logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಬುಧವಾರ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರಿಗೆ ಒಂದು ಲೋಡ್ ಭತ್ತದ ಮೇವನ್ನು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚಳ್ಳಕೆರೆ: ತಾಲೂಕಿನ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ಬಣವೆಗೆ ಸೋಮವಾರ ಬೆಂಕಿ ಬಿದ್ದು ಮೇವು ಸಂಪೂರ್ಣವಾಗಿ ಸುಟ್ಟು ಹೋಗಿದ್ದ ಘಟನೆಗೆ ಸಂಬಂಧಿಸಿದಂತೆ ಜನಧ್ವನಿ ನ್ಯೂಸ್ ಪ್ರಕಟಿಸಿದ ವರದಿಗೆ ಉತ್ತಮ ಸ್ಪಂದನೆ ದೊರೆತಿದೆ. ವರದಿ ಬೆಳಕಿಗೆ ಬಂದ ಬೆನ್ನಲ್ಲೇ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಬುಧವಾರ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರಿಗೆ ಒಂದು ಲೋಡ್ ಭತ್ತದ ಮೇವನ್ನು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ವೇಳೆ ಮಾತನಾಡಿದ ಅವರು, ರೈತರು ಹಾಗೂ ಜಾನುವಾರುಗಳ ಪಾಲನೆ-ಪೋಷಣೆ ಮಾಡುವಲ್ಲಿ ಎದುರಿಸುವ ಕಷ್ಟಗಳನ್ನು ನಾನು ಚೆನ್ನಾಗಿ ಅರಿತಿದ್ದೇನೆ. ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ಬಣವೆಗೆ ಬೆಂಕಿ ಬಿದ್ದು ಉಂಟಾದ ನಷ್ಟದ ಕುರಿತು ಜನಧ್ವನಿ ನ್ಯೂಸ್ ವರದಿ ನೋಡಿ ಮನಸ್ಸಿಗೆ ಬೇಸರವಾಯಿತು. ಆದ್ದರಿಂದ ರೈತನ ಜಾನುವಾರುಗಳಿಗೆ ನೆರವಾಗುವ ಉದ್ದೇಶದಿಂದ ಮೇವು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮೇವು ನೆರವು ನೀಡಿದ ಶ್ರೀ ಜಪಾನಂದ ಸ್ವಾಮೀಜಿಗಳಿಗೆ ರೈತ ನಾಗರಾಜ್ ಕೃತಜ್ಞತೆ ಸಲ್ಲಿಸಿದರು.

on 11 March
user_ಗೋಪನಹಳ್ಳಿಶಿವಣ್ಣ
ಗೋಪನಹಳ್ಳಿಶಿವಣ್ಣ
Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
on 11 March

ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಬುಧವಾರ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರಿಗೆ ಒಂದು ಲೋಡ್ ಭತ್ತದ ಮೇವನ್ನು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚಳ್ಳಕೆರೆ: ತಾಲೂಕಿನ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ಬಣವೆಗೆ ಸೋಮವಾರ ಬೆಂಕಿ ಬಿದ್ದು ಮೇವು ಸಂಪೂರ್ಣವಾಗಿ ಸುಟ್ಟು ಹೋಗಿದ್ದ ಘಟನೆಗೆ ಸಂಬಂಧಿಸಿದಂತೆ ಜನಧ್ವನಿ ನ್ಯೂಸ್ ಪ್ರಕಟಿಸಿದ ವರದಿಗೆ ಉತ್ತಮ ಸ್ಪಂದನೆ ದೊರೆತಿದೆ. ವರದಿ ಬೆಳಕಿಗೆ ಬಂದ ಬೆನ್ನಲ್ಲೇ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಬುಧವಾರ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರಿಗೆ ಒಂದು ಲೋಡ್ ಭತ್ತದ ಮೇವನ್ನು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ವೇಳೆ ಮಾತನಾಡಿದ ಅವರು, ರೈತರು ಹಾಗೂ ಜಾನುವಾರುಗಳ ಪಾಲನೆ-ಪೋಷಣೆ ಮಾಡುವಲ್ಲಿ ಎದುರಿಸುವ ಕಷ್ಟಗಳನ್ನು ನಾನು ಚೆನ್ನಾಗಿ ಅರಿತಿದ್ದೇನೆ. ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ಬಣವೆಗೆ ಬೆಂಕಿ ಬಿದ್ದು ಉಂಟಾದ ನಷ್ಟದ ಕುರಿತು ಜನಧ್ವನಿ ನ್ಯೂಸ್ ವರದಿ ನೋಡಿ ಮನಸ್ಸಿಗೆ ಬೇಸರವಾಯಿತು. ಆದ್ದರಿಂದ ರೈತನ ಜಾನುವಾರುಗಳಿಗೆ ನೆರವಾಗುವ ಉದ್ದೇಶದಿಂದ ಮೇವು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮೇವು ನೆರವು ನೀಡಿದ ಶ್ರೀ ಜಪಾನಂದ ಸ್ವಾಮೀಜಿಗಳಿಗೆ ರೈತ ನಾಗರಾಜ್ ಕೃತಜ್ಞತೆ ಸಲ್ಲಿಸಿದರು.

  • user_Yashodhara K
    Yashodhara K
    ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ
    good job 👏
    on 11 March
More news from ಕರ್ನಾಟಕ and nearby areas
  • ತುಮಕೂರು : ರಾಷ್ಟ್ರೀಯ ಹೆದ್ದಾರಿ 4 ರ ಸಮೀಪ ವಿರುವ ಬಾಲಾಜಿ ಟ್ರಾನ್ಸ್ಪೋರ್ಟ್ ಅಲ್ಲಿ ಅಗ್ನಿ ಅವಘಡ ಸಂಭವಿಸಿದೆ ಟೈರ್ಗಳು ಸುಟ್ಟು ಕರಕಲಾಗಿ ದಟ್ಟ ಹೊಗೆ ಕಂಡು ಬಂದಿದೆ
    1
    ತುಮಕೂರು : ರಾಷ್ಟ್ರೀಯ ಹೆದ್ದಾರಿ   4 ರ ಸಮೀಪ ವಿರುವ  ಬಾಲಾಜಿ ಟ್ರಾನ್ಸ್ಪೋರ್ಟ್ ಅಲ್ಲಿ    ಅಗ್ನಿ ಅವಘಡ  ಸಂಭವಿಸಿದೆ  ಟೈರ್ಗಳು  ಸುಟ್ಟು ಕರಕಲಾಗಿ ದಟ್ಟ ಹೊಗೆ ಕಂಡು ಬಂದಿದೆ
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    12 hrs ago
  • ಗದಗ ಮುಂಡರಗಿ ತಾಲೂಕು ಆಡಳಿತ, ತಾಲೂಕುವರ ಪಂಚಾಯತ್‌, ಮುಂಡರಗಿ,ಸಮಾಜ ಕಲ್ಯಾಣ ಇಲಾಖೆ, ಹಾಗೂ ಮುಂಡರಗಿ ತಾಲೂಕಿನ ದಲಿತಪರ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಮಹಾ ಮಾನವತಾವಾದಿ, ಭಾರತ ರತ್ನ ಡಾ. ಬಿ.ಆ‌ರ್. ಅಂಬೇಡ್ಕರ್ 135 ನೇ ಜಯಂತೋತ್ಸ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ತಾಲೂಕು ದಂಡಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ ತಾಲೂಕು ಆಡಳಿತ ತಾಲೂಕು ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ತಾಲೂಕಿನ ಎಲ್ಲಾ ಹಿರಿಯರು, ಮುಖಂಡರು, ಮಹಿಳೆಯರು, ಯುವಕರು, ಉಪಸ್ಥಿತರಿದ್ದರು.
    1
    ಗದಗ 
ಮುಂಡರಗಿ ತಾಲೂಕು ಆಡಳಿತ, ತಾಲೂಕುವರ ಪಂಚಾಯತ್‌, ಮುಂಡರಗಿ,ಸಮಾಜ ಕಲ್ಯಾಣ ಇಲಾಖೆ, ಹಾಗೂ ಮುಂಡರಗಿ ತಾಲೂಕಿನ ದಲಿತಪರ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಮಹಾ ಮಾನವತಾವಾದಿ, ಭಾರತ ರತ್ನ ಡಾ. ಬಿ.ಆ‌ರ್. ಅಂಬೇಡ್ಕರ್ 135 ನೇ ಜಯಂತೋತ್ಸ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ತಾಲೂಕು ದಂಡಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ ತಾಲೂಕು ಆಡಳಿತ ತಾಲೂಕು ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ತಾಲೂಕಿನ ಎಲ್ಲಾ ಹಿರಿಯರು, ಮುಖಂಡರು, ಮಹಿಳೆಯರು, ಯುವಕರು, ಉಪಸ್ಥಿತರಿದ್ದರು.
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    11 hrs ago
  • Gadag Jilla snake Raheman
    1
    Gadag Jilla snake Raheman
    user_ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
    ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
    City Star ಗದಗ, ಗದಗ, ಕರ್ನಾಟಕ•
    4 hrs ago
  • ಮಾಗಡಿ : ಡಿಕೆ.ಶಿವಕುಮಾರು ಯಾಗಾಗ ಮುಖ್ಯಮಂತ್ರಿ ಆಲಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಅದನ್ನೆ ಕೇಳಲು ದೆಹಲಿಗೆ ಹೋಗುತ್ತಿದ್ದೇವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಉತ್ತರಿಸಿದರು. ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಈಗಾಗಲೇ ತೆರಳಿದ್ದಾರೆ ಅವರ ಜೊತೆಗೆ ನಾನು ತೆರಳಬೇಕಿತ್ತು ಕ್ಷೇತ್ರದಲ್ಲಿ ಅಂಬೇಡ್ಕರ್ ಜಯಂತಿ ಇರುವುದರಿಂದ ಮುಗಿಸಿದ ನಂತರ ಬರುವುದಾಗಿ ತಿರ್ಮಾನಿಸಲಾಗುವುದು ಎಂದು ಹೇಳಿದ್ದೆ ಅದೇ ರೀತಿ ಏಪ್ರಿಲ್ 15 ರಂದು ದೆಹಲಿಗೆ ತೆರಳುವ ಸಂದರ್ಭ ಬರಲಿದೆ. ಸಚಿವ ಸಂಪುಟದಲ್ಲಿ ಈಗಾಗಲೇ ಕೆಲವರಿಗೆ ಸಚಿವ ಸ್ಥಾನ ನೀಡಲಾಗಿದೆ, ಹಿರಿಯ ಶಾಸಕರಿಗೂ ಸಚಿವ ಸ್ಥಾನದ ಅವಕಾಶ ಕಲ್ಪಿಸಿಕೊಟ್ಟು ಕರ್ನಾಟಕದ ಸಿಎಂ ಬದಲಾವಣೆ ಬಗ್ಗೆ ಗೊಂದಲಕ್ಕೆ ಇತಿಶ್ರೀ ಹಾಡುವಂತೆ ಪಕ್ಷದ ಹೈಕಮಾಂಡ್‍ನಲ್ಲಿ ಕೇಳುತ್ತೇವೆ ಎಂದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಆಹಮದ್ ಬೇಟಿಯಾಗಿರುವ ವಿಷಯ ನನಗೆ ಗೊತ್ತಿಲ್ಲ, ಈ ವಿಚಾರವಾಗಿ ತಿಳಿದು ಮಾತನಾಡುವುದಾಗಿ ಸ್ವಷ್ಟಪಡಿಸಿದರು. ಸಿಎಂ ಅಪ್ತ ಸಲಹೆಗಾರರ ತಲೆದಂಡ : ಕಾಂಗ್ರೆಸ್ ಪಕ್ಷವಾಗಲಿ ಯಾವುದೇ ರಾಷ್ಟ್ರೀಯ ಪಕ್ಷದಲ್ಲಿ ಪಕ್ಷ ವಿರೋಧಿ ಕೆಲಸಮಾಡಿದರೆ ಅದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರು ಆಗಲಿ ನಾನಾಗಲಿ ಪಕ್ಷ ವಿರೋಧಿ ಕೆಲಸ ಮಾಡಿದ್ರೆ ತಲೆದಂಡವಾಗಲಿದೆ ಎಂದರು. ಎರಡು ಕ್ಷೇತ್ರದ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ಆತ್ಮವಿಶ್ವಾಸವಿದೆ, ಮುಸ್ಲಿಂನ ಎಲ್ಲಾ ನಾಯಕರು ಚುನಾವಣೆ ಮಾಡಿದ್ದಾರೆ 10 ಪರ್ಸೆಟ್ ಏರುಪೇರಾಗಲಿದೆ ಈ ಬಗ್ಗೆ ಮತ ಪೆಟ್ಟಿ ತೆರೆದಮೇಲೆ ಗೊತ್ತಾಗಲಿದೆ ಎಂದರು. ಕೇರಳ ಮತ್ತು ಕರ್ನಾಟಕ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ ಕೇರಳದಲ್ಲಿ ಬಡವರು, ನರ್ಸ್‍ಗಳು, ಪೌರಕಾರ್ಮಿಕರು ಚುನಾವಣೆಗೆ ಸ್ಪಂದಿಸುತ್ತಾರೆ ಆ ರೀತಿ ಕರ್ನಾಟಕದಲ್ಲಿ ಸಾಧ್ಯವೆ. ನಾನು ಪ್ರಚಾರಕ್ಕೆ ಹೋದ ವ್ಯಕ್ತಿಯನ್ನು 2 ಭಾರಿ ಗೆಲ್ಲಿಸಿದ್ದಾರೆ ಅವರು ಇಂದಿಗೂ ಚಿಕ್ಕಮನೆಯಲ್ಲಿ ಇದ್ದಾರೆ ಅಲ್ಲಿಯ ಚುನಾವಣೆ ವೆಚ್ಚ 2 ಕೋಟಿ ಇಲ್ಲಿನ ವೆಚ್ಚ ಹತ್ತು ಪಟ್ಟು ಎಂದರು. ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಅವರಿಂದ ಸಹಾಯ ಪಡೆದ ಜೆಡಿಎಸ್ ಮುಖಂಡರೆ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಈ ಬಗ್ಗೆ ಅವರ ಬಗ್ಗೆ ಏಕೆ ಮಾತನಾಡುತ್ತಾರ ಎಂದು ತಿಳಿಸಿದ್ದೇನೆ ಆದರೂ ಈ ಬಗ್ಗೆ ಚರ್ಚೆಗೆ ಆಹ್ವಾನಿಸಿದ್ದಾರೆ ಈ ವೇಳೆ ನನ್ನ ವಯಕ್ತಿಕವಾಗಿ ಮಾತನಾಡಿರುವ ಬಗ್ಗೆ ಚರ್ಚೆಮಾಡುತ್ತೇನೆ ದಾಖಲೆ ಪ್ರದರ್ಶಿಸಲಿ ಇಲ್ದಿದ್ದರೆ ತಪ್ಪನ್ನು ಒಪ್ಪಿಕೊಂಡು ಈ ರೀತಿ ಆರೋಪಿಸುವುದನ್ನು ಬಿಡಲಿ ಈ ವೇಳೆ ಗಲಭೆಯಾದರೆ ಚರ್ಚೆಗೆ ಮೂಲಭೂತವಾಗಿ ಕಾರಣವಾದವರ ವಿರುದ್ದ ಪೊಲೀಸರು ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದರು. ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು, ಬಿಎಂಆರ್‍ಡಿಎ ಅಧ್ಯಕ್ಷ ತಟವಾಳ್ ಪ್ರಕಾಶ್, ನಿರ್ದೆಶಕ ದೀಪು, ತಾ.ಪಂ. ಮಾಜಿ ಸದಸ್ಯೆ ರತ್ನಮ್ಮ ಶ್ರೀನಿವಾಸ್,ದೊಡ್ಡಿ ಲೋಕೇಶ್, ಚಿಕ್ಕರಾಜು, ಬೆಂಕಿ ಮಹದೇವ್, ಚಿಕ್ಕಮುದಿಗೆರೆ ಸುರೇಶ್, ರಾಜು, ಬೆಳ್ಳಿಯಪ್ಪ , ಕುದೂರು ಲೋಕೇಶ್, ಚಿಲಿಪಿಲಿ ರಾಜಣ್ಣ ಇತರರು ಇದ್ದರು.
    1
    ಮಾಗಡಿ : ಡಿಕೆ.ಶಿವಕುಮಾರು ಯಾಗಾಗ ಮುಖ್ಯಮಂತ್ರಿ ಆಲಿದ್ದಾರೆ ಎಂಬ ಪತ್ರಕರ್ತರ  ಪ್ರಶ್ನೆಗೆ  ಅದನ್ನೆ ಕೇಳಲು ದೆಹಲಿಗೆ ಹೋಗುತ್ತಿದ್ದೇವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಉತ್ತರಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,      ಕಾಂಗ್ರೆಸ್ ಶಾಸಕರು ಈಗಾಗಲೇ  ತೆರಳಿದ್ದಾರೆ ಅವರ ಜೊತೆಗೆ ನಾನು ತೆರಳಬೇಕಿತ್ತು ಕ್ಷೇತ್ರದಲ್ಲಿ ಅಂಬೇಡ್ಕರ್ ಜಯಂತಿ ಇರುವುದರಿಂದ ಮುಗಿಸಿದ ನಂತರ ಬರುವುದಾಗಿ ತಿರ್ಮಾನಿಸಲಾಗುವುದು ಎಂದು ಹೇಳಿದ್ದೆ ಅದೇ ರೀತಿ ಏಪ್ರಿಲ್ 15 ರಂದು ದೆಹಲಿಗೆ ತೆರಳುವ ಸಂದರ್ಭ  ಬರಲಿದೆ.   ಸಚಿವ ಸಂಪುಟದಲ್ಲಿ ಈಗಾಗಲೇ ಕೆಲವರಿಗೆ ಸಚಿವ ಸ್ಥಾನ ನೀಡಲಾಗಿದೆ, ಹಿರಿಯ ಶಾಸಕರಿಗೂ ಸಚಿವ ಸ್ಥಾನದ ಅವಕಾಶ ಕಲ್ಪಿಸಿಕೊಟ್ಟು ಕರ್ನಾಟಕದ ಸಿಎಂ ಬದಲಾವಣೆ ಬಗ್ಗೆ  ಗೊಂದಲಕ್ಕೆ ಇತಿಶ್ರೀ ಹಾಡುವಂತೆ   ಪಕ್ಷದ ಹೈಕಮಾಂಡ್‍ನಲ್ಲಿ ಕೇಳುತ್ತೇವೆ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು  ಸಚಿವ ಜಮೀರ್ ಆಹಮದ್ ಬೇಟಿಯಾಗಿರುವ ವಿಷಯ ನನಗೆ ಗೊತ್ತಿಲ್ಲ, ಈ ವಿಚಾರವಾಗಿ ತಿಳಿದು ಮಾತನಾಡುವುದಾಗಿ ಸ್ವಷ್ಟಪಡಿಸಿದರು.
ಸಿಎಂ ಅಪ್ತ ಸಲಹೆಗಾರರ ತಲೆದಂಡ : ಕಾಂಗ್ರೆಸ್ ಪಕ್ಷವಾಗಲಿ  ಯಾವುದೇ ರಾಷ್ಟ್ರೀಯ ಪಕ್ಷದಲ್ಲಿ  ಪಕ್ಷ ವಿರೋಧಿ ಕೆಲಸಮಾಡಿದರೆ  ಅದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರು ಆಗಲಿ ನಾನಾಗಲಿ  ಪಕ್ಷ ವಿರೋಧಿ ಕೆಲಸ  ಮಾಡಿದ್ರೆ ತಲೆದಂಡವಾಗಲಿದೆ ಎಂದರು.
ಎರಡು ಕ್ಷೇತ್ರದ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ಆತ್ಮವಿಶ್ವಾಸವಿದೆ, ಮುಸ್ಲಿಂನ ಎಲ್ಲಾ ನಾಯಕರು ಚುನಾವಣೆ ಮಾಡಿದ್ದಾರೆ 10 ಪರ್ಸೆಟ್  ಏರುಪೇರಾಗಲಿದೆ ಈ ಬಗ್ಗೆ ಮತ ಪೆಟ್ಟಿ ತೆರೆದಮೇಲೆ ಗೊತ್ತಾಗಲಿದೆ ಎಂದರು.
ಕೇರಳ ಮತ್ತು ಕರ್ನಾಟಕ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ ಕೇರಳದಲ್ಲಿ ಬಡವರು, ನರ್ಸ್‍ಗಳು, ಪೌರಕಾರ್ಮಿಕರು ಚುನಾವಣೆಗೆ ಸ್ಪಂದಿಸುತ್ತಾರೆ ಆ ರೀತಿ ಕರ್ನಾಟಕದಲ್ಲಿ ಸಾಧ್ಯವೆ. ನಾನು ಪ್ರಚಾರಕ್ಕೆ ಹೋದ ವ್ಯಕ್ತಿಯನ್ನು 2 ಭಾರಿ ಗೆಲ್ಲಿಸಿದ್ದಾರೆ ಅವರು ಇಂದಿಗೂ ಚಿಕ್ಕಮನೆಯಲ್ಲಿ ಇದ್ದಾರೆ ಅಲ್ಲಿಯ ಚುನಾವಣೆ ವೆಚ್ಚ 2 ಕೋಟಿ ಇಲ್ಲಿನ ವೆಚ್ಚ ಹತ್ತು ಪಟ್ಟು ಎಂದರು. 
ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಅವರಿಂದ  ಸಹಾಯ ಪಡೆದ ಜೆಡಿಎಸ್ ಮುಖಂಡರೆ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಈ ಬಗ್ಗೆ ಅವರ ಬಗ್ಗೆ ಏಕೆ ಮಾತನಾಡುತ್ತಾರ ಎಂದು ತಿಳಿಸಿದ್ದೇನೆ ಆದರೂ ಈ ಬಗ್ಗೆ ಚರ್ಚೆಗೆ ಆಹ್ವಾನಿಸಿದ್ದಾರೆ ಈ ವೇಳೆ ನನ್ನ ವಯಕ್ತಿಕವಾಗಿ ಮಾತನಾಡಿರುವ ಬಗ್ಗೆ ಚರ್ಚೆಮಾಡುತ್ತೇನೆ ದಾಖಲೆ ಪ್ರದರ್ಶಿಸಲಿ ಇಲ್ದಿದ್ದರೆ ತಪ್ಪನ್ನು ಒಪ್ಪಿಕೊಂಡು ಈ ರೀತಿ ಆರೋಪಿಸುವುದನ್ನು ಬಿಡಲಿ  ಈ ವೇಳೆ ಗಲಭೆಯಾದರೆ ಚರ್ಚೆಗೆ ಮೂಲಭೂತವಾಗಿ ಕಾರಣವಾದವರ ವಿರುದ್ದ ಪೊಲೀಸರು ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದರು.
ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ,  ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು, ಬಿಎಂಆರ್‍ಡಿಎ ಅಧ್ಯಕ್ಷ ತಟವಾಳ್ ಪ್ರಕಾಶ್, ನಿರ್ದೆಶಕ ದೀಪು,  ತಾ.ಪಂ. ಮಾಜಿ ಸದಸ್ಯೆ ರತ್ನಮ್ಮ ಶ್ರೀನಿವಾಸ್,ದೊಡ್ಡಿ ಲೋಕೇಶ್, ಚಿಕ್ಕರಾಜು, ಬೆಂಕಿ ಮಹದೇವ್, ಚಿಕ್ಕಮುದಿಗೆರೆ ಸುರೇಶ್, ರಾಜು, ಬೆಳ್ಳಿಯಪ್ಪ , ಕುದೂರು ಲೋಕೇಶ್, ಚಿಲಿಪಿಲಿ ರಾಜಣ್ಣ ಇತರರು ಇದ್ದರು.
    user_Siddalinga siddalinga
    Siddalinga siddalinga
    ಮಾಗಡಿ, ರಾಮನಗರ, ಕರ್ನಾಟಕ•
    5 hrs ago
  • ಹೊಸಕೋಟೆ ಮನೆ ಆವರಣದಲ್ಲೇ ವ್ಯಕ್ತಿಯ ಬರ್ಬರ ಕೊಲೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುಷ್ಕರ್ಮಿಗಳು. ಹೊಸಕೋಟೆ ತಾಲ್ಲೂಕಿನ ದಬ್ಬಗುಂಟಹಳ್ಳಿ ಗ್ರಾಮದಲ್ಲಿ ಘಟನೆ. ಹೊಸಕೋಟೆ ತಾಲ್ಲೂಕಿನ ದಬ್ಬಗುಂಟಹಳ್ಳಿ ಗ್ರಾಮದಲ್ಲಿ ಘಟನೆ ನಿನ್ನೆ ರಾತ್ರಿ ನಡೆದಿರುವ ಘಟನೆ, ಇಂದು ಮುಂಜಾನೆ ಬೆಳಕಿಗೆ. ಅದೇ ಗ್ರಾಮದ ಶಿವಶಂಕರ್ (40) ಮೃತ ದುರ್ದೈವಿ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ಭೇಟಿ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೊಸಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ದಬ್ಬಗುಂಟಹಳ್ಳಿ ಗ್ರಾಮ
    3
    ಹೊಸಕೋಟೆ
ಮನೆ ಆವರಣದಲ್ಲೇ ವ್ಯಕ್ತಿಯ ಬರ್ಬರ ಕೊಲೆ. 
ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುಷ್ಕರ್ಮಿಗಳು.
ಹೊಸಕೋಟೆ ತಾಲ್ಲೂಕಿನ ದಬ್ಬಗುಂಟಹಳ್ಳಿ ಗ್ರಾಮದಲ್ಲಿ ಘಟನೆ.
ಹೊಸಕೋಟೆ ತಾಲ್ಲೂಕಿನ ದಬ್ಬಗುಂಟಹಳ್ಳಿ ಗ್ರಾಮದಲ್ಲಿ ಘಟನೆ
ನಿನ್ನೆ ರಾತ್ರಿ ನಡೆದಿರುವ ಘಟನೆ, ಇಂದು ಮುಂಜಾನೆ ಬೆಳಕಿಗೆ.
ಅದೇ ಗ್ರಾಮದ ಶಿವಶಂಕರ್ (40) ಮೃತ ದುರ್ದೈವಿ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ಭೇಟಿ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಹೊಸಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ದಬ್ಬಗುಂಟಹಳ್ಳಿ ಗ್ರಾಮ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    9 hrs ago
  • Post by Venu Gopal
    1
    Post by Venu Gopal
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    11 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    8 hrs ago
  • ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ದಿನಾಂಕ 14/04/2026 ರ ಮಂಗಳವಾರದಂದು ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತ ರತ್ನ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ರವರ 135 ನೇ ಜಯಂತೋತ್ಸವವನ್ನು ಬೆಳಿಗ್ಗೆ 10:30 ಕ್ಕೆ ತಹಶಿಲ್ದಾರರವರ ಕಛೇರಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಸದರಿ ಕಾರ್ಯಕ್ರಮಕ್ಕೆ ತಾವೆಲ್ಲ ಆಗಮಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಉದಯಕುಮಾರ ಎಲಿವಾಳ ರವರು ತಿಳಿಸಿದ್ದಾರೆ
    1
    ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ದಿನಾಂಕ 14/04/2026 ರ ಮಂಗಳವಾರದಂದು ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತ ರತ್ನ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ರವರ 135 ನೇ ಜಯಂತೋತ್ಸವವನ್ನು ಬೆಳಿಗ್ಗೆ 10:30 ಕ್ಕೆ ತಹಶಿಲ್ದಾರರವರ ಕಛೇರಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಸದರಿ ಕಾರ್ಯಕ್ರಮಕ್ಕೆ ತಾವೆಲ್ಲ ಆಗಮಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಉದಯಕುಮಾರ ಎಲಿವಾಳ ರವರು ತಿಳಿಸಿದ್ದಾರೆ
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    11 hrs ago
  • Post by Venu Gopal
    1
    Post by Venu Gopal
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    12 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.