Shuru
Apke Nagar Ki App…
ನಕಲಿ ವಾಚ್ ಮಾರಾಟ ಮಾಡುತ್ತಿದ್ದ ಐವರು ಖದೀಮರ ಬಂಧನ - 670 ನಕಲಿ ವಾಚ್ ವಶ ..!! ಸಿಲಿಕಾನ್ ಸಿಟಿಯಲ್ಲಿ ಬ್ರಾಂಡೆಡ್ ವಾಚ್ ಅಂತಾ ಕೊಳ್ಳುವ ಮುನ್ನ ಹುಷಾರಾಗಿರಿ. ಆಫ್ ರೇಟ್, ಚೀಫ್ ರೇಟ್ ಅಂತಾ ನಕಲಿ ವಾಚ್ ನಿಮಗೆ ಕೊಟ್ಟು ನಿಮ್ಮನ್ನ ಯಾಮಾರಿಸುತ್ತಾರೆ. ಟೈಟನ್ ಕಂಪನಿಯ ಹೆಸರಲ್ಲಿ ನಕಲಿ ವಾಚ್ ಗಳನ್ನು ಮಾರಾಟ ಮಾಡುತ್ತಿದ್ದ ಐವರು ಖದೀಮರನ್ನ ಸಿಸಿಬಿ ಆರ್ಥಿಕ ಅಪರಾಧ ನಿಗ್ರಹ ದಳ ಬಂಧಿಸಿದೆ. ಹರೀಶ್ ಕುಮಾರ್, ಸೈಯದ್ ಜೈಸದ್ ಇಕ್ಬಾಲ್, ಮೊಹಮ್ಮದ್ ಹಬೀಬ್ ಹುಸೈನ್, ಖಲೀಮ್ ಉಲ್ಲಾ, ಅಬ್ದುಲ್ ರೆಹಮಾನ್ ಬಂಧಿತ ಆರೋಪಿಗಳು. ಆರೋಪಿಗಳಿಂದ 25 ಲಕ್ಷ ಮೌಲ್ಯದ 670 ನಕಲಿ ವಾಚ್ ಗಳು ಸೀಜ್ ಮಾಡಲಾಗಿದೆ. ಆರ್.ಟಿ ನಗರ, ಚಿಕ್ಕಪೇಟೆ ಏರಿಯಾದ ಅಂಗಡಿಗಳಲ್ಲಿ ನಕಲಿ ವಾಚ್ ಮಾರಾಟ ಮಾಡುತ್ತಿದ್ದರು. ಸದ್ಯ ಆರೋಪಿಗಳು ಎಲ್ಲಿ ವಾಚ್ ಗಳನ್ನು ತಯಾರಿಸುತ್ತಿದ್ದರು ಎಂಬ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
YSRmedia vijayanagaraupsates
ನಕಲಿ ವಾಚ್ ಮಾರಾಟ ಮಾಡುತ್ತಿದ್ದ ಐವರು ಖದೀಮರ ಬಂಧನ - 670 ನಕಲಿ ವಾಚ್ ವಶ ..!! ಸಿಲಿಕಾನ್ ಸಿಟಿಯಲ್ಲಿ ಬ್ರಾಂಡೆಡ್ ವಾಚ್ ಅಂತಾ ಕೊಳ್ಳುವ ಮುನ್ನ ಹುಷಾರಾಗಿರಿ. ಆಫ್ ರೇಟ್, ಚೀಫ್ ರೇಟ್ ಅಂತಾ ನಕಲಿ ವಾಚ್ ನಿಮಗೆ ಕೊಟ್ಟು ನಿಮ್ಮನ್ನ ಯಾಮಾರಿಸುತ್ತಾರೆ. ಟೈಟನ್ ಕಂಪನಿಯ ಹೆಸರಲ್ಲಿ ನಕಲಿ ವಾಚ್ ಗಳನ್ನು ಮಾರಾಟ ಮಾಡುತ್ತಿದ್ದ ಐವರು ಖದೀಮರನ್ನ ಸಿಸಿಬಿ ಆರ್ಥಿಕ ಅಪರಾಧ ನಿಗ್ರಹ ದಳ ಬಂಧಿಸಿದೆ. ಹರೀಶ್ ಕುಮಾರ್, ಸೈಯದ್ ಜೈಸದ್ ಇಕ್ಬಾಲ್, ಮೊಹಮ್ಮದ್ ಹಬೀಬ್ ಹುಸೈನ್, ಖಲೀಮ್ ಉಲ್ಲಾ, ಅಬ್ದುಲ್ ರೆಹಮಾನ್ ಬಂಧಿತ ಆರೋಪಿಗಳು. ಆರೋಪಿಗಳಿಂದ 25 ಲಕ್ಷ ಮೌಲ್ಯದ 670 ನಕಲಿ ವಾಚ್ ಗಳು ಸೀಜ್ ಮಾಡಲಾಗಿದೆ. ಆರ್.ಟಿ ನಗರ, ಚಿಕ್ಕಪೇಟೆ ಏರಿಯಾದ ಅಂಗಡಿಗಳಲ್ಲಿ ನಕಲಿ ವಾಚ್ ಮಾರಾಟ ಮಾಡುತ್ತಿದ್ದರು. ಸದ್ಯ ಆರೋಪಿಗಳು ಎಲ್ಲಿ ವಾಚ್ ಗಳನ್ನು ತಯಾರಿಸುತ್ತಿದ್ದರು ಎಂಬ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
More news from Karnataka and nearby areas
- ಚಲಿಸುತ್ತಿದ್ದ ಬಸ್ಸಿನಿಂದ ಆಯತಪ್ಪಿ ಬಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ #JB_News_Kannada #ಬೆಳ್ತಂಗಡಿ1
- ಹುನಗುಂದ್ ಮತಕ್ಷೇತ್ರದ ಶಾಸಕ ವಿಜಯಾನಂದ ಎಸ್ ಕಾಶಪ್ಪನವರು ಗೃಹ ಕಚೇರಿಯಲ್ಲಿ ಶ್ರೀ ಮಹಾವೀರ ಅವರ ಜಯಂತೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಸಮಾಜ ಬಾಂಧವರು ಕಾರ್ಯಕರ್ತರು ಉಪಸ್ಥಿತರಿದ್ದರು.1
- ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಿರೇಹಾಳ ಗ್ರಾಮದ ನಿವಾಸಿ ಲಾಲುಪ್ರಸಾದ ಮಾದರ (18) ಈ ವರ್ಷ ದ್ವಿತೀಯ ಪಿಯುಸಿ ವ್ಯಾಸಂಗವನ್ನು ಮುಗಿಸಿ ಹಿರೇಹಾಳದಲ್ಲಿ ವಾಸವಿದ್ದು ದಿನಾಂಕ: 30.03.2026 ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಲಾಲುಪ್ರಸಾದ ಇವನು ತನ್ನ ಗೆಳೆಯರೊಂದಿಗೆ ಈಜಲು ಹಿರೇಹಾಳದಿಂದ ಹೊನ್ನಿಗನೂರ ರಸ್ತೆಯ ಕಡೆಗೆ ಇರುವ ಸಾಸ್ವಿಹಳ್ಳದ ಕೂಡಲ ಹನಮಪ್ಪನ ಗುಡಿಯ ಹತ್ತಿರ ಹೋಗಿದ್ದು, ಲಾಲುಪ್ರಸಾದ ಇವನು ಮೊದಲು ಈಜಲು ನೀರಿನಲ್ಲಿ ಹೋಗಿ ಮುಳಗಿದ್ದು, ನಂತರ ಇನ್ನುಳಿದವರು ಈಜಲು ನೀರಿನಲ್ಲಿ ಹೋದಾಗ ಲಾಲುಪ್ರಸಾದ ಇವನು ನೀರಿನಲ್ಲಿ ಮುಳಗುವದನ್ನು ನೋಡಿ, ಅವನಿಗೆ ಹಿಡಿದುಕೊಳ್ಳಲು ಪ್ರಯತ್ನಿಸಿದ್ದು ಲಾಲುಪ್ರಸಾದ ಇವನು ನೀರಿನಲ್ಲಿ ಮುಳಗಿ ಮರಣ ಹೊಂದಿದ್ದಾನೆ, ನಂತರ ಅಗ್ನಿಶಾಮಕ ದಳ ಹಾಗೂ ಮೃತನ ಸಂಬಂಧಿಕರು ಕೂಡಿಕೊಂಡು ನೀರಿನಲ್ಲಿ ಈಜಾಡಿ ಲಾಲುಪ್ರಸಾದ ಇವನ ಶವವನ್ನು ನೀರಿನಿಂದ ಹೊರಗಡೆ ತೆಗೆದಿದ್ದಾರೆ, ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ2
- ಬಾಗಲಕೋಟೆ ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಅಮೀನಗಡ ಪಟ್ಟಣದಲ್ಲಿ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಇಳಕಲ್ ನಗರ ಮಂಡಳದ ಅಧ್ಯಕ್ಷ ಅರವಿಂದ ಮಂಗಳೂರು ನೇತೃತ್ವದಲ್ಲಿ ಬಿರು ಬಿಸಿಲಿನಲ್ಲಿಯೇ ಭಜ೯ರಿ ಮತ ಬೇಟೆಯನ್ನು ನಡೆಸಿದ್ದಾರೆ. ಬಿಜೆಪಿಗೆ ಮತ ಹಾಕಿ ಅಭಿವೃದ್ಧಿಗೆ ಬೆಂಬಲಿಸಿ ಎಂದು ಮನೆ ಮನೆಗೆ ಭೇಟಿ ನೀಡಿ ಮತ ಬೇಟೆಯನ್ನು ನಡೆಸಿದ್ದಾರೆ. ಈ ಸಮಯದಲ್ಲಿ ಅಮೀನಗಡ ಪಟ್ಟಣದ ಬಿಜೆಪಿ ಮುಖಂಡರು ಕಾಯ೯ಕತ೯ರು ಹಾಗೂ ಹುನಗುಂದ, ಇಳಕಲ್ ಅವಳಿ ತಾಲೂಕಿನ ಬಿಜೆಪಿ ಮುಖಂಡರು ಕಾಯ೯ಕತ೯ರು ಇದ್ದರು.4
- ಗುಳೇದಗುಡ್ಡ: ಭಕ್ತರ ಇಷ್ಟಾರ್ಥ ಸಿದ್ದಿಗಳನ್ನು ಈಡೇರಿಸುವ ರಾಚೋಟೇಶ್ವರ ದೇವರ ಅಗ್ನಿ ಉತ್ಸವವು ಭಾನುವಾರ ರಾತ್ರಿ ಸಂಭ್ರಮದಿಂದ ನಡೆಯಿತು. ಬೆಳಿಗ್ಗೆ ದೇವಸ್ಥಾನದಲ್ಲಿ ರಾಚೋಟೇಶ್ವರ ದೇವರ ಅಗ್ನಿ ಉತ್ಸವದ ಅಂಗವಾಗಿ ಕಿಚಕಣ ಸಂಹಾರದ ಸುಂದರ ಅಂಲಕಾರ ಮಾಡಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಅಗ್ನಿ ಕುಂಡವನ್ನು ಮಾಡಲಾಗಿತ್ತು, ಅಗ್ನಿ ಪ್ರಾರಂಭಕ್ಕೂ ಮುನ್ನ ಚಿಕ್ಕ ಮಕ್ಕಳ, ಯುವಕರು, ಹಿರಿಯರು ಮುಂದಿರುವ ರಾಚೋಟೇಶ್ವರ ದೇವರ ಕಡೆ ಹೇಳಿದರು. ರಾತ್ರಿ 11 ಗಂಟೆಗೆ ಪ್ರಾರಂಭವಾದ ಅಗ್ನಿ ಉತ್ಸವವು ಸುಮಾರು ಒಂದು ಗಂಟೆಗು ಹೆಚ್ಚು ಕಾಲ ನಡೆಯಿತು, ಮೊದಲು ಪತ್ತಾರ ಮನೆತದವರು ಪಲ್ಲಕ್ಕಿ, ನಂದಿಕೋಲು ಹೊತ್ತವರು ರಾಚೋಟೇಶ್ವರ ಮಹರಾಜ ಕೀ ಜೈ' ಎನ್ನುತ ಕೆಂಡವನ್ನು ಹಾಯದರು.ಕೆರೂರ ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಕೆಂಡವನ್ನು ಹಾಯ್ದು ಹರೆಯನ್ನು ತೀರಿಸಿದರು. ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರಿಗೆ ರಾತ್ರಿ ಅನ್ನ-ಪ್ರಸಾದದ ವ್ಯವಸ್ಥೆಮಾಡಲಾಗಿತ್ತು.2
- ಚಳ್ಳಕೆರೆ ನಗರದಲ್ಲಿ ನಗರಸಭೆ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಾಚರಣೆ ಇಂದು ಮಂಗಳವಾರ ಬೆಳ್ಳಂ ಬೆಳಗ್ಗೆ ಜೋರಾಗಿ ಆರಂಭವಾಗಿದೆ. ಜೆಸಿಬಿ ಯಂತ್ರಗಳ ಸದ್ದು ಮಧ್ಯೆ ಕಾರ್ಯಾಚರಣೆ ಮುಂದುವರಿದಿದ್ದು, ನಗರದಲ್ಲಿ ಚಟುವಟಿಕೆ ಹೆಚ್ಚಾಗಿದೆ. ಚಳ್ಳಕೆರೆ ನಗರಸಭೆಗೆ ಸೇರಿದ ನೆಹರು ಬೆಂಗಳೂರು ರಸ್ತೆ, ಪಾವಗಡ ರಸ್ತೆ ಹಾಗೂ ಮಹದೇವಿ ರಸ್ತೆಯಲ್ಲಿರುವ ಶಿಥಿಲಗೊಂಡ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲು ಬಹುಕಾಲದಿಂದ ನಿರೀಕ್ಷಿಸಿದ್ದ ಕ್ರಮ ಇದೀಗ ಕೈಗೆತ್ತಿಕೊಳ್ಳಲಾಗಿದೆ. ಈ ಕಾರ್ಯಾಚರಣೆಗೆ ದಿಟ್ಟ ಮಹಿಳಾ ಪೌರಾಕ್ತೆ ನಾಗವೇಣಿ ಮುಂದಾಳತ್ವ ವಹಿಸಿದ್ದು, ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪೋಲಿಸ್ ಇಲಾಖೆಯ ಬಿಗಿ ಬಂದೋಬಸ್ತಿನೊಂದಿಗೆ ಕಾರ್ಯಾಚರಣೆ ನಡೆಯುತ್ತಿದ್ದು, ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನಗರಸಭೆ ಆಸ್ತಿಗಳ ಮೇಲೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರಲ್ಲಿ ಈ ಕ್ರಮದಿಂದ ನಡುಕ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.1
- Post by Suresh Belagere1
- ದೇವಸ್ಥಾನದಲ್ಲಿ ನೂಕುನುಗ್ಗಲು: ಎಂಟು ಮಂದಿ ಸಾವು, ಹಲವರಿಗೆ ಗಾಯ. #JB_News_Kannada1