*ನೇಪಾಳ ಪ್ರವಾಹ ದುರಂತ : ಸಂಪರ್ಕಕ್ಕೆ ಸಿಗದ ಕೋಲಾರ ಮೂಲದವರ ಬಗ್ಗೆ ಮಾಹಿತಿ ನೀಡಲು ಜಿಲ್ಲಾಡಳಿತ ಮನವಿ* ಕೋಲಾರ : ಆಗಸ್ಟ್ 26 ರಂದು ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹ ಹಾಗೂ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ, ಕೋಲಾರ ಮೂಲದ ಯಾವುದೇ ನಾಗರಿಕರು ಅಥವಾ ಪ್ರವಾಸಿಗರು ಅಲ್ಲಿಗೆ ತೆರಳಿ ಸಂಪರ್ಕಕ್ಕೆ ಸಿಗದೆ ಇದ್ದಲ್ಲಿ ತಕ್ಷಣವೇ ಮಾಹಿತಿಯನ್ನು ಒದಗಿಸುವಂತೆ ಕೋಲಾರ ಜಿಲ್ಲಾಡಳಿತವು ಸಾರ್ವಜನಿಕರಲ್ಲಿ ಮನವಿ ಮಾಡಿದೆ. ನೇಪಾಳದಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ನೂರಾರು ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದ್ದು,ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಧಿಕಾರಿಗಳು ಗುರುವಾರ (ಆ. 27) ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಜಿಲ್ಲೆಯಿಂದ ನೇಪಾಳಕ್ಕೆ ತೆರಳಿರುವವರ ಕುರಿತು ಆತಂಕವಿದ್ದರೆ ಅಥವಾ ಅವರ ಸಂಪರ್ಕ ಸಾಧ್ಯವಾಗದಿದ್ದರೆ, ಕೂಡಲೇ ಕೋಲಾರ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಅವರ ವಿವರಗಳನ್ನು ಒದಗಿಸುವಂತೆ ಸೂಚಿಸಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ತುರ್ತು ನೆರವಿಗಾಗಿ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ: ಕೋಲಾರ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ: 08152-243506 ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ದೂರವಾಣಿ ಸಂಖ್ಯೆ: 080-22253707 ಹಾಗೂ ಟೋಲ್ ಫ್ರೀ (Toll Free) ಸಂಖ್ಯೆ: 1070 ಭಾರತೀಯ ರಾಯಭಾರ ಕಛೇರಿಯ ತುರ್ತು ವಾಟ್ಸಾಪ್ (WhatsApp) ಹಾಗೂ ಕರೆ ಸಂಖ್ಯೆಗಳು: +977 9851316807, +977 9709107500, +977 9810326117. ನೇಪಾಳದಲ್ಲಿರುವ ತಮ್ಮ ಕುಟುಂಬದವರು ಅಥವಾ ಪರಿಚಿತರು ಸಂಪರ್ಕಕ್ಕೆ ಸಿಗದೆ ಇದ್ದಲ್ಲಿ, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ ಮೇಲಿನ ತುರ್ತು ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
*ನೇಪಾಳ ಪ್ರವಾಹ ದುರಂತ : ಸಂಪರ್ಕಕ್ಕೆ ಸಿಗದ ಕೋಲಾರ ಮೂಲದವರ ಬಗ್ಗೆ ಮಾಹಿತಿ ನೀಡಲು ಜಿಲ್ಲಾಡಳಿತ ಮನವಿ* ಕೋಲಾರ : ಆಗಸ್ಟ್ 26 ರಂದು ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹ ಹಾಗೂ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ, ಕೋಲಾರ ಮೂಲದ ಯಾವುದೇ ನಾಗರಿಕರು ಅಥವಾ ಪ್ರವಾಸಿಗರು ಅಲ್ಲಿಗೆ ತೆರಳಿ ಸಂಪರ್ಕಕ್ಕೆ ಸಿಗದೆ ಇದ್ದಲ್ಲಿ ತಕ್ಷಣವೇ ಮಾಹಿತಿಯನ್ನು ಒದಗಿಸುವಂತೆ ಕೋಲಾರ ಜಿಲ್ಲಾಡಳಿತವು ಸಾರ್ವಜನಿಕರಲ್ಲಿ ಮನವಿ ಮಾಡಿದೆ. ನೇಪಾಳದಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ನೂರಾರು ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದ್ದು,ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಧಿಕಾರಿಗಳು ಗುರುವಾರ (ಆ. 27) ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಜಿಲ್ಲೆಯಿಂದ ನೇಪಾಳಕ್ಕೆ ತೆರಳಿರುವವರ ಕುರಿತು ಆತಂಕವಿದ್ದರೆ ಅಥವಾ ಅವರ ಸಂಪರ್ಕ ಸಾಧ್ಯವಾಗದಿದ್ದರೆ, ಕೂಡಲೇ ಕೋಲಾರ ಜಿಲ್ಲಾ ವಿಪತ್ತು
ನಿರ್ವಹಣಾ ಕೇಂದ್ರಕ್ಕೆ ಅವರ ವಿವರಗಳನ್ನು ಒದಗಿಸುವಂತೆ ಸೂಚಿಸಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ತುರ್ತು ನೆರವಿಗಾಗಿ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ: ಕೋಲಾರ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ: 08152-243506 ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ದೂರವಾಣಿ ಸಂಖ್ಯೆ: 080-22253707 ಹಾಗೂ ಟೋಲ್ ಫ್ರೀ (Toll Free) ಸಂಖ್ಯೆ: 1070 ಭಾರತೀಯ ರಾಯಭಾರ ಕಛೇರಿಯ ತುರ್ತು ವಾಟ್ಸಾಪ್ (WhatsApp) ಹಾಗೂ ಕರೆ ಸಂಖ್ಯೆಗಳು: +977 9851316807, +977 9709107500, +977 9810326117. ನೇಪಾಳದಲ್ಲಿರುವ ತಮ್ಮ ಕುಟುಂಬದವರು ಅಥವಾ ಪರಿಚಿತರು ಸಂಪರ್ಕಕ್ಕೆ ಸಿಗದೆ ಇದ್ದಲ್ಲಿ, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ ಮೇಲಿನ ತುರ್ತು ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಮುರುಗಮಲ್ಲ ಉರುಸ್ ಮಹೋತ್ಸವ ಶಾಂತಿ,ಸೌಹಾರ್ದತೆಗೆ ಪ್ರಾರ್ಥಿಸಿದ:ದರ್ಗಾದಲ್ಲಿ ಜೆ.ಕೆ. ಕೃಷ್ಣಾರೆಡ್ಡಿ ವಿಶೇಷ ಪೂಜೆ1
- ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ. ದೇವನಹಳ್ಳಿ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ. 7 ಗಂಟೆಯ ವಿಮಾನದಲ್ಲಿ ಪ್ರಯಾಣ. AI2654 ವಿಮಾನದ ಮೂಲಕ ಪ್ರಯಾಣ. ಕಾಂಗ್ರೆಸ್ ಕಚೇರಿ ಉದ್ಘಾಟನೆ, ನೀರಿನ ಸಮಸ್ತ ಕುರಿತು ಕಾನೂನು ತಜ್ಞರ ಜೊತೆಯಲ್ಲಿ ಚರ್ಚೆಗೆ ದೆಹಲಿ ಪ್ರಯಾಣ. ಸಿಎಂ ಬೀಳ್ಕೊಡಲು ಏರ್ಪೋರ್ಟ್ ಗೆ ಆಗಮಿಸಿದ ಸಚಿವ ಈಶ್ವರ್ ಖಂಡ್ರೆ. ಬೀದರ್ ಶಾಸಕ ರಹೀಂಖಾನ್ ಸಿಎಂ ತೆರಳಿದ ನಂತರ ಬೆಂಗಳೂರಿನತ್ತ ಹೊರಡಲಿರುವ ಈಶ್ವರ್ ಖಂಡ್ರೆ ರಹಿಂಖಾನ್ ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ಪ್ರಯಾಣ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ1
- ಟಿಪ್ಪು ನಗರದಲ್ಲಿ ‘ಐ ಲವ್ ಮಹಮ್ಮದ್’ ಬೃಹತ್ ಬ್ಯಾನರ್! ಟಿಪ್ಪು ಕಟೌಟ್ ಪಕ್ಕದಲ್ಲೇ ಬ್ಯಾನರ್, ಮತ್ತೆ ಚರ್ಚೆ! ಟಿಪ್ಪು ನಗರದಲ್ಲಿ ‘ಐ ಲವ್ ಮಹಮ್ಮದ್’ ಬೃಹತ್ ಬ್ಯಾನರ್! ಟಿಪ್ಪು ಕಟೌಟ್ ಪಕ್ಕದಲ್ಲೇ ಬ್ಯಾನರ್, ಮತ್ತೆ ಚರ್ಚೆ!1
- ಪಕ್ಷದಲ್ಲಿ ಎಲ್ಲರೂ ಶಿಸ್ತಿನ ಸಿಪಾಯಿಗಳು: ಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರು:ಕಾಂಗ್ರೆಸ್ ಪಕ್ಷದಲ್ಲಿ ಸಚಿವರು, ಶಾಸಕರು, ಕಾರ್ಯಕರ್ತರು ಸೇರಿ ಎಲ್ಲರೂ ಶಿಸ್ತಿನ ಸಿಪಾಯಿಗಳು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರ ನಗರ ನಿವಾಸದ ಬಳಿ ಮಾಧ್ಯಮಗಳು ಸಚಿವ ನಾಗೇಂದ್ರ ಅವರು ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ವದಂತಿಗಳಿವೆಯಲ್ಲಾ ಎಂದು ಕೇಳಿದಾಗ ಶಿವಕುಮಾರ್ ಅವರು ಬುಧವಾರ ಈ ರೀತಿ ಪ್ರತಿಕ್ರಿಯಿಸಿದರು.1
- ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರ: ಪಕ್ಷದ ಪ್ರತಿಯೊಬ್ಬರೂ ಶಿಸ್ತಿನ ಸಿಪಾಯಿಗಳು ಎಂದ ಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು: ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಕುರಿತು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ನಮ್ಮ ಪಕ್ಷದಲ್ಲಿ ಶಾಸಕರು, ಸಚಿವರು ಹಾಗೂ ಕಾರ್ಯಕರ್ತರು ಸೇರಿದಂತೆ ಪ್ರತಿಯೊಬ್ಬರೂ ಶಿಸ್ತಿನ ಸಿಪಾಯಿಗಳಾಗಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ತೀವ್ರ ಹೋರಾಟ ನಡೆಸುತ್ತಿವೆ. ಈ ಬೆಳವಣಿಗೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, ಪಕ್ಷದಲ್ಲಿ ಎಲ್ಲರೂ ಶಿಸ್ಬದ್ಧವಾಗಿ ಹಾಗೂ ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಶಾಸಕರು, ಸಚಿವರು ಹಾಗೂ ಪ್ರತಿ ಹಂತದ ಕಾರ್ಯಕರ್ತರು ಸಂಪೂರ್ಣ ಶಿಸ್ಲಿನಿಂದ (ಡಿಸಿಪ್ಲಿನ್) ಇದ್ದಾರೆ ಎಂದು ಪುನರುಚ್ಚರಿಸಿದ ಡಿ.ಕೆ. ಶಿವಕುಮಾರ್, ಪಕ್ಷದ ಹಿತಾಸಕ್ತಿ ಮತ್ತು ನಿರ್ದೇಶನದಂತೆ ಎಲ್ಲರೂ ನಡೆದುಕೊಳ್ಳಲಿದ್ದಾರೆ ಎಂಬ ಸಂದೇಶವನ್ನು ನೀಡಿದರು.1
- ವಾಲ್ಮೀಕಿ ನಿಗಮದ ₹187 ಕೋಟಿ ಹಗರಣ! ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು | Janardhana Reddy Attack ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹187 ಕೋಟಿ ರೂಪಾಯಿಗಳ ದುರ್ಬಳಕೆ ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಚಿವ ಬಿ. ನಾಗೇಂದ್ರ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಈ ಹಣ ವಾಲ್ಮೀಕಿ ಸಮುದಾಯದ ಲಕ್ಷಾಂತರ ಫಲಾನುಭವಿಗಳಿಗೆ ತಲುಪಬೇಕಾಗಿತ್ತು. ಆದರೆ ದುರ್ಬಳಕೆಯಿಂದ ಯುವಕರು, ಮಹಿಳೆಯರು ಹಾಗೂ ರೈತರು ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ವಿಚಾರದಲ್ಲಿ ಮೌನವಾಗಿರುವುದೇಕೆ ಎಂಬ ಪ್ರಶ್ನೆಯನ್ನೂ ಬಿಜೆಪಿ ನಾಯಕರು ಎತ್ತಿದ್ದಾರೆ. 👉 ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ. #ValmikiScam #BNagendra #KarnatakaPolitics #BJP #Congress #JanardhanaReddy #BreakingNews #KarnatakaNews #ValmikiCorporation #PoliticalNews #Siddaramaiah #DKShivakumar #ASNNews24Kannada #KannadaNews #BellaryNews1
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಈದ್ ಮಿಲಾದ್ ಸಂಭ್ರಮ:ಪ್ರವಾದಿ ಪೈಗಂಬರರ ಜನ್ಮದಿನಾಚರಣೆ1
- ನಾನು ಯಾಕೆ ಉತ್ತರ ಕೊಡಬೇಕು ಅವರು ಏನಾದ್ರೂ ಹೇಳಲಿ ಸಿ ಎಂ ಡಿಕೆ ಹೇಳಿಕೆ ನಾನು ಯಾಕೆ ಉತ್ತರ ಕೊಡಬೇಕು ಅವರು ಏನಾದ್ರೂ ಹೇಳಲಿ ಸಿ ಎಂ ಡಿಕೆ ಹೇಳಿಕೆ1
- ದುಬೈನಿಂದ ಇಂಡಿಗೋ ವಿಮಾನದಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಳ್ಳಸಾಗಣೆಗೆಗೆ ಯತ್ನಿಸಿದ ಆರೋಪಿ ಏರ್ಪೋರ್ಟ್ ನಲ್ಲಿ ಕಸ್ಟಮ್ ಅಧಿಕಾರಿಗಳ ಕಾರ್ಯಾಚರಣೆ #ದೇವನಹಳ್ಳಿ ಬೆಂಗಳೂರು:ದುಬೈನಿಂದ ಇಂಡಿಗೋ ವಿಮಾನದಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಳ್ಳಸಾಗಣೆಗೆಗೆ ಯತ್ನಿಸಿದ ಆರೋಪಿಯನ್ನ ಕಾರ್ಯಾಚರಣೆ ನಡೆಸಿ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಮೊಹಮ್ಮದ್ ಸಿರಾಜ್ ಕಳ್ಳಸಾಗಣೆಗೆ ಯತ್ನ ಮಾಡಿದ ಆರೋಪಿಯಾಗಿದ್ದು,ಬಾಯಿಯಲ್ಲಿ ಚಿನ್ನದ 82 ಗ್ರಾಂ ತೂಕದ ಎರಡು ಕ್ಯಾಪ್ಸುಲ್ ಸಾಗಾಟ ಮಾಡಲು ಯತ್ನಿಸಿದ್ದು,ಬೆಂಗಳೂರಿನಿಂದ ಗಾಜಿಯಾಬಾದ್ ಗೆ ಪ್ರಯಾಣ ಬೆಳೆಸಲು ಟಿಕೆಟ್ ಬುಕ್ ಮಾಡಿದ .ಈ ವೇಳೆ ಸ್ಕ್ರೀನಿಂಗ್ ಮಾಡುವಾಗ ಆರೋಪಿ ಸಿಕ್ಕಿಬಿದ್ದಿದ್ದು,ಆರೋಪಿಯನ್ನ ವಶಕ್ಕೆ ಪಡೆದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೋಲೀಸರ ವಶಕ್ಕೆ ಕಸ್ಟಮ್ ಅಧಿಕಾರಿಗಳು ನೀಡಿದ್ದಾರೆ.1