logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕು-ಡಾ. ಕುಮಾರ ಮಂಡ್ಯ-ವ್ಯಸನಮುಕ್ತ ಸಮಾಜವನ್ನು ನಿರ್ಮಿಸುವ ಹೊಣೆಗಾರಿಕೆ ಯುವ ಸಮೂಹದ ಮೇಲಿದೆ. ಯುವಜನತೆ ಸದೃಢ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಆರೋಗ್ಯಕರ ಹಾಗೂ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಸಾಧ್ಯ ಎಂದು ಜಿಲ್ಲಾಧಿಕಾರಿಗಳಾದ ಡಾ. ಕುಮಾರ ರವರು ಹೇಳಿದರು. ನಗರದ ತಾವರೆಕೆರೆ ಎಸ್.ಬಿ. ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈ ಭಾರತ್ (ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಡ್ಯ ವಿಶ್ವವಿದ್ಯಾಲಯ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಎಸ್.ಬಿ. ಎಜುಕೇಷನ್ ಟ್ರಸ್ಟ್ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ "ನಶಾ ಮುಕ್ತ–ಯುವ ವಿಕಸಿತ ಭಾರತ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಜನತೆ ದೇಶದ ಅಮೂಲ್ಯ ಆಸ್ತಿ ಮತ್ತು ರಾಷ್ಟ್ರದ ಭವಿಷ್ಯವಾಗಿದ್ದು, ಅವರ ಶಕ್ತಿ ಹಾಗೂ ಸಾಮರ್ಥ್ಯವನ್ನು ರಾಷ್ಟ್ರ ನಿರ್ಮಾಣದ ದಿಕ್ಕಿನಲ್ಲಿ ಬಳಸಿದಾಗ ಮಾತ್ರ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಸಾಧ್ಯವಾಗುತ್ತದೆ. ಮಾದಕ ವ್ಯಸನ, ದುಶ್ಚಟಗಳು ಹಾಗೂ ಅನಾರೋಗ್ಯಕರ ಜೀವನಶೈಲಿಯಿಂದ ದೂರವಿದ್ದು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು. ಯುವಕರು ತಮ್ಮ ಸುತ್ತಮುತ್ತಲಿನ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಸಹಪಾಠಿಗಳಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿರುವವರನ್ನು ಗುರುತಿಸಿ, ಅವರಿಗೆ ಜಾಗೃತಿ ಮೂಡಿಸಿ ಸರಿದಾರಿಗೆ ತರುವ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣವು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ ಎಂದು ಹೇಳಿದರು. ಮನುಷ್ಯನ ಜೀವನ ಅತ್ಯಂತ ಅಮೂಲ್ಯವಾದದ್ದು. ಕ್ಷಣಿಕ ಸುಖಕ್ಕಾಗಿ ಮಾದಕ ವಸ್ತುಗಳಿಗೆ ಬಲಿಯಾಗದೆ, ಜೀವನದಲ್ಲಿ ಉನ್ನತ ಗುರಿಗಳನ್ನು ಹೊಂದಿ ಶಿಕ್ಷಣ, ಸಾಹಿತ್ಯ ಹಾಗೂ ಉತ್ತಮ ಪುಸ್ತಕಗಳ ಅಧ್ಯಯನದ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಉತ್ತಮ ಚಿಂತನೆ ಮತ್ತು ಸಕಾರಾತ್ಮಕ ಮನೋಭಾವವೇ ಯಶಸ್ವಿ ಜೀವನದ ಅಡಿಪಾಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ವಿ.ಜೆ. ಶೋಭಾರಾಣಿ ಅವರು ವಿದ್ಯಾರ್ಥಿಗಳು ಹಾಗೂ ಯುವಜನತೆ ಯಾವುದೇ ಕಾರಣಕ್ಕೂ ಮಾದಕ ವ್ಯಸನ ಸೇರಿದಂತೆ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು. ದೈಹಿಕ ಹಾಗೂ ಮಾನಸಿಕ ಒತ್ತಡ, ತಪ್ಪು ಸ್ನೇಹ ಬಳಗ ಮತ್ತು ಕುತೂಹಲದಿಂದ ಕೆಲವರು ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಾರೆ. ಆದರೆ ಅದರ ದುಷ್ಪರಿಣಾಮಗಳು ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಆದ್ದರಿಂದ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಆರೋಗ್ಯ, ಆರ್ಥಿಕ ಹಾಗೂ ಸಾಮಾಜಿಕ ಹಾನಿಗಳ ಬಗ್ಗೆ ಯುವಜನತೆಯಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು Karnataka State Police ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿರುವ 'Drugs Free Karnataka' ವಿಭಾಗದ ಮೂಲಕ ಡ್ರಗ್ಸ್ ಸೇವನೆ, ಅಕ್ರಮ ಸಾಗಾಣಿಕೆ ಅಥವಾ ಮಾರಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಗೌಪ್ಯವಾಗಿ ಹಂಚಿಕೊಳ್ಳಬಹುದು. ಸಾರ್ವಜನಿಕರ ಸಹಕಾರದಿಂದಲೇ ಡ್ರಗ್ಸ್ ಜಾಲವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷರಾದ ಮೀರಾ ಶಿವಲಿಂಗಯ್ಯ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮನುಜಶ್ರೀ, ಮೈ ಭಾರತ್ ಮಂಡ್ಯ ಜಿಲ್ಲಾ ಯುವ ಅಧಿಕಾರಿಗಳಾದ ಶ್ರುತಿ ಎಸ್ ರವರು ಉಪಸ್ಥಿತರಿದ್ದರು.

2 hrs ago
user_Arunprasad G B
Arunprasad G B
Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
2 hrs ago

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕು-ಡಾ. ಕುಮಾರ ಮಂಡ್ಯ-ವ್ಯಸನಮುಕ್ತ ಸಮಾಜವನ್ನು ನಿರ್ಮಿಸುವ ಹೊಣೆಗಾರಿಕೆ ಯುವ ಸಮೂಹದ ಮೇಲಿದೆ. ಯುವಜನತೆ ಸದೃಢ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಆರೋಗ್ಯಕರ ಹಾಗೂ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಸಾಧ್ಯ ಎಂದು ಜಿಲ್ಲಾಧಿಕಾರಿಗಳಾದ ಡಾ. ಕುಮಾರ ರವರು ಹೇಳಿದರು. ನಗರದ ತಾವರೆಕೆರೆ ಎಸ್.ಬಿ. ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈ ಭಾರತ್ (ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಡ್ಯ ವಿಶ್ವವಿದ್ಯಾಲಯ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಎಸ್.ಬಿ. ಎಜುಕೇಷನ್ ಟ್ರಸ್ಟ್ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ "ನಶಾ ಮುಕ್ತ–ಯುವ ವಿಕಸಿತ ಭಾರತ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಜನತೆ ದೇಶದ ಅಮೂಲ್ಯ ಆಸ್ತಿ ಮತ್ತು ರಾಷ್ಟ್ರದ ಭವಿಷ್ಯವಾಗಿದ್ದು, ಅವರ ಶಕ್ತಿ ಹಾಗೂ ಸಾಮರ್ಥ್ಯವನ್ನು ರಾಷ್ಟ್ರ ನಿರ್ಮಾಣದ ದಿಕ್ಕಿನಲ್ಲಿ ಬಳಸಿದಾಗ ಮಾತ್ರ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಸಾಧ್ಯವಾಗುತ್ತದೆ. ಮಾದಕ ವ್ಯಸನ, ದುಶ್ಚಟಗಳು ಹಾಗೂ ಅನಾರೋಗ್ಯಕರ ಜೀವನಶೈಲಿಯಿಂದ ದೂರವಿದ್ದು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು. ಯುವಕರು ತಮ್ಮ ಸುತ್ತಮುತ್ತಲಿನ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಸಹಪಾಠಿಗಳಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿರುವವರನ್ನು ಗುರುತಿಸಿ, ಅವರಿಗೆ ಜಾಗೃತಿ ಮೂಡಿಸಿ ಸರಿದಾರಿಗೆ ತರುವ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣವು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ ಎಂದು ಹೇಳಿದರು. ಮನುಷ್ಯನ ಜೀವನ ಅತ್ಯಂತ ಅಮೂಲ್ಯವಾದದ್ದು. ಕ್ಷಣಿಕ ಸುಖಕ್ಕಾಗಿ ಮಾದಕ ವಸ್ತುಗಳಿಗೆ ಬಲಿಯಾಗದೆ, ಜೀವನದಲ್ಲಿ ಉನ್ನತ ಗುರಿಗಳನ್ನು ಹೊಂದಿ ಶಿಕ್ಷಣ, ಸಾಹಿತ್ಯ ಹಾಗೂ ಉತ್ತಮ ಪುಸ್ತಕಗಳ ಅಧ್ಯಯನದ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಉತ್ತಮ ಚಿಂತನೆ ಮತ್ತು ಸಕಾರಾತ್ಮಕ ಮನೋಭಾವವೇ ಯಶಸ್ವಿ ಜೀವನದ ಅಡಿಪಾಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ವಿ.ಜೆ. ಶೋಭಾರಾಣಿ ಅವರು ವಿದ್ಯಾರ್ಥಿಗಳು ಹಾಗೂ ಯುವಜನತೆ ಯಾವುದೇ ಕಾರಣಕ್ಕೂ ಮಾದಕ ವ್ಯಸನ ಸೇರಿದಂತೆ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು. ದೈಹಿಕ ಹಾಗೂ ಮಾನಸಿಕ ಒತ್ತಡ, ತಪ್ಪು ಸ್ನೇಹ ಬಳಗ ಮತ್ತು ಕುತೂಹಲದಿಂದ ಕೆಲವರು ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಾರೆ. ಆದರೆ ಅದರ ದುಷ್ಪರಿಣಾಮಗಳು ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಆದ್ದರಿಂದ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಆರೋಗ್ಯ, ಆರ್ಥಿಕ ಹಾಗೂ ಸಾಮಾಜಿಕ ಹಾನಿಗಳ ಬಗ್ಗೆ ಯುವಜನತೆಯಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು Karnataka State Police ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿರುವ 'Drugs Free Karnataka' ವಿಭಾಗದ ಮೂಲಕ ಡ್ರಗ್ಸ್ ಸೇವನೆ, ಅಕ್ರಮ ಸಾಗಾಣಿಕೆ ಅಥವಾ ಮಾರಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಗೌಪ್ಯವಾಗಿ ಹಂಚಿಕೊಳ್ಳಬಹುದು. ಸಾರ್ವಜನಿಕರ ಸಹಕಾರದಿಂದಲೇ ಡ್ರಗ್ಸ್ ಜಾಲವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷರಾದ ಮೀರಾ ಶಿವಲಿಂಗಯ್ಯ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮನುಜಶ್ರೀ, ಮೈ ಭಾರತ್ ಮಂಡ್ಯ ಜಿಲ್ಲಾ ಯುವ ಅಧಿಕಾರಿಗಳಾದ ಶ್ರುತಿ ಎಸ್ ರವರು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಮಂಡ್ಯದ ಚಿರುಮರಿಗೆ ಫಿದಾ ಆದ ನಟಿ ಅಭಿಮಾನಿ ಗಳಿಗೆ ಸೆಲ್ಫಿ ನೀಡುವಾಗಲು ಚಿರುಮುರಿ ಬಿಡದೆ ತಿಂದ ರಾಗಿಣಿ ಮಂಡ್ಯ- ತಮ್ಮ ಚಲನಚಿತ್ರದ ಪ್ರಮೋಷನ್ ಗಾಗಿ ಮಂಡ್ಯ ಸಂಜೆ ಥಿಯೇಟರ್ ಗೆ ಭೇಟಿ ನೀಡಿದ್ದ ನಟಿ ರಾಗಿಣಿ ಅತ್ಯಂತ ಪ್ರಿಯ ಮಂಡ್ಯದ ಚುರುಮುರಿ ಸವಿದ ಅಪರೂಪದ ಘಟನೆ ಮಂಡ್ಯ ಸಂಜೆಯ ಸರ್ಕಲ್ ನಲ್ಲಿ ಜರುಗಿತು. ಮಂಡ್ಯ ಸಂಜೆ ಥಿಯೇಟರ್ ನಲ್ಲಿ ನಡೆಯುತ್ತಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರ ದಲ್ಲಿ ನಾಯಕಿ ನಟಿಯಾಗಿ ನಟಿಸಿರುವ ರಾಗಿಣಿ ಯವರು ಮಂಡ್ಯಕ್ಕೆ ಬಂದಾಗ ಅಲ್ಲೇ ಥಿಯೇಟರ್ನಲ್ಲಿ ಮಾರಾಟ ಮಾಡುತ್ತಿದ್ದ ಚುರುಮುರಿಯನ್ನು ಪ್ರೀತಿಯಿಂದ ಸವಿದರು. ಅಭಿಮಾನಿಗಳು ಸೆಲ್ಫಿಗಾಗಿ ಹೋಗಿದ್ದರು ಕೈಯಲ್ಲಿ ಇದ್ದ ಚುರುಮುರಿಯನ್ನು ಬಿಡದೆ ಸೆಲ್ಫಿ ನೀಡಿದರು
    1
    ಮಂಡ್ಯದ ಚಿರುಮರಿಗೆ ಫಿದಾ ಆದ ನಟಿ ಅಭಿಮಾನಿ ಗಳಿಗೆ ಸೆಲ್ಫಿ ನೀಡುವಾಗಲು ಚಿರುಮುರಿ ಬಿಡದೆ ತಿಂದ ರಾಗಿಣಿ
ಮಂಡ್ಯ- ತಮ್ಮ ಚಲನಚಿತ್ರದ ಪ್ರಮೋಷನ್ ಗಾಗಿ ಮಂಡ್ಯ ಸಂಜೆ ಥಿಯೇಟರ್ ಗೆ ಭೇಟಿ ನೀಡಿದ್ದ ನಟಿ ರಾಗಿಣಿ ಅತ್ಯಂತ ಪ್ರಿಯ ಮಂಡ್ಯದ ಚುರುಮುರಿ ಸವಿದ ಅಪರೂಪದ ಘಟನೆ ಮಂಡ್ಯ ಸಂಜೆಯ ಸರ್ಕಲ್ ನಲ್ಲಿ ಜರುಗಿತು.
ಮಂಡ್ಯ ಸಂಜೆ ಥಿಯೇಟರ್ ನಲ್ಲಿ ನಡೆಯುತ್ತಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರ ದಲ್ಲಿ ನಾಯಕಿ ನಟಿಯಾಗಿ ನಟಿಸಿರುವ ರಾಗಿಣಿ ಯವರು ಮಂಡ್ಯಕ್ಕೆ ಬಂದಾಗ ಅಲ್ಲೇ ಥಿಯೇಟರ್ನಲ್ಲಿ ಮಾರಾಟ ಮಾಡುತ್ತಿದ್ದ ಚುರುಮುರಿಯನ್ನು ಪ್ರೀತಿಯಿಂದ ಸವಿದರು.
ಅಭಿಮಾನಿಗಳು ಸೆಲ್ಫಿಗಾಗಿ ಹೋಗಿದ್ದರು ಕೈಯಲ್ಲಿ ಇದ್ದ ಚುರುಮುರಿಯನ್ನು ಬಿಡದೆ ಸೆಲ್ಫಿ ನೀಡಿದರು
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    1 hr ago
  • ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ,ಪ್ರತಿಭಟನೆ ಮದ್ದೂರು-ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವ ರಾಜ್ಯ ಸರ್ಕಾರದ ಆದೇಶವನ್ನು ವಿರೋಧಿಸಿ ಹಾಗೂ ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ, ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ವಿನೋದ್ ಬಾಬಾ ನೇತೃತ್ವದಲ್ಲಿ ಕೆಸ್ತೂರು ವೃತ್ತ ಘಟಕದ ವತಿಯಿಂದ ಶನಿವಾರ ರಸ್ತೆತಡೆ ಪ್ರತಿಭಟನೆ ನಡೆಸಲಾಯಿತು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಪ್ರತಿಭಟನೆಯಲ್ಲಿ ರೈತರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಪರಿಣಾಮ ಸುಮಾರು ಎರಡು ಕಿಲೋಮೀಟರ್ವರೆಗೆ ವಾಹನಗಳ ಸಂಚಾರ ದಟ್ಟಣೆ ಉಂಟಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ವಿನೋದ್ ಬಾಬಾ, ಕೆಆರ್ಎಸ್ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಕಬ್ಬು ಹಾಗೂ ವಿವಿಧ ತೋಟಗಾರಿಕೆ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ರಾಜ್ಯದ ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    1
    ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ,ಪ್ರತಿಭಟನೆ
ಮದ್ದೂರು-ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವ ರಾಜ್ಯ ಸರ್ಕಾರದ ಆದೇಶವನ್ನು ವಿರೋಧಿಸಿ ಹಾಗೂ ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ, ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ವಿನೋದ್ ಬಾಬಾ ನೇತೃತ್ವದಲ್ಲಿ ಕೆಸ್ತೂರು ವೃತ್ತ ಘಟಕದ ವತಿಯಿಂದ ಶನಿವಾರ ರಸ್ತೆತಡೆ ಪ್ರತಿಭಟನೆ ನಡೆಸಲಾಯಿತು.
ಬೆಳಿಗ್ಗೆ 11 ಗಂಟೆಗೆ ಆರಂಭವಾದ ಪ್ರತಿಭಟನೆಯಲ್ಲಿ ರೈತರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಪರಿಣಾಮ ಸುಮಾರು ಎರಡು ಕಿಲೋಮೀಟರ್ವರೆಗೆ ವಾಹನಗಳ ಸಂಚಾರ ದಟ್ಟಣೆ ಉಂಟಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ವಿನೋದ್ ಬಾಬಾ, ಕೆಆರ್ಎಸ್ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಕಬ್ಬು ಹಾಗೂ ವಿವಿಧ ತೋಟಗಾರಿಕೆ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ರಾಜ್ಯದ ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    user_Vanitha
    Vanitha
    ಮದ್ದೂರು, ಮಂಡ್ಯ, ಕರ್ನಾಟಕ•
    4 hrs ago
  • ಆಗಸ್ಟ್ 15ರ ಐತಿಹಾಸಿಕ ರಕ್ತದಾನ ಶಿಬಿರ ಅಂಗವಾಗಿ ಮಳವಳ್ಳಿ ಪಟ್ಟಣದಲ್ಲಿ ಅಳವಡಿಸಿರುವ ಸ್ವಾಗತ ಕಮಾನುಗಳ ಉದ್ಘಾಟಿಸಿದ ಶ್ರೀಗಳು ಮಳವಳ್ಳಿ : ಬರುವ ಆಗಸ್ಟ್ 15 ರಂದು 80ನೇ ಸ್ವಾತಂತ್ರ್ಯೋ ತ್ಸದ ಅಂಗವಾಗಿ ಟೀಮ್ ಮಳವಳ್ಳಿ ಯುವಕ ಮಿತ್ರರ ಬಳಗದ ವತಿಯಿಂದ ಆಯೋಜಿ ಸಿರುವ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದ ಅಂಗವಾಗಿ ಮಳವಳ್ಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಬೃಹತ್ ಸ್ವಾಗತ ಮಹಾದ್ವಾರ ಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಶನಿವಾರ ಮಧ್ಯಾಹ್ನ 12. 30 ರ ಸಮಯದಲ್ಲಿ ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾ ಣದ ಮುಂಭಾಗ ಮೈಸೂರು ರಸ್ತೆಯಲ್ಲಿ ಅಳವಡಿಸಿರುವ ರಕ್ತದಾನಿಗಳ ಸ್ವಾಗತ ಮಹಾ ದ್ವಾರವನ್ನು‌ ಕುಂದೂರು ರಸ ಸಿದ್ದೇಶ್ವರ ಮಠದ ಶ್ರೀ ನಂಜುಂ ಡಸ್ವಾಮಿ ಅವರು ಉದ್ಘಾಟಿಸಿ ದರೆ ಇದೇ ರಸ್ತೆಯ ಇನ್ನೊಂದು ದ್ವಾರದ ಕಮಾನನ್ನು ರಾಜ ಸ್ತಾನ್ ಸಮಾಜದ ಮೋಹನ್ ಲಾಲ್ ಉದ್ಘಾಟಿಸಿದರು. ಪೇಟೆ ವೃತ್ತದ ಬಳಿಯ ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿ‌ ಅಳವಡಿಸಿ ರುವ ಸ್ವಾಗತ ಕಮಾನನ್ನು ರಾಜಸ್ತಾನ್ ಸಮಾಜದ ಮುಖಂಡರಾದ ಮದನ್ ಲಾಲ್ ಉದ್ಘಾಟಿಸಿದರೆ ಇನ್ನೊಂದು ಬದಿಯ‌ ಕಮಾನನ್ನು ಟಿಎಪಿಸಿ ಎಂಎಸ್ ಅಧ್ಯಕ್ಷರಾದ ದ್ಯಾಪೇ ಗೌಡ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶ್ರೀ ನಂಜುಂಡ ಸ್ವಾಮಿ ಅವರು ರಕ್ತದಾನ ಮಹಾದಾನವಾಗಿದ್ದು ಇಂತಹದೊಂದು ರಕ್ತದಾನ ಶಿಬಿರವನ್ನು ಮಳವಳ್ಳಿಯಲ್ಲಿ ಏರ್ಪಡಿಸಿರುವುದು ನಿಜಕ್ಕೂ ಐತಿಹಾಸಿಕ ಎಂದು ಪ್ರಶಂಸಿಸಿ ದರು ಪಕ್ಷಾತೀತವಾಗಿ ಜಾತ್ಯಾತೀ ತವಾಗಿ ಆಯೋಜಿಸಿರುವು ಟೀಮ್ ಮಳವಳ್ಳಿಯ ಎಲ್ಲಾ ಸದ್ಬಕ್ತರ ಈ ಕಾರ್ಯ ಮಳವ ಳ್ಳಿಯ ಕೀರ್ತಿಪತಾಕೆ ನಾಡಿನೆ ಲ್ಲಡೆ ಹರಡುವಂತೆ ಮಾಡಿದೆ ಎಂದು ಶ್ಲಾಘಿಸಿದ ಶ್ರೀಗಳು ಈ ಶಿಬಿರ ಯಶಸ್ವಿಯಾಗಲಿ ಇಂತಕ ಮಹತ್ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ಟೀಮ್ ಮಳವಳ್ಳಿಯ ಎಲ್ಲಾ ಭಕ್ತರಿಗೂ ಭಗವಂತ ನೀಡಲಿ ಎಂದು ಶುಭ ಹಾರೈಸಿದರು.‌ ಪುರಸಭೆಯ ಮಾಜಿ ಉಪಾಧ್ಯಕ್ಷ ನಂದ ಕುಮಾರ್, ನೀವೃತ್ತ ಸೈನಿಕ ಸುರೇಶ್, ಮುಖಂಡರಾದ ಎಟಿಎಂ ಸ್ವಾಮಿ, ಗುಂಡ, ಬದ್ರಿ ಸೇರಿ ಹಲವಾರು ಮುಖಂಡರ ಜೊತೆ ಟೀಮ್ ಮಳವಳ್ಳಿಯ ಹಲವಾರು ಕಾರ್ಯಕರ್ತರು ಈ ವೇಳೆ ಹಾಜರಿದ್ದರು.
    1
    ಆಗಸ್ಟ್ 15ರ ಐತಿಹಾಸಿಕ ರಕ್ತದಾನ ಶಿಬಿರ ಅಂಗವಾಗಿ ಮಳವಳ್ಳಿ ಪಟ್ಟಣದಲ್ಲಿ ಅಳವಡಿಸಿರುವ ಸ್ವಾಗತ ಕಮಾನುಗಳ ಉದ್ಘಾಟಿಸಿದ ಶ್ರೀಗಳು
ಮಳವಳ್ಳಿ : ಬರುವ ಆಗಸ್ಟ್ 15 ರಂದು 80ನೇ ಸ್ವಾತಂತ್ರ್ಯೋ ತ್ಸದ ಅಂಗವಾಗಿ ಟೀಮ್ ಮಳವಳ್ಳಿ ಯುವಕ ಮಿತ್ರರ ಬಳಗದ ವತಿಯಿಂದ ಆಯೋಜಿ ಸಿರುವ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದ ಅಂಗವಾಗಿ ಮಳವಳ್ಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಬೃಹತ್ ಸ್ವಾಗತ ಮಹಾದ್ವಾರ ಗಳ ಉದ್ಘಾಟನಾ ಕಾರ್ಯಕ್ರಮ  ಜರುಗಿತು. ಶನಿವಾರ ಮಧ್ಯಾಹ್ನ 12. 30 ರ ಸಮಯದಲ್ಲಿ ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾ ಣದ ಮುಂಭಾಗ ಮೈಸೂರು ರಸ್ತೆಯಲ್ಲಿ ಅಳವಡಿಸಿರುವ ರಕ್ತದಾನಿಗಳ  ಸ್ವಾಗತ ಮಹಾ ದ್ವಾರವನ್ನು‌ ಕುಂದೂರು ರಸ ಸಿದ್ದೇಶ್ವರ ಮಠದ ಶ್ರೀ ನಂಜುಂ ಡಸ್ವಾಮಿ ಅವರು ಉದ್ಘಾಟಿಸಿ ದರೆ ಇದೇ ರಸ್ತೆಯ ಇನ್ನೊಂದು ದ್ವಾರದ ಕಮಾನನ್ನು ರಾಜ ಸ್ತಾನ್ ಸಮಾಜದ ಮೋಹನ್ ಲಾಲ್ ಉದ್ಘಾಟಿಸಿದರು.  ಪೇಟೆ ವೃತ್ತದ ಬಳಿಯ ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿ‌ ಅಳವಡಿಸಿ ರುವ ಸ್ವಾಗತ ಕಮಾನನ್ನು ರಾಜಸ್ತಾನ್ ಸಮಾಜದ ಮುಖಂಡರಾದ ಮದನ್ ಲಾಲ್ ಉದ್ಘಾಟಿಸಿದರೆ ಇನ್ನೊಂದು ಬದಿಯ‌ ಕಮಾನನ್ನು ಟಿಎಪಿಸಿ ಎಂಎಸ್ ಅಧ್ಯಕ್ಷರಾದ ದ್ಯಾಪೇ ಗೌಡ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶ್ರೀ ನಂಜುಂಡ ಸ್ವಾಮಿ ಅವರು ರಕ್ತದಾನ ಮಹಾದಾನವಾಗಿದ್ದು ಇಂತಹದೊಂದು ರಕ್ತದಾನ ಶಿಬಿರವನ್ನು ಮಳವಳ್ಳಿಯಲ್ಲಿ ಏರ್ಪಡಿಸಿರುವುದು ನಿಜಕ್ಕೂ ಐತಿಹಾಸಿಕ ಎಂದು ಪ್ರಶಂಸಿಸಿ ದರು ಪಕ್ಷಾತೀತವಾಗಿ ಜಾತ್ಯಾತೀ ತವಾಗಿ  ಆಯೋಜಿಸಿರುವು ಟೀಮ್ ಮಳವಳ್ಳಿಯ ಎಲ್ಲಾ ಸದ್ಬಕ್ತರ ಈ ಕಾರ್ಯ ಮಳವ ಳ್ಳಿಯ ಕೀರ್ತಿಪತಾಕೆ ನಾಡಿನೆ ಲ್ಲಡೆ ಹರಡುವಂತೆ ಮಾಡಿದೆ ಎಂದು ಶ್ಲಾಘಿಸಿದ ಶ್ರೀಗಳು ಈ ಶಿಬಿರ ಯಶಸ್ವಿಯಾಗಲಿ ಇಂತಕ ಮಹತ್ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ಟೀಮ್ ಮಳವಳ್ಳಿಯ ಎಲ್ಲಾ ಭಕ್ತರಿಗೂ ಭಗವಂತ ನೀಡಲಿ ಎಂದು ಶುಭ ಹಾರೈಸಿದರು.‌ ಪುರಸಭೆಯ ಮಾಜಿ ಉಪಾಧ್ಯಕ್ಷ ನಂದ ಕುಮಾರ್, ನೀವೃತ್ತ ಸೈನಿಕ ಸುರೇಶ್, ಮುಖಂಡರಾದ ಎಟಿಎಂ ಸ್ವಾಮಿ, ಗುಂಡ, ಬದ್ರಿ ಸೇರಿ ಹಲವಾರು ಮುಖಂಡರ ಜೊತೆ ಟೀಮ್ ಮಳವಳ್ಳಿಯ ಹಲವಾರು ಕಾರ್ಯಕರ್ತರು ಈ ವೇಳೆ ಹಾಜರಿದ್ದರು.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    9 hrs ago
  • ತಮಿಳುನಾಡಿ ಗೆ ನೀರು ಬಿಡದಂತೆ ಸರ್ಕಾರ ತೀರ್ಮಾನ ಗೊಳ್ಳುವಂತೆ ಕಾರ್ಯಕರ್ತರಿಂದ ರಸ್ತೆ ತಡೆ ಪ್ರತಿಭಟನೆ ಮಳವಳ್ಳಿ: ತಮಿಳುನಾಡಿಗೆ ಕಾವೇರಿ ನೀರು ನಿರ್ವಾಹಣ ಮಂಡಳಿ ಆದೇಶದಂತೆ ಕಾವೇರಿನೀರು ಬಿಡಲು ಹೊರಟಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೂಲಸಂಘಟನೆಯ ಕಾರ್ಯಕರ್ತರು ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗೇಟ್ ಬಳಿ ರಸ್ತೆತಡೆ ಹಾಗೂ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ದೇವಿಪುರಬಸವರಾಜು ನೇತೃತ್ವದಲ್ಲಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಲಿಂಗೇಗೌಡ ಮಾತನಾಡಿ, ಒಂದು ದಿನಕ್ಕೆ 3500 ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಾಹಣಾ ಮಂಡಳಿ ಆದೇಶ ಮಾಡಿದ್ದು, ರಾಜ್ಯ ಸರ್ಕಾರ ಆ ಆದೇಶವನ್ನು ತಿರಸ್ಕಾರ ಮಾಡಬೇಕು. ನಾಳೆ ವಿಧಾನಸಭೆ ಯಲ್ಲಿ ಸರ್ವಸದಸ್ಯರ ಸಭೆಯಲ್ಲಿ ರಾಜ್ಯ ಸರ್ಕಾರ ಕರೆದಿದ್ದು, ಎಲ್ಲಾ ಶಾಸಕರು ತಮಿಳುನಾಡಿಗೆ ನೀರು ಬಿಡದಂತೆ ತೀರ್ಮಾನ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇನ್ನೂ ಇದೇ ವೇಳೆ ತಾಲ್ಲೂಕು ಅಧ್ಯಕ್ಷ ದೇವಿಪುರ ಬಸವರಾಜು ಮಾತನಾಡಿ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗೆ ಕುಡಿಯಲು ನೀರಿಲ್ಲ , ತಮಿಳುನಾಡಿಗೆ ನೀರು ಬಿಡಬೇಕಂತೆ ಇದು ಸಾಧ್ಯವಿಲ್ಲ , ನೀರು ಬಿಟ್ಟರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ದೇವಿಪುರ ಬಸವರಾಜು, ಜಿಲ್ಲಾ ಉಪಾಧ್ಯಕ್ಷ ರಾಮಲಿಂಗೇಗೌಡ, ಸೋ.ಶಿ ಪ್ರಕಾಶ, ಪ್ರಭುಲಿಂಗು, ಶಿವನಂಜು, ಭೂಮಿಗೌಡ, ಚೌಡೇಗೌಡ, ಮಲ್ಲೇಶ್, ಗಿರೀಶ್, ಹನುಮಂತ, ಕೃಷ್ಣ, ಲಿಂಗಪಟ್ಟಣ ಬಸವರಾಜು, ಮಹೇಶ್ ಸೇರಿದಂತೆ ಹಲವರು ಇದ್ದರು.
    1
    ತಮಿಳುನಾಡಿ ಗೆ ನೀರು  ಬಿಡದಂತೆ ಸರ್ಕಾರ ತೀರ್ಮಾನ ಗೊಳ್ಳುವಂತೆ  ಕಾರ್ಯಕರ್ತರಿಂದ  ರಸ್ತೆ ತಡೆ ಪ್ರತಿಭಟನೆ
ಮಳವಳ್ಳಿ: ತಮಿಳುನಾಡಿಗೆ  ಕಾವೇರಿ ನೀರು ನಿರ್ವಾಹಣ ಮಂಡಳಿ ಆದೇಶದಂತೆ       ಕಾವೇರಿನೀರು ಬಿಡಲು ಹೊರಟಿರುವುದನ್ನು  ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೂಲಸಂಘಟನೆಯ ಕಾರ್ಯಕರ್ತರು ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗೇಟ್ ಬಳಿ ರಸ್ತೆತಡೆ ಹಾಗೂ  ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ದೇವಿಪುರಬಸವರಾಜು ನೇತೃತ್ವದಲ್ಲಿ  ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ  ರೈತ ಸಂಘದ  ಜಿಲ್ಲಾ ಉಪಾಧ್ಯಕ್ಷ ರಾಮಲಿಂಗೇಗೌಡ ಮಾತನಾಡಿ,  ಒಂದು  ದಿನಕ್ಕೆ 3500 ಕ್ಯೂಸೆಕ್ಸ್   ನೀರು ಬಿಡುವಂತೆ ಕಾವೇರಿ ನೀರು ನಿರ್ವಾಹಣಾ ಮಂಡಳಿ ಆದೇಶ ಮಾಡಿದ್ದು, ರಾಜ್ಯ ಸರ್ಕಾರ  ಆ  ಆದೇಶವನ್ನು ತಿರಸ್ಕಾರ ಮಾಡಬೇಕು. ನಾಳೆ  ವಿಧಾನಸಭೆ ಯಲ್ಲಿ ಸರ್ವಸದಸ್ಯರ ಸಭೆಯಲ್ಲಿ  ರಾಜ್ಯ ಸರ್ಕಾರ ಕರೆದಿದ್ದು, ಎಲ್ಲಾ ಶಾಸಕರು  ತಮಿಳುನಾಡಿಗೆ  ನೀರು ಬಿಡದಂತೆ  ತೀರ್ಮಾನ ತೆಗೆದುಕೊಳ್ಳುವಂತೆ  ಆಗ್ರಹಿಸಿದರು.
ಇನ್ನೂ ಇದೇ ವೇಳೆ  ತಾಲ್ಲೂಕು ಅಧ್ಯಕ್ಷ  ದೇವಿಪುರ ಬಸವರಾಜು ಮಾತನಾಡಿ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗೆ ಕುಡಿಯಲು ನೀರಿಲ್ಲ , ತಮಿಳುನಾಡಿಗೆ  ನೀರು  ಬಿಡಬೇಕಂತೆ  ಇದು ಸಾಧ್ಯವಿಲ್ಲ , ನೀರು ಬಿಟ್ಟರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ  ತಾಲ್ಲೂಕು ಅಧ್ಯಕ್ಷ ದೇವಿಪುರ ಬಸವರಾಜು,
ಜಿಲ್ಲಾ ಉಪಾಧ್ಯಕ್ಷ ರಾಮಲಿಂಗೇಗೌಡ, ಸೋ.ಶಿ ಪ್ರಕಾಶ, ಪ್ರಭುಲಿಂಗು, ಶಿವನಂಜು, ಭೂಮಿಗೌಡ, ಚೌಡೇಗೌಡ, ಮಲ್ಲೇಶ್, ಗಿರೀಶ್, ಹನುಮಂತ, ಕೃಷ್ಣ, ಲಿಂಗಪಟ್ಟಣ ಬಸವರಾಜು, ಮಹೇಶ್ ಸೇರಿದಂತೆ ಹಲವರು ಇದ್ದರು.
    user_ಸುಮಿತ್ರ‌ ಹೆಚ್‌ ಪಿ
    ಸುಮಿತ್ರ‌ ಹೆಚ್‌ ಪಿ
    ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
    11 hrs ago
  • All About,Anyone when if question them for Transparency they will Anytime Speak Contridectary Statements and blaming the Residents *ಭಾರತ ನಲ್ಲಿ ವೈರಲ್*
    1
    All About,Anyone when if question them for Transparency they will Anytime Speak Contridectary Statements and blaming the Residents 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    2 hrs ago
  • ಕನ್ನಡ ಸ್ಯಾಂಡಲ್ ವುಡ್ ಹೀರೋ ರಾವಣ ಪಾತ್ರದಲ್ಲಿ ಯಶ್ ಅವರು ಕಂಡುಬಂದ ದೃಶ್ಯ ಕನ್ನಡ ಸ್ಯಾಂಡಲ್ ವುಡ್ ಹೀರೋ ರಾವಣ ಪಾತ್ರದಲ್ಲಿ ಯಶ್ ಅವರು ಕಂಡುಬಂದ ದೃಶ್ಯ
    1
    ಕನ್ನಡ ಸ್ಯಾಂಡಲ್ ವುಡ್ ಹೀರೋ  ರಾವಣ ಪಾತ್ರದಲ್ಲಿ  ಯಶ್ ಅವರು  ಕಂಡುಬಂದ ದೃಶ್ಯ  
ಕನ್ನಡ ಸ್ಯಾಂಡಲ್ ವುಡ್ ಹೀರೋ  ರಾವಣ ಪಾತ್ರದಲ್ಲಿ  ಯಶ್ ಅವರು  ಕಂಡುಬಂದ ದೃಶ್ಯ
    user_ವೇದಾ ರಣ್ಯಾ
    ವೇದಾ ರಣ್ಯಾ
    ಮೈಸೂರು, ಮೈಸೂರು, ಕರ್ನಾಟಕ•
    3 hrs ago
  • ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮೈಸೂರು_ ನಂಜನಗೂಡು ರಸ್ತೆ ತಡೆ ಪ್ರತಿಭಟನೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಮೈಸೂರು–ಊಟಿ ರಸ್ತೆಯ ನಂಜನಗೂಡು ಬಿ.ಡಿ.ಒ. ಕಚೇರಿ ಎದುರು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ರಾಜ್ಯದ ನೀರಿನ ಹಿತಾಸಕ್ತಿಯನ್ನು ಕಾಪಾಡುವಂತೆ ಸರ್ಕಾರವನ್ನು ಆಗ್ರಹಿಸಿದರು. ಪ್ರತಿಭಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
    1
    ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮೈಸೂರು_ ನಂಜನಗೂಡು ರಸ್ತೆ ತಡೆ ಪ್ರತಿಭಟನೆ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಮೈಸೂರು–ಊಟಿ ರಸ್ತೆಯ ನಂಜನಗೂಡು ಬಿ.ಡಿ.ಒ. ಕಚೇರಿ ಎದುರು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ರಾಜ್ಯದ ನೀರಿನ ಹಿತಾಸಕ್ತಿಯನ್ನು ಕಾಪಾಡುವಂತೆ ಸರ್ಕಾರವನ್ನು ಆಗ್ರಹಿಸಿದರು. ಪ್ರತಿಭಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    6 hrs ago
  • *ಅರ್ಹ ಮತದಾರರು ಹೊರಗುಳಿಯದಂತೆ, ಅನರ್ಹರು ಸೇರ್ಪಡೆಯಾಗದಂತೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ- ಡಾ. ಕುಮಾರ ಮಂಡ್ಯ, ಜುಲೈ 31: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಕಾರ್ಯವನ್ನು ನಿಗದಿತ ವೇಳಾಪಟ್ಟಿಯಂತೆ ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ. ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹ ಮತದಾರರು ಪಟ್ಟಿಗೆ ಸೇರ್ಪಡೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯ ಶುದ್ಧತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವುದು ಚುನಾವಣಾ ಆಯೋಗದ ಪ್ರಮುಖ ಆದ್ಯತೆಯಾಗಿದ್ದು, ಪ್ರತಿಯೊಂದು ಮಾಹಿತಿಯನ್ನು ನಿಖರವಾಗಿ ಪರಿಶೀಲಿಸಿ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಮನೆ ಮನೆಗೆ ಭೇಟಿ ನೀಡಿ ವಿತರಿಸಲಾದ ಗಣತಿ ನಮೂನೆಗಳನ್ನು ಹಿಂಪಡೆಯುವ ಕಾರ್ಯ ಪ್ರಗತಿಯಲ್ಲಿದ್ದು, ಆಗಸ್ಟ್ 8, 2026 ನಮೂನೆ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮತದಾರರು ಭರ್ತಿ ಮಾಡಿದ ನಮೂನೆಗಳನ್ನು ನಿಗದಿತ ಅವಧಿಯೊಳಗೆ ಹಿಂದಿರುಗಿಸುವ ಮೂಲಕ ಪರಿಷ್ಕರಣೆ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಕಸ ವಿಲೇವಾರಿ ವಾಹನಗಳಲ್ಲಿ ಜಿಂಗಲ್‌ಗಳನ್ನು ಅಳವಡಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಜಿಲ್ಲೆಯಲ್ಲಿ ಒಟ್ಟು 15,75,849 ಮತದಾರರ ಪೈಕಿ ಇದುವರೆಗೆ 13,94,203 (88.47%) ಮತದಾರರ ಗಣತಿ ನಮೂನೆಗಳನ್ನು ಗಣಕೀಕರಣ ಮಾಡಲಾಗಿದೆ. ಜೊತೆಗೆ 1,49,347 (9.48%) ಮತದಾರರನ್ನು ASDDO (Absent, Shifted, Death, Duplicate, Others) ವಿಭಾಗದಡಿ ಗುರುತಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು. ಗುರುತಿಸಲಾದವರ ಪೈಕಿ 41,589 ಮಂದಿ ಮೃತ ಮತದಾರರು, 17,240 ಮಂದಿ ಗೈರು ಮತದಾರರು, 76,720 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತದಾರರು, 13,377 ಮಂದಿ ಪುನರಾವರ್ತಿತ ಮತದಾರರು ಹಾಗೂ 421 ಮಂದಿ ಗಣತಿ ನಮೂನೆಯನ್ನು ಹಿಂದಿರುಗಿಸಲು ನಿರಾಕರಿಸಿರುವ ಮತದಾರರಾಗಿದ್ದಾರೆ ಎಂದು ಸಭೆಯಲ್ಲಿ ವಿವರಿಸಿದರು. ಮನೆ ಮನೆ ಸಮೀಕ್ಷೆಯಲ್ಲಿ ಈಗಾಗಲೇ ವಿತರಿಸಲಾದ ನಮೂನೆಗಳ ಪೈಕಿ 32,299 (2.05%) ನಮೂನೆಗಳ ಸಂಗ್ರಹಣೆ ಹಾಗೂ ಗಣಕೀಕರಣ ಬಾಕಿಯಿದ್ದು, ಮುಂದಿನ ಮೂರುರಿಂದ ನಾಲ್ಕು ದಿನಗಳೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಪ್ರತಿ ದಿನದ ಪ್ರಗತಿ ವಿವರವನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮಾಧ್ಯಮಗಳಿಗೆ ನಿಯಮಿತವಾಗಿ ನೀಡಲಾಗುತ್ತಿದ್ದು, ಸಂಪೂರ್ಣ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಇದೇ ವೇಳೆ, ASDDO ವಿಭಾಗದಡಿ ಗುರುತಿಸಲಾದ ಮತದಾರರ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಲು ವಿಶೇಷ ತಂಡಗಳನ್ನು ರಚಿಸಿ ಮರುಪರಿಶೀಲನೆ ನಡೆಸುವಂತೆ ಮೇಲ್ವಿಚಾರಕರಿಗೆ ಸೂಚನೆ ನೀಡಲಾಗುತ್ತದೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ತಪ್ಪದೇ ಉಳಿಯುವಂತೆ ಹಾಗೂ ಅನರ್ಹರ ಸೇರ್ಪಡೆಯಾಗದಂತೆ ನಿಖರ ಪರಿಶೀಲನೆಗೆ ಆದ್ಯತೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಆಗಸ್ಟ್ 17, 2026ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಬಳಿಕ ಆಗಸ್ಟ್ 17ರಿಂದ ಸೆಪ್ಟೆಂಬರ್ 16, 2026ರವರೆಗೆ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು. ಈ ಅವಧಿಯನ್ನು ಸದುಪಯೋಗಪಡಿಸಿಕೊಂಡು ಮತದಾರರು ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳುವಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಮೈಸೂರು ಸಕ್ಕರೆ ಕಂಪನಿ ನಿಯಮಿತ ಅಧ್ಯಕ್ಷರಾದ ಸಿ.ಡಿ ಗಂಗಾಧರ,ಜಿಲ್ಲಾಧಿಕಾರಿಗಳ ಕಚೇರಿಯ ತಹಸೀಲ್ದಾರ್ ರಾದ ರವಿಶಂಕರ್ ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಉಪಸ್ಥಿತರಿದ್ದರು.
    1
    *ಅರ್ಹ ಮತದಾರರು ಹೊರಗುಳಿಯದಂತೆ, ಅನರ್ಹರು ಸೇರ್ಪಡೆಯಾಗದಂತೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ- ಡಾ. ಕುಮಾರ
ಮಂಡ್ಯ, ಜುಲೈ 31: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಕಾರ್ಯವನ್ನು ನಿಗದಿತ ವೇಳಾಪಟ್ಟಿಯಂತೆ ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ. ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹ ಮತದಾರರು ಪಟ್ಟಿಗೆ ಸೇರ್ಪಡೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯ ಶುದ್ಧತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವುದು ಚುನಾವಣಾ ಆಯೋಗದ ಪ್ರಮುಖ ಆದ್ಯತೆಯಾಗಿದ್ದು, ಪ್ರತಿಯೊಂದು ಮಾಹಿತಿಯನ್ನು ನಿಖರವಾಗಿ ಪರಿಶೀಲಿಸಿ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮನೆ ಮನೆಗೆ ಭೇಟಿ ನೀಡಿ ವಿತರಿಸಲಾದ ಗಣತಿ ನಮೂನೆಗಳನ್ನು ಹಿಂಪಡೆಯುವ ಕಾರ್ಯ ಪ್ರಗತಿಯಲ್ಲಿದ್ದು, ಆಗಸ್ಟ್ 8, 2026 ನಮೂನೆ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮತದಾರರು ಭರ್ತಿ ಮಾಡಿದ ನಮೂನೆಗಳನ್ನು ನಿಗದಿತ ಅವಧಿಯೊಳಗೆ ಹಿಂದಿರುಗಿಸುವ ಮೂಲಕ ಪರಿಷ್ಕರಣೆ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಕಸ ವಿಲೇವಾರಿ ವಾಹನಗಳಲ್ಲಿ ಜಿಂಗಲ್‌ಗಳನ್ನು ಅಳವಡಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 15,75,849 ಮತದಾರರ ಪೈಕಿ ಇದುವರೆಗೆ 13,94,203 (88.47%) ಮತದಾರರ ಗಣತಿ ನಮೂನೆಗಳನ್ನು ಗಣಕೀಕರಣ ಮಾಡಲಾಗಿದೆ. ಜೊತೆಗೆ 1,49,347 (9.48%) ಮತದಾರರನ್ನು ASDDO (Absent, Shifted, Death, Duplicate, Others) ವಿಭಾಗದಡಿ ಗುರುತಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.
ಗುರುತಿಸಲಾದವರ ಪೈಕಿ 41,589 ಮಂದಿ ಮೃತ ಮತದಾರರು, 17,240 ಮಂದಿ ಗೈರು ಮತದಾರರು, 76,720 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತದಾರರು, 13,377 ಮಂದಿ ಪುನರಾವರ್ತಿತ ಮತದಾರರು ಹಾಗೂ 421 ಮಂದಿ ಗಣತಿ ನಮೂನೆಯನ್ನು ಹಿಂದಿರುಗಿಸಲು ನಿರಾಕರಿಸಿರುವ ಮತದಾರರಾಗಿದ್ದಾರೆ ಎಂದು ಸಭೆಯಲ್ಲಿ ವಿವರಿಸಿದರು.
ಮನೆ ಮನೆ ಸಮೀಕ್ಷೆಯಲ್ಲಿ ಈಗಾಗಲೇ ವಿತರಿಸಲಾದ ನಮೂನೆಗಳ ಪೈಕಿ 32,299 (2.05%) ನಮೂನೆಗಳ ಸಂಗ್ರಹಣೆ ಹಾಗೂ ಗಣಕೀಕರಣ ಬಾಕಿಯಿದ್ದು, ಮುಂದಿನ ಮೂರುರಿಂದ ನಾಲ್ಕು ದಿನಗಳೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಪ್ರತಿ ದಿನದ ಪ್ರಗತಿ ವಿವರವನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮಾಧ್ಯಮಗಳಿಗೆ ನಿಯಮಿತವಾಗಿ ನೀಡಲಾಗುತ್ತಿದ್ದು, ಸಂಪೂರ್ಣ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ, ASDDO ವಿಭಾಗದಡಿ ಗುರುತಿಸಲಾದ ಮತದಾರರ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಲು ವಿಶೇಷ ತಂಡಗಳನ್ನು ರಚಿಸಿ ಮರುಪರಿಶೀಲನೆ ನಡೆಸುವಂತೆ ಮೇಲ್ವಿಚಾರಕರಿಗೆ ಸೂಚನೆ ನೀಡಲಾಗುತ್ತದೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ತಪ್ಪದೇ ಉಳಿಯುವಂತೆ ಹಾಗೂ ಅನರ್ಹರ ಸೇರ್ಪಡೆಯಾಗದಂತೆ ನಿಖರ ಪರಿಶೀಲನೆಗೆ ಆದ್ಯತೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಆಗಸ್ಟ್ 17, 2026ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಬಳಿಕ ಆಗಸ್ಟ್ 17ರಿಂದ ಸೆಪ್ಟೆಂಬರ್ 16, 2026ರವರೆಗೆ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು. ಈ ಅವಧಿಯನ್ನು ಸದುಪಯೋಗಪಡಿಸಿಕೊಂಡು ಮತದಾರರು ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳುವಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮೈಸೂರು ಸಕ್ಕರೆ ಕಂಪನಿ ನಿಯಮಿತ ಅಧ್ಯಕ್ಷರಾದ ಸಿ.ಡಿ ಗಂಗಾಧರ,ಜಿಲ್ಲಾಧಿಕಾರಿಗಳ ಕಚೇರಿಯ ತಹಸೀಲ್ದಾರ್ ರಾದ ರವಿಶಂಕರ್ ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಉಪಸ್ಥಿತರಿದ್ದರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.