logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಟಮಾರಿ ಗ್ರಾಮದಲ್ಲಿ ₹3 ಕೋಟಿ ರಸ್ತೆ ಕಾಮಗಾರಿಗೆ ಶಾಸಕ ಬಸನಗೌಡ ದದ್ದಲ್ ಭೂಮಿಪೂಜೆ ಮಟಮಾರಿ ಗ್ರಾಮದಲ್ಲಿ ₹3 ಕೋಟಿ ರಸ್ತೆ ಕಾಮಗಾರಿಗೆ ಶಾಸಕ ಬಸನಗೌಡ ದದ್ದಲ್ ಭೂಮಿಪೂಜೆ ರಾಯಚೂರು: ತಾಲ್ಲೂಕಿನ ಮಟಮಾರಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮ್ಯಾಕ್ರೋ ಯೋಜನೆಯಡಿ ₹3 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಬಸನಗೌಡ ದದ್ದಲ್ ಅವರು ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿ, ಗ್ರಾಮದ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ಮಟಮಾರಿ ಗ್ರಾಮದ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ. ಪ್ರಮುಖ ಸಂಪರ್ಕ ರಸ್ತೆಗಳೊಂದಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದ್ದು, ವಿದ್ಯಾರ್ಥಿಗಳು, ರೈತರು, ವ್ಯಾಪಾರಸ್ಥರು ಸೇರಿದಂತೆ ಗ್ರಾಮಸ್ಥರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು. ಉತ್ತಮ ರಸ್ತೆ ಸಂಪರ್ಕದಿಂದ ಗ್ರಾಮದಲ್ಲಿ ಜನರ ದೈನಂದಿನ ಸಂಚಾರ ಸುಗಮಗೊಳ್ಳುವುದರ ಜತೆಗೆ, ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ. ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಮಟಮಾರಿ ಗ್ರಾಮದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದರು. ಜನರ ಅಗತ್ಯಗಳಿಗೆ ಸ್ಪಂದಿಸಿ ಉತ್ತಮ ಮೂಲಸೌಕರ್ಯ ಹಾಗೂ ಸುಗಮ ಸಂಪರ್ಕ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿರಂತರವಾಗಿ ಕೈಗೊಳ್ಳಲಾಗುವುದು ಎಂದು ಹೇಳಿದರು.

2 hrs ago
user_ರಾಜಶೇಖರ್ GT
ರಾಜಶೇಖರ್ GT
ಕೂಡ್ಲಿಗಿ, ವಿಜಯನಗರ, ಕರ್ನಾಟಕ•
2 hrs ago
a156a835-733a-4369-9f1a-1bc81beaa52c

ಮಟಮಾರಿ ಗ್ರಾಮದಲ್ಲಿ ₹3 ಕೋಟಿ ರಸ್ತೆ ಕಾಮಗಾರಿಗೆ ಶಾಸಕ ಬಸನಗೌಡ ದದ್ದಲ್ ಭೂಮಿಪೂಜೆ ಮಟಮಾರಿ ಗ್ರಾಮದಲ್ಲಿ ₹3 ಕೋಟಿ ರಸ್ತೆ ಕಾಮಗಾರಿಗೆ ಶಾಸಕ ಬಸನಗೌಡ ದದ್ದಲ್ ಭೂಮಿಪೂಜೆ ರಾಯಚೂರು: ತಾಲ್ಲೂಕಿನ ಮಟಮಾರಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮ್ಯಾಕ್ರೋ ಯೋಜನೆಯಡಿ ₹3 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಬಸನಗೌಡ ದದ್ದಲ್ ಅವರು ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿ, ಗ್ರಾಮದ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ಮಟಮಾರಿ ಗ್ರಾಮದ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ. ಪ್ರಮುಖ ಸಂಪರ್ಕ ರಸ್ತೆಗಳೊಂದಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದ್ದು, ವಿದ್ಯಾರ್ಥಿಗಳು, ರೈತರು, ವ್ಯಾಪಾರಸ್ಥರು ಸೇರಿದಂತೆ ಗ್ರಾಮಸ್ಥರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು. ಉತ್ತಮ ರಸ್ತೆ ಸಂಪರ್ಕದಿಂದ ಗ್ರಾಮದಲ್ಲಿ ಜನರ ದೈನಂದಿನ ಸಂಚಾರ ಸುಗಮಗೊಳ್ಳುವುದರ ಜತೆಗೆ, ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ. ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಮಟಮಾರಿ ಗ್ರಾಮದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದರು. ಜನರ ಅಗತ್ಯಗಳಿಗೆ ಸ್ಪಂದಿಸಿ ಉತ್ತಮ ಮೂಲಸೌಕರ್ಯ ಹಾಗೂ ಸುಗಮ ಸಂಪರ್ಕ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿರಂತರವಾಗಿ ಕೈಗೊಳ್ಳಲಾಗುವುದು ಎಂದು ಹೇಳಿದರು.

More news from ಕರ್ನಾಟಕ and nearby areas
  • ಅಸಹಾಯಕ ದಿವ್ಯಾಂಗ ಯುವಕನ ನೋವಿಗೆ ತಕ್ಷಣ ಸ್ಪಂದನೆ; ಶೌಚಾಲಯ ಹಾಗೂ ವಾಹನದ ನೆರವಿಗೆ ಶಾಸಕ ಭರವಸೆ ಕೂಡ್ಲಿಗಿ: ಅಧಿಕಾರವೆಂಬುದು ಕೇವಲ ಆಡಳಿತ ನಡೆಸುವ ಹೊಣೆಗಾರಿಕೆಯಲ್ಲ; ಸಂಕಷ್ಟದಲ್ಲಿರುವವರ ಕಣ್ಣೀರೊರೆಸುವ ಮಾನವೀಯ ಹೊಣೆಗಾರಿಕೆಯೂ ಹೌದು ಎಂಬುದನ್ನು ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಮತ್ತೊಮ್ಮೆ ತೋರಿಸಿದ್ದಾರೆ. ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮದ ದಿವ್ಯಾಂಗ ಯುವಕನೊಬ್ಬ ಹಲವು ದಿನಗಳಿಂದ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ ಅಸಹಾಯಕ ಬದುಕು ಸಾಗಿಸುತ್ತಿದ್ದ. ಮನೆಯಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲದೆ ಮುಜುಗರ ಹಾಗೂ ಸಂಕಷ್ಟ ಅನುಭವಿಸುತ್ತಿದ್ದ ಈತನಿಗೆ, ಓಡಾಡಲು ಸೂಕ್ತ ವಾಹನವೂ ಇರಲಿಲ್ಲ. ಇದರಿಂದ ದಿನನಿತ್ಯದ ಬದುಕೇ ಸವಾಲಾಗಿ ಪರಿಣಮಿಸಿತ್ತು. ಇದಕ್ಕಿಂತಲೂ ನೋವಿನ ಸಂಗತಿಯೆಂದರೆ, ದ್ವಿಚಕ್ರ ವಾಹನ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ ಪರಿಣಾಮ ಯುವಕನ ಕುಟುಂಬದ ಸಂಕಷ್ಟ ಮತ್ತಷ್ಟು ಹೆಚ್ಚಾಗಿತ್ತು. ಒಂದು ಕಡೆ ದೈಹಿಕ ಅಸಹಾಯಕತೆ, ಮತ್ತೊಂದೆಡೆ ಆರ್ಥಿಕ ಸಂಕಷ್ಟ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ—ಇವೆಲ್ಲವೂ ಆತನ ಬದುಕನ್ನು ಕತ್ತಲೆಯತ್ತ ತಳ್ಳಿದ್ದವು. ಸ್ನೇಹಿತರ ಮನವಿಗೆ ಸ್ಪಂದಿಸಿದ ಶಾಸಕ ಯುವಕನ ಪರಿಸ್ಥಿತಿಯನ್ನು ಆತನ ಸ್ನೇಹಿತರು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರ ಗಮನಕ್ಕೆ ತಂದರು. ವಿಷಯ ತಿಳಿದ ತಕ್ಷಣವೇ ಶಾಸಕ ಸ್ಪಂದಿಸಿದ್ದು, ಯಾವುದೇ ವಿಳಂಬ ಮಾಡದೆ ಯುವಕನ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
    1
    ಅಸಹಾಯಕ ದಿವ್ಯಾಂಗ ಯುವಕನ ನೋವಿಗೆ ತಕ್ಷಣ ಸ್ಪಂದನೆ; ಶೌಚಾಲಯ ಹಾಗೂ ವಾಹನದ ನೆರವಿಗೆ ಶಾಸಕ ಭರವಸೆ
ಕೂಡ್ಲಿಗಿ:
ಅಧಿಕಾರವೆಂಬುದು ಕೇವಲ ಆಡಳಿತ ನಡೆಸುವ ಹೊಣೆಗಾರಿಕೆಯಲ್ಲ; ಸಂಕಷ್ಟದಲ್ಲಿರುವವರ ಕಣ್ಣೀರೊರೆಸುವ ಮಾನವೀಯ ಹೊಣೆಗಾರಿಕೆಯೂ ಹೌದು ಎಂಬುದನ್ನು ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಮತ್ತೊಮ್ಮೆ ತೋರಿಸಿದ್ದಾರೆ.
ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮದ ದಿವ್ಯಾಂಗ ಯುವಕನೊಬ್ಬ ಹಲವು ದಿನಗಳಿಂದ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ ಅಸಹಾಯಕ ಬದುಕು ಸಾಗಿಸುತ್ತಿದ್ದ. ಮನೆಯಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲದೆ ಮುಜುಗರ ಹಾಗೂ ಸಂಕಷ್ಟ ಅನುಭವಿಸುತ್ತಿದ್ದ ಈತನಿಗೆ, ಓಡಾಡಲು ಸೂಕ್ತ ವಾಹನವೂ ಇರಲಿಲ್ಲ. ಇದರಿಂದ ದಿನನಿತ್ಯದ ಬದುಕೇ ಸವಾಲಾಗಿ ಪರಿಣಮಿಸಿತ್ತು.
ಇದಕ್ಕಿಂತಲೂ ನೋವಿನ ಸಂಗತಿಯೆಂದರೆ, ದ್ವಿಚಕ್ರ ವಾಹನ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ ಪರಿಣಾಮ ಯುವಕನ ಕುಟುಂಬದ ಸಂಕಷ್ಟ ಮತ್ತಷ್ಟು ಹೆಚ್ಚಾಗಿತ್ತು. ಒಂದು ಕಡೆ ದೈಹಿಕ ಅಸಹಾಯಕತೆ, ಮತ್ತೊಂದೆಡೆ ಆರ್ಥಿಕ ಸಂಕಷ್ಟ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ—ಇವೆಲ್ಲವೂ ಆತನ ಬದುಕನ್ನು ಕತ್ತಲೆಯತ್ತ ತಳ್ಳಿದ್ದವು.
ಸ್ನೇಹಿತರ ಮನವಿಗೆ ಸ್ಪಂದಿಸಿದ ಶಾಸಕ
ಯುವಕನ ಪರಿಸ್ಥಿತಿಯನ್ನು ಆತನ ಸ್ನೇಹಿತರು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರ ಗಮನಕ್ಕೆ ತಂದರು. ವಿಷಯ ತಿಳಿದ ತಕ್ಷಣವೇ ಶಾಸಕ ಸ್ಪಂದಿಸಿದ್ದು, ಯಾವುದೇ ವಿಳಂಬ ಮಾಡದೆ ಯುವಕನ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    23 hrs ago
  • ಲಕ್ಷಾಂತರ ಭಕ್ತರ ನಡುವೆ ಸಡಗರ ಸಂಭ್ರಮದಿಂದ ಜರುಗಿದ ಎರಡು ರಾಜ್ಯಗಳನ್ನು ಬೆಸುವ ಗೌರಸಮುದ್ರ ಮಾರಮ್ಮ ಜಾತ್ರೆ
    1
    ಲಕ್ಷಾಂತರ ಭಕ್ತರ ನಡುವೆ ಸಡಗರ ಸಂಭ್ರಮದಿಂದ ಜರುಗಿದ ಎರಡು ರಾಜ್ಯಗಳನ್ನು ಬೆಸುವ ಗೌರಸಮುದ್ರ ಮಾರಮ್ಮ ಜಾತ್ರೆ
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    28 min ago
  • ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಟ್ರಸ್ಟ್ ವತಿಯಿಂದ ಭರತ ನಾಟ್ಯ ಕಾರ್ಯಕ್ರಮ... ಹಿರಿಯೂರಿನ ಶ್ರೀ ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಸೇವಾ ಟ್ರಸ್ಟ್ (ರಿ ) ವತಿಯಿಂದ ಸಾದ್ವಿ ನೃತ್ಯ ಶಾಲೆಯವರು ಭರತ ನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.. ಸುಮಾರು 10 ಕ್ಕೂ ಹೆಚ್ಚು ನೃತ್ಯಗಳನ್ನು ವಿದ್ಯಾರ್ಥಿ ಗಳು ನಡೆಸಿಕೊಟ್ಟರು.. ಕಾರ್ಯಕ್ರಮವನ್ನು ರೂಪ ಶಿಕ್ಷಕಿಯವರು ನಡೆಸಿಕೊಟ್ಟರು
    2
    ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಟ್ರಸ್ಟ್ ವತಿಯಿಂದ ಭರತ ನಾಟ್ಯ ಕಾರ್ಯಕ್ರಮ...
ಹಿರಿಯೂರಿನ ಶ್ರೀ ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಸೇವಾ ಟ್ರಸ್ಟ್ (ರಿ ) ವತಿಯಿಂದ ಸಾದ್ವಿ ನೃತ್ಯ ಶಾಲೆಯವರು ಭರತ ನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.. ಸುಮಾರು 10 ಕ್ಕೂ ಹೆಚ್ಚು ನೃತ್ಯಗಳನ್ನು ವಿದ್ಯಾರ್ಥಿ ಗಳು ನಡೆಸಿಕೊಟ್ಟರು..
ಕಾರ್ಯಕ್ರಮವನ್ನು ರೂಪ ಶಿಕ್ಷಕಿಯವರು ನಡೆಸಿಕೊಟ್ಟರು
    user_ಅಪ್ಪಾಜಿ ಬಂಡೆ
    ಅಪ್ಪಾಜಿ ಬಂಡೆ
    Yoga instructor ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
    23 hrs ago
  • ಶಿಗ್ಲಿಯಲ್ಲಿ ಗಣೇಶನಿಗೆ ಗ್ರ್ಯಾಂಡ್ ಎಂಟ್ರಿ! ವಿನಾಯಕ ಯುವಕ ಮಂಡಳದ ಭರ್ಜರಿ ಮೆರವಣಿಗೆಗೆ ಗ್ರಾಮವೇ ಫಿದಾ! ಶಿಗ್ಲಿ: ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಗಣೇಶೋತ್ಸವದ ಸಂಭ್ರಮ ಜೋರಾಗಿದೆ. ವಿನಾಯಕ ಯುವಕ ಮಂಡಳ ವತಿಯಿಂದ ವಿನಾಯಕ ನಗರಕಾ ರಾಜ್ಯ್ ಸಾಮ್ರಾಟ್ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಅಂಗವಾಗಿ ನಡೆದ ಅದ್ದೂರಿ ಮೆರವಣಿಗೆ ಗ್ರಾಮದಲ್ಲಿ ಹಬ್ಬದ ಕಳೆ ಹೆಚ್ಚಿಸಿತು! ಶಿಗ್ಲಿಯಲ್ಲಿ ಗಣೇಶನಿಗೆ ಗ್ರ್ಯಾಂಡ್ ಎಂಟ್ರಿ! ವಿನಾಯಕ ಯುವಕ ಮಂಡಳದ ಭರ್ಜರಿ ಮೆರವಣಿಗೆಗೆ ಗ್ರಾಮವೇ ಫಿದಾ! ಶಿಗ್ಲಿ: ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಗಣೇಶೋತ್ಸವದ ಸಂಭ್ರಮ ಜೋರಾಗಿದೆ. ವಿನಾಯಕ ಯುವಕ ಮಂಡಳ ವತಿಯಿಂದ ವಿನಾಯಕ ನಗರಕಾ ರಾಜ್ಯ್ ಸಾಮ್ರಾಟ್ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಅಂಗವಾಗಿ ನಡೆದ ಅದ್ದೂರಿ ಮೆರವಣಿಗೆ ಗ್ರಾಮದಲ್ಲಿ ಹಬ್ಬದ ಕಳೆ ಹೆಚ್ಚಿಸಿತು! ಯುವಕರ ಜೋಶ್, ಗಣಪತಿ ಭಕ್ತಿಯಲ್ಲಿ ಗ್ರಾಮಸ್ಥರು ಫುಲ್ ಖುಷ್! ಯುವಕರ ಉತ್ಸಾಹ ಹಾಗೂ ಭಕ್ತರ ಸಂಭ್ರಮದ ನಡುವೆ ವಿನಾಯಕನ ಮೆರವಣಿಗೆ ಅದ್ದೂರಿಯಾಗಿ ಸಾಗಿತು. ಗಣೇಶನ ದರ್ಶನ ಪಡೆಯಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಮೆರವಣಿಗೆಯಲ್ಲಿ ಯುವಕರು, ಮಕ್ಕಳು ಹಾಗೂ ಭಕ್ತರು ಭಾಗವಹಿಸಿ ಗಣಪತಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು. ಗಣೇಶೋತ್ಸವದ ಸಂಭ್ರಮ ಶಿಗ್ಲಿ ಗ್ರಾಮದಲ್ಲಿ ಮನೆಮಾಡಿದ್ದು, ವಿನಾಯಕ ಯುವಕ ಮಂಡಳದ ಸದಸ್ಯರು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ವರದಿ ಸೋಮು ಬಿ ಆಡ್ರಕಟ್ಟಿ
    1
    ಶಿಗ್ಲಿಯಲ್ಲಿ ಗಣೇಶನಿಗೆ ಗ್ರ್ಯಾಂಡ್ ಎಂಟ್ರಿ! ವಿನಾಯಕ ಯುವಕ ಮಂಡಳದ ಭರ್ಜರಿ ಮೆರವಣಿಗೆಗೆ ಗ್ರಾಮವೇ ಫಿದಾ!

ಶಿಗ್ಲಿ: ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಗಣೇಶೋತ್ಸವದ ಸಂಭ್ರಮ ಜೋರಾಗಿದೆ. ವಿನಾಯಕ ಯುವಕ ಮಂಡಳ ವತಿಯಿಂದ ವಿನಾಯಕ ನಗರಕಾ ರಾಜ್ಯ್ ಸಾಮ್ರಾಟ್ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಅಂಗವಾಗಿ ನಡೆದ ಅದ್ದೂರಿ ಮೆರವಣಿಗೆ ಗ್ರಾಮದಲ್ಲಿ ಹಬ್ಬದ ಕಳೆ ಹೆಚ್ಚಿಸಿತು!
ಶಿಗ್ಲಿಯಲ್ಲಿ ಗಣೇಶನಿಗೆ ಗ್ರ್ಯಾಂಡ್ ಎಂಟ್ರಿ! ವಿನಾಯಕ ಯುವಕ ಮಂಡಳದ ಭರ್ಜರಿ ಮೆರವಣಿಗೆಗೆ ಗ್ರಾಮವೇ ಫಿದಾ!
ಶಿಗ್ಲಿ: ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಗಣೇಶೋತ್ಸವದ ಸಂಭ್ರಮ ಜೋರಾಗಿದೆ. ವಿನಾಯಕ ಯುವಕ ಮಂಡಳ ವತಿಯಿಂದ ವಿನಾಯಕ ನಗರಕಾ ರಾಜ್ಯ್ ಸಾಮ್ರಾಟ್ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಅಂಗವಾಗಿ ನಡೆದ ಅದ್ದೂರಿ ಮೆರವಣಿಗೆ ಗ್ರಾಮದಲ್ಲಿ ಹಬ್ಬದ ಕಳೆ ಹೆಚ್ಚಿಸಿತು!
ಯುವಕರ ಜೋಶ್, ಗಣಪತಿ ಭಕ್ತಿಯಲ್ಲಿ ಗ್ರಾಮಸ್ಥರು ಫುಲ್ ಖುಷ್!
ಯುವಕರ ಉತ್ಸಾಹ ಹಾಗೂ ಭಕ್ತರ ಸಂಭ್ರಮದ ನಡುವೆ ವಿನಾಯಕನ ಮೆರವಣಿಗೆ ಅದ್ದೂರಿಯಾಗಿ ಸಾಗಿತು. ಗಣೇಶನ ದರ್ಶನ ಪಡೆಯಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಮೆರವಣಿಗೆಯಲ್ಲಿ ಯುವಕರು, ಮಕ್ಕಳು ಹಾಗೂ ಭಕ್ತರು ಭಾಗವಹಿಸಿ ಗಣಪತಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು. ಗಣೇಶೋತ್ಸವದ ಸಂಭ್ರಮ ಶಿಗ್ಲಿ ಗ್ರಾಮದಲ್ಲಿ ಮನೆಮಾಡಿದ್ದು, ವಿನಾಯಕ ಯುವಕ ಮಂಡಳದ ಸದಸ್ಯರು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ವರದಿ ಸೋಮು ಬಿ ಆಡ್ರಕಟ್ಟಿ
    user_NEWS 83 KARNATAKA
    NEWS 83 KARNATAKA
    ಲಕ್ಷ್ಮೇಶ್ವರ, ಗದಗ, ಕರ್ನಾಟಕ•
    23 hrs ago
  • ಶಿಗ್ಗಾಂವಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಬೃಹತ್ ಪ್ರತಿಭಟನೆ. ಶಿಗ್ಗಾಂವಿ. ರೈತಪರ ಒಕ್ಕೂಟ ಹಾಗೂ ಕನ್ನಡ ಪರ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಪ್ರಮುಖ ಮೂರು ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆಯನ್ನು ದಿನಾಂಕ್ 16. 9. 2026. ಬುಧವಾರ ರಂದು, ಪೋಸ್ಟ್ ಆಫೀಸ್ ನಿಂದ ಕಿತ್ತೂರು ರಾಣಿ ಚೆನ್ನಮ್ಮರ ಸರ್ಕಲ್ ವರೆಗೂ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಆದ ಕಾರಣ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ನಮ್ಮ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ತಾಲೂಕ ರೈತ ಸಂಘದ ಅಧ್ಯಕ್ಷರಾದ ಶ್ರೀ ಬಸಲಿಂಗಪ್ಪ ನರಗುಂದ ಮನವಿ ಮಾಡಿದರು.
    2
    ಶಿಗ್ಗಾಂವಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಬೃಹತ್ ಪ್ರತಿಭಟನೆ.
ಶಿಗ್ಗಾಂವಿ. ರೈತಪರ ಒಕ್ಕೂಟ ಹಾಗೂ ಕನ್ನಡ ಪರ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಪ್ರಮುಖ ಮೂರು ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆಯನ್ನು ದಿನಾಂಕ್ 16. 9. 2026. ಬುಧವಾರ ರಂದು, ಪೋಸ್ಟ್ ಆಫೀಸ್ ನಿಂದ ಕಿತ್ತೂರು ರಾಣಿ ಚೆನ್ನಮ್ಮರ ಸರ್ಕಲ್ ವರೆಗೂ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಆದ ಕಾರಣ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ನಮ್ಮ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ತಾಲೂಕ ರೈತ ಸಂಘದ ಅಧ್ಯಕ್ಷರಾದ ಶ್ರೀ ಬಸಲಿಂಗಪ್ಪ ನರಗುಂದ ಮನವಿ ಮಾಡಿದರು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    3 hrs ago
  • ಹಿರಿಯೂರಿನ ಲಕ್ಷ್ಮಮ್ಮ ಬಡಾವಣೆಯಲ್ಲಿ ಗಣಪತಿ ಹಬ್ಬ ಕಾರ್ಯಕ್ರಮದಲ್ಲಿ ಇಂದು ಭರತ ನಾಟ್ಯ ಪ್ರದರ್ಶನ ಹಿರಿಯೂರಿನ ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಸೇವಾ ಟ್ರಸ್ಟ್ (ರಿ )ವತಿಯಿಂದ ಇಂದು ಸಾದ್ವಿ ನಾಟ್ಯ ಶಾಲೆವತಿಯಿಂದ ಭರತ ನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ಸುಮಾರು 10 ಕ್ಕೂ ಹೆಚ್ಚು ನೃತ್ಯಗಳನ್ನು ನಡೆಸಿಕೊಡಲಾಯಿತು... ಕಾರ್ಯಕ್ರಮದಲ್ಲಿ ಪೋಷಕರು ಸಾಹಿತ್ಯಸಕ್ತರು ಭಾಗವಹಿಸಿದ್ದರು... ಶಿಕ್ಷಕಿ ರೂಪಾ ಮೇಡಂರವರು ನಿರೂಪಣೆ ನಡೆಸಿಕೊಟ್ಟರು... ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿತು....
    1
    ಹಿರಿಯೂರಿನ ಲಕ್ಷ್ಮಮ್ಮ ಬಡಾವಣೆಯಲ್ಲಿ ಗಣಪತಿ ಹಬ್ಬ ಕಾರ್ಯಕ್ರಮದಲ್ಲಿ ಇಂದು ಭರತ ನಾಟ್ಯ ಪ್ರದರ್ಶನ 
ಹಿರಿಯೂರಿನ ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಸೇವಾ ಟ್ರಸ್ಟ್ (ರಿ )ವತಿಯಿಂದ ಇಂದು ಸಾದ್ವಿ ನಾಟ್ಯ ಶಾಲೆವತಿಯಿಂದ ಭರತ ನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ಸುಮಾರು 10 ಕ್ಕೂ ಹೆಚ್ಚು ನೃತ್ಯಗಳನ್ನು ನಡೆಸಿಕೊಡಲಾಯಿತು... ಕಾರ್ಯಕ್ರಮದಲ್ಲಿ ಪೋಷಕರು ಸಾಹಿತ್ಯಸಕ್ತರು ಭಾಗವಹಿಸಿದ್ದರು... ಶಿಕ್ಷಕಿ ರೂಪಾ ಮೇಡಂರವರು ನಿರೂಪಣೆ ನಡೆಸಿಕೊಟ್ಟರು... ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿತು....
    user_ಅಪ್ಪಾಜಿ ಬಂಡೆ
    ಅಪ್ಪಾಜಿ ಬಂಡೆ
    Yoga instructor ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
    23 hrs ago
  • ಅಲಂಪೂರ್ ಪೇಟೆಯಲ್ಲಿ ಗಣೇಶನ ಪ್ರತಿಷ್ಠಾಪನೆ ; ಪ್ರಸಾದಕ್ಕೆ ಚಾಲನೆ ನೀಡಿದ ಮುಖಂಡರು ಇಲಕಲ್ ನಗರದ ಅಲಂಪೂರ ಪೇಟೆಯಲ್ಲಿ ಓಣಿಯ ಗುರುಹಿರಿಯರು ಯುವ ಮಿತ್ರರಿಂದ ಪ್ರತಿಷ್ಠಾಪನೆಗೊಂಡಿರುವ ಗಣೇಶಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರದ ಹಿರಿಯ ಮುಖಂಡರಾದ ವೆಂಕಟೇಶ ಸಾಕಾ, ಮಂಜುನಾಥ ಹೊಸಮನಿ, ನಗರ ಪಿಎಸ್ಐ ನಾಗರಾಜ ಗಡಾದ, ಹನುಮಂತ ತುಂಬದ, ಅಶೋಕ ಪೂಜಾರಿ ಹಾಗೂ ಅನಂಪುರ್ಪೇಟೆಯ ಯುವ ಮಿತ್ರರು ಉಪಸ್ಥಿತರಿದ್ದರು
    4
    ಅಲಂಪೂರ್ ಪೇಟೆಯಲ್ಲಿ ಗಣೇಶನ ಪ್ರತಿಷ್ಠಾಪನೆ ; ಪ್ರಸಾದಕ್ಕೆ ಚಾಲನೆ ನೀಡಿದ ಮುಖಂಡರು
ಇಲಕಲ್ ನಗರದ ಅಲಂಪೂರ ಪೇಟೆಯಲ್ಲಿ
ಓಣಿಯ ಗುರುಹಿರಿಯರು ಯುವ ಮಿತ್ರರಿಂದ ಪ್ರತಿಷ್ಠಾಪನೆಗೊಂಡಿರುವ ಗಣೇಶಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದಕ್ಕೆ ಚಾಲನೆ ನೀಡಿದರು. 
ಈ ಸಂದರ್ಭದಲ್ಲಿ ನಗರದ ಹಿರಿಯ ಮುಖಂಡರಾದ ವೆಂಕಟೇಶ ಸಾಕಾ,  ಮಂಜುನಾಥ ಹೊಸಮನಿ, ನಗರ ಪಿಎಸ್ಐ ನಾಗರಾಜ ಗಡಾದ, ಹನುಮಂತ ತುಂಬದ, ಅಶೋಕ ಪೂಜಾರಿ ಹಾಗೂ ಅನಂಪುರ್ಪೇಟೆಯ ಯುವ ಮಿತ್ರರು ಉಪಸ್ಥಿತರಿದ್ದರು
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    4 hrs ago
  • ಕಿತ್ತೂರು ಉತ್ಸವಕ್ಕೆ ರಾಷ್ಟ್ರಮಟ್ಟದ ಮೆರುಗು ನೀಡುವ ಸಂಕಲ್ಪ! ಸಚಿವ ಸತೀಶ ಜಾರಕಿಹೊಳಿ. ಮೈಸೂರು ದಸರಾ ಉತ್ಸವದ ಮಾದರಿಯಲ್ಲಿ ಕಿತ್ತೂರು ಉತ್ಸವವನ್ನು ಮತ್ತಷ್ಟು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಿ, ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಅವರ ಶೌರ್ಯ, ಸಾಹಸ ಮತ್ತು ದೇಶಪ್ರೇಮದ ಇತಿಹಾಸವನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಈ ಬಾರಿಯ ಉತ್ಸವದ ರೂಪುರೇಷೆಗಳು, ಕಾರ್ಯಕ್ರಮಗಳ ಆಯೋಜನೆ ಹಾಗೂ ಅಗತ್ಯ ಸಿದ್ಧತೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ಉತ್ಸವದ ಉದ್ಘಾಟನೆಗೆ ಸಾಹಿತಿಗಳು, ಬುದ್ಧಿಜೀವಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಆಹ್ವಾನಿಸುವ ಕುರಿತು ಚಿಂತನೆ ನಡೆಸಲಾಯಿತು. ಬೆಳಗಿನ ಗೋಷ್ಠಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸುವುದು, ಮಕ್ಕಳಿಗೆ ಹೆಚ್ಚಿನ ಸಮಯ ಮೀಸಲಿಟ್ಟು ಅವರ ಜ್ಞಾನ, ಪ್ರತಿಭೆ ಹಾಗೂ ಸೃಜನಶೀಲತೆಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವುದು ಹಾಗೂ ಕಿತ್ತೂರು ಮತ್ತು ಕಾಕತಿ ಪ್ರದೇಶಗಳಿಗೆ ಸೀಮಿತವಾಗಿ ಕೃಷಿ ಸಂಬಂಧಿತ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಚರ್ಚಿಸಲಾಯಿತು. ಈ ಬಾರಿ ಕಿತ್ತೂರು ಉತ್ಸವಕ್ಕೆ ಸರ್ಕಾರದಿಂದ ₹5 ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹5 ಕೋಟಿ ಸೇರಿದಂತೆ ಒಟ್ಟು ₹10 ಕೋಟಿ ಅನುದಾನ ಒದಗಿಸುವ ಕುರಿತು ಮಾಹಿತಿ ನೀಡಲಾಯಿತು. ಉತ್ಸವದ ಅಂಗವಾಗಿ ಜಾನುವಾರು ಜಾತ್ರೆ ಮತ್ತು ತೋಟಗಾರಿಕೆ ಇಲಾಖೆಯ ವತಿಯಿಂದ ಕೃಷಿ ಮೇಳ ಆಯೋಜಿಸುವುದು ಹಾಗೂ ಅನುಮತಿ ದೊರೆತಲ್ಲಿ ಏರ್ ಶೋ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಯಿತು. ಸಭೆಯಲ್ಲಿ ಕಿತ್ತೂರು ಶಾಸಕ ಶ್ರೀ ಬಾಬಾಸಾಹೇಬ ಪಾಟೀಲ, ಬೆಳಗಾವಿ ಉತ್ತರ ಶಾಸಕ ಶ್ರೀ ಆಸೀಫ್ ಸೇಠ್, ಬೆಳಗಾವಿ ಜಿಲ್ಲಾಧಿಕಾರಿ ಶ್ರೀ ಮುಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಶ್ರೀ ಪ್ರಕಾಶ್ ನಿಕಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ರಾಹುಲ್ ಶಿಂಧೆ, ಎನ್‌ಡಬ್ಲ್ಯುಕೆಆರ್‌ಟಿಸಿ ಉಪಾಧ್ಯಕ್ಷ ಶ್ರೀ ಸುನೀಲ ಹನ್ನಮಣ್ಣವರ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
    1
    ಕಿತ್ತೂರು ಉತ್ಸವಕ್ಕೆ ರಾಷ್ಟ್ರಮಟ್ಟದ ಮೆರುಗು ನೀಡುವ ಸಂಕಲ್ಪ! ಸಚಿವ ಸತೀಶ ಜಾರಕಿಹೊಳಿ.
ಮೈಸೂರು ದಸರಾ ಉತ್ಸವದ ಮಾದರಿಯಲ್ಲಿ ಕಿತ್ತೂರು ಉತ್ಸವವನ್ನು ಮತ್ತಷ್ಟು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಿ, ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಅವರ ಶೌರ್ಯ, ಸಾಹಸ ಮತ್ತು ದೇಶಪ್ರೇಮದ ಇತಿಹಾಸವನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಈ ಬಾರಿಯ ಉತ್ಸವದ ರೂಪುರೇಷೆಗಳು, ಕಾರ್ಯಕ್ರಮಗಳ ಆಯೋಜನೆ ಹಾಗೂ ಅಗತ್ಯ ಸಿದ್ಧತೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ಉತ್ಸವದ ಉದ್ಘಾಟನೆಗೆ ಸಾಹಿತಿಗಳು, ಬುದ್ಧಿಜೀವಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಆಹ್ವಾನಿಸುವ ಕುರಿತು ಚಿಂತನೆ ನಡೆಸಲಾಯಿತು. ಬೆಳಗಿನ ಗೋಷ್ಠಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸುವುದು, ಮಕ್ಕಳಿಗೆ ಹೆಚ್ಚಿನ ಸಮಯ ಮೀಸಲಿಟ್ಟು ಅವರ ಜ್ಞಾನ, ಪ್ರತಿಭೆ ಹಾಗೂ ಸೃಜನಶೀಲತೆಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವುದು ಹಾಗೂ ಕಿತ್ತೂರು ಮತ್ತು ಕಾಕತಿ ಪ್ರದೇಶಗಳಿಗೆ ಸೀಮಿತವಾಗಿ ಕೃಷಿ ಸಂಬಂಧಿತ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಚರ್ಚಿಸಲಾಯಿತು.
ಈ ಬಾರಿ ಕಿತ್ತೂರು ಉತ್ಸವಕ್ಕೆ ಸರ್ಕಾರದಿಂದ ₹5 ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹5 ಕೋಟಿ ಸೇರಿದಂತೆ ಒಟ್ಟು ₹10 ಕೋಟಿ ಅನುದಾನ ಒದಗಿಸುವ ಕುರಿತು ಮಾಹಿತಿ ನೀಡಲಾಯಿತು. ಉತ್ಸವದ ಅಂಗವಾಗಿ ಜಾನುವಾರು ಜಾತ್ರೆ ಮತ್ತು ತೋಟಗಾರಿಕೆ ಇಲಾಖೆಯ ವತಿಯಿಂದ ಕೃಷಿ ಮೇಳ ಆಯೋಜಿಸುವುದು ಹಾಗೂ ಅನುಮತಿ ದೊರೆತಲ್ಲಿ ಏರ್ ಶೋ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಯಿತು.
ಸಭೆಯಲ್ಲಿ ಕಿತ್ತೂರು ಶಾಸಕ ಶ್ರೀ ಬಾಬಾಸಾಹೇಬ ಪಾಟೀಲ, ಬೆಳಗಾವಿ ಉತ್ತರ ಶಾಸಕ  ಶ್ರೀ ಆಸೀಫ್ ಸೇಠ್, ಬೆಳಗಾವಿ ಜಿಲ್ಲಾಧಿಕಾರಿ ಶ್ರೀ ಮುಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಶ್ರೀ ಪ್ರಕಾಶ್ ನಿಕಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ರಾಹುಲ್ ಶಿಂಧೆ, ಎನ್‌ಡಬ್ಲ್ಯುಕೆಆರ್‌ಟಿಸಿ ಉಪಾಧ್ಯಕ್ಷ ಶ್ರೀ ಸುನೀಲ ಹನ್ನಮಣ್ಣವರ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    4 hrs ago
  • ಗಣೇಶ ಮೂರ್ತಿಗೆ ವಿದ್ಯುತ್ ತಂತಿ ತಗುಲಿ ಅವಘಡ! ಇಬ್ಬರಿಗೆ ಗಾಯ; ತಪ್ಪಿದ ಭಾರೀ ದುರಂತ ಹೊಸಪೇಟೆ ನಗರದ ಹೊರವಲಯದಲ್ಲಿ ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸಾಗಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ವಿದ್ಯುತ್ ಪ್ರವಹಿಸಿದ ಪರಿಣಾಮ ಮೂರ್ತಿಗೆ ಬೆಂಕಿ ಹೊತ್ತಿಕೊಂಡಿದ್ದು, ಟ್ರಾಲಿಯಲ್ಲಿದ್ದ ಇಬ್ಬರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣ ಗಾಯಾಳುಗಳಿಗೆ ನೆರವು ನೀಡಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ರಸ್ತೆಗೆ ಇಳಿಬಿದ್ದಿದ್ದ ವಿದ್ಯುತ್ ತಂತಿಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂತಹ ತಾಜಾ ಕರ್ನಾಟಕ ಸುದ್ದಿಗಳಿಗಾಗಿ ASN News24 Kannada ಅನ್ನು Follow & Subscribe ಮಾಡಿ. #ಹೊಸಪೇಟೆ #ವಿಜಯನಗರ #ಗಣೇಶೋತ್ಸವ #ಗಣೇಶಮೂರ್ತಿ #ವಿದ್ಯುತ್ ಅವಘಡ #ಕರ್ನಾಟಕಸುದ್ದಿ #KannadaNews #KarnatakaNews #Hospet #Vijayanagara #GaneshChaturthi #GaneshFestival #BreakingNews #LatestNews #NewsUpdate #ASNNews24Kannada
    1
    ಗಣೇಶ ಮೂರ್ತಿಗೆ ವಿದ್ಯುತ್ ತಂತಿ ತಗುಲಿ ಅವಘಡ! ಇಬ್ಬರಿಗೆ ಗಾಯ; ತಪ್ಪಿದ ಭಾರೀ ದುರಂತ
ಹೊಸಪೇಟೆ ನಗರದ ಹೊರವಲಯದಲ್ಲಿ ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸಾಗಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ವಿದ್ಯುತ್ ಪ್ರವಹಿಸಿದ ಪರಿಣಾಮ ಮೂರ್ತಿಗೆ ಬೆಂಕಿ ಹೊತ್ತಿಕೊಂಡಿದ್ದು, ಟ್ರಾಲಿಯಲ್ಲಿದ್ದ ಇಬ್ಬರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.
ಸ್ಥಳೀಯರು ತಕ್ಷಣ ಗಾಯಾಳುಗಳಿಗೆ ನೆರವು ನೀಡಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ರಸ್ತೆಗೆ ಇಳಿಬಿದ್ದಿದ್ದ ವಿದ್ಯುತ್ ತಂತಿಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂತಹ ತಾಜಾ ಕರ್ನಾಟಕ ಸುದ್ದಿಗಳಿಗಾಗಿ ASN News24 Kannada ಅನ್ನು Follow & Subscribe ಮಾಡಿ.
#ಹೊಸಪೇಟೆ #ವಿಜಯನಗರ #ಗಣೇಶೋತ್ಸವ #ಗಣೇಶಮೂರ್ತಿ #ವಿದ್ಯುತ್ ಅವಘಡ #ಕರ್ನಾಟಕಸುದ್ದಿ #KannadaNews #KarnatakaNews #Hospet #Vijayanagara #GaneshChaturthi #GaneshFestival #BreakingNews #LatestNews #NewsUpdate #ASNNews24Kannada
    user_AsnNews24Kannada
    AsnNews24Kannada
    Local News Reporter Ballari, Karnataka•
    21 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.