಿಕಲ್ಪನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವ ಈ ಬಳಗವು, ಈ ಬಾರಿ ಅತ್ಯಾಧುನಿಕ *ಎಐ ತಂತ್ರಜ್ಞಾನದ* ನೆರವಿನೊಂದಿಗೆ ಅತ್ಯಂತ ಅರ್ಥಗರ್ಭಿತವಾದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಇಡೀ ಕುಷ್ಟಗಿಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. *ಪುರಾಣದೊಂದಿಗೆ ಗ್ರಾಮ ದೇವತೆಯ ಸಮಾಗಮ: ಲೋಕ ಕಲ್ಯಾಣಕ್ಕಾಗಿ ಪಾರ್ವತಿಯು ತನ್ನ ಹಣೆಯ ಬೆವರಿನ ಮಣ್ಣಿನಿಂದ ವರಪುತ್ರ ಗಣೇಶನನ್ನು ಸೃಷ್ಟಿಸಿದ ಪೌರಾಣಿಕ ಕಥೆಯನ್ನೇ ಇಲ್ಲಿ ಮರುಸೃಷ್ಟಿ ಮಾಡಲಾಗಿದೆ. ಕುಷ್ಟಗಿಯ ಜನರ ಪಾಲಿಗೆ ಗ್ರಾಮ ದೇವತೆ ಶ್ರೀ ದ್ಯಾಮಾಂಬಿಕಾ ದೇವಿಯೇ ಸಾಕ್ಷಾತ್ ಪಾರ್ವತಿ. ಆ ದ್ಯಾಮವ್ವನೇ ತನ್ನ ಮಗನಾದ ಗಣೇಶನನ್ನು ಭೂಮಿಗೆ ಕಳುಹಿಸಿದ್ದಾಳೆ ಎಂಬ ಭಾವದಲ್ಲಿ ಈ ಅಲಂಕಾರ ಮೂಡಿಬಂದಿದೆ. ಹಿನ್ನೆಲೆಯಲ್ಲಿ ಕೈಲಾಸವಾಸಿ ಶಿವ, ತಾಯಿ ಪಾರ್ವತಿ (ದ್ಯಾಮವ್ವ) ಮತ್ತು ಮುಂದೆ ಪುಟ್ಟ ಬಾಲ ಗಣೇಶ ಕುಳಿತಿರುವ ದೃಶ್ಯವು ನೋಡುಗರಿಗೆ ದೈವತ್ವದ ಅನುಭೂತಿಯನ್ನು ನೀಡುತ್ತಿದೆ. ಕೇವಲ ಮಣ್ಣಿನ ಮೂರ್ತಿಯಲ್ಲ, ಇದೊಂದು ಜೀವಂತ ಪುರಾಣ ದರ್ಶನವೇ ಸರಿ. ಈ ಅರ್ಥಪೂರ್ಣ ಅಲಂಕಾರವು ಮಾಜಿ ಪುರಸಭೆ ಅಧ್ಯಕ್ಷ *ಮಹಾಂತೇಶ್ ಕಲಬಾವಿ* ಸೇರಿದಂತೆ ತೆಗ್ಗಿನ ಓಣಿಯ ಯುವ ಬಳಗದ ಅವಿರತ ಪರಿಶ್ರಮದ ಫಲವಾಗಿದೆ. ವಿಶೇಷವೆಂದರೆ ಹಿಂದೂ-ಮುಸ್ಲಿಂ ಯುವಕರು ಜಾತಿ ಬೇಧ ಮರೆತು ಒಂದಾಗಿ ಈ ಗಣೇಶನನ್ನು ಪ್ರತಿಷ್ಠಾಪಿಸಿರುವುದು ನಿಜವಾದ ಸರ್ವ ಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ. ತೆಗ್ಗಿನ ಓಣಿಯ ಯುವಕರ ಈ ಸೃಜನಶೀಲತೆ, ಧಾರ್ಮಿಕ ಚಿಂತನೆ ಮತ್ತು ತಂತ್ರಜ್ಞಾನದ ಬಳಕೆಯು ಇತರ ಮಂಡಳಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.2
- ಅಲಂಪೂರ್ ಪೇಟೆಯಲ್ಲಿ ಗಣೇಶನ ಪ್ರತಿಷ್ಠಾಪನೆ ; ಪ್ರಸಾದಕ್ಕೆ ಚಾಲನೆ ನೀಡಿದ ಮುಖಂಡರು ಇಲಕಲ್ ನಗರದ ಅಲಂಪೂರ ಪೇಟೆಯಲ್ಲಿ ಓಣಿಯ ಗುರುಹಿರಿಯರು ಯುವ ಮಿತ್ರರಿಂದ ಪ್ರತಿಷ್ಠಾಪನೆಗೊಂಡಿರುವ ಗಣೇಶಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರದ ಹಿರಿಯ ಮುಖಂಡರಾದ ವೆಂಕಟೇಶ ಸಾಕಾ, ಮಂಜುನಾಥ ಹೊಸಮನಿ, ನಗರ ಪಿಎಸ್ಐ ನಾಗರಾಜ ಗಡಾದ, ಹನುಮಂತ ತುಂಬದ, ಅಶೋಕ ಪೂಜಾರಿ ಹಾಗೂ ಅನಂಪುರ್ಪೇಟೆಯ ಯುವ ಮಿತ್ರರು ಉಪಸ್ಥಿತರಿದ್ದರು4
- ಬಾಗಲಕೋಟೆ: ಸಾಲ ಸೌಲಭ್ಯಕ್ಕಾಗಿ ಕುರಿಗಳೊಂದಿಗೆ ಬ್ಯಾಂಕ್ ಎದುರು ಪ್ರತಿಭಟನೆ1
- ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಡಿ ಶೀಘ್ರವೇ 9000 ಎಕರೆ ಜಮೀನಿಗೆ ನೀರು: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಕೊಪ್ಪಳ : ತಾಲೂಕಿನ ಬಹುನಿರೀಕ್ಷಿತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಒಟ್ಟು 9000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು. ನಗರದ ಎಸ್.ಎಫ್. ಶಾಲೆಯ ಎದುರುಗಡೆಯಿರುವ ತಮ್ಮ ಕಾರ್ಯಾಲಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಳವಂಡಿ ಬೇಟಗೇರಿ ಏತ ನೀರಾವರಿ ಯೋಜನೆಯು ಕೊಪ್ಪಳ ತಾಲ್ಲೂಕಿನ ಹನಕುಂಟಿ ಗ್ರಾಮದಿಂದ 2 ಕಿ.ಮೀ. ಹತ್ತಿರದಲ್ಲಿರುತ್ತದೆ. ಸದರಿ ಯೋಜನೆಗೆ ಮೂಲತಃ ಕೃಷ್ಣ ಕೊಳ್ಳದ ವ್ಯಾಪ್ತಿಯಲ್ಲಿ ಬರುವ ತುಂಗಭದ್ರ ನದಿಯಿಂದ 0.50 ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಈ ಯೋಜನೆಯಿಂದ ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಒಟ್ಟು 9000 ಏಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿರುತ್ತದೆ. ಈ ಯೋಜನೆಗೆ ಈ ಹಿಂದೆ 87.10 ಕೋಟಿಗಳಿಗೆ ಡಿ.ಪಿ.ಆರ್ ಅನ್ನು ಸರ್ಕಾರಕ್ಕೆ ಸಲ್ಲಸಿ ದಿನಾಂಕ: 30.12.2014 ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ ಎಂದರು. ಜಾಕ್‌ವೆಲ್, ಇನ್‌ಟೇಕ್ ಕಾಲುವೆ. ರೈಸಿಂಗ್ ಮೇನ್, ಡೆಲಿವರಿ ಚೇಂಬರ್ ಹಾಗೂ ಟ್ರಾನ್ಸ್‌ಮಿಷನ್ ಲೈನ್, 33 ಕೆವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗಳನ್ನು ಗುತ್ತಿಗೆದಾರರಾದ ಜಿ.ಶಂಕರ್ ರವರಿಗೆ ಟೆಂಡರ್ ಆಧಾರದ ಮೇಲೆ 61.30 ಕೋಟಿಗಳಿಗೆ 21.02.2016 ರಂದು ವಹಿಸಲಾಗಿತ್ತು. ಈ ಯೋಜನೆಯಡಿ ಜಾಕ್‌ವೆಲ್, ಇನ್‌ಟೀಕ್ ಕಾಲುವೆ ಉದ್ದ 1.02 ಕಿ.ಮೀ. 16.50ಕಿ.ಮೀ ಉದ್ದ ಎಂಎಸ್ ರೈಸಿಂಗ್ ಮೇನ್, 1760 ಹೆಚ್.ಪಿ ಸಾಮರ್ಥ್ಯದ 2+1 ಪಂಪ್ ಮತ್ತು ಮೋಟಾರಗಳು, 2 ಡೆಲವರಿ ಚೇಂಬರ್‌ಗಳು. ಜಾಕ್‌ವೆಲ್ ಪಕ್ಕದಲ್ಲಿ 33/6.6 ಕೆವಿ ಸಬ್ ಸ್ಟೇಷನ್, 6.10 ಕಿ.ಮೀ ಉದ್ದ ಟ್ರಾನ್ಸ್‌ಮಿಷನ್ ಲೈನ್ ಹಾಗೂ ಟರ್ಮಿನಲ್ ಬೇ ಸಿರ್ಮಿಸಲಾಗಿರುತ್ತದೆ. ದಿನಾಂಕ 10.09.2026 ರಂದು ಸಬ್ ಸ್ಟೇಷನ್ ಚಾರ್ಜ್ ಮಾಡಲಾಗಿರುತ್ತದೆ ಎಂದು ಹೇಳಿದರು. ಪ್ರತಿ ಪಂಪ್‌ನಿಂದ 28.28 ಕ್ಯೂಸೆಕ್ಸ್ ರಂತೆ ಒಟ್ಟು 56.56 ಕ್ಯೂಸೆಕ್ಸ್ ನೀರನ್ನು ಹರಿಸಲಾಗುವುದು ಹಾಗೂ ಜಲಾಶಯದ ನೀರಿನ ಮಟ್ಟ 1605.00 ಅಡಿ (ಜಲಾಶಯದ ಸಾಮರ್ಥ್ಯ 28.70 ಟಿ.ಎಂ.ಸಿ ವರೆಗು) ತಲುಪುವವರೆಗೆ ಲಭ್ಯವಿರುವ ನೀರನ್ನು ಪಡೆಯಬಹುದು. ಈ ಯೋಜನೆಯ ಹೆಚ್ಚುವರಿ 3000 ಎಕರೆ ಕ್ಷೇತ್ರದ ನೀರಾವರಿ ಕಲ್ಪಿಸುವ ಕಾಮಗಾರಿಯನ್ನು ಎ ವಿಆರ್ ಕನ್ಸಟ್ರಕ್ಷನ್ಸ್ ಇವರಿಗೆ ರೂ:4.59 ಕೋಟಿಗಳಿಗೆ ದಿನಾಂಕ: 30/03/2021 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಿದ್ದು, ಈ ಕಾಮಗಾರಿಯಲ್ಲಿ ರೈಸಿಂಗ್ ಮೇನ್ ಪೂರ್ಣಗೊಂಡಿದೆ ಮತ್ತು ಪಂಪುಗಳನ್ನು ಅಳವಡಿಸುವುದು ಹಾಗೂ ಸಬ್‌ಸ್ಟೇಷನ್ ಕಾಮಗಾರಿಗಳು ಬಾಕಿ ಉಳಿದಿರುತ್ತದೆ ಎಂದರು. ಪ್ರಸ್ತುತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಪರಿಷ್ಕೃತ ಡಿ.ಪಿ.ಆರ್ ಅನ್ನು ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ 105ನೇ ಸಭೆಯಲ್ಲಿ ಮಂಡಿಸಿದ್ದು. ರೂ.211.00 ಕೋಟಿಗಳಿಗೆ ಅನುಮೋದನೆ ನೀಡಿರುತ್ತಾರೆ. ಯೋಜನೆಯಡಿ 6000 ಎಕರೆ ಜಮೀನುಗಳಗೆ ಈಗಾಗಲೇ ಒಟ್ಟಾರೆ 39.78 ಕಿ.ಮೀ ಉದ್ದದ ಮುಖ್ಯ ಕಾಲುವೆ ಹಾಗೂ ಉಪ ಕಾಲುವೆಗಳ ನಿರ್ಮಾಣ ಪೂರ್ಣಗೊಂಡಿರುತ್ತದೆ ಎಂದು ತಿಳಿಸಿದರು. 3000 ಏಕರೆ ಜಮೀನುಗಳಗೆ ಮಧ್ಯ ಪ್ರದೇಶ ಮಾದರಿಯ ಮುಖ್ಯ ಪೈಪ್‌ಲೈನ್ ಹಾಗೂ ವಿತರಣಾ ಕಾಲುವೆ ಪೈಪ್‌ಲೈನ್ ಕಾಮಗಾರಿಯನ್ನು ರೂ. 11.50 ಕೋಟಿಗಳಿಗೆ ಟೆಂಡರ್ ಕರೆಯಲಾಗಿದ್ದು, ಚಿದು ಇನ್ಫ್ರಾಟೆಕ್ ಪ್ರೈ.ಲಿ (CHIDU INFRATECH PRIVATE LIMITED) ಇವರಿಗೆ ರೂ:11.80 ಕೋಟಿಗಳಿಗೆ ದಿನಾಂಕ: 22/08/2025 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಲಾಗಿರುತ್ತದೆ. ಈ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ ಎಂದರು. ಡೆಲಿವರಿ ಚೇಂಬರ್ ನಿಂದ ಬ್ಲಾಕ್-1 ಗೆ ಹೆ.ಡಿ.ಪಿ.ಇ ಪೈಪ್ (Dia-355 to 125) ನ ಒಟ್ಟು ಉದ್ದ 8.7 ಕಿ.ಮೀ, ಪೈಪ್ ನೆಟ್‌ವರ್ಕ್ ನಿಂದ 1243 ಎಕರೆ ಬ್ಲಾಕ್-2 ಗೆ ಎಂಎಸ್ ಪೈಪ್ (Dia-380, 360, 330) ಹಾಗೂ ಹೆ.ಡಿ.ಪಿ.ಇ ಪೈಪ್ (Dia-355 to 125)ನ ಒಟ್ಟು ಉದ್ದ 16.82 ಕಿ.ಮೀ ಪೈಪ್ ನೆಟ್‌ವರ್ಕ್ ನಿಂದ 1757 ಎಕರೆ ಒಟ್ಟಾರೆ 3000 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಸಲು ಯೋಜಿಸಲಾಗಿರುತ್ತದೆ. ಪ್ರತಿ 20 ಹೆಕ್ಟೇರ್ ಜಮೀನುಗಳಗೆ ಪೈಪ್ ಗಳಂದ ಚೆಕ್ ಓಟ್ ಲೆಟ್ ನಿಂದಾ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು. *ಒಟ್ಟು 9 ಹಳ್ಳಿಗಳಿಗೆ ಅನುಕೂಲ:* ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಿಂದ ಕೊಪ್ಪಳ ತಾಲೂಕಿನ ಮೈನಾಳ್ಳಿ, ಹಂದ್ರಾಳ, ಅಳವಂಡಿ, ಕವಲೂರು, ಹಿರೇಸಿಂದೋಗಿ, ಬಿಕ್ಕನಹಳ್ಳಿ, ಬೆಟ್ಟಗೇರಿ ಹಾಗೂ ಕುಕನೂರು ತಾಲೂಕಿನ ತಳಕಲ್ಲು, ಕೋಮಲಾಪುರ ಸೇರಿದಂತೆ ಒಟ್ಟು 9 ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಅಲ್ಲದೆ, 9000 ಎಕರೆ ಹೊಲಗಾಲುವೆಗಳ ನಿರ್ಮಾಣಕ್ಕಾಗಿ 47 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಶಾಸಕರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದರಾದ ಕರಡಿ ಸಂಗಣ್ಣ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ, ಜಿ.ಪಂ ಮಾಜಿ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.1
- ಮಸೀದಿಯ ಪಕ್ಕದಲ್ಲಿ ಕೂತ ‘ಹುಡಿಯದ ಓಣಿಯ ಸಾಮ್ರಾಟ್’! ಮುಂಡರಗಿಯಲ್ಲಿ ಸೌಹಾರ್ದತೆಯ ಗಣೇಶೋತ್ಸವ ಮೆರೆದ ಮುಸ್ಲಿಂ ಮಕ್ಕಳು! ಮಸೀದಿಯ ಪಕ್ಕದಲ್ಲಿ ಕೂತ ‘ಹುಡಿಯದ ಓಣಿಯ ಸಾಮ್ರಾಟ್’! ಮುಂಡರಗಿಯಲ್ಲಿ ಸೌಹಾರ್ದತೆಯ ಗಣೇಶೋತ್ಸವ ಮೆರೆದ ಮುಸ್ಲಿಂ ಮಕ್ಕಳು! ನಮಸ್ಕಾರ ಬಂಧುಗಳೇ... ನಾಡಿನಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದೆ. ಬೀದಿ ಬೀದಿಗಳಲ್ಲಿ ವಿಘ್ನನಿವಾರಕನ ಜಯಘೋಷ ಮೊಳಗುತ್ತಿದೆ. ಆದರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ 'ಹುಡಿಯದ ಓಣಿ'ಯಲ್ಲಿ ಕಂಡುಬಂದ ಈ ದೃಶ್ಯ ಮಾತ್ರ ಇಡೀ ನಾಡಿನ ಗಮನ ಸೆಳೆಯುವಂತಿದೆ, ಪ್ರತಿಯೊಬ್ಬರ ಮನ ಮುಟ್ಟುವಂತಿದೆ! ಹೌದು, ಇಲ್ಲಿ ಒಂದೆಡೆ ಅಲ್ಲಾಹನ ಪ್ರಾರ್ಥನೆ ನಡೆಯುವ ಮಸೀದಿ ಇದ್ದರೆ... ಅದೇ ಮಸೀದಿಯ ಅಂಗಳದ ಪಕ್ಕದಲ್ಲೇ ಸಿದ್ದಿವಿನಾಯಕ ವಿರಾಜಮಾನನಾಗಿದ್ದಾನೆ! ವಿಶೇಷ ಎಂದರೆ, ಯಾವುದೇ ಜಾತಿ-ಧರ್ಮದ ಹಂಗಿಲ್ಲದೆ, ಇಲ್ಲಿನ ಮುಸ್ಲಿಂ ಸಮುದಾಯದ ಪುಟ್ಟ ಮಕ್ಕಳು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ತಮ್ಮ ಕೈಯಾರೆ ಕಾಯಿ ಒಡೆದು, ಪೂಜೆ ಸಲ್ಲಿಸಿ, ಪ್ರಸಾದ ಹಂಚಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಇನ್ನು ಅತ್ಯಂತ ಖುಷಿಯ ವಿಷಯ ಎಂದರೆ... ಇಲ್ಲಿನ ಮಕ್ಕಳು ಕೇವಲ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿಲ್ಲ, ಬದಲಾಗಿ ಅತ್ಯಂತ ಪ್ರೀತಿಯಿಂದ ಈ ಮೂರ್ತಿಗೆ 'ಹುಡಿಯದ ಓಣಿಯ ಸಾಮ್ರಾಟ್' ಎಂದೇ ನಾಮಕರಣ ಮಾಡಿದ್ದಾರೆ! ಸಾಮ್ರಾಟ್ ಎಂಬ ಹೆಸರಿನಲ್ಲಿ ಗಣಪತಿಯನ್ನು ನೆನೆಯುತ್ತಿರುವ ಈ ಮಕ್ಕಳ ಮನಸ್ಸಿನಲ್ಲಿ 'ನಾವೆಲ್ಲರೂ ಒಂದೇ' ಎನ್ನುವ ಭ್ರಾತೃತ್ವದ ಸದ್ಭಾವನೆ ಆಳವಾಗಿ ಬೇರೂರಿದೆ. ಧರ್ಮಗಳ ಹೆಸರಿನಲ್ಲಿ ಕಹಿ ವಾತಾವರಣ ಸೃಷ್ಟಿಯಾಗುವ ಈ ದಿನಗಳಲ್ಲಿ, ಮುಂಡರಗಿಯ ಈ ಪುಟ್ಟ ಮಕ್ಕಳು ಇಡೀ ಸಮಾಜಕ್ಕೇ ಪ್ರೀತಿ ಮತ್ತು ಸೌಹಾರ್ದತೆಯ ದೊಡ್ಡ ಪಾಠ ಹೇಳಿಕೊಡುತ್ತಿದ್ದಾರೆ. ಶರೀಫ-ಶಿವಯೋಗಿಗಳು ನಡೆದ ಸೌಹಾರ್ದತೆಯ ನೆಲದಲ್ಲಿ, ಮುಂಡರಗಿಯ ಹುಡಿಯದ ಓಣಿಯ ಈ ಪುಟ್ಟ ಮಕ್ಕಳ ನಡೆ ಇಡೀ ನಾಡಿಗೆ ಭಾವೈಕ್ಯತೆಯ ಹೊಸ ಬೆಳಕನ್ನು ತೋರುತ್ತಿದೆ. ನಾವೆಲ್ಲರೂ ಒಂದೇ ಎನ್ನುವ ಈ ಮಕ್ಕಳ ಪ್ರೀತಿಗೆ ಕನ್ನಡಿಗರ ಪರವಾಗಿ ಹೃದಯಪೂರ್ವಕ ಸಾಷ್ಟಾಂಗ ನಮನಗಳು1
- ಮುಧೋಳ ನಗರದಲ್ಲಿ ಗಣೇಶೋತ್ಸವ ಸಂಭ್ರಮದಲ್ಲಿ ಮಿಂದೆದ್ದ ಅಸಂಖ್ಯ ಭಕ್ತಗಣ ಮುಧೋಳ : ಗಣೇಶೋತ್ಸವ ಹಿನ್ನೆಲೆ ನಗರದಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಅಸಂಖ್ಯ ಭಕ್ತಗಣದ ಮಧ್ಯೆ ಅದ್ದೂರಿಯಾಗಿ ಜರುಗಿತು. ನಗರದ ಶಿವಾಜಿ ವೃತ್ತ, ಗಾಂಧಿ ವೃತ್ತ, ಜೈ ಭಾರತ ಸರ್ಕಲ್, ಜನತಾ ಪ್ಲಾಟ್ ಸೇರಿದಂತೆ ಹಲವಾರು ಭಾಗದಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಪಂಢರಪುರದ ದಿಂಡೆ ರೂಪಕ, ಮಹಾರಾಷ್ಟ್ರದ ಡೋಲ್ ತಾಷ್, ಡಿಜೆ, ಡಾಲ್ಬಿ ಸದ್ದಿಗೆ ಸಾವಿರಾರು ಯುವಕರು ಹೆಜ್ಜೆ ಹಾಕಿದರು. ಮಹಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜೈ ಭಾರತ ವೃತ್ತದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಜನರು ನೆರದಿದ್ದರು. ಭಕ್ತಿಭಾವದಿಂದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.4
- ED. IT. ಯಾವಾಗ ಬೇಕಾದರೂ ನನ್ನ ಮನೆಗೆ ಬರಬಹುದು ಸಚಿವ ವಿಜಯಾನಂದ ಕಾಶಪ್ಪನವರ ಬಾಗಲಕೋಟೆ: ಕೈ ಶಾಸಕರನ್ನು ಬಿಜೆಪಿಗೆ ಸೆಳೆಯುವ ಹುನ್ನಾರ ವಿಚಾರಕ್ಕೆ ಸಚಿವ ಕಾಶಪ್ಪನವರ ಪ್ರತಿಕ್ರಿಯಿಸಿದರು ಈ ಹಿಂದೆ ಬಿಜೆಪಿ ಕಾಂಗ್ರೆಸ್ನ 55 ಜನರ ಪಟ್ಟಿ ರೆಡಿ ಮಾಡಿತ್ತು ಕಾಂಗ್ರೆಸ್ ಶಾಸಕರ ಆಪರೇಷನ್ ಪಟ್ಟಿಯಲ್ಲಿ ನನ್ನ ಹೆಸರು ಇತ್ತು ಬಿಜೆಪಿ ಪಕ್ಷಕ್ಕೆ ಸೆಳೆಯುವುದು, ಬರೋಲ್ಲ ಅಂದರೆ ಹಿಡಿ ದಾಳಿ ಅಂಜಿಕೆ ಹಾಕುವುದು ಮಾಡಿದ್ದರು. ನಾ ಬಿಜೆಪಿಗರಿಗೆ ಹೇಳಿದ್ದೇನೆ ನನ್ನ ಮೇಲೆ ಇಡಿ ಐಟಿ ದಾಳಿ ಮಾಡಿದರು ಅಂಜಿಕೆ ಇಲ್ಲ ಎಂದು ಸಚಿವ ಕಾಶಪ್ಪನವರ ಬಾಗಲಕೋಟೆಯಲ್ಲಿ ಹೇಳಿದರು.1