logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

CIT ಗುಬ್ಬಿ ನಿರ್ದೇಶಕ ಡಾ. ಸುರೇಶ್ ಡಿ.ಎಸ್. ಅವರಿಗೆ ಪ್ರತಿಷ್ಠಿತ ‘ಎಮಿನೆಂಟ್ ಇಂಜಿನಿಯರ್ ಅವಾರ್ಡ್’ ’ಗುಬ್ಬಿ: ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ (CIT), ಗುಬ್ಬಿಯ ನಿರ್ದೇಶಕ ಡಾ. ಸುರೇಶ್ ಡಿ.ಎಸ್. ಅವರಿಗೆ ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ), ಕರ್ನಾಟಕ ರಾಜ್ಯ ಕೇಂದ್ರದ ವತಿಯಿಂದ ಪ್ರತಿಷ್ಠಿತ ‘ಎಮಿನೆಂಟ್ ಇಂಜಿನಿಯರ್ ಅವಾರ್ಡ್’ ನೀಡಿ ಗೌರವಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಇಂಜಿನಿಯರ್ಸ್ ಡೇ ಕಾರ್ಯಕ್ರಮದ ಅಂಗವಾಗಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಡಾ. ಸುರೇಶ್ ಡಿ.ಎಸ್. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು. ಇಂಜಿನಿಯರಿಂಗ್ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಡಾ. ಸುರೇಶ್ ಡಿ.ಎಸ್. ಅವರು ಸಲ್ಲಿಸಿರುವ ಮಹತ್ವದ ಸೇವೆ, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಹಾಗೂ ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡಿರುವ ವಿವಿಧ ಕಾರ್ಯಗಳನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಡಾ. ಸುರೇಶ್ ಡಿ.ಎಸ್. ಅವರಿಗೆ ‘ಎಮಿನೆಂಟ್ ಇಂಜಿನಿಯರ್ ಅವಾರ್ಡ್’ ದೊರೆತಿರುವುದು ಗುಬ್ಬಿಯ ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯಕ್ಕೆ ಹಾಗೂ ತುಮಕೂರು ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ.

23 hrs ago
user_ಪ್ರಸನ್ನ ದೊಡ್ಡಗುಣಿ
ಪ್ರಸನ್ನ ದೊಡ್ಡಗುಣಿ
ಗುಬ್ಬಿ, ತುಮಕೂರು, ಕರ್ನಾಟಕ•
23 hrs ago
c4b18c95-5ed7-410a-a5a9-00fbe88e9b81

CIT ಗುಬ್ಬಿ ನಿರ್ದೇಶಕ ಡಾ. ಸುರೇಶ್ ಡಿ.ಎಸ್. ಅವರಿಗೆ ಪ್ರತಿಷ್ಠಿತ ‘ಎಮಿನೆಂಟ್ ಇಂಜಿನಿಯರ್ ಅವಾರ್ಡ್’ ’ಗುಬ್ಬಿ: ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ (CIT), ಗುಬ್ಬಿಯ ನಿರ್ದೇಶಕ ಡಾ. ಸುರೇಶ್ ಡಿ.ಎಸ್. ಅವರಿಗೆ ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ), ಕರ್ನಾಟಕ ರಾಜ್ಯ ಕೇಂದ್ರದ ವತಿಯಿಂದ ಪ್ರತಿಷ್ಠಿತ ‘ಎಮಿನೆಂಟ್ ಇಂಜಿನಿಯರ್ ಅವಾರ್ಡ್’ ನೀಡಿ ಗೌರವಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಇಂಜಿನಿಯರ್ಸ್ ಡೇ ಕಾರ್ಯಕ್ರಮದ ಅಂಗವಾಗಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಡಾ. ಸುರೇಶ್ ಡಿ.ಎಸ್. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು. ಇಂಜಿನಿಯರಿಂಗ್ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಡಾ. ಸುರೇಶ್ ಡಿ.ಎಸ್. ಅವರು ಸಲ್ಲಿಸಿರುವ ಮಹತ್ವದ ಸೇವೆ, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಹಾಗೂ ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡಿರುವ ವಿವಿಧ ಕಾರ್ಯಗಳನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಡಾ. ಸುರೇಶ್ ಡಿ.ಎಸ್. ಅವರಿಗೆ ‘ಎಮಿನೆಂಟ್ ಇಂಜಿನಿಯರ್ ಅವಾರ್ಡ್’ ದೊರೆತಿರುವುದು ಗುಬ್ಬಿಯ ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯಕ್ಕೆ ಹಾಗೂ ತುಮಕೂರು ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ.

More news from ಕರ್ನಾಟಕ and nearby areas
  • ತಮಾಷೆ ಹಾಗೂ ಆರೋಗ್ಯಕರವಾದಂತ ವಿಡಿಯೋ ಇದು ನೋಡಿ #onlinetv24x7
    1
    ತಮಾಷೆ ಹಾಗೂ ಆರೋಗ್ಯಕರವಾದಂತ ವಿಡಿಯೋ ಇದು ನೋಡಿ  #onlinetv24x7
    user_Onlinetv24x7
    Onlinetv24x7
    ತುಮಕೂರು, ತುಮಕೂರು, ಕರ್ನಾಟಕ•
    23 hrs ago
  • ಹುಳಿಯಾರಿನ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
    1
    ಹುಳಿಯಾರಿನ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    29 min ago
  • ‘ಮಾನವೀಯ ನೆರವಿಗೆ ಕೃತಜ್ಞತೆಯಾಗಿ ನಾವೇ ಜಿಪಿಎ ಕೊಟ್ಟಿದ್ದೇವೆ’: ಅಕ್ರಮ ಖಾತೆ ಆರೋಪ ತಳ್ಳಿಹಾಕಿದ ಕುಟುಂಬಸ್ಥರು, ದಾಖಲೆ ಸಮೇತ ರಮೇಶ್ ಸ್ಪಷ್ಟನೆ. ​ತುರುವೇಕೆರೆ: ರೈತ ಸಂಘ ತನ್ನ ವಿರುದ್ಧ ಮಾಡಿರುವ ಅಕ್ರಮ ಖಾತೆ ವರ್ಗಾವಣೆ ಆರೋಪ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದ ಹಳೆಯ ರಾಜಕೀಯ ದ್ವೇಷದಿಂದ ಸುಳ್ಳು ವಿವಾದ ಸೃಷ್ಟಿಸಲಾಗುತ್ತಿದೆ ಎಂದು ನಾಗೇಗೌಡನಪಾಳ್ಯದ ಮಾಜಿ ವಿಎಸ್‌ಎಸ್‌ಎನ್ ಅಧ್ಯಕ್ಷ ರಮೇಶ್ ಪಿ. ಸ್ಪಷ್ಟಪಡಿಸಿದ್ದಾರೆ. ​ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಮೀನಿನ ಮೂಲ ದಾಖಲೆಗಳು ಹಾಗೂ ಆಸ್ಪತ್ರೆಯ ಚಿಕಿತ್ಸೆಯ ಫೋಟೋಗಳನ್ನು ಪ್ರದರ್ಶಿಸಿ ಅವರು ಮಾತನಾಡಿದರು. ​ಮಾನವೀಯ ನೆರವು ಮತ್ತು ಕಾನೂನುಬದ್ಧ ಒಪ್ಪಂದ: ಮುಹಮ್ಮದ್ ಗೌಸ್ ಎಂಬುವವರಿಗೆ ಸರ್ಕಾರದಿಂದ ಸುಮಾರು 3 ಎಕರೆ ದರಖಾಸ್ತು ಜಮೀನು ಮಂಜೂರಾಗಿತ್ತು. 1991–92ರಲ್ಲಿ ಅರ್ಜಿ ಸಲ್ಲಿಸಿ, 2008ರಲ್ಲಿ ಸಾಗುವಳಿ ಚೀಟಿ ಪಡೆದು, 2015ರಲ್ಲಿ ಖಾತೆ ಮಾಡಿಸಿಕೊಂಡು ಅವರೇ ಸಾಗುವಳಿ ಅನುಭವದಲ್ಲಿದ್ದರು. 80 ವರ್ಷ ದಾಟಿದ್ದ ಮುಹಮ್ಮದ್ ಗೌಸ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ಸಂದರ್ಭದಲ್ಲಿ ಕುಟುಂಬದ ಕೋರಿಕೆಯಂತೆ ಮಾನವೀಯ ನೆಲೆಯಲ್ಲಿ ಸಂಪೂರ್ಣ ವೈದ್ಯಕೀಯ ವೆಚ್ಚ ಹಾಗೂ ಆರ್ಥಿಕ ನೆರವು ನೀಡಲಾಗಿತ್ತು. ಆ ಸಮಯದಲ್ಲಿ ನಿಯಮಾನುಸಾರ ಒಪ್ಪಂದ (ಅಗ್ರಿಮೆಂಟ್) ಮಾಡಿಕೊಳ್ಳಲಾಗಿತ್ತು ಎಂದು ರಮೇಶ್ ವಿವರಿಸಿದರು. ​ಮುಹಮ್ಮದ್ ಗೌಸ್ ಅವರ ನಿಧನದ ಬಳಿಕ, ತಮಗೆ ಯಾವುದೇ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಅವರ ಪತ್ನಿ ಮುಮ್ತಾಜ್ ಹಾಗೂ ಐವರು ಮಕ್ಕಳು ಸ್ವಇಚ್ಛೆಯಿಂದ ಕಾನೂನುಬದ್ಧವಾಗಿ ತಮ್ಮ ಹೆಸರಿಗೆ ಜನರಲ್ ಪವರ್ ಆಫ್ ಅಟಾರ್ನಿ (GPA) ನೋಂದಣಿ ಮಾಡಿಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ​ಕಣ್ಣೀರಿಟ್ಟ ಮುಹಮ್ಮದ್ ಗೌಸ್ ಕುಟುಂಬಸ್ಥರು: ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮುಹಮ್ಮದ್ ಗೌಸ್ ಅವರ ಪತ್ನಿ ಮುಮ್ತಾಜ್ ಭಾವುಕರಾಗಿ ಕಣ್ಣೀರು ಹಾಕುತ್ತಾ ಮಾತನಾಡಿ, "ಸುಮಾರು 20 ವರ್ಷಗಳಿಂದ ನಾವೇ ಜಮೀನಿನ ಸ್ವಾಧೀನ ಅನುಭವದಲ್ಲಿದ್ದೇವೆ. ಸರ್ಕಾರದ ಸಾಗುವಳಿ ಚೀಟಿ, ಖಾತೆ ಸೇರಿದಂತೆ ಎಲ್ಲಾ ಸಕ್ರಮ ದಾಖಲೆಗಳು ನಮ್ಮ ಬಳಿಯೇ ಇವೆ. ನಮ್ಮ ಸಂಕಷ್ಟದ ಪರಿಸ್ಥಿತಿಯಲ್ಲಿ ರಮೇಶ್ ಅವರು ಚಿಕಿತ್ಸೆಗೆ ನೆರವಾಗಿ ಜೀವ ಉಳಿಸಲು ಪ್ರಯತ್ನಿಸಿದರು. ಅವರಿಗೆ ಮೋಸವಾಗಬಾರದೆಂದು ಇಡೀ ಕುಟುಂಬ ಒಟ್ಟಾಗಿ ಜಿಪಿಎ ಮಾಡಿಕೊಟ್ಟಿದ್ದೇವೆ. ಇದರಲ್ಲಿ ಯಾರ ಒತ್ತಾಯವೂ ಇಲ್ಲ, ಯಾವುದೇ ಅಕ್ರಮವೂ ನಡೆದಿಲ್ಲ" ಎಂದು ತಿಳಿಸಿದರು. ​ಎಲ್ಲವೂ ಕಾನೂನುಬದ್ಧ, ತನಿಖೆಗೆ ಸಿದ್ಧ: ತಹಶೀಲ್ದಾರ್ ಅವರ ಆದೇಶದಂತೆ ತಾಲೂಕು ಸರ್ವೆ ಇಲಾಖೆಯಿಂದ ಜಾಗದ ಅಧಿಕೃತ ನಕ್ಷೆ (ಸ್ಕೆಚ್) ಮಾಡಿಸಲಾಗಿದೆ. ಜಮೀನು ನೀಡಿದ ಕುಟುಂಬಕ್ಕಾಗಲಿ ಅಥವಾ ಅಕ್ಕಪಕ್ಕದ ರೈತರಿಗಾಗಲಿ ಯಾವುದೇ ತಕರಾರಿಲ್ಲದಿರುವಾಗ, ಕೆಲವರು ರೈತ ಸಂಘದ ಹೆಸರನ್ನು ಮುಂದಿಟ್ಟುಕೊಂಡು ರಾಜಕೀಯ ದುರುದ್ದೇಶದಿಂದ ತೇಜೋವಧೆ ಮಾಡುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ತಾನು ಸರ್ಕಾರಕ್ಕಾಗಲಿ, ಜನರಿಗಾಗಲಿ ನಯಾಪೈಸೆ ಮೋಸ ಮಾಡಿಲ್ಲ. ಈ ವಿಚಾರದಲ್ಲಿ ಎಂತಹ ತನಿಖೆ ಎದುರಿಸಲೂ ಸಿದ್ಧ ಎಂದು ರಮೇಶ್ ಸವಾಲು ಹಾಕಿದರು. ​ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ಗೌಸ್ ಅವರ ಪತ್ನಿ ಮುಮ್ತಾಜ್ ಬೀ ಹಾಗೂ ಪುತ್ರ ನೂರುಲ್ಲಾ ಉಪಸ್ಥಿತರಿದ್ದರು.
    4
    ‘ಮಾನವೀಯ ನೆರವಿಗೆ ಕೃತಜ್ಞತೆಯಾಗಿ ನಾವೇ ಜಿಪಿಎ ಕೊಟ್ಟಿದ್ದೇವೆ’: ಅಕ್ರಮ ಖಾತೆ ಆರೋಪ ತಳ್ಳಿಹಾಕಿದ ಕುಟುಂಬಸ್ಥರು, ದಾಖಲೆ ಸಮೇತ ರಮೇಶ್ ಸ್ಪಷ್ಟನೆ.
​ತುರುವೇಕೆರೆ: ರೈತ ಸಂಘ ತನ್ನ ವಿರುದ್ಧ ಮಾಡಿರುವ ಅಕ್ರಮ ಖಾತೆ ವರ್ಗಾವಣೆ ಆರೋಪ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದ ಹಳೆಯ ರಾಜಕೀಯ ದ್ವೇಷದಿಂದ ಸುಳ್ಳು ವಿವಾದ ಸೃಷ್ಟಿಸಲಾಗುತ್ತಿದೆ ಎಂದು ನಾಗೇಗೌಡನಪಾಳ್ಯದ ಮಾಜಿ ವಿಎಸ್‌ಎಸ್‌ಎನ್ ಅಧ್ಯಕ್ಷ ರಮೇಶ್ ಪಿ. ಸ್ಪಷ್ಟಪಡಿಸಿದ್ದಾರೆ.
​ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಮೀನಿನ ಮೂಲ ದಾಖಲೆಗಳು ಹಾಗೂ ಆಸ್ಪತ್ರೆಯ ಚಿಕಿತ್ಸೆಯ ಫೋಟೋಗಳನ್ನು ಪ್ರದರ್ಶಿಸಿ ಅವರು ಮಾತನಾಡಿದರು.
​ಮಾನವೀಯ ನೆರವು ಮತ್ತು ಕಾನೂನುಬದ್ಧ ಒಪ್ಪಂದ:
ಮುಹಮ್ಮದ್ ಗೌಸ್ ಎಂಬುವವರಿಗೆ ಸರ್ಕಾರದಿಂದ ಸುಮಾರು 3 ಎಕರೆ ದರಖಾಸ್ತು ಜಮೀನು ಮಂಜೂರಾಗಿತ್ತು. 1991–92ರಲ್ಲಿ ಅರ್ಜಿ ಸಲ್ಲಿಸಿ, 2008ರಲ್ಲಿ ಸಾಗುವಳಿ ಚೀಟಿ ಪಡೆದು, 2015ರಲ್ಲಿ ಖಾತೆ ಮಾಡಿಸಿಕೊಂಡು ಅವರೇ ಸಾಗುವಳಿ ಅನುಭವದಲ್ಲಿದ್ದರು. 80 ವರ್ಷ ದಾಟಿದ್ದ ಮುಹಮ್ಮದ್ ಗೌಸ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ಸಂದರ್ಭದಲ್ಲಿ ಕುಟುಂಬದ ಕೋರಿಕೆಯಂತೆ ಮಾನವೀಯ ನೆಲೆಯಲ್ಲಿ ಸಂಪೂರ್ಣ ವೈದ್ಯಕೀಯ ವೆಚ್ಚ ಹಾಗೂ ಆರ್ಥಿಕ ನೆರವು ನೀಡಲಾಗಿತ್ತು. ಆ ಸಮಯದಲ್ಲಿ ನಿಯಮಾನುಸಾರ ಒಪ್ಪಂದ (ಅಗ್ರಿಮೆಂಟ್) ಮಾಡಿಕೊಳ್ಳಲಾಗಿತ್ತು ಎಂದು ರಮೇಶ್ ವಿವರಿಸಿದರು.
​ಮುಹಮ್ಮದ್ ಗೌಸ್ ಅವರ ನಿಧನದ ಬಳಿಕ, ತಮಗೆ ಯಾವುದೇ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಅವರ ಪತ್ನಿ ಮುಮ್ತಾಜ್ ಹಾಗೂ ಐವರು ಮಕ್ಕಳು ಸ್ವಇಚ್ಛೆಯಿಂದ ಕಾನೂನುಬದ್ಧವಾಗಿ ತಮ್ಮ ಹೆಸರಿಗೆ ಜನರಲ್ ಪವರ್ ಆಫ್ ಅಟಾರ್ನಿ (GPA) ನೋಂದಣಿ ಮಾಡಿಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
​ಕಣ್ಣೀರಿಟ್ಟ ಮುಹಮ್ಮದ್ ಗೌಸ್ ಕುಟುಂಬಸ್ಥರು:
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮುಹಮ್ಮದ್ ಗೌಸ್ ಅವರ ಪತ್ನಿ ಮುಮ್ತಾಜ್ ಭಾವುಕರಾಗಿ ಕಣ್ಣೀರು ಹಾಕುತ್ತಾ ಮಾತನಾಡಿ, "ಸುಮಾರು 20 ವರ್ಷಗಳಿಂದ ನಾವೇ ಜಮೀನಿನ ಸ್ವಾಧೀನ ಅನುಭವದಲ್ಲಿದ್ದೇವೆ. ಸರ್ಕಾರದ ಸಾಗುವಳಿ ಚೀಟಿ, ಖಾತೆ ಸೇರಿದಂತೆ ಎಲ್ಲಾ ಸಕ್ರಮ ದಾಖಲೆಗಳು ನಮ್ಮ ಬಳಿಯೇ ಇವೆ. ನಮ್ಮ ಸಂಕಷ್ಟದ ಪರಿಸ್ಥಿತಿಯಲ್ಲಿ ರಮೇಶ್ ಅವರು ಚಿಕಿತ್ಸೆಗೆ ನೆರವಾಗಿ ಜೀವ ಉಳಿಸಲು ಪ್ರಯತ್ನಿಸಿದರು. ಅವರಿಗೆ ಮೋಸವಾಗಬಾರದೆಂದು ಇಡೀ ಕುಟುಂಬ ಒಟ್ಟಾಗಿ ಜಿಪಿಎ ಮಾಡಿಕೊಟ್ಟಿದ್ದೇವೆ. ಇದರಲ್ಲಿ ಯಾರ ಒತ್ತಾಯವೂ ಇಲ್ಲ, ಯಾವುದೇ ಅಕ್ರಮವೂ ನಡೆದಿಲ್ಲ" ಎಂದು ತಿಳಿಸಿದರು.
​ಎಲ್ಲವೂ ಕಾನೂನುಬದ್ಧ, ತನಿಖೆಗೆ ಸಿದ್ಧ:
ತಹಶೀಲ್ದಾರ್ ಅವರ ಆದೇಶದಂತೆ ತಾಲೂಕು ಸರ್ವೆ ಇಲಾಖೆಯಿಂದ ಜಾಗದ ಅಧಿಕೃತ ನಕ್ಷೆ (ಸ್ಕೆಚ್) ಮಾಡಿಸಲಾಗಿದೆ. ಜಮೀನು ನೀಡಿದ ಕುಟುಂಬಕ್ಕಾಗಲಿ ಅಥವಾ ಅಕ್ಕಪಕ್ಕದ ರೈತರಿಗಾಗಲಿ ಯಾವುದೇ ತಕರಾರಿಲ್ಲದಿರುವಾಗ, ಕೆಲವರು ರೈತ ಸಂಘದ ಹೆಸರನ್ನು ಮುಂದಿಟ್ಟುಕೊಂಡು ರಾಜಕೀಯ ದುರುದ್ದೇಶದಿಂದ ತೇಜೋವಧೆ ಮಾಡುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ತಾನು ಸರ್ಕಾರಕ್ಕಾಗಲಿ, ಜನರಿಗಾಗಲಿ ನಯಾಪೈಸೆ ಮೋಸ ಮಾಡಿಲ್ಲ. ಈ ವಿಚಾರದಲ್ಲಿ ಎಂತಹ ತನಿಖೆ ಎದುರಿಸಲೂ ಸಿದ್ಧ ಎಂದು ರಮೇಶ್ ಸವಾಲು ಹಾಕಿದರು.
​ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ಗೌಸ್ ಅವರ ಪತ್ನಿ ಮುಮ್ತಾಜ್ ಬೀ ಹಾಗೂ ಪುತ್ರ ನೂರುಲ್ಲಾ ಉಪಸ್ಥಿತರಿದ್ದರು.
    user_Manohara
    Manohara
    Local News Reporter ತುರುವೇಕೆರೆ, ತುಮಕೂರು, ಕರ್ನಾಟಕ•
    5 hrs ago
  • ಕೊರಟಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅಸ್ವಸ್ಥ : ತಾಲ್ಲೂಕು ಅಧಿಕಾರಿ ನಿಂದಿಸಿದ್ದಕ್ಕೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯಾಘಾತ!!! *ಕೊರಟಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅಸ್ವಸ್ಥ : ತಾಲ್ಲೂಕು ಅಧಿಕಾರಿ ನಿಂದಿಸಿದ್ದಕ್ಕೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯಾಘಾತ* *ಕೊರಟಗೆರೆ, ಸೆ.16:* ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಕರಕಲ್ಲಘಟ್ಟ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ರಾಮಕ್ಕ (BLO) ಅವರು ಕರ್ತವ್ಯದ ವೇಳೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯ ತೊಂದರೆಗೆ ಒಳಗಾಗಿರುವ ಘಟನೆ ನಡೆದಿದೆ. ಹೊಳವನಹಳ್ಳಿ 1ನೇ ಬ್ಲಾಕ್ ವ್ಯಾಪ್ತಿಯಲ್ಲಿ ಬಿ.ಎಲ್.ಓ ಆಗಿ ಕೆಲಸ ನಿರ್ವಹಿಸುತ್ತಿದ್ದ ರಾಮಕ್ಕ ಅವರು ನಿನ್ನೆ ದಿನಾಂಕ 15-09-2026 ರಂದು ಕೈಬಿಟ್ಟ ಮತದಾರರಿಗೆ ನೋಟಿಸ್ ನೀಡುವ ಕಾರ್ಯದಲ್ಲಿದ್ದರು. ಈ ವೇಳೆ ತಾಲ್ಲೂಕು ನಿರ್ವಹಣಾಧಿಕಾರಿ ಅಪೂರ್ವ ಅನಂತರಾಮು ಅವರು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ರಾಮಕ್ಕ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಹೊಳವನಹಳ್ಳಿಯ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇ.ಸಿ.ಜಿ ಪರೀಕ್ಷೆಯಲ್ಲಿ ಹೃದಯದ ತೊಂದರೆ ಇರುವುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ. ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದರೆ ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ಅವರು ಇನ್ನೂ ಕೊರಟಗೆರೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ತಾಲ್ಲೂಕು ಅಧಿಕಾರಿಗಳೇ ನೇರ ಹೊಣೆ ಎಂದು ಅಂಗನವಾಡಿ ನೌಕರರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ರಾಮಕ್ಕ ಅವರಿಗೆ ಏನಾದರೂ ಅನಾಹುತವಾದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದೆ. ಹಾಗೂ ಇನ್ನು ಮುಂದೆ ಯಾವುದೇ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ರೀತಿ ಮಾನಸಿಕ ಕಿರುಕುಳ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.
    4
    ಕೊರಟಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅಸ್ವಸ್ಥ : ತಾಲ್ಲೂಕು ಅಧಿಕಾರಿ ನಿಂದಿಸಿದ್ದಕ್ಕೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯಾಘಾತ!!! 
*ಕೊರಟಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅಸ್ವಸ್ಥ : ತಾಲ್ಲೂಕು ಅಧಿಕಾರಿ ನಿಂದಿಸಿದ್ದಕ್ಕೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯಾಘಾತ*
*ಕೊರಟಗೆರೆ, ಸೆ.16:* ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಕರಕಲ್ಲಘಟ್ಟ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ರಾಮಕ್ಕ (BLO) ಅವರು ಕರ್ತವ್ಯದ ವೇಳೆ ಬಿ.ಪಿ ಲೋ ಆಗಿ ಕುಸಿದುಬಿದ್ದು ಹೃದಯ ತೊಂದರೆಗೆ ಒಳಗಾಗಿರುವ ಘಟನೆ ನಡೆದಿದೆ.
ಹೊಳವನಹಳ್ಳಿ 1ನೇ ಬ್ಲಾಕ್ ವ್ಯಾಪ್ತಿಯಲ್ಲಿ ಬಿ.ಎಲ್.ಓ ಆಗಿ ಕೆಲಸ ನಿರ್ವಹಿಸುತ್ತಿದ್ದ ರಾಮಕ್ಕ ಅವರು ನಿನ್ನೆ ದಿನಾಂಕ 15-09-2026 ರಂದು ಕೈಬಿಟ್ಟ ಮತದಾರರಿಗೆ ನೋಟಿಸ್ ನೀಡುವ ಕಾರ್ಯದಲ್ಲಿದ್ದರು. ಈ ವೇಳೆ ತಾಲ್ಲೂಕು ನಿರ್ವಹಣಾಧಿಕಾರಿ ಅಪೂರ್ವ ಅನಂತರಾಮು ಅವರು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ರಾಮಕ್ಕ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ಹೊಳವನಹಳ್ಳಿಯ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇ.ಸಿ.ಜಿ ಪರೀಕ್ಷೆಯಲ್ಲಿ ಹೃದಯದ ತೊಂದರೆ ಇರುವುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ. ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದರೆ ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ಅವರು ಇನ್ನೂ ಕೊರಟಗೆರೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ತಾಲ್ಲೂಕು ಅಧಿಕಾರಿಗಳೇ ನೇರ ಹೊಣೆ ಎಂದು ಅಂಗನವಾಡಿ ನೌಕರರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ರಾಮಕ್ಕ ಅವರಿಗೆ ಏನಾದರೂ ಅನಾಹುತವಾದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದೆ. ಹಾಗೂ ಇನ್ನು ಮುಂದೆ ಯಾವುದೇ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ರೀತಿ ಮಾನಸಿಕ ಕಿರುಕುಳ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.
    user_ವಿಜಯ್ ಶಂಕರ್
    ವಿಜಯ್ ಶಂಕರ್
    Local News Reporter ಕೊರಟಗೆರೆ, ತುಮಕೂರು, ಕರ್ನಾಟಕ•
    7 hrs ago
  • ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಚಿರತೆಗಳು: ಆತಂಕದಲ್ಲಿ ರೈತರು MADHUGIRI ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡ ಮಾಲೂರು ಭೂದೇನಹಳ್ಳಿ ವ್ಯಾಪ್ತಿಯಲ್ಲಿ ನಿತ್ಯ ಚಿರತೆಗಳು ಕಂಡುಬರುತ್ತಿದ್ದು ರೈತರು ಆತಂಕಕೊಳಗಾಗಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ತುರ್ತಾಗಿ ಬೋನು ಅಳವಡಿಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
    1
    ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಚಿರತೆಗಳು: ಆತಂಕದಲ್ಲಿ ರೈತರು MADHUGIRI 
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡ ಮಾಲೂರು ಭೂದೇನಹಳ್ಳಿ ವ್ಯಾಪ್ತಿಯಲ್ಲಿ ನಿತ್ಯ ಚಿರತೆಗಳು ಕಂಡುಬರುತ್ತಿದ್ದು ರೈತರು ಆತಂಕಕೊಳಗಾಗಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ತುರ್ತಾಗಿ ಬೋನು ಅಳವಡಿಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
    user_Madhugiri news
    Madhugiri news
    Local News Reporter ಮಧುಗಿರಿ, ತುಮಕೂರು, ಕರ್ನಾಟಕ•
    12 hrs ago
  • ಜೆಡಿಎಸ್ ತೆಕ್ಕಗೆ ಬಿಳುಗುಂಬ ಹಾಲು ಉತ್ಪಾದಕರ ಸಂಘ, ಅಧ್ಯಕ್ಷರಾಗಿ ಕಿರಣ್ ಅವಿರೋಧ ಆಯ್ಕೆ : ರಾಮನಗರ -- ಕಳೆದ 18 ತಿಂಗಳುಗಳಿಂದ ಸುಪರ್ ಸೀಡ್ ಗೆ ಒಳಗಾದಿದ್ದ ಬಿಳಿಗುಂಬ ಹಾಲು ಉತ್ಪಾದಕರ ಸಹಕಾರ ಸಂಘದ ಅಡಳಿತ ಜೆಡಿಎಸ್ ತೆಕ್ಕೆಗೆ ಜಾರಿದೆ. ಸಂಘದ 9 ನಿರ್ದೇಶಕ ಸ್ಥಾನಗಳನ್ನು ಗೆಲ್ಲವು ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದ ಜುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಕಿರಣ್ ಹಾಗೂ ಉಪಾಧ್ಯಕ್ಷರಾಗಿ ರಾಘವೇಂದ್ರ ಅವಿರೋಧವಾಗಿ ಆಯ್ಕೆಯಾದರು. ಇಂದು ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಜುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಚ ಸ್ಥಾನಕ್ಕೆ ಕಿರಣ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಇಬ್ಬರನ್ನು ವರತು ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಅಧಿಕಾರಿ ಕೆ.ಟಿ.ಉಮೇಶ್ ಅದ್ಯಕ್ಷರಾಗಿ ಕಿರಣ್ ಹಾಗೂ ಉಪಧ್ಯಾಕ್ಷರಾಗಿ ರಾಘವೇಂದ್ರ ಅವರ ಅವಿರೋದ ಆಯ್ಕೆಯನ್ನು ಘೋಷಣೆ ಮಾಡಿದರು. ನೂತನ ಅಧ್ಯಕ್ಷ ಕಿರಣ್ ಮಾಧ್ಯಮಗಳೊಂದಿಗೆ ಮಾತನಾಡಿ ಕಳೆದ 18 ತಿಂಗಳಿಂದ ಸುಪರ್ ಸೀಡ್ ಒಳಗಾಗಿದ್ದ ಬಿಳುಗುಂಬ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಎಲ್ಲ 9 ನಿರ್ದೇಶಕರ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಹಾಲು ಉತ್ಪಾದಕರಿಗೆ ಧನ್ಯವಾದ ತಿಳಿಸಿದರು, ಹಾಲು ಉತ್ಪಾದಕರಿಗೆ ಯಾವುದೇ ಸಮಸ್ಯೆಯಾಗದಂತೆ ಅವರ ಹಿತಕಾಯುವುದೇ ನಮ್ಮ ತಂಡದ ಮೊದಲ ಅದ್ಯತೆ. ಈಗಾಗಲೇ ದಿನಕ್ಕೆ 800 ರಿಂದ 900 ಲೀಟರ್‌ ಹಾಲು ಸಂಗ್ರಹವಾಗುತ್ತಿದ್ದು ಮುಂದಿನ ದಿನಗಳಲ್ಲಿ 1500 ರಿಂದ 2000 ಲೀಟರ್ ಹಾಲು ಸಂಗ್ರಹ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು ಹಾಲು ಉತ್ಪಾದಕರ ಉನ್ನತಿಗಾಗಿ ಶ್ರಮಿಸುವ ವಿಶ್ವಾಸ ವ್ಯಕ್ತಪಡಿಸಿದರು‌ ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನೂತನ ನಿರ್ದೇಶಕರಾದ ಸುರೇಶ್, ಆನಂದ್, ಶೈಲಜಾ, ವೆಂಕಟೇಶ್, ಮಂಗಳಮ್ಮ, ಸರೋಜಮ್ಮ, ತಮ್ಮಯ್ಯ ಭಾಗಿಯಾಗಿದ್ದರು. ಕಿರಣ್ ಎನ್. ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಜೆಡಿಎಸ್‌ ಮುಖಂಡರು ಕಾರ್ಯಕರ್ತರು ಹಾಗೂ ಹಾಲು ಉತ್ಪಾದಕರು ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಮಾಜಿ ಸದಸ್ಯರಾದ ಶಾಂತಪ್ಪ, ಕೃಷ್ಣಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಲಕ್ಷ್ಮಿನರಸಿಂಹಯ್ಯ, ಶಿವರಾಜು, ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ಹೇಮಂತ್, ಹಾಲು ಪರಿವಿಕ್ಷಕ ವಾಸು, ಸಹಾಯಕ ರಾಜಣ್ಣ, ಮುಖಂಡರಾದ ಜಿ.ಟಿ.ಕೃಷ್ಣೇಗೌಡ, ನರೇಂದ್ರ, ಜಯಕುಮಾರ್, ಕೆಂಪರಾಜು, ಕೃಷ್ಣಪ್ಪ, ಧನಂಜಯ್ಯ, ರಮೇಶ್, ಶಿವಮಾದಯ್ಯ, ಅರೇಹಳ್ಳಿ ಶಿವರಾಮಯ್ಯ, ಮೂರ್ತಿ ಸೇರಿದಂತೆ ಬಿಳಗುಂಬ ಗ್ರಾಮಸ್ಥರ ಇದ್ದರು.
    1
    ಜೆಡಿಎಸ್ ತೆಕ್ಕಗೆ ಬಿಳುಗುಂಬ ಹಾಲು ಉತ್ಪಾದಕರ ಸಂಘ, ಅಧ್ಯಕ್ಷರಾಗಿ ಕಿರಣ್ ಅವಿರೋಧ ಆಯ್ಕೆ :
ರಾಮನಗರ -- ಕಳೆದ 18 ತಿಂಗಳುಗಳಿಂದ ಸುಪರ್ ಸೀಡ್ ಗೆ ಒಳಗಾದಿದ್ದ ಬಿಳಿಗುಂಬ ಹಾಲು ಉತ್ಪಾದಕರ ಸಹಕಾರ ಸಂಘದ ಅಡಳಿತ ಜೆಡಿಎಸ್ ತೆಕ್ಕೆಗೆ ಜಾರಿದೆ. ಸಂಘದ 9 ನಿರ್ದೇಶಕ ಸ್ಥಾನಗಳನ್ನು ಗೆಲ್ಲವು ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದ ಜುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಕಿರಣ್ ಹಾಗೂ ಉಪಾಧ್ಯಕ್ಷರಾಗಿ ರಾಘವೇಂದ್ರ ಅವಿರೋಧವಾಗಿ ಆಯ್ಕೆಯಾದರು. ಇಂದು ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಜುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಚ ಸ್ಥಾನಕ್ಕೆ ಕಿರಣ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಇಬ್ಬರನ್ನು ವರತು ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಅಧಿಕಾರಿ ಕೆ.ಟಿ.ಉಮೇಶ್  ಅದ್ಯಕ್ಷರಾಗಿ ಕಿರಣ್ ಹಾಗೂ ಉಪಧ್ಯಾಕ್ಷರಾಗಿ ರಾಘವೇಂದ್ರ ಅವರ ಅವಿರೋದ ಆಯ್ಕೆಯನ್ನು ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಕಿರಣ್ ಮಾಧ್ಯಮಗಳೊಂದಿಗೆ ಮಾತನಾಡಿ ಕಳೆದ 18 ತಿಂಗಳಿಂದ ಸುಪರ್ ಸೀಡ್ ಒಳಗಾಗಿದ್ದ ಬಿಳುಗುಂಬ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇತ್ತೀಚಿಗೆ ನಡೆದ   ಚುನಾವಣೆಯಲ್ಲಿ ಎಲ್ಲ 9 ನಿರ್ದೇಶಕರ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಹಾಲು ಉತ್ಪಾದಕರಿಗೆ ಧನ್ಯವಾದ ತಿಳಿಸಿದರು, 
ಹಾಲು ಉತ್ಪಾದಕರಿಗೆ ಯಾವುದೇ ಸಮಸ್ಯೆಯಾಗದಂತೆ ಅವರ ಹಿತಕಾಯುವುದೇ ನಮ್ಮ ತಂಡದ ಮೊದಲ ಅದ್ಯತೆ. ಈಗಾಗಲೇ ದಿನಕ್ಕೆ 800 ರಿಂದ 900 ಲೀಟರ್‌ ಹಾಲು ಸಂಗ್ರಹವಾಗುತ್ತಿದ್ದು ಮುಂದಿನ ದಿನಗಳಲ್ಲಿ 1500  ರಿಂದ 2000 ಲೀಟರ್ ಹಾಲು ಸಂಗ್ರಹ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು ಹಾಲು ಉತ್ಪಾದಕರ ಉನ್ನತಿಗಾಗಿ ಶ್ರಮಿಸುವ ವಿಶ್ವಾಸ ವ್ಯಕ್ತಪಡಿಸಿದರು‌
ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನೂತನ ನಿರ್ದೇಶಕರಾದ ಸುರೇಶ್, ಆನಂದ್, ಶೈಲಜಾ, ವೆಂಕಟೇಶ್, ಮಂಗಳಮ್ಮ, ಸರೋಜಮ್ಮ, ತಮ್ಮಯ್ಯ ಭಾಗಿಯಾಗಿದ್ದರು. ಕಿರಣ್ ಎನ್. ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಜೆಡಿಎಸ್‌ ಮುಖಂಡರು ಕಾರ್ಯಕರ್ತರು ಹಾಗೂ ಹಾಲು ಉತ್ಪಾದಕರು ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಮಾಜಿ ಸದಸ್ಯರಾದ ಶಾಂತಪ್ಪ, ಕೃಷ್ಣಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಲಕ್ಷ್ಮಿನರಸಿಂಹಯ್ಯ, ಶಿವರಾಜು, ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ಹೇಮಂತ್, ಹಾಲು ಪರಿವಿಕ್ಷಕ ವಾಸು, ಸಹಾಯಕ ರಾಜಣ್ಣ, ಮುಖಂಡರಾದ ಜಿ.ಟಿ.ಕೃಷ್ಣೇಗೌಡ, ನರೇಂದ್ರ, ಜಯಕುಮಾರ್, ಕೆಂಪರಾಜು, ಕೃಷ್ಣಪ್ಪ, ಧನಂಜಯ್ಯ, ರಮೇಶ್, ಶಿವಮಾದಯ್ಯ, ಅರೇಹಳ್ಳಿ ಶಿವರಾಮಯ್ಯ, ಮೂರ್ತಿ ಸೇರಿದಂತೆ ಬಿಳಗುಂಬ ಗ್ರಾಮಸ್ಥರ ಇದ್ದರು.
    user_ರಮೇಶ್.ಆರ್
    ರಮೇಶ್.ಆರ್
    ಚನ್ನಪಟ್ಟಣ, ರಾಮನಗರ, ಕರ್ನಾಟಕ•
    3 hrs ago
  • ಹಿಂದೂಗಳನ್ನ ಎರಡನೇ ದರ್ಜೆಯಲ್ಲಿ ನೋಡೋದು ಕಾಂಗ್ರೆಸ್ಸಿನ ರಕ್ತದಲ್ಲೇ ಬಂದಿದೆ ಹಿಂದೂಗಳನ್ನ ಎರಡನೇ ದರ್ಜೆಯಲ್ಲಿ ನೋಡೋದು ಕಾಂಗ್ರೆಸ್ಸಿನ ರಕ್ತದಲ್ಲೇ ಬಂದಿದೆ
    1
    ಹಿಂದೂಗಳನ್ನ ಎರಡನೇ 
ದರ್ಜೆಯಲ್ಲಿ ನೋಡೋದು 
ಕಾಂಗ್ರೆಸ್ಸಿನ ರಕ್ತದಲ್ಲೇ ಬಂದಿದೆ 
ಹಿಂದೂಗಳನ್ನ ಎರಡನೇ 
ದರ್ಜೆಯಲ್ಲಿ ನೋಡೋದು 
ಕಾಂಗ್ರೆಸ್ಸಿನ ರಕ್ತದಲ್ಲೇ ಬಂದಿದೆ
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ಇಂದು ತಿಪಟೂರಿನಲ್ಲಿ ನಡೆದ ರೈತರ ಪ್ರತಿಭಟನೆ ಸಭೆಗೆ ಜೆಡಿಎಸ್ ಮುಖಂಡ ಶಾಂತಕುಮಾರ್ ಬಂದಿದ್ದಕ್ಕೆ ರೈತ ಮುಖಂಡರ ಆಕ್ಷೇಪ: ಜಿಲ್ಲಾಧ್ಯಕ್ಷ ಪದ್ದಣ್ಣ ಪರೋಕ್ಷ ಎಚ್ಚರಿಕೆ.
    1
    ಇಂದು ತಿಪಟೂರಿನಲ್ಲಿ ನಡೆದ ರೈತರ ಪ್ರತಿಭಟನೆ ಸಭೆಗೆ ಜೆಡಿಎಸ್ ಮುಖಂಡ ಶಾಂತಕುಮಾರ್ ಬಂದಿದ್ದಕ್ಕೆ ರೈತ ಮುಖಂಡರ ಆಕ್ಷೇಪ: ಜಿಲ್ಲಾಧ್ಯಕ್ಷ ಪದ್ದಣ್ಣ ಪರೋಕ್ಷ ಎಚ್ಚರಿಕೆ.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    33 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.