ಜೈ ಲಲಿತಾ ಸೀರಿಯಲ್ ವೀಕ್ಷಕರಿಗೆ ಎಷ್ಟೇ ಹೊಸ ಧಾರಾವಾಹಿಗಳು ಬಂದರೂ ನೋಡುತ್ತಾರೆ. ಹೊಸಹೊಸ ಕಥೆಗಳಿಗಾಗಿ ಕಾಯುತ್ತಾರೆ. ಸೀರಿಯಲ್ ಪ್ರಿಯರಿಗೆ ಖುಷಿ ಕೊಡುವ ಸುದ್ದಿ ಇಲ್ಲೊಂದಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶೀಘ್ರದಲ್ಲಿ ಹೊಚ್ಚಹೊಸ ಧಾರಾವಾಹಿ ಆರಂಭವಾಗಲಿದೆ. ವಿಭಿನ್ನ ಕಥಾ ಹಂದರ ಇರುವ ಧಾರಾವಾಹಿ ಜೈ ಲಲಿತಾ ಇದೇ ಸೋಮವಾರದಿಂದ (ಡಿಸೆಂಬರ್ 8) ರಾತ್ರಿ 9.30ಕ್ಕೆ ಟೆಲಿಕಾಸ್ಟ್ ಆಗಲಿದೆ. ಜೈ ಲಲಿತಾ ಧಾರಾವಾಹಿ ಡಿ.8ರಿಂದ ಆರಂಭ ಕಥೆ ಏನು? ಭೈರವಪುರ ಎಂಬ ಸುಂದರ ಹಳ್ಳಿಯಲ್ಲಿ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿರೋ ಹುಡುಗಿ ಕಥಾ ನಾಯಕಿ ಲಲಿತಾ. ಬಿ.ಎ ಪಾಸ್ ಆಗ್ಬೇಕು ಅನ್ನೋದು ಇವಳ ದೊಡ್ಡ ಕನಸು. ಎಲ್ಲರೂ ಕೆಲಸ ಪಡೆಯಲು ಡಿಗ್ರಿ ಓದಬೇಕು ಎಂದುಕೊಂಡರೆ, ನಮ್ಮ ಕಥಾ ನಾಯಕಿ ಮದುವೆ ಆಗೋದಕ್ಕೋಸ್ಕರವೇ ಬಿಎ ಪಾಸ್ ಆಗ್ಲೇಬೇಕು ಎಂದುಕೊಂಡಿದ್ದಾಳೆ. ನಟ ರಾಕಿಂಗ್ ಸ್ಟಾರ್ ಯಶ್ ನ ಅಪ್ಪಟ ಅಭಿಮಾನಿಯಾಗಿರೋ ಲಲಿತಾಗೆ ಸಿನಿಮಾ ಅಂದ್ರೆ ಪಂಚ ಪ್ರಾಣ. ಥಿಯೇಟರ್ ಗೆ ಒಳ್ಳೇ ಸಿನಿಮಾ ಬಂದ್ರೆ ಸಾಕು ಹೋಗ್ದೇ ಇರೋ ಮಾತೇ ಇಲ್ಲ. ಡ್ರಾಮಾ ಕ್ವೀನು, ಶುದ್ಧ ತರ್ಲೆಯಾಗಿರೋ ಈಕೆ ಊರಿನವರ ಮನೆಮಗಳು, ಜೊತೆಗೆ ತಂದೆಯ ಮುದ್ದಿನ ಮಗಳು. ಇನ್ನು ಅದೇ ಊರಿನ ರಾಜಕಾರಣಿ ದೇವರಾಜ್ ಚಕ್ರವರ್ತಿಯ ಎರಡನೇ ಮಗ ಕಥಾ ನಾಯಕ ಜೈರಾಜ್. ದೇವರಾಜ್ ಗೆ ತಾನು ಹೇಳಿದ್ದೆ ಮಗ ಕೇಳ್ಬೇಕು ಅನ್ನೋ ಹಠ. ಆದರೆ ತದ್ವಿರುದ್ದ ಮನಸ್ಥಿತಿಯನ್ನು ಹೊಂದಿರುವ ಜೈರಾಜ್ ಮಾತ್ರ ತನಗನಿಸಿದನ್ನೇ ಮಾಡುತ್ತಾನೆ. ಅಚಾನಕ್ ಆಗಿ ಪಾಲಿಟಿಕ್ಸ್ ಗೆ ಎಂಟ್ರಿ ಕೊಟ್ಟ ಲಲಿತಾ, ಪಂಚಾಯತ್ ಚುನಾವಣೆಯಲ್ಲಿ ಊರವರ ಮತಗೆದ್ದು ಅಧ್ಯಕ್ಷೆಯಾಗ್ತಾಳೆ. ಮುಂದೆ ದೇವರಾಜ್ ಚಕ್ರವರ್ತಿ ರಚಿಸುವ ಮೋಸದ ಹುನ್ನಾರದಿಂದ ಲಲಿತಾಳನ್ನು ತನ್ನ ಮನೆಯ ಸೊಸೆಯನ್ನಾಗಿ ಮಾಡ್ಕೊಳ್ತಾನೆ. ಆದರೆ ಈ ಮದುವೆ ಜೈರಾಜ್ ಗೆ ಇಷ್ಟವಿಲ್ಲ ಎಂಬ ವಿಷಯ ತಿಳಿಯದೆ ಮದುವೆಯಾಗಿರೋ ಲಲಿತಾಳ ಮುಂದಿನ ನಡೆಯೇನಾಗಬಹುದು? ಮದುವೆಯೇ ಕನಸಾಗಿದ್ದವಳಿಗೆ ಮದುವೆಯ ಜೀವನ ಮುಳ್ಳಿನಂತಾಗುತ್ತಾ? ಊರನ್ನೇ ಗೆದ್ದವಳು ಅತ್ತೆಯ ಮನಸ್ಸನ್ನು ಗೆದ್ದು ಚಕ್ರವರ್ತಿ ಮನೆತನದ ಸೊಸೆ ಎಂಬ ಸ್ಥಾನವನ್ನು ಪಡೆದುಕೊಳ್ತಾಳಾ? ಮುಂದೆ ಲಲಿತಾಳ ಮುಗ್ದತೆಗೆ ಕರಗಿ ಮನಸೋಲ್ತಾನ ಜೈರಾಜ್? ಎಂಬುದೇ ಧಾರಾವಾಹಿ ಕಥೆ.. ನಾಯಕ-ನಾಯಕಿ ಯಾರು? ನಿರ್ಮಾಪಕ ಶ್ರೀನಿಧಿ ಡಿ.ಎಸ್ ಅವರ 'ಶ್ರೀ ಭ್ರಾಮರೀ ಕ್ರಿಯೇಶನ್ಸ್' ಎಂಬ ನಿರ್ಮಾಣ ಸಂಸ್ಥೆಯಿಂದ ಹಾಗೂ ಐಶ್ವರ್ಯ ಎಸ್ ಪಿ ಪ್ರೊಡಕ್ಷನ್ಸ್ ವತಿಯಿಂದ 'ಜೈ ಲಲಿತಾ' ಧಾರಾವಾಹಿ ರೂಪುಗೊಳ್ಳುತ್ತಿದ್ದು ದರ್ಶಿತ್ ಮತ್ತು ಸುರೇಂದ್ರ ಶಿವಮೊಗ್ಗ ಅವರ ನಿರ್ದೇಶನದಲ್ಲಿ ಮೂಡಿ ಬರಲಿದೆ. ನಾಯಕ ಜೈರಾಜ್ ಪಾತ್ರದಲ್ಲಿ ನಟ ಶಿವಾಂಕ್ ಹಾಗು ನಾಯಕಿ ಲಲಿತಾ ಪಾತ್ರದಲ್ಲಿ ನಟಿ ಮನಸ್ವಿ ನಟಿಸುತ್ತಿದ್ದಾರೆ. ಜೊತೆಗೆ ಸುನಿಲ್ ಪುರಾಣಿಕ್, ಸ್ಪಂದನ, ರೋಹಿತ್, ನಿರಂಜನ್, ರಶ್ಮಿತಾ , ಲಿಟ್ಲ್ ಕ್ವೀನ್ ಐಶ್ವರ್ಯ ಎಸ್ ಪಿ ಹಾಗು ಶ್ವೇತಾ ರಾವ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಈ ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದಾರೆ ✍️ವರದಿ: ಸುರೇಂದ್ರ ಶಿವಮೊಗ್ಗ.....
ಜೈ ಲಲಿತಾ ಸೀರಿಯಲ್ ವೀಕ್ಷಕರಿಗೆ ಎಷ್ಟೇ ಹೊಸ ಧಾರಾವಾಹಿಗಳು ಬಂದರೂ ನೋಡುತ್ತಾರೆ. ಹೊಸಹೊಸ ಕಥೆಗಳಿಗಾಗಿ ಕಾಯುತ್ತಾರೆ. ಸೀರಿಯಲ್ ಪ್ರಿಯರಿಗೆ ಖುಷಿ ಕೊಡುವ ಸುದ್ದಿ ಇಲ್ಲೊಂದಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶೀಘ್ರದಲ್ಲಿ ಹೊಚ್ಚಹೊಸ ಧಾರಾವಾಹಿ ಆರಂಭವಾಗಲಿದೆ. ವಿಭಿನ್ನ ಕಥಾ ಹಂದರ ಇರುವ ಧಾರಾವಾಹಿ ಜೈ ಲಲಿತಾ ಇದೇ ಸೋಮವಾರದಿಂದ (ಡಿಸೆಂಬರ್ 8) ರಾತ್ರಿ 9.30ಕ್ಕೆ ಟೆಲಿಕಾಸ್ಟ್ ಆಗಲಿದೆ. ಜೈ ಲಲಿತಾ ಧಾರಾವಾಹಿ ಡಿ.8ರಿಂದ ಆರಂಭ ಕಥೆ ಏನು? ಭೈರವಪುರ ಎಂಬ ಸುಂದರ ಹಳ್ಳಿಯಲ್ಲಿ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿರೋ ಹುಡುಗಿ ಕಥಾ ನಾಯಕಿ ಲಲಿತಾ. ಬಿ.ಎ ಪಾಸ್ ಆಗ್ಬೇಕು ಅನ್ನೋದು ಇವಳ ದೊಡ್ಡ ಕನಸು. ಎಲ್ಲರೂ ಕೆಲಸ ಪಡೆಯಲು ಡಿಗ್ರಿ ಓದಬೇಕು ಎಂದುಕೊಂಡರೆ, ನಮ್ಮ ಕಥಾ ನಾಯಕಿ ಮದುವೆ ಆಗೋದಕ್ಕೋಸ್ಕರವೇ ಬಿಎ ಪಾಸ್ ಆಗ್ಲೇಬೇಕು ಎಂದುಕೊಂಡಿದ್ದಾಳೆ. ನಟ ರಾಕಿಂಗ್ ಸ್ಟಾರ್ ಯಶ್ ನ ಅಪ್ಪಟ ಅಭಿಮಾನಿಯಾಗಿರೋ ಲಲಿತಾಗೆ ಸಿನಿಮಾ ಅಂದ್ರೆ ಪಂಚ ಪ್ರಾಣ.
ಥಿಯೇಟರ್ ಗೆ ಒಳ್ಳೇ ಸಿನಿಮಾ ಬಂದ್ರೆ ಸಾಕು ಹೋಗ್ದೇ ಇರೋ ಮಾತೇ ಇಲ್ಲ. ಡ್ರಾಮಾ ಕ್ವೀನು, ಶುದ್ಧ ತರ್ಲೆಯಾಗಿರೋ ಈಕೆ ಊರಿನವರ ಮನೆಮಗಳು, ಜೊತೆಗೆ ತಂದೆಯ ಮುದ್ದಿನ ಮಗಳು. ಇನ್ನು ಅದೇ ಊರಿನ ರಾಜಕಾರಣಿ ದೇವರಾಜ್ ಚಕ್ರವರ್ತಿಯ ಎರಡನೇ ಮಗ ಕಥಾ ನಾಯಕ ಜೈರಾಜ್. ದೇವರಾಜ್ ಗೆ ತಾನು ಹೇಳಿದ್ದೆ ಮಗ ಕೇಳ್ಬೇಕು ಅನ್ನೋ ಹಠ. ಆದರೆ ತದ್ವಿರುದ್ದ ಮನಸ್ಥಿತಿಯನ್ನು ಹೊಂದಿರುವ ಜೈರಾಜ್ ಮಾತ್ರ ತನಗನಿಸಿದನ್ನೇ ಮಾಡುತ್ತಾನೆ. ಅಚಾನಕ್ ಆಗಿ ಪಾಲಿಟಿಕ್ಸ್ ಗೆ ಎಂಟ್ರಿ ಕೊಟ್ಟ ಲಲಿತಾ, ಪಂಚಾಯತ್ ಚುನಾವಣೆಯಲ್ಲಿ ಊರವರ ಮತಗೆದ್ದು ಅಧ್ಯಕ್ಷೆಯಾಗ್ತಾಳೆ. ಮುಂದೆ ದೇವರಾಜ್ ಚಕ್ರವರ್ತಿ ರಚಿಸುವ ಮೋಸದ ಹುನ್ನಾರದಿಂದ ಲಲಿತಾಳನ್ನು ತನ್ನ ಮನೆಯ ಸೊಸೆಯನ್ನಾಗಿ ಮಾಡ್ಕೊಳ್ತಾನೆ. ಆದರೆ ಈ ಮದುವೆ ಜೈರಾಜ್ ಗೆ ಇಷ್ಟವಿಲ್ಲ ಎಂಬ ವಿಷಯ ತಿಳಿಯದೆ ಮದುವೆಯಾಗಿರೋ ಲಲಿತಾಳ ಮುಂದಿನ ನಡೆಯೇನಾಗಬಹುದು? ಮದುವೆಯೇ ಕನಸಾಗಿದ್ದವಳಿಗೆ ಮದುವೆಯ ಜೀವನ ಮುಳ್ಳಿನಂತಾಗುತ್ತಾ? ಊರನ್ನೇ
ಗೆದ್ದವಳು ಅತ್ತೆಯ ಮನಸ್ಸನ್ನು ಗೆದ್ದು ಚಕ್ರವರ್ತಿ ಮನೆತನದ ಸೊಸೆ ಎಂಬ ಸ್ಥಾನವನ್ನು ಪಡೆದುಕೊಳ್ತಾಳಾ? ಮುಂದೆ ಲಲಿತಾಳ ಮುಗ್ದತೆಗೆ ಕರಗಿ ಮನಸೋಲ್ತಾನ ಜೈರಾಜ್? ಎಂಬುದೇ ಧಾರಾವಾಹಿ ಕಥೆ.. ನಾಯಕ-ನಾಯಕಿ ಯಾರು? ನಿರ್ಮಾಪಕ ಶ್ರೀನಿಧಿ ಡಿ.ಎಸ್ ಅವರ 'ಶ್ರೀ ಭ್ರಾಮರೀ ಕ್ರಿಯೇಶನ್ಸ್' ಎಂಬ ನಿರ್ಮಾಣ ಸಂಸ್ಥೆಯಿಂದ ಹಾಗೂ ಐಶ್ವರ್ಯ ಎಸ್ ಪಿ ಪ್ರೊಡಕ್ಷನ್ಸ್ ವತಿಯಿಂದ 'ಜೈ ಲಲಿತಾ' ಧಾರಾವಾಹಿ ರೂಪುಗೊಳ್ಳುತ್ತಿದ್ದು ದರ್ಶಿತ್ ಮತ್ತು ಸುರೇಂದ್ರ ಶಿವಮೊಗ್ಗ ಅವರ ನಿರ್ದೇಶನದಲ್ಲಿ ಮೂಡಿ ಬರಲಿದೆ. ನಾಯಕ ಜೈರಾಜ್ ಪಾತ್ರದಲ್ಲಿ ನಟ ಶಿವಾಂಕ್ ಹಾಗು ನಾಯಕಿ ಲಲಿತಾ ಪಾತ್ರದಲ್ಲಿ ನಟಿ ಮನಸ್ವಿ ನಟಿಸುತ್ತಿದ್ದಾರೆ. ಜೊತೆಗೆ ಸುನಿಲ್ ಪುರಾಣಿಕ್, ಸ್ಪಂದನ, ರೋಹಿತ್, ನಿರಂಜನ್, ರಶ್ಮಿತಾ , ಲಿಟ್ಲ್ ಕ್ವೀನ್ ಐಶ್ವರ್ಯ ಎಸ್ ಪಿ ಹಾಗು ಶ್ವೇತಾ ರಾವ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಈ ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದಾರೆ ✍️ವರದಿ: ಸುರೇಂದ್ರ ಶಿವಮೊಗ್ಗ.....
- ಸೋಷಿಯಲ್ ಮೀಡಿಯಾ ಅಪ್ ಡೇಟ್ ವಿಡಿಯೋ...1
- ಹೂಡಿ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನ್ಯಾಯ ಒದಗಿಸಲು ಮುಂದಾದ ಭಾರತೀಯರ ಸೇವಾ ಸಮಿತಿ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಡಾ. ಹೆಚ್. ಎಂ. ರಾಮಚಂದ್ರ (ಹೂಡಿ ಚಿನ್ನಿ) ರವರ ಮೇಲೆ ಹಲ್ಲೆ ನಡೆದಿರುವ ಘಟನೆ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ. ಮಾಹಿತಿಯ ಪ್ರಕಾರ, ಹೂಡಿ ಭಾಗದಲ್ಲಿ ಕೆಲ ಬಲಾಢ್ಯ ವ್ಯಕ್ತಿಗಳು ಸಾರ್ವಜನಿಕರಿಗೆ ನೀಡಲಾಗಿದ್ದ ಬೀದಿ ಬದಿ ವ್ಯಾಪಾರ ಸ್ಥಳಗಳನ್ನು ತಮ್ಮ ಖಾಸಗಿ ಜಾಗಗಳಂತೆ ಬಳಸಿಕೊಳ್ಳುತ್ತಿದ್ದು, ವ್ಯಾಪಾರಿಗಳನ್ನು ಹೊರಹಾಕುತ್ತಿದ್ದರೆಂದು ತಿಳಿದು ಬಂದಿದೆ. ಈ ಅನ್ಯಾಯವನ್ನು ಪ್ರಶ್ನಿಸಲು ಚಿನ್ನಿ ರವರು ಸ್ಥಳಕ್ಕೆ ಭೇಟಿ ನೀಡಿದ ವೇಳೆ, ಉಮಾಶಂಕರ್ ಎಂಬ ವ್ಯಕ್ತಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ. ಈ ಕುರಿತಂತೆ ಸಂಘಟನೆಯ ಕಾರ್ಯಕರ್ತರು ಹಾಗೂ ಚಿನ್ನಿ ರವರ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಘಟನೆಯ ನಂತರ ಹೂಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ವ್ಯಾಪಾರಿಗಳು ಹಾಗೂ ಸ್ಥಳೀಯರು ಚಿನ್ನಿ ರವರಿಗೆ ಬೆಂಬಲ ಸೂಚಿಸಿದ್ದಾರೆ.1
- *ಭಾರತ ನಲ್ಲಿ ವೈರಲ್*1
- STOP CONSUMING DRUGS AND SAVE OUR YOUNG GENERATION ITS NECESSARY1
- ಹನೂರು ಶಾಸಕರಾದ ಎಂ ಎಂ. ಆರ್. ಮಂಜುನಾಥ್ ಅವರು ಜಿಲ್ಲಾಧಿಕಾರಿ ಶಿಲ್ಪನಾಗ್ ಜೊತೆಗೂಡಿ ಕೊಳ್ಳೇಗಾಲ ತಾಲೂಕಿನ ನರೀಪುರ -ಸತ್ತೇಗಾಲ ಗ್ರಾಮಗಳ ಮಾರ್ಗ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿ 948 ರ ರಸ್ತೆ ಕಾಮಗಾರಿ ಹಾಗೂ ಮದ್ಯರಂಗನಾಥ ದೇವಾಲಯ ಜೀರ್ಣೋದ್ದಾರ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು, ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಜರುಗುತ್ತಿದೆ, ರಸ್ತೆ ಕಾಮಗಾರಿ ವೈಜ್ಞಾನಿಕವಾಗಿ ನಡೆದಿಲ್ಲ ರಸ್ತೆ ಕಾಮಗಾರಿಯಲ್ಲಿ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಕಾಮಗಾರಿ ನಡೆಸಿಲ್ಲ ನಾಲ್ಕು ರಸ್ತೆ ಕೂಡುವ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಬೈಪಾಸ್ ರಸ್ತೆ ನರೀಪುರ ಮಹದೇಶ್ವರ ಬೆಟ್ಟ ಬೈಪಾಸ್ ಗಳಲ್ಲಿ ಸರ್ಕಲ್ ಹಾಗೂ ಸರ್ವಿಸ್ ರಸ್ತೆಗಳಿಗೆ ಅಂಡರ್ ಪಾಸ್ ಗಳನ್ನು ನಿರ್ಮಿಸಿದೆ ಕಾಮಗಾರಿಗಳನ್ನು ಮುಗಿಸಲಾಗಿದೆ ರಸ್ತೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ ಆದ್ದರಿಂದ ಟೆಂಡರ್ ಪಡೆದ ಕನ್ಸ್ಟ್ರಕ್ಷನ್ ನವರು ಇಂಜಿನಿಯರ್ ಗಳು ಜವಾಬ್ದಾರಿವಹಿಸಿ ಸುರಕ್ಷಿತ ಅಂಡರ್ ಪಾಸ್ ಗಳು ಹಾಗೂ ಸರ್ಕಲ್ ಗಳನ್ನು ನಿರ್ಮಿಸಬೇಕು ಮೂರು ರಸ್ತೆಗಳು ಕೂಡುವ ಕಡೆ ಸರ್ಕಲ್ ಗಳನ್ನು ನಿರ್ಮಿಸಿಲ್ಲ ಹೆದ್ದಾರಿ ಮತ್ತು ಸರ್ವಿಸ್ ರಸ್ತೆಗಳಲ್ಲಿ ಡಿವೈಡರ್ ಗಳನ್ನು ನಿರ್ಮಿಸದೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಸಲಾಗಿದೆ, ಆದ್ದರಿಂದ ಅಪಘಾತ ಸಂಭವಿಸುತ್ತಿವೆ ಆದ್ದರಿಂದ ಇದನ್ನು ತಡೆಗಟ್ಟಲು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಆರ್ ಮಂಜುನಾಥ್ ತಿಳಿಸಿದರು. ಇದೆ ವೇಳೆ ಸತ್ತೇಗಾಲ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ರೈತ ಮುಖಂಡರುಗಳ ಮನವಿಯಂತೆ ಹೆದ್ದಾರಿಗಳಲ್ಲಿ ವಿದ್ಯುತ್ ಲೈಟ್ ಗಳು, ಅಪಘಾತಗಳು ಜರುಗುವ ಸ್ಥಳಗಳಲ್ಲಿ ರೋಡ್ ಹಮ್ಸ್ ನಿರ್ಮಿಸಿ ಕೊಡಲಾಗುವುದು ಮತ್ತು ಈ ಮಾರ್ಗವಾಗಿ ಸ್ಥಳೀಯರ ರಸ್ತೆ ಸಂಚಾರಕ್ಕೆ ಅವಕಾಶವಾಗಲೆಂದು ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು ಹಾಗೂ ಸತ್ತೇಗಾಲ ಬೈಪಾಸ್ ಸೇತುವೆಯಿಂದ ಅಂಡರ್ ಪಾಸ್ ರಸ್ತೆ ನಿರ್ಮಿಸಿ ಉಗನಿಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಅಂಡರ್ ಪಾಸ್ ಸೇತುವೆ ನಿರ್ಮಾಣ ಮಾಡಲಾಗುವುದು. ಮತ್ತು ಹೆದ್ದಾರಿ ಉದ್ದಕ್ಕೂ, ವಿದ್ಯುತ್ ಬಲ್ಪ್ ಗಳನ್ನು ಅಳವಡಿಸಲು ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಎಂಆರ್ ಮಂಜುನಾಥ್ ಮತ್ತು ಜಿಲ್ಲಾಧಿಕಾರಿ ಶಿಲ್ಪಾನಾಥ್ ತಿಳಿಸಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ದಿಲೀಪ್ ಕುಮಾರ್ ಮೀನಾ, ತಹಶೀಲ್ದಾರ್ ಬಸವರಾಜು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಎನ್.ಹೆಚ್ ಚಾರುಲತಾ ಜೈನ್, ವಿಶ್ವ ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಸೆಸ್ಕ್ ಎಇಇ ರಾಜು, ಸತ್ತೇಗಾಲದ ಗ್ರಾಮಸ್ಥರು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.2
- 🙏🏻 ನಮ್ಮಲ್ಲಿ ಸೋಲಾರ್ ಹಾಟ್ ವಾಟರ್. UPS ಬೆಟ್ಟರಿ. ಸೋಲಾರ್ UPS. ಹೋಂ ಸೋಲಾರ್. ಕರೆಂಟ್ ಗಿಜಾರ್. ಗ್ಯಾಸ್ ಗಿಜಾರ್. ಸೋಲಾರ್ ಸ್ಟ್ರೀಟ್ ಲೈಟ್. ಚಿಮಣಿ. ಎಲ್ಲ ವನ್ನು ಸರ್ವಿಸ್ ಮಾಡಿ ಕೊಡಲಾಗುತದೆ. phone :-80889599494
- Post by Shiva Prasad1
- *ಭಾರತ ನಲ್ಲಿ ವೈರಲ್*1