ಕರಾವಳಿ ಕರ್ನಾಟಕವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ಆಗ್ರಹ ಮಂಗಳೂರಲ್ಲಿ ಸೆಪ್ಟೆಂಬರ್ 18ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ, ಕರಾವಳಿ ಕರ್ನಾಟಕವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವಂತೆ ಆಮ್ ಆದ್ಮಿ ಪಾರ್ಟಿ (ಎಎಪಿ) ದಕ್ಷಿಣ ಕನ್ನಡ ಘಟಕವು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಆಗ್ರಹಿಸಿದೆ. ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಅವರು ಕರಾವಳಿಯ ಆರ್ಥಿಕತೆಯು ಮುಖ್ಯವಾಗಿ ಆಹಾರ, ಸಂಸ್ಕೃತಿ, ಶಿಕ್ಷಣ ಮತ್ತು ವ್ಯಾಪಾರ ಎಂಬ ನಾಲ್ಕು ಪ್ರಮುಖ ಆಧಾರ ಸ್ತಂಭಗಳ ಮೇಲೆ ನಿಂತಿದೆ ಎಂದರು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಅಬಕಾರಿ ನೀತಿಯಲ್ಲಿ ತಕ್ಷಣದ ಸುಧಾರಣೆ ಮತ್ತು ಉದಾರೀಕರಣವನ್ನು ಜಾರಿಗೆ ತರಬೇಕು. ಅಬಕಾರಿ ಇಲಾಖೆಯಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರವು ಪ್ರವಾಸೋದ್ಯಮ ಅಭಿವೃದ್ಧಿಗೆ ತಡೆಯಾಗಿದೆ. ಸದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂದು ಸರಕಾರವನ್ನು ಆಗ್ರಹಿಸಿದರು.ಮೀನುಗಾರಿಕಾ ವಲಯವನ್ನು ರಾಜ್ಯ ಸರಕಾರವು ನಿರಂತರವಾಗಿ ನಿರ್ಲಕ್ಷಿಸುತ್ತಿದೆ ಎಂದು ಆಪಾದಿಸಿದ ಅವರು ಮೀನುಗಾರಿಕಾ ಸಚಿವರಾಗಿ ಮೀನುಗಾರಿಕೆಯ ಬಗ್ಗೆ ಏನು ಗೊತ್ತಿಲ್ಲದವರನ್ನು ನೇಮಕ ಮಾಡಲಾಗಿದೆ. ಇದೀಗ ಮೀನುಗಾರಿಕಾ ಸಮುದಾಯವು ಹವಾಮಾನ ಬದಲಾವಣೆಯ ಪರಿಣಾಮ , ಸಾಗರ ಆಮ್ಲೀಕರಣ, ನೀರಿನ ಪ್ರಮಾಣ ಕುಸಿತ, ಬಳಕೆಗೆ ಯೋಗ್ಯವಲ್ಲದ ಅತಿಯಾದ ಮೀನುಗಳ ಲಭ್ಯತೆಯಂತಹ ಗಂಭೀರ ಸಮಸ್ಯೆಗಳೊಂದಿಗೆ ಹೋರಾಡುತ್ತಿದೆ. ಈ ಎಲ್ಲಾ ಸವಲಾಉಗಳನ್ನು ಎದುರಿಸಲು ನೈಜ ಅನುಭವ, ವಿಷಯ ಜ್ಞಾನವಿರುವ ನಾಯಕರನ್ನು ಮೀನುಗಾರಿಕಾ ಸಚಿವರನ್ನಾಗಿ ನೇಮಕ ಮಾಡಬೇಕು. ಯಾವುದೇ ವಿಳಂಬವಿಲ್ಲದೆ ಪಾರದರ್ಶಕ , ಪ್ರವಾಸೋದ್ಯಮ ಸ್ನೇಹಿ ನೀತಿಗಳನ್ನು ಜಾರಿಗೆ ತರಬೇಕೆಂದು ವಿವೇಕಾನಂದ ಸಾಲಿನ್ಸ್ ಆಗ್ರಹಿಸಿದರು. ಆಪ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್. ಎಲ್. ಪಿಂಟೊ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಮಡಿವಾಳ, ಜಿಲ್ಲಾ ಕಾರ್ಯದರ್ಶಿಗಳಾದ ವಾಸುದೇವ್ ,ಕಬೀರ್ ಕಾಟಿಪಳ್ಳ, ಪ್ರಮುಖರಾದ ಫ್ಲೋರಿನ್ ಗೋವಿಯಸ್, ಸುಜಾತ ಯತೀಶ್ ಉಪಸ್ಥಿತರಿದ್ದರು.
ಕರಾವಳಿ ಕರ್ನಾಟಕವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ಆಗ್ರಹ ಮಂಗಳೂರಲ್ಲಿ ಸೆಪ್ಟೆಂಬರ್ 18ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ, ಕರಾವಳಿ ಕರ್ನಾಟಕವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವಂತೆ ಆಮ್ ಆದ್ಮಿ ಪಾರ್ಟಿ (ಎಎಪಿ) ದಕ್ಷಿಣ ಕನ್ನಡ ಘಟಕವು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಆಗ್ರಹಿಸಿದೆ. ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಅವರು ಕರಾವಳಿಯ ಆರ್ಥಿಕತೆಯು ಮುಖ್ಯವಾಗಿ ಆಹಾರ, ಸಂಸ್ಕೃತಿ, ಶಿಕ್ಷಣ ಮತ್ತು ವ್ಯಾಪಾರ ಎಂಬ ನಾಲ್ಕು ಪ್ರಮುಖ ಆಧಾರ ಸ್ತಂಭಗಳ ಮೇಲೆ ನಿಂತಿದೆ ಎಂದರು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಅಬಕಾರಿ ನೀತಿಯಲ್ಲಿ ತಕ್ಷಣದ ಸುಧಾರಣೆ ಮತ್ತು ಉದಾರೀಕರಣವನ್ನು ಜಾರಿಗೆ ತರಬೇಕು. ಅಬಕಾರಿ ಇಲಾಖೆಯಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರವು ಪ್ರವಾಸೋದ್ಯಮ ಅಭಿವೃದ್ಧಿಗೆ ತಡೆಯಾಗಿದೆ. ಸದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂದು ಸರಕಾರವನ್ನು ಆಗ್ರಹಿಸಿದರು.ಮೀನುಗಾರಿಕಾ ವಲಯವನ್ನು ರಾಜ್ಯ ಸರಕಾರವು ನಿರಂತರವಾಗಿ ನಿರ್ಲಕ್ಷಿಸುತ್ತಿದೆ ಎಂದು ಆಪಾದಿಸಿದ ಅವರು ಮೀನುಗಾರಿಕಾ ಸಚಿವರಾಗಿ ಮೀನುಗಾರಿಕೆಯ ಬಗ್ಗೆ ಏನು ಗೊತ್ತಿಲ್ಲದವರನ್ನು ನೇಮಕ ಮಾಡಲಾಗಿದೆ. ಇದೀಗ ಮೀನುಗಾರಿಕಾ ಸಮುದಾಯವು ಹವಾಮಾನ ಬದಲಾವಣೆಯ ಪರಿಣಾಮ , ಸಾಗರ ಆಮ್ಲೀಕರಣ, ನೀರಿನ ಪ್ರಮಾಣ ಕುಸಿತ, ಬಳಕೆಗೆ ಯೋಗ್ಯವಲ್ಲದ ಅತಿಯಾದ ಮೀನುಗಳ ಲಭ್ಯತೆಯಂತಹ ಗಂಭೀರ ಸಮಸ್ಯೆಗಳೊಂದಿಗೆ ಹೋರಾಡುತ್ತಿದೆ. ಈ ಎಲ್ಲಾ ಸವಲಾಉಗಳನ್ನು ಎದುರಿಸಲು ನೈಜ ಅನುಭವ, ವಿಷಯ ಜ್ಞಾನವಿರುವ ನಾಯಕರನ್ನು ಮೀನುಗಾರಿಕಾ ಸಚಿವರನ್ನಾಗಿ ನೇಮಕ ಮಾಡಬೇಕು. ಯಾವುದೇ ವಿಳಂಬವಿಲ್ಲದೆ ಪಾರದರ್ಶಕ , ಪ್ರವಾಸೋದ್ಯಮ ಸ್ನೇಹಿ ನೀತಿಗಳನ್ನು ಜಾರಿಗೆ ತರಬೇಕೆಂದು ವಿವೇಕಾನಂದ ಸಾಲಿನ್ಸ್ ಆಗ್ರಹಿಸಿದರು. ಆಪ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್. ಎಲ್. ಪಿಂಟೊ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಮಡಿವಾಳ, ಜಿಲ್ಲಾ ಕಾರ್ಯದರ್ಶಿಗಳಾದ ವಾಸುದೇವ್ ,ಕಬೀರ್ ಕಾಟಿಪಳ್ಳ, ಪ್ರಮುಖರಾದ ಫ್ಲೋರಿನ್ ಗೋವಿಯಸ್, ಸುಜಾತ ಯತೀಶ್ ಉಪಸ್ಥಿತರಿದ್ದರು.
- ₹3,383 ಕೋಟಿ ಆಸ್ತಿ ಒಡೆಯ ಶಾಸಕ ಬೀದಿಯಲ್ಲಿ ಭಿಕ್ಷೆ ಬೇಡಿದ್ದೇಕೆ? ಕಾರಣ ವೈರಲ್! ಮುಂಬೈ ಬೀದಿಯಲ್ಲಿ ಭಿಕ್ಷುಕನಾದ ಕೋಟ್ಯಾಧೀಶ ಬಿಜೆಪಿ ಶಾಸಕ ಪರಾಗ್ ಶಾ!1
- ಶಿವಮೊಗ್ಗ-ವಂದೇ ಮಾತರಂ ಗೀತೆ ಎರಡೇ ಚರಣ: ಕಾರ್ಯಕ್ರಮ ದಿಂದ ಹೊರನಡೆದ ಶಾಸಕ ಶಿವಮೊಗ್ಗ: ವಂದೇ ಮಾತರಂ ಗೀತೆಯಲ್ಲಿ ಕೇವಲ ಎರಡು ಚರಣವನ್ನು ಹಾಡಿದ್ದಕ್ಕೆ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯ ಕ್ರಮದಿಂದ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಹೊರ ನಡೆದಿರುವ ಘಟನೆ ನಡೆದಿದೆ. ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳ ವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಕಾರ್ಯಕ್ರಮವನ್ನು ಜಿಲ್ಲಾಡಳಿತ ಆಯೋಜಿಸಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಚನ್ನಬಸಪ್ಪ ಕಾರ್ಯಕ್ರಮ ದಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣ ಮಾತ್ರ ಹಾಡಿದ್ದಕ್ಕೆ ವೇದಿಕೆಯಲ್ಲಿಯೇ ಅಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಅವರು ಇದ್ದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣ ಹಾಡಿ ಅಪಮಾನ ಮಾಡಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಕಾರ್ಯಕ್ರಮದಲ್ಲಿ ಎರಡು ಚರಣ ಹಾಡಬೇಕೆಂದು ಎಲ್ಲಿ ಇದೆ, ಆದೇಶ ತೋರಿಸಿ ಎಂದು ಆಗ್ರಹಿಸಿದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಲ್ಲೇಶಪ್ಪ ರಾಜ್ಯ ಸರ್ಕಾರದ ಆದೇಶವನ್ನು ತೋರಿಸಿದರು. ಇದಕ್ಕೆ ಗರಂ ಆದ ಶಾಸಕರು ಹಾಗಾದ್ರೆ ಕೇಂದ್ರ ಸರ್ಕಾರದ ಆದೇಶವನ್ನು ಮೊಟಕುಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ವೇದಿಕೆಯಲ್ಲಿ ನಾನು ಇರಲ್ಲ ಎಂದು ಭವನದಿಂದ ಹೊರ ನಡೆದರು. ನಂತರ ತಮ್ಮ ಕಚೇರಿಯಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಸೇರಿ ಒಂದು ಕಾನೂನು ಮಾಡುತ್ತದೆ. ಆದರೆ ರಾಜ್ಯ ಸರ್ಕಾರವು ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳು ಇರುವ ಕಾರ್ಯಕ್ರಮ ದಲ್ಲಿ ಮಾತ್ರ ಪೂರ್ಣ ಗೀತೆ ಹಾಡಬೇಕು, ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಕೇವಲ ಎರಡು ಚರಣ ಹಾಡಬೇಕೆಂದು ಆದೇಶ ಮಾಡಿದೆ. ಇದು ಸರಿ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಣಯ ವನ್ನು ತೆಗೆದುಕೊಂಡು ವಂದೇ ಮಾತರಂ ಗೀತೆಗೆ 150 ವರ್ಷವಾದ ಕಾರಣ ಗೀತೆಯನ್ನು ಗಾಯನ ಮಾಡಬೇಕೆಂದು ಸಂಸತ್ತಿನಲ್ಲಿ ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಆದರೆ ಇದನ್ನು ರಾಜ್ಯ ಸರ್ಕಾರ ತನ್ನ ಕ್ಯಾಬಿನೆಟ್ನಲ್ಲಿ ತೀರ್ಮಾನ ಮಾಡಲಾಗಿದೆ ಎಂದು ವಂದೇ ಮಾತರಂನ ಎರಡು ಚರಣ ಮಾತ್ರ ಹಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇಂದು ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಜಾಪ್ರಭುತ್ವ ದಿನಾಚರಣೆಯಂದು ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣವನ್ನು ಹಾಡಲಾಯಿತು. ಇದನ್ನು ಪ್ರಶ್ನಿಸಿದರೆ, ರಾಜ್ಯ ಸರ್ಕಾರದ ಆದೇಶ ಎಂದು ಜಿಲ್ಲಾಧಿಕಾರಿ ಗಳು ತಿಳಿಸಿದ್ದಾರೆ. ಇದರಿಂದ ನಾನು ಕಾರ್ಯಕ್ರಮದಿಂದ ಹೊರಗೆ ಬಂದಿದ್ದೇನೆ ಎಂದು ಶಾಸಕ ಚನ್ನಬಸಪ್ಪ ತಿಳಿಸಿದರು. ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳು, ಕೇಂದ್ರ ಸಚಿವರು ಇರುವ ಕಾರ್ಯಕ್ರಮ ಹೊರತುಪಡಿಸಿ ಉಳಿದ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಿನ ಎರಡು ಚರಣ ಮಾತ್ರ ಹಾಡಬೇಕೆಂದು ರಾಜ್ಯ ಸರ್ಕಾರ ಇತ್ತೀಚಿಗೆ ಆದೇಶ ಮಾಡಿದೆ. ಹಾಗಾದ್ರೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪಿಎಂ ಅವರಿಗೆ ಒಂದು ಕಾನೂನು, ಸಾಮಾನ್ಯ ಜನರಿಗೆ ಒಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು. ಕಾನೂನು ಅನ್ನು ಗಾಳಿಗೆ ತೂರುವ ಕೆಲಸ ಮಾಡುತ್ತಿದ್ದಿರಾ, ನೀವು ಈ ದೇಶದ ಪ್ರಜೆಗಳು ಅಲ್ವಾ ಎಂದು ಅವರು ಪ್ರಶ್ನಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬೇರೆ ಬೇರೆ ಕಾನೂನು ಇದೆಯೇ ಎಂದರು. ಜನಗಣಮನ ಗೀತೆಯಲ್ಲಿ ಎಲ್ಲ ರಾಜ್ಯಗಳ ಹೆಸರು ಇದೆಯೇ ಎಂದು ಪ್ರಶ್ನಿಸಿದರು. ಇದು ಅಕ್ಷಮ್ಯ ಅಪರಾಧವಾಗಿದೆ. ನ್ಯಾಯಾಧೀಶರ ಮುಂದೆ ಇಟ್ಟುಕೊಂಡು ನ್ಯಾಯಾಂಗಕ್ಕೆ ಕೊಡಲಿ ಪೆಟ್ಟು ಕೊಡುವ ಕೆಲಸ ಮಾಡಲಾ ಗುತ್ತಿದೆ. ಸಂವಿಧಾನಕ್ಕೆ ಅಪಪ್ರಚಾರ ಮಾಡಲು ಶಾಸಕ ಚನ್ನಿ ಬಿಡಲ್ಲ ಎಂದು ಹೇಳಿದರು. ಸರ್ಕಾರಿ ಕಾರ್ಯಕ್ರಮದಲ್ಲೂ ಗೀತೆಯನ್ನು ಪೂರ್ಣ ಹಾಡಬೇಕಿತ್ತು. ನೀವು ನಿರ್ಣಯ ಮಾಡಿದಂತೆ ನಡೆಯಲ್ಲ. ಕಾಂಗ್ರೆಸ್ ಪಕ್ಷ ವನ್ನು ಅಲ್ಪಸಂಖ್ಯಾಂತರಿಗೆ ಅಡ ಇಡಲಾಗಿದೆ ಎಂದು ಶಾಸಕ ಚನ್ನಬಸಪ್ಪ ಕಿಡಿಕಾರಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಹೋಗಬೇಕಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. 136 ಜನ ಇದ್ದೇವೆಂದು ಕಾಂಗ್ರೆಸ್ ಏನು ಮಾಡಿದ್ರು ನಡೆಯುತ್ತದೆ ಎಂದು ತಿಳಿದುಕೊಂಡರೆ ತಪ್ಪು. ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಬಂಕಿಮಚಂದ್ರ ಚಟರ್ಜಿ ಆರಾಧ್ಯ ದೈವ ಎಂದರು. ಸ್ವಾತಂತ್ರ್ಯ ಹೋರಾಟಕ್ಕೆ ವಂದೇ ಮಾತರಂ ಬೇಕಿತ್ತು. ಆದರೆ ಈಗ ಬೇಡವೇ ಎಂದು ಪ್ರಶ್ನಿಸಿದರು. ಸಂವಿಧಾನಕ್ಕೆ ಬಿಕ್ಕಟ್ಟಿನ ಸಂದರ್ಭ ಬಂದಿದೆ. ಇದನ್ನು ರಾಜ್ಯ ಸರ್ಕಾರ ಹುಟ್ಟುಹಾಕಿದೆ. ನಮ್ಮಲ್ಲಿ ಭಾರತೀಯ ನೀತಿ ಸಂಹಿತೆ ಇದೆಯೇ ಹೊರತು ಕರ್ನಾಟಕ ನೀತಿ ಸಂಹಿತೆ ಅಂತ ಇಲ್ಲ. ಮುಂದಿನ ವಾರ ನಡೆಯುವ ಅಧಿವೇಶನದಲ್ಲಿ ಇದನ್ನು ಪ್ರಶ್ನೆ ಮಾಡಲಾಗುವುದು ಎಂದರು.1
- All About,State of affairs of Congress Party organization members in #NRConstituency #Mysuru *ಭಾರತ ನಲ್ಲಿ ವೈರಲ್*1
- 100 Crores of bank balance in the accounts of mysuru dist waqf committees says MDWAC Chairman Azeezulla Ajju 100 Crores of bank balance in the accounts of mysuru dist waqf committees says MDWAC Chairman Azeezulla Ajju1
- ಕುಡಿದ ಮತ್ತಿನಲ್ಲಿ ಜಗಳ, ದಿಕ್ಕು ತಪ್ಪಿಸಲು ಹೋದ ದಂಪತಿಗೆ ಬುದ್ಧಿಹೇಳಿದ ಪೊಲೀಸರು! ಮೈಸೂರು: ಕುಡಿದ ಮತ್ತಿನಲ್ಲಿ ಪತಿ-ಪತ್ನಿ ಜಗಳ ನಡೆದು, ದಿಕ್ಕು ತಪ್ಪಿಸಲು ಹೋದ ಮಹಿಳೆಗೆ ಪೊಲೀಸರು ಬುದ್ಧಿ ಹೇಳಿದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಬಂಕಹಳ್ಳಿ ಗ್ರಾಮದ ಗೋಪಮ್ಮ ಅಲಿಯಾಸ್ ಗೌರಮ್ಮ(52) ಹಾಗೂ ಪತಿ ಚೆಲುವ ಕುಡಿದ ಮತ್ತಿನಲ್ಲಿ ಸೋಮವಾರ ರಾತ್ರಿ ಜಗಳ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪತಿ, ಪತ್ನಿ ಗೌರಮ್ಮರಿಗೆ ಮುಖಕ್ಕೆ ಜೋರಾಗಿ ಹೊಡೆದ ಪರಿಣಾಮ ಗಾಯಗೊಂಡಿದ್ದಾರೆ. ನಂತರ ರಾತ್ರಿ ಹೆಡಿಯಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಎಚ್.ಡಿ.ಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮಹಿಳೆ ಗುಣಮುಖರಾಗುತ್ತಿದ್ದಾರೆ. ಕಥೆಕಟ್ಟಿದ ಮಹಿಳೆ: ಕುಡಿದ ಮತ್ತಿನಲ್ಲಿ ಪತಿ-ಪತ್ನಿ ಜಗಳ ನಡೆದಿದೆ.ಆದರೆ,ಜಮೀನಿಗೆ ಕೆಲಸಕ್ಕೆ ಬಂದಿಲ್ಲವೆಂದು ಹಲ್ಲೆ ಮಾಡಲಾಗಿದೆ ಎಂದು ಪೊಲೀಸರು ಮುಂದೆ ಗೌರಮ್ಮ ಹೇಳಿದ್ದಾರೆ. ಪೊಲೀಸರು ವಿಚಾರಣೆ ಮಾಡಿದಾಗ, ಕುಡಿದ ಮತ್ತಿ ಇಬ್ಬರ ಜಗಳ ನಡೆದು, ಪತಿ ಹಲ್ಲೆ ಮಾಡಿದ್ದಾನೆ ಎಂದು ಗೊತ್ತಾಗಿದೆ. ಪತ್ನಿ-ಪತಿ ಇಬ್ಬರಿಗೂ ಪೊಲೀಸರು ಬುದ್ಧಿ ಹೇಳಿ ರೀತಿ, ಸುಳ್ಳು ಹೇಳಬಾರದು ಎಂದು ತಿಳಿ ಹೇಳಿದ್ದಾರೆ.3
- ಹಾವೇರಿ : ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ-ಯುವಸಂಸತ್ ಕಾಯ೯ಕ್ರಮವನ್ನ ಜಿಲ್ಲಾ ಉಸ್ತುವಾರಿ ಹಾಗೂ ಜವಳಿ ಮತ್ತು ಸಕ್ಕರೆ ಸಚಿವರಾದ ರುದ್ರಪ್ಪ ಎಂ ಲಮಾಣಿ ಉದ್ಘಾಟಿಸಿದರು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಇಲಾಖೆಗಳ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು ದಲಿತ ಸಂಘಟನೆಗಳ ನಾಯಕರು ಹಲವಾರು ಗಣ್ಯರು ಉಪಸ್ಥಿತರಿದ್ದರು1
- 🚨 ಶಿವಮೊಗ್ಗದಲ್ಲಿ ಆಹಾರ ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ; ಕೊಳೆತ ಹಣ್ಣು ಪತ್ತೆ, ಜ್ಯೂಸ್ ಸೆಂಟರ್ ಸೀಜ್! ಕೊಳೆತ ಹಣ್ಣು ಮಾರಾಟಕ್ಕೆ ಸಿದ್ಧತೆ? ಶಿವಮೊಗ್ಗದಲ್ಲಿ ತನು ಜ್ಯೂಸ್ ಸೆಂಟರ್ ಸೀಜ್1
- ಶಿವಮೊಗ್ಗ-ಕೊಳೆತ ಹಣ್ಣು ಗಳಿಂದ ಜ್ಯೂಸ್ ತಯಾರಿ ಆರೋಪ:ಎಸಿ ಡಾ. ಮೈತ್ರಿ ನೇತೃತ್ವದಲ್ಲಿ ದಾಳಿ ಶಿವಮೊಗ್ಗ: ಬಿಸಿಲಿನ ತಾಪಕ್ಕೆ ತಂಪು ನೀಡುವ ಹೆಸರಿನಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದರೆಂಬಆರೋಪ ಕೇಳಿಬಂದಿರುವ ತಿಲಕನಗರದ ತನು ಜ್ಯೂಸ್ ಸೆಂಟರ್ ಮೇಲೆ ಉಪವಿಭಾಗಾಧಿಕಾರಿ ಡಾ.ಮೈತ್ರಿ ನೇತೃತ್ವ ದಲ್ಲಿ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಖಡಕ್ ಕ್ರಮ ಕೈಗೊಂಡಿದೆ. ಸಾರ್ವಜನಿಕರಿಂದ ಬಂದ ದೂರು ಗಳ ಹಿನ್ನೆಲೆಯಲ್ಲಿ ಎಸಿ ಡಾ.ಮೈತ್ರಿ, ತಹಶೀಲ್ದಾರ್ ರಾಜೀವ್ ಹಾಗೂ ಆಹಾರ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ತನು ಜ್ಯೂಸ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ, ವಿವಿಧ ಬಗೆಯ ಹಣ್ಣುಗಳು ಕೊಳೆತ ಹಾಗೂ ಹಾಳಾದ ಸ್ಥಿತಿಯಲ್ಲಿ ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರೇಪ್ಸ್, ಚಿಕ್ಕು, ಡ್ರ್ಯಾಗನ್ ಫ್ರೂಟ್, ಸೇಬು, ದಾಳಿಂಬೆ ಸೇರಿದಂತೆ ಹಲವು ಹಣ್ಣುಗಳ ಮೇಲೆ ಫಂಗಸ್ ಮತ್ತು ಬೂಷ್ಟಿನಂತಹ ಬೆಳವಣಿಗೆ ಕಂಡುಬಂದಿದ್ದು, ಅವುಗಳನ್ನು ಜ್ಯೂಸ್ ತಯಾರಿಕೆಗೆ ಬಳಸ ಲಾಗುತ್ತಿತ್ತೆಂಬುದು ಪರಿಶೀಲನೆಯ ವೇಳೆ ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗ್ರಾಹಕರ ಕಣ್ಣಿಗೆ ತಂಪು.ಒಳಗೆ ಮಾತ್ರ ಕೊಳೆತ ಹಣ್ಣುಗಳ ದಾಸ್ತಾನು? ತನು ಜ್ಯೂಸ್ ಸೆಂಟರ್‌ನಲ್ಲಿ ಬಗೆಬಗೆಯ ಜ್ಯೂಸ್‌ಗಳು ಕಡಿಮೆ ದರದಲ್ಲಿ ದೊರೆಯು ತ್ತವೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಹಲವರು ಇಲ್ಲಿಗೆ ಬರುತ್ತಿದ್ದರು. ಹೊರಗಿನಿಂದ ನೋಡಿದಾಗ ಎಲ್ಲವೂ ಸ್ವಚ್ಛವಾಗಿಯೇ ಕಾಣುತ್ತಿದ್ದರೂ, ಅಧಿಕಾರಿಗಳ ಪರಿಶೀಲನೆಯ ವೇಳೆ ಒಳಭಾಗ ದಲ್ಲಿ ಕಂಡುಬಂದ ಪರಿಸ್ಥಿತಿ ಮಾತ್ರ ಆಘಾತಕಾರಿಯಾಗಿತ್ತು ಎಂದು ಎಸಿ ತಿಳಿಸಿದ್ದಾರೆ. ಜ್ಯೂಸ್‌ಗೆ ಬಳಸುವ ಹಣ್ಣುಗಳನ್ನು ತಾಜಾ ಸ್ಥಿತಿಯಲ್ಲಿ ಇಡುವ ಬದಲು, ದೀರ್ಘಕಾಲ ಸಂಗ್ರಹಿಸಿಟ್ಟಿರುವಂತೆ ಕಂಡುಬಂದಿದ್ದು, ಕೆಲವು ಹಣ್ಣು ಗಳು ಕೊಳೆತು ಹೋಗಿದ್ದವು. ಫ್ರೀಜರ್‌ನಲ್ಲಿಯೂ ಕಳಪೆ ಸ್ಥಿತಿಯ ಹಣ್ಣು ಗಳು ಕಂಡುಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಅಧಿಕಾರಿಗಳ ಪರಿಶೀಲನೆ ವೇಳೆ ಗ್ರೇಪ್ಸ್, ಚಿಕ್ಕು, ಡ್ರ್ಯಾಗನ್ ಫ್ರೂಟ್, ಸೇಬು, ದಾಳಿಂಬೆ ಸೇರಿದಂತೆ ವಿವಿಧ ಹಣ್ಣುಗಳು ಕೊಳೆತ ಸ್ಥಿತಿ ಯಲ್ಲಿ ಕಂಡುಬಂದಿವೆ ಎಂದು ತಿಳಿದುಬಂದಿದೆ. ಕೆಲವು ಹಣ್ಣುಗಳ ಮೇಲೆ ಫಂಗಸ್, ಬೂಷ್ಟಿನಂತಹ ಬೆಳವಣಿಗೆ ಕಂಡುಬಂದಿದ್ದು, ಇವುಗಳನ್ನು ಸಾರ್ವಜನಿಕರು ಸೇವಿಸುವುದು ಸೂಕ್ತವಲ್ಲ ಎಂಬ ಪ್ರಾಥಮಿಕ ಅಭಿಪ್ರಾಯ ವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಹಣ್ಣುಗಳು ಎಷ್ಟು ದಿನಗಳಿಂದ ಸಂಗ್ರಹಿಸ ಲಾಗಿತ್ತು ಎಂಬುದನ್ನು ಕೇವಲ ಮೇಲ್ನೋಟದ ಪರಿಶೀಲ ನೆಯ ಆಧಾರದ ಮೇಲೆ ನಿಖರ ವಾಗಿ ಹೇಳಲು ಸಾಧ್ಯವಿಲ್ಲ. ಮಾದರಿಗಳನ್ನು ವಿಶ್ಲೇಷಣೆಗೆ ಕಳುಹಿಸಿದ ನಂತರವೇ ಅದರ ಗುಣಮಟ್ಟ ಹಾಗೂ ಸ್ಥಿತಿಯ ಬಗ್ಗೆ ಹೆಚ್ಚಿನ ಸ್ಪಷ್ಟತೆ ದೊರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.1
- ಪ್ರಜಾಪ್ರಭುತ್ವ ದಿನಾಚರಣೆಗೆ ಶಾಸಕರು, ತಹಶೀಲ್ದಾರ್ ಗೈರು.. ಅಧಿಕಾರಿಗಳ ಗೈರಿಗೆ ದಸಂಸ ಆಕ್ರೋಶ — ಕಾಟಾಚಾರದ ಆಚರಣೆ ಆರೋಪ ನಂಜನಗೂಡು: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ತಹಶೀಲ್ದಾರ್ ಕಛೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ಶಾಸಕರು ಹಾಗೂ ತಹಶೀಲ್ದಾರ್ ಗೈರುಹಾಜರಾಗಿದ್ದಕ್ಕೆ ದಲಿತ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಂಗವಾಗಿ ಸಂವಿಧಾನದ ಪೀಠಿಕೆಯ ಭಾವಚಿತ್ರ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಸಭೆ ಆರಂಭವಾಗುತ್ತಿದ್ದಂತೆ ದಲಿತ ಸಂಘಟನೆಗಳ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ತಾಲ್ಲೂಕು ಮಟ್ಟದ ಹಲವು ಅಧಿಕಾರಿಗಳು ಕಾರ್ಯಕ್ರಮಕ್ಕೆ ಗೈರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ದಿನಾಚರಣೆಗೆ ಸಮರ್ಪಕವಾಗಿ ಆಹ್ವಾನ ನೀಡದೆ ಕಾಟಾಚಾರಕ್ಕೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವದ ಪಿತಾಮಹರಿಗೆ ಗೌರವ ಸಲ್ಲಿಸುವ ದಿನದಂದೇ ಜವಾಬ್ದಾರಿಯುತ ಅಧಿಕಾರಿಗಳು ಗೈರಾಗಿರುವುದು ಖಂಡನೀಯ. ಗೈರುಹಾಜರಾದ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಯೋಜಕ ಬಸವಣ್ಣ ಹಾಗೂ ಜನಸಂಗ್ರಾಮ ಪರಿಷತ್ ಗೌರವಾಧ್ಯಕ್ಷ ನಗರ್ಲೆ ವಿಜಯಕುಮಾರ್ ಆಗ್ರಹಿಸಿದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳೇ ಕಾರ್ಯಕ್ರಮಕ್ಕೆ ಗೈರಾಗಿರುವುದು ಸರಿಯಲ್ಲ. ಇಂತಹ ನಡೆ ಪ್ರಜಾಪ್ರಭುತ್ವದ ಮೇಲಿನ ಅವರ ಬದ್ಧತೆಯನ್ನೇ ಪ್ರಶ್ನಿಸುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ತಹಶೀಲ್ದಾರ್ ಗ್ರೇಡ್–2 ನಂದಕಿಶೋರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗು, ಕಂದಾಯ ಆಡಳಿತ ಅಧಿಕಾರಿ ರಾಜು, ದಸಂಸ ಸಂಚಾಲಕ ಶಂಕರಪುರ ಸುರೇಶ್, ಹಗಿನವಾಳು ಚಿಕ್ಕಣ್ಣ, ದೇವರಸನಹಳ್ಳಿ ಪುಟ್ಟಸ್ವಾಮಿ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.3