logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅರಣ್ಯದಲ್ಲಿ ನಾಡಬಾಂಬ್‌ನೊಂದಿಗೆ ಶಿಕಾರಿ ಸಿದ್ಧತೆ: ಒಬ್ಬ ಬಂಧನ, ಇಬ್ಬರು ಪರಾರಿ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ಹರತಾಳು ಮೀಸಲು ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಶಿಕಾರಿ ಮಾಡಲು ಸಿದ್ಧರಾಗಿದ್ದ ಮೂವರು ಆರೋಪಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ್ದಾರೆ. ದಿನಾಂಕ 19.04.2026ರಂದು ನಡೆದ ಈ ಕಾರ್ಯಾಚರಣೆಯಲ್ಲಿ ಡಾಕಪ್ಪ (55), ಕೆ ಹುಣಸವಳ್ಳಿ ಗ್ರಾಮದ ನಿವಾಸಿಯನ್ನು ಬಂಧಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳು ಭಾಸ್ಕರ (55) ಹಾಗೂ ನಾಗರಾಜ ಗೌಡ (53) ಪರಾರಿಯಾಗಿದ್ದಾರೆ. ಆರೋಪಿಗಳು ಜೀವಂತ ಸಿಡಿಮದ್ದುಗಳಾದ ಸುಮಾರು 45 ನೆಲಬಾಂಬ್‌ಗಳನ್ನು ಬಳಸಿಕೊಂಡು ಶಿಕಾರಿ ಮಾಡಲು ಸಿದ್ಧರಾಗಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ಅವುಗಳನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಲಾಗಿದ್ದ ಹಿರೋ ಹೊಂಡ ಕಂಪನಿಯ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಾರಿಯಾದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಕಾರ್ಯಾಚರಣೆಯಲ್ಲಿ ಹೊಸನಗರ ವಲಯದ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್, ಉಪ ವಲಯ ಅರಣ್ಯಾಧಿಕಾರಿ ಅನಿಲ್ ಬೆಳ್ಳೆನವರ್ ಹಾಗೂ ಸಿಬ್ಬಂದಿಗಳ ತಂಡ ಭಾಗಿಯಾಗಿತ್ತು.

16 hrs ago
user_ಇರ್ಫಾನ್ ಕನ್ನಡಿಗ
ಇರ್ಫಾನ್ ಕನ್ನಡಿಗ
Interior designer ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
16 hrs ago
50c60e91-f0db-46c9-b4d2-0af0198bbabc

ಅರಣ್ಯದಲ್ಲಿ ನಾಡಬಾಂಬ್‌ನೊಂದಿಗೆ ಶಿಕಾರಿ ಸಿದ್ಧತೆ: ಒಬ್ಬ ಬಂಧನ, ಇಬ್ಬರು ಪರಾರಿ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ಹರತಾಳು ಮೀಸಲು ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಶಿಕಾರಿ ಮಾಡಲು ಸಿದ್ಧರಾಗಿದ್ದ ಮೂವರು ಆರೋಪಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ್ದಾರೆ. ದಿನಾಂಕ 19.04.2026ರಂದು ನಡೆದ ಈ ಕಾರ್ಯಾಚರಣೆಯಲ್ಲಿ ಡಾಕಪ್ಪ (55), ಕೆ ಹುಣಸವಳ್ಳಿ ಗ್ರಾಮದ ನಿವಾಸಿಯನ್ನು ಬಂಧಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳು ಭಾಸ್ಕರ (55) ಹಾಗೂ ನಾಗರಾಜ ಗೌಡ (53) ಪರಾರಿಯಾಗಿದ್ದಾರೆ. ಆರೋಪಿಗಳು ಜೀವಂತ ಸಿಡಿಮದ್ದುಗಳಾದ ಸುಮಾರು 45 ನೆಲಬಾಂಬ್‌ಗಳನ್ನು ಬಳಸಿಕೊಂಡು ಶಿಕಾರಿ ಮಾಡಲು ಸಿದ್ಧರಾಗಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ಅವುಗಳನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಲಾಗಿದ್ದ ಹಿರೋ ಹೊಂಡ ಕಂಪನಿಯ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಾರಿಯಾದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಕಾರ್ಯಾಚರಣೆಯಲ್ಲಿ ಹೊಸನಗರ ವಲಯದ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್, ಉಪ ವಲಯ ಅರಣ್ಯಾಧಿಕಾರಿ ಅನಿಲ್ ಬೆಳ್ಳೆನವರ್ ಹಾಗೂ ಸಿಬ್ಬಂದಿಗಳ ತಂಡ ಭಾಗಿಯಾಗಿತ್ತು.

More news from ಕರ್ನಾಟಕ and nearby areas
  • Post by Rahul shetty Rahul shetty Rahu
    1
    Post by Rahul shetty Rahul shetty Rahu
    user_Rahul shetty Rahul shetty Rahu
    Rahul shetty Rahul shetty Rahu
    Painter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    6 hrs ago
  • ಶಿವಮೊಗ್ಗ: ಭದ್ರಾವತಿ ನಗರದ ಹೃದಯ ಭಾಗದಲ್ಲಿ ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಛೇರಿ ಸಮೀಪ ನೂತನವಾಗಿ ನಿರ್ಮಾಣಗೊಂಡಿ ರುವ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಭವನ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಉದ್ಘಾಟನೆ ಗೊಳಿಸದೆ ಅವಮಾನಗೊಳಿಸಿರುವುದು ಖಂಡನೀಯ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಕ್ರೋಶ ವ್ಯಕ್ತಪಡಿಸಿದರು.  ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೂತನ ಅಂಬೇಡ್ಕರ್ ಭವನ ಮುಖ್ಯಮಂತ್ರಿ ಸಿದ್ದರಾ ಮಯ್ಯರವರು ಉದ್ಘಾಟಿಸ ಬೇಕೆಂಬುದು ಕ್ಷೇತ್ರದ ನಾಗರೀಕರ ಬೇಡಿಕೆಯಾಗಿತ್ತು. ಸಿದ್ದರಾಮಯ್ಯರವರು ಪಕ್ಕದ ತರೀಕೆರೆ ತಾಲೂಕಿನ ಶಾಸಕರ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ದ್ದರು. ಅಲ್ಲದೆ ಬಾಳೆ ಹೊನ್ನೂರಿನ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿ ದ್ದಾರೆ. ಆದರೆ ಈ ಕ್ಷೇತ್ರಕ್ಕೆ ಆಗಮಿ ಸದೆ ಅಂಬೇಡ್ಕರ್‌ರವರಿಗೆ ಅವಮಾನಗೊಳಿಸಿದ್ದಾರೆ. ಕ್ಷೇತ್ರದ ಎಂಪಿಎಂ ಅಭಿವೃದ್ಧಿಪಡಿಸುವು ದಾಗಿ ಭರವಸೆ ನೀಡಿದ್ದ ಸಿದ್ದರಾಮ ಯ್ಯರವರು ಇದುವರೆಗೂ ಅಭಿವೃದ್ಧಿಪಡಿಸದೆ ನಿರ್ಲಕ್ಷ್ಯವಹಿಸಿ ರುವುದು ಖಂಡನೀಯ. ಪದೇ ಪದೇ ಕ್ಷೇತ್ರದ ಜನರಿಗೆ ಅವಮಾನ ಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯರವರ ವಿರುದ್ಧ ಪ್ರತಿಭಟನೆ ನಡೆಸುವು ದಾಗಿ ಎಚ್ಚರಿಸಿದರು.  ಅಂಬೇಡ್ಕರ್ ಭವನ ನಿರ್ಮಾಣ ದಲ್ಲಿ ಪ್ರಮುಖ ಪಾತ್ರವಹಿಸಿರುವ ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್, ಸಂಸದ ಬಿ.ವೈ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆ ಹಾಗು ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಅಲ್ಲದೆ ಭವನ ನಿರ್ಮಾಣಕ್ಕೆ ಹೋರಾಟ ನಡೆಸಿದ ಹಾಗು ಉದ್ಘಾಟನೆ ಕಾರ್ಯಕ್ರಮ ಯಶಸ್ವಿಗೊಳಿಸಿದ ಪ್ರತಿಯೊಬ್ಬ ರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಉದ್ಘಾಟನಾ ಕಾರ್ಯ ಕ್ರಮದಲ್ಲಿ ಅಂಬೇಡ್ಕರ್ ಭವನ ಕ್ಕಾಗಿ ಹೋರಾಟ ನಡೆಸಿದ ನಿಜವಾದ ಹೋರಾಟಗಾರರನ್ನು ಕಡೆಗಣಿಸಲಾಗಿದೆ. ಈ ಹಿನ್ನಲೆ ಯಲ್ಲಿ ಜೂ.21 ರಂದು ಹೋರಾಟ ಗಾರರಾದ ದಿವಂಗತ ಕಾಮ್ರೇಡ್ ಡಿ.ಸಿ ಮಾಯಣ್ಣ, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ನೆನಪಿನಲ್ಲಿ ಅಂಬೇಡ್ಕರ್ ಭವನ ದಲ್ಲಿ ಸಮಿತಿಯಿಂದ ನಿಜವಾದ ಹೋರಾಟಗಾರ ರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.  ಕಳೆದ 2 ದಿನಗಳ ಹಿಂದೆ ನಿಧನ ಹೊಂದಿದ ಸಮಿತಿ ಕಾರ್ಯಾಧ್ಯಕ್ಷ ರಾದ ಐ.ಎಲ್ ಅರುಣ್ ಕುಮಾರ್ ಅವರು, ಕಳೆದ 50 ವರ್ಷಗಳಿಂದ ದೀನ ದಲಿತರ ಸೇವೆ ಸಲ್ಲಿಸುತ್ತಾ ಹಲವಾರು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ನಿಧನ ತುಂಬಾ ನೋವುಂಟು ಮಾಡಿದ್ದು, ಸಮಿತಿ ಪದಾಧಿಕಾರಿ ಗಳು, ಸದಸ್ಯರು ಶ್ರದ್ದಾಂಜಲಿ ಸಲ್ಲಿಸುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ರಾದ ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಶಾರದಮ್ಮ, ನಗರಸಭೆ ಮಾಜಿ ಸದಸ್ಯೆ ಶೋಭಾ ರವಿಕುಮಾರ್, ಹಳೇನಗರ ಮನೆ ಮಾಲೀಕರ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ದಲಿತ ಮುಖಂಡರಾದ ವಿಜಿಯಮ್ಮ ಸೇರಿದಂತೆ ಸಮಿತಿ ಪದಾಧಿ ಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
    1
    ಶಿವಮೊಗ್ಗ: ಭದ್ರಾವತಿ ನಗರದ ಹೃದಯ ಭಾಗದಲ್ಲಿ ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಛೇರಿ ಸಮೀಪ ನೂತನವಾಗಿ ನಿರ್ಮಾಣಗೊಂಡಿ ರುವ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಭವನ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಉದ್ಘಾಟನೆ ಗೊಳಿಸದೆ ಅವಮಾನಗೊಳಿಸಿರುವುದು ಖಂಡನೀಯ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಕ್ರೋಶ ವ್ಯಕ್ತಪಡಿಸಿದರು. 
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೂತನ ಅಂಬೇಡ್ಕರ್ ಭವನ ಮುಖ್ಯಮಂತ್ರಿ ಸಿದ್ದರಾ ಮಯ್ಯರವರು ಉದ್ಘಾಟಿಸ ಬೇಕೆಂಬುದು ಕ್ಷೇತ್ರದ ನಾಗರೀಕರ ಬೇಡಿಕೆಯಾಗಿತ್ತು. ಸಿದ್ದರಾಮಯ್ಯರವರು ಪಕ್ಕದ ತರೀಕೆರೆ ತಾಲೂಕಿನ ಶಾಸಕರ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ದ್ದರು. ಅಲ್ಲದೆ ಬಾಳೆ ಹೊನ್ನೂರಿನ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿ ದ್ದಾರೆ. ಆದರೆ ಈ ಕ್ಷೇತ್ರಕ್ಕೆ ಆಗಮಿ ಸದೆ ಅಂಬೇಡ್ಕರ್‌ರವರಿಗೆ ಅವಮಾನಗೊಳಿಸಿದ್ದಾರೆ. ಕ್ಷೇತ್ರದ ಎಂಪಿಎಂ ಅಭಿವೃದ್ಧಿಪಡಿಸುವು ದಾಗಿ ಭರವಸೆ ನೀಡಿದ್ದ ಸಿದ್ದರಾಮ ಯ್ಯರವರು ಇದುವರೆಗೂ ಅಭಿವೃದ್ಧಿಪಡಿಸದೆ ನಿರ್ಲಕ್ಷ್ಯವಹಿಸಿ ರುವುದು ಖಂಡನೀಯ. ಪದೇ ಪದೇ ಕ್ಷೇತ್ರದ ಜನರಿಗೆ ಅವಮಾನ ಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯರವರ ವಿರುದ್ಧ ಪ್ರತಿಭಟನೆ ನಡೆಸುವು ದಾಗಿ ಎಚ್ಚರಿಸಿದರು. 
ಅಂಬೇಡ್ಕರ್ ಭವನ ನಿರ್ಮಾಣ ದಲ್ಲಿ ಪ್ರಮುಖ ಪಾತ್ರವಹಿಸಿರುವ ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್, ಸಂಸದ ಬಿ.ವೈ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆ ಹಾಗು ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಅಲ್ಲದೆ ಭವನ ನಿರ್ಮಾಣಕ್ಕೆ ಹೋರಾಟ ನಡೆಸಿದ ಹಾಗು ಉದ್ಘಾಟನೆ ಕಾರ್ಯಕ್ರಮ ಯಶಸ್ವಿಗೊಳಿಸಿದ ಪ್ರತಿಯೊಬ್ಬ ರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಉದ್ಘಾಟನಾ ಕಾರ್ಯ ಕ್ರಮದಲ್ಲಿ ಅಂಬೇಡ್ಕರ್ ಭವನ ಕ್ಕಾಗಿ ಹೋರಾಟ ನಡೆಸಿದ ನಿಜವಾದ ಹೋರಾಟಗಾರರನ್ನು ಕಡೆಗಣಿಸಲಾಗಿದೆ. ಈ ಹಿನ್ನಲೆ ಯಲ್ಲಿ ಜೂ.21 ರಂದು ಹೋರಾಟ ಗಾರರಾದ ದಿವಂಗತ ಕಾಮ್ರೇಡ್ ಡಿ.ಸಿ ಮಾಯಣ್ಣ, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ನೆನಪಿನಲ್ಲಿ ಅಂಬೇಡ್ಕರ್ ಭವನ ದಲ್ಲಿ ಸಮಿತಿಯಿಂದ ನಿಜವಾದ ಹೋರಾಟಗಾರ ರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು. 
ಕಳೆದ 2 ದಿನಗಳ ಹಿಂದೆ ನಿಧನ ಹೊಂದಿದ ಸಮಿತಿ ಕಾರ್ಯಾಧ್ಯಕ್ಷ ರಾದ ಐ.ಎಲ್ ಅರುಣ್ ಕುಮಾರ್ ಅವರು, ಕಳೆದ 50 ವರ್ಷಗಳಿಂದ ದೀನ ದಲಿತರ ಸೇವೆ ಸಲ್ಲಿಸುತ್ತಾ ಹಲವಾರು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ನಿಧನ ತುಂಬಾ ನೋವುಂಟು ಮಾಡಿದ್ದು, ಸಮಿತಿ ಪದಾಧಿಕಾರಿ ಗಳು, ಸದಸ್ಯರು ಶ್ರದ್ದಾಂಜಲಿ ಸಲ್ಲಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ರಾದ ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಶಾರದಮ್ಮ, ನಗರಸಭೆ ಮಾಜಿ ಸದಸ್ಯೆ ಶೋಭಾ ರವಿಕುಮಾರ್, ಹಳೇನಗರ ಮನೆ ಮಾಲೀಕರ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ದಲಿತ ಮುಖಂಡರಾದ ವಿಜಿಯಮ್ಮ ಸೇರಿದಂತೆ ಸಮಿತಿ ಪದಾಧಿ ಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    23 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • ಬನ್ನಿ ನಮ್ಮನ್ನು ಸಂಪರ್ಕಿಸಿ
    3
    ಬನ್ನಿ ನಮ್ಮನ್ನು ಸಂಪರ್ಕಿಸಿ
    user_Dharma cv
    Dharma cv
    ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
  • ಮದಕರಿಪುರ ಗ್ರಾಮದ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು ಖುದ್ದು ಗ್ರಾಮಸ್ತರೆ ಸ್ವಚ್ಚತೆ ಮಾಡಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದ್ದು ಖುದ್ದು ಗ್ರಾಮಸ್ತರೆ ಚರಂಡಿಗಿಳಿದು ಸ್ವಚ್ಚತೆ ಮಾಡಿದ್ದಾರೆ. ಇನ್ನೂ ಮದಕರಿಪುರ ಗ್ರಾಮದಲ್ಲಿ ಚರಂಡಿಗಳು ಕಟ್ಟಿಕೊಂಡು ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ರೋಗ ರುಜುನೆಗಳ ಬೀತಿ ಹೆಚ್ಚಾಗಿದೆ.
    1
    ಮದಕರಿಪುರ ಗ್ರಾಮದ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು ಖುದ್ದು ಗ್ರಾಮಸ್ತರೆ ಸ್ವಚ್ಚತೆ ಮಾಡಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದ್ದು ಖುದ್ದು ಗ್ರಾಮಸ್ತರೆ ಚರಂಡಿಗಿಳಿದು ಸ್ವಚ್ಚತೆ ಮಾಡಿದ್ದಾರೆ. ಇನ್ನೂ ಮದಕರಿಪುರ ಗ್ರಾಮದಲ್ಲಿ ಚರಂಡಿಗಳು ಕಟ್ಟಿಕೊಂಡು ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ರೋಗ ರುಜುನೆಗಳ ಬೀತಿ ಹೆಚ್ಚಾಗಿದೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    4 hrs ago
  • ಜಗಳೂರು:ಜಗಳೂರು ತಾಲ್ಲೂಕಿನಾಧ್ಯಂತ ಬಿಸಿಲಿನತಾಪಮಾನಹೆಚ್ಚುತ್ತಿದ್ದು ಜನರ ಆತಂಕಕೂಡ ಹೆಚ್ಚುತ್ತಾ ಹೋಗುತ್ತಿದೆ. ಅಬ್ಬಾ..ಅಬ್ಬಾ ಏನು ಬಿಸಿಲು ಮಾರಾಯ... ಒಂದು ಎಲೆಯೂ ಮುಸುಕುತ್ತಿಲ್ಲಾ ಎನ್ನುವ ಮಾತು ಜನರ ಬಾಯಲ್ಲಿ ಸರ್ವೆಸಾಮಾನ್ಯವಾಗಿ ಬಿಟ್ಟಿದೆ ! ಎಂದು ಕಾಣವೋ ಇಂತದೊಂದು ಬಿಸಿಲು ಎನ್ನುತ್ತ ಅವರಿಗೆ ಮನಸ್ಸಿಗೆ ಎಲ್ಲಿ ನೆಮ್ಮದಿ ಅನ್ನಿಸುತ್ತದೊ ಅಲ್ಲಿ ಕುಳಿತು ಉಸ್ಸು ಬುಸ್ಸು ಎನ್ನುತ್ತಾ ಗಾಳಿ ಹೊಡೆದು ಕೊಳ್ಳುತ್ತಾ ಮುಂದೆ ಸಾಗುತ್ತಾರೆ... ಇಂತಾ ಬಿಸಿಲಿನ‌ ಜಳಕ್ಕೆ ಕುಳಿತೊವರು ಉಂಟೆ ಎಂಬಂತೆ ಮೈಹಿಗೆ ತೀಟೆ ಸೊಪ್ಪು ಅಚ್ಚಿಸಿಕೊಂಡವರ ರೀತಿ... ಗಾಳಿಯನ್ನು ಹೊಡೆದು ಕೊಳ್ಳುತ್ತಾ ಕಾಲಕಳೆಯುವ ಪರಿಸ್ಥಿತಿಯಾಗಿದೆ ನಮ್ಮ ಜನರ ಪಾಡು.... ಇನ್ನೂ ಮುಂಗಾರು ಎಂಟ್ರಿಕೊಟ್ರೆ... ತುಸು ಸೆಕೆ ಕಡಿಮೆಯಾಗುತ್ತದೆ ಎಂಬುವುದು ಕೆಲವರ ಅಭಿಪ್ರಾಯವಾಗಿದೆ.
    2
    ಜಗಳೂರು:ಜಗಳೂರು ತಾಲ್ಲೂಕಿನಾಧ್ಯಂತ ಬಿಸಿಲಿನತಾಪಮಾನಹೆಚ್ಚುತ್ತಿದ್ದು ಜನರ ಆತಂಕಕೂಡ ಹೆಚ್ಚುತ್ತಾ ಹೋಗುತ್ತಿದೆ. ಅಬ್ಬಾ..ಅಬ್ಬಾ ಏನು ಬಿಸಿಲು ಮಾರಾಯ... ಒಂದು ಎಲೆಯೂ ಮುಸುಕುತ್ತಿಲ್ಲಾ ಎನ್ನುವ ಮಾತು ಜನರ ಬಾಯಲ್ಲಿ ಸರ್ವೆಸಾಮಾನ್ಯವಾಗಿ ಬಿಟ್ಟಿದೆ !
ಎಂದು ಕಾಣವೋ ಇಂತದೊಂದು ಬಿಸಿಲು ಎನ್ನುತ್ತ ಅವರಿಗೆ ಮನಸ್ಸಿಗೆ ಎಲ್ಲಿ ನೆಮ್ಮದಿ ಅನ್ನಿಸುತ್ತದೊ ಅಲ್ಲಿ ಕುಳಿತು ಉಸ್ಸು ಬುಸ್ಸು ಎನ್ನುತ್ತಾ ಗಾಳಿ ಹೊಡೆದು ಕೊಳ್ಳುತ್ತಾ ಮುಂದೆ ಸಾಗುತ್ತಾರೆ...
ಇಂತಾ ಬಿಸಿಲಿನ‌ ಜಳಕ್ಕೆ ಕುಳಿತೊವರು ಉಂಟೆ ಎಂಬಂತೆ ಮೈಹಿಗೆ ತೀಟೆ ಸೊಪ್ಪು ಅಚ್ಚಿಸಿಕೊಂಡವರ ರೀತಿ... ಗಾಳಿಯನ್ನು ಹೊಡೆದು ಕೊಳ್ಳುತ್ತಾ ಕಾಲಕಳೆಯುವ ಪರಿಸ್ಥಿತಿಯಾಗಿದೆ ನಮ್ಮ ಜನರ ಪಾಡು....
ಇನ್ನೂ ಮುಂಗಾರು ಎಂಟ್ರಿಕೊಟ್ರೆ... ತುಸು ಸೆಕೆ ಕಡಿಮೆಯಾಗುತ್ತದೆ ಎಂಬುವುದು ಕೆಲವರ ಅಭಿಪ್ರಾಯವಾಗಿದೆ.
    user_Basavaraja B Press Reporter APB
    Basavaraja B Press Reporter APB
    Newspaper publisher ಜಗಳೂರು, ದಾವಣಗೆರೆ, ಕರ್ನಾಟಕ•
    2 hrs ago
  • nagaraja is good for gowda jpn
    1
    nagaraja is good for gowda jpn
    user_Jpngowda
    Jpngowda
    Farmer ಜಗಳೂರು, ದಾವಣಗೆರೆ, ಕರ್ನಾಟಕ•
    18 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.