logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

*ಸಮಾನತೆ-ಮಾನವತಾ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಅಂಬೇಡ್ಕರ್ ಅವರಿಗೆ ಗೌರವ: ಕೃಷ್ಣ ಬೈರೇಗೌಡ* *• ಅಂಬೇಡ್ಕರ್-ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಸಚಿವರ ಅಭಿಮತ* *ಬೆಂಗಳೂರು:ಅಗಸ್ಟ್,28:* ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುವ ಮನೋಭಾವಕ್ಕೆ ಅವಕಾಶ ನೀಡದೆ, ಎಲ್ಲರೂ ಸಮಾನರು ಎಂಬ ಮಾನವತಾ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಮಹನೀಯರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ರಾಜ್ಕುಮಾರ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ “ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪೌರಕಾರ್ಮಿಕರ ದಿನಾಚರಣೆ–2026” ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು. ಇದಕ್ಕೂ ಮುಂಚಿತವಾಗಿ ಜಿಬಿಎ ಕೇಂದ್ರ ಕಛೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಅರ್ಪಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣ ಬೈರೇಗೌಡರು, ಡಾ. ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲಾ ಸಮುದಾಯಗಳ ಏಳಿಗೆಗೆ-ಅಭ್ಯುದಯಕ್ಕೆ ಬೆಳಕಾದವರು. ಮಾನವತಾ ಧರ್ಮವನ್ನು ಪ್ರಬಲವಾಗಿ ನಂಬಿದವರು. ಬುದ್ಧನ ಕಾಲದಿಂದಲೇ ನಮ್ಮ ದೇಶದಲ್ಲಿ ಮಾನವ ಧರ್ಮದ ಪರಂಪರೆ ಜೀವಂತವಾಗಿದೆ. ಒಂದೇ ಗಾಳಿ, ನೀರು ಸೇವಿಸುವ ಎಲ್ಲಾ ಮನುಷ್ಯರೂ ಒಂದೇ ಎಂಬ ಅರಿವು ನಮ್ಮಲ್ಲಿರಬೇಕು ಎಂದು ಹೇಳಿದರು. ಬಸವಣ್ಣ, ಮಹಾತ್ಮ ಗಾಂಧೀಜಿ ಹಾಗೂ ಕುವೆಂಪು ಸೇರಿದಂತೆ ಅನೇಕ ಮಹನೀಯರು ಮಾನವತಾ ಧರ್ಮ ಮತ್ತು ಸಮಾನತೆಯ ಸಂದೇಶವನ್ನು ಪ್ರತಿಪಾದಿಸಿದ್ದಾರೆ. ಆದರೆ ಇಂದಿಗೂ ಸಮಾಜದಲ್ಲಿ ಸಂಪೂರ್ಣ ಸಮಾನತೆ ಸಾಧ್ಯವಾಗಿಲ್ಲ. ನಾವುಗಳು ಸಮಾನತೆಯ ಬದುಕನ್ನು ಸಾಧ್ಯವಾಗಿಸದೆ ಕೇವಲ ಅಂಬೇಡ್ಕರ್ ಅವರ ಮೂರ್ತಿಗೆ ಹೂಮಾಲೆ ಹಾಕಿ ಜೈಕಾರ ಕೂಗಿದರೆ ಗೌರವ ಸಲ್ಲಿಸಿದಂತಾಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಮೇಲು-ಕೀಳು ಎಂಬ ಮನೋಭಾವವನ್ನು ಸಮಾಜದಿಂದ ಸಂಪೂರ್ಣವಾಗಿ ತೊಡೆದುಹಾಕಬೇಕು. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು. ಎಲ್ಲರೂ ಸಮಾನರು ಎಂಬ ಮೌಲ್ಯವನ್ನು ನಿಜವಾಗಿ ಅಳವಡಿಸಿಕೊಂಡಾಗಲೇ ನಾವು ಸಮಾನತೆಯ ಸಮಾಜ ನಿರ್ಮಾಣ ಮಾಡಬಹುದು ಎಂದು ಸಚಿವರು ಹೇಳಿದರು. ಪೌರಕಾರ್ಮಿಕರ ಕುಂದುಕೊರತೆಗಳು ಮತ್ತು ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು, ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಜಿಬಿಎ ಹಾಗೂ ಐದು ನಗರ ಪಾಲಿಕೆಗಳು ಒಟ್ಟಾಗಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸುತ್ತಿವೆ ಎಂದು ತಿಳಿಸಿದರು. ಜವಾಬ್ದಾರಿ ವಹಿಸಿಕೊಂಡ ತಕ್ಷಣವೇ ಕಾರ್ಯಕ್ರಮ ಆಯೋಜಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಎಸ್ಐಆರ್ ಪ್ರಕ್ರಿಯೆಯ ಕಾರಣದಿಂದ ಆಚರಣೆ ವಿಳಂಬವಾಗಿದ್ದು, ಇದೀಗ ಆದ್ಯತೆಯ ಮೇರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. *ಕಾರ್ಯಕ್ರಮದಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಪಿ. ರಘು, ರಾಜ್ಯ ಸಫಾಯಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುರಳಿ ಅಶೋಕ್ ಸಾಲಪ್ಪ, ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ, ನಿತೀಶ್, ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್, ಪೊಮ್ಮಲ ಸುನೀಲ್ ಕುಮಾರ್, ಜಿ. ಜಗದೀಶ್, ಡಾ. ರಾಜೇಂದ್ರ ಕೆ.ವಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಓ ಕರೀಗೌಡ, ಅಪರ ಆಯುಕ್ತರು, ಜಂಟಿ ಆಯುಕ್ತರು, ಉಪ ಆಯುಕ್ತರು, ಪೌರಕಾರ್ಮಿಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.*

1 hr ago
user_Vinod
Vinod
Teacher ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
1 hr ago
6ce19c18-e638-4418-a67c-bad99eebe5dc

*ಸಮಾನತೆ-ಮಾನವತಾ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಅಂಬೇಡ್ಕರ್ ಅವರಿಗೆ ಗೌರವ: ಕೃಷ್ಣ ಬೈರೇಗೌಡ* *• ಅಂಬೇಡ್ಕರ್-ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಸಚಿವರ ಅಭಿಮತ* *ಬೆಂಗಳೂರು:ಅಗಸ್ಟ್,28:* ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುವ ಮನೋಭಾವಕ್ಕೆ ಅವಕಾಶ ನೀಡದೆ, ಎಲ್ಲರೂ ಸಮಾನರು ಎಂಬ ಮಾನವತಾ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಮಹನೀಯರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ರಾಜ್ಕುಮಾರ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ “ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪೌರಕಾರ್ಮಿಕರ ದಿನಾಚರಣೆ–2026” ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು. ಇದಕ್ಕೂ ಮುಂಚಿತವಾಗಿ ಜಿಬಿಎ ಕೇಂದ್ರ ಕಛೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಅರ್ಪಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣ ಬೈರೇಗೌಡರು, ಡಾ. ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲಾ ಸಮುದಾಯಗಳ ಏಳಿಗೆಗೆ-ಅಭ್ಯುದಯಕ್ಕೆ ಬೆಳಕಾದವರು. ಮಾನವತಾ ಧರ್ಮವನ್ನು ಪ್ರಬಲವಾಗಿ ನಂಬಿದವರು. ಬುದ್ಧನ ಕಾಲದಿಂದಲೇ ನಮ್ಮ ದೇಶದಲ್ಲಿ ಮಾನವ ಧರ್ಮದ ಪರಂಪರೆ ಜೀವಂತವಾಗಿದೆ. ಒಂದೇ ಗಾಳಿ, ನೀರು ಸೇವಿಸುವ ಎಲ್ಲಾ ಮನುಷ್ಯರೂ ಒಂದೇ ಎಂಬ ಅರಿವು ನಮ್ಮಲ್ಲಿರಬೇಕು ಎಂದು ಹೇಳಿದರು. ಬಸವಣ್ಣ, ಮಹಾತ್ಮ ಗಾಂಧೀಜಿ ಹಾಗೂ ಕುವೆಂಪು ಸೇರಿದಂತೆ ಅನೇಕ ಮಹನೀಯರು ಮಾನವತಾ ಧರ್ಮ ಮತ್ತು ಸಮಾನತೆಯ ಸಂದೇಶವನ್ನು ಪ್ರತಿಪಾದಿಸಿದ್ದಾರೆ. ಆದರೆ ಇಂದಿಗೂ ಸಮಾಜದಲ್ಲಿ ಸಂಪೂರ್ಣ ಸಮಾನತೆ ಸಾಧ್ಯವಾಗಿಲ್ಲ. ನಾವುಗಳು ಸಮಾನತೆಯ ಬದುಕನ್ನು ಸಾಧ್ಯವಾಗಿಸದೆ ಕೇವಲ ಅಂಬೇಡ್ಕರ್ ಅವರ ಮೂರ್ತಿಗೆ ಹೂಮಾಲೆ ಹಾಕಿ ಜೈಕಾರ ಕೂಗಿದರೆ ಗೌರವ ಸಲ್ಲಿಸಿದಂತಾಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಮೇಲು-ಕೀಳು ಎಂಬ ಮನೋಭಾವವನ್ನು ಸಮಾಜದಿಂದ ಸಂಪೂರ್ಣವಾಗಿ ತೊಡೆದುಹಾಕಬೇಕು. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು. ಎಲ್ಲರೂ ಸಮಾನರು ಎಂಬ ಮೌಲ್ಯವನ್ನು ನಿಜವಾಗಿ ಅಳವಡಿಸಿಕೊಂಡಾಗಲೇ ನಾವು ಸಮಾನತೆಯ ಸಮಾಜ ನಿರ್ಮಾಣ ಮಾಡಬಹುದು ಎಂದು ಸಚಿವರು ಹೇಳಿದರು. ಪೌರಕಾರ್ಮಿಕರ ಕುಂದುಕೊರತೆಗಳು ಮತ್ತು ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು, ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಜಿಬಿಎ ಹಾಗೂ ಐದು ನಗರ ಪಾಲಿಕೆಗಳು ಒಟ್ಟಾಗಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸುತ್ತಿವೆ ಎಂದು ತಿಳಿಸಿದರು. ಜವಾಬ್ದಾರಿ ವಹಿಸಿಕೊಂಡ ತಕ್ಷಣವೇ ಕಾರ್ಯಕ್ರಮ ಆಯೋಜಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಎಸ್ಐಆರ್ ಪ್ರಕ್ರಿಯೆಯ ಕಾರಣದಿಂದ ಆಚರಣೆ ವಿಳಂಬವಾಗಿದ್ದು, ಇದೀಗ ಆದ್ಯತೆಯ ಮೇರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. *ಕಾರ್ಯಕ್ರಮದಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಪಿ. ರಘು, ರಾಜ್ಯ ಸಫಾಯಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುರಳಿ ಅಶೋಕ್ ಸಾಲಪ್ಪ, ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ, ನಿತೀಶ್, ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್, ಪೊಮ್ಮಲ ಸುನೀಲ್ ಕುಮಾರ್, ಜಿ. ಜಗದೀಶ್, ಡಾ. ರಾಜೇಂದ್ರ ಕೆ.ವಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಓ ಕರೀಗೌಡ, ಅಪರ ಆಯುಕ್ತರು, ಜಂಟಿ ಆಯುಕ್ತರು, ಉಪ ಆಯುಕ್ತರು, ಪೌರಕಾರ್ಮಿಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.*

More news from ಕರ್ನಾಟಕ and nearby areas
  • ಇಂದು ನಡೆದ ಸರಣಿ ಅಪಘಾತ , ದಿನೇ ದಿನೇ ಹೆಚ್ಚಾಗುತ್ತಿದೆ ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು. ಇಂದು ಯಲಹಂಕದ ಏರ್ಪೋರ್ಟ್ ರಸ್ತೆಯ ಬಳಿ ನಡೆದ ಸರಣಿ ಅಪಘಾತ, ಇಂದು ಮಧ್ಯಾಹ್ನ ಸುಮಾರು ನಾಲ್ಕು ಗಂಟೆಗೆ ಈ ಘಟನೆ ನಡೆದಿದ್ದು ಸದ್ಯಕ್ಕೆ ಯಾರ ಪ್ರಾಣಿಗೂ ಹಾನಿಯಾಗಲಿಲ್ಲ ಆದರೆ ಗಾಡಿಗಳು ಮಾತ್ರ ಜಕಮ್ ಗೊಂಡಿವೆ
    1
    ಇಂದು ನಡೆದ ಸರಣಿ ಅಪಘಾತ , ದಿನೇ ದಿನೇ ಹೆಚ್ಚಾಗುತ್ತಿದೆ ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು. 
ಇಂದು ಯಲಹಂಕದ ಏರ್ಪೋರ್ಟ್ ರಸ್ತೆಯ ಬಳಿ ನಡೆದ ಸರಣಿ ಅಪಘಾತ, ಇಂದು ಮಧ್ಯಾಹ್ನ ಸುಮಾರು ನಾಲ್ಕು ಗಂಟೆಗೆ ಈ ಘಟನೆ ನಡೆದಿದ್ದು ಸದ್ಯಕ್ಕೆ ಯಾರ ಪ್ರಾಣಿಗೂ ಹಾನಿಯಾಗಲಿಲ್ಲ ಆದರೆ ಗಾಡಿಗಳು ಮಾತ್ರ ಜಕಮ್ ಗೊಂಡಿವೆ
    user_DHOOTHA NEWS
    DHOOTHA NEWS
    ಸ್ಥಳೀಯ ಸುದ್ದಿ ವರದಿಗಾರ ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    3 hrs ago
  • ರಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಬೇಕು ನಮಗೆ ಅದರಿಂದ ತೊಂದರೆ ಆಗುತ್ತಿದೆ ರಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಬೇಕು ನಮಗೆ ಅದರಿಂದ ತೊಂದರೆ ಆಗುತ್ತಿದೆ
    1
    ರಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಬೇಕು 
ನಮಗೆ ಅದರಿಂದ ತೊಂದರೆ ಆಗುತ್ತಿದೆ
ರಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಬೇಕು 
ನಮಗೆ ಅದರಿಂದ ತೊಂದರೆ ಆಗುತ್ತಿದೆ
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    28 min ago
  • ಸುದ್ದಿಗೊಷ್ಠಿ ಮದ್ಯೆ ಕಣ್ಣೀರಾಕಿದ ಸಚಿವ ನಾಗೇಂದ್ರ... ಕಣ್ಣೀರಾಕಿ ರಾಜೀನಾಮೆ ಘೋಷಿಸಿದ ನಾಗೇಂದ್ರ. ಶಾಸಕ ಸ್ಥಾನಕ್ಕೂ ರಾಜೀನಾಮೆ ನಿಡ್ತಿನಿ...!? ಬೆಂಗಳೂರು, ಆ.28: ವಿಧಾನಸೌಧದಲ್ಲಿ ಸಚಿವರಾದ ಬಿ. ನಾಗೇಂದ್ರ, ಅಜಯ್ ಸಿಂಗ್, ರಿಜ್ವಾನ್ ಅರ್ಷದ್, ನಾಸೀರ್ ಅಹಮದ್ ಹಾಗೂ ಜಿ.ಸಿ. ಚಂದ್ರಶೇಖರ್ ಅವರ ಜಂಟಿ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ಸಚಿವ ಬಿ. ನಾಗೇಂದ್ರ, ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸದನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕಿತ್ತು. ಆದರೆ ವಿಪಕ್ಷದವರು ಸದನವನ್ನೇ ನಡೆಯಲು ಬಿಡಲಿಲ್ಲ ಎಂದು ಆರೋಪಿಸಿದರು. “ವಿಪಕ್ಷದವರು ಮನುಸ್ಮೃತಿಯನ್ನು ಜಾರಿಗೆ ತರಲು ಹೊರಟಿದ್ದಾರೆ. ಅವರಿಗೆ ಇದು ಯಾವ ಕಾಲ ಎಂಬುದು ಗೊತ್ತಿಲ್ಲ. ಇದು ಸಂವಿಧಾನದ ಕಾಲ, ಬಾಬಾಸಾಹೇಬರ ಕಾಲ” ಎಂದು ಹೇಳಿದರು. ರಾಮಾಯಣದ ಉತ್ತರಕಾಂಡದಲ್ಲಿನ ಶಂಬೂಕನ ಪ್ರಸಂಗವನ್ನು ಉಲ್ಲೇಖಿಸಿದ ನಾಗೇಂದ್ರ, ಇಂದಿನ ಯುಗದಲ್ಲಿ ಶಂಬೂಕನ ಹತ್ಯೆಯಾಗಲು ಸಾಧ್ಯವಿಲ್ಲ. ಸಂವಿಧಾನ ಶೂದ್ರರು, ದಲಿತರು, ಮಹಿಳೆಯರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತಿದೆ ಎಂದರು. “ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕೆಪಿಎಸ್‌ಸಿ ಹಗರಣದ ಕುರಿತು ಚರ್ಚೆ ಮಾಡಬಹುದಿತ್ತು. ಶಾಸಕರು ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಬಹುದಿತ್ತು. ನಾವು ಎಲ್ಲದಕ್ಕೂ ಅವಕಾಶ ನೀಡುತ್ತಿದ್ದೆವು. ಆದರೆ ಯಾವುದೇ ಆಧಾರವಿಲ್ಲದ ವಿಚಾರಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ” ಎಂದು ನಾಗೇಂದ್ರ ಆರೋಪಿಸಿದರು. 2024ರಲ್ಲೇ ರಾಜೀನಾಮೆ ನೀಡಿದ್ದೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಾಗೇಂದ್ರ, 2024ರಲ್ಲೇ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಎಂದು ಹೇಳಿದರು. “ನಂತರ ಎಸ್‌ಐಟಿ, ಸಿಐಡಿ ತನಿಖೆ ಎದುರಿಸಿದ್ದೇನೆ. ಕೇಂದ್ರದ ಇಡಿಯಿಂದ ನನ್ನನ್ನು ಬಂಧಿಸಲಾಗಿತ್ತು. ಜೈಲಿಗೂ ಹೋಗಿ ಬಂದಿದ್ದೇನೆ. ಎರಡು ಬಾರಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಮೊದಲ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರಿರಲಿಲ್ಲ. ಎರಡನೇ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರು ಸೇರಿಸಲಾಗಿದೆ” ಎಂದು ಹೇಳಿದರು. ತಾವು ಸಂವಿಧಾನಕ್ಕೆ ಗೌರವ ನೀಡುವುದಾಗಿ ತಿಳಿಸಿದ ನಾಗೇಂದ್ರ, ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧದ ಪ್ರಾಸಿಕ್ಯೂಷನ್ ವಿಚಾರದಲ್ಲಿ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. “ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರವಿಲ್ಲ” “ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರವಿಲ್ಲ. ನಾನು ಕೇವಲ ಸಚಿವನಾಗಿದ್ದೆ. ನಾನು ನೋಟ್‌ಶೀಟ್ ಹಾಕಿದ್ದೇನಾ? ಎಲ್ಲಾದರೂ ಸಹಿ ಹಾಕಿದ್ದೇನಾ? ನಾನು ಇದರಲ್ಲಿ ಭಾಗಿಯಾಗಿದ್ದೇನಾ?” ಎಂದು ಪ್ರಶ್ನಿಸಿದರು. ಅಕ್ರಮವಾಗಿ ವರ್ಗಾವಣೆಯಾಗಿದ್ದ ಹಣ ವಾಪಸ್ ಆಗಿದೆ ಎಂದು ಹೇಳಿದ ಅವರು, “ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಯಾರ ಅಧೀನದಲ್ಲಿದೆ? ನಿರ್ಮಲಾ ಸೀತಾರಾಮನ್ ಅವರ ಅಧೀನದಲ್ಲಿರುವ ಬ್ಯಾಂಕ್ ಅಲ್ಲವೇ? ಹಾಗಾದರೆ ಅವರ ಮೇಲೆ ಏಕೆ ತನಿಖೆ ನಡೆಯುತ್ತಿಲ್ಲ? ನಾನು ದಲಿತ ಎಂಬ ಕಾರಣಕ್ಕೆ ನನ್ನ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ?” ಎಂದು ಪ್ರಶ್ನಿಸಿದರು. ಈ ವೇಳೆ ನಾಗೇಂದ್ರ ಭಾವುಕರಾಗಿ ಮಾತನಾಡಿದರು. ಕಣ್ಣೀರು ಹಾಕಿದ ಅವರು ಟಿಶ್ಯೂ ಬಳಸಿ ಕಣ್ಣೊರೆಸಿಕೊಂಡರು. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಘೋಷಣೆ ಮುಖ್ಯಮಂತ್ರಿ, ಪಕ್ಷದ ವರಿಷ್ಠರಿಗೆ ಮುಜುಗರವಾಗಬಾರದು ಹಾಗೂ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ನಾಗೇಂದ್ರ ಹೇಳಿದರು. “ಈಗ ನಾನು ನನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ನನಗೆ ಆಗಿರುವ ಅನ್ಯಾಯವನ್ನು ನಾನು ಹೇಳುತ್ತೇನೆ. ಬನ್ನಿ ಅಖಾಡಕ್ಕೆ ಹೋಗೋಣ, ಜನತಾ ನ್ಯಾಯಾಲಯಕ್ಕೆ ಹೋಗೋಣ” ಎಂದು ಸವಾಲು ಹಾಕಿದರು. ಬಳ್ಳಾರಿ ಬಿಜೆಪಿ ನಾಯಕರಾದ ಬಿ. ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “ರಾಮುಲಣ್ಣ, ನೀ ಬಾರಣ್ಣ, ನೀನೇ ಬಾ. ನನ್ನ ಸವಾಲು ಸ್ವೀಕರಿಸು. ಜನತಾ ನ್ಯಾಯಾಲಯಕ್ಕೆ ಹೋಗೋಣ” ಎಂದು ಸವಾಲು ಹಾಕಿದರು. “ನನ್ನ ಮೇಲೆ ಇಡಿ, ಸಿಬಿಐ ಬಿಡಬಹುದು. ಆದರೆ ನಿಮ್ಮ ಗೊಡ್ಡು ಬೆದರಿಕೆಗೆ ನಾನು ಬಗ್ಗುವುದಿಲ್ಲ. ನಾನು ಆರೋಪ ಮುಕ್ತನಾಗಿ ಹೊರಬರುವ ವಿಶ್ವಾಸವಿದೆ” ಎಂದು ನಾಗೇಂದ್ರ ಹೇಳಿದರು. ಬಳ್ಳಾರಿ ಜನರು ಈಗಾಗಲೇ ಬಿಜೆಪಿ ನಾಯಕರಿಗೆ ಎರಡು ಬಾರಿ ಛೀಮಾರಿ ಹಾಕಿದ್ದಾರೆ. ನೀವು ಚಲಾವಣೆಯಲ್ಲಿಲ್ಲದ ನಾಣ್ಯಗಳಾಗಿದ್ದೀರಿ ಎಂದು ಟೀಕಿಸಿದ ಅವರು, ತಮ್ಮ ವಿರುದ್ಧದ ಆರೋಪಗಳಿಗೆ ಜನತಾ ನ್ಯಾಯಾಲಯದಲ್ಲೇ ಉತ್ತರ ನೀಡುವುದಾಗಿ ಹೇಳಿದರು. ಕೊನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್, ಹರಿಪ್ರಸಾದ್ ಸೇರಿದಂತೆ ತಮ್ಮ ಪರ ನಿಂತ ಎಲ್ಲ ನಾಯಕರನ್ನು ಸ್ಮರಿಸಿದ ನಾಗೇಂದ್ರ, ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಅವರಿಗೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದರು.
    1
    ಸುದ್ದಿಗೊಷ್ಠಿ ಮದ್ಯೆ ಕಣ್ಣೀರಾಕಿದ ಸಚಿವ ನಾಗೇಂದ್ರ... ಕಣ್ಣೀರಾಕಿ ರಾಜೀನಾಮೆ ಘೋಷಿಸಿದ ನಾಗೇಂದ್ರ. ಶಾಸಕ ಸ್ಥಾನಕ್ಕೂ ರಾಜೀನಾಮೆ ನಿಡ್ತಿನಿ...!?

ಬೆಂಗಳೂರು, ಆ.28: ವಿಧಾನಸೌಧದಲ್ಲಿ ಸಚಿವರಾದ ಬಿ. ನಾಗೇಂದ್ರ, ಅಜಯ್ ಸಿಂಗ್, ರಿಜ್ವಾನ್ ಅರ್ಷದ್, ನಾಸೀರ್ ಅಹಮದ್ ಹಾಗೂ ಜಿ.ಸಿ. ಚಂದ್ರಶೇಖರ್ ಅವರ ಜಂಟಿ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ಸಚಿವ ಬಿ. ನಾಗೇಂದ್ರ, ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸದನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕಿತ್ತು. ಆದರೆ ವಿಪಕ್ಷದವರು ಸದನವನ್ನೇ ನಡೆಯಲು ಬಿಡಲಿಲ್ಲ ಎಂದು ಆರೋಪಿಸಿದರು. “ವಿಪಕ್ಷದವರು ಮನುಸ್ಮೃತಿಯನ್ನು ಜಾರಿಗೆ ತರಲು ಹೊರಟಿದ್ದಾರೆ. ಅವರಿಗೆ ಇದು ಯಾವ ಕಾಲ ಎಂಬುದು ಗೊತ್ತಿಲ್ಲ. ಇದು ಸಂವಿಧಾನದ ಕಾಲ, ಬಾಬಾಸಾಹೇಬರ ಕಾಲ” ಎಂದು ಹೇಳಿದರು.
ರಾಮಾಯಣದ ಉತ್ತರಕಾಂಡದಲ್ಲಿನ ಶಂಬೂಕನ ಪ್ರಸಂಗವನ್ನು ಉಲ್ಲೇಖಿಸಿದ ನಾಗೇಂದ್ರ, ಇಂದಿನ ಯುಗದಲ್ಲಿ ಶಂಬೂಕನ ಹತ್ಯೆಯಾಗಲು ಸಾಧ್ಯವಿಲ್ಲ. ಸಂವಿಧಾನ ಶೂದ್ರರು, ದಲಿತರು, ಮಹಿಳೆಯರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತಿದೆ ಎಂದರು.
“ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕೆಪಿಎಸ್‌ಸಿ ಹಗರಣದ ಕುರಿತು ಚರ್ಚೆ ಮಾಡಬಹುದಿತ್ತು. ಶಾಸಕರು ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಬಹುದಿತ್ತು. ನಾವು ಎಲ್ಲದಕ್ಕೂ ಅವಕಾಶ ನೀಡುತ್ತಿದ್ದೆವು. ಆದರೆ ಯಾವುದೇ ಆಧಾರವಿಲ್ಲದ ವಿಚಾರಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ” ಎಂದು ನಾಗೇಂದ್ರ ಆರೋಪಿಸಿದರು.
2024ರಲ್ಲೇ ರಾಜೀನಾಮೆ ನೀಡಿದ್ದೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಾಗೇಂದ್ರ, 2024ರಲ್ಲೇ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಎಂದು ಹೇಳಿದರು.
“ನಂತರ ಎಸ್‌ಐಟಿ, ಸಿಐಡಿ ತನಿಖೆ ಎದುರಿಸಿದ್ದೇನೆ. ಕೇಂದ್ರದ ಇಡಿಯಿಂದ ನನ್ನನ್ನು ಬಂಧಿಸಲಾಗಿತ್ತು. ಜೈಲಿಗೂ ಹೋಗಿ ಬಂದಿದ್ದೇನೆ. ಎರಡು ಬಾರಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಮೊದಲ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರಿರಲಿಲ್ಲ. ಎರಡನೇ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರು ಸೇರಿಸಲಾಗಿದೆ” ಎಂದು ಹೇಳಿದರು.
ತಾವು ಸಂವಿಧಾನಕ್ಕೆ ಗೌರವ ನೀಡುವುದಾಗಿ ತಿಳಿಸಿದ ನಾಗೇಂದ್ರ, ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧದ ಪ್ರಾಸಿಕ್ಯೂಷನ್ ವಿಚಾರದಲ್ಲಿ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
“ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರವಿಲ್ಲ”
“ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರವಿಲ್ಲ. ನಾನು ಕೇವಲ ಸಚಿವನಾಗಿದ್ದೆ. ನಾನು ನೋಟ್‌ಶೀಟ್ ಹಾಕಿದ್ದೇನಾ? ಎಲ್ಲಾದರೂ ಸಹಿ ಹಾಕಿದ್ದೇನಾ? ನಾನು ಇದರಲ್ಲಿ ಭಾಗಿಯಾಗಿದ್ದೇನಾ?” ಎಂದು ಪ್ರಶ್ನಿಸಿದರು.
ಅಕ್ರಮವಾಗಿ ವರ್ಗಾವಣೆಯಾಗಿದ್ದ ಹಣ ವಾಪಸ್ ಆಗಿದೆ ಎಂದು ಹೇಳಿದ ಅವರು, “ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಯಾರ ಅಧೀನದಲ್ಲಿದೆ? ನಿರ್ಮಲಾ ಸೀತಾರಾಮನ್ ಅವರ ಅಧೀನದಲ್ಲಿರುವ ಬ್ಯಾಂಕ್ ಅಲ್ಲವೇ? ಹಾಗಾದರೆ ಅವರ ಮೇಲೆ ಏಕೆ ತನಿಖೆ ನಡೆಯುತ್ತಿಲ್ಲ? ನಾನು ದಲಿತ ಎಂಬ ಕಾರಣಕ್ಕೆ ನನ್ನ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ?” ಎಂದು ಪ್ರಶ್ನಿಸಿದರು.
ಈ ವೇಳೆ ನಾಗೇಂದ್ರ ಭಾವುಕರಾಗಿ ಮಾತನಾಡಿದರು. ಕಣ್ಣೀರು ಹಾಕಿದ ಅವರು ಟಿಶ್ಯೂ ಬಳಸಿ ಕಣ್ಣೊರೆಸಿಕೊಂಡರು.
ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಘೋಷಣೆ
ಮುಖ್ಯಮಂತ್ರಿ, ಪಕ್ಷದ ವರಿಷ್ಠರಿಗೆ ಮುಜುಗರವಾಗಬಾರದು ಹಾಗೂ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ನಾಗೇಂದ್ರ ಹೇಳಿದರು.
“ಈಗ ನಾನು ನನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ನನಗೆ ಆಗಿರುವ ಅನ್ಯಾಯವನ್ನು ನಾನು ಹೇಳುತ್ತೇನೆ. ಬನ್ನಿ ಅಖಾಡಕ್ಕೆ ಹೋಗೋಣ, ಜನತಾ ನ್ಯಾಯಾಲಯಕ್ಕೆ ಹೋಗೋಣ” ಎಂದು ಸವಾಲು ಹಾಕಿದರು.
ಬಳ್ಳಾರಿ ಬಿಜೆಪಿ ನಾಯಕರಾದ ಬಿ. ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “ರಾಮುಲಣ್ಣ, ನೀ ಬಾರಣ್ಣ, ನೀನೇ ಬಾ. ನನ್ನ ಸವಾಲು ಸ್ವೀಕರಿಸು. ಜನತಾ ನ್ಯಾಯಾಲಯಕ್ಕೆ ಹೋಗೋಣ” ಎಂದು ಸವಾಲು ಹಾಕಿದರು.
“ನನ್ನ ಮೇಲೆ ಇಡಿ, ಸಿಬಿಐ ಬಿಡಬಹುದು. ಆದರೆ ನಿಮ್ಮ ಗೊಡ್ಡು ಬೆದರಿಕೆಗೆ ನಾನು ಬಗ್ಗುವುದಿಲ್ಲ. ನಾನು ಆರೋಪ ಮುಕ್ತನಾಗಿ ಹೊರಬರುವ ವಿಶ್ವಾಸವಿದೆ” ಎಂದು ನಾಗೇಂದ್ರ ಹೇಳಿದರು.
ಬಳ್ಳಾರಿ ಜನರು ಈಗಾಗಲೇ ಬಿಜೆಪಿ ನಾಯಕರಿಗೆ ಎರಡು ಬಾರಿ ಛೀಮಾರಿ ಹಾಕಿದ್ದಾರೆ. ನೀವು ಚಲಾವಣೆಯಲ್ಲಿಲ್ಲದ ನಾಣ್ಯಗಳಾಗಿದ್ದೀರಿ ಎಂದು ಟೀಕಿಸಿದ ಅವರು, ತಮ್ಮ ವಿರುದ್ಧದ ಆರೋಪಗಳಿಗೆ ಜನತಾ ನ್ಯಾಯಾಲಯದಲ್ಲೇ ಉತ್ತರ ನೀಡುವುದಾಗಿ ಹೇಳಿದರು.
ಕೊನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್, ಹರಿಪ್ರಸಾದ್ ಸೇರಿದಂತೆ ತಮ್ಮ ಪರ ನಿಂತ ಎಲ್ಲ ನಾಯಕರನ್ನು ಸ್ಮರಿಸಿದ ನಾಗೇಂದ್ರ, ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಅವರಿಗೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದರು.
    user_Mohan
    Mohan
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 hr ago
  • ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಘೋಷಣೆ! | ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸಚಿವ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. ರಾಜೀನಾಮೆ ಘೋಷಿಸುವ ವೇಳೆ ಬಿ.ನಾಗೇಂದ್ರ ಅವರು ತೀವ್ರ ಭಾವುಕರಾಗಿ ಕಣ್ಣೀರಿಟ್ಟ ಘಟನೆ ಗಮನ ಸೆಳೆಯಿತು. ಯಾವುದೇ ಒತ್ತಡವಿಲ್ಲದೆ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು. ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸುವುದಾಗಿ ತಿಳಿಸಿದ ಅವರು, ಪಕ್ಷದ ವರಿಷ್ಠರಿಗೂ ಮನವಿ ಮಾಡಿರುವುದಾಗಿ ಹೇಳಿದರು. ಈ ಬೆಳವಣಿಗೆಯ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮುಂದೇನು ಎಂಬ ಕುತೂಹಲ ಹೆಚ್ಚಾಗಿದೆ. ಸಂಪೂರ್ಣ ಸುದ್ದಿಗಾಗಿ ವಿಡಿಯೋ ನೋಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ. #BNagendra #ಬಿನಾಗೇಂದ್ರ #KarnatakaPolitics #KarnatakaNews #BreakingNews #PoliticalNews #BangaloreNews #Congress #Karnataka #KannadaNews #ರಾಜಕೀಯ #ರಾಜೀನಾಮೆ #ಬೆಂಗಳೂರು #asnnews24kannada
    1
    ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಘೋಷಣೆ! | ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸಚಿವ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ರಾಜೀನಾಮೆ ಘೋಷಿಸುವ ವೇಳೆ ಬಿ.ನಾಗೇಂದ್ರ ಅವರು ತೀವ್ರ ಭಾವುಕರಾಗಿ ಕಣ್ಣೀರಿಟ್ಟ ಘಟನೆ ಗಮನ ಸೆಳೆಯಿತು. ಯಾವುದೇ ಒತ್ತಡವಿಲ್ಲದೆ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು.
ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸುವುದಾಗಿ ತಿಳಿಸಿದ ಅವರು, ಪಕ್ಷದ ವರಿಷ್ಠರಿಗೂ ಮನವಿ ಮಾಡಿರುವುದಾಗಿ ಹೇಳಿದರು.
ಈ ಬೆಳವಣಿಗೆಯ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮುಂದೇನು ಎಂಬ ಕುತೂಹಲ ಹೆಚ್ಚಾಗಿದೆ.
ಸಂಪೂರ್ಣ ಸುದ್ದಿಗಾಗಿ ವಿಡಿಯೋ ನೋಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ.
#BNagendra #ಬಿನಾಗೇಂದ್ರ #KarnatakaPolitics #KarnatakaNews #BreakingNews #PoliticalNews #BangaloreNews #Congress #Karnataka #KannadaNews #ರಾಜಕೀಯ #ರಾಜೀನಾಮೆ #ಬೆಂಗಳೂರು #asnnews24kannada
    user_AsnNews24Kannada
    AsnNews24Kannada
    Local News Reporter Bengaluru East, Bengaluru Urban•
    4 hrs ago
  • ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಾಗ್ತಿದೆ ರಾತ್ರಿ ವೇಳೆಯ ರಾಬರಿಗಳು ಬೆಂಗಳೂರು:ರಾಬರಿ ಮಾಡಲು ಹೊಂಚು ಹಾಕಿ ಕೂತಿದ್ದ ಕಳ್ಳರಿಂದ ಭೀಕರ ಆಕ್ಸಿಡೆಂಟ್ ದೇವನಹಳ್ಳಿ ಹೊರವಲಯದ ಬೈಚಾಪುರ ಬಳಿ ಇರುವ ಬ್ರಿಗೇಡ್ ಬಳಿ ನಡೆದಿದೆ.ಗಾಡಿಗಳನ್ನ ಅಡ್ಡ ಹಾಕಿ ಕಳ್ಳತನ ಮಾಡುವ ವೇಳೆ ಕಳ್ಳನಿಗೆ ಬೈಕ್ ಡಿಕ್ಕಿ ಹೊಡೆದಿದೆ.ಅಪಘಾತದಲ್ಲಿ ಕಳ್ಳ ಮತ್ತು ಬೈಕ್ ಸವಾರರು ರಸ್ತೆಗೆ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ತಡರಾತ್ರಿ 1 ಗಂಟೆ ನಂತರ ರಾಬರಿ ಮಾಡಲು ಫೀಲ್ಡ್ ಗೆ ಇಬ್ಬರು ಕಳ್ಳರು ಇಳಿದಿದ್ರು.ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನ ಟಾರ್ಗೆಟ್ ಮಾಡಿ ರಾಬರಿಗೆ ಕಳ್ಳರು ಪ್ಲಾನ್ ನಡೆಸಿದ್ದು,ಬೈಕ್ ಸವಾರರನ್ನ ಅಡ್ಡಗಟ್ಟಿ ಮೊಬೈಲ್ ಮತ್ತು ಹಣವನ್ನ ರಾಬರಿ ಗ್ಯಾಂಗ್ ಪೀಕುತ್ತತ್ತು.ಇದೇ ವೇಳೆ ಬೈಕೊಂದಕ್ಕೆ ಅಡ್ಡ ಹಾಕಲು ಕಳ್ಳರಿಂದ ಪ್ರಯತ್ನ ನಡೆದಿದೆ.ಕಳ್ಳರು ರಸ್ತೆಗೆ ಅಡ್ಡ ಇರುವುದು ನೋಡಿ ಬೈಕ್ ಸವಾರ ಸ್ಪೀಡ್ ಹೆಚ್ಚಿಸಿದ್ದ.ಬೈಕ್ ಗೆ ಅಡ್ಡ ಬಂದ ಕಳ್ಳರಿಗೆ ಡಿಕ್ಕಿಯಾಗಿ ರಸ್ತೆಗೆ ಓರ್ವ ಕಳ್ಳ ಬಿದ್ದ,ಮತ್ತೊಬ್ಬ ಕಳ್ಳ ಬೈಕ್ ಸವಾರರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.ರಾತ್ರಿ ರಾಬರಿ ಪ್ರಕರಣ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ಕೂಡಲೇ ಪೊಲೀಸರು ಕಳ್ಳರನ್ನ ಮಟ್ಟ ಹಾಕಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
    1
    ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಾಗ್ತಿದೆ ರಾತ್ರಿ ವೇಳೆಯ ರಾಬರಿಗಳು
ಬೆಂಗಳೂರು:ರಾಬರಿ ಮಾಡಲು ಹೊಂಚು ಹಾಕಿ ಕೂತಿದ್ದ ಕಳ್ಳರಿಂದ ಭೀಕರ ಆಕ್ಸಿಡೆಂಟ್ ದೇವನಹಳ್ಳಿ ಹೊರವಲಯದ ಬೈಚಾಪುರ ಬಳಿ ಇರುವ ಬ್ರಿಗೇಡ್ ಬಳಿ ನಡೆದಿದೆ.ಗಾಡಿಗಳನ್ನ ಅಡ್ಡ ಹಾಕಿ ಕಳ್ಳತನ ಮಾಡುವ ವೇಳೆ ಕಳ್ಳನಿಗೆ ಬೈಕ್ ಡಿಕ್ಕಿ ಹೊಡೆದಿದೆ.ಅಪಘಾತದಲ್ಲಿ ಕಳ್ಳ ಮತ್ತು ಬೈಕ್ ಸವಾರರು ರಸ್ತೆಗೆ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ತಡರಾತ್ರಿ 1 ಗಂಟೆ ನಂತರ  ರಾಬರಿ ಮಾಡಲು ಫೀಲ್ಡ್ ಗೆ  ಇಬ್ಬರು ಕಳ್ಳರು ಇಳಿದಿದ್ರು.ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನ ಟಾರ್ಗೆಟ್ ಮಾಡಿ ರಾಬರಿಗೆ ಕಳ್ಳರು ಪ್ಲಾನ್ ನಡೆಸಿದ್ದು,ಬೈಕ್ ಸವಾರರನ್ನ ಅಡ್ಡಗಟ್ಟಿ ಮೊಬೈಲ್ ಮತ್ತು ಹಣವನ್ನ  ರಾಬರಿ ಗ್ಯಾಂಗ್ ಪೀಕುತ್ತತ್ತು.ಇದೇ ವೇಳೆ ಬೈಕೊಂದಕ್ಕೆ ಅಡ್ಡ ಹಾಕಲು ಕಳ್ಳರಿಂದ ಪ್ರಯತ್ನ ನಡೆದಿದೆ.ಕಳ್ಳರು ರಸ್ತೆಗೆ ಅಡ್ಡ ಇರುವುದು ನೋಡಿ  ಬೈಕ್ ಸವಾರ ಸ್ಪೀಡ್ ಹೆಚ್ಚಿಸಿದ್ದ.ಬೈಕ್ ಗೆ ಅಡ್ಡ ಬಂದ ಕಳ್ಳರಿಗೆ ಡಿಕ್ಕಿಯಾಗಿ ರಸ್ತೆಗೆ ಓರ್ವ ಕಳ್ಳ ಬಿದ್ದ,ಮತ್ತೊಬ್ಬ ಕಳ್ಳ ಬೈಕ್ ಸವಾರರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.ರಾತ್ರಿ ರಾಬರಿ ಪ್ರಕರಣ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ಕೂಡಲೇ ಪೊಲೀಸರು ಕಳ್ಳರನ್ನ ಮಟ್ಟ ಹಾಕಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    15 hrs ago
  • ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಸಚಿವ ನಾಗೇಂದ್ರ ಬಿಜೆಪಿ ಪಾದಯಾತ್ರೆ ವಿಚಾರ. ಬಿಜೆಪಿಯವರ ಗೊಡ್ಡು ಬೆದರಿಕೆಗೆ ಯಾರೂ ಬೆದರಲ್ಲ. ದೇವನಹಳ್ಲಿ ಏರ್ಪೋರ್ಟ್. ಬಿಜೆಪಿ ಪಾದಯಾತ್ರೆ ವಿಚಾರ. ಬಿಜೆಪಿಯವರ ಗೊಡ್ಡು ಬೆದರಿಕೆಗೆ ಯಾರೂ ಬೆದರಲ್ಲ. ಇದೆಲ್ಲಾ ಒಂದು ಕುತಂತ್ರದಿಂದ ಮಾಡಿರುವತಂದ್ದು. ನಾನು ದಲಿತನೇ ನಾನು. ಈ ಮನುವಾದಿಗಳ ಹತ್ತಿರ ಜಗಳ ಆಡಬೇಕು ಅಂದರೆ ದಲಿತರ ಪರವಾಗಿ ಇವತ್ತಲ್ಲಾ ಅನಾದಿಕಾಲದಿಂದಲೂ ಬಂದಿದೆ. ಏರ್ಪೋರ್ಟ್ ನಲ್ಲಿ ಸಚಿವ ನಾಗೇಂದ್ರ ಹೇಳಿಕೆ
    2
    ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಸಚಿವ ನಾಗೇಂದ್ರ ಬಿಜೆಪಿ ಪಾದಯಾತ್ರೆ ವಿಚಾರ.
ಬಿಜೆಪಿಯವರ ಗೊಡ್ಡು ಬೆದರಿಕೆಗೆ ಯಾರೂ ಬೆದರಲ್ಲ.
ದೇವನಹಳ್ಲಿ ಏರ್ಪೋರ್ಟ್.
ಬಿಜೆಪಿ ಪಾದಯಾತ್ರೆ ವಿಚಾರ.
ಬಿಜೆಪಿಯವರ ಗೊಡ್ಡು ಬೆದರಿಕೆಗೆ ಯಾರೂ ಬೆದರಲ್ಲ.
ಇದೆಲ್ಲಾ ಒಂದು ಕುತಂತ್ರದಿಂದ ಮಾಡಿರುವತಂದ್ದು.
ನಾನು ದಲಿತನೇ ನಾನು.
ಈ ಮನುವಾದಿಗಳ ಹತ್ತಿರ ಜಗಳ ಆಡಬೇಕು ಅಂದರೆ ದಲಿತರ ಪರವಾಗಿ ಇವತ್ತಲ್ಲಾ ಅನಾದಿಕಾಲದಿಂದಲೂ ಬಂದಿದೆ.
ಏರ್ಪೋರ್ಟ್ ನಲ್ಲಿ ಸಚಿವ ನಾಗೇಂದ್ರ ಹೇಳಿಕೆ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    6 hrs ago
  • ಕೆಜಿಎಫ್ ಪಿಂಚಣಿದಾರರಿಗೆ ಗುಡ್ ನ್ಯೂಸ್; ಆದಾಯ ಮಿತಿ 1.20 ಲಕ್ಷಕ್ಕೆ ಏರಿಕೆ: ಅಗತ್ಯ ದಾಖಲೆ ನೀಡಿದರೆ ಪಿಂಚಣಿ ಮುಂದುವರಿಕೆ – ಶಾಸಕಿ ರೂಪಕಲಾ ಶಶಿಧರ್ ಭರವಸೆ ​ಕೆ.ಜಿ.ಎಫ್: ಕ್ಷೇತ್ರದ ಪಿಂಚಣಿದಾರರಿಗೆ ಅನುಕೂಲವಾಗುವಂತೆ ಸರ್ಕಾರದ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಏರಿಕೆ ಮಾಡಲಾಗಿದ್ದು, ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಪಿಂಚಣಿ ಮುಂದುವರಿಯಲಿದೆ ಎಂದು ಕೆಜಿಎಫ್ ಶಾಸಕಿ ಡಾ. ರೂಪಕಲಾ ಶಶಿಧರ್ ತಿಳಿಸಿದ್ದಾರೆ. ​ಈ ಕುರಿತು ಮಾಹಿತಿ ನೀಡಿದ ಅವರು, ಈ ಹಿಂದೆ ನಿಗದಿಯಾಗಿದ್ದ ₹32,000 ಆದಾಯ ಮಿತಿಯನ್ನು ಇದೀಗ ₹1,20,000ಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ ಬಿಪಿಎಲ್ (BPL) ಪಡಿತರ ಚೀಟಿ ಹೊಂದಿರುವ ಮತ್ತು ಸರ್ಕಾರದ ಮಾನದಂಡಗಳ ಪ್ರಕಾರ ಅರ್ಹರಿರುವ ಪ್ರತಿಯೊಬ್ಬರಿಗೂ ಪಿಂಚಣಿ ಪಡೆಯುವ ಅರ್ಹತೆ ಲಭ್ಯವಾಗಲಿದೆ ಎಂದರು. ​ದಾಖಲೆಗಳ ಸಲ್ಲಿಕೆ ವಿವರ: ​ಹಿರಿಯ ನಾಗರಿಕರಿಗೆ: 65 ವರ್ಷ ವಯಸ್ಸು ದೃಢಪಟ್ಟಿರಬೇಕು. ​ಅಗತ್ಯ ದಾಖಲೆಗಳು: ಬಿಪಿಎಲ್ ಕಾರ್ಡ್ ಜತೆಗೆ, ಈ ಹಿಂದೆ ಪಿಂಚಣಿ ಪಡೆಯುತ್ತಿದ್ದ ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿಯ (Post Office) ಪಾಸ್‌ಬುಕ್ ವಿವರಗಳನ್ನು ನೀಡಿದರೆ ಸಾಕು. ಬೇರೆ ಯಾವುದೇ ಹೆಚ್ಚುವರಿ ದಾಖಲೆಗಳ ಅವಶ್ಯಕತೆ ಇರುವುದಿಲ್ಲ. ​ವಾರ್ಡ್‌ವಾರು ದಾಖಲೆ ಸಂಗ್ರಹ & ಹೆಲ್ಪ್‌ಲೈನ್: ಫಲಾನುಭವಿಗಳ ಅನುಕೂಲಕ್ಕಾಗಿ ವಾರ್ಡ್‌ವಾರು ತೆರಳಿ ದಾಖಲೆಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ. ಅಲ್ಲದೆ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಹೆಲ್ಪ್‌ಲೈನ್ ಆರಂಭಿಸಲಾಗುವುದು. ಕಂದಾಯ ಇಲಾಖೆಯ ಅಧಿಕಾರಿಗಳನ್ನು (Revenue Officers) ಇದಕ್ಕಾಗಿ ನಿಯೋಜಿಸಲಾಗುತ್ತಿದ್ದು, ವಾರದಲ್ಲಿ ಒಂದು ದಿನ ದಾಖಲೆಗಳ ಪರಿಶೀಲನೆ ಹಾಗೂ ತಿದ್ದುಪಡಿ ಕಾರ್ಯಗಳನ್ನು ನಡೆಸಲಿದ್ದಾರೆ. ​ಬಾಕಿ ಪಿಂಚಣಿ ಪಾವತಿಗೆ ಕ್ರಮ: ದಾಖಲೆಗಳ ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, ಕಳೆದ 2 ರಿಂದ 3 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಿಂದ ಬಾಕಿ ಉಳಿದಿರುವ ಪಿಂಚಣಿ ಹಣವನ್ನು ಅರ್ಹ ಫಲಾನುಭವಿಗಳ ಖಾತೆಗೆ ಮರುಪಾವತಿ (Re-payment) ಮಾಡಲು ಅಗತ್ಯ ಪ್ರಯತ್ನ ಕೈಗೊಳ್ಳಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ಗೊಂದಲ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.
    1
    ಕೆಜಿಎಫ್ ಪಿಂಚಣಿದಾರರಿಗೆ ಗುಡ್ ನ್ಯೂಸ್; ಆದಾಯ ಮಿತಿ 1.20 ಲಕ್ಷಕ್ಕೆ ಏರಿಕೆ: ಅಗತ್ಯ ದಾಖಲೆ ನೀಡಿದರೆ ಪಿಂಚಣಿ ಮುಂದುವರಿಕೆ – ಶಾಸಕಿ ರೂಪಕಲಾ ಶಶಿಧರ್ ಭರವಸೆ

​ಕೆ.ಜಿ.ಎಫ್: ಕ್ಷೇತ್ರದ ಪಿಂಚಣಿದಾರರಿಗೆ ಅನುಕೂಲವಾಗುವಂತೆ ಸರ್ಕಾರದ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಏರಿಕೆ ಮಾಡಲಾಗಿದ್ದು, ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಪಿಂಚಣಿ ಮುಂದುವರಿಯಲಿದೆ ಎಂದು ಕೆಜಿಎಫ್ ಶಾಸಕಿ ಡಾ. ರೂಪಕಲಾ ಶಶಿಧರ್ ತಿಳಿಸಿದ್ದಾರೆ.
​ಈ ಕುರಿತು ಮಾಹಿತಿ ನೀಡಿದ ಅವರು, ಈ ಹಿಂದೆ ನಿಗದಿಯಾಗಿದ್ದ ₹32,000 ಆದಾಯ ಮಿತಿಯನ್ನು ಇದೀಗ ₹1,20,000ಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ ಬಿಪಿಎಲ್ (BPL) ಪಡಿತರ ಚೀಟಿ ಹೊಂದಿರುವ ಮತ್ತು ಸರ್ಕಾರದ ಮಾನದಂಡಗಳ ಪ್ರಕಾರ ಅರ್ಹರಿರುವ ಪ್ರತಿಯೊಬ್ಬರಿಗೂ ಪಿಂಚಣಿ ಪಡೆಯುವ ಅರ್ಹತೆ ಲಭ್ಯವಾಗಲಿದೆ ಎಂದರು.
​ದಾಖಲೆಗಳ ಸಲ್ಲಿಕೆ ವಿವರ:
​ಹಿರಿಯ ನಾಗರಿಕರಿಗೆ: 65 ವರ್ಷ ವಯಸ್ಸು ದೃಢಪಟ್ಟಿರಬೇಕು.
​ಅಗತ್ಯ ದಾಖಲೆಗಳು: ಬಿಪಿಎಲ್ ಕಾರ್ಡ್ ಜತೆಗೆ, ಈ ಹಿಂದೆ ಪಿಂಚಣಿ ಪಡೆಯುತ್ತಿದ್ದ ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿಯ (Post Office) ಪಾಸ್‌ಬುಕ್ ವಿವರಗಳನ್ನು ನೀಡಿದರೆ ಸಾಕು. ಬೇರೆ ಯಾವುದೇ ಹೆಚ್ಚುವರಿ ದಾಖಲೆಗಳ ಅವಶ್ಯಕತೆ ಇರುವುದಿಲ್ಲ.
​ವಾರ್ಡ್‌ವಾರು ದಾಖಲೆ ಸಂಗ್ರಹ & ಹೆಲ್ಪ್‌ಲೈನ್:
ಫಲಾನುಭವಿಗಳ ಅನುಕೂಲಕ್ಕಾಗಿ ವಾರ್ಡ್‌ವಾರು ತೆರಳಿ ದಾಖಲೆಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ. ಅಲ್ಲದೆ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಹೆಲ್ಪ್‌ಲೈನ್ ಆರಂಭಿಸಲಾಗುವುದು. ಕಂದಾಯ ಇಲಾಖೆಯ ಅಧಿಕಾರಿಗಳನ್ನು (Revenue Officers) ಇದಕ್ಕಾಗಿ ನಿಯೋಜಿಸಲಾಗುತ್ತಿದ್ದು, ವಾರದಲ್ಲಿ ಒಂದು ದಿನ ದಾಖಲೆಗಳ ಪರಿಶೀಲನೆ ಹಾಗೂ ತಿದ್ದುಪಡಿ ಕಾರ್ಯಗಳನ್ನು ನಡೆಸಲಿದ್ದಾರೆ.
​ಬಾಕಿ ಪಿಂಚಣಿ ಪಾವತಿಗೆ ಕ್ರಮ:
ದಾಖಲೆಗಳ ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, ಕಳೆದ 2 ರಿಂದ 3 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಿಂದ ಬಾಕಿ ಉಳಿದಿರುವ ಪಿಂಚಣಿ ಹಣವನ್ನು ಅರ್ಹ ಫಲಾನುಭವಿಗಳ ಖಾತೆಗೆ ಮರುಪಾವತಿ (Re-payment) ಮಾಡಲು ಅಗತ್ಯ ಪ್ರಯತ್ನ ಕೈಗೊಳ್ಳಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ಗೊಂದಲ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.
    user_Prashanth  Vibes
    Prashanth Vibes
    Video Creator ಕೋಲಾರ ಗೋಲ್ಡ್ ಫೀಲ್ಡ್, ಕೋಲಾರ, ಕರ್ನಾಟಕ•
    1 hr ago
  • ಸಚಿವ ನಾಗೇಂದ್ರ ರಾಜೀನಾಮೆ ವದಂತಿ! ಡಿಕೆಶಿ ಹೇಳಿದ್ದೇನು? ‘ಪಕ್ಷದ ಸಿಪಾಯಿ, ಎಲ್ಲದಕ್ಕೂ ಸಿದ್ಧ’ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಕುರಿತು ರಾಜ್ಯ ರಾಜಕಾರಣದಲ್ಲಿ ಚರ್ಚೆ ತೀವ್ರವಾಗಿದೆ. ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದು, ನಾಗೇಂದ್ರ ಅವರು ತಮ್ಮೊಂದಿಗೆ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ. “ನಾನೊಬ್ಬ ಪಕ್ಷದ ಸಿಪಾಯಿ, ಪಕ್ಷಕ್ಕಾಗಿ ಎಲ್ಲದಕ್ಕೂ ಸಿದ್ಧ” ಎಂದು ನಾಗೇಂದ್ರ ಅವರು ಹೇಳಿದ್ದಾರೆ ಎಂದು ಡಿಕೆಶಿ ತಿಳಿಸಿದ್ದು, ರಾಜೀನಾಮೆ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡಿಲ್ಲ. ದೆಹಲಿಯಿಂದ ಮರಳುತ್ತಿರುವ ಸಚಿವ ಬಿ. ನಾಗೇಂದ್ರ ಅವರು ಮಾಧ್ಯಮಗಳ ಮುಂದೆ ಏನು ಹೇಳಲಿದ್ದಾರೆ ಎಂಬುದು ಇದೀಗ ಕುತೂಹಲ ಮೂಡಿಸಿದೆ. ರಾಜೀನಾಮೆ ಖಚಿತವೇ? ಅಥವಾ ಕೇವಲ ವದಂತಿಯೇ? ಮುಂದಿನ ಸ್ಪಷ್ಟನೆಗೆ ಕಾಯಬೇಕಿದೆ. #BNagendra #DKShivakumar #KarnatakaPolitics #KarnatakaNews #BreakingNews #Congress #Bengaluru #Karnataka #PoliticalNews #KannadaNews #ASNNews24Kannada #NewsUpdate #indianewshindi
    1
    ಸಚಿವ ನಾಗೇಂದ್ರ ರಾಜೀನಾಮೆ ವದಂತಿ! ಡಿಕೆಶಿ ಹೇಳಿದ್ದೇನು? ‘ಪಕ್ಷದ ಸಿಪಾಯಿ, ಎಲ್ಲದಕ್ಕೂ ಸಿದ್ಧ’
ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಕುರಿತು ರಾಜ್ಯ ರಾಜಕಾರಣದಲ್ಲಿ ಚರ್ಚೆ ತೀವ್ರವಾಗಿದೆ. ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದು, ನಾಗೇಂದ್ರ ಅವರು ತಮ್ಮೊಂದಿಗೆ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ.
“ನಾನೊಬ್ಬ ಪಕ್ಷದ ಸಿಪಾಯಿ, ಪಕ್ಷಕ್ಕಾಗಿ ಎಲ್ಲದಕ್ಕೂ ಸಿದ್ಧ” ಎಂದು ನಾಗೇಂದ್ರ ಅವರು ಹೇಳಿದ್ದಾರೆ ಎಂದು ಡಿಕೆಶಿ ತಿಳಿಸಿದ್ದು, ರಾಜೀನಾಮೆ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡಿಲ್ಲ.
ದೆಹಲಿಯಿಂದ ಮರಳುತ್ತಿರುವ ಸಚಿವ ಬಿ. ನಾಗೇಂದ್ರ ಅವರು ಮಾಧ್ಯಮಗಳ ಮುಂದೆ ಏನು ಹೇಳಲಿದ್ದಾರೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.
ರಾಜೀನಾಮೆ ಖಚಿತವೇ? ಅಥವಾ ಕೇವಲ ವದಂತಿಯೇ? ಮುಂದಿನ ಸ್ಪಷ್ಟನೆಗೆ ಕಾಯಬೇಕಿದೆ.
#BNagendra #DKShivakumar #KarnatakaPolitics #KarnatakaNews #BreakingNews #Congress #Bengaluru #Karnataka #PoliticalNews #KannadaNews #ASNNews24Kannada #NewsUpdate #indianewshindi
    user_AsnNews24Kannada
    AsnNews24Kannada
    Local News Reporter Bengaluru East, Bengaluru Urban•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.