ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದ್ದಲ್ಲಿ ವಿಜೃಂಭಣೆಯಿಂದ ಜರುಗಿದ ಮಹಾ ರಥೋತ್ಸವ. ಹನೂರು : ತಾಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಇಂದು ಬೆಳಿಗ್ಗೆ ಮಹಾರಥೋತ್ಸವ ಜರಗಿತು. ಉಘೇ ಉಘೇ ಉಘೇ ಮಾದಪ್ಪ ಎಂಬ ಘೋಷವಾಕ್ಯಗಳು ಮೊಳಗಿದವು. ಶುಭ ಮುಹೂರ್ತದಲ್ಲಿ ಮಹಾ ರಥೋತ್ಸವು ಸಾಲೂರು ಬೃಹನ್ಮಠದ ಪೀಠಾಧ್ಯಕ್ಷರಾದ ಡಾ. ಶಾಂತ ಮಲ್ಲಿಕಾರ್ಜುನ ಸ್ವಾಮಿಯ ಅಧ್ಯಕ್ಷತೆಯಲ್ಲಿ ಹಾಗೂ ಬೇಡಂಗಂಪ ಣದ ಸಮುದಾಯದ ಪುಟ್ಟ ಮಕ್ಕಳು ಬೆಲ್ಲದ ಆರತಿ ಯೊಂದಿಗೆ ವಾಧ್ಯ ಮೇಳಗಳೊಂದಿಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವು ನಡೆಯಿತು. ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಅದ್ದೂರಿಯಾಗಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬೆಳಿಗ್ಗೆ 10:05- ರಿಂದ 11:00 ರವರೆಗೆ ಮಹಾ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಪ್ರಾಧಿಕಾರದ ಕಾರ್ಯದರ್ಶಿ ಎ ಇ ರಘು, ಡಿ ವೈ ಎಸ್ ಪಿ ಧರ್ಮೆಂದ್ರ ಸೇರಿದಂತೆ ಹಲವು ಭಕ್ತರು ತೇರನ್ನ ಎಳೆದರು. ಇದೇ ಸಮಯದಲ್ಲಿ ಸಾಲೂರು ಬೃಹನ್ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ, ಪ್ರಾಧಿಕಾರದ ಕಾರ್ಯದರ್ಶಿ ರಘು, ಡಿವೈಎಸ್ಪಿ ಧರ್ಮೆಂದ್ರ, ಉಪ ಕಾರ್ಯದರ್ಶಿ ಚಂದ್ರಶೇಖರ್,ಪತ್ರಕರ್ತರಾದ ಮಹಾದೇಶ್, ಸೋಮಶೇಖರ್, ಗೋವಿಂದ ರಾಜು, ಮಹದೇವಸ್ವಾಮಿ ಸೇರಿದಂತೆ ಲಕ್ಷಾಂತರ ಭಕ್ತರು ನೆರೆದಿದ್ದರು.
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದ್ದಲ್ಲಿ ವಿಜೃಂಭಣೆಯಿಂದ ಜರುಗಿದ ಮಹಾ ರಥೋತ್ಸವ. ಹನೂರು : ತಾಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಇಂದು ಬೆಳಿಗ್ಗೆ ಮಹಾರಥೋತ್ಸವ ಜರಗಿತು. ಉಘೇ ಉಘೇ
ಉಘೇ ಮಾದಪ್ಪ ಎಂಬ ಘೋಷವಾಕ್ಯಗಳು ಮೊಳಗಿದವು. ಶುಭ ಮುಹೂರ್ತದಲ್ಲಿ ಮಹಾ ರಥೋತ್ಸವು ಸಾಲೂರು ಬೃಹನ್ಮಠದ ಪೀಠಾಧ್ಯಕ್ಷರಾದ ಡಾ. ಶಾಂತ ಮಲ್ಲಿಕಾರ್ಜುನ ಸ್ವಾಮಿಯ ಅಧ್ಯಕ್ಷತೆಯಲ್ಲಿ ಹಾಗೂ ಬೇಡಂಗಂಪ ಣದ ಸಮುದಾಯದ ಪುಟ್ಟ ಮಕ್ಕಳು ಬೆಲ್ಲದ ಆರತಿ ಯೊಂದಿಗೆ ವಾಧ್ಯ
ಮೇಳಗಳೊಂದಿಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವು ನಡೆಯಿತು. ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಅದ್ದೂರಿಯಾಗಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬೆಳಿಗ್ಗೆ 10:05- ರಿಂದ 11:00 ರವರೆಗೆ ಮಹಾ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಪ್ರಾಧಿಕಾರದ ಕಾರ್ಯದರ್ಶಿ ಎ ಇ ರಘು, ಡಿ ವೈ ಎಸ್ ಪಿ
ಧರ್ಮೆಂದ್ರ ಸೇರಿದಂತೆ ಹಲವು ಭಕ್ತರು ತೇರನ್ನ ಎಳೆದರು. ಇದೇ ಸಮಯದಲ್ಲಿ ಸಾಲೂರು ಬೃಹನ್ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ, ಪ್ರಾಧಿಕಾರದ ಕಾರ್ಯದರ್ಶಿ ರಘು, ಡಿವೈಎಸ್ಪಿ ಧರ್ಮೆಂದ್ರ, ಉಪ ಕಾರ್ಯದರ್ಶಿ ಚಂದ್ರಶೇಖರ್,ಪತ್ರಕರ್ತರಾದ ಮಹಾದೇಶ್, ಸೋಮಶೇಖರ್, ಗೋವಿಂದ ರಾಜು, ಮಹದೇವಸ್ವಾಮಿ ಸೇರಿದಂತೆ ಲಕ್ಷಾಂತರ ಭಕ್ತರು ನೆರೆದಿದ್ದರು.
- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ನೇತೃತ್ವದ ಮಂಡಳಿ ನಿಯೋಗ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಬುಧವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಉಪಾಧ್ಯಕ್ಷ ಸುಂದರ್ ರಾಜ್, ಖಜಾಂಚಿ ಜಯಸಿಂಹ ಮುಸುರಿ ಮತ್ತಿತರರು ಜತೆಗಿದ್ದರು.1
- *ಭಾರತ ನಲ್ಲಿ ವೈರಲ್*1
- VIDEO: ಅತಿವೇಗದ ಬೈಕ್ ಡಿಕ್ಕಿಗೆ ವಿದ್ಯುತ್ ಕಂಬವೇ ತುಂಡು ಅತಿವೇಗದಲ್ಲಿ ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಈ ಘಟನೆಯ ಭಯಾನಕ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಸವಾರ ಮತ್ತು ಹಿಂಬದಿಯ ಪ್ರಯಾಣಿಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬಕ್ಕೆ ತುಂಡಾಗಿ ನೆಲಕ್ಕೆ ಬಿದ್ದಿದೆ. ಪವಾಡ ಸದೃಶ್ಯ ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯಗಳಾಗಿದ್ದವು. ವಿದ್ಯಾರ್ಥಿಗಳಾದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ✍️ವರದಿ: ಸುರೇಂದ್ರ ಶಿವಮೊಗ್ಗ.....2
- ಅರಕಲಗೂಡು ತಾಲೂಕು ಕೊಡಕಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀ ದೇವಿ, ಶ್ರೀ ಮಾರಮ್ಮ ಮತ್ತು ಶ್ರೀ ಗ್ರಾಮ ದೇವತೆ, ದೇವರುಗಳ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನಗಳ ಉದ್ಘಾಟನಾ ಸಮಾರಂಭ ಫೆಬ್ರವರಿ 19ರಿಂದ 27ರ ತನಕ ಜರುಗಲಿದೆ ಎಂದು ಗ್ರಾಮದ ಮುಖಂಡ ಕೊಡಕಹಳ್ಳಿ ಅಶೋಕ್ ತಿಳಿಸಿದರು. ನೂತನವಾಗಿ ನಿರ್ಮಾಣಗೊಂಡಿರುವ ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕಾರ್ಯಗಳು, ಉತ್ಸವ ಅದ್ದೂರಿಯಾಗಿ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಎ. ಮಂಜು ಸೇರಿದಂತೆ ವಿವಿಧ ಗಣ್ಯರು, ಮಠಾಧೀಶರು, ಮುಖಂಡರು ಭಾಗವಹಿಸುವರು. ಈ ದೇವರ ಕಾರ್ಯದಲ್ಲಿ ಕೊಡಕಹಳ್ಳಿ ಸೇರಿದಂತೆ ಸುತ್ತಾಮುತ್ತಲ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು. #templeopening #Kodakahalli #villegevibes❤️ #Arkalgud #temple #News5Kannada1
- ಬೆಂಗಳೂರು: ರಾಜಾಜಿನಗರದ ಎಚ್‌ಡಿಎಫ್‌ಸಿ (HDFC) ಹೋಮ್ ಲೋನ್ ಕಚೇರಿ ಮುಂಭಾಗ ನಿನ್ನೆ ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಯೋಗೇಶ್ವರಿ (26) ಎಂದು ಗುರುತಿಸಲಾಗಿದೆ. ಮಧ್ಯಾಹ್ನ 12:45ರ ಸುಮಾರಿಗೆ ಯೋಗೇಶ್ವರಿ ಊಟಕ್ಕೆ ತೆರಳುತ್ತಿದ್ದಾಗ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11:30ಕ್ಕೆ ಕೊನೆಯುಸಿರೆಳೆದಿದ್ದಾರೆ. ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.1
- ತುಮಕೂರು : ತುಮಕೂರು ಜಿಲ್ಲೆಯ ದಿನಾಂಕ 15/02/2026 ರಂದು ಕ್ಯಾತ್ಸಂದ್ರ ದ ಜ್ಞಾನ ಗಂಗಾ ಶಾಲೆ ಬಳಿ ಬೈಕಿನಲ್ಲಿ ಬಂದ ವ್ಯಕ್ತಿ ಅಂಗಡಿ ಯಲ್ಲಿ ಇದ್ದ ಮಹಿಳೆ ಚಿನ್ನದ ಸರ ಕದ್ದು ಪರಾರಿ ಯಾದ ಕಳ್ಳ ಸಿಗರೇಟು ಕೇಳುವ ನೆಪದಲ್ಲಿ ಮಾಂಗಲ್ಯ ಸರ ಕದ್ದ ಕಳ್ಳ ಕ್ಯಾತ್ಸಂದ್ರ ಜ್ಞಾನ ಗಂಗಾ ಶಾಲೆ ರಸ್ತೆ ಯಲ್ಲಿ ಘಟನೆ1
- ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿದ್ದು ಪೌರಕಾರ್ಮಿಕರ ಜೊತೆಗೆ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಪೌರಕಾರ್ಮಿಕ ಸಿಬ್ಬಂದಿಗಳ ಜೊತೆಗೆ ಪೊರಕೆ ಇಡಿದು ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ . ನಂತರ ಮಾಧ್ಯಮದವರೊಂದಿಗೆ ಪ್ರಾಧಿಕಾರದ ಕಾರ್ಯದರ್ಶಿ ಎ. ಈ ರಘು ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತ್ ಕನಸಲು ಮನಸು ಮಾಡಲು ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ರವರು 2014ರಲ್ಲಿ ಸ್ವಚ್ಛ ಭಾರತ್ ಮಿಷನ್ ಆರಂಭಿಸಿದ್ದಾರೆ. ಇವರ ಕನಸು ಭಾರತವನ್ನು ಸ್ವಚ್ಛ ಮತ್ತು ಸುಂದರವಾಗಿಸಲು ಗುರಿಯನ್ನು ಹೊಂದಿದ್ದಾರೆ. ಅದೇ ರೀತಿ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನವೂ ಪ್ಲಾಸ್ಟಿಕ್ ಮುಕ್ತ ಹಸಿರು ವಲಯ ಪ್ರದೇಶವನ್ನಾಗಿ ಘೋಷಣೆ ಮಾಡಲಾಗಿದ್ದು. ಮಾಸ್ಟರ್ ಪ್ಲಾನ್ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು, ಪರ್ಯಾಯವಾಗಿ ಮೆಕ್ಕೆಜೋಳ ಹಾಗೂ ಸಬ್ಬಕ್ಕಿಯಿಂದ ಕವರ್ ಗಳನ್ನು ತಯಾರು ಮಾಡಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖಾಸಗಿ ಕಂಪನಿಯ ಮುಖಾಂತರ ಪರಿಸರ ಸ್ನೇಹಿ ಕವರ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಹಾಗೂ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಳಿಗೆ ಪಡೆದಿರುವ ವ್ಯಾಪಾರಸ್ಥರು ಭಕ್ತಾದಿಗಳು ಪರಿಸರ ಸ್ನೇಹಿ ಕವರ್ ಗಳನ್ನು ಬಳಕೆ ಮಾಡುವ ಮೂಲಕ ಮಹದೇಶ್ವರ ಬೆಟ್ಟದ ಪರಿಸರ ಸಂರಕ್ಷಣೆ ಮಾಡುವಲ್ಲಿ ಸಹಕಾರ ನೀಡಬೇಕು ಎಂದರು.3
- ಸಾಮರಸ್ಯ ಅವಶ್ಯಕತೆ ಇದೆ , Are both important to us? #ಸೈನಿಕ #ಭಾರತೀಯಸೈನ್ಯ #ದೇಶಪ್ರೇಮ #ಕನ್ನಡ #ಸಲಾಂಸೈನಿಕ #ವೀರಯೋಧ #Sainika #IndianArmy #KannadaHashtags #IndianSoldier #JaiHind #Karnataka #ಸೈನಿಕಶಾಲೆ #ಸೈನಿಕಶಾಲೆವಿಜಯಪುರ #BijapurSainikSchool #ಕರ್ನಾಟಕಸೈನಿಕಶಾಲೆ #ಭಾರತೀಯಸೇನೆ #ಸೈನಿಕಶಿಕ್ಷಣ #ಕನ್ನಡ #Sadhana #sadhanam #homeopathy #Krishnanagar #sadhanayogi #bhms #sadhanayogeshagowda #drsadhanahomeopathyconsultanttumkur #Radha'sHomeopathy , #HomeocareInternational #BestHomeopathyClinic1
- ಕರ್ನಾಟಕದ ಸಲೂನ್ ಒಂದರಲ್ಲಿ ಸಿಬ್ಬಂದಿ ಮತ್ತು ಗ್ರಾಹಕನ ನಡುವೆ ಭಾಷೆಯ ವಿಚಾರವಾಗಿ ನಡೆದ ವಾಗ್ವಾದ ಭಾರಿ ಚರ್ಚೆಗೆ ಕಾರಣವಾಗಿದೆ. ಸಲೂನ್‌ನಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿ ಇದ್ದಾರೆಯೇ ಎಂದು ಕೇಳಿದ್ದಕ್ಕೆ, ಹಿಂದಿ ಮಾತನಾಡುತ್ತಿದ್ದ ಮಹಿಳಾ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿರುವುದು ವೀಡಿಯೋದಲ್ಲಿದೆ. ಈ ಘಟನೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಬೆನ್ನಲ್ಲೇ, ಮತ್ತೊಂದು ವೀಡಿಯೋ ಪ್ರಕಟವಾಗಿದ್ದು ಅದರಲ್ಲಿ ಆ ಮಹಿಳೆ ಸ್ಥಳೀಯರ ಕ್ಷಮೆಯಾಚಿಸಿದ್ದಾರೆ. ಭಾಷಾ ಗೌರವದ ವಿಚಾರವಾಗಿ ಈ ಘಟನೆ ಇಂಟರ್ನೆಟ್‌ನಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ.1