Shuru
Apke Nagar Ki App…
ವಿಜಯಪುರ : ಗನ್ ತೋರಿಸಿ ದರೋಡೆ, ಖದೀಮರ ಹೆಡೆಮುರಿ ಕಟ್ಟಿದ ಪೊಲೀಸರು ವಿಜಯಪುರ ಜಿಲ್ಲೆಯ ಹಲಸಂಗಿ ಗ್ರಾಮದ ಭೂಮಿಕಾ ಜ್ಯೂವೆಲರ್ಸ್‌ನಲ್ಲಿ ಗನ್ ತೋರಿಸಿ ದರೋಡೆ ಮಾಡಿದ್ದ ಇಬ್ಬರು ಖದೀಮರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಮಹಾರಾಷ್ಟ್ರದ ಹಣಮಂತ ಮತ್ತು ಇಂಡಿಯ ಶಿವರಾಜ್ ಬಂಧಿತರು. ಜನವರಿ 26 ರಂದು ನಡೆದಿದ್ದ ಹಾಡಹಗಲೇ ಗನ್ ತೋರಿಸಿ ದರೋಡೆ ನಡೆಸಿದ್ದರು. ಬಂಧಿತ ಆರೋಪಿಗಳಿಂದ 3 ಪಿಸ್ತೂಲ್, 26 ಸಜೀವ ಗುಂಡುಗಳು ಹಾಗೂ ₹24 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಝಳಕಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
ವಿಜಯಪುರ : ಗನ್ ತೋರಿಸಿ ದರೋಡೆ, ಖದೀಮರ ಹೆಡೆಮುರಿ ಕಟ್ಟಿದ ಪೊಲೀಸರು ವಿಜಯಪುರ ಜಿಲ್ಲೆಯ ಹಲಸಂಗಿ ಗ್ರಾಮದ ಭೂಮಿಕಾ ಜ್ಯೂವೆಲರ್ಸ್‌ನಲ್ಲಿ ಗನ್ ತೋರಿಸಿ ದರೋಡೆ ಮಾಡಿದ್ದ ಇಬ್ಬರು ಖದೀಮರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಮಹಾರಾಷ್ಟ್ರದ ಹಣಮಂತ ಮತ್ತು ಇಂಡಿಯ ಶಿವರಾಜ್ ಬಂಧಿತರು. ಜನವರಿ 26 ರಂದು ನಡೆದಿದ್ದ ಹಾಡಹಗಲೇ ಗನ್ ತೋರಿಸಿ ದರೋಡೆ ನಡೆಸಿದ್ದರು. ಬಂಧಿತ ಆರೋಪಿಗಳಿಂದ 3 ಪಿಸ್ತೂಲ್, 26 ಸಜೀವ ಗುಂಡುಗಳು ಹಾಗೂ ₹24 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಝಳಕಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
More news from ಕರ್ನಾಟಕ and nearby areas
- ಬಾಗೇವಾಡಿ: ಫೆ. 25ರಂದು ನಗರದಲ್ಲಿ ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ಫೆಬ್ರುವರಿ 25ರಂದು ವಿಜಯಪುರ ನಗರದ ದರ್ಬಾರ್ ಕ್ರೀಡಾಂಗಣದಲ್ಲಿ ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ನಡೆಯಲಿದೆ ಎಂದು ಡಾಕ್ಟರ್ ನಾಗೂರು ಗುರುವಾರ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 500 ಕಲಾವಿದರು ಭಾಗವಹಿಸಲಿದ್ದು, ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.1
- ಮೂಲ ಸಂಸ್ಥಾನ ಹೊಳೆ ಬಬಲಾದಿಯ 2026ರ ಕಾಲ ಜ್ಞಾನ ಸಾರಿದ ಸಿದ್ದು ಮುತ್ಯಾ1
- 🎶 ಹೊಸ ಪ್ರೇಮಕಾವ್ಯ ಗೀತೆ ಬಿಡುಗಡೆಗೆ ಸಿದ್ಧ! 🎶 ಕವಿ ಎಚ್.ಎನ್. ಶೇಬಣ್ಣನವರ್ ರಚನೆಯ ಬಹುನಿರೀಕ್ಷಿತ "ನೀನ ನನ್ನಾಕಿ" ಗೀತೆ ಇದೇ ಫೆಬ್ರವರಿ 20ರಂದು ಬಿಡುಗಡೆಯಾಗಲಿದೆ. ಈ ಮನಮೋಹಕ ಗೀತೆಯಲ್ಲಿ ಪತ್ರಕರ್ತ ಸರ್ಜಾ ಸೋಮಶೇಖರ ನಾಯಕನಾಗಿ ಅಭಿನಯಿಸಿದ್ದು, ಶೃತಿ ನಾಯಕಿಯಾಗಿ ಮಿಂಚಿದ್ದಾರೆ. ಸುಂದರ ಸಾಹಿತ್ಯ, ಮನಸೂರೆಗೊಳ್ಳುವ ಸಂಗೀತ ಹಾಗೂ ವಿಭಿನ್ನ ದೃಶ್ಯ ವಿನ್ಯಾಸದೊಂದಿಗೆ ಈ ಹೊಸ ಗೀತೆ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದೆ. ಹೊಸ ಪ್ರತಿಭೆಗಳನ್ನು ಬೆಂಬಲಿಸಿ, ಗೀತೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಎಂದು ತಂಡ ಮನವಿ ಮಾಡಿಕೊಂಡಿದೆ. ಬಿಡುಗಡೆಯ ದಿನ ಗೀತೆಯನ್ನು ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ! #ನೀನನನ್ನಾಕಿ #NewSongRelease #KannadaSong #EntertainmentNews #SarjaSomashekhar #Shruti #HNShebannavar #PetkarMedia1
- ಮುಧೋಳ : ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ಅಂಗವಾಗಿ ಮುಂಜಾಗ್ರತಾ ದೃಷ್ಠಿಯಿಂದ ನಗರದ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಯಿತು. ಪಿಎಸ್ಐ ಅಜಿತ ಹೊಸಮನಿ ಅವರ ಮುಂದಾಳತ್ವದಲ್ಲಿ ನಡೆದ ಪಥಸಂಚಲನ ನಗರದ ಶಿವಾಜಿ ವೃತ್ತ, ಗಡದನ್ನವರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.4
- ಇಂದು ಬಾಗಲಕೋಟೆ ನಗರದಲ್ಲಿ ಮಹತ್ವದ ಘಟನೆ ನಡೆದಿದೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಸಾರ್ವಜನಿಕರ ದೂರಿನ ಮೇರೆಗೆ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ ಸಂಘಟನೆ) ವತಿಯಿಂದ ಪ್ರತಿಭಟನೆ ನಡೆಸಲಾಯಿತು. ದಿನಾಂಕ ೧೮.೦೨.೨೦೨೬ ರಂದು ಬೆಳಿಗ್ಗೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರು ಪ್ರಾಧಿಕಾರದ ಮುಖ್ಯ ದ್ವಾರದ ಎದುರು ಸೇರಿ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಾಧಿಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯ ಪರಿಣಾಮವಾಗಿ ಕೆಲ ಗಂಟೆಗಳ ಕಾಲ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಸಾರ್ವಜನಿಕರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು. ಇದೀಗ ಪ್ರಾಧಿಕಾರದ ಪ್ರತಿಕ್ರಿಯೆ ಏನು ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿದೆ.1
- ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದ ಅಂಗವಾಗಿ ೧೦೦೦ ಕ್ಕೂ ಹೆಚ್ಚು ಬೈಕ್ ರ್ಯಾಲಿ ಫೆಬ್ರುವರಿ ೧೯ ಗುರುವಾರ ಬೆಳಗ್ಗೆ ೧೦ ಗಂಟೆಗೆ ನಡೆಯಿತು. ಬೈಕ್ ರ‍್ಯಾಲಿ ಚಂದ್ರಶೇಖರ್ ಅಜಾದ್ ಸರ್ಕಲ್‌ದಿಂದ ಆರಂಭವಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಛತ್ರಪತಿ ಶಿವಾಜಿ ಮಹಾರಾಜರ ಘೋಷಣೆಗಳು ಮುಳುಗಿದವು. ರ‍್ಯಾಲಿಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಪುತ್ರ ರಾಜುಗೌಡ ಪಾಟೀಲ, ಹಿಂದೂ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ಪ್ರದೀಪ ಅಮರಣ್ಣನವರ, ಪರಶುರಾಮ ಬಿಸಲದಿನ್ನಿ, ಎಂ.ಆರ್.ಪಾಟೀಲ ಸೇರಿದಂತೆ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.1
- ಬುಧವಾರ ಬೆಳಗ್ಗೆ ಸುರಪುರ ತಾಲೂಕಿನ ಬಂಡೊಳ್ಳಿ ಗ್ರಾಮಕ್ಕೆ ಪರಮಪೂಜ್ಯ ಶ್ರೀ ಡಾ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ಆಗಮಿಸಿ ಮಠದ ಜಾಗವನ್ನು ವೀಕ್ಷಣೆ ಮಾಡಿ ಸಮಾಜದವರ ಕುರಿತು ಹಲವಾರು ವಿಚಾರಗಳನ್ನು ಮಾತನಾಡಿದರು ಈಗಾಗಲೇ ಸರಕಾರ ಐದು ಕೋಟಿ ಬಿಡುಗಡೆಯಾಗಿದ್ದು ಅದನ್ನು ಶಾಖ ಮಠ ಮಾಡಲು ಮತ್ತು ಇಲ್ಲಿ ಅತ್ಯುತ್ತಮ ಗುಣಮಟ್ಟದ ಶಾಲೆಯನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಹೇಳಿದರು1
- ವಿಜಯಪುರ: ದೇವಾಲಯಗಳು ಉಳಿಯಬೇಕಾದರೆ ಹಿಂದೂಗಳು ಒಂದಾಗಬೇಕು ಯತ್ನಾಳ ದೇಶದಲ್ಲಿ ಹಿಂದೂ ದೇವಾಲಯಗಳು ಉಳಿಯಬೇಕಾದರೆ ಹಿಂದೂಗಳು ಜಾತಿ ಭೇದ ಮರೆತು ಒಂದಾಗಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು. ದೇಶದಲ್ಲಿ ಕೆಲವು ಅನ್ಯಕೋಮಿಗಳು ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ರಾಮಾಯಣ ಮತ್ತು ಸಂವಿಧಾನ ರಚಿಸಿದವರು ಈ ದೇಶದ ಮೂಲ ನಿವಾಸಿಗಳು ಎಂದು ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತಿಳಿಸಿದರು.1