*ಮೊರಬ:ಡಿ4 ರಥೋತ್ಸವ, ಮುಂಜಾಗ್ರತಾ ಕ್ರಮ ಜರುಗಿಸಬೇಕು, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು- ಒತ್ತಾಯ*- ವಿಜಯನಗರ ಜಿಲ್ಲೆ ಕೂಡ್ಲಿಗಿ:ತಾಲೂಕಿನ ದೊಡ್ಡ ರಥೋತ್ಸವ ಗಳಲ್ಲೊಂದಾದ, ಮೊರಬ ಶ್ರೀವೀರಭದ್ರೇಶ್ವರ ರಥೋತ್ಸವ ಡಿ4 ರಂದು ಜರುಗಲಿದೆ. ರಥೋತ್ಸವಕ್ಕೆ, ಕೂಡ್ಲಿಗಿ ಪಟ್ಟಣ ಹಾಗೂ ತಾಲೂಕಿನ ವಿವಿದೆಡೆಗಳಿಂದ ಮಾತ್ರವಲ್ಲದೇ. ಜಿಲ್ಲೆ ನೆರೆ ಹೊರೆ ಜಿಲ್ಲೆಗಳಿಂದ ಮತ್ತು ನಾಡಿನ ವಿವಿದೆಡೆಗಳಿಂದ, ಮೊರಬ ಶ್ರೀವೀರಭದ್ರೇಶ್ವರ ರಥೋತ್ಸವಕ್ಕೆ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ರಥೊತ್ಸವಕ್ಕೆ ಆಗಮಿಸುವ ಪ್ರವಾಸಿ ಭಕ್ತರಿಗಾಗಿ, ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ. ಸಂಬಂಧಿಸಿದ ಇಲಾಖೆ ಅಗತ್ಯ ಕ್ರಮ ಜರುಗಿಸುವಂತೆ ಒತ್ತಾಯಿಸಿ, ಮೊರಬ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರು,ಹಾಗೂ ಹೋರಾಟಗಾರರಾದ. ಮೊರಬನಳ್ಳಿ ಕರಿಯಪ್ಪನವರು ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ, ಇಲಾಖೆಗಳಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದ್ದಾರೆ. ರಥೋತ್ಸವಕ್ಕೆ ಬೆರಳೆಣಿಕೆಯ ದಿನಗಳಷ್ಟೇ ಅಂತರದಲ್ಲಿದ್ದು, ಭಕ್ತರು ತಂಗುವ ಸಮುದಾಯ ಭವನ ಹಾಗೂ ನಿವಾಸಗಳಲ್ಲಿ ಕನಿಷ್ಠ ಸೌಕರ್ಯಗಳಿಲ್ಲ. ರಥೋತ್ಸವಕ್ಕೆ ಆಗಮಿಸುವ ಸಹಸ್ರಾರು ಜನಸಂಖ್ಯೆಯ ಜನರಿಗೆ, ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು. ಸಮರ್ಪಕವಾಗಿ ಒದಗಿಸುವ ಪೂರ್ವ ತಯಾರಿ ಕಾಮಗಾರಿಗಳು, ಈ ವರೆಗೂ ಆರಂಭಗೊಂಡಿಲ್ಲ. ಈ ಸಂಬಂಧಿಸಿದಂತೆ ಸ್ಥಳೀಯ ಆಡಳಿತ, ನಿರ್ಲಕ್ಷ್ಯ ಧೋರಣೆ ತಾಳಿದ್ದು. ಸಂಬಂಧಿಸಿದ ಇಲಾಖೆಗೆ ಸೂಕ್ತ ನಿರ್ಧೇಶನ ನೀಡುವಂತೆ, ಅಗತ್ಯ ಕ್ರಮ ಜರುಗಿಸಬೇಕೆಂದು ಕರಿಯಪ್ಪನವರು. ರಾಜ್ಯ ಧಾರ್ಮಿಕ ದತ್ತಿ ಇಲಾಖಾಧಿಕಾರಿ, ವಿಜಯನಗರ ಜಿಲ್ಲಾಧಿಕಾರಿಗಳು. ಮತ್ತು ರಾಜ್ಯ ಪ್ತವಾಸೋಧ್ಯಮ ಇಲಾಖೆಯ ಅಧಿಕಾರಿಗೆ, ಸೂಕ್ತ ಕ್ರಮಕ್ಕಾಗಿ ಪತ್ರದ ಮೂಲಕ ಹಕ್ಕೊತ್ತಾಯ ಮಾಡಿದ್ದಾರೆ. ಅವರು ತಮ್ಮ ಪತ್ರವನ್ನು ಕೂಡ್ಲಿಗಿ ತಹಶಿಲ್ದಾರರ ಮೂಲಕ, ಸಂಬಂಧಿಸಿದ ಮೂರು ಇಲಾಖೆಗಳಿಗೆ ಪತ್ರ ರವಾನಿಸಿದ್ದಾರೆ. *ದೇವಸ್ಥಾನದಿಂದ 10ಲಕ್ಷಕ್ಕೂ ಅಧಿಕ ದೇಣಿಗೆ ಹಣ ಸಂಗ್ರಹ*-ರಾಜ್ಯ ಪುರಾತತ್ವ ಇಲಾಖೆಗೆ ಸೇರ್ಪಡೆಗೊಂಡಿರುವ, ಶ್ರೀವೀರಭದ್ರೇಶ್ವರ ದೇವಸ್ಥಾನದ ಹುಂಡಿಯಲ್ಲಿ. ಪ್ರಸಕ್ತ ಸಾಲಿನಲ್ಲಿ 10ಲಕ್ಷಕ್ಕೂ ಅಧಿಕ ಮೊತ್ತದ ನಗದು ಹಣ ಸಂಗ್ರಹಗೊಂಡಿದ್ದು, ಕಂದಾಯ ಇಲಾಖೆಯವರು ಒಶಕ್ಕೆ ಪಡೆದಿದ್ದಾರೆ. ಆದರೆ ಹಲವು ವರ್ಷಗಳಿಂದ ದೇವಸ್ಥಾನ ಅಗತ್ಯ ದುರಸ್ಥಿಗೊಂಡಿಲ್ಲ, ಹಾಗೂ ನಿರ್ವಹಣೆ ನವೀಕರಣ ಗೊಂಡಿಲ್ಲ. ಮೂಲ ಭೂತ ಸೌಕರ್ಯಗಳು ಮೊದಲೇ ಇಲ್ಲ, ಸುಸಜ್ಜಿತ ಶೌಚಾಲಯ ಶುದ್ಧ ಕುಡಿಯೋ ನೀರಿನ ವ್ಯವಸ್ಥೆ ಅಗಬೇಕಿದೆ ಎಂದು ಹೋರಾಟಗಾರರು ಹೇಳಿಕೆ ನೀಡಿದ್ದಾರೆ. ಇಲಾಖೆ ಉಂಡಿ ಹಣ ಪಡೆಯೋದು ಮಾತ್ರವಲ್ಲ, ದೇವಸ್ಥಾನದ ಸುವ್ಯವಸ್ಥೆ ಹಾಗೂ ಸುಸಜ್ಜಿತವಾಗಿ ಮೂಲಭೂತ ಸೌಕರ್ಯಗಳನ್ನು ಸಮಪರ್ಕವಾಗಿ ಕಲ್ಪಿಸಬೇಕಿದೆ. ಮತ್ತು ದೇವಸ್ಥಾನದ ನವೀಕರಣ, ಅಗತ್ಯ ಇರುವ ದುರಸ್ಥಿಕಾಮಗಾರಿಗಳನ್ನು ಕೈಗೊಂಡು ಸುವ್ಯವಸ್ಥೆ ಮಾಡಬೇಕಿದೆ ಎಂದು ಹೋರಾಟಗಾರರು ಹೇಳಿಕೆ ನೀಡಿದ್ದಾರೆ. *ರಥೋತ್ಸವಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿ ಹಾಗೂ ನೈರ್ಮಲ್ಯ ಕಾಪಾಡಬೇಕು*- ಶ್ರೀಕ್ಷೆೇತ್ರ ಮೊರಬ ಗ್ರಾಮ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನವಾಗಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ನೈರ್ಮಲ್ಯತೆ ಮಾಯವಾಗಿದೆ ಎಂದು ಪ್ರಜ್ಞಾವಂತರು ದೂರಿದ್ದಾರೆ. ಗ್ರಾಮದಲ್ಲಿ ಜರುಗಲಿರುವ ರಥೋತ್ಸವಕ್ಕೆ ಕೂಡ್ಲಿಗಿ ಪಟ್ಟಣ ತಾಲೂಕು ಜಿಲ್ಲೆ ನೆರೆ ಹೊರೆ ಜಿಲ್ಲೆಗಳಿಂದ, ಅಸಂಖ್ಯಾತ ಭಕ್ತರು ಅಗಮಿಸಲುವ ನಿರೀಕ್ಷೆ ಇದೆ. ಪ್ರವಾಸಿ ಭಕ್ತರು ತಂಗಲು ಅಗತ್ಯ ಸುಸಜ್ಜಿತ, ಸಮುದಾಯ ಭವನ ವ್ಯವಸ್ಥೆ ಇಲ್ಲವಾಗಿದೆ. ಹಾಲಿ ಇರುವ ಸಮುದಾಯ ಭವನ ಹಾಗೂ ತಂಗುದಾಣಗಳಲ್ಲಿ, ಶೌಚಾಲಗಳಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ ದುರಾವಸ್ಥೆಯಲ್ಲಿವೆ. ಸಾಕಷ್ಟು ಶುದ್ಧ ಕುಡಿಯೋ ನೀರು ಪೂರೈಸುವ ವ್ಯವಸ್ಥೆಯಾಗಬೇಕಿದೆ, ಹಾಗೂ ಮಹಿಳೆಯರಿಗೆ ಪುರುಷರಿಗೆ ಪ್ರತ್ಯೇಕ ಸುಲಭ ಶೌಚಾಲಯಗಳ ವ್ಯವಸ್ಥೆಯಾಗಬೇಕಿದೆ. ಗ್ರಾಮದಲ್ಲಿ ನೈರ್ಮಲ್ಯತೆ ಕಾಪಾಡಬೇಕಿದೆ, ರಸ್ತೆಗಳ ದುರಸ್ಥೆ ಮತ್ತು ಚರಂಡಿಗಳ ಹೂಳು ತೆಗೆದು ಸ್ವಚ್ಚಗೊಳಿಸಬೇಕಿದೆ. ರಥೋತ್ಸವ ಹಾಗೂ ಜಾತ್ರೆ ಸಂದರ್ಭದಲ್ಲಿ, ಸ್ವಚ್ಚತೆ ಕಾಪಾಡುವ ಮುಂಜಾಗ್ರತಾ ಕ್ರಮಗಳನ್ನು ಜರುಗಿಸಬೇಕಿದೆ ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ. *ಡಿಸಿ ಎಸಿ ಯವರೇ ಮೊರಬಕ್ಕೆ ಬನ್ನಿ ಖುದ್ದು ಪರಿಶೀಲಿಸಿ ಸ್ವಾಮಿ*-ಮೊರಬ ಶ್ರೀವೀರಭದ್ರೇಶ್ವರ ದೇವಸ್ಥಾನ, ದುರಸ್ಥಿ ಹಾಗೂ ನವೀಕರಣ ಕಂಡು ವರ್ಷಗಳೇ ಗತಿಸಿದ್ದು. ಪುರಾತತ್ವ ಇಲಾಖೆಯನ್ನು ಪ್ರತಿನಿಧಿಸುವ, ಕಂದಾಯ ಇಲಾಖಾ ಉನ್ನತಾಧಿಕಾರಿಗಳಾದ ಡಿಸಿ ಎಸಿಯವರು. ಶೀಘ್ರವೇ ದಿಡೀರ್ ಆಗಿ ಮೊರಬಕ್ಕೆ ಖುದ್ದು ಭೇಟಿ ನೀಡಿ, ಶ್ರೀವೀರಭದ್ರೇಶ್ವರ ದೇವಸ್ಥಾನದ ಸ್ಥಿತಿಗತಿ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಹೋರಾಟಗಾರರು ಭಕ್ತರು ಈ ಮೂಲಕ ಒತ್ತಾಯಿಸುತ್ತಿದ್ದಾರೆ.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*

- ಉಕ್ಕುತ್ತಿರುವ ಜಲಧಾರೆ1
- ಕೊಟ್ಟೂರು ವೀರಭದ್ರೆಶ್ವರ ಸ್ವಾಮಿ ಸುಸ್ತ್ರ ಹಾಗೂ ಗುಗಳ ಪೂಜೆ kottur veerabadra1
- ಕಿವುಡ ಮಾಡಿದ ಕಿತಾಪತಿ||ನಾಟಕ||ಕೊಟ್ಟೂರು ಜಾತ್ರೆಯಲ್ಲಿ1
- ವೀರಪ್ಪ ಉಪಲೋಕಾಯುಕ್ತರ ಹೊಸಪೇಟೆ ಪ್ರವಾಸ ಸಾರ್ವಜನಿಕರ ಅಹವಾಲು.ಕೊಂದುಕೊರತೆದೂರುಗಳ ವಿಚಾರಣೆ ಬಾಕಿ ಪ್ರಕರಣಗಳ ವಿಲೇವಾರಿ1
- ಕರುಣೆಯ ಗೂಡು, ಹೊಸಪೇಟೆ1
- ಹೊಸಪೇಟೆ-ಚಿಕೇನ ಕೊಪ್ಪದ ಶರಣರ ಶ್ರೀ ನುಡಿ- ಪುಣ್ಯ ಪಾಪಂಗಳ ಅರಿವು ಇದ್ದವ ಗೆದ್ದ, ಸಿದ್ಧ. ಮೆರೆದವ ಪೆದ್ದ, ಬಿದ್ದ.1
- ಹೊಸಪೇಟೆ ಯಲ್ಲಿ ಸೌಜನ್ಯ ಪರ ಪ್ರತಿಭಟನೆ RS_18_NEWS JL_INDIA_NEWS1
- ದೇವಿ ಹುಲಿಗೆಮ್ಮ ದೇವಸ್ಥಾನ ಹುಲಿಗಿ,ಹೊಸಪೇಟೆ1