ಹಿಪ್ಪರಗಿ ಡ್ಯಾಮ್ ಗೆಟ್ ನಿರ್ವಹಣೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ ಕಂಡು ಬಂದರೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದೇನೆ :ಶಾಸಕ ಲಕ್ಷ್ಮಣ ಸವದಿ ಅಥಣಿ: ಹಿಪ್ಪರಗಿ ಡ್ಯಾಮ್ ಗೆಟ್ ತುಂಡಾಗುವ ಲ್ಲಿ ಇಲಾಖೆ ಅಥವಾ ನಿರ್ವಹಣೆ ಮಾಡುವ ವರು ಸಂಭಂದಪಟ್ಟ ಅಧಿಕಾರಿಗಳು ಯಾರಾದ್ರೂ ನಿರ್ಲಕ್ಷ ವಹಿಸಿದ್ದು ಕಂಡು ಬಂದರೆ ಅವರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ತಮ್ಮ ನಿವಾಸದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿ ನಾಲ್ಕು ದಿನಗಳ ಹಿಂದೆ ಅಥಣಿ ಮತ್ತು ಜಮಖಂಡಿ ತಾಲ್ಲೂಕುಗಳ ಮಧ್ಯೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹಿಪ್ಪರಗಿ ಜಲಾಶಯದ ಗೇಟ್ ಮಣಿದು ತಾಂತ್ರಿಕ ದೋಷದಿಂದಾಗಿ ಕಟ್ ಆಗಿ ತಾಲ್ಲೂಕಿನ ಹಿಪ್ಪರಗಿ ಜಲಾಶಯದ 22ನೇ ಸಂಖ್ಯೆಯ ಕ್ರಸ್ಟ್ ಗೇಟ್ ಮುರಿದುಬಿದ್ದು, 8ರಿಂದ 9ಸಾವಿರ ಕೂಸೆಕ್ಸ್ ನೀರು ಹೊರಗಡೆ ಹರಿದು ಹೋಗುತ್ತಿತ್ತು.ಈ ಹಿನ್ನೆಲೆಯಲ್ಲಿ ಗೆಟ್ ಹಾನಿಯಾಗಿರುವ ಪರಿಣಾಮ ನದಿ ಪಾತ್ರದ ಜನರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಜಮಖಂಡಿ, ಅಥಣಿ, ಕಾಗವಾಡ, ರಾಯಭಾಗ, ಚಿಕ್ಕೋಡಿ ಐದು ತಾಲೂಕಿನ ಸುಮಾರು 700ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಇಲ್ಲಿಂದಲೇ ಆಗುತ್ತಿತ್ತು. ಎರಡು ಬದಿಗೆ ಸಾಕಷ್ಟು ನೀರಾವರಿ ಇರುವುದರಿಂದ ಸುಮಾರು ಮೂರು ಲಕ್ಷ ಹೆಕ್ಟರ್ ಪ್ರದೇಶಕ್ಕೆ ಇಲ್ಲಿಂದ ನೀರು ಉಣಿಸಲಾಗುತ್ತಿತ್ತು. ಇದರಿಂದ ಎಲ್ಲ ರೈತರು ಬಹಳ ಆತಂಕಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ನಮ್ಮ ನೀರಾವರಿ ಇಲಾಖೆ ಅಧಿಕಾರಿಗಳು ಹಗಲು ರಾತ್ರಿ ಊಟ ಕೂಡ ಮಾಡದೆ ಯುದ್ಧೋಪಾದಿ ಯಲ್ಲಿಕಾರ್ಯನಿರ್ವಹಿಸಿದ್ದಾರೆ. ಹೊಸಪೇಟೆ ಹೈದರಾಬಾದ್ ಮಹಾರಾಷ್ಟ್ರ ದಿಂದ ತಜ್ಞರನ್ನು ಕರೆಸಿ ಇಲಾಖೆಯ ಎಲ್ಲಾ ಅಭಿಯಂತರುಗಳ ನ್ನು ಕರೆಸಿಕೊಂಡು ಕೆಎನ್ಎಲ್ ನ ವ್ಯವಸ್ಥಾಪಕ ನಿರ್ದೇಶಕರು ರಾಜೇಶ್ ಅಮೀನಬಾವಿ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಹಗಲು ರಾತ್ರಿ ಕಾರ್ಯನಿರ್ವಹಿಸಿ ಎರಡೇ ದಿನದಲ್ಲಿ ಗೇಟ್ಗಳನ್ನು ಅಳವಡಿಸಿದ್ದಾರೆ. ಟಿಬಿ ಡ್ಯಾಮ್ ನದಿ ಪಕ್ಕದ ಜನರಿಗೆ ಯಾವ ರೀತಿ ಆತಂಕ ಮೂಡಿತ್ತು ಹಾಗೆ ಕೃಷ್ಣಾ ನದಿ ಅಕ್ಕ ಪಕ್ಕದ ಜನರಿಗೆ ರೈತ ಬಂಧುಗಳಿಗೆ ನೀರಿನ ಫಲಾನುಭವಿಗಳಿಗೆ ಈ ಘಟನೆ ಅತಂಕ ಮೂಡಿಸಿತ್ತು. ನಾನು ಅಭಿಯಂತರುಗಳನ್ನು ತಜ್ಞರನ್ನು, ವ್ಯವಸ್ಥಾಪಕ ನಿರ್ದೇಶಕರನ್ನು ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರನ್ನು 5 ತಾಲೂಕಿನ ರೈತ ಬಂಧುಗಳ ಪರವಾಗಿ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು. ಈಗಾಗಲೇ ಗೆಟ್ ಅಳವಡಿಸಿ ಇಪ್ಪತ್ತು ಇಪ್ಪತ್ತೊಂದು ವರ್ಷ ಕಳೆದಿದೆ. ಹೀಗಾಗಿ ಗೆಟ್ ಕಾರ್ಯ ಕ್ಷಮತೆ ಪರಿಶೀಲನೆ ಮಾಡಿ ತಜ್ಞರು ವರದಿ ನೀಡಿದರೆ ಅಗತ್ಯ ಬಿದ್ದರೆ ಅವುಗಳ ಬದಲಾವಣೆ ಮಾಡಿ ಹೊಸ ಗೆಟ್ ಅಳವಡಿಸುವ ಪ್ರಯತ್ನ ಮಾಡುತ್ತೇವೆ. ಖರ್ಚು ಹೆಚ್ಚಾಗುತ್ತದೆ ಎಂದು ಬದಲಾವಣೆ ಮಾಡುವಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಏಕೆಂದರೆ ಇದು ಜನರ ಜೀವನಕ್ಕೆ ಸಂಭಂದ ಪಟ್ಟಿದ್ದು ಅಗತ್ಯ ಹಾಗೂ ಅವಶ್ಯಕವಾಗಿದೆ. ಮಳೆ ಬೇಗ ಬಂದು ಈ ಬಾರಿ ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ಪ್ರತಿಯೊಂದು ಗೇಟುಗಳನ್ನು ನಿರ್ವಹಣೆ ಮಾಡುತ್ತಾ ಬರುತ್ತಾ ಇರುವಾಗ ಕೊನೆಗೆ ಎರಡು ಮೂರು ಗೇಟುಗಳು ಉಳಿದಿವೆ. ಇದರಲ್ಲಿ ಅಧಿಕಾರಿಗಳ ಲೋಪ ಏನಾದ್ರೂ ಇದ್ರೆ ಅವರ ಮೇಲೆ ಶಿಸ್ತು ಕ್ರಮ ಖಂಡಿತವಾಗಿ ತೆಗೆದುಕೊಳ್ಳುತ್ತೇವೆ ಈಗಾಗಲೇ ಸೂಚನೆ ನೀಡಿದ್ದೇವೆ ಎಂದು ಹೇಳಿದರು. ಜನತೆ ಆತಂಕ ಒಳಗಾಗುವಾಗ ಅಗತ್ಯವಿಲ್ಲ. ಉಪಮುಖ್ಯಮಂತ್ರಿ ಹಾಗೂ ಭಾರಿ ನೀರಾವರಿ ಸಚಿವರಾದ ಡಿಕೆ ಶಿವಕುಮಾರ್ ಅವರ ಜೊತೆಯಲ್ಲಿ ಮಾತನಾಡಿದ್ದು ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡಿ ಎರಡು ಟಿಎಂಸಿ ನೀರು ಬಿಡಿಸುವ ಬಗ್ಗೆ ಚರ್ಚಿಸುತ್ತೇವೆ. ಅಗತ್ಯಬಿದ್ದರೆ ಹಣ ನೀಡಿಯಾದರೂ ನೀರು ಬಿಡಿಸಿಕೊಂಡು ಬರುತ್ತೇವೆ. ಈ ಕುರಿತು ನಮ್ಮ ಉಪಮುಖ್ಯಮಂತ್ರಿ, ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡಿದ್ದು ಮಹಾರಾಷ್ಟ್ರದ ಸಿಎಂ ಅವರಿಗೆ ಕೂಡ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.

- ಇಡೀ ರಾಜ್ಯದಲ್ಲಿ ಅಥಣಿ ವಿಭಾಗದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತಗಳಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ ಸೂಕ್ತ ಕ್ರಮ ಕೈಗೊಳ್ಳಬೇಕು : ಬೆಳಗಾವಿ ಎಸ್.ಪಿ ಕೆ. ರಾಮರಾಜನ್. ಅಥಣಿ: ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಯಾರಿಗಾದರೂ ಅಪಘಾತ ಮಾಡಿ ಘಟನೆಯಲ್ಲಿ ಸಾವುಗಳು ಸಂಭವಿಸಿದರೆ ಅಂತಹ ವಾಹನ ಚಾಲಕರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ಸಾರ್ವಜನಿಕರ ನಡುವೆ ಉತ್ತಮ ಸಂವಹನ ಮಾನವೀಯ ಭದ್ರತೆಗಾಗಿ ಅತ್ಯಂತ ಮುಖ್ಯ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.) ಕೆ ರಾಮರಾಜನ್ ಹೇಳಿದರು. ಅಥಣಿ ಪೊಲೀಸ್ ಉಪವಿಭಾಗದ ವ್ಯಾಪ್ತಿಯಲ್ಲಿ ರವಿವಾರ ನಿಯೋಜಿತ ಭೇಟಿ ನೀಡಿದ ನೂತನವಾಗಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಅಥಣಿ, ಕಾಗವಾಡ, ಕುಡಚಿ, ರಾಯಬಾಗ, ಹಾರೂಗೇರಿ, ಐಗಳಿ ಪೊಲೀಸ್ ಠಾಣೆಗಳಿಗೆ ಠಾಣೆಗಳಲ್ಲಿ ಇರುವ ವಾಸ್ತವ ಸ್ಥಿತಿಗತಿ, ವ್ಯವಸ್ಥೆ, ಸಾರ್ವಜನಿಕರೊಂದಿಗೆ ಪೊಲೀಸರ ನಡುವಳಿಕೆ, ಹಲವು ಕಡತಗಳನ್ನು ಪರಿಶೀಲನೆ ನಡೆಸಿ ಪೊಲೀಸ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಸಲಹೆಗಳನ್ನು ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಳಗಾವಿ ಎಸ್.ಪಿ ಕೆ ರಾಮರಾಜನ್ ಕಾನೂನು ಎಲ್ಲರಿಗೂ ಸಮಾನ ಯಾರೇ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೆ ಯಾವುದೇ ರಾಜಿ ಸಂಧಾನ ಮಾಡದೆ ದೂರಿನ ಅನ್ವಯ ಎಫ್ ಐ ಆರ್ ದಾಖಲಿಸಬೇಕು. ಇಡೀ ರಾಜ್ಯದಲ್ಲಿ ಅಥಣಿ ಪೊಲೀಸ್ ಉಪ ವಿಭಾಗದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತಗಳಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ ಅವುಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕಾನೂನುಬಾಹಿರ ಯಾವುದೇ ಚಟುವಟಿಕೆಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಅಕ್ರಮ ಮಧ್ಯ ಮಾರಾಟಗಾರರ ವಿರುದ್ಧ ಕೇಸ್ ದಾಖಲು ಮಾಡಿ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಗಳು ಕಂಡುಬರುತ್ತಿದ್ದು ಜನರಲ್ಲಿ ಜಾಗೃತಿ ಮೂಡಿಸಬೇಕು, ಹಣದ ಆಸೆಗಾಗಿ ವಂಚಕರ ಬಲೆಗೆ ಬೀಳಬಾರದು ಅಂತಹ ಯಾವುದೇ ಸಂದೇಹ ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಅಥಣಿ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಜೊತೆಗೆ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಇಲ್ಲಿರುವ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇರುವುದು ಕಂಡು ಬಂದಿದೆ. ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಥಣಿಗೆ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಟ್ರಾಫಿಕ್ ಪೊಲೀಸ್ ಠಾಣೆ ಬೇಡಿಕೆ ಇದ್ದು, ಈ ಕುರಿತು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಹೇಳಿದರು. ಈ ವೇಳೆ ಅಥಣಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ, ಸಿಪಿಐ ಸಂತೋಷ ಹಳ್ಳೂರ, ಪಿ ಎಸ್ ಐ ಗಿರಿಮಲ್ಲಪ್ಪ ಉಪ್ಪಾರ, ಅಥಣಿ ಪೊಲೀಸ್ ಉಪ ವಿಭಾಗದ ಪಿಎಸ್‌ಐ, ಎ ಎಸ್ ಐ, ಎಲ್ಲ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.2
- ಯಶಸ್ವಿಯಾಗಿ ಜರುಗಿದ ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಕಾರ್ಯಕ್ರಮ1
- ಸಾಲೋಟಗಿ ಭಜಂತ್ರಿ ಸೌದತ್ತಿ ಎಲ್ಲಮ್ಮ ಪಾದಯಾತ್ರೆ ವಿಡಿಯೋ ವೈರಲ್ ಮಾಡಿ 93803537101
- *ಬೆಳಗಾವಿ ಬ್ರೇಕಿಂಗ್* ಚಿಕ್ಕ ಮಕ್ಕಳ ಆರೋಗ್ಯ ಕಾಪಾಡಬೇಕಾದ ವೈದ್ಯನ ಗಾಂಜಾ ಗಮತ್ತು. ಚಿಕ್ಕ ಮಕ್ಕಳ ತಜ್ಞ ವೈದ್ಯನ ಮನೆಯಲ್ಲಿ ಗಾಂಜಾ ಪತ್ತೆ. ವೈದ್ಯ ಗಾಂಜಾ ಸೇವನೆ ಸಂಗತಿಯೂ ಪೊಲೀಸ್ ತನಿಖೆಯಲ್ಲಿ ದೃಢ. ಇಷ್ಟೆಲ್ಲ ಆದರೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಇಲ್ಲ ಮಾಹಿತಿ. ಮಕ್ಕಳ ಆರೋಗ್ಯ ಕಾಪಾಡೋ ವೈದ್ಯನೇ ಮಾದಕ ವಸ್ತು ಸೇವನೆ. ಖಚಿತ ಮಾಹಿತಿ ಮೇರೆಗೆ ವೈದ್ಯನ ಮನೆ ಮೇಲೆ ಪೊಲೀಸ್ ದಾಳಿ. ದಾಳಿಯ ವೇಳೆಯಲ್ಲಿ ಮನೆಯಲ್ಲಿ 134 ಗ್ರಾಂ ಗಾಂಜಾ ಪತ್ತೆ. ವೈದ್ಯ ಡಾ. ರಾಹುಲ್ ಬಂತಿ ಮನೆಯಲ್ಲಿ ಪತ್ತೆಯಾಗಿರೋ ಮಾದಕ ವಸ್ತು. ಬೆಳಗಾವಿಯ ಶಿವಬಸವನ ನಗರದಲ್ಲಿ ಇರೋ ವೈದ್ಯನ ಮನೆ. ವೈದ್ಯ ಬಂತಿ ಹಿರೇಬಾಗೇವಾಡಿ ಸಮುದಾಯ ಆರೋಗ್ಯಾಧಿಕಾರಿ. ಹಿರೇಬಾಗೇವಾಡಿಯಲ್ಲಿ ಚಿಕ್ಕ ಮಕ್ಕಳ ತಜ್ಱ ಆಗಿರೋ ವೈದ್ಯ. ವೈದ್ಯನ ವಿರುದ್ದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕೇಸ್. ಈಗಾಗಲೇ ವೈದ್ಯನಿಗೆ ನೋಟಿಸ್ ಜಾರಿ ಮಾಡಿರುವ ಮಾಳಮಾರುತಿ ಠಾಣೆ ಪೊಲೀಸರು. ವೈದ್ಯನ ವಿರುದ್ಧ ಕ್ರಮ ಯಾಕೆ ಇಲ್ಲ ಎನ್ನುವುದು ಪ್ರಶ್ನೆ!1
- Post by Udaysingh Patel1
- ಮೈಸೂರು-ನಾಗಲಿಂಗ ಸ್ವಾಮಿ ನಿವಾಸಕ್ಕೆ ಮುತಾಲಿಕ್ ಬೇಟೆ #onlinetv24x7 #Mysore #Pramodmuthali1
- ಹೈಯಾಳಲಿಂಗೇಶ್ವರ ದೇವಸ್ಥಾನದ ದೇವರ ಹುಂಡಿ ಕಳ್ಳತನಕ್ಕೆ ಯತ್ನ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೈಯಾಳಲಿಂಗೇಶ್ವರ ಗ್ರಾಮದ ಹೈಯಾಳಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ಹುಂಡಿಯನ್ನು ಕಳ್ಳತನ ಮಾಡಲು ಯತ್ನಿಸಿದ ಘಟನೆ ವರದಿಯಾಗಿದೆ. ಬೈಕ್‌ನಲ್ಲಿ ಬಂದ ನಾಲ್ವರು ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ದೋಚಲು ಪ್ರಯತ್ನಿಸಿದ್ದಾರೆ. ಈ ಘಟನೆ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.1
- ಪ್ರಧಾನಿ ಮೋದಿ ಅವರ ವಿರುದ್ಧ ಅಸಂಬದ್ಧ ಪದ ಬಳಕೆ ಕ್ರಮಕ್ಕೆ ಆಗ್ರಹ ಅಥಣಿ : ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಅಸಂಬದ್ದ ಪದ ಬಳಕೆ ಮಾಡಿರುವ ಅಥಣಿ ವ್ಯಾಪಾರಿ ವಿರುದ್ಧ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಳಗಾವಿ SP ಅವರಿಗೆ ಅಥಣಿ ಬಿಜೆಪಿ ವತಿಯಿಂದ ಅಥಣಿ ಪಟ್ಟಣಕ್ಕೆ ಆಗಮಿಸಿದ ಬೆಳಗಾವಿ ಜಿಲ್ಹಾ ಪೊಲೀಸ್ ವರಿಷ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.1