logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೊಳ್ಳೇಗಾಲ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಬಳಿಕ ಮಾತನಾಡಿ, ಚಾ.ನಗರ ತಾಲ್ಲೂಕು ಮಲಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶೂನ್ಯ ಬಡ್ಡಿ ದರದಲ್ಲಿ ಚಿನ್ನ ಅಡಮಾನ ಇಟ್ಟುಕೊಂಡು ಸಾಲ ಕೊಡುತ್ತೇವೆ ಎಂದು ಸಂಘದ ಕಾರ್ಯದರ್ಶಿಯಾದ ನಾಗೇಂದ್ರ ಎಂಬಾತನು 2022- 23ರ ವ್ಯಾಪ್ತಿಯಲ್ಲಿ ಸುಮಾರು 11.1/2 kgಗು ಹೆಚ್ಚು ಚಿನ್ನವನ್ನು ರೈತರಿಂದ ಅಡಮಾನ ಮಾಡಿಕೊಂಡು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ವಿವಿಧ ಖಾಸಗಿ ಕಂಪನಿಗಳಲ್ಲಿ ಹೆಚ್ಚಿನ ಹಣಕ್ಕೆ ಗಿರವಿಗೆ ಇಟ್ಟು ಹಣ ಪಡೆದು ರೈತರಿಗೆ ಮೋಸ ಮಾಡಲು ಹೊರಟಿದ್ದನು ಇದನ್ನು ಸಂಘಟನೆ ಗಮನಕ್ಕೆ ತಂದಾಗ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಬೃಹತ್ ಚಳುವಳಿಯನ್ನು ಮಾಡಿ ರೈತರು ಅಡಮಾನ ಮಾಡಿರುವ ಸಂಪೂರ್ಣ ಚಿನ್ನವನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳುವ ಆದೇಶವನ್ನು ನೀಡಲಾಯಿತು. ನಂತರ ಪೊಲೀಸ್ ಇಲಾಖೆಯು 20=06=2023 ರಲ್ಲಿ ಚಾಮರಾಜನಗರದ ಸಿಎನ್ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಾಯಿತು ಈ ಪ್ರಕರಣ ದಾಖಲಾದ ಮೇಲೆ ಅಂದಾಜು ಸುಮಾರು 11 1/2 ಕೆಜಿ ಚಿನ್ನ ಈ ವ್ಯವಹಾರದಲ್ಲಿ ಭಾಗಿಯಾಗಿದೆ ಎಂಬ ವರದಿ ಬಂತು ನಂತರ ಮುಂದುವರೆದು ಪೊಲೀಸ್ ಅಧಿಕಾರಿಗಳು 9 ಕೆಜಿ 900 ಗ್ರಾಂ ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇನ್ನು ಉಳಿದ 2 ಕೆ.ಜಿ 500 ಗ್ರಾಂ ಚಿನ್ನಕ್ಕೆ ಕೊಳ್ಳೇಗಾಲದ ಈಸಾಫ್ ಫೈನಾನ್ಸ್, ಮೈಸೂರಿನ ಐಸಿಎಲ್. ಚಾಮರಾಜನಗರದ ಮನಪುರಂ ಇವರು ನ್ಯಾಯಾಲಯದಿಂದ ತಡೆ ಇದೆ ಎಂದು ಚಿನ್ನವನ್ನು ತಡೆ ತಂದಿದ್ದಾರೆ ಅದರಲ್ಲೂ ವಿಶೇಷವಾಗಿ ಮಣಪುರಂ ಗೋಲ್ಡ್ ಪೋಲಿಸ್ ಸಿಬ್ಬಂದಿಯ ಮೂಲಕ ಚಿನ್ನವನ್ನು ರೈತರಿಗೆ ಗುರುತಿಸಲು ಅವಕಾಶ ಕಲ್ಪಿಸಿದೆ ಕೊಳ್ಳೇಗಾಲದ ಇಸಾ ಫೈನಾನ್ಸ್ ಕಂಪನಿಯು ಚಿನ್ನವನ್ನು ಕೊಡುವಲ್ಲಿ ಸಂಪೂರ್ಣ ನಿರ್ಲಕ್ಷತೆ ಮತ್ತು ಬೇಜವಾಬ್ದಾರಿಯನ್ನು ತೋರುತ್ತಿದೆ ತಕ್ಷಣ ಸಂಬಂಧಪಟ್ಟಂತಹ ಕಂಪನಿಯು ಮುಖ್ಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮಾನವೀಯತೆ ಮತ್ತು ರೈತರ ಚಿನ್ನವನ್ನು ಕೊಡಿಸುವಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಇನ್ನ ವಾಪಸ್ ಕೊಡುವಲ್ಲಿ ಕ್ರಮ ಕೈಗೊಳ್ಳದಿದ್ದರೆ ಕೊಳ್ಳೇಗಾಲದ ಈ ಕಂಪನಿಯ ಮುಂದೆ ನಿರಂತರ ಹೋರಾಟ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ತಿಳಿಸುತ್ತೇವೆ. ಇದರಲ್ಲಿ 109 ಜನರಿಗೆ 3 ಕೆ.ಜಿ 400 ಗ್ರಾಂ ಚಿನ್ನವನ್ನು ನೀಡಲಾಗಿದೆ ಮತ್ತೆ 106 ಜನರಿಗೆ ಚಿನ್ನ ವಿತರಣೆ ಮಾಡಲು ಆದೇಶವಾಗಿದೆ ಈ ನೂರಾ ಆರು ಜನರಿಗೆ ಚಿನ್ನ ವಿತರಣೆ 4 ಕೆ.ಜಿ ಚಿನ್ನ ವಿತರಣೆಯಾದರೆ ಸಾಕಷ್ಟು ವಿವರಣೆಯಾದಂತೆ ಆಗುತ್ತದೆ ಈ ನ್ಯಾಯಾಲಯದಲ್ಲಿರುವ 2.5 ಕೆ ಜಿ ಚಿನಕ್ಕೆ ಈಸಾಪ್ ಕಂಪನಿಯು ರೈತ ಮುಖಿ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸದಿರುವುದೇ ಕಾರಣವಾಗಿದ್ದು ತಕ್ಷಣ ಇದನ್ನು ಕೊಡಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ರೈತರಿಗೆ ಅಹೋ ರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸುತ್ತೆವೆ. ಪತ್ರಿಕಾಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘ ಚಾ.ನಗರ ಜಿಲ್ಲಾಧ್ಯಕ್ಷರು ಹಾಲಿನ ನಾಗರಾಜು, ಚಾ.ನಗರ ತಾಲ್ಲೂಕು ಅಧ್ಯಕ್ಷ ಮಲಿಯೂರು ಸತೀಶ್, ಗಡಿನಾಡು ಸಂಚಾಲಕ ಹೊನ್ನೇಗೌಡನಹಳ್ಳಿ ಮಹೇಶ್, ಶ್ರೀಕಂಠ, ಪ್ರಭು, ಸಿದ್ದಲಿಂಗಪ್ಪ, ಮಹದೇವಪ್ಪ, ಸ್ವಾಮಿ, ನಾಗರಾಜು, ಮಹೇಶ್, ರಾಜಪ್ಪ ಇದ್ದರು.

6 hrs ago
user_ಎನ್. ನಟರಾಜ್
ಎನ್. ನಟರಾಜ್
Kollegal, Chamarajanagara•
6 hrs ago
9dcea7f0-ac3c-4dbf-ba86-f7a7e2fc4d7f

ಕೊಳ್ಳೇಗಾಲ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಬಳಿಕ ಮಾತನಾಡಿ, ಚಾ.ನಗರ ತಾಲ್ಲೂಕು ಮಲಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶೂನ್ಯ ಬಡ್ಡಿ ದರದಲ್ಲಿ ಚಿನ್ನ ಅಡಮಾನ ಇಟ್ಟುಕೊಂಡು ಸಾಲ ಕೊಡುತ್ತೇವೆ ಎಂದು ಸಂಘದ ಕಾರ್ಯದರ್ಶಿಯಾದ ನಾಗೇಂದ್ರ ಎಂಬಾತನು 2022- 23ರ ವ್ಯಾಪ್ತಿಯಲ್ಲಿ ಸುಮಾರು 11.1/2 kgಗು ಹೆಚ್ಚು ಚಿನ್ನವನ್ನು ರೈತರಿಂದ ಅಡಮಾನ ಮಾಡಿಕೊಂಡು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ವಿವಿಧ ಖಾಸಗಿ ಕಂಪನಿಗಳಲ್ಲಿ ಹೆಚ್ಚಿನ ಹಣಕ್ಕೆ ಗಿರವಿಗೆ ಇಟ್ಟು ಹಣ ಪಡೆದು ರೈತರಿಗೆ ಮೋಸ ಮಾಡಲು ಹೊರಟಿದ್ದನು ಇದನ್ನು ಸಂಘಟನೆ ಗಮನಕ್ಕೆ ತಂದಾಗ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಬೃಹತ್ ಚಳುವಳಿಯನ್ನು ಮಾಡಿ ರೈತರು ಅಡಮಾನ ಮಾಡಿರುವ ಸಂಪೂರ್ಣ ಚಿನ್ನವನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳುವ ಆದೇಶವನ್ನು ನೀಡಲಾಯಿತು. ನಂತರ ಪೊಲೀಸ್ ಇಲಾಖೆಯು 20=06=2023

4b0c42f2-8b99-48e2-8f60-c05e1bef8686

ರಲ್ಲಿ ಚಾಮರಾಜನಗರದ ಸಿಎನ್ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಾಯಿತು ಈ ಪ್ರಕರಣ ದಾಖಲಾದ ಮೇಲೆ ಅಂದಾಜು ಸುಮಾರು 11 1/2 ಕೆಜಿ ಚಿನ್ನ ಈ ವ್ಯವಹಾರದಲ್ಲಿ ಭಾಗಿಯಾಗಿದೆ ಎಂಬ ವರದಿ ಬಂತು ನಂತರ ಮುಂದುವರೆದು ಪೊಲೀಸ್ ಅಧಿಕಾರಿಗಳು 9 ಕೆಜಿ 900 ಗ್ರಾಂ ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇನ್ನು ಉಳಿದ 2 ಕೆ.ಜಿ 500 ಗ್ರಾಂ ಚಿನ್ನಕ್ಕೆ ಕೊಳ್ಳೇಗಾಲದ ಈಸಾಫ್ ಫೈನಾನ್ಸ್, ಮೈಸೂರಿನ ಐಸಿಎಲ್. ಚಾಮರಾಜನಗರದ ಮನಪುರಂ ಇವರು ನ್ಯಾಯಾಲಯದಿಂದ ತಡೆ ಇದೆ ಎಂದು ಚಿನ್ನವನ್ನು ತಡೆ ತಂದಿದ್ದಾರೆ ಅದರಲ್ಲೂ ವಿಶೇಷವಾಗಿ ಮಣಪುರಂ ಗೋಲ್ಡ್ ಪೋಲಿಸ್ ಸಿಬ್ಬಂದಿಯ ಮೂಲಕ ಚಿನ್ನವನ್ನು ರೈತರಿಗೆ ಗುರುತಿಸಲು ಅವಕಾಶ ಕಲ್ಪಿಸಿದೆ ಕೊಳ್ಳೇಗಾಲದ ಇಸಾ ಫೈನಾನ್ಸ್ ಕಂಪನಿಯು ಚಿನ್ನವನ್ನು ಕೊಡುವಲ್ಲಿ ಸಂಪೂರ್ಣ ನಿರ್ಲಕ್ಷತೆ ಮತ್ತು ಬೇಜವಾಬ್ದಾರಿಯನ್ನು ತೋರುತ್ತಿದೆ ತಕ್ಷಣ ಸಂಬಂಧಪಟ್ಟಂತಹ ಕಂಪನಿಯು ಮುಖ್ಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮಾನವೀಯತೆ ಮತ್ತು ರೈತರ ಚಿನ್ನವನ್ನು ಕೊಡಿಸುವಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಇನ್ನ

dcf79354-43e1-448a-8514-545159f78cf0

ವಾಪಸ್ ಕೊಡುವಲ್ಲಿ ಕ್ರಮ ಕೈಗೊಳ್ಳದಿದ್ದರೆ ಕೊಳ್ಳೇಗಾಲದ ಈ ಕಂಪನಿಯ ಮುಂದೆ ನಿರಂತರ ಹೋರಾಟ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ತಿಳಿಸುತ್ತೇವೆ. ಇದರಲ್ಲಿ 109 ಜನರಿಗೆ 3 ಕೆ.ಜಿ 400 ಗ್ರಾಂ ಚಿನ್ನವನ್ನು ನೀಡಲಾಗಿದೆ ಮತ್ತೆ 106 ಜನರಿಗೆ ಚಿನ್ನ ವಿತರಣೆ ಮಾಡಲು ಆದೇಶವಾಗಿದೆ ಈ ನೂರಾ ಆರು ಜನರಿಗೆ ಚಿನ್ನ ವಿತರಣೆ 4 ಕೆ.ಜಿ ಚಿನ್ನ ವಿತರಣೆಯಾದರೆ ಸಾಕಷ್ಟು ವಿವರಣೆಯಾದಂತೆ ಆಗುತ್ತದೆ ಈ ನ್ಯಾಯಾಲಯದಲ್ಲಿರುವ 2.5 ಕೆ ಜಿ ಚಿನಕ್ಕೆ ಈಸಾಪ್ ಕಂಪನಿಯು ರೈತ ಮುಖಿ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸದಿರುವುದೇ ಕಾರಣವಾಗಿದ್ದು ತಕ್ಷಣ ಇದನ್ನು ಕೊಡಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ರೈತರಿಗೆ ಅಹೋ ರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸುತ್ತೆವೆ. ಪತ್ರಿಕಾಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘ ಚಾ.ನಗರ ಜಿಲ್ಲಾಧ್ಯಕ್ಷರು ಹಾಲಿನ ನಾಗರಾಜು, ಚಾ.ನಗರ ತಾಲ್ಲೂಕು ಅಧ್ಯಕ್ಷ ಮಲಿಯೂರು ಸತೀಶ್, ಗಡಿನಾಡು ಸಂಚಾಲಕ ಹೊನ್ನೇಗೌಡನಹಳ್ಳಿ ಮಹೇಶ್, ಶ್ರೀಕಂಠ, ಪ್ರಭು, ಸಿದ್ದಲಿಂಗಪ್ಪ, ಮಹದೇವಪ್ಪ, ಸ್ವಾಮಿ, ನಾಗರಾಜು, ಮಹೇಶ್, ರಾಜಪ್ಪ ಇದ್ದರು.

More news from ಕರ್ನಾಟಕ and nearby areas
  • ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಲವೆಡೆ ಮಳೆ ಉಂಟಾಗಿದ್ದು ಬಿರು ಬಿಸಿಲಿಗೆ ಮಳೆರಾಯ ತಂಪೆರೆದಿದ್ದಾನೆ. ನಗರದ ಕುವೆಂಪು ನಗರ, ವಿದ್ಯಾರಣ್ಯಪುರಂ, ಅಗ್ರಹಾರ, ಚಾಮುಂಡಿಪುರಂ ಸೇರಿದಂತೆ ಹಲವೆಡೆ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು ಪಾದಚಾರಿಗಳು ಪರದಾಟ ಅನುಭವಿಸಿದ್ದಾರೆ.
    1
    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಲವೆಡೆ ಮಳೆ ಉಂಟಾಗಿದ್ದು ಬಿರು ಬಿಸಿಲಿಗೆ  ಮಳೆರಾಯ ತಂಪೆರೆದಿದ್ದಾನೆ.
ನಗರದ ಕುವೆಂಪು  ನಗರ, ವಿದ್ಯಾರಣ್ಯಪುರಂ, ಅಗ್ರಹಾರ, ಚಾಮುಂಡಿಪುರಂ ಸೇರಿದಂತೆ ಹಲವೆಡೆ ಸುರಿದ ಮಳೆಗೆ  ಜನ ಜೀವನ ಅಸ್ತವ್ಯಸ್ತವಾಗಿದ್ದು ಪಾದಚಾರಿಗಳು ಪರದಾಟ ಅನುಭವಿಸಿದ್ದಾರೆ.
    user_Sandeep Kumar
    Sandeep Kumar
    Local News Reporter ಮೈಸೂರು, ಮೈಸೂರು, ಕರ್ನಾಟಕ•
    23 hrs ago
  • ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ: ಮಾಜಿ ಶಾಸಕರಿಗೆ ಕೆ. ಕೃಷ್ಣಮೂರ್ತಿ ಸವಾಲು ​ಮಾಗಡಿ: ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಜಿ ಶಾಸಕರು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಅಭಿವೃದ್ಧಿ ವಿಚಾರವಾಗಿ ಅವರು ಎಲ್ಲಿಗಾದರೂ ಬರಲಿ, ನಾವು ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಅವರು ಸವಾಲು ಹಾಕಿದ್ದಾರೆ. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆ.ಕೃಷ್ಣಮೂರ್ತಿ ಅವರ ಆರೋಪಗಳಿಗೆ ನಾನು ಉತ್ತರ ನೀಡುವ ಅಗತ್ಯವಿಲ್ಲ ಅವರು ಯಾರು ಗೊತ್ತಿಲ್ಲ ಎಂದಿದ್ದಾರೆ ಅವರನ್ನು ನಾನು ಗೆಲ್ಲಿಸಬೇಕಾದ ವೇಳೆ ನಾನು ಯಾರು ಎಂದು ಗೊತ್ತಿರಲಿಲ್ಲವೇ ಮಜಿ ಶಾಸಕರ ಆರೋಪಗಳಿಗೆ ನಮ್ಮ ಪಕ್ಷದ ಮುಖಂಡರು ಉತ್ತರ ನೀಡಲು ಸಿದ್ದರಿದ್ದೇವೆ, ಮಾಜಿ ಶಾಸಕರು ಕಾಂಗ್ರೆಸ್ ಮುಖಂಡರ ಮೇಲೆ ಅನಗತ್ಯವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ನಾಯಕರಾದ ಬಾಲಣ್ಣನವರ ವ್ಯಕ್ತಿತ್ವದ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ​ಆರೋಪಗಳಿಗೆ ದಾಖಲೆ ನೀಡಲಿ: ಮಾಜಿ ಶಾಸಕರು ಮಾಡುತ್ತಿರುವ 600 ಕೋಟಿ ಹಗರಣ ಅಥವಾ ಗೌರಮ್ಮನಕೆರೆಯ ಮಣ್ಣು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಮಣ್ಣು ಮಾರಾಟ ಮಾಡಿ ಜೀವನ ನಡೆಸುವ ಅಗತ್ಯ ಶಾಸಕರಿಗಿಲ್ಲ ಇಂಥಹ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಅವರ ಬಳಿ ದಾಖಲೆಗಳಿದ್ದರೆ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು. ​ಚರ್ಚೆಗೆ ದಿನಾಂಕ ನಿಗದಿಪಡಿಸಿ: "ಅಭಿವೃದ್ಧಿ ಬಗ್ಗೆ ಚರ್ಚಿಸಲು ನಾವಂತೂ ಸಿದ್ಧ. ಮಾಜಿ ಶಾಸಕರೇ ಅಥವಾ ಮಾಧ್ಯಮದವರೇ ಒಂದು ದಿನಾಂಕ ಮತ್ತು ಸ್ಥಳವನ್ನು ನಿಗದಿಪಡಿಸಲಿ. ನಾವು ನಮ್ಮ ನಾಯಕರೊಂದಿಗೆ ಬಂದು ಪ್ರತಿಯೊಂದಕ್ಕೂ ದಾಖಲೆ ಸಮೇತ ಉತ್ತರ ನೀಡುತ್ತೇವೆ ಎಂದು ಕೆ. ಕೃಷ್ಣಮೂರ್ತಿ ಹೇಳಿದರು. ​ ​ಜನರೇ ತೀರ್ಪು ನೀಡುತ್ತಾರೆ: ನಾವು ಮಾಡಿದ ಕೆಲಸಗಳನ್ನು ನಾವೇ ಹೇಳಿಕೊಳ್ಳುವ ಅಗತ್ಯವಿಲ್ಲ, ಜನರು ಅದನ್ನು ಗಮನಿಸುತ್ತಿದ್ದಾರೆ. ಮಾಜಿ ಶಾಸಕರು ಕೇವಲ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ಕಾಂಗ್ರೆಸ್ ಮುಖಂಡರಾದ ಅಗ್ರೋ ಪುರುಷೋತ್ತಮ್, ಶಿವಕುಮಾರು, ಕಲ್ಕೆರೆ ಶಿವಣ್ಣ, ವೆಂಕಟೇಶ್ ಇತರರು ಇದ್ದರು. ​
    1
    ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ: ಮಾಜಿ ಶಾಸಕರಿಗೆ ಕೆ. ಕೃಷ್ಣಮೂರ್ತಿ ಸವಾಲು
​ಮಾಗಡಿ: ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಜಿ ಶಾಸಕರು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಅಭಿವೃದ್ಧಿ ವಿಚಾರವಾಗಿ ಅವರು ಎಲ್ಲಿಗಾದರೂ ಬರಲಿ, ನಾವು ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಅವರು ಸವಾಲು ಹಾಕಿದ್ದಾರೆ.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,  ಕೆ.ಕೃಷ್ಣಮೂರ್ತಿ ಅವರ ಆರೋಪಗಳಿಗೆ ನಾನು  ಉತ್ತರ ನೀಡುವ ಅಗತ್ಯವಿಲ್ಲ ಅವರು ಯಾರು ಗೊತ್ತಿಲ್ಲ ಎಂದಿದ್ದಾರೆ   ಅವರನ್ನು ನಾನು ಗೆಲ್ಲಿಸಬೇಕಾದ ವೇಳೆ ನಾನು ಯಾರು ಎಂದು ಗೊತ್ತಿರಲಿಲ್ಲವೇ ಮಜಿ ಶಾಸಕರ  ಆರೋಪಗಳಿಗೆ  ನಮ್ಮ ಪಕ್ಷದ ಮುಖಂಡರು  ಉತ್ತರ ನೀಡಲು ಸಿದ್ದರಿದ್ದೇವೆ, 
ಮಾಜಿ ಶಾಸಕರು ಕಾಂಗ್ರೆಸ್ ಮುಖಂಡರ ಮೇಲೆ ಅನಗತ್ಯವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ನಾಯಕರಾದ ಬಾಲಣ್ಣನವರ ವ್ಯಕ್ತಿತ್ವದ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
​ಆರೋಪಗಳಿಗೆ ದಾಖಲೆ ನೀಡಲಿ: ಮಾಜಿ ಶಾಸಕರು ಮಾಡುತ್ತಿರುವ 600 ಕೋಟಿ ಹಗರಣ ಅಥವಾ ಗೌರಮ್ಮನಕೆರೆಯ  ಮಣ್ಣು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಮಣ್ಣು ಮಾರಾಟ ಮಾಡಿ ಜೀವನ ನಡೆಸುವ ಅಗತ್ಯ ಶಾಸಕರಿಗಿಲ್ಲ ಇಂಥಹ   ಆರೋಪಗಳು ಸತ್ಯಕ್ಕೆ ದೂರವಾಗಿದೆ.  ಅವರ ಬಳಿ ದಾಖಲೆಗಳಿದ್ದರೆ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು.
​ಚರ್ಚೆಗೆ ದಿನಾಂಕ ನಿಗದಿಪಡಿಸಿ: "ಅಭಿವೃದ್ಧಿ ಬಗ್ಗೆ ಚರ್ಚಿಸಲು ನಾವಂತೂ ಸಿದ್ಧ. ಮಾಜಿ ಶಾಸಕರೇ ಅಥವಾ ಮಾಧ್ಯಮದವರೇ ಒಂದು ದಿನಾಂಕ ಮತ್ತು ಸ್ಥಳವನ್ನು ನಿಗದಿಪಡಿಸಲಿ. ನಾವು ನಮ್ಮ ನಾಯಕರೊಂದಿಗೆ ಬಂದು ಪ್ರತಿಯೊಂದಕ್ಕೂ ದಾಖಲೆ ಸಮೇತ ಉತ್ತರ ನೀಡುತ್ತೇವೆ ಎಂದು ಕೆ. ಕೃಷ್ಣಮೂರ್ತಿ ಹೇಳಿದರು.
​ ​ಜನರೇ ತೀರ್ಪು ನೀಡುತ್ತಾರೆ: ನಾವು ಮಾಡಿದ ಕೆಲಸಗಳನ್ನು ನಾವೇ ಹೇಳಿಕೊಳ್ಳುವ ಅಗತ್ಯವಿಲ್ಲ, ಜನರು ಅದನ್ನು ಗಮನಿಸುತ್ತಿದ್ದಾರೆ. ಮಾಜಿ ಶಾಸಕರು ಕೇವಲ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಮುಖಂಡರಾದ ಅಗ್ರೋ ಪುರುಷೋತ್ತಮ್, ಶಿವಕುಮಾರು, ಕಲ್ಕೆರೆ ಶಿವಣ್ಣ, ವೆಂಕಟೇಶ್ ಇತರರು ಇದ್ದರು.
​
    user_Siddalinga siddalinga
    Siddalinga siddalinga
    ಮಾಗಡಿ, ರಾಮನಗರ, ಕರ್ನಾಟಕ•
    23 hrs ago
  • ಹುಬ್ಬಳ್ಳಿಯಲ್ಲಿ ಚರ್ಚೆಗೆ ಗ್ರಾಸವಾಗಿರುವ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸಮೀರ್ ಮತ್ತು ಯುವತಿ ಕಳೆದ ಮೂರು ವರ್ಷಗಳಿಂದ ಪರಸ್ಪರ ಸಂಬಂಧದಲ್ಲಿದ್ದರು ಎಂದು ಸಮೀರ್ ಸಹೋದರಿ ತೈಸಿಮ್ ಮುಲ್ಲಾ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿಯ ಕುಟುಂಬಸ್ಥರು ನಮ್ಮೊಂದಿಗೆ ಆತ್ಮೀಯವಾಗಿಯೇ ಇದ್ದರು, ಎಲ್ಲರೂ ಸೇರಿ ಪ್ರವಾಸ ಮತ್ತು ಶಾಪಿಂಗ್‌ಗೆ ಹೋಗುತ್ತಿದ್ದೆವು ಎಂದು ಹೇಳಿದ್ದಾರೆ. ಜೊತೆಗೆ, ಕೆಲವರು ಮನೆಗೆ ಬಂದು ತಮ್ಮನನ್ನು ಕಿಡ್ನಾಪ್ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸುತ್ತಿದ್ದಾರೆ.
    1
    ಹುಬ್ಬಳ್ಳಿಯಲ್ಲಿ ಚರ್ಚೆಗೆ ಗ್ರಾಸವಾಗಿರುವ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸಮೀರ್ ಮತ್ತು ಯುವತಿ ಕಳೆದ ಮೂರು ವರ್ಷಗಳಿಂದ ಪರಸ್ಪರ ಸಂಬಂಧದಲ್ಲಿದ್ದರು ಎಂದು ಸಮೀರ್ ಸಹೋದರಿ ತೈಸಿಮ್ ಮುಲ್ಲಾ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿಯ ಕುಟುಂಬಸ್ಥರು ನಮ್ಮೊಂದಿಗೆ ಆತ್ಮೀಯವಾಗಿಯೇ ಇದ್ದರು, ಎಲ್ಲರೂ ಸೇರಿ ಪ್ರವಾಸ ಮತ್ತು ಶಾಪಿಂಗ್‌ಗೆ ಹೋಗುತ್ತಿದ್ದೆವು ಎಂದು ಹೇಳಿದ್ದಾರೆ. ಜೊತೆಗೆ, ಕೆಲವರು ಮನೆಗೆ ಬಂದು ತಮ್ಮನನ್ನು ಕಿಡ್ನಾಪ್ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸುತ್ತಿದ್ದಾರೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    3 hrs ago
  • ದೊಡ್ಡಬಳ್ಳಾಪುರ ಬಾಡಿಗೆ ಮನೆಯಲ್ಲಿ ವಾಸವಿರುವ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಕಳ್ಳತನ ಗೀತಂ ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಘಟನೆ ಒಂದೇ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೂರು ಲ್ಯಾಪ್ ಟಾಪ್ ಗಳ ಕಳ್ಳತನ ಲ್ಯಾಪ್‌ಟಾಪ್ ಕಳ್ಳತನ ಮಾಡಿಕೊಂಡು ಹೊರ ಹೋಗುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆ ಲ್ಯಾಪ್ ಟಾಪ್ ಕಳೆದಿರುವುದರಿಂದ ವೃತ್ತಿಪರ ಪ್ರಾಜೆಕ್ಟ್ ತಯಾರಿಸಲು ಮುಂದಾಗಿದ್ದ ವಿದ್ಯಾರ್ಥಿಗಳಿಗೆ ಸಂಕಷ್ಟ ಆಂದ್ರಮೂಲದ ಎಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಸಂಕಷ್ಟ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿ
    2
    ದೊಡ್ಡಬಳ್ಳಾಪುರ
ಬಾಡಿಗೆ ಮನೆಯಲ್ಲಿ ವಾಸವಿರುವ  ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಕಳ್ಳತನ
ಗೀತಂ ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು
ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಘಟನೆ
ಒಂದೇ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೂರು ಲ್ಯಾಪ್ ಟಾಪ್ ಗಳ ಕಳ್ಳತನ 
ಲ್ಯಾಪ್‌ಟಾಪ್ ಕಳ್ಳತನ ಮಾಡಿಕೊಂಡು ಹೊರ ಹೋಗುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆ
ಲ್ಯಾಪ್ ಟಾಪ್ ಕಳೆದಿರುವುದರಿಂದ ವೃತ್ತಿಪರ ಪ್ರಾಜೆಕ್ಟ್ ತಯಾರಿಸಲು ಮುಂದಾಗಿದ್ದ  ವಿದ್ಯಾರ್ಥಿಗಳಿಗೆ ಸಂಕಷ್ಟ
ಆಂದ್ರಮೂಲದ ಎಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಸಂಕಷ್ಟ 
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ 
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    23 hrs ago
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    2 hrs ago
  • Dr ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ MLA ಕೂತ್ತೂರು ಮಂಜುನಾಥ್ mlc ಅನಿಲ್ ಕುಮಾರ್ ಭಾಗವಹಿಸಿದರು
    1
    Dr ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ MLA ಕೂತ್ತೂರು ಮಂಜುನಾಥ್ mlc ಅನಿಲ್ ಕುಮಾರ್ ಭಾಗವಹಿಸಿದರು
    user_True news kolar Ayub Pasha
    True news kolar Ayub Pasha
    Local News Reporter ಕೋಲಾರ, ಕೋಲಾರ, ಕರ್ನಾಟಕ•
    4 hrs ago
  • ಮಾಗಡಿ ; ವಿಶ್ವ ವಿಖ್ಯಾತ ಬೆಂಗಳೂರು ನಿರ್ಮಾತೃ ಧರ್ಮಪ್ರಭು ಕೆಂಪೇಗೌಡರಿಗೆ ನಿಲ್ಲಲು ಮಾಗಡಿಯಲ್ಲಿ ನೆಲೆ ಇಲ್ಲದಂತಾಗಿದೆ. ಧರ್ಮದ ಹಾದಿಯಲ್ಲಿ ನಡೆದ ಕೆಂಪೇಗೌಡರಿಗೆ ಮಾಗಡಿಯಲ್ಲಿ ನೆಲೆ ಇಲ್ಲ ಎಂದರೆ ನಾಡಿಗೆ ಅವಮಾನ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಟಿ.ಎನ್.ಶ್ರೀನಿವಾಸ್ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಎಚ್.ಎಂ.ಕೃಷ್ಣಮೂರ್ತಿಯೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಯಿತು. ಕೆಂಪೇಗೌಡರ ಪ್ರತಿಮೆಯನ್ನು ಗೌರವಯುತವಾಗಿ ಸ್ಥಳಾಂತರಿಸಲು ಕೋರ್ಟ್ ಆದೇಶ ನೀಡಿದ್ದರಿಂದ ನಾವೂ ಕೂಡ ಕೋರ್ಟ್ ಆದೇಶಕ್ಕೆ ತಲೆಭಾಗಿ ಗೌರವ ಕೊಡುತ್ತೇವೆ. ಆದರೆ ಪುರಸಭೆ ಅಧಿಕಾರಿಗಳು ರಾತ್ರೊರಾತ್ರಿ ಪ್ರತಿಮೆಯ ಬಳಿಯ ಮೆಟ್ಟಿಲ್ಲನ್ನು ತೆರವುಗೊಳಿಸುವ ಅನಿವಾರ್ಯತೆ ಏನಿತ್ತು. ಅದರಲ್ಲೂ ಅಮಾವಾಸ್ಯೆ ದಿನವೇ ಮೆಟ್ಟಿಲು ಕಿತ್ತು ಹಾಕಿದ್ದು ಒಂದೆಡೆಯಾದರೆ ಅಂದಿನಿಂದ ಕೆಂಪೇಗೌಡ ಪ್ರತಿಮೆ ಗೌರವಕ್ಕಾದರೂ ಹೂವಿನ ಹಾರ ಹಾಕದೆ ಅವಮಾನಿಸಲಾಗಿದೆ. ಜತೆಗೆ ದಿಕ್ಕುದೆಸೆ ಇಲ್ಲದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪ್ರತಿಮೆ ಸ್ಥಳಾಂತರಕ್ಕೆ ಯೋಜನೆ ರೂಪಿಸಿ ಕಾಮಗಾರಿಯೂ ನಡೆದಿದೆ. ಈಗ ಇದೊಂದು ವಿವಾಧಾತ್ಮಕ ಸ್ಥಳಾವಾಗಿದೆ. ಕೆಂಪೇಗೌಡರು ಸತ್ಯದ ಹಾದಿಯಲ್ಲಿ ನಡೆದಿದ್ದರು. ಅವರನ್ನು ಅವಮಾನಿಸುವವರು ಎಂದಿಗೂ ಉದ್ಧಾರವಾಗುವುದಿಲ್ಲ. ಅದರ ಫಲ ಅವರೇ ಉಣ್ಣಬೇಕಿದೆ. ಕಾದು ನೋಡುತ್ತೇನೆ ಎಂದು ಹೆಸರೇಳದೆ ಶಾಸಕರ ವಿರುದ್ಧ ಹರಿಹಾಯ್ದರು. ಈಗಾಗಲೇ ಅಡಿಗೆ 45 ರೂ ನಂತೆ ನಂತೆ 60/70 ವಿಸ್ತೀರ್ಣದ ಸ್ಥಳವನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ಪುರಸಭೆ ನೀಡಿದೆ. ನಮಗೂ ಕೆಂಪೇಗೌಡರ ಹೆಸರಿನಲ್ಲಿ 1 ಎಕರೆ ಜಮೀನು ಸರ್ಕಾರ ಮಂಜೂರು ಮಾಡಿಕೊಡಲಿ ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನು ಜಮಾ ಮಾಡುತ್ತೇನೆ. ಇಲ್ಲೊಂದು ಸುಂದರವಾದ ಪಾರ್ಕ್ ನಿರ್ಮಿಸಿ ಜನರ ಆರೋಗ್ಯಕ್ಕೆ ಮುಂದಾಗುವುದಾಗಿ ಮನವಿ ಮಾಡಿದ ಅವರು. ಈಗಿನ ಕೆಂಪೇಗೌಡರ ಪ್ರತಿಮೆಯ ಮೆಟ್ಟಿಲು ತೆರವುಗೊಳಿಸಿರುವುದರಿಂದ ಪ್ರತಿಮೆಗೆ ಹಾರ ಹಾಕಲಾಗದ ಪರಿಸ್ಥಿತಿ ತಂದೊಡ್ಡಿರುವ ಪುರಸಭೆ ಅಧಿಕಾರಿಗಳು ನಾಡಪ್ರಭು ಕೆಂಪೇಗೌಡ ಅವರಿಗೆ ಅಗೌರವ ತೋರಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು ನನ್ನ ಸ್ವಂತ ದುಡಿಮೆಯ ಹಣದಲ್ಲಿ ಸುಂದರವಾದ ಕಂಚಿನ ಕೆಂಪೇಗೌಡರ ಪ್ರತಿಮೆಯನ್ನು ಪುರಸಭಾ ಆವರಣದಲ್ಲಿ ಕಳೆದ 22 ವರ್ಷಗಳ ಹಿಂದೆ ಅನೇಕ ಮಠಮಾನ್ಯಗಳ ಶ್ರೀಗಳರು, ಸಚಿವರು, ಶಾಸಕರು, ಗಣ್ಯರು, ರೈತರು, ಅಭಿಮಾನಿಗಳ ನೇತೃತ್ವದಲ್ಲಿ ಪ್ರತಿಮೆಯನ್ನು ಪ್ರತಿμÁ್ಠಪಿಸಿ, ಆದ್ದೂರಿಯಾಗಿ ಕಾರ್ಯಕ್ರಮ ರೂಪಿಸುವ ಮೂಲಕ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಗಿತ್ತು. ಅನ್ನಸಂತರ್ಪಣೆ ಸಹ ಅವಿರತವಾಗಿ ನಡೆದಿತ್ತು. ಈ ಮೂಲಕ ಕೆಂಪೇಗೌಡರ ಇತಿಹಾಸವನ್ನು ಮರುಕಳಿಸುವಂತ ಕೆಲಸವನ್ನು ಮಾಡಿ ತೋರಿಸಿದ್ದೆ. ಹೀಗಾಗಿ ಆವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಆದರೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಸರ್ಕಾರ ಇದೆ ಎಂದು ದೆಹಲಿಯಿಂದ ಕಲ್ಕತ್ತಗೆ ಎಂಬಂತೆ ತೊಗಲಕ್ ದರ್ಬಾರ್ ನಡೆಸುತ್ತಿದ್ದಾರೆ. ಅವರ ತಾಳಕ್ಕೆ ಅಧಿಕಾರಿಗಳು ಕುಣಿಯುತ್ತಿದ್ದಾರೆ. ಹಿಂದೆ ಶಾಸಕರ ತಾಳಕ್ಕೆ ಕುಣಿದ ಕೆಲವು ಅಧಿಕಾರಿಗಳು ನೇಣಿನ ಕುಣಿಕೆಗೆ ತಲೆಯೊಡ್ಡಬೇಕಾಯಿತು. ಈಗ ಅವರ ಕುಟುಂಬಗಳು ಶೋಚನೀಯಸ್ಥಿತಿ ತಲುಪಿವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅವರ ನಡೆ ವಿರುದ್ಧ ಆಕ್ರೋಶ ಹೊರಹಾಕಿದರು. ಭಾರಿ ವಿವಾಧಕ್ಕೆ ಒಳಗಾದ ಧರ್ಮಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ; 2008 ರಲ್ಲಿ ಪುರಸಭೆ ಆಡಳಿತ ಮಂಡಲಿ ರೆಜ್ಯುಲೇಷನ್ ಮಾಡಿ ಪ್ರತಿಮೆ ಸ್ಥಾಪನೆಗೆ 50/50 ಸ್ಥಳ ಮಂಜೂರು ಮಾಡಿತ್ತು. ಈಗ ಕೆಂಪೇಗೌಡರ ಪ್ರತಿಮೆ ಸ್ಥಳವನ್ನು ಸೇರಿಸಿಕೊಂಡಂತೆ ಸುಮಾರು 2 ಎಕರೆ ಪ್ರದೇಶದಲ್ಲಿ100 ಬೆಡ್ಡಿನ ಹೈಟೆಕ್ ಆಸ್ಪತ್ರೆ ನಿರ್ಮಿಸಲು ಶಾಸಕರು ಮುಂದಾಗಿದ್ದಾರೆ. ಕೆಂಪೇಗೌಡರ ಪ್ರತಿಮೆಯನ್ನು ಉಳಿಸಿಕೊಂಡು ಆಸ್ಪತ್ರೆ ನಿರ್ಮಿಸಬಹುದಿತ್ತು. ಕೆಂಪೇಗೌಡರ ಕೋಟೆ ಕಂದಕ ಮುಚ್ಚದಂತೆ ನಾನು ಕೋರ್ಟ್ ಮೊರೆ ಹೋಗಿದ್ದರಿಂದ ನನ್ನ ವಿರುದ್ಧ ದ್ವೇಷದ ರಾಜಕೀಯ ಮಾಡುತ್ತಿರುವ ಶಾಸಕರು ಅಭಿವೃದ್ಧಿ ಹೆಸರಿನಲ್ಲಿ ಕ್ಷೇತ್ರದಲ್ಲಿ ಲೂಟಿಗೆ ಇಳಿದಿದ್ದಾರೆ. ಕೆಂಪೇಗೌಡರ ಪ್ರತಿಮೆ ಸ್ಥಳಾಂತರಕ್ಕೆ ಅಧಿಕಾರಿಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಎಚ್.ಎಂ.ಕೃಷ್ಣಮೂರ್ತಿ ಆರೋಪಿಸಿದರು. ತಾಪಂ ಮಾಜಿ ಸದಸ್ಯ ಸಿ.ಜಯರಾಮ್ ಮಾತನಾಡಿ, ಧರ್ಮಪ್ರಭು ಕೆಂಪೆಗೌಡರು ಸರ್ವಧರ್ಮಪ್ರಿಯರು, ಎಲ್ಲ ವರ್ಗದ ಜನರಿಗೂ ಒಂದೊಂದು ಪೇಟೆಯನ್ನು ಕಟ್ಟಿಕೊಟ್ಟ ಮಹಾನೀಯರ ಪ್ರತಿಮೆಗೆ ದಕ್ಕೆಯಾಗುತ್ತಿದೆ. ಶಾಸಕರ ಸರ್ವಾಧಿಕಾರ ಇಲ್ಲಿ ನಡೆಯುತ್ತಿದೆ. ನಾವೂ ಅವರ ಪ್ರತಿಮೆಗೆ ಅವಮಾನಿಸಿದರೆ ಅವರ ಹೃದಯಕ್ಕೆ ಅವಮಾನಿಸಿದಂತೆ. ಮುಂದಿನ ದಿನಗಳಲ್ಲಿ ಅದರ ಪರಿಣಾಮವನ್ನು ಅವರೇ ಉಣ್ಣಬೇಕಿದೆ ಎಂದು ಕಿಡಿಕಾರಿದರು. ನಿಸರ್ಗ ಪರಚರಣ ಟ್ರಸ್ಟ್ ಅಧ್ಯಕ್ಷ ಎಚ್.ಎನ್,ಶಿವಲಿಂಗಯ್ಯ ಮಾತನಾಡಿ, ಗೌರವಯುತವಾಗಿ ಕೆಂಪೇಗೌಡರ ಪ್ರತಿಮೆಯನ್ನು ಸ್ಥಳಾಂತರಿಸಲು ಕೋರ್ಟ್ ಆದೇಶ ನೀಡಿದೆ. ಇಲ್ಲಿರುವ ಮರಗಿಡಗಳನ್ನು ತೆರವುಗೊಳಿಸಬಾರದು. ತೆರವುಗೊಳಿಸಬೇಕಾದರೆ ಕಾನೂನಾತ್ಮಕವಾಗಿ ತೆರವುಗೊಳಿಸಬೇಕೆಂದು ತಾಕೀತು ಮಾಡಿದೆ. ಆದರೆ ಈಗಾಗಲೆ ಪುರಸಭೆ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳವನ್ನು ಆರೋಗ್ಯ ಇಲಾಖೆಗೆ ವರ್ಗಾಯಿಸಿದೆ. ಆರೋಗ್ಯ ಇಲಾಖೆಗೆ ವರ್ಗಾಯಿಸಿದ ಮೇಲೆ ಪ್ರತಿಮೆಯ ಮೆಟ್ಟಿಲು ಕಿತ್ತು ಹಾಕಲು ಇವರಿಗೇನು ಹಕ್ಕಿದೆ. ಇದೊಂದು ರಾಹಕೀಯ ಶಡ್ಯಂತರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಾಕ್ಸ್ ; ಸರ್ಕಾರದ ಮತ್ತು ಕೋರ್ಟ್ ಆದೇಶವನ್ನು ಪಾಲಿಸುವುದು ನಮ್ಮ ಕೆಲಸ. ನಾವು ಯಾರ ಒತ್ತಡಕ್ಕೂ ಮಣಿದಿಲ್ಲ, ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಗೆ ಜಮೀನು ವರ್ಗಾಯಿಸಲು ಅದೇಶ ನೀಡಿದ್ದರಿಂದ ವರ್ಗಾಯಿಸಿದ್ದೇವೆ. ಪ್ರತಿಮೆ ತೆರವುಗೊಳಿಸಲು ಕೋರ್ಟ್ ಆದೇಶವಿರುವುದರಿಂದ ಸಂಬಂಧಪಟ್ಟರು ಸ್ಥಳಾಂತರಿಸಲಿದ್ದಾರೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನೀವೇನಿದ್ದರೂ ಕೇಳುವುದಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದು. ನಮ್ಮದೇನು ಅಭ್ಯಂತರವಿಲ್ಲ. ನಾವು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೆವೆ. ಟಿ.ಎನ್.ಶ್ರೀನಿವಾಸ್ ಮುಖ್ಯಾಧಿಕಾರಿ ಪುರಸಭೆ ಮಾಗಡಿ. ಜೆಡಿಎಸ್ ಮುಖಂಡ ತಮ್ಮಣ್ಣಗೌಡ, ಮಾಡಬಾಳ್ ಕೆಂಪೇಗೌಡ, ಸಾಗರ್, ಎನ್‍ಇಎಸ್ ಆನಂದ್, ದೊಡ್ಡಿ ಗೋಪಿ, ನಾಗರಾಜು, ಶಿವಶಂಕರ್, ಮೂರ್ತಿ, ಮೋಹನ್, ರಾಜೇಶ್, ಶಿವಣ್ಣ, ಕುಮಾರ್, ಆರ್‍ಐ ರವಿ, ಎಂಜಿನಿಯರ್ ಪ್ರಶಾಂತ್ ಶೆಟ್ಟಿ ಇತರರು ಇದ್ದರು.
    1
    ಮಾಗಡಿ ; ವಿಶ್ವ ವಿಖ್ಯಾತ ಬೆಂಗಳೂರು ನಿರ್ಮಾತೃ ಧರ್ಮಪ್ರಭು ಕೆಂಪೇಗೌಡರಿಗೆ ನಿಲ್ಲಲು ಮಾಗಡಿಯಲ್ಲಿ ನೆಲೆ ಇಲ್ಲದಂತಾಗಿದೆ. ಧರ್ಮದ ಹಾದಿಯಲ್ಲಿ ನಡೆದ ಕೆಂಪೇಗೌಡರಿಗೆ ಮಾಗಡಿಯಲ್ಲಿ ನೆಲೆ ಇಲ್ಲ ಎಂದರೆ ನಾಡಿಗೆ ಅವಮಾನ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು. 
ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಟಿ.ಎನ್.ಶ್ರೀನಿವಾಸ್ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಎಚ್.ಎಂ.ಕೃಷ್ಣಮೂರ್ತಿಯೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಯಿತು. ಕೆಂಪೇಗೌಡರ ಪ್ರತಿಮೆಯನ್ನು ಗೌರವಯುತವಾಗಿ ಸ್ಥಳಾಂತರಿಸಲು ಕೋರ್ಟ್ ಆದೇಶ ನೀಡಿದ್ದರಿಂದ ನಾವೂ ಕೂಡ ಕೋರ್ಟ್ ಆದೇಶಕ್ಕೆ ತಲೆಭಾಗಿ ಗೌರವ ಕೊಡುತ್ತೇವೆ. ಆದರೆ ಪುರಸಭೆ ಅಧಿಕಾರಿಗಳು ರಾತ್ರೊರಾತ್ರಿ ಪ್ರತಿಮೆಯ ಬಳಿಯ ಮೆಟ್ಟಿಲ್ಲನ್ನು ತೆರವುಗೊಳಿಸುವ ಅನಿವಾರ್ಯತೆ ಏನಿತ್ತು. ಅದರಲ್ಲೂ ಅಮಾವಾಸ್ಯೆ ದಿನವೇ ಮೆಟ್ಟಿಲು ಕಿತ್ತು ಹಾಕಿದ್ದು ಒಂದೆಡೆಯಾದರೆ ಅಂದಿನಿಂದ ಕೆಂಪೇಗೌಡ ಪ್ರತಿಮೆ ಗೌರವಕ್ಕಾದರೂ ಹೂವಿನ ಹಾರ ಹಾಕದೆ ಅವಮಾನಿಸಲಾಗಿದೆ. ಜತೆಗೆ ದಿಕ್ಕುದೆಸೆ ಇಲ್ಲದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪ್ರತಿಮೆ ಸ್ಥಳಾಂತರಕ್ಕೆ ಯೋಜನೆ ರೂಪಿಸಿ ಕಾಮಗಾರಿಯೂ ನಡೆದಿದೆ. ಈಗ ಇದೊಂದು ವಿವಾಧಾತ್ಮಕ ಸ್ಥಳಾವಾಗಿದೆ. ಕೆಂಪೇಗೌಡರು ಸತ್ಯದ ಹಾದಿಯಲ್ಲಿ ನಡೆದಿದ್ದರು. ಅವರನ್ನು ಅವಮಾನಿಸುವವರು ಎಂದಿಗೂ ಉದ್ಧಾರವಾಗುವುದಿಲ್ಲ. ಅದರ ಫಲ ಅವರೇ ಉಣ್ಣಬೇಕಿದೆ. ಕಾದು ನೋಡುತ್ತೇನೆ ಎಂದು ಹೆಸರೇಳದೆ ಶಾಸಕರ ವಿರುದ್ಧ ಹರಿಹಾಯ್ದರು. 
ಈಗಾಗಲೇ ಅಡಿಗೆ 45 ರೂ ನಂತೆ ನಂತೆ 60/70 ವಿಸ್ತೀರ್ಣದ ಸ್ಥಳವನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ಪುರಸಭೆ ನೀಡಿದೆ. ನಮಗೂ ಕೆಂಪೇಗೌಡರ ಹೆಸರಿನಲ್ಲಿ 1 ಎಕರೆ ಜಮೀನು ಸರ್ಕಾರ ಮಂಜೂರು ಮಾಡಿಕೊಡಲಿ ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನು ಜಮಾ ಮಾಡುತ್ತೇನೆ. ಇಲ್ಲೊಂದು ಸುಂದರವಾದ ಪಾರ್ಕ್ ನಿರ್ಮಿಸಿ ಜನರ ಆರೋಗ್ಯಕ್ಕೆ ಮುಂದಾಗುವುದಾಗಿ ಮನವಿ ಮಾಡಿದ ಅವರು. ಈಗಿನ ಕೆಂಪೇಗೌಡರ ಪ್ರತಿಮೆಯ ಮೆಟ್ಟಿಲು ತೆರವುಗೊಳಿಸಿರುವುದರಿಂದ ಪ್ರತಿಮೆಗೆ ಹಾರ ಹಾಕಲಾಗದ ಪರಿಸ್ಥಿತಿ ತಂದೊಡ್ಡಿರುವ ಪುರಸಭೆ ಅಧಿಕಾರಿಗಳು ನಾಡಪ್ರಭು ಕೆಂಪೇಗೌಡ ಅವರಿಗೆ ಅಗೌರವ ತೋರಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು 
ನನ್ನ ಸ್ವಂತ ದುಡಿಮೆಯ ಹಣದಲ್ಲಿ ಸುಂದರವಾದ ಕಂಚಿನ ಕೆಂಪೇಗೌಡರ ಪ್ರತಿಮೆಯನ್ನು ಪುರಸಭಾ ಆವರಣದಲ್ಲಿ ಕಳೆದ 22 ವರ್ಷಗಳ ಹಿಂದೆ ಅನೇಕ ಮಠಮಾನ್ಯಗಳ ಶ್ರೀಗಳರು, ಸಚಿವರು, ಶಾಸಕರು, ಗಣ್ಯರು, ರೈತರು, ಅಭಿಮಾನಿಗಳ ನೇತೃತ್ವದಲ್ಲಿ ಪ್ರತಿಮೆಯನ್ನು ಪ್ರತಿμÁ್ಠಪಿಸಿ, ಆದ್ದೂರಿಯಾಗಿ ಕಾರ್ಯಕ್ರಮ ರೂಪಿಸುವ ಮೂಲಕ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಗಿತ್ತು. ಅನ್ನಸಂತರ್ಪಣೆ ಸಹ ಅವಿರತವಾಗಿ ನಡೆದಿತ್ತು. 
ಈ ಮೂಲಕ ಕೆಂಪೇಗೌಡರ ಇತಿಹಾಸವನ್ನು ಮರುಕಳಿಸುವಂತ ಕೆಲಸವನ್ನು ಮಾಡಿ ತೋರಿಸಿದ್ದೆ. ಹೀಗಾಗಿ ಆವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಆದರೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಸರ್ಕಾರ ಇದೆ ಎಂದು ದೆಹಲಿಯಿಂದ ಕಲ್ಕತ್ತಗೆ ಎಂಬಂತೆ ತೊಗಲಕ್ ದರ್ಬಾರ್ ನಡೆಸುತ್ತಿದ್ದಾರೆ. ಅವರ ತಾಳಕ್ಕೆ ಅಧಿಕಾರಿಗಳು ಕುಣಿಯುತ್ತಿದ್ದಾರೆ. ಹಿಂದೆ ಶಾಸಕರ ತಾಳಕ್ಕೆ ಕುಣಿದ ಕೆಲವು ಅಧಿಕಾರಿಗಳು ನೇಣಿನ ಕುಣಿಕೆಗೆ ತಲೆಯೊಡ್ಡಬೇಕಾಯಿತು. ಈಗ ಅವರ ಕುಟುಂಬಗಳು ಶೋಚನೀಯಸ್ಥಿತಿ ತಲುಪಿವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅವರ ನಡೆ ವಿರುದ್ಧ ಆಕ್ರೋಶ ಹೊರಹಾಕಿದರು. 
ಭಾರಿ ವಿವಾಧಕ್ಕೆ ಒಳಗಾದ ಧರ್ಮಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ; 2008 ರಲ್ಲಿ ಪುರಸಭೆ ಆಡಳಿತ ಮಂಡಲಿ ರೆಜ್ಯುಲೇಷನ್ ಮಾಡಿ ಪ್ರತಿಮೆ ಸ್ಥಾಪನೆಗೆ 50/50 ಸ್ಥಳ ಮಂಜೂರು ಮಾಡಿತ್ತು. ಈಗ ಕೆಂಪೇಗೌಡರ ಪ್ರತಿಮೆ ಸ್ಥಳವನ್ನು ಸೇರಿಸಿಕೊಂಡಂತೆ ಸುಮಾರು 2 ಎಕರೆ ಪ್ರದೇಶದಲ್ಲಿ100 ಬೆಡ್ಡಿನ ಹೈಟೆಕ್ ಆಸ್ಪತ್ರೆ ನಿರ್ಮಿಸಲು ಶಾಸಕರು ಮುಂದಾಗಿದ್ದಾರೆ. ಕೆಂಪೇಗೌಡರ ಪ್ರತಿಮೆಯನ್ನು ಉಳಿಸಿಕೊಂಡು ಆಸ್ಪತ್ರೆ ನಿರ್ಮಿಸಬಹುದಿತ್ತು. ಕೆಂಪೇಗೌಡರ ಕೋಟೆ ಕಂದಕ ಮುಚ್ಚದಂತೆ ನಾನು ಕೋರ್ಟ್ ಮೊರೆ ಹೋಗಿದ್ದರಿಂದ ನನ್ನ ವಿರುದ್ಧ ದ್ವೇಷದ ರಾಜಕೀಯ ಮಾಡುತ್ತಿರುವ ಶಾಸಕರು ಅಭಿವೃದ್ಧಿ ಹೆಸರಿನಲ್ಲಿ ಕ್ಷೇತ್ರದಲ್ಲಿ ಲೂಟಿಗೆ ಇಳಿದಿದ್ದಾರೆ. ಕೆಂಪೇಗೌಡರ ಪ್ರತಿಮೆ ಸ್ಥಳಾಂತರಕ್ಕೆ ಅಧಿಕಾರಿಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಎಚ್.ಎಂ.ಕೃಷ್ಣಮೂರ್ತಿ ಆರೋಪಿಸಿದರು.
ತಾಪಂ ಮಾಜಿ ಸದಸ್ಯ ಸಿ.ಜಯರಾಮ್ ಮಾತನಾಡಿ, ಧರ್ಮಪ್ರಭು ಕೆಂಪೆಗೌಡರು ಸರ್ವಧರ್ಮಪ್ರಿಯರು, ಎಲ್ಲ ವರ್ಗದ ಜನರಿಗೂ ಒಂದೊಂದು ಪೇಟೆಯನ್ನು ಕಟ್ಟಿಕೊಟ್ಟ ಮಹಾನೀಯರ ಪ್ರತಿಮೆಗೆ ದಕ್ಕೆಯಾಗುತ್ತಿದೆ. ಶಾಸಕರ ಸರ್ವಾಧಿಕಾರ ಇಲ್ಲಿ ನಡೆಯುತ್ತಿದೆ. ನಾವೂ ಅವರ ಪ್ರತಿಮೆಗೆ ಅವಮಾನಿಸಿದರೆ ಅವರ ಹೃದಯಕ್ಕೆ ಅವಮಾನಿಸಿದಂತೆ. ಮುಂದಿನ ದಿನಗಳಲ್ಲಿ ಅದರ ಪರಿಣಾಮವನ್ನು ಅವರೇ ಉಣ್ಣಬೇಕಿದೆ ಎಂದು ಕಿಡಿಕಾರಿದರು.
ನಿಸರ್ಗ ಪರಚರಣ ಟ್ರಸ್ಟ್ ಅಧ್ಯಕ್ಷ ಎಚ್.ಎನ್,ಶಿವಲಿಂಗಯ್ಯ ಮಾತನಾಡಿ, ಗೌರವಯುತವಾಗಿ ಕೆಂಪೇಗೌಡರ ಪ್ರತಿಮೆಯನ್ನು ಸ್ಥಳಾಂತರಿಸಲು ಕೋರ್ಟ್ ಆದೇಶ ನೀಡಿದೆ. ಇಲ್ಲಿರುವ ಮರಗಿಡಗಳನ್ನು ತೆರವುಗೊಳಿಸಬಾರದು. ತೆರವುಗೊಳಿಸಬೇಕಾದರೆ ಕಾನೂನಾತ್ಮಕವಾಗಿ ತೆರವುಗೊಳಿಸಬೇಕೆಂದು ತಾಕೀತು ಮಾಡಿದೆ. ಆದರೆ ಈಗಾಗಲೆ ಪುರಸಭೆ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳವನ್ನು ಆರೋಗ್ಯ ಇಲಾಖೆಗೆ ವರ್ಗಾಯಿಸಿದೆ. ಆರೋಗ್ಯ ಇಲಾಖೆಗೆ ವರ್ಗಾಯಿಸಿದ ಮೇಲೆ ಪ್ರತಿಮೆಯ ಮೆಟ್ಟಿಲು ಕಿತ್ತು ಹಾಕಲು ಇವರಿಗೇನು ಹಕ್ಕಿದೆ. ಇದೊಂದು ರಾಹಕೀಯ ಶಡ್ಯಂತರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಕ್ಸ್ ; ಸರ್ಕಾರದ ಮತ್ತು ಕೋರ್ಟ್ ಆದೇಶವನ್ನು ಪಾಲಿಸುವುದು ನಮ್ಮ ಕೆಲಸ. ನಾವು ಯಾರ ಒತ್ತಡಕ್ಕೂ ಮಣಿದಿಲ್ಲ, ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಗೆ ಜಮೀನು ವರ್ಗಾಯಿಸಲು ಅದೇಶ ನೀಡಿದ್ದರಿಂದ ವರ್ಗಾಯಿಸಿದ್ದೇವೆ. ಪ್ರತಿಮೆ ತೆರವುಗೊಳಿಸಲು ಕೋರ್ಟ್ ಆದೇಶವಿರುವುದರಿಂದ ಸಂಬಂಧಪಟ್ಟರು ಸ್ಥಳಾಂತರಿಸಲಿದ್ದಾರೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನೀವೇನಿದ್ದರೂ ಕೇಳುವುದಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದು. ನಮ್ಮದೇನು ಅಭ್ಯಂತರವಿಲ್ಲ. ನಾವು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೆವೆ. ಟಿ.ಎನ್.ಶ್ರೀನಿವಾಸ್ ಮುಖ್ಯಾಧಿಕಾರಿ ಪುರಸಭೆ ಮಾಗಡಿ.
ಜೆಡಿಎಸ್ ಮುಖಂಡ ತಮ್ಮಣ್ಣಗೌಡ, ಮಾಡಬಾಳ್ ಕೆಂಪೇಗೌಡ,  ಸಾಗರ್,  ಎನ್‍ಇಎಸ್ ಆನಂದ್, ದೊಡ್ಡಿ  ಗೋಪಿ, ನಾಗರಾಜು, ಶಿವಶಂಕರ್,  ಮೂರ್ತಿ, ಮೋಹನ್, ರಾಜೇಶ್, ಶಿವಣ್ಣ, ಕುಮಾರ್, ಆರ್‍ಐ ರವಿ, ಎಂಜಿನಿಯರ್ ಪ್ರಶಾಂತ್ ಶೆಟ್ಟಿ  ಇತರರು ಇದ್ದರು.
    user_Siddalinga siddalinga
    Siddalinga siddalinga
    ಮಾಗಡಿ, ರಾಮನಗರ, ಕರ್ನಾಟಕ•
    23 hrs ago
  • ಹುಬ್ಬಳ್ಳಿಯಲ್ಲಿ ಈ ಪ್ರಕರಣ ದೊಡ್ಡ ಚರ್ಚೆಗೆ ಕಾರಣ ಆಗಿದೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಯುವತಿಯೊಬ್ಬಳು ಗಂಭೀರ ದೂರು ದಾಖಲಿಸಿದ್ದಾಳೆ. ಕಾಲೇಜಿನಲ್ಲಿ ಸ್ನೇಹ ಬೆಳೆಸಿ, ಪ್ರೀತಿಯ ನಾಟಕವಾಡಿ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಮುಫೀಜ್ ಮಿಯಾನವರ ವಿರುದ್ಧ ಬ್ಲ್ಯಾಕ್‌ಮೇಲ್ ಹಾಗೂ ಅತ್ಯಾಚಾರದ ಆರೋಪ ಕೇಳಿಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
    1
    ಹುಬ್ಬಳ್ಳಿಯಲ್ಲಿ ಈ ಪ್ರಕರಣ ದೊಡ್ಡ ಚರ್ಚೆಗೆ ಕಾರಣ ಆಗಿದೆ.
ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಯುವತಿಯೊಬ್ಬಳು ಗಂಭೀರ ದೂರು ದಾಖಲಿಸಿದ್ದಾಳೆ.
ಕಾಲೇಜಿನಲ್ಲಿ ಸ್ನೇಹ ಬೆಳೆಸಿ, ಪ್ರೀತಿಯ ನಾಟಕವಾಡಿ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಮುಫೀಜ್ ಮಿಯಾನವರ ವಿರುದ್ಧ ಬ್ಲ್ಯಾಕ್‌ಮೇಲ್ ಹಾಗೂ ಅತ್ಯಾಚಾರದ ಆರೋಪ ಕೇಳಿಬಂದಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.