logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಫೆ.19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಮುಧೋಳ : ನಗರದಲ್ಲಿ ಫೆಬ್ರವರಿ 19ರಂದು ಮರಾಠಾ ಸಮಾಜದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯುತ್ಸವವನ್ನು ಅತ್ಯಂತ ಸಡಗರ ಹಾಗೂ ಸೌಹಾರ್ದತೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಮರಾಠಾ ಸಮುದಾಯದ ಮುಖಂಡ ಡಾ. ಸಂಜಯ ಘಾರಗೆ ತಿಳಿಸಿದರು. ನಗರದ ಕಾನಿಪ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಾಜಿ ಮಹಾರಾಜರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಭಾರತದ ಹೆಮ್ಮೆ ಹಾಗೂ 'ಹಿಂದವಿ ಸ್ವರಾಜ್ಯ'ದ ಸ್ಥಾಪಕರು. ಅವರ ಆದರ್ಶಗಳು ಎಲ್ಲರಿಗೂ ಮಾದರಿಯಾಗಿದ್ದು, ಈ ಜಯಂತಿಯಲ್ಲಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಎಲ್ಲ ಸಮಾಜದ ಮುಖಂಡರು ಹಾಗೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಜಯಂತಿಯ ಅಂಗವಾಗಿ ಫೆ. 19ರಂದು ಬೆಳಿಗ್ಗೆ 9ರಿಂದ 9:30ರ ಅವಧಿಯಲ್ಲಿ ನಗರದ ಪ್ರಮುಖ ಶಿವಾಜಿ ವೃತ್ತದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿಗೆ ಜಲಾಭಿಷೇಕ, ವಿಶೇಷ ಪೂಜೆ ಹಾಗೂ ತೊಟ್ಟಿಲು ಪೂಜೆ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಹಸೀಲ್ದಾರ್ ಕಚೇರಿ ಸೇರಿದಂತೆ ಎಲ್ಲ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೂ ಆಮಂತ್ರಣ ನೀಡಲಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಮರಾಠಾ ಸಮಾಜದ ಪ್ರಮುಖರಾದ ಅನಂತರಾವ್ ಘೋರ್ಪಡೆ, ಬಸವಂತಪ್ಪ ಕಾಟೆ, ಭೀಮ ಕುಮಕಾಲೆ, ನಗರಸಭೆ ಸದಸ್ಯ ಸಂತೋಷ‌ ಪಾಲೋಜಿ, ಪರಶುರಾಮ ಕದಂ, ಪ್ರಶಾಂತ್ ಕಾಳೆ, ರಾಘು ಮುಖಾಸಿ, ಶೇಖರ್ ಘೋರ್ಪಡೆ, ಬಾಬು ಘೋರ್ಪಡೆ ಹಾಗೂ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು. ಭವ್ಯ ಶೋಭಾ ಯಾತ್ರೆ: ಸಂಜೆ 5 ಗಂಟೆಗೆ ನಗರದಲ್ಲಿ ಅದ್ಧೂರಿ ಶೋಭಾ ಯಾತ್ರೆ ಜರುಗಲಿದೆ. ಈ ಮೆರವಣಿಗೆಯು ನಗರದ ಜಡಗಣ್ಣ ಬಾಲಣ್ಣ ವೃತ್ತದಿಂದ ಪ್ರಾರಂಭಗೊಂಡು ತಂಬಾಕ ಚೌಕ್, ಗಾಂಧಿ ವೃತ್ತದ ಮೂಲಕ ಸಾಗಿ ಶಿವಾಜಿ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ.

1 hr ago
user_ಗೋವಿಂದಪ್ಪ ತಳವಾರ
ಗೋವಿಂದಪ್ಪ ತಳವಾರ
ಮುಧೋಳ, ಬಾಗಲಕೋಟೆ, ಕರ್ನಾಟಕ•
1 hr ago
3a3b351e-c486-4586-87d1-b8c159d0c983

ಫೆ.19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಮುಧೋಳ : ನಗರದಲ್ಲಿ ಫೆಬ್ರವರಿ 19ರಂದು ಮರಾಠಾ ಸಮಾಜದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯುತ್ಸವವನ್ನು ಅತ್ಯಂತ ಸಡಗರ ಹಾಗೂ ಸೌಹಾರ್ದತೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಮರಾಠಾ ಸಮುದಾಯದ ಮುಖಂಡ ಡಾ. ಸಂಜಯ ಘಾರಗೆ ತಿಳಿಸಿದರು. ನಗರದ ಕಾನಿಪ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಾಜಿ ಮಹಾರಾಜರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಭಾರತದ ಹೆಮ್ಮೆ ಹಾಗೂ 'ಹಿಂದವಿ ಸ್ವರಾಜ್ಯ'ದ ಸ್ಥಾಪಕರು. ಅವರ ಆದರ್ಶಗಳು ಎಲ್ಲರಿಗೂ ಮಾದರಿಯಾಗಿದ್ದು, ಈ ಜಯಂತಿಯಲ್ಲಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಎಲ್ಲ ಸಮಾಜದ ಮುಖಂಡರು ಹಾಗೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಜಯಂತಿಯ ಅಂಗವಾಗಿ ಫೆ. 19ರಂದು ಬೆಳಿಗ್ಗೆ 9ರಿಂದ 9:30ರ ಅವಧಿಯಲ್ಲಿ ನಗರದ ಪ್ರಮುಖ ಶಿವಾಜಿ ವೃತ್ತದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿಗೆ ಜಲಾಭಿಷೇಕ, ವಿಶೇಷ ಪೂಜೆ ಹಾಗೂ ತೊಟ್ಟಿಲು ಪೂಜೆ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಹಸೀಲ್ದಾರ್ ಕಚೇರಿ ಸೇರಿದಂತೆ ಎಲ್ಲ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೂ ಆಮಂತ್ರಣ ನೀಡಲಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಮರಾಠಾ ಸಮಾಜದ ಪ್ರಮುಖರಾದ ಅನಂತರಾವ್ ಘೋರ್ಪಡೆ, ಬಸವಂತಪ್ಪ ಕಾಟೆ, ಭೀಮ ಕುಮಕಾಲೆ, ನಗರಸಭೆ ಸದಸ್ಯ ಸಂತೋಷ‌ ಪಾಲೋಜಿ, ಪರಶುರಾಮ ಕದಂ, ಪ್ರಶಾಂತ್ ಕಾಳೆ, ರಾಘು ಮುಖಾಸಿ, ಶೇಖರ್ ಘೋರ್ಪಡೆ, ಬಾಬು ಘೋರ್ಪಡೆ ಹಾಗೂ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು. ಭವ್ಯ ಶೋಭಾ ಯಾತ್ರೆ: ಸಂಜೆ 5 ಗಂಟೆಗೆ ನಗರದಲ್ಲಿ ಅದ್ಧೂರಿ ಶೋಭಾ ಯಾತ್ರೆ ಜರುಗಲಿದೆ. ಈ ಮೆರವಣಿಗೆಯು ನಗರದ ಜಡಗಣ್ಣ ಬಾಲಣ್ಣ ವೃತ್ತದಿಂದ ಪ್ರಾರಂಭಗೊಂಡು ತಂಬಾಕ ಚೌಕ್, ಗಾಂಧಿ ವೃತ್ತದ ಮೂಲಕ ಸಾಗಿ ಶಿವಾಜಿ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ.

More news from ಕರ್ನಾಟಕ and nearby areas
  • ಮುಧೋಳ : ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಕೊಡುಗೈ ದಾನಿಗಳ ನೆರವಿನಿಂದ ಸಿದ್ದಗೊಂಡಿರುವ ವೇಮನ ಅಕ್ಯಾಡೆಮಿಯ ಶಾಲಾ ಕಟ್ಟಡ ಪೂರ್ಣಗೊಂಡಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ದಾಖಲಾತಿ ಆರಂಭಿಸಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಭಕ್ತಿ ಶಿರೋಮಣಿ ಹೇಮರಡ್ಡಿ ಮಲ್ಲಮ್ಮ ಶೈಕ್ಷಣಿಕ ಹಾಗೂ ಧಾರ್ಮಿಕ ಸಂಸ್ಥೆ ಅಧ್ಯಕ್ಷ ದಯಾನಂದ ಪಾಟೀಲ ಅವರು, ಒಟ್ಟು 31ಕೊಠಡಿ ಹೊಂದಿರುವ ಸುಸಜ್ಜಿತ ಕಟ್ಟಡದಲ್ಲಿ ಮುಂದಿನ ತಲೆಮಾರಿನ ವಿದ್ಯಾರ್ಥಿಗಳ ಏಳಿಗೆ ಗಮನದಲ್ಲಿಟ್ಟುಕೊಂಡು ಶಿಕ್ಷಣ ಸಂಸ್ಥೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು. ಈ ವೇಳೆ ಸಮಾಜದ ಮುಖಂಡರಾದ ಕೆ.ಆರ್.ಮಾಚಪ್ಪನವರ, ಶ್ರೀಕಾಂತ ಗುಜ್ಜನ್ನವರ, ಉದಯ ಸಾರವಾಡ, ವಿ.ಡಿ. ನಾಗನೂರ, ಎ.ಜಿ.ಪಾಟೀಲ, ಡಾ.ಸತೀಶ ಮಲಘಾಣ, ಪ್ರಾಚಾರ್ಯೆ ನೀಲಕಂಠೇಶ್ವರಿ ಸೇರಿದಂತೆ ಇತರರು ಇದ್ದರು.
    1
    ಮುಧೋಳ : ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಕೊಡುಗೈ ದಾನಿಗಳ ನೆರವಿನಿಂದ ಸಿದ್ದಗೊಂಡಿರುವ ವೇಮನ ಅಕ್ಯಾಡೆಮಿಯ ಶಾಲಾ ಕಟ್ಟಡ ಪೂರ್ಣಗೊಂಡಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ದಾಖಲಾತಿ ಆರಂಭಿಸಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಭಕ್ತಿ ಶಿರೋಮಣಿ ಹೇಮರಡ್ಡಿ ಮಲ್ಲಮ್ಮ ಶೈಕ್ಷಣಿಕ ಹಾಗೂ ಧಾರ್ಮಿಕ ಸಂಸ್ಥೆ ಅಧ್ಯಕ್ಷ ದಯಾನಂದ ಪಾಟೀಲ ಅವರು, ಒಟ್ಟು 31ಕೊಠಡಿ ಹೊಂದಿರುವ ಸುಸಜ್ಜಿತ ಕಟ್ಟಡದಲ್ಲಿ ಮುಂದಿನ ತಲೆಮಾರಿನ ವಿದ್ಯಾರ್ಥಿಗಳ ಏಳಿಗೆ ಗಮನದಲ್ಲಿಟ್ಟುಕೊಂಡು ಶಿಕ್ಷಣ ಸಂಸ್ಥೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.
ಈ ವೇಳೆ ಸಮಾಜದ ಮುಖಂಡರಾದ ಕೆ.ಆರ್.ಮಾಚಪ್ಪನವರ, ಶ್ರೀಕಾಂತ ಗುಜ್ಜನ್ನವರ, ಉದಯ ಸಾರವಾಡ, ವಿ.ಡಿ. ನಾಗನೂರ, ಎ.ಜಿ.ಪಾಟೀಲ, ಡಾ.ಸತೀಶ ಮಲಘಾಣ, ಪ್ರಾಚಾರ್ಯೆ ನೀಲಕಂಠೇಶ್ವರಿ ಸೇರಿದಂತೆ ಇತರರು ಇದ್ದರು.
    user_ಗೋವಿಂದಪ್ಪ ತಳವಾರ
    ಗೋವಿಂದಪ್ಪ ತಳವಾರ
    ಮುಧೋಳ, ಬಾಗಲಕೋಟೆ, ಕರ್ನಾಟಕ•
    1 hr ago
  • ಹೊಸ ಬಬಲಾದಿ ಮಠದಲ್ಲಿ 2026ರ ಕಾಲ ಜ್ಞಾನ ಸಾರಿದ ಸದಾಶಿವ ಅಜ್ಜನ್ನವರು ಹಾಗೂ ಶಿವರುದ್ರಯ್ಯ ಮುತ್ಯಾ
    1
    ಹೊಸ ಬಬಲಾದಿ ಮಠದಲ್ಲಿ 2026ರ ಕಾಲ ಜ್ಞಾನ ಸಾರಿದ ಸದಾಶಿವ ಅಜ್ಜನ್ನವರು ಹಾಗೂ ಶಿವರುದ್ರಯ್ಯ ಮುತ್ಯಾ
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    3 hrs ago
  • ಬಾಗಲಕೋಟೆ: ಜಿಲ್ಲೆಯ ತೇರದಾಳ ಪಟ್ಟಣದ ಲಿವಿಂಗ್ ಜೋಡಿಯೊಂದು ಲಾಡ್ಜ್‌ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆತಂಕ ಮೂಡಿಸಿದೆ. ಗಂಭೀರವಾಗಿ ಗಾಯಗೊಂಡಿರುವ ಜೋಡಿಯನ್ನು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಜೋಡಿ ಸಾವು-ಬದುಕಿನ ನಡುವೆ ನರಳಾಡುತ್ತಿದೆ. 25 ವರ್ಷದ ಅಕ್ಷತಾ ಶ್ರೀಶೈಲ ಸತ್ತಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 45 ವರ್ಷದ ಗುರುಪಾದಯ್ಯ ಮಠಪತಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ಗಾಯಾಳುಗಳನ್ನು ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಕ್ಷತಾ ಅವರ ದೇಹದ ಸುಮಾರು 90 ಶೇಕಡಾ ಭಾಗ ಸುಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆ ಯತ್ನಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.
    1
    ಬಾಗಲಕೋಟೆ: ಜಿಲ್ಲೆಯ ತೇರದಾಳ ಪಟ್ಟಣದ ಲಿವಿಂಗ್ ಜೋಡಿಯೊಂದು ಲಾಡ್ಜ್‌ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆತಂಕ ಮೂಡಿಸಿದೆ. ಗಂಭೀರವಾಗಿ ಗಾಯಗೊಂಡಿರುವ ಜೋಡಿಯನ್ನು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ಜೋಡಿ ಸಾವು-ಬದುಕಿನ ನಡುವೆ ನರಳಾಡುತ್ತಿದೆ. 25 ವರ್ಷದ ಅಕ್ಷತಾ ಶ್ರೀಶೈಲ ಸತ್ತಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 45 ವರ್ಷದ ಗುರುಪಾದಯ್ಯ ಮಠಪತಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊದಲು ಗಾಯಾಳುಗಳನ್ನು ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಕ್ಷತಾ ಅವರ ದೇಹದ ಸುಮಾರು 90 ಶೇಕಡಾ ಭಾಗ ಸುಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆ ಯತ್ನಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.
    user_PKBagalkot
    PKBagalkot
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    2 hrs ago
  • ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುವ ಪೊಲೀಸರ ಬಗ್ಗೆ ಸಮಾಜ ಕಾರ್ಯಕರ್ತೆ ಸಹನಾ ಅಂಗಡಿ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೊಲೀಸರ ಸಂಬಳ ಕಡಿಮೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ, ಯಾವುದೇ ಘಟನೆ ನಡೆದರೂ ಜನಪ್ರತಿನಿಧಿಗಳು ಪೊಲೀಸರನ್ನೇ ಗುರಿಯಾಗಿಸುತ್ತಾರೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ.ಸಹನಾ ಅಂಗಡಿ ಅವರ ಮಾತಿನಂತೆ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ದಿನರಾತ್ರಿ ಶ್ರಮಿಸುತ್ತಿದ್ದಾರೆ. ಹಬ್ಬ-ಹರಿದಿನ, ಕುಟುಂಬ ಸಮಾರಂಭಗಳನ್ನೂ ಬದಿಗಿರಿಸಿ ಸಮಾಜದ ಭದ್ರತೆಗೆ ಶ್ರಮಿಸುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕ ಗೌರವ ಮತ್ತು ಸಂಬಳ ದೊರೆಯುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಬೇರೆ ರಾಜ್ಯಗಳಲ್ಲಿ ಪೊಲೀಸರಿಗೆ ಹೆಚ್ಚಿನ ವೇತನ ಮತ್ತು ಸೌಲಭ್ಯಗಳಿವೆ ಎಂಬ ಹೋಲಿಕೆ ಮಾಡುತ್ತಾ, ರಾಜ್ಯ ಸರ್ಕಾರ ಗಮನಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.“ರಾಜ್ಯದಲ್ಲಿ ಏನೇ ಸಮಸ್ಯೆ ಆದರೂ ಮೊದಲಿಗೆ ಪೊಲೀಸರನ್ನೇ ದೂರುತ್ತಾರೆ. ಆದರೆ ಜನಪ್ರತಿನಿಧಿಗಳ ಹಿಂದೆ ಮುಂದೆ, ಅವರ ಕುಟುಂಬದ ಭದ್ರತೆಗೆ ಪೊಲೀಸರು ಬೇಕು. ಹಾಗಾದರೆ ಪೊಲೀಸರ ಕುಟುಂಬದ ಭದ್ರತೆ ಯಾರು ನೋಡಿಕೊಳ್ಳಬೇಕು? ಅವರ ಸಂಕಷ್ಟಗಳಿಗೆ ಸ್ಪಂದಿಸುವವರು ಯಾರು?”ಸಹನಾ ಅಂಗಡಿ ಅವರು ಪೊಲೀಸರ ಕೆಲಸದ ಒತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ಕುಟುಂಬ ಜೀವನದ ಮೇಲಿನ ಪರಿಣಾಮಗಳ ಕುರಿತು ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದು ಹೇಳಿದ್ದಾರೆ.ಅವರ ಪ್ರಕಾರ, ಕೇವಲ ಕರ್ತವ್ಯ ನಿರ್ವಹಣೆ ಮಾತ್ರವಲ್ಲದೆ, ಪೊಲೀಸರ ಕಲ್ಯಾಣಕ್ಕಾಗಿ ಸಮಗ್ರ ಯೋಜನೆಗಳು ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.ಪೊಲೀಸರ ಸೇವೆ ಮತ್ತು ಅವರ ಕಲ್ಯಾಣದ ಬಗ್ಗೆ ಉದ್ಭವಿಸಿರುವ ಈ ಪ್ರಶ್ನೆಗಳು ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ
    1
    ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುವ ಪೊಲೀಸರ ಬಗ್ಗೆ ಸಮಾಜ ಕಾರ್ಯಕರ್ತೆ ಸಹನಾ ಅಂಗಡಿ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೊಲೀಸರ ಸಂಬಳ ಕಡಿಮೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ, ಯಾವುದೇ ಘಟನೆ ನಡೆದರೂ ಜನಪ್ರತಿನಿಧಿಗಳು ಪೊಲೀಸರನ್ನೇ ಗುರಿಯಾಗಿಸುತ್ತಾರೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ.ಸಹನಾ ಅಂಗಡಿ ಅವರ ಮಾತಿನಂತೆ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ದಿನರಾತ್ರಿ ಶ್ರಮಿಸುತ್ತಿದ್ದಾರೆ. ಹಬ್ಬ-ಹರಿದಿನ, ಕುಟುಂಬ ಸಮಾರಂಭಗಳನ್ನೂ ಬದಿಗಿರಿಸಿ ಸಮಾಜದ ಭದ್ರತೆಗೆ ಶ್ರಮಿಸುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕ ಗೌರವ ಮತ್ತು ಸಂಬಳ ದೊರೆಯುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಬೇರೆ ರಾಜ್ಯಗಳಲ್ಲಿ ಪೊಲೀಸರಿಗೆ ಹೆಚ್ಚಿನ ವೇತನ ಮತ್ತು ಸೌಲಭ್ಯಗಳಿವೆ ಎಂಬ ಹೋಲಿಕೆ ಮಾಡುತ್ತಾ, ರಾಜ್ಯ ಸರ್ಕಾರ ಗಮನಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.“ರಾಜ್ಯದಲ್ಲಿ ಏನೇ ಸಮಸ್ಯೆ ಆದರೂ ಮೊದಲಿಗೆ ಪೊಲೀಸರನ್ನೇ ದೂರುತ್ತಾರೆ. ಆದರೆ ಜನಪ್ರತಿನಿಧಿಗಳ ಹಿಂದೆ ಮುಂದೆ, ಅವರ ಕುಟುಂಬದ ಭದ್ರತೆಗೆ ಪೊಲೀಸರು ಬೇಕು. ಹಾಗಾದರೆ ಪೊಲೀಸರ ಕುಟುಂಬದ ಭದ್ರತೆ ಯಾರು ನೋಡಿಕೊಳ್ಳಬೇಕು? ಅವರ ಸಂಕಷ್ಟಗಳಿಗೆ ಸ್ಪಂದಿಸುವವರು ಯಾರು?”ಸಹನಾ ಅಂಗಡಿ ಅವರು ಪೊಲೀಸರ ಕೆಲಸದ ಒತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ಕುಟುಂಬ ಜೀವನದ ಮೇಲಿನ ಪರಿಣಾಮಗಳ ಕುರಿತು ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದು ಹೇಳಿದ್ದಾರೆ.ಅವರ ಪ್ರಕಾರ, ಕೇವಲ ಕರ್ತವ್ಯ ನಿರ್ವಹಣೆ ಮಾತ್ರವಲ್ಲದೆ, ಪೊಲೀಸರ ಕಲ್ಯಾಣಕ್ಕಾಗಿ ಸಮಗ್ರ ಯೋಜನೆಗಳು ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.ಪೊಲೀಸರ ಸೇವೆ ಮತ್ತು ಅವರ ಕಲ್ಯಾಣದ ಬಗ್ಗೆ ಉದ್ಭವಿಸಿರುವ ಈ ಪ್ರಶ್ನೆಗಳು ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ
    user_Bhimahejje News
    Bhimahejje News
    Local News Reporter ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    8 hrs ago
  • Post by Ajay Shet
    3
    Post by Ajay Shet
    user_Ajay Shet
    Ajay Shet
    Grain Trader ಅಥಣಿ, ಬೆಳಗಾವಿ, ಕರ್ನಾಟಕ•
    23 hrs ago
  • ​ಸವದತ್ತಿ ಕ್ಷೇತ್ರದ ಜನತೆಗೆ ಗುಣಮಟ್ಟದ ಹಾಗೂ ಸುಸಜ್ಜಿತ ವೈದ್ಯಕೀಯ ಸೇವೆ ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.ಈ ನಿಟ್ಟಿನಲ್ಲಿ ಇಂದು ಸವದತ್ತಿ ಪಟ್ಟಣದಲ್ಲಿ ಒಂದು ಮಹತ್ವದ ಕಾರ್ಯಕ್ಕೆ ಚಾಲನೆ ನೀಡಿದರು.​ಸವದತ್ತಿಯ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ 100 ಹಾಸಿಗೆಗಳ ನೂತನ ಕಟ್ಟಡದ ವಿಸ್ತರಣೆ ಹಾಗೂ ನವೀಕರಣ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭವು ಇಂದು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡುರಾವ್ ಅವರ ಅಮೃತ ಹಸ್ತದಿಂದ ಈ ಅಭಿವೃದ್ಧಿ ಕಾಮಗಾರಿಗೆ ಅಧಿಕೃತವಾಗಿ ಅವರೊಂದಿಗೆ ಶಾಸಕ ಶ್ರೀ ವಿಶ್ವಾಸ ವೈದ್ಯ ಅವರು ಸೇರಿ ಚಾಲನೆ ನೀಡಿದರು.​ಈ ಸಂದರ್ಭದಲ್ಲಿ ಮಾತನಾಡಿ ಸವದತ್ತಿ ತಾಲೂಕಿನ ಜನರಿಗೆ ತುರ್ತು ಸಂದರ್ಭಗಳಲ್ಲಿ ಉತ್ತಮ ಚಿಕಿತ್ಸೆ ಸ್ಥಳೀಯವಾಗಿಯೇ ಸಿಗಬೇಕು ಎನ್ನುವುದು ನಮ್ಮ ಗುರಿ. ಈ 100 ಹಾಸಿಗೆಗಳ ಆಸ್ಪತ್ರೆಯ ವಿಸ್ತರಣೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.ಆಸ್ಪತ್ರೆಯ ನವೀಕರಣದೊಂದಿಗೆ ಆಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಇದನ್ನು ಮಾದರಿ ತಾಲೂಕು ಆಸ್ಪತ್ರೆಯನ್ನಾಗಿ ರೂಪಿಸಲಾಗುವುದು.​ಕ್ಷೇತ್ರದ ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಆರೋಗ್ಯ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ನಮ್ಮ ಅಭಿವೃದ್ಧಿ ಪಯಣ ನಿರಂತರವಾಗಿ ಮುಂದುವರಿಯಲಿದೆ.ಅಂದಾಜು ವೆಚ್ಚ ರೂ. 31 ಕೋಟಿ.​ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
    1
    ​ಸವದತ್ತಿ ಕ್ಷೇತ್ರದ ಜನತೆಗೆ ಗುಣಮಟ್ಟದ ಹಾಗೂ ಸುಸಜ್ಜಿತ ವೈದ್ಯಕೀಯ ಸೇವೆ ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.ಈ ನಿಟ್ಟಿನಲ್ಲಿ ಇಂದು ಸವದತ್ತಿ ಪಟ್ಟಣದಲ್ಲಿ ಒಂದು ಮಹತ್ವದ ಕಾರ್ಯಕ್ಕೆ ಚಾಲನೆ ನೀಡಿದರು.​ಸವದತ್ತಿಯ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ 100 ಹಾಸಿಗೆಗಳ ನೂತನ ಕಟ್ಟಡದ ವಿಸ್ತರಣೆ ಹಾಗೂ ನವೀಕರಣ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭವು ಇಂದು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡುರಾವ್ ಅವರ ಅಮೃತ ಹಸ್ತದಿಂದ ಈ ಅಭಿವೃದ್ಧಿ ಕಾಮಗಾರಿಗೆ ಅಧಿಕೃತವಾಗಿ ಅವರೊಂದಿಗೆ ಶಾಸಕ ಶ್ರೀ ವಿಶ್ವಾಸ ವೈದ್ಯ ಅವರು ಸೇರಿ ಚಾಲನೆ ನೀಡಿದರು.​ಈ ಸಂದರ್ಭದಲ್ಲಿ ಮಾತನಾಡಿ ಸವದತ್ತಿ ತಾಲೂಕಿನ ಜನರಿಗೆ ತುರ್ತು ಸಂದರ್ಭಗಳಲ್ಲಿ ಉತ್ತಮ ಚಿಕಿತ್ಸೆ ಸ್ಥಳೀಯವಾಗಿಯೇ ಸಿಗಬೇಕು ಎನ್ನುವುದು ನಮ್ಮ ಗುರಿ. ಈ 100 ಹಾಸಿಗೆಗಳ ಆಸ್ಪತ್ರೆಯ ವಿಸ್ತರಣೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.ಆಸ್ಪತ್ರೆಯ ನವೀಕರಣದೊಂದಿಗೆ ಆಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಇದನ್ನು ಮಾದರಿ ತಾಲೂಕು ಆಸ್ಪತ್ರೆಯನ್ನಾಗಿ ರೂಪಿಸಲಾಗುವುದು.​ಕ್ಷೇತ್ರದ ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಆರೋಗ್ಯ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ನಮ್ಮ ಅಭಿವೃದ್ಧಿ ಪಯಣ ನಿರಂತರವಾಗಿ ಮುಂದುವರಿಯಲಿದೆ.ಅಂದಾಜು ವೆಚ್ಚ ರೂ. 31 ಕೋಟಿ.​ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಆರೋಗ್ಯ ಇಲಾಖೆಯ  ಅಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
    user_Arun
    Arun
    Savadatti, Belagavi•
    8 hrs ago
  • ಗುಳೇದಗುಡ್ಡ : ಕೋಟೆಕಲ್ಲನ ಶ್ರೀ ಹೊಳೆಹುಚ್ಚೇಶ್ವರ ಸಂಸ್ಥಾನಮಠ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದವರಿಂದ ಫೆ. 18ರಿಂದ 20ರವರೆಗೆ ನಿತ್ಯ ಸಂಜೆ 7 ಗಂಟೆಗೆ ಮೂರುದಿನ ಶಿವಸಂಚಾರ ನಾಟಕ ಪ್ರದರ್ಶನ ಸಮೀಪದ ಕೋಟೆಕಲ್ಲ ಗ್ರಾಮದ ಶ್ರೀ ಹೊಳೆಹುಚ್ಚೇಶ್ವರಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷ ಸಾಣೆಹಳ್ಳಿಯ ಕಲಾತಂಡದಿಂದ ಶಿವಸಂಚಾರ ನಾಟಕ ಪ್ರದರ್ಶನ ಕೋಟೆಕಲ್ಲ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಫೆ. 18ರಂದು ಜಂಗಮದೆಡೆಗೆ, ಫೆ.19ರಂದು ಕಳ್ಳರ ಸಂತೆ, ಫೆ.20ರಂದು ಶಿವಯೋಗಿ ಸಿದ್ಧರಾಮೇಶ್ವರ ನಾಟಕವನ್ನು ಶ್ರೀ ಶಿವಕುಮಾರ ಕಲಾಸಂಘದವರು ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಂಗಪ್ಪ ಹಡಪದ, ಲಕ್ಷ್ಮಣ ಹಾಲನ್ನವರ, ಸಂತೋಷ ತಿಪ್ಪಾ ಇದ್ದರು.
    1
    ಗುಳೇದಗುಡ್ಡ : ಕೋಟೆಕಲ್ಲನ ಶ್ರೀ ಹೊಳೆಹುಚ್ಚೇಶ್ವರ ಸಂಸ್ಥಾನಮಠ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದವರಿಂದ ಫೆ. 18ರಿಂದ 20ರವರೆಗೆ ನಿತ್ಯ ಸಂಜೆ 7 ಗಂಟೆಗೆ ಮೂರುದಿನ ಶಿವಸಂಚಾರ ನಾಟಕ ಪ್ರದರ್ಶನ ಸಮೀಪದ ಕೋಟೆಕಲ್ಲ ಗ್ರಾಮದ ಶ್ರೀ ಹೊಳೆಹುಚ್ಚೇಶ್ವರಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷ ಸಾಣೆಹಳ್ಳಿಯ ಕಲಾತಂಡದಿಂದ ಶಿವಸಂಚಾರ ನಾಟಕ ಪ್ರದರ್ಶನ ಕೋಟೆಕಲ್ಲ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಫೆ. 18ರಂದು ಜಂಗಮದೆಡೆಗೆ, ಫೆ.19ರಂದು ಕಳ್ಳರ ಸಂತೆ, ಫೆ.20ರಂದು ಶಿವಯೋಗಿ ಸಿದ್ಧರಾಮೇಶ್ವರ ನಾಟಕವನ್ನು ಶ್ರೀ ಶಿವಕುಮಾರ ಕಲಾಸಂಘದವರು ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಂಗಪ್ಪ ಹಡಪದ, ಲಕ್ಷ್ಮಣ ಹಾಲನ್ನವರ, ಸಂತೋಷ ತಿಪ್ಪಾ ಇದ್ದರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    10 hrs ago
  • ಶ್ರೀ ಸದಾಶಿವ ಮುತ್ಯಾ ಹಾಗೂ ಚಂದ್ರಮ್ಮ ತಾಯಿಯವರ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು.
    1
    ಶ್ರೀ ಸದಾಶಿವ ಮುತ್ಯಾ ಹಾಗೂ ಚಂದ್ರಮ್ಮ ತಾಯಿಯವರ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು.
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    19 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.