ಸಾಂಸ್ಕೃತಿಕ ಚಟುವಟಿಕೆಗಳಿಂದ ಮಕ್ಕಳ ವ್ಯಕ್ತಿತ್ವ ವಿಕಾಸನವಾಗುತ್ತದೆ ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿಯೇ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುವುದರೊಂದಿಗೆ ನಮ್ಮ ನೆಲದ ಸಂಸ್ಕೃತಿಯನ್ನು ತಿಳಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶ್ರೀ ಕರ್ ಭಟ್ ಜೋಶಿ ಅಭಿಮತ ವ್ಯಕ್ತಪಡಿಸಿದರು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಲಕ್ಷ್ಮೀಪೂರ ಗ್ರಾಮದ ಫೀನಿಕ್ಸ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜ್ಞಾನ ವೃಕ್ಷ ಕನಸು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತೀಯ ಸಂಸ್ಕೃತಿ ವೈವಿಧ್ಯತೆಯಿಂದ ಕೂಡಿದ್ದು, ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಗೆ ಸಂಸ್ಕೃತಿಯ ಅರಿವು ಮೂಡಿಸಲು ಸಹಕಾರಿಯಾಗುತ್ತವೆ, ಸಂಸ್ಕೃತಿ ಉಳಿವು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ, ಸ್ಥಳೀಯ ಕಲಾ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲ್ಯಾಣ ಕರ್ನಾಟಕ ಪ್ರದೇಶ್ ವಾಲ್ಮೀಕಿ ನಾಯಕ ಯುವ ಘಟಕದ ವಿಭಾಗಿಯ ಅಧ್ಯಕ್ಷ, ಉಪನ್ಯಾಸಕ ಡಾ. ರಾಮು ನಾಯಕ್ ಅರಳಹಳ್ಳಿ ಮಾತನಾಡಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ, ಪ್ರತಿಯೊಂದು ಮಗುವು ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಹೊರಹೊಮ್ಮಬೇಕಾದರೆ ಛಲ, ಗುರಿ ಹಾಗೂ ಏಕಾಗ್ರತೆಯಿಂದ ಚಟುವಟಿಕೆಗಳಲ್ಲಿ ತೊಡಗಬೇಕು. ಇವುಗಳ ಜತೆಗೆ ಅವರಿಗೆ ಕ್ರೀಡೆ, ಸಾಮಾನ್ಯ ಜ್ಞಾನ, ಸಂಗೀತ, ನಾಟಕ, ಯೋಗ ಮುಂತಾದವುಗಳು ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜನಪದ ನೃತ್ಯ, ಭರತನಾಟ್ಯ, ದೇಶಭಕ್ತಿ ಗೀತೆಗಳು ಹಾಗೂ ಶರಣಯ್ಯ ಸ್ವಾಮಿ, ರಮೇಶ್ ಅವರ ಸಂಗೀತ ಕಾರ್ಯಕ್ರಮಗಳು ಪ್ರದರ್ಶಿಸಲ್ಪಟ್ಟವು. ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಲಾವಿದರು ನೀಡಿದ ಕಲಾ ಪ್ರದರ್ಶನಗಳು ಮೆಚ್ಚುಗೆ ಪಡೆದವು. ಇದೇ ವೇಳೆ ಶಿಕ್ಷಕರಾದ ಖಾದರ್ ಪಟೇಲ್ ಮಾತಾಡಿದರು. ಸಂದರ್ಭದಲ್ಲಿ ಜ್ಞಾನ ವೃಕ್ಷ ಕನಸು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಶ್ರೀನಿವಾಸ್ ಘಂಟಿ, ಫೀನಿಕ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಸಂತ ಕುಮಾರ, ಪತ್ರಕರ್ತರ ಸಂಘದ ಕಾರ್ಯದರ್ಶಿ ಪರಶುರಾಮ್ ನಾಯಕ್ ಮಲ್ಲಿಭಾವಿ, ಮಲ್ಲಿಕಾರ್ಜುನ್ ಬಾದ್ಯಾಪುರ, ಪುರುಷೋತ್ತಮ ನಾಯಕ್ ಸೇರಿದಂತೆ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. ಶಿಕ್ಷಕ ಬಾಬು ನಿರೂಪಿಸಿ, ವಂದಿಸಿದರು.
ಸಾಂಸ್ಕೃತಿಕ ಚಟುವಟಿಕೆಗಳಿಂದ ಮಕ್ಕಳ ವ್ಯಕ್ತಿತ್ವ ವಿಕಾಸನವಾಗುತ್ತದೆ ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿಯೇ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುವುದರೊಂದಿಗೆ ನಮ್ಮ ನೆಲದ ಸಂಸ್ಕೃತಿಯನ್ನು ತಿಳಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶ್ರೀ ಕರ್ ಭಟ್ ಜೋಶಿ ಅಭಿಮತ ವ್ಯಕ್ತಪಡಿಸಿದರು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಲಕ್ಷ್ಮೀಪೂರ ಗ್ರಾಮದ ಫೀನಿಕ್ಸ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜ್ಞಾನ ವೃಕ್ಷ ಕನಸು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತೀಯ ಸಂಸ್ಕೃತಿ ವೈವಿಧ್ಯತೆಯಿಂದ ಕೂಡಿದ್ದು, ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಗೆ ಸಂಸ್ಕೃತಿಯ ಅರಿವು ಮೂಡಿಸಲು ಸಹಕಾರಿಯಾಗುತ್ತವೆ, ಸಂಸ್ಕೃತಿ ಉಳಿವು ಪ್ರತಿಯೊಬ್ಬರ
ಹೊಣೆಗಾರಿಕೆಯಾಗಿದೆ, ಸ್ಥಳೀಯ ಕಲಾ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲ್ಯಾಣ ಕರ್ನಾಟಕ ಪ್ರದೇಶ್ ವಾಲ್ಮೀಕಿ ನಾಯಕ ಯುವ ಘಟಕದ ವಿಭಾಗಿಯ ಅಧ್ಯಕ್ಷ, ಉಪನ್ಯಾಸಕ ಡಾ. ರಾಮು ನಾಯಕ್ ಅರಳಹಳ್ಳಿ ಮಾತನಾಡಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ, ಪ್ರತಿಯೊಂದು ಮಗುವು ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಹೊರಹೊಮ್ಮಬೇಕಾದರೆ ಛಲ, ಗುರಿ ಹಾಗೂ ಏಕಾಗ್ರತೆಯಿಂದ ಚಟುವಟಿಕೆಗಳಲ್ಲಿ ತೊಡಗಬೇಕು. ಇವುಗಳ ಜತೆಗೆ ಅವರಿಗೆ ಕ್ರೀಡೆ, ಸಾಮಾನ್ಯ ಜ್ಞಾನ, ಸಂಗೀತ, ನಾಟಕ, ಯೋಗ ಮುಂತಾದವುಗಳು ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ
ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜನಪದ ನೃತ್ಯ, ಭರತನಾಟ್ಯ, ದೇಶಭಕ್ತಿ ಗೀತೆಗಳು ಹಾಗೂ ಶರಣಯ್ಯ ಸ್ವಾಮಿ, ರಮೇಶ್ ಅವರ ಸಂಗೀತ ಕಾರ್ಯಕ್ರಮಗಳು ಪ್ರದರ್ಶಿಸಲ್ಪಟ್ಟವು. ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಲಾವಿದರು ನೀಡಿದ ಕಲಾ ಪ್ರದರ್ಶನಗಳು ಮೆಚ್ಚುಗೆ ಪಡೆದವು. ಇದೇ ವೇಳೆ ಶಿಕ್ಷಕರಾದ ಖಾದರ್ ಪಟೇಲ್ ಮಾತಾಡಿದರು. ಸಂದರ್ಭದಲ್ಲಿ ಜ್ಞಾನ ವೃಕ್ಷ ಕನಸು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಶ್ರೀನಿವಾಸ್ ಘಂಟಿ, ಫೀನಿಕ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಸಂತ ಕುಮಾರ, ಪತ್ರಕರ್ತರ ಸಂಘದ ಕಾರ್ಯದರ್ಶಿ ಪರಶುರಾಮ್ ನಾಯಕ್ ಮಲ್ಲಿಭಾವಿ, ಮಲ್ಲಿಕಾರ್ಜುನ್ ಬಾದ್ಯಾಪುರ, ಪುರುಷೋತ್ತಮ ನಾಯಕ್ ಸೇರಿದಂತೆ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. ಶಿಕ್ಷಕ ಬಾಬು ನಿರೂಪಿಸಿ, ವಂದಿಸಿದರು.
- ಯಾದಗಿರಿ ಜಿಲ್ಲೆಯ ಸುರಪುರ ನಗರದ ರಂಗಂಪೇಟೆಯಲ್ಲಿ ಕರ್ನಾಟಕ ಮೌಲನ ಅಜಾದ್ ಪಬ್ಲಿಕ್ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕರ ರಾಜಾಹುಲಿ ಗೋಪಾಲ್ ನಾಯಕ್ ಅಡಿಗಲ್ಲು ಹಾಕಿ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮುಖಂಡರಾದ ರಾಜಾ ವಾಸುದೇವ ನಾಯಕ, ವಿಠ್ಠಲ್ ಯಾದವ್, ಅಬ್ದುಲ್ ಗಫರ್ ನಾಗನೂರಿ ಸೇರಿ ಅನೇಕರು ಉಪಸ್ಥಿತರಿದ್ದರು.4
- ಹೊಸಮನಿ ಪ್ರಕಾಶನದಿಂದ ದನಿಗೂಡು ಎಂಬ ಹನಿಗವನ ಸಂಕಲನ ಲೋಕರ್ಪಾಣೆಯನ್ನು ಜನವರಿ 11 ರಂದು ಟ್ಯಾಗೋರ್ ಭವನ , ಎಸ್.ಆರ್.ಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಾಡಲಾಗುವುದೆಂದು ಹೊಸಮನಿ ಪ್ರಕಾಶನ ಅಧ್ಯಕ್ಷರಾದ ಬಶೀರ್ ಅಹ್ಮದ್ ಹೊಸಮನಿ ಹೇಳಿದರು. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಹಿರಿಯ ಸಾಹಿತಿಗಳಾದ ವೀರಹನುಮಾನ್ ಉದ್ಘಾಟಿಸಲಿದ್ದು, ಕೃತಿ ಲೋಕಾರ್ಪಣೆಯನ್ನು ಮಹಾಂತೇಶ್ ಮಸ್ಕಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಯರಾಜ್ ಮರ್ಚೆಟ್ಹಾಳ್ ವಹಿಸಲಿದ್ದಾರೆ ಎಂದರು.1
- Post by Kalyan karanataka news channel1
- ಸರ್ಕಾರ ಇದ್ದರೂ ಇಲ್ಲದಿದ್ದರೂ ಗೆಲುವು ಸಾಧ್ಯ: ಜಗದೀಶ ಶೆಟ್ಟರ್ ಆತ್ಮವಿಶ್ವಾಸ ಬಾಗಲಕೋಟೆ: ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಬೆಳಗಾವಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಬಿಜೆಪಿಯ ಸಂಘಟನಾತ್ಮಕ ಸಭೆ ಜರುಗಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಮ್ಮದಾಗಿದ್ದರೂ ಇಲ್ಲದಿದ್ದರೂ ಬಿಜೆಪಿ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಶಕ್ತಿ ಹೊಂದಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. #bagalkot #karnataka #bjp1
- Post by ASHOK.EKKA4
- ಶೀಘ್ರದಲ್ಲೇ ಹಿಪ್ಪರಗಿ ಜಲಾಶಯದ ಗೇಟಗಳ ದುರಸ್ತಿ ಕಾರ್ಯ ಮಾಜಿ ಶಾಸಕ ಆನಂದ ನ್ಯಾಮಗೌಡ1
- ಗೋಕಾಕಕ್ಕೆ ಆಗಮಿಸಿದ ಬೆಳಗಾವಿ ನೂತನ ಪೋಲಿಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್,,1
- ಅರಸು ದಾಖಲೆ ಮುರಿದ ಸಿದ್ದರಾಮಯ್ಯ: ಅಭಿಮಾನಿಗಳಿಂದ 5,000 ಜನರಿಗೆ ಮಟನ್ ಊಟ... ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ದೀರ್ಘಕಾಲದ ಸಿಎಂ ಅವಧಿಯ ದಾಖಲೆ ಮುರಿದ ಹಿನ್ನೆಲೆಯಲ್ಲಿ ಯಾದಗಿರಿ ನಗರದಲ್ಲಿ ಶುಕ್ರವಾರ ಸಿದ್ದರಾಮಯ್ಯ ಅವರ ಅಭಿಮಾನಿಗಳು 5,000 ಜನರಿಗೆ ಮಟನ್ ಊಟ ಬಡಿಸಿದರು. 11 ಕುರಿಗಳ ಮಾಂಸದ ಅಡುಗೆ, ಮೂರು ಕ್ವಿಂಟಲ್ ಅನ್ನ ಮಾಡಿ ಔತಣಕೂಟವನ್ನು ಏರ್ಪಡಿಸಿದರು. ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, 'ಯುಡಾ' ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಮುಖಂಡರಾದ ಭೀಮಣ್ಣ ಮೇಟಿ, ಮಲ್ಲಣ್ಣ ಐಕೂರು, ನಿರಂಜನ ರೆಡ್ಡಿ ಪಾಟೀಲ, ಮಲ್ಲಿಕಾರ್ಜುನ ಗೋಸಿ ಸೇರಿ ಹಲವಾರು ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು.1