ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ದೊಡ್ಡ ರಥೋತ್ಸವ ವಿಜಂಭಣೆ ಯಳಂದೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಾಳವಾದ ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ದೊಡ್ಡ ರಥೋತ್ಸವ ಗುರುವಾರ ಸಾವಿರಾರು ಭಕ್ತರ ನಡುವೆ ವಿಜಂಭಣೆಯಿಂದ ಜರುಗಿತು. ರಥೋತ್ಸವದ ಹಿನ್ನೆಲೆಯಲ್ಲಿ ಬೆಟ್ಟದ ಉದ್ದಗಲಕ್ಕೂ ಸಂಭ್ರಮ, ಸಡಗರ, ಭಕ್ತರ ಕಲರವ ಕಂಡು ಬಂತು. ಬಿರು ಬಿಸಿಲಿನಲ್ಲೂ ಉತ್ಸಾಹ ಕುಂದಲಿಲ್ಲ. ರಥಕ್ಕೆ ಚಾಲನೆ ಕೊಡುತ್ತಿದ್ದಂತೆ ಉಘೇ.. ಉಘೇ ರಂಗಪ್ಪ ಹರ್ಷೋದ್ಗಾರ ಮೊಳಗಿತು. ಗುರುವಾರ ಮುಂಜಾನೆಯಿಂದಲೇ ಬಿಳಿಗಿರಿರಂಗನಾಥಸ್ವಾಮಿ, ಅಲಮೇಲು ರಂಗನಾಯಕಿ ಅಮ್ಮನವರ ಧಾರ್ಮಿಕ ವಿಧಿ, ವಿಧಾನಗಳನ್ನು ನೆರವೇರಿಸಿದ ಬಳಿಕ ಬಿಳಿಗಿರಿರಂಗನ ಮೂರ್ತಿಯನ್ನು ರತ್ನ ಖಚಿತ ಚಿನ್ನದ ಕೀರಿಟ, ಚಿನ್ನಾಭರಣ ತುಳಸಿ, ಸುಗಂಧರಾಜ , ಗುಲಾಬಿ, ಮಲ್ಲಿಗೆ, ಸಂಪಿಗೆ ಸೇರಿದಂತೆ ನಾನಾ ಪುಷ್ಪಗಳಿಂದ ಅಲಂಕರಿಸಲಾಗಿತ್ತು. 5ಕ್ಕೆ ಕಲ್ಯಾಣೋತ್ಸವ, 7 ಗಂಟೆಗೆ ಪ್ರಸ್ಥಾನ ಮಂಟಪೋತ್ಸವ ನಡೆಯಿತು. ನಂತರ ಹೂನಿಂದ ಅಲಂಕೃತ ಅಡ್ಡ ಪಲ್ಲಕ್ಕಿಯಲ್ಲಿ ಬಿಳಿಗಿರಿ ರಂಗನಾಥಸ್ವಾಮಿ, ಅಲುಮೇಲು ರಂಗನಾಯಕಿ ಉತ್ಸವ ಮೂರ್ತಿ ಇರಿಸಿ, ದೇವಾಲಯದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಮತ್ತು ರಾಜ ಬೀದಿಯಲ್ಲಿ ಮೆರವಣಿಗೆ ಮಾಡಿದ ಬಳಿಕ ಧ್ವಜ ಪತಾಕೆಗಳಿಂದ ಸಿಂಗರಿಸಿದ ದೊಡ್ಡ ರಥದಲ್ಲಿ ಪ್ರತಿಷ್ಠಾಪಿಸಿ ಕಲ್ಯಾ ಣೋತ್ಸೋವ, ಮುಯ್ಯಿ ಸಮರ್ಪಿ ಸಲಾಯಿತು. ಬೆಳಗ್ಗೆ 10.13 ರಿಂದ 10.27 ರೊಳಗಿನ ಶುಭ ಮಿಥುನ ಲಗ್ನದ ಮೀನಗುರು ನವಾಂಶದ ಶುಭ ಮೂಹರ್ತದಲ್ಲಿ ಪೂಜೆ ಸಲ್ಲಿಸಿದ ನಂತರ ರಥಕ್ಕೆ ಶಾಸಕರ ಎ ಆರ್. ಕೃಷ್ಣಮೂರ್ತಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಗಣ್ಯರು, ಸಾರ್ವಜನಿಕರು ಗೋವಿಂದ ಜೈಕಾರ ಹಾಕುತ್ತ, ಶಂಖು, ಜಾಗಟೆ ಭಾರಿಸುತ್ತ ರಥ ಎಳೆದ ಭಕ್ತರು ಸಂತೃಪ್ತಭಾವ ಅನುಭವಿಸಿದರು. ಸೋಲಿಗರ ಸಂಭ್ರಮ: ಬಿಳಿಗಿರಿರಂಗನ ಬೆಟ್ಟದ ಪುರಾಣಿ, ಹೊಸ ಜೀರಿಗೆ, ಗದ್ಯ, ಮಂಜಿಗುಡ್ಡೆ, ಬಂಗ್ಲೆಪೋಡುಗಳು, ಗೊಂಬೆಗಲ್ಲು, ದೊಡ್ಡಸಂಪಿಗೆ ಇತರೆ ಹಾಡಿಯ ಸೋಲಿಗರು ರಂಗಪ್ಪನ ತೇರು ನೋಡಲು ಪರಿವಾರ ಸಮೇತ ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತೇರಿಗೆ ನವ ವಿವಾಹಿತರು ಹಣ್ಣು , ಧವನ ಅರ್ಪಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ರೈತರು ಬೆಳೆದ ರಾಗಿ, ಭತ್ತ, ಜೋಳ, ಕಬ್ಬು, ಅವರೆ,ಅಲಸಂದೆ, ಹುರಳಿ, ಹೆಸರು, ನವಣೆ ಇತರೆ ಧಾನ್ಯಗಳನ್ನು ರಥಕ್ಕೆ ಸಲ್ಲಿಸಿ ಹರಕೆ ಪೂರೈಸಿದರು. ಹಳ್ಳಿಗಳಿಂದ ಬಂದಿದ್ದ ಭಕ್ತರು ಅಕ್ಕಿ, ಬೆಲ್ಲ,ಕಾಯಿ, ಹಸಿಕಡ್ಲೆಯನ್ನು ನೀರಿನಲ್ಲಿ ನೆನೆಸಿ ಜತೆಗೆ ಕಜ್ಜಾಯ ಬೆರೆಸಿ (ಬ್ಯಾಟಮಣೆ) ಪ್ರಸಾದವಾಗಿ ಸ್ವೀಕರಿಸಿದರು. ವರದಿ. ಎಸ್.ಪುಟ್ಟಸ್ವಾಮಿಹೊನ್ನೂರು
ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ದೊಡ್ಡ ರಥೋತ್ಸವ ವಿಜಂಭಣೆ ಯಳಂದೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಾಳವಾದ ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ದೊಡ್ಡ ರಥೋತ್ಸವ ಗುರುವಾರ ಸಾವಿರಾರು ಭಕ್ತರ ನಡುವೆ ವಿಜಂಭಣೆಯಿಂದ ಜರುಗಿತು. ರಥೋತ್ಸವದ ಹಿನ್ನೆಲೆಯಲ್ಲಿ ಬೆಟ್ಟದ ಉದ್ದಗಲಕ್ಕೂ ಸಂಭ್ರಮ, ಸಡಗರ, ಭಕ್ತರ ಕಲರವ ಕಂಡು ಬಂತು. ಬಿರು ಬಿಸಿಲಿನಲ್ಲೂ ಉತ್ಸಾಹ ಕುಂದಲಿಲ್ಲ. ರಥಕ್ಕೆ ಚಾಲನೆ ಕೊಡುತ್ತಿದ್ದಂತೆ ಉಘೇ.. ಉಘೇ ರಂಗಪ್ಪ ಹರ್ಷೋದ್ಗಾರ ಮೊಳಗಿತು. ಗುರುವಾರ ಮುಂಜಾನೆಯಿಂದಲೇ ಬಿಳಿಗಿರಿರಂಗನಾಥಸ್ವಾಮಿ, ಅಲಮೇಲು ರಂಗನಾಯಕಿ ಅಮ್ಮನವರ ಧಾರ್ಮಿಕ ವಿಧಿ, ವಿಧಾನಗಳನ್ನು ನೆರವೇರಿಸಿದ ಬಳಿಕ ಬಿಳಿಗಿರಿರಂಗನ ಮೂರ್ತಿಯನ್ನು ರತ್ನ ಖಚಿತ ಚಿನ್ನದ ಕೀರಿಟ, ಚಿನ್ನಾಭರಣ ತುಳಸಿ, ಸುಗಂಧರಾಜ , ಗುಲಾಬಿ, ಮಲ್ಲಿಗೆ, ಸಂಪಿಗೆ ಸೇರಿದಂತೆ ನಾನಾ ಪುಷ್ಪಗಳಿಂದ ಅಲಂಕರಿಸಲಾಗಿತ್ತು. 5ಕ್ಕೆ ಕಲ್ಯಾಣೋತ್ಸವ, 7 ಗಂಟೆಗೆ ಪ್ರಸ್ಥಾನ ಮಂಟಪೋತ್ಸವ ನಡೆಯಿತು. ನಂತರ ಹೂನಿಂದ ಅಲಂಕೃತ ಅಡ್ಡ ಪಲ್ಲಕ್ಕಿಯಲ್ಲಿ ಬಿಳಿಗಿರಿ ರಂಗನಾಥಸ್ವಾಮಿ, ಅಲುಮೇಲು ರಂಗನಾಯಕಿ ಉತ್ಸವ ಮೂರ್ತಿ ಇರಿಸಿ, ದೇವಾಲಯದ
ಸುತ್ತ ಮೂರು ಸುತ್ತು ಪ್ರದಕ್ಷಿಣೆ ಮತ್ತು ರಾಜ ಬೀದಿಯಲ್ಲಿ ಮೆರವಣಿಗೆ ಮಾಡಿದ ಬಳಿಕ ಧ್ವಜ ಪತಾಕೆಗಳಿಂದ ಸಿಂಗರಿಸಿದ ದೊಡ್ಡ ರಥದಲ್ಲಿ ಪ್ರತಿಷ್ಠಾಪಿಸಿ ಕಲ್ಯಾ ಣೋತ್ಸೋವ, ಮುಯ್ಯಿ ಸಮರ್ಪಿ ಸಲಾಯಿತು. ಬೆಳಗ್ಗೆ 10.13 ರಿಂದ 10.27 ರೊಳಗಿನ ಶುಭ ಮಿಥುನ ಲಗ್ನದ ಮೀನಗುರು ನವಾಂಶದ ಶುಭ ಮೂಹರ್ತದಲ್ಲಿ ಪೂಜೆ ಸಲ್ಲಿಸಿದ ನಂತರ ರಥಕ್ಕೆ ಶಾಸಕರ ಎ ಆರ್. ಕೃಷ್ಣಮೂರ್ತಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಗಣ್ಯರು, ಸಾರ್ವಜನಿಕರು ಗೋವಿಂದ ಜೈಕಾರ ಹಾಕುತ್ತ, ಶಂಖು, ಜಾಗಟೆ ಭಾರಿಸುತ್ತ ರಥ ಎಳೆದ ಭಕ್ತರು ಸಂತೃಪ್ತಭಾವ ಅನುಭವಿಸಿದರು. ಸೋಲಿಗರ ಸಂಭ್ರಮ: ಬಿಳಿಗಿರಿರಂಗನ ಬೆಟ್ಟದ ಪುರಾಣಿ, ಹೊಸ ಜೀರಿಗೆ, ಗದ್ಯ, ಮಂಜಿಗುಡ್ಡೆ, ಬಂಗ್ಲೆಪೋಡುಗಳು, ಗೊಂಬೆಗಲ್ಲು, ದೊಡ್ಡಸಂಪಿಗೆ ಇತರೆ ಹಾಡಿಯ ಸೋಲಿಗರು ರಂಗಪ್ಪನ ತೇರು ನೋಡಲು ಪರಿವಾರ ಸಮೇತ ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತೇರಿಗೆ ನವ ವಿವಾಹಿತರು ಹಣ್ಣು ,
ಧವನ ಅರ್ಪಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ರೈತರು ಬೆಳೆದ ರಾಗಿ, ಭತ್ತ, ಜೋಳ, ಕಬ್ಬು, ಅವರೆ,ಅಲಸಂದೆ, ಹುರಳಿ, ಹೆಸರು, ನವಣೆ ಇತರೆ ಧಾನ್ಯಗಳನ್ನು ರಥಕ್ಕೆ ಸಲ್ಲಿಸಿ ಹರಕೆ ಪೂರೈಸಿದರು. ಹಳ್ಳಿಗಳಿಂದ ಬಂದಿದ್ದ ಭಕ್ತರು ಅಕ್ಕಿ, ಬೆಲ್ಲ,ಕಾಯಿ, ಹಸಿಕಡ್ಲೆಯನ್ನು ನೀರಿನಲ್ಲಿ ನೆನೆಸಿ ಜತೆಗೆ ಕಜ್ಜಾಯ ಬೆರೆಸಿ (ಬ್ಯಾಟಮಣೆ) ಪ್ರಸಾದವಾಗಿ ಸ್ವೀಕರಿಸಿದರು. ವರದಿ. ಎಸ್.ಪುಟ್ಟಸ್ವಾಮಿಹೊನ್ನೂರು
- ಮಳವಳ್ಳಿ ತಾಲೂಕಿನ ಡಿ ಹಲಸಹಳ್ಳಿ ಇತಿಹಾಸ ಪ್ರಸಿದ್ಧ ಬಿಲ್ವಾ ಕ್ಷೇತ್ರ ಷಡಕ್ಷರ ಗವಿಮಠದಲ್ಲಿ ವಿಮಾನ ಗೋಪುರ ಕಳಸಾರೋಣ ಕನಕಪುರ ಮತ್ತು ಸಿದ್ದಗಂಗಾ ಶ್ರೀಗಳಿಂದ ವಿದ್ಯುಕ್ತ ಚಾಲನೆ ಮಳವಳ್ಳಿ ತಾಲೂಕಿನ ಡಿ ಹಲಸಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಬಿಲ್ಲುವ ಕ್ಷೇತ್ರ ಷಡಕ್ಷರ ಗವಿಮಠದಲ್ಲಿ ನೂತನವಾಗಿ ನಿರ್ಮಿಸಿರುವ ರಾಜಗೋಪುರದ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದ್ದು ವಿಮಾನ ಗೋಪುರದ ಕಳಸರೋಹಣ ಕಾರ್ಯಕ್ರಮ ಅಪಾರ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸದಸ್ಯರ ಗವಿಮಠದ ಶ್ರೀ ಷಡಕ್ಷರ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಂಪ್ರದಾಯ ಬದ್ಧವಾಗಿ ಬುದವಾರ ಜರಗಿತು. ಗುರುವಾರ ಸಿದ್ದಗಂಗಾ ಮಠದ ಕಿವಿಯ ಶ್ರೀಗಳು ಆಗಮಿಸಿ ವಿಮಾನ ಗೋಪುರದ ಕಳಶರೋಣಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಗಮಿಸಿದ ಹರ ಗುರು ಚರ ಮೂರ್ತಿಗಳಿಗೂ ಗಣ್ಯರಿಗೂ ಷಡಕ್ಷರ ಗವಿಮಠದ ವತಿಯಿಂದ ಅಭಿನಂದಿಸಲಾಯಿತು. ವಿಮಾನ ಗೋಪುರದ ಕಳಸಾರವನ ಕಾರ್ಯಕ್ರಮದ ದೃಶ್ಯವನ್ನು ದ್ರೋಣ ಕ್ಯಾಮರದಲ್ಲಿ ಸರಿ ಮಾಡಿದ್ದು ಎಲ್ಲರ ಗಮನ ಸೆಳೆಯಿತು ಬನ್ನಿ ನಾವು ನೋಡೋಣ ಕಳಸಾರೋಣ ಕಾರ್ಯಕ್ರಮದ ವಿಶೇಷ ದೃಶ್ಯವನ್ನು ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗೋಣ ಗುರು ಕೃಪೆಗೆ ಪಾತ್ರರಾಗೋಣ1
- *ಭಾರತ ನಲ್ಲಿ ವೈರಲ್*1
- *ಕಳ್ಳತನ ಮಾಡುವುದು ಕಂಡರೆ daily 112* ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಹೊರಭಾಗ "ಶೂ" ನಲ್ಲಿ ಇಟ್ಟಿದ್ದ ಕೀ ಬಳಸಿ ಮನೆಯ ಬೀರುವಿನಲ್ಲಿ ಇಟ್ಟಿದ್ದ ಒಡವೆಗಳನ್ನು ಕಳ್ಳತನ ಮಾಡಿಕೋಂಡು ಹೋಗುವ ಈ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ತಿಳಿಸಿ ಸರ್ 🤝 #Theft #Robbery #Burglary #Stealing #CrimeNews #BreakingNews #CCTV #CCTVFootage #CaughtOnCamera #CaughtOnCCTV #BikeTheft (ಬೈಕ್ ಕಳ್ಳತನ), #GoldTheft (ಚಿನ್ನದ ಕಳ್ಳತನ), #ChainSnatching (: #PoliceInvestigation #KarnatakaPolice Be careful while parking your vehicles near a Electric Transformers1
- ಶಾಲೆಯಲ್ಲಿ ಶಿಸ್ತು ಅಥವಾ ಮಕ್ಕಳ ಮೇಲಿನ ದೌರ್ಜನ್ಯ1
- ತುಮಕೂರು : ಕರ್ನಾಟಕದಲ್ಲಿ ರೈಲ್ವೆ ಪೊಲೀಸ್ ರವರಿಂದ ಅಮೋಘವಾದ ಪ್ರಯತ್ನ ತಾವೇ ಸ್ವತಹ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮಹಿಳಾ ಪೊಲೀಸ್ ಅಧಿಕಾರಿ ಯೊಬ್ಬರು ರೈಲಿನ ಕಿಟಕಿ ಯಲ್ಲಿ ಮಲಗಿದ್ದ ವ್ಯಕ್ತಿ ಯನ್ನು ಮಾತಾಡಿಸಿ ಕಳ್ಳತನದ ಬಗ್ಗೆ ಅರಿವು ಮೂಡಿಸಿ , ರೈಲ್ವೆ ನಿಲ್ದಾಣದಲ್ಲಿ ಏನೆಲ್ಲ ಆಗುತ್ತೆ ಎಂದು ವಿವರವಾಗಿ ಅರಿವು ಮೂಡಿಸಿದರು. ಈ ರೀತಿಯಾಗಿ ಎಲ್ಲ ಭಾರತೀಯ ರೈಲ್ವೆ ನಿಲ್ದಾಣದಲ್ಲಿ ಅರಿವು ಮೂಡಿಸಿದರೆ ಸಾರ್ವಜನಿಕರು ಎಚ್ಚರಗೊಳ್ಳುತ್ತಾರೆ.1
- KOLAR KI.AWAAZ KOUSAR NEWS1
- ನಾಳೆ ಪೌರ ಕಾರ್ಮಿಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ. ಹಲಗೂರು: ಗುರು ಶಿಷ್ಯರ ಬಳಗದ ವತಿಯಿಂದ ಹಲಗೂರು ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 9 ಜನರಿಗೆ ಹಾಗೂ ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಮೇ ಒಂದರಂದು ಹಲಗೂರು ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ. ನಿವೃತ್ತ ಶಿಕ್ಷಕರಾದ ಎ. ಎಸ್. ದೇವರಾಜು ಮಾತನಾಡಿ ನಾನು ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸಿ ನಂತರ ವೃತ್ತಿಯಿಂದ ನಿವೃತ್ತಿ ಯಾದ ನಂತರ ನನ್ನಿಂದ ವ್ಯಾಸಂಗ ಕಲಿತು ಈಗ ಉನ್ನತ ಹುದ್ದೆಯಲ್ಲಿರುವ ವಿದ್ಯಾರ್ಥಿಗಳು ನನ್ನ ಹೆಸರಿನಲ್ಲಿ ಡಿಆರ್ ಗುರು ಶಿಷ್ಯರ ಬಳಗ ಎಂಬ ಸಂಘವನ್ನು ಸ್ಥಾಪಿಸಿಕೊಂಡು ಶೈಕ್ಷಣಿಕ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸುಮಾರು 6 ವರ್ಷಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಮೇ 1ನೇ ತಾರೀಕು ಕಾರ್ಮಿಕರ ದಿನಾಚರಣೆ ಅಂಗವಾಗಿ ಹಲಗೂರಿನ ಸರ್ಕಲ್ ನಲ್ಲಿ ಹಲಗೂರು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂಬತ್ತು ಜನ ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಪ್ರಸ್ತುತ ವರ್ಷ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ನನ್ನ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಲಗೂರು ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಜಿ.ಎಸ್. ಮನೋಹರ, ಡಾ. ಶಂಶೋಧೀನ್, ಸಿ. ಪ್ರವೀಣ ಸೇರಿದಂತೆ ಇತರರು ಇದ್ದರು.. 29hgr1 ಹಲಗೂರಲ್ಲಿ ಗುರು ಶಿಷ್ಯರ ಬಳಗದ ದೇವರಾಜು ಮಾತನಾಡುತ್ತಿರುವುದು.1
- *ಭಾರತ ನಲ್ಲಿ ವೈರಲ್*1
- *ಕಳ್ಳತನ ಮಾಡುವುದು ಕಂಡರೆ daily 112* ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಹೊರಭಾಗ "ಶೂ" ನಲ್ಲಿ ಇಟ್ಟಿದ್ದ ಕೀ ಬಳಸಿ ಮನೆಯ ಬೀರುವಿನಲ್ಲಿ ಇಟ್ಟಿದ್ದ ಒಡವೆಗಳನ್ನು ಕಳ್ಳತನ ಮಾಡಿಕೋಂಡು ಹೋಗುವ ಈ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ತಿಳಿಸಿ ಸರ್ 🤝 #Theft #Robbery #Burglary #Stealing #CrimeNews #BreakingNews #CCTV #CCTVFootage #CaughtOnCamera #CaughtOnCCTV #BikeTheft (ಬೈಕ್ ಕಳ್ಳತನ), #GoldTheft (ಚಿನ್ನದ ಕಳ್ಳತನ), #ChainSnatching (: #PoliceInvestigation #KarnatakaPolice Be careful while parking your vehicles near a Electric Transformers1