logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಿಕ್ಕನಾಯಕನಹಳ್ಳಿ ಹೇಮಾವತಿ ಕಾಲುವೆ ಅಕ್ರಮ ಪಂಪ್‌ಸೆಟ್ ತೆರವುಗೊಳಿಸಿ; ಇಲ್ಲವಾದರೆ ಕಠಿಣ ಕ್ರಮ: ತಹಶೀಲ್ದಾರ್ ಖಡಕ್ ಎಚ್ಚರಿಕೆ ಚಿಕ್ಕನಾಯಕನಹಳ್ಳಿ: ಹೇಮಾವತಿ ನೀರಾವರಿ ಕಾಲುವೆಗಳಿಂದ ಅಕ್ರಮವಾಗಿ ನೀರೆತ್ತುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಮಮತ ಎಂ. ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ನಿರ್ದೇಶನದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಎದು ಕುಡಿಯುವ ನೀರು ಒದಗಿಸುವುದು ಜನರು ಹಾಗೂ ಜಾನುವಾರುಗಳಿಗೆ ಕೆರೆಗಳನ್ನು ತುಂಬಿಸುವುದು ಆಡಳಿತದ ಪ್ರಮುಖ ಆದ್ಯತೆಯಾಗಿದೆ ಎಂದರು. ಹೇಮಾವತಿ ಕಾಲುವೆಗಳಿಗೆ ಕೆಲವರು ಅಕ್ರಮವಾಗಿ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡು ನೀರೆತ್ತುತ್ತಿರುವುದರಿಂದ ಕೊನೆಯ ಭಾಗದ ಅಚ್ಚುಕಟ್ಟು ರೈತರಿಗೆ ನೀರು ತಲುಪುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಹೇಳಿದರು. ತಾಲ್ಲೂಕಿನಾದ್ಯಂತ ಹೇಮಾವತಿ ಕಾಲುವೆ ಬೆಸ್ಕಾಂ ಹಾಗೂ ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಕಾಲುವೆಗಳಿಗೆ ಅಳವಡಿಸಿರುವ ಅನಧಿಕೃತ ಪಂಪ್‌ಸೆಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅವುಗಳಿಗೆ ನೀಡಿರುವ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು. ಯಾರೂ ಕಾಲುವೆಯ ನೀರನ್ನು ಅಕ್ರಮವಾಗಿ ಎತ್ತಬಾರದು. ಅಕ್ರಮ ಪಂಪ್‌ಸೆಟ್‌ಗಳನ್ನು ಸ್ವಯಂಪ್ರೇರಿತರಾಗಿ ತೆರವುಗೊಳಿಸಿ. ಕೊನೆಯ ಭಾಗದ ರೈತರಿಗೆ ನೀರು ತಲುಪಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಆದೇಶ ಉಲ್ಲಂಘಿಸಿ ನೀರು ಕಳವು ಮುಂದುವರಿಸಿದರೆ ಕರ್ನಾಟಕ ನೀರಾವರಿ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಮಮತ ಎಂ. ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

10 hrs ago
user_ಶಿವಕುಮಾರ್.ಎಸ್ ಸೋರಲಮಾವು
ಶಿವಕುಮಾರ್.ಎಸ್ ಸೋರಲಮಾವು
Local News Reporter ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
10 hrs ago
c85acdda-0c64-4902-bd83-fbb36022a7c6

ಚಿಕ್ಕನಾಯಕನಹಳ್ಳಿ ಹೇಮಾವತಿ ಕಾಲುವೆ ಅಕ್ರಮ ಪಂಪ್‌ಸೆಟ್ ತೆರವುಗೊಳಿಸಿ; ಇಲ್ಲವಾದರೆ ಕಠಿಣ ಕ್ರಮ: ತಹಶೀಲ್ದಾರ್ ಖಡಕ್ ಎಚ್ಚರಿಕೆ ಚಿಕ್ಕನಾಯಕನಹಳ್ಳಿ: ಹೇಮಾವತಿ ನೀರಾವರಿ ಕಾಲುವೆಗಳಿಂದ ಅಕ್ರಮವಾಗಿ ನೀರೆತ್ತುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಮಮತ ಎಂ. ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ನಿರ್ದೇಶನದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಎದು ಕುಡಿಯುವ ನೀರು ಒದಗಿಸುವುದು ಜನರು ಹಾಗೂ ಜಾನುವಾರುಗಳಿಗೆ ಕೆರೆಗಳನ್ನು ತುಂಬಿಸುವುದು ಆಡಳಿತದ ಪ್ರಮುಖ ಆದ್ಯತೆಯಾಗಿದೆ ಎಂದರು. ಹೇಮಾವತಿ ಕಾಲುವೆಗಳಿಗೆ ಕೆಲವರು ಅಕ್ರಮವಾಗಿ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡು ನೀರೆತ್ತುತ್ತಿರುವುದರಿಂದ ಕೊನೆಯ ಭಾಗದ ಅಚ್ಚುಕಟ್ಟು ರೈತರಿಗೆ ನೀರು ತಲುಪುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಹೇಳಿದರು. ತಾಲ್ಲೂಕಿನಾದ್ಯಂತ ಹೇಮಾವತಿ ಕಾಲುವೆ ಬೆಸ್ಕಾಂ ಹಾಗೂ ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಕಾಲುವೆಗಳಿಗೆ ಅಳವಡಿಸಿರುವ ಅನಧಿಕೃತ ಪಂಪ್‌ಸೆಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅವುಗಳಿಗೆ ನೀಡಿರುವ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು. ಯಾರೂ ಕಾಲುವೆಯ ನೀರನ್ನು ಅಕ್ರಮವಾಗಿ ಎತ್ತಬಾರದು. ಅಕ್ರಮ ಪಂಪ್‌ಸೆಟ್‌ಗಳನ್ನು ಸ್ವಯಂಪ್ರೇರಿತರಾಗಿ ತೆರವುಗೊಳಿಸಿ. ಕೊನೆಯ ಭಾಗದ ರೈತರಿಗೆ ನೀರು ತಲುಪಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಆದೇಶ ಉಲ್ಲಂಘಿಸಿ ನೀರು ಕಳವು ಮುಂದುವರಿಸಿದರೆ ಕರ್ನಾಟಕ ನೀರಾವರಿ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಮಮತ ಎಂ. ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

More news from ಕರ್ನಾಟಕ and nearby areas
  • ಕರ್ನಾಟಕ ರಾಜ್ಯದಲ್ಲಿ 101 ತಾಲೂಕುಗಳನ್ನ ಬರಪೀಡಿತ ಎಂದು ಘೋಷಣೆ.
    1
    ಕರ್ನಾಟಕ ರಾಜ್ಯದಲ್ಲಿ 101 ತಾಲೂಕುಗಳನ್ನ ಬರಪೀಡಿತ ಎಂದು ಘೋಷಣೆ.
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • ಹುಣಸೆಕಟ್ಟೆ ಗ್ರಾಮದ ರೈತರ ಜಮೀನಿಗೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ತಪಾಸಣೆ ಹುಣಸೆಕಟ್ಟೆ ಗ್ರಾಮದ ರೈತರ ಜಮೀನಿಗೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ತಪಾಸಣೆ ನಡೆಸಿದೆ. ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಹುಣಸೇಕಟ್ಟೆ ಗ್ರಾಮದ ಸೇವಂತಿಗೆ ಬೆಳೆಗಾರರ ಜಮೀನುಗಳಿಗೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ವೇಳೆ ಸೇವಂತಿ ಬೆಳೆಗೆ ಮಾರಕವಾದ ‘ಫ್ಯೂಜೇರಿಯಂ ವಿಲ್ಟ್' ತಗುಲಿರುವುದು ಕಂಡುಬಂದಿದ್ದು, ರೋಗ ಹತೋಟಿಗೆ ತೋಟಗಾರಿಕೆ ಅಧಿಕಾರಿಗಳು ತಾಂತ್ರಿಕ ಸಲಹೆ ನೀಡಿದ್ದಾರೆ. ಫ್ಯೂಜೇರಿಯಂ ಆಕ್ಸಿಸ್ಪೋರಂ ಕ್ರೈಸಾಂತಮಿ ಎಂಬ ಶಿಲೀಂದ್ರದಿಂದ ಬರುವ ಈ ರೋಗವು ಮಣ್ಣಿನಲ್ಲಿ ಜೀವಿಸುತ್ತದೆ ಹಾಗೂ ರೋಗಗ್ರಸ್ತ ಗಿಡಗಳಿಂದ ಮಾಡಿದ ಕಟಿಂಗ್ಸ್ ಮೂಲಕ ಹರಡುತ್ತದೆ. ಇದರಿಂದ ಗಿಡಗಳ ಬೇರುಗಳು ಹಾನಿಗೊಳಗಾಗಿ ಪೂರ್ತಿ ಗಿಡವೇ ಒಣಗಿಹೋಗುತ್ತದೆ. ಇದರ ನಿಯಂತ್ರಣಕ್ಕಾಗಿ ರೈತರು ಕಳೆದ ಸಾಲಿನಲ್ಲಿ ರೋಗ ಬಂದ ಭೂಮಿಯಲ್ಲಿ ಪುನಃ ಸೇವಂತಿಗೆ ಬೆಳೆಯಬಾರದು. ಬೆಳೆಯುವ ಮುನ್ನ 1 ಲೀಟರ್ ನೀರಿಗೆ 2 ಗ್ರಾಂ ಕಾರ್ಬನ್ಡೇಜಿಂ 50 WP ಬೆರೆಸಿದ ದ್ರಾವಣದಲ್ಲಿ ಸಸಿಗಳನ್ನು ಅದ್ದಿ ನಾಟಿ ಮಾಡಬೇಕು. ಅಲ್ಲದೆ, Trichoderma harzianum ಮತ್ತು Bacillus subtilis ಮಿಶ್ರಿತ ಕೊಟ್ಟಿಗೆ ಗೊಬ್ಬರ ಅಥವಾ ಬೇವಿನ ಹಿಂಡಿಯನ್ನು ಮಣ್ಣಿಗೆ ಸೇರಿಸುವುದು ಸೂಕ್ತ. ಔಷಧೋಪಚಾರಕ್ಕಾಗಿ ತೈಯೋಪನೆಟ್ ಮಿಥೇಲ್ 70% WP 1 ಗ್ರಾಂ ಅಥವಾ ಕಾರ್ಬನ್ಡೇಜಿಂ 40% WP 1 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು. ಅದೇ ರೀತಿ ಇವುಗಳನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ ನಂತೆ ಬೆರೆಸಿ ಮಣ್ಣಿಗೆ ಸುರಿಯಬೇಕು ಪರ್ಯಾಯವಾಗಿ ಡೈಫಿನೊಕೊನಜೋಲ್ 25% EC ನೀರಿಗೆ ಬೆರೆಸಿ ಎಲೆಗಳ ಮೇಲೆ ಸಿಂಪರಣೆ ಹಾಗೂ ಮಣ್ಣಿಗೆ ಹಾಕಿ ಭೂಮಿಯನ್ನು ಚೆನ್ನಾಗಿ ನೆನೆಸಬೇಕು. ರೋಗಪೀಡಿತ ಮಣ್ಣಿನಲ್ಲಿ ಯಾವುದೇ ಕಾರಣಕ್ಕೂ ಮರುನಾಟಿ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.
    1
    ಹುಣಸೆಕಟ್ಟೆ ಗ್ರಾಮದ ರೈತರ ಜಮೀನಿಗೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ತಪಾಸಣೆ
ಹುಣಸೆಕಟ್ಟೆ ಗ್ರಾಮದ ರೈತರ ಜಮೀನಿಗೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ತಪಾಸಣೆ ನಡೆಸಿದೆ. 
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಹುಣಸೇಕಟ್ಟೆ ಗ್ರಾಮದ ಸೇವಂತಿಗೆ ಬೆಳೆಗಾರರ ಜಮೀನುಗಳಿಗೆ  ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ವೇಳೆ ಸೇವಂತಿ ಬೆಳೆಗೆ ಮಾರಕವಾದ ‘ಫ್ಯೂಜೇರಿಯಂ ವಿಲ್ಟ್' ತಗುಲಿರುವುದು ಕಂಡುಬಂದಿದ್ದು, ರೋಗ ಹತೋಟಿಗೆ ತೋಟಗಾರಿಕೆ ಅಧಿಕಾರಿಗಳು ತಾಂತ್ರಿಕ ಸಲಹೆ ನೀಡಿದ್ದಾರೆ. ಫ್ಯೂಜೇರಿಯಂ ಆಕ್ಸಿಸ್ಪೋರಂ ಕ್ರೈಸಾಂತಮಿ ಎಂಬ ಶಿಲೀಂದ್ರದಿಂದ ಬರುವ ಈ ರೋಗವು ಮಣ್ಣಿನಲ್ಲಿ ಜೀವಿಸುತ್ತದೆ ಹಾಗೂ ರೋಗಗ್ರಸ್ತ ಗಿಡಗಳಿಂದ ಮಾಡಿದ ಕಟಿಂಗ್ಸ್ ಮೂಲಕ ಹರಡುತ್ತದೆ. ಇದರಿಂದ ಗಿಡಗಳ ಬೇರುಗಳು ಹಾನಿಗೊಳಗಾಗಿ ಪೂರ್ತಿ ಗಿಡವೇ ಒಣಗಿಹೋಗುತ್ತದೆ. ಇದರ ನಿಯಂತ್ರಣಕ್ಕಾಗಿ ರೈತರು ಕಳೆದ ಸಾಲಿನಲ್ಲಿ ರೋಗ ಬಂದ ಭೂಮಿಯಲ್ಲಿ ಪುನಃ ಸೇವಂತಿಗೆ ಬೆಳೆಯಬಾರದು. ಬೆಳೆಯುವ ಮುನ್ನ 1 ಲೀಟರ್ ನೀರಿಗೆ 2 ಗ್ರಾಂ ಕಾರ್ಬನ್ಡೇಜಿಂ 50 WP ಬೆರೆಸಿದ ದ್ರಾವಣದಲ್ಲಿ ಸಸಿಗಳನ್ನು ಅದ್ದಿ ನಾಟಿ ಮಾಡಬೇಕು. ಅಲ್ಲದೆ, Trichoderma harzianum  ಮತ್ತು Bacillus subtilis ಮಿಶ್ರಿತ ಕೊಟ್ಟಿಗೆ ಗೊಬ್ಬರ ಅಥವಾ ಬೇವಿನ ಹಿಂಡಿಯನ್ನು ಮಣ್ಣಿಗೆ ಸೇರಿಸುವುದು ಸೂಕ್ತ. ಔಷಧೋಪಚಾರಕ್ಕಾಗಿ ತೈಯೋಪನೆಟ್ ಮಿಥೇಲ್ 70% WP   1 ಗ್ರಾಂ ಅಥವಾ ಕಾರ್ಬನ್ಡೇಜಿಂ 40% WP 1  ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು. ಅದೇ ರೀತಿ ಇವುಗಳನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ ನಂತೆ ಬೆರೆಸಿ ಮಣ್ಣಿಗೆ ಸುರಿಯಬೇಕು ಪರ್ಯಾಯವಾಗಿ ಡೈಫಿನೊಕೊನಜೋಲ್ 25% EC ನೀರಿಗೆ ಬೆರೆಸಿ ಎಲೆಗಳ ಮೇಲೆ ಸಿಂಪರಣೆ ಹಾಗೂ ಮಣ್ಣಿಗೆ ಹಾಕಿ ಭೂಮಿಯನ್ನು ಚೆನ್ನಾಗಿ ನೆನೆಸಬೇಕು. ರೋಗಪೀಡಿತ ಮಣ್ಣಿನಲ್ಲಿ ಯಾವುದೇ ಕಾರಣಕ್ಕೂ ಮರುನಾಟಿ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
  • ಚಿತ್ರದುರ್ಗ:ಭದ್ರಾ ನೀರಿಗಾಗಿ ವಿರೋಧ ಪಕ್ಷಗಳಿಂದ ಬೃಹತ್ ಪ್ರತಿಭಟನೆ ಭದ್ರಾ ನೀರನ್ನು ಕಾಲುವೆಯಿಂದ ಹೊಸದುರ್ಗ ತಾಲೂಕಿನ ಕೆರೆಗೆ,ಹರಿಸುವುದರಿಂದ ಕೈ ಬಿಟ್ಟಿರುವುದು ಹಾಗೂ ಕಾಲುವೆ ಯೋಜನೆ ವಿಳಂಬ ನೀತಿ ವಿರೋಧಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಬಿಜೆಪಿ‌ ಪಕ್ಷಗಳು ಒಟ್ಟಾಗಿ ಹೊಸದುರ್ಗದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದವು. ಇದೇ ಸಮಯದಲ್ಲಿ ಮಾತಾಡಿದ ಎಂಎಲ್ ಸಿ‌‌ ಕೆಎಸ್ ನವೀನ್,ಹೊಸದುರ್ಗದಿಂದಲೇ ಭದ್ರಾ ನೀರು ಚಿತ್ರದುರ್ಗ ಜಿಲ್ಲೆಗೆ ಹರಿಯಬೇಕಿದೆ. ಆದರೆ ಹೊಸದುರ್ಗ ತಾಲೂಕಿಗೆ ನೀರು ಕೊಟ್ಟಿಲ್ಲ. ಇದಕ್ಕಾಗಿ ಹೋರಾಟ ಮಾಡುವ ಬೀದಿಗೆ ಬರುವ ಸ್ಥಿತಿ‌ ನಿರ್ಮಾಣವಾಗಿದೆ.ತಾಲೂಕಿಗೆ ನೀರು ಕೊಡದಿರುವುದು ನಮ್ಮ ರೈತರಿಗೆ ಮಾಡಿರುವ ಅನ್ಯಾಯವೆಂದರು. ಮತ್ತೊಬ್ಬ ಮುಖಂಡ ಲಿಂಗಮೂರ್ತಿ ಮಾತಾಡಿ,ಬರ ನಾಡಿಗೆ ನೀರು ಕೊಡುತ್ತಾರೆಂದು ಕಳೆದ ಮೂರು ವರ್ಷಗಳಿಮನದ ಕಾಯುತ್ತಿದ್ದೇವೆ. ಆದರೆ ಸರ್ಕಾರ ನಿರ್ಲಕ್ಷ ತಾಳಿದೆ. ಹಾಲಿ ಶಾಸಕರು ನಮ್ಮಗಳ ಬೆಂಬಲ‌ ಕೋರಿದಾಗ ಬೆಂಬಲ ಕೊಟ್ಟು ಸಹಕರಿಸಿದ್ದೇವೆ.ಆದರೆ ನೀರು ಮಾತ್ರ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    1
    ಚಿತ್ರದುರ್ಗ:ಭದ್ರಾ ನೀರಿಗಾಗಿ ವಿರೋಧ ಪಕ್ಷಗಳಿಂದ  ಬೃಹತ್ ಪ್ರತಿಭಟನೆ
ಭದ್ರಾ ನೀರನ್ನು ಕಾಲುವೆಯಿಂದ ಹೊಸದುರ್ಗ ತಾಲೂಕಿನ ಕೆರೆಗೆ,ಹರಿಸುವುದರಿಂದ ಕೈ ಬಿಟ್ಟಿರುವುದು ಹಾಗೂ  ಕಾಲುವೆ ಯೋಜನೆ ವಿಳಂಬ ನೀತಿ ವಿರೋಧಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್  ಬಿಜೆಪಿ‌ ಪಕ್ಷಗಳು ಒಟ್ಟಾಗಿ ಹೊಸದುರ್ಗದಲ್ಲಿ  ಗುರುವಾರ ಬೃಹತ್ ಪ್ರತಿಭಟನೆ ನಡೆಸಿದವು. ಇದೇ ಸಮಯದಲ್ಲಿ ಮಾತಾಡಿದ ಎಂಎಲ್ ಸಿ‌‌ ಕೆಎಸ್ ನವೀನ್,ಹೊಸದುರ್ಗದಿಂದಲೇ ಭದ್ರಾ ನೀರು ಚಿತ್ರದುರ್ಗ ಜಿಲ್ಲೆಗೆ ಹರಿಯಬೇಕಿದೆ.  ಆದರೆ ಹೊಸದುರ್ಗ ತಾಲೂಕಿಗೆ ನೀರು ಕೊಟ್ಟಿಲ್ಲ. ಇದಕ್ಕಾಗಿ ಹೋರಾಟ ಮಾಡುವ ಬೀದಿಗೆ ಬರುವ ಸ್ಥಿತಿ‌ ನಿರ್ಮಾಣವಾಗಿದೆ.ತಾಲೂಕಿಗೆ ನೀರು ಕೊಡದಿರುವುದು ನಮ್ಮ ರೈತರಿಗೆ ಮಾಡಿರುವ ಅನ್ಯಾಯವೆಂದರು. ಮತ್ತೊಬ್ಬ ಮುಖಂಡ ಲಿಂಗಮೂರ್ತಿ ಮಾತಾಡಿ,ಬರ ನಾಡಿಗೆ ನೀರು ಕೊಡುತ್ತಾರೆಂದು ಕಳೆದ ಮೂರು ವರ್ಷಗಳಿಮನದ ಕಾಯುತ್ತಿದ್ದೇವೆ. ಆದರೆ ಸರ್ಕಾರ ನಿರ್ಲಕ್ಷ ತಾಳಿದೆ. ಹಾಲಿ ಶಾಸಕರು ನಮ್ಮಗಳ ಬೆಂಬಲ‌ ಕೋರಿದಾಗ ಬೆಂಬಲ ಕೊಟ್ಟು ಸಹಕರಿಸಿದ್ದೇವೆ.ಆದರೆ ನೀರು ಮಾತ್ರ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    user_Kumara Swamy
    Kumara Swamy
    ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    23 hrs ago
  • ಶಾಸಕ ಬಾಬು ಬಂಡಿಸಿದೇಗೌಡ ಕತ್ತೆ ಕೆಲಸ ಮಾಡುವ ವಿಡಿಯೋ ವೈರಲ್,ಏನಂದ್ರು ಗೊತ್ತಾ ನೆಟ್ಟಿಗರು ಮಂಡ್ಯ ಶ್ರೀರಂಗಪಟ್ಟಣ ಶಾಸಕ ಬಾಬು ಬಂಡಿ ಸಿದ್ದೇಗೌಡ ವ್ಯವಸಾಯ ಮಾಡುವ ವಿಡಿಯೋ ಆಗಿಸಿ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಗದ್ದೆ ಕೆಲಸ ಮಾಡುವ ವಿಡಿಯೋ ಬೈಕೇರಿ ಹೋಗುವ ಜೊತೆಯಲ್ಲಿ ಗುದ್ದಲಿ ಹಿಡಿದು ಗದ್ದೆಯಲ್ಲಿ ಕೆಲಸ ಮಾಡುವ ವಿಡಿಯೋಗೆ ನೆಟ್ಟಗಿರೋ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಲ್ಮೆಟ್ ಹಾಕದೆ ಗಾಡಿ ಓಡಿಸಬೇಕು ಕೆಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ
    1
    ಶಾಸಕ ಬಾಬು ಬಂಡಿಸಿದೇಗೌಡ ಕತ್ತೆ ಕೆಲಸ ಮಾಡುವ ವಿಡಿಯೋ ವೈರಲ್,ಏನಂದ್ರು ಗೊತ್ತಾ ನೆಟ್ಟಿಗರು
ಮಂಡ್ಯ ಶ್ರೀರಂಗಪಟ್ಟಣ ಶಾಸಕ ಬಾಬು ಬಂಡಿ ಸಿದ್ದೇಗೌಡ ವ್ಯವಸಾಯ ಮಾಡುವ ವಿಡಿಯೋ ಆಗಿಸಿ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಗದ್ದೆ ಕೆಲಸ ಮಾಡುವ ವಿಡಿಯೋ ಬೈಕೇರಿ ಹೋಗುವ ಜೊತೆಯಲ್ಲಿ ಗುದ್ದಲಿ ಹಿಡಿದು ಗದ್ದೆಯಲ್ಲಿ ಕೆಲಸ ಮಾಡುವ ವಿಡಿಯೋಗೆ ನೆಟ್ಟಗಿರೋ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೆಲ್ಮೆಟ್ ಹಾಕದೆ ಗಾಡಿ ಓಡಿಸಬೇಕು ಕೆಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    17 min ago
  • ಧನ-ಧಾನ್ಯ ಸಮೃದ್ಧಿಗಾಗಿ ಕಂಬಳಿಪುರ ಕಾಟೇರಮ್ಮ ಸನ್ನಿಧಿಯಲ್ಲಿ ವಿಶೇಷ ಕುಬೇರ ಮಹಾಲಕ್ಷ್ಮೀ ಪೂಜೆ
    1
    ಧನ-ಧಾನ್ಯ ಸಮೃದ್ಧಿಗಾಗಿ ಕಂಬಳಿಪುರ ಕಾಟೇರಮ್ಮ ಸನ್ನಿಧಿಯಲ್ಲಿ ವಿಶೇಷ ಕುಬೇರ ಮಹಾಲಕ್ಷ್ಮೀ ಪೂಜೆ
    user_MSMEDIACHANNEL
    MSMEDIACHANNEL
    Social Media Manager ಪಾವಗಡ, ತುಮಕೂರು, ಕರ್ನಾಟಕ•
    46 min ago
  • ಇಂದು ಜಿಲ್ಲಾಡಳಿತ ಭವನದಲ್ಲಿ ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ ಬೆಂಗಳೂರು ಗ್ರಾಮಾಂತರ ಜಿಲ್ಲೆ: ನುಲಿಯ ಚಂದಯ್ಯನವರು ತಮ್ಮ ಕಾಯಕ, ಭಕ್ತಿ ಮತ್ತು ಸರಳ ಜೀವನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದರು. ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾ, ಕಾಯಕಕ್ಕೆ ಗೌರವ ನೀಡಬೇಕು ಎಂಬ ಸಂದೇಶವನ್ನು ಸಾರಿದರು. ಜೀವನದಲ್ಲಿ ಶ್ರಮ, ಪ್ರಾಮಾಣಿಕತೆ, ಭಕ್ತಿ ಮತ್ತು ಸಮಾನತೆಗೆ ವಿಶೇಷ ಸ್ಥಾನಮಾನ ನೀಡಿದ್ದರು. ಈ ಮಹಾನ್ ಶರಣರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಹೇಳಿದರು. ಇಂದು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ನುಲಿಯ ಚಂದಯ್ಯ ಹಾಗೂ ತತ್ವಜ್ಞಾನಿ, ಆಧ್ಯಾತ್ಮಿಕ ಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ನುಲಿಯ ಚಂದಯ್ಯನವರು 12ನೇ ಶತಮಾನದ ಪ್ರಮುಖ ಶರಣರಲ್ಲಿ ಒಬ್ಬರು. ಅವರು ತಮ್ಮ ಕಾಯಕ, ಭಕ್ತಿ ಮತ್ತು ಸರಳ ಜೀವನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದರು. ನುಲಿಯ ಚಂದಯ್ಯನವರು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಜಾತಿ-ಭೇದ, ಅಹಂಕಾರ ಮತ್ತು ಮೂಢನಂಬಿಕೆಗಳನ್ನು ವಿರೋಧಿಸಿ, ಎಲ್ಲರೂ ಸಮಾನರು ಎಂಬ ಮಾನವೀಯ ಸಂದೇಶವನ್ನು ನೀಡಿದರು. ಅವರ ವಚನಗಳು ಮತ್ತು ಜೀವನಾದರ್ಶಗಳು ಇಂದಿಗೂ ನಮಗೆ ಸ್ಪೂರ್ತಿಯಾಗಿವೆ ಎಂದರು. ನಾವು ನುಲಿಯ ಚಂದಯ್ಯನವರ ಜೀವನದಿಂದ ಪ್ರಾಮಾಣಿಕವಾಗಿ ದುಡಿಯುವುದು, ಎಲ್ಲರನ್ನು ಸಮಾನವಾಗಿ ಗೌರವಿಸುವುದು ಮತ್ತು ಸಮಾಜದ ಒಳಿತಿಗಾಗಿ ಶ್ರಮಿಸುವುದು ಎಂಬ ಗುಣಗಳನ್ನು ಕಲಿಯಬೇಕು ಎಂದು ತಿಳಿಸಿದರು. ಮಹಾನ್ ಸಮಾಜ ಸುಧಾರಕ, ತತ್ವಜ್ಞಾನಿ ಹಾಗೂ ಆಧ್ಯಾತ್ಮಿಕ ಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿದ್ದ ಜಾತಿ ಭೇದ, ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದರು. ಎಲ್ಲ ಮನುಷ್ಯರೂ ಸಮಾನರು ಎಂಬ ಸಂದೇಶವನ್ನು ತಮ್ಮ ಜೀವನದ ಮೂಲಕ ಸಾರಿದರು. "ಒಂದು ಜಾತಿ, ಒಂದು ಧರ್ಮ, ಒಬ್ಬ ದೇವರು ಮನುಷ್ಯನಿಗೆ" ಎಂಬ ಅವರ ಮಹತ್ವದ ಸಂದೇಶವು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ. ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಪ್ರಮುಖ ಸಾಧನ ಎಂದು ನಂಬಿದ್ದ ಅವರು, ಜನರಲ್ಲಿ ಶಿಕ್ಷಣ, ಸ್ವಾಭಿಮಾನ, ಸ್ವಚ್ಛತೆ ಮತ್ತು ಸಾಮಾಜಿಕ ಜಾಗೃತಿಯನ್ನು ಬೆಳೆಸಲು ಶ್ರಮಿಸಿದರು. ಅವರ ಸರಳ ಜೀವನ ಮತ್ತು ಉನ್ನತ ಚಿಂತನೆಗಳು ನಮಗೆ ಸದಾ ಸ್ಫೂರ್ತಿಯಾಗಿವೆ. ನಾವು ನಾರಾಯಣ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಜಾತಿ-ಮತ ಭೇದವಿಲ್ಲದೆ ಎಲ್ಲರನ್ನು ಗೌರವಿಸೋಣ. ಶಿಕ್ಷಣ ಪಡೆದು, ಸಮಾಜದ ಒಳಿತಿಗಾಗಿ ಕೆಲಸ ಮಾಡೋಣ ಮತ್ತು ಸಮಾನತೆ ಹಾಗೂ ಸಹೋದರತ್ವವನ್ನು ಬೆಳೆಸೋಣ ಎಂದರು. ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ ಚಂದ್ರಣ್ಣ ಮಾತನಾಡಿ ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನದ ಆದರ್ಶ, ಅವರ ಸೇವೆಯನ್ನು ಸ್ಮರಿಸಿದರು. ಸಮಾಜದಲ್ಲಿ ಅವರ ಆದರ್ಶ ತತ್ವಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಬಿ. ಕೃಷ್ಣಪ್ಪ ಮಾತನಾಡಿ ನುಲಿಯ ಚಂದಯ್ಯ ಅವರು ಹಗ್ಗ ಒಸೆದು ಸಂತೆಯಲ್ಲಿ ಮಾರಿ ಬಂದ ಹಣದಿಂದ ದಾಸೋಹ ಮಾಡುತ್ತಿದ್ದರು. ಕಾಯಕ ನಿಷ್ಠೆಗೆ ಮಹತ್ವವನ್ನು ನೀಡಿದ್ದರು ಎಂದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದು ಜಾತಿ, ಒಂದು ಧರ್ಮ, ಒಬ್ಬ ದೇವರು ಎಂಬ ಸಂದೇಶವನ್ನು ಸಾರಿದ್ದಾರೆ. ಅವರ ತತ್ವ ಆದರ್ಶಗಳು ಸಮಾಜಕ್ಕೆ ಎಂದೆಂದಿಗೂ ಪ್ರಸ್ತುತ ಎಂದರು. ಕಾರ್ಯಕ್ರಮದಲ್ಲಿ ಕೊರಮ ಜನಾಂಗ ಸಂಘದ ಉಪಾಧ್ಯಕ್ಷ ಚೆನ್ನಕೇಶವ, ಮಾಜಿ ಅಧ್ಯಕ್ಷ ಪ್ರಭಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕಲ್ಪನ ಆರ್, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
    3
    ಇಂದು ಜಿಲ್ಲಾಡಳಿತ ಭವನದಲ್ಲಿ ನುಲಿಯ ಚಂದಯ್ಯ ಹಾಗೂ  ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ: ನುಲಿಯ ಚಂದಯ್ಯನವರು ತಮ್ಮ ಕಾಯಕ, ಭಕ್ತಿ ಮತ್ತು ಸರಳ ಜೀವನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದರು. ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾ, ಕಾಯಕಕ್ಕೆ ಗೌರವ ನೀಡಬೇಕು ಎಂಬ ಸಂದೇಶವನ್ನು ಸಾರಿದರು.  ಜೀವನದಲ್ಲಿ ಶ್ರಮ, ಪ್ರಾಮಾಣಿಕತೆ, ಭಕ್ತಿ ಮತ್ತು ಸಮಾನತೆಗೆ ವಿಶೇಷ ಸ್ಥಾನಮಾನ ನೀಡಿದ್ದರು. ಈ ಮಹಾನ್ ಶರಣರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಹೇಳಿದರು.
ಇಂದು ಜಿಲ್ಲಾಡಳಿತ ಭವನದ  ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ವತಿಯಿಂದ  ಹಮ್ಮಿಕೊಂಡಿದ್ದ ಶ್ರೀ ನುಲಿಯ ಚಂದಯ್ಯ ಹಾಗೂ ತತ್ವಜ್ಞಾನಿ, ಆಧ್ಯಾತ್ಮಿಕ ಗುರುಗಳಾದ ಬ್ರಹ್ಮಶ್ರೀ  ನಾರಾಯಣ ಗುರುಗಳ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ನುಲಿಯ ಚಂದಯ್ಯನವರು 12ನೇ ಶತಮಾನದ ಪ್ರಮುಖ ಶರಣರಲ್ಲಿ ಒಬ್ಬರು. ಅವರು ತಮ್ಮ ಕಾಯಕ, ಭಕ್ತಿ ಮತ್ತು ಸರಳ ಜೀವನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದರು. ನುಲಿಯ ಚಂದಯ್ಯನವರು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಜಾತಿ-ಭೇದ, ಅಹಂಕಾರ ಮತ್ತು ಮೂಢನಂಬಿಕೆಗಳನ್ನು ವಿರೋಧಿಸಿ, ಎಲ್ಲರೂ ಸಮಾನರು ಎಂಬ ಮಾನವೀಯ ಸಂದೇಶವನ್ನು ನೀಡಿದರು. ಅವರ ವಚನಗಳು ಮತ್ತು ಜೀವನಾದರ್ಶಗಳು ಇಂದಿಗೂ ನಮಗೆ ಸ್ಪೂರ್ತಿಯಾಗಿವೆ ಎಂದರು.
ನಾವು ನುಲಿಯ ಚಂದಯ್ಯನವರ ಜೀವನದಿಂದ ಪ್ರಾಮಾಣಿಕವಾಗಿ ದುಡಿಯುವುದು, ಎಲ್ಲರನ್ನು ಸಮಾನವಾಗಿ ಗೌರವಿಸುವುದು ಮತ್ತು ಸಮಾಜದ ಒಳಿತಿಗಾಗಿ ಶ್ರಮಿಸುವುದು ಎಂಬ ಗುಣಗಳನ್ನು ಕಲಿಯಬೇಕು ಎಂದು ತಿಳಿಸಿದರು.
ಮಹಾನ್ ಸಮಾಜ ಸುಧಾರಕ, ತತ್ವಜ್ಞಾನಿ ಹಾಗೂ ಆಧ್ಯಾತ್ಮಿಕ ಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿದ್ದ ಜಾತಿ ಭೇದ, ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದರು. ಎಲ್ಲ ಮನುಷ್ಯರೂ ಸಮಾನರು ಎಂಬ ಸಂದೇಶವನ್ನು ತಮ್ಮ ಜೀವನದ ಮೂಲಕ ಸಾರಿದರು. "ಒಂದು ಜಾತಿ, ಒಂದು ಧರ್ಮ, ಒಬ್ಬ ದೇವರು ಮನುಷ್ಯನಿಗೆ" ಎಂಬ ಅವರ ಮಹತ್ವದ ಸಂದೇಶವು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ.
ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಪ್ರಮುಖ ಸಾಧನ ಎಂದು ನಂಬಿದ್ದ ಅವರು, ಜನರಲ್ಲಿ ಶಿಕ್ಷಣ, ಸ್ವಾಭಿಮಾನ, ಸ್ವಚ್ಛತೆ ಮತ್ತು ಸಾಮಾಜಿಕ ಜಾಗೃತಿಯನ್ನು ಬೆಳೆಸಲು ಶ್ರಮಿಸಿದರು. ಅವರ ಸರಳ ಜೀವನ ಮತ್ತು ಉನ್ನತ ಚಿಂತನೆಗಳು ನಮಗೆ ಸದಾ ಸ್ಫೂರ್ತಿಯಾಗಿವೆ. ನಾವು ನಾರಾಯಣ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಜಾತಿ-ಮತ ಭೇದವಿಲ್ಲದೆ ಎಲ್ಲರನ್ನು ಗೌರವಿಸೋಣ. ಶಿಕ್ಷಣ ಪಡೆದು, ಸಮಾಜದ ಒಳಿತಿಗಾಗಿ ಕೆಲಸ ಮಾಡೋಣ ಮತ್ತು ಸಮಾನತೆ ಹಾಗೂ ಸಹೋದರತ್ವವನ್ನು ಬೆಳೆಸೋಣ ಎಂದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ ಚಂದ್ರಣ್ಣ ಮಾತನಾಡಿ ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನದ ಆದರ್ಶ, ಅವರ ಸೇವೆಯನ್ನು ಸ್ಮರಿಸಿದರು.  ಸಮಾಜದಲ್ಲಿ ಅವರ ಆದರ್ಶ ತತ್ವಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಬಿ. ಕೃಷ್ಣಪ್ಪ ಮಾತನಾಡಿ ನುಲಿಯ ಚಂದಯ್ಯ ಅವರು ಹಗ್ಗ ಒಸೆದು ಸಂತೆಯಲ್ಲಿ ಮಾರಿ ಬಂದ ಹಣದಿಂದ ದಾಸೋಹ ಮಾಡುತ್ತಿದ್ದರು. ಕಾಯಕ ನಿಷ್ಠೆಗೆ ಮಹತ್ವವನ್ನು ನೀಡಿದ್ದರು ಎಂದರು. 
ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದು ಜಾತಿ, ಒಂದು ಧರ್ಮ, ಒಬ್ಬ ದೇವರು ಎಂಬ ಸಂದೇಶವನ್ನು ಸಾರಿದ್ದಾರೆ. ಅವರ ತತ್ವ ಆದರ್ಶಗಳು ಸಮಾಜಕ್ಕೆ ಎಂದೆಂದಿಗೂ ಪ್ರಸ್ತುತ ಎಂದರು.
ಕಾರ್ಯಕ್ರಮದಲ್ಲಿ ಕೊರಮ ಜನಾಂಗ ಸಂಘದ ಉಪಾಧ್ಯಕ್ಷ ಚೆನ್ನಕೇಶವ, ಮಾಜಿ ಅಧ್ಯಕ್ಷ ಪ್ರಭಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕಲ್ಪನ ಆರ್, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    4 hrs ago
  • ಕನಕಲಬಂಡೆಯಲ್ಲಿ ಲಘು ಬಾಂಬ್ ಸ್ಫೋಟ – ರೈತ ಆಶ್ಚರ್ಯಕರ ರೀತಿಯಲ್ಲಿ ಪಾರು! ಕನಕಲಬಂಡೆಯಲ್ಲಿ ಲಘು ಬಾಂಬ್ ಸ್ಫೋಟ – ರೈತ ಆಶ್ಚರ್ಯಕರ ರೀತಿಯಲ್ಲಿ ಪಾರು! ಪಾವಗಡ : ಕೊಳವೆಬಾವಿಯ ಮೋಟಾರ್ ಸ್ಟಾರ್ಟ್ ಬಟನ್ ಒತ್ತುತ್ತಿದ್ದಂತೆಯೇ ಲಘು ಬಾಂಬ್ ಸ್ಫೋಟಗೊಂಡು, ರೈತನೊಬ್ಬ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ದಿಗಿಲು ಹುಟ್ಟಿಸುವ ಘಟನೆ ತಾಲೂಕಿನ ಕನಕಲಬಂಡೆ ಗ್ರಾಮದಲ್ಲಿ ನಡೆದಿದೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮಾಜಿ ನಕ್ಸಲನೊಬ್ಬ ಈ ಕೊಲೆ ಸಂಚು ರೂಪಿಸಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಹಾಗೂ ವಿಧಿ ವಿಜ್ಞಾನ ತಜ್ಞರ ತಂಡ ತನಿಖೆ ಚುರುಕುಗೊಳಿಸಿದೆ. ಗ್ರಾಮದ ತೋಟವೊಂದರಲ್ಲಿ ಲಘು ಬಾಂಬ್ ಸ್ಫೋಟಗೊಂಡ ಘಟನೆ ನಡೆದಿದ್ದು, ಅದೃಷ್ಟವಶಾತ್ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮದ ರೈತ ಗಿರಿಯಪ್ಪ ಎಂಬುವವರು ತಮ್ಮ ತೋಟಕ್ಕೆ ನೀರು ಹಾಯಿಸಲು ಕೊಳವೆಬಾವಿಯ ಮೋಟಾರ್ ಆನ್ ಮಾಡಲು ಹೋದಾಗ ಈ ಘಟನೆ ಸಂಭವಿಸಿದೆ. ಸ್ಟಾರ್ಟರ್ ಬಟನ್ ಒತ್ತಿದ ತಕ್ಷಣವೇ ಕೆಳಗಿನಿಂದ ಲಘು ಸ್ಫೋಟ ಸಂಭವಿಸಿದೆ. ತಕ್ಷಣ ಎಚ್ಚೆತ್ತ ಗಿರಿಯಪ್ಪ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಳಿಕ ರೈತ ಗಿರಿಯಪ್ಪ ಅವರು ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ವೃತ್ತ ನಿರೀಕ್ಷಕರಾದ ಸುರೇಶ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ಮಂಜುನಾಥ್ ಅವರ ತಂಡ ಹಾಗೂ ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸ್ಫೋಟಗೊಂಡ ಸಾಮಗ್ರಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಈ ಕುರಿತು ಮಾತನಾಡಿದ ತೋಟದ ಮಾಲೀಕ ಗಿರಿಯಪ್ಪ ನಾವು ಕಳೆದ ಮೂರು ದಿನಗಳಿಂದ ಹೊಲಕ್ಕೆ ನೀರು ಹಾಯಿಸಿರಲಿಲ್ಲ. ಬೆಳಿಗ್ಗೆ ಮೋಟಾರ್ ಆನ್ ಮಾಡಿದಾಗ ಜಮೀನಿನಲ್ಲಿ ಲಘು ಸ್ಫೋಟವಾಯಿತು. ಈ ಹಿಂದೆ ನಮ್ಮದೇ ಗ್ರಾಮದ ಮಾಜಿ ನಕ್ಸಲ್ ವೆಂಕಟೇಶ್ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದ. ಈ ಬಗ್ಗೆ ನಾನು ಪೊಲೀಸರಿಗೂ ದೂರು ನೀಡಿದ್ದೆ. ಹೇಗಾದರೂ ಮಾಡಿ ನನ್ನನ್ನು ಕೊಲೆ ಮಾಡಲು ಅವರೇ ಈ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
    1
    ಕನಕಲಬಂಡೆಯಲ್ಲಿ ಲಘು ಬಾಂಬ್ ಸ್ಫೋಟ – ರೈತ ಆಶ್ಚರ್ಯಕರ ರೀತಿಯಲ್ಲಿ ಪಾರು!

ಕನಕಲಬಂಡೆಯಲ್ಲಿ ಲಘು ಬಾಂಬ್ ಸ್ಫೋಟ – ರೈತ ಆಶ್ಚರ್ಯಕರ ರೀತಿಯಲ್ಲಿ ಪಾರು!
ಪಾವಗಡ : ಕೊಳವೆಬಾವಿಯ ಮೋಟಾರ್ ಸ್ಟಾರ್ಟ್ ಬಟನ್ ಒತ್ತುತ್ತಿದ್ದಂತೆಯೇ ಲಘು ಬಾಂಬ್ ಸ್ಫೋಟಗೊಂಡು, ರೈತನೊಬ್ಬ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ದಿಗಿಲು ಹುಟ್ಟಿಸುವ ಘಟನೆ ತಾಲೂಕಿನ ಕನಕಲಬಂಡೆ ಗ್ರಾಮದಲ್ಲಿ ನಡೆದಿದೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮಾಜಿ ನಕ್ಸಲನೊಬ್ಬ ಈ ಕೊಲೆ ಸಂಚು ರೂಪಿಸಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಹಾಗೂ ವಿಧಿ ವಿಜ್ಞಾನ ತಜ್ಞರ ತಂಡ ತನಿಖೆ ಚುರುಕುಗೊಳಿಸಿದೆ.
ಗ್ರಾಮದ ತೋಟವೊಂದರಲ್ಲಿ ಲಘು ಬಾಂಬ್ ಸ್ಫೋಟಗೊಂಡ ಘಟನೆ ನಡೆದಿದ್ದು, ಅದೃಷ್ಟವಶಾತ್ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮದ ರೈತ ಗಿರಿಯಪ್ಪ ಎಂಬುವವರು ತಮ್ಮ ತೋಟಕ್ಕೆ ನೀರು ಹಾಯಿಸಲು ಕೊಳವೆಬಾವಿಯ ಮೋಟಾರ್ ಆನ್ ಮಾಡಲು ಹೋದಾಗ ಈ ಘಟನೆ ಸಂಭವಿಸಿದೆ. ಸ್ಟಾರ್ಟರ್ ಬಟನ್ ಒತ್ತಿದ ತಕ್ಷಣವೇ ಕೆಳಗಿನಿಂದ ಲಘು ಸ್ಫೋಟ ಸಂಭವಿಸಿದೆ. ತಕ್ಷಣ ಎಚ್ಚೆತ್ತ ಗಿರಿಯಪ್ಪ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಳಿಕ ರೈತ ಗಿರಿಯಪ್ಪ ಅವರು ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ವೃತ್ತ ನಿರೀಕ್ಷಕರಾದ ಸುರೇಶ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ಮಂಜುನಾಥ್ ಅವರ ತಂಡ ಹಾಗೂ ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸ್ಫೋಟಗೊಂಡ ಸಾಮಗ್ರಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಈ ಕುರಿತು ಮಾತನಾಡಿದ ತೋಟದ ಮಾಲೀಕ ಗಿರಿಯಪ್ಪ ನಾವು ಕಳೆದ ಮೂರು ದಿನಗಳಿಂದ ಹೊಲಕ್ಕೆ ನೀರು ಹಾಯಿಸಿರಲಿಲ್ಲ. ಬೆಳಿಗ್ಗೆ ಮೋಟಾರ್ ಆನ್ ಮಾಡಿದಾಗ ಜಮೀನಿನಲ್ಲಿ ಲಘು ಸ್ಫೋಟವಾಯಿತು. ಈ ಹಿಂದೆ ನಮ್ಮದೇ ಗ್ರಾಮದ ಮಾಜಿ ನಕ್ಸಲ್ ವೆಂಕಟೇಶ್ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದ. ಈ ಬಗ್ಗೆ ನಾನು ಪೊಲೀಸರಿಗೂ ದೂರು ನೀಡಿದ್ದೆ. ಹೇಗಾದರೂ ಮಾಡಿ ನನ್ನನ್ನು ಕೊಲೆ ಮಾಡಲು ಅವರೇ ಈ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
    user_ಪ್ರಸನ್ನ ದೊಡ್ಡಗುಣಿ
    ಪ್ರಸನ್ನ ದೊಡ್ಡಗುಣಿ
    ಗುಬ್ಬಿ, ತುಮಕೂರು, ಕರ್ನಾಟಕ•
    3 hrs ago
  • ಬಾಗೇನಹಾಳ್ ಗ್ರಾಮದ ರಸ್ತೆಯಲ್ಲಿನ‌ ಸೇತುವೆ ಹದಗೆಟ್ಟಿದ್ದು ದುರಸ್ತಿಗೆ ಸ್ಥಳೀಯರು ಆಗ್ರಹ ಬಾಗೇನಹಾಳ್ ಗ್ರಾಮದ ರಸ್ತೆಯಲ್ಲಿನ‌ ಸೇತುವೆ ಹದಗೆಟ್ಟಿದ್ದು ದುರಸ್ತಿಗೆ ಸ್ಥಳೀಯರು ಆಗ್ರಹ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬಾಗೇನಹಾಳ್ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಇನ್ನೂ ಬಾಗೇನಹಾಳ್ ಗ್ರಾಮದಿಂದ ಕಲ್ಲೇನಹಳ್ಳಿಗೆ ಹೋಗುವ ಮಾರ್ಗದ ರಸ್ತೆಯಲ್ಲಿರುವ ಸೇತುವೆ ಸಂಪೂರ್ಣ ಶಿಥಿಲವಾಗಿದ್ದು ಬಿರುಕು ಬಿಟ್ಟು ಕಬ್ಬಿಣದ ರಾಡುಗಳು ಕಾಣುತ್ತಿವೆ. ರೈತರ ಬಹುತೇಕ ಜಮೀನುಗಳು ಸಹ ಇದೇ ಮಾರ್ಗದಲ್ಲಿ ಇದ್ದು ವಾಹನ ಸವಾರರು ರೈತರು ಸಂಚರಿಸಲು ಸಮಸ್ಯೆ ಉಂಟಾಗುತ್ತಿದ್ದು ರೈತರು ರಾತ್ರಿ ವೇಳೆಯಲ್ಲಿ ಸಂಚರಿಸಲು ಸಮಸ್ಯೆ ಉಂಟಾಗುತ್ತಿದ್ದು ಶಾಲಾ ಮಕ್ಕಳು ಸಹ ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ. ಸರ್ಕಾರದ ಹಣ ದುರುಪಯೋಗ ಆಗುತ್ತಿದ್ದು ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಶೀಘ್ರವಾಗಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಸರ್ಕಾರ ಗಮನ ಹರಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗುವಂತೆಯೂ ಕೂಡ ಆಗ್ರಹ ಮಾಡಿದ್ದಾರೆ.
    1
    ಬಾಗೇನಹಾಳ್ ಗ್ರಾಮದ ರಸ್ತೆಯಲ್ಲಿನ‌ ಸೇತುವೆ ಹದಗೆಟ್ಟಿದ್ದು ದುರಸ್ತಿಗೆ ಸ್ಥಳೀಯರು ಆಗ್ರಹ
ಬಾಗೇನಹಾಳ್ ಗ್ರಾಮದ ರಸ್ತೆಯಲ್ಲಿನ‌ ಸೇತುವೆ ಹದಗೆಟ್ಟಿದ್ದು ದುರಸ್ತಿಗೆ ಸ್ಥಳೀಯರು ಆಗ್ರಹ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬಾಗೇನಹಾಳ್ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಇನ್ನೂ ಬಾಗೇನಹಾಳ್ ಗ್ರಾಮದಿಂದ ಕಲ್ಲೇನಹಳ್ಳಿಗೆ ಹೋಗುವ ಮಾರ್ಗದ ರಸ್ತೆಯಲ್ಲಿರುವ ಸೇತುವೆ ಸಂಪೂರ್ಣ ಶಿಥಿಲವಾಗಿದ್ದು ಬಿರುಕು ಬಿಟ್ಟು ಕಬ್ಬಿಣದ ರಾಡುಗಳು ಕಾಣುತ್ತಿವೆ. ರೈತರ ಬಹುತೇಕ ಜಮೀನುಗಳು ಸಹ ಇದೇ ಮಾರ್ಗದಲ್ಲಿ ಇದ್ದು ವಾಹನ ಸವಾರರು ರೈತರು ಸಂಚರಿಸಲು ಸಮಸ್ಯೆ ಉಂಟಾಗುತ್ತಿದ್ದು ರೈತರು ರಾತ್ರಿ ವೇಳೆಯಲ್ಲಿ ಸಂಚರಿಸಲು ಸಮಸ್ಯೆ ಉಂಟಾಗುತ್ತಿದ್ದು ಶಾಲಾ ಮಕ್ಕಳು ಸಹ ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ. ಸರ್ಕಾರದ ಹಣ ದುರುಪಯೋಗ ಆಗುತ್ತಿದ್ದು ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಶೀಘ್ರವಾಗಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಸರ್ಕಾರ ಗಮನ ಹರಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗುವಂತೆಯೂ ಕೂಡ ಆಗ್ರಹ ಮಾಡಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
  • ಎತ್ತುಗಳ ಕೊರತೆ .ಶೇಂಗಾ ಬೆಳೆಯಲ್ಲಿ ಎಡೆಕುಂಟೆ ಹೋಡೆಯಲಿಕ್ಕೆ ಹಳೆ ಸೈಕಲ್ ಮೊರೆ ಹೊದ ರೈತ..ಯೂಟುಬ್ ನೋಡಿಕೊಂಡು ಅನುಪಯುಕ್ತ ಸೈಕಲ್ ನ್ನೆ ಎಡೆಕುಂಟೆ ಮಾಡಿಕೊಂಡ ರೈತ..
    1
    ಎತ್ತುಗಳ ಕೊರತೆ .ಶೇಂಗಾ ಬೆಳೆಯಲ್ಲಿ ಎಡೆಕುಂಟೆ ಹೋಡೆಯಲಿಕ್ಕೆ ಹಳೆ ಸೈಕಲ್ ಮೊರೆ ಹೊದ  ರೈತ..ಯೂಟುಬ್ ನೋಡಿಕೊಂಡು ಅನುಪಯುಕ್ತ ಸೈಕಲ್   ನ್ನೆ ಎಡೆಕುಂಟೆ ಮಾಡಿಕೊಂಡ ರೈತ..
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.