logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಳವಳ್ಳಿ ಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಂ. ಮಹೇಂದ್ರ ಅವರು, ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿನ ಅವ್ಯವಸ್ಥೆ ವಿರುದ್ಧ ಬಿಸಿ ಮುಟ್ಟಿಸುತ್ತಿರುವ ಭಾಗವಾಗಿ, ಮಳವಳ್ಳಿ ತಾಲ್ಲೂಕಿನ ಬಾಚನಹಳ್ಳಿ ಮೊರಾರ್ಜಿ ಶಾಲೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಶನಿವಾರ ಸಂಜೆ 7:30ರ ಸುಮಾರಿಗೆ ಶಾಲೆಗೆ ಆಗಮಿಸಿದ ನ್ಯಾಯಾಧೀಶರು, ವಾರ್ಡನ್, ಪ್ರಾಂಶುಪಾಲರು ಹಾಗೂ ಕೆಲವು ಶಿಕ್ಷಕರು ನಿಲಯದಲ್ಲಿ ವಾಸ್ತವ್ಯ ಹೂಡದೆ ತಮ್ಮ ಮನೆಗಳಿಗೆ ತೆರಳುತ್ತಿರುವುದನ್ನು ಗಮನಿಸಿದರು. ಇದಲ್ಲದೆ, ವಸತಿ ಶಾಲೆಯ ಊಟದ ವ್ಯವಸ್ಥೆಯು ದಿನಚರಿ ಪ್ರಕಾರ ನಡೆಯದೆ, ತಮ್ಮ ಇಷ್ಟ ಬಂದಂತೆ ಮಕ್ಕಳಿಗೆ ಊಟ ನೀಡುತ್ತಿರುವುದನ್ನು ಕಂಡು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಅವ್ಯವಸ್ಥೆಯಿಂದ ಕೆಂಡಮಂಡಲವಾದ ನ್ಯಾಯಾಧೀಶರು, ಶಾಲೆಯ ಹಿರಿಯ ಶಿಕ್ಷಕರನ್ನು ಹಾಗೂ ಅಡುಗೆ ತಯಾರಕರನ್ನು ತರಾಟೆಗೆ ತೆಗೆದುಕೊಂಡರು. ವಸತಿ ಶಾಲೆಗಳಲ್ಲಿ ದಿನಚರಿ ಪ್ರಕಾರ ಊಟ ಹಾಕುವುದು ಕೇವಲ ನಾಮಕಾವಸ್ಥೆಯಾಗಿದ್ದು, ಊಟದ ಚಾರ್ಟ್ ಕೇವಲ ಗೋಡೆಯ ಮೇಲಿದ್ದು ಅದು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಮಕ್ಕಳಿಗೆ ಸರಿಯಾದ ಪೋಷಕಾಂಶ ಮತ್ತು ಪ್ರಮಾಣದ ಆಹಾರ ನೀಡದಿರುವುದು ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಸರ್ಕಾರ ವೈಜ್ಞಾನಿಕವಾಗಿ ಆಹಾರದ ಚಾರ್ಟ್ ತಯಾರಿಸಿದ್ದು, ಮಕ್ಕಳಿಗೆ ಸರಿಯಾದ ಪೌಷ್ಟಿಕಾಂಶ ಆಹಾರ ದೊರೆಯಬೇಕು ಎಂದು ಒತ್ತಿ ಹೇಳಿದರು. ಇದೇ ರೀತಿ ಮುಂದುವರಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಅಲ್ಲದೆ, ವಸತಿ ಶಾಲೆಗಳಲ್ಲಿ ಕಡ್ಡಾಯವಾಗಿ ಎಲ್ಲಾ ಶಿಕ್ಷಕರು, ವಾರ್ಡನ್ ಹಾಗೂ ಪ್ರಾಂಶುಪಾಲರು ವಾಸ್ತವ್ಯ ಇರಲೇಬೇಕು ಎಂದು ಸೂಚಿಸಿದ ಅವರು, ಒಂದು ವೇಳೆ ವಾಸ್ತವ್ಯ ಇರದೆ ಮನೆಗಳಿಗೆ ತೆರಳಿದರೆ, ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿ, ಮಕ್ಕಳಿಗೆ ಉಂಟಾಗಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಅಲ್ಲಿನ ಶಿಕ್ಷಕರಿಗೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರ ಜೊತೆ ತಾಲ್ಲೂಕು ಕಾನೂನು ಸಮಿತಿಯ ಸದಸ್ಯರು, ವಕೀಲರ ಸಂಘದ ಉಪಾಧ್ಯಕ್ಷರಾದ ವಿ.ಎಂ. ಮಲ್ಲಪ್ಪ, ಕಾರ್ಯದರ್ಶಿ ಸಿ.ಎಂ. ನಟೇಶ್, ವಕೀಲ ರಾಜೇಂದ್ರ ಕುಮಾರ್ ಹಾಗೂ ಅಪರ ಸರ್ಕಾರಿ ವಕೀಲ ಶ್ರೀಕಂಠಸ್ವಾಮಿ ಉಪಸ್ಥಿತರಿದ್ದರು.

5 hrs ago
user_B mallikarjunaswamy
B mallikarjunaswamy
ಮಳವಳ್ಳಿ, ಮಂಡ್ಯ, ಕರ್ನಾಟಕ•
5 hrs ago

ಮಳವಳ್ಳಿ ಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಂ. ಮಹೇಂದ್ರ ಅವರು, ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿನ ಅವ್ಯವಸ್ಥೆ ವಿರುದ್ಧ ಬಿಸಿ ಮುಟ್ಟಿಸುತ್ತಿರುವ ಭಾಗವಾಗಿ, ಮಳವಳ್ಳಿ ತಾಲ್ಲೂಕಿನ ಬಾಚನಹಳ್ಳಿ ಮೊರಾರ್ಜಿ ಶಾಲೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಶನಿವಾರ ಸಂಜೆ 7:30ರ ಸುಮಾರಿಗೆ ಶಾಲೆಗೆ ಆಗಮಿಸಿದ ನ್ಯಾಯಾಧೀಶರು, ವಾರ್ಡನ್, ಪ್ರಾಂಶುಪಾಲರು ಹಾಗೂ ಕೆಲವು ಶಿಕ್ಷಕರು ನಿಲಯದಲ್ಲಿ ವಾಸ್ತವ್ಯ ಹೂಡದೆ ತಮ್ಮ ಮನೆಗಳಿಗೆ ತೆರಳುತ್ತಿರುವುದನ್ನು ಗಮನಿಸಿದರು. ಇದಲ್ಲದೆ, ವಸತಿ ಶಾಲೆಯ ಊಟದ ವ್ಯವಸ್ಥೆಯು ದಿನಚರಿ ಪ್ರಕಾರ ನಡೆಯದೆ, ತಮ್ಮ ಇಷ್ಟ ಬಂದಂತೆ ಮಕ್ಕಳಿಗೆ ಊಟ ನೀಡುತ್ತಿರುವುದನ್ನು ಕಂಡು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಅವ್ಯವಸ್ಥೆಯಿಂದ ಕೆಂಡಮಂಡಲವಾದ ನ್ಯಾಯಾಧೀಶರು, ಶಾಲೆಯ ಹಿರಿಯ ಶಿಕ್ಷಕರನ್ನು ಹಾಗೂ ಅಡುಗೆ ತಯಾರಕರನ್ನು ತರಾಟೆಗೆ ತೆಗೆದುಕೊಂಡರು. ವಸತಿ ಶಾಲೆಗಳಲ್ಲಿ ದಿನಚರಿ ಪ್ರಕಾರ ಊಟ ಹಾಕುವುದು ಕೇವಲ ನಾಮಕಾವಸ್ಥೆಯಾಗಿದ್ದು, ಊಟದ ಚಾರ್ಟ್ ಕೇವಲ ಗೋಡೆಯ ಮೇಲಿದ್ದು ಅದು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಮಕ್ಕಳಿಗೆ ಸರಿಯಾದ ಪೋಷಕಾಂಶ ಮತ್ತು ಪ್ರಮಾಣದ ಆಹಾರ ನೀಡದಿರುವುದು ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಸರ್ಕಾರ ವೈಜ್ಞಾನಿಕವಾಗಿ ಆಹಾರದ ಚಾರ್ಟ್ ತಯಾರಿಸಿದ್ದು, ಮಕ್ಕಳಿಗೆ ಸರಿಯಾದ ಪೌಷ್ಟಿಕಾಂಶ ಆಹಾರ ದೊರೆಯಬೇಕು ಎಂದು ಒತ್ತಿ ಹೇಳಿದರು. ಇದೇ ರೀತಿ ಮುಂದುವರಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಅಲ್ಲದೆ, ವಸತಿ ಶಾಲೆಗಳಲ್ಲಿ ಕಡ್ಡಾಯವಾಗಿ ಎಲ್ಲಾ ಶಿಕ್ಷಕರು, ವಾರ್ಡನ್ ಹಾಗೂ ಪ್ರಾಂಶುಪಾಲರು ವಾಸ್ತವ್ಯ ಇರಲೇಬೇಕು ಎಂದು ಸೂಚಿಸಿದ ಅವರು, ಒಂದು ವೇಳೆ ವಾಸ್ತವ್ಯ ಇರದೆ ಮನೆಗಳಿಗೆ ತೆರಳಿದರೆ, ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿ, ಮಕ್ಕಳಿಗೆ ಉಂಟಾಗಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಅಲ್ಲಿನ ಶಿಕ್ಷಕರಿಗೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರ ಜೊತೆ ತಾಲ್ಲೂಕು ಕಾನೂನು ಸಮಿತಿಯ ಸದಸ್ಯರು, ವಕೀಲರ ಸಂಘದ ಉಪಾಧ್ಯಕ್ಷರಾದ ವಿ.ಎಂ. ಮಲ್ಲಪ್ಪ, ಕಾರ್ಯದರ್ಶಿ ಸಿ.ಎಂ. ನಟೇಶ್, ವಕೀಲ ರಾಜೇಂದ್ರ ಕುಮಾರ್ ಹಾಗೂ ಅಪರ ಸರ್ಕಾರಿ ವಕೀಲ ಶ್ರೀಕಂಠಸ್ವಾಮಿ ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಮಳವಳ್ಳಿ ಪಟ್ಟಣದಲ್ಲಿ ಟೀಮ್ ಮಳವಳ್ಳಿ ವತಿಯಿಂದ ಆಯೋಜಿಸಲಾದ ಆಗಸ್ಟ್ 15ರ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದ ಟೀಸರ್ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸೋಮವಾರ ಬೆಳಿಗ್ಗೆ 11:30ಕ್ಕೆ ಇಲ್ಲಿನ ಫ್ರೆಂಡ್ಸ್ ಅಡ್ಡ ಸೆಂಟರ್‌ನಲ್ಲಿ ಟೀಮ್ ಮಳವಳ್ಳಿ ಮುಖಂಡರ ಸಮ್ಮುಖದಲ್ಲಿ ಈ ಟೀಸರ್ ಅನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಟೀಮ್ ಮಳವಳ್ಳಿ ಮುಖಂಡರಾದ ಟಿ. ನದಕುಮಾರ್ ಭರತ್ ರಾಜ್ ಮತ್ತು ನಿವೃತ್ತ ಸೈನಿಕರಾದ ಸುರೇಶ್ ಅವರು, ಮಳವಳ್ಳಿಯು ಈಗಾಗಲೇ ರಕ್ತದಾನ ಕ್ಷೇತ್ರದಲ್ಲಿ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದೆ ಎಂದು ಹೇಳಿದರು. 2018ರಲ್ಲಿ 1072 ಹಾಗೂ 2023ರಲ್ಲಿ 1080 ಮಂದಿ ರಕ್ತದಾನಿಗಳಿಂದ ರಕ್ತ ಸಂಗ್ರಹಿಸಿ, ಮಳವಳ್ಳಿಯು 'ರಕ್ತದಾನಿಗಳ ತವರು' ಎಂದು ಪ್ರಖ್ಯಾತಿ ಗಳಿಸಿದೆ. ಇದೀಗ ಬರುವ ಆಗಸ್ಟ್ 15ರಂದು ರೋಟರಿ ಶಾಲೆ ಆವರಣದಲ್ಲಿ 2026ನೇ ವರ್ಷದ ಅಂಗವಾಗಿ, 26 ಗಂಟೆಗಳ ಕಾಲ ಅಹೋರಾತ್ರಿ ರಕ್ತದಾನ ಶಿಬಿರವನ್ನು ಏರ್ಪಡಿಸಿ 2026 ಮಂದಿ ದಾನಿಗಳಿಂದ ರಕ್ತ ಸಂಗ್ರಹಿಸುವ ಮೂಲಕ ಮಳವಳ್ಳಿಯಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ ಎಂದು ಘೋಷಿಸಿದರು. ಸಾವಿರಾರು ಜನರ ಪ್ರಾಣ ಉಳಿಸುವ ಈ ಮಹತ್ಕಾರ್ಯದಲ್ಲಿ ಮಳವಳ್ಳಿಯ ಯುವಕ ಮಿತ್ರರು, ವಿದ್ಯಾರ್ಥಿಗಳು, ಸಂಘಸಂಸ್ಥೆಗಳವರು, ಮಹಿಳೆಯರು ಹಾಗೂ ಪುರುಷರು ರಕ್ತದಾನ ಮಾಡುವ ಮೂಲಕ ಭಾಗವಹಿಸಿ, ಮಳವಳ್ಳಿಯ ಕೀರ್ತಿಪತಾಕೆ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದೆಲ್ಲೆಡೆ ಹಾರುವಂತೆ ಮಾಡಲು ಕೈಜೋಡಿಸಬೇಕೆಂದು ಮನವಿ ಮಾಡಲಾಯಿತು. ಅಲ್ಲದೆ, ಅಕ್ಕಪಕ್ಕದ ಜಿಲ್ಲೆ ಹಾಗೂ ತಾಲ್ಲೂಕುಗಳ ರಕ್ತದಾನಿಗಳು ಸಹ ಈ ಮಹತ್ಕಾರ್ಯದಲ್ಲಿ ಪಾಲ್ಗೊಂಡು ರಕ್ತದಾನ ಮಾಡುವಂತೆ ಆಹ್ವಾನ ನೀಡಲಾಯಿತು. ಈ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಟೀಮ್ ಮಳವಳ್ಳಿಯ ಹಲವು ಮುಖಂಡರು ಹಾಜರಿದ್ದರು.
    1
    ಮಳವಳ್ಳಿ ಪಟ್ಟಣದಲ್ಲಿ ಟೀಮ್ ಮಳವಳ್ಳಿ ವತಿಯಿಂದ ಆಯೋಜಿಸಲಾದ ಆಗಸ್ಟ್ 15ರ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದ ಟೀಸರ್ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸೋಮವಾರ ಬೆಳಿಗ್ಗೆ 11:30ಕ್ಕೆ ಇಲ್ಲಿನ ಫ್ರೆಂಡ್ಸ್ ಅಡ್ಡ ಸೆಂಟರ್‌ನಲ್ಲಿ ಟೀಮ್ ಮಳವಳ್ಳಿ ಮುಖಂಡರ ಸಮ್ಮುಖದಲ್ಲಿ ಈ ಟೀಸರ್ ಅನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಟೀಮ್ ಮಳವಳ್ಳಿ ಮುಖಂಡರಾದ ಟಿ. ನದಕುಮಾರ್ ಭರತ್ ರಾಜ್ ಮತ್ತು ನಿವೃತ್ತ ಸೈನಿಕರಾದ ಸುರೇಶ್ ಅವರು, ಮಳವಳ್ಳಿಯು ಈಗಾಗಲೇ ರಕ್ತದಾನ ಕ್ಷೇತ್ರದಲ್ಲಿ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದೆ ಎಂದು ಹೇಳಿದರು. 2018ರಲ್ಲಿ 1072 ಹಾಗೂ 2023ರಲ್ಲಿ 1080 ಮಂದಿ ರಕ್ತದಾನಿಗಳಿಂದ ರಕ್ತ ಸಂಗ್ರಹಿಸಿ, ಮಳವಳ್ಳಿಯು 'ರಕ್ತದಾನಿಗಳ ತವರು' ಎಂದು ಪ್ರಖ್ಯಾತಿ ಗಳಿಸಿದೆ. ಇದೀಗ ಬರುವ ಆಗಸ್ಟ್ 15ರಂದು ರೋಟರಿ ಶಾಲೆ ಆವರಣದಲ್ಲಿ 2026ನೇ ವರ್ಷದ ಅಂಗವಾಗಿ, 26 ಗಂಟೆಗಳ ಕಾಲ ಅಹೋರಾತ್ರಿ ರಕ್ತದಾನ ಶಿಬಿರವನ್ನು ಏರ್ಪಡಿಸಿ 2026 ಮಂದಿ ದಾನಿಗಳಿಂದ ರಕ್ತ ಸಂಗ್ರಹಿಸುವ ಮೂಲಕ ಮಳವಳ್ಳಿಯಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ ಎಂದು ಘೋಷಿಸಿದರು.

ಸಾವಿರಾರು ಜನರ ಪ್ರಾಣ ಉಳಿಸುವ ಈ ಮಹತ್ಕಾರ್ಯದಲ್ಲಿ ಮಳವಳ್ಳಿಯ ಯುವಕ ಮಿತ್ರರು, ವಿದ್ಯಾರ್ಥಿಗಳು, ಸಂಘಸಂಸ್ಥೆಗಳವರು, ಮಹಿಳೆಯರು ಹಾಗೂ ಪುರುಷರು ರಕ್ತದಾನ ಮಾಡುವ ಮೂಲಕ ಭಾಗವಹಿಸಿ, ಮಳವಳ್ಳಿಯ ಕೀರ್ತಿಪತಾಕೆ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದೆಲ್ಲೆಡೆ ಹಾರುವಂತೆ ಮಾಡಲು ಕೈಜೋಡಿಸಬೇಕೆಂದು ಮನವಿ ಮಾಡಲಾಯಿತು. ಅಲ್ಲದೆ, ಅಕ್ಕಪಕ್ಕದ ಜಿಲ್ಲೆ ಹಾಗೂ ತಾಲ್ಲೂಕುಗಳ ರಕ್ತದಾನಿಗಳು ಸಹ ಈ ಮಹತ್ಕಾರ್ಯದಲ್ಲಿ ಪಾಲ್ಗೊಂಡು ರಕ್ತದಾನ ಮಾಡುವಂತೆ ಆಹ್ವಾನ ನೀಡಲಾಯಿತು.

ಈ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಟೀಮ್ ಮಳವಳ್ಳಿಯ ಹಲವು ಮುಖಂಡರು ಹಾಜರಿದ್ದರು.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    12 min ago
  • ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ೪.೯೫ ಕೋಟಿ ರೂಪಾಯಿ ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿ ಸೋಮವಾರದಿಂದ ಆರಂಭಗೊಂಡಿದೆ. ಇದರ ಭಾಗವಾಗಿ ರಸ್ತೆಯ ಬದಿಯಲ್ಲಿದ್ದ ಕಟ್ಟಡಗಳ ನೆಲಸಮ ಕಾರ್ಯಾಚರಣೆಯನ್ನು ಅಧಿಕಾರಿಗಳು ನಡೆಸಿದ್ದಾರೆ. ಈ ರಸ್ತೆ ಅಗಲೀಕರಣ ಕಾಮಗಾರಿಯು ಬಹಳ ಹಿಂದೆಯೇ ನಡೆಯಬೇಕಿತ್ತು, ಆದರೆ ರಸ್ತೆಯ ಬದಿಯ ಕೆಲವು ಕಟ್ಟಡಗಳ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದ ಕಾರಣ ವಿಳಂಬವಾಗಿತ್ತು. ಸದ್ಯ ಒಂದು ಭಾಗದಲ್ಲಿ ಯಾವುದೇ ಸಮಸ್ಯೆಗಳಿಲ್ಲದ ಕಾರಣ, ಅಧಿಕಾರಿಗಳು ಸೋಮವಾರ ಕಾರ್ಯಾಚರಣೆ ನಡೆಸಿ, ರಸ್ತೆ ಬದಿಯಲ್ಲಿದ್ದ ಕಟ್ಟಡಗಳನ್ನು ಕೆಡವಿ, ರಸ್ತೆ ಅಗಲೀಕರಣ ಕಾಮಗಾರಿಗೆ ಭರದಿಂದ ಸಿದ್ಧತೆಗಳನ್ನು ಮಾಡಿದ್ದಾರೆ. ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿಯವರು ತಾಲೂಕಿನ ಪ್ರತಿಯೊಂದು ರಸ್ತೆಯನ್ನು ಉನ್ನತೀಕರಿಸುವ ಮೂಲಕ ಉತ್ತಮ ಸಂಚಾರ ವ್ಯವಸ್ಥೆಗಾಗಿ ಯೋಜನಾ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರು ತಮ್ಮ ಸ್ವಗ್ರಾಮವಾದ ಪೂರಿಗಾಲಿಯ ರಸ್ತೆ ಅಗಲೀಕರಣಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪೂರಿಗಾಲಿ ಗ್ರಾಮದ ರಸ್ತೆ ಅಗಲೀಕರಣದಿಂದ ಹಳ್ಳಿಗಳು ಪ್ರಗತಿಯತ್ತ ಸಾಗುವ ದೂರದೃಷ್ಟಿಯ ಯೋಜನೆ ಇದಾಗಿದೆ ಎಂದು ವಿವರಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಲೋಕೋಪಯೋಗಿ ಇಂಜಿನಿಯರ್ ಸೋಮಶೇಖರ್ ನೇತೃತ್ವದ ಅಧಿಕಾರಿಗಳ ತಂಡ ಭಾಗವಹಿಸಿ ಕಟ್ಟಡಗಳ ನೆಲಸಮ ಕಾರ್ಯದಲ್ಲಿ ತೊಡಗಿತ್ತು.
    1
    ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ೪.೯೫ ಕೋಟಿ ರೂಪಾಯಿ ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿ ಸೋಮವಾರದಿಂದ ಆರಂಭಗೊಂಡಿದೆ. ಇದರ ಭಾಗವಾಗಿ ರಸ್ತೆಯ ಬದಿಯಲ್ಲಿದ್ದ ಕಟ್ಟಡಗಳ ನೆಲಸಮ ಕಾರ್ಯಾಚರಣೆಯನ್ನು ಅಧಿಕಾರಿಗಳು ನಡೆಸಿದ್ದಾರೆ.

ಈ ರಸ್ತೆ ಅಗಲೀಕರಣ ಕಾಮಗಾರಿಯು ಬಹಳ ಹಿಂದೆಯೇ ನಡೆಯಬೇಕಿತ್ತು, ಆದರೆ ರಸ್ತೆಯ ಬದಿಯ ಕೆಲವು ಕಟ್ಟಡಗಳ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದ ಕಾರಣ ವಿಳಂಬವಾಗಿತ್ತು. ಸದ್ಯ ಒಂದು ಭಾಗದಲ್ಲಿ ಯಾವುದೇ ಸಮಸ್ಯೆಗಳಿಲ್ಲದ ಕಾರಣ, ಅಧಿಕಾರಿಗಳು ಸೋಮವಾರ ಕಾರ್ಯಾಚರಣೆ ನಡೆಸಿ, ರಸ್ತೆ ಬದಿಯಲ್ಲಿದ್ದ ಕಟ್ಟಡಗಳನ್ನು ಕೆಡವಿ, ರಸ್ತೆ ಅಗಲೀಕರಣ ಕಾಮಗಾರಿಗೆ ಭರದಿಂದ ಸಿದ್ಧತೆಗಳನ್ನು ಮಾಡಿದ್ದಾರೆ.

ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿಯವರು ತಾಲೂಕಿನ ಪ್ರತಿಯೊಂದು ರಸ್ತೆಯನ್ನು ಉನ್ನತೀಕರಿಸುವ ಮೂಲಕ ಉತ್ತಮ ಸಂಚಾರ ವ್ಯವಸ್ಥೆಗಾಗಿ ಯೋಜನಾ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರು ತಮ್ಮ ಸ್ವಗ್ರಾಮವಾದ ಪೂರಿಗಾಲಿಯ ರಸ್ತೆ ಅಗಲೀಕರಣಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪೂರಿಗಾಲಿ ಗ್ರಾಮದ ರಸ್ತೆ ಅಗಲೀಕರಣದಿಂದ ಹಳ್ಳಿಗಳು ಪ್ರಗತಿಯತ್ತ ಸಾಗುವ ದೂರದೃಷ್ಟಿಯ ಯೋಜನೆ ಇದಾಗಿದೆ ಎಂದು ವಿವರಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಲೋಕೋಪಯೋಗಿ ಇಂಜಿನಿಯರ್ ಸೋಮಶೇಖರ್ ನೇತೃತ್ವದ ಅಧಿಕಾರಿಗಳ ತಂಡ ಭಾಗವಹಿಸಿ ಕಟ್ಟಡಗಳ ನೆಲಸಮ ಕಾರ್ಯದಲ್ಲಿ ತೊಡಗಿತ್ತು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    18 min ago
  • ಮಂಡ್ಯ ನಗರದಲ್ಲಿ ರಾಪಿಡೋ ಬೈಕ್‌ಗಳು ಮತ್ತು ಹಳ್ಳಿಗಳಿಂದ ಬರುವ ಅಪೆ ಆಟೋಗಳಲ್ಲಿ ಜನರು ಪ್ರಯಾಣಿಸುತ್ತಿರುವುದರಿಂದ ಆಟೋ ಚಾಲಕರಿಗೆ ಬಾಡಿಗೆ ಸಿಗದೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ, ಮಂಡ್ಯದಲ್ಲಿ ಆಟೋ ಚಾಲಕರು ಮತ್ತು ಮಾಲೀಕರು ಬೃಹತ್ ಪ್ರತಿಭಟನೆ ನಡೆಸಿದರು. ಈ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿ ಅವರು ಮಂಡ್ಯದ ಆರ್‌ಟಿಓ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕರುನಾಡ ಸೇವಕರು ಸಂಘಟನೆಯ ಮುಖಂಡ ನಾಗಣ್ಣ ಗೌಡ, ಸರ್ಕಾರವು ಆಟೋ ಚಾಲಕರ ಕಷ್ಟಗಳಿಗೆ ಸ್ಪಂದಿಸಬೇಕು ಮತ್ತು ಅವರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಒತ್ತಾಯಿಸಿದರು. ರಾಪಿಡೋ ಸೇವೆಯನ್ನು ಸಂಪೂರ್ಣವಾಗಿ ರದ್ದುಪಡಿಸಲು ಮತ್ತು ಅಪೆ ಆಟೋಗಳ ಅನಿಯಂತ್ರಿತ ಸಂಚಾರಕ್ಕೆ ಕಡಿವಾಣ ಹಾಕುವಂತೆ ಪ್ರತಿಭಟನಾಕಾರರು ಸರ್ಕಾರಕ್ಕೆ ಆಗ್ರಹಿಸಿದರು.
    1
    ಮಂಡ್ಯ ನಗರದಲ್ಲಿ ರಾಪಿಡೋ ಬೈಕ್‌ಗಳು ಮತ್ತು ಹಳ್ಳಿಗಳಿಂದ ಬರುವ ಅಪೆ ಆಟೋಗಳಲ್ಲಿ ಜನರು ಪ್ರಯಾಣಿಸುತ್ತಿರುವುದರಿಂದ ಆಟೋ ಚಾಲಕರಿಗೆ ಬಾಡಿಗೆ ಸಿಗದೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ, ಮಂಡ್ಯದಲ್ಲಿ ಆಟೋ ಚಾಲಕರು ಮತ್ತು ಮಾಲೀಕರು ಬೃಹತ್ ಪ್ರತಿಭಟನೆ ನಡೆಸಿದರು. ಈ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿ ಅವರು ಮಂಡ್ಯದ ಆರ್‌ಟಿಓ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕರುನಾಡ ಸೇವಕರು ಸಂಘಟನೆಯ ಮುಖಂಡ ನಾಗಣ್ಣ ಗೌಡ, ಸರ್ಕಾರವು ಆಟೋ ಚಾಲಕರ ಕಷ್ಟಗಳಿಗೆ ಸ್ಪಂದಿಸಬೇಕು ಮತ್ತು ಅವರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಒತ್ತಾಯಿಸಿದರು. ರಾಪಿಡೋ ಸೇವೆಯನ್ನು ಸಂಪೂರ್ಣವಾಗಿ ರದ್ದುಪಡಿಸಲು ಮತ್ತು ಅಪೆ ಆಟೋಗಳ ಅನಿಯಂತ್ರಿತ ಸಂಚಾರಕ್ಕೆ ಕಡಿವಾಣ ಹಾಕುವಂತೆ ಪ್ರತಿಭಟನಾಕಾರರು ಸರ್ಕಾರಕ್ಕೆ ಆಗ್ರಹಿಸಿದರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    46 min ago
  • ಕರ್ನಾಟಕದಲ್ಲಿ ವಿದ್ಯುತ್ ವಿತರಣಾ ನಿರ್ವಹಣೆಗೆ ಟಾಟಾ ಪವರ್ ಕಂಪನಿಯು ಕೆ.ಇ.ಆರ್.ಸಿ.ಗೆ ಸಲ್ಲಿಸಿರುವ ಪ್ರಸ್ತಾವವನ್ನು ವಿರೋಧಿಸಿ ಕೊಳ್ಳೇಗಾಲ ಉಪವಿಭಾಗದ ಅಧಿಕಾರಿಗಳು ಮತ್ತು ನೌಕರರು ಪ್ರತಿಭಟನೆ ನಡೆಸಿದರು. ಪಟ್ಟಣದ ಉಪವಿಭಾಗ ಸೆಸ್ಕ್ ಕಚೇರಿಯ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರವು ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ಮುಂದಾಗಬಾರದು ಎಂದು ಆಗ್ರಹಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಎ.ಇ.ಇ. ಸುರೇಶ್ ಕುಮಾರ್ ಮಾತನಾಡಿ, ಸಾರ್ವಜನಿಕ ವಲಯದ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಬಲಪಡಿಸುವ ಬದಲು ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವುದು ಸರಿಯಲ್ಲ ಎಂದು ಹೇಳಿದರು. ಈಗಾಗಲೇ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿರುವ ಸರ್ಕಾರಿ ಸಂಸ್ಥೆಗಳ ಅಸ್ತಿತ್ವಕ್ಕೆ ಇದು ಧಕ್ಕೆ ಉಂಟುಮಾಡಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ಉಪವಿಭಾಗ ಸೆಸ್ಕ್ ಕಾರ್ಯಪಾಲಕ ಅಭಿಯಂತರರು ತಬಸ್ಸುಮ್ ಅಪ್ಜಾ, ಯಳಂದೂರು ಎಇಇ ಲಿಂಗರಾಜು, ಹನೂರು ರಂಗಸ್ವಾಮಿ, ವಿಭಾಗೀಯ ಕಚೇರಿ ಎಇಇ ಶ್ರೀನಿಧಿ, ಕೇಂದ್ರ ಕಾರ್ಯಕಾರಿಣಿ ಸದಸ್ಯರು ಕೆ.ಮಹದೇವ, ಲೆಕ್ಕಾಧಿಕಾರಿ ಮತ್ತು ಕಂಪನಿ ಉಪಾಧ್ಯಕ್ಷರು ಎನ್.ಮಹೇಶ್ ಸೇರಿದಂತೆ ಎಲ್ಲಾ ನೌಕರರು ಉಪಸ್ಥಿತರಿದ್ದರು.
    1
    ಕರ್ನಾಟಕದಲ್ಲಿ ವಿದ್ಯುತ್ ವಿತರಣಾ ನಿರ್ವಹಣೆಗೆ ಟಾಟಾ ಪವರ್ ಕಂಪನಿಯು ಕೆ.ಇ.ಆರ್.ಸಿ.ಗೆ ಸಲ್ಲಿಸಿರುವ ಪ್ರಸ್ತಾವವನ್ನು ವಿರೋಧಿಸಿ ಕೊಳ್ಳೇಗಾಲ ಉಪವಿಭಾಗದ ಅಧಿಕಾರಿಗಳು ಮತ್ತು ನೌಕರರು ಪ್ರತಿಭಟನೆ ನಡೆಸಿದರು. ಪಟ್ಟಣದ ಉಪವಿಭಾಗ ಸೆಸ್ಕ್ ಕಚೇರಿಯ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರವು ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ಮುಂದಾಗಬಾರದು ಎಂದು ಆಗ್ರಹಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಎ.ಇ.ಇ. ಸುರೇಶ್ ಕುಮಾರ್ ಮಾತನಾಡಿ, ಸಾರ್ವಜನಿಕ ವಲಯದ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಬಲಪಡಿಸುವ ಬದಲು ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವುದು ಸರಿಯಲ್ಲ ಎಂದು ಹೇಳಿದರು. ಈಗಾಗಲೇ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿರುವ ಸರ್ಕಾರಿ ಸಂಸ್ಥೆಗಳ ಅಸ್ತಿತ್ವಕ್ಕೆ ಇದು ಧಕ್ಕೆ ಉಂಟುಮಾಡಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ಉಪವಿಭಾಗ ಸೆಸ್ಕ್ ಕಾರ್ಯಪಾಲಕ ಅಭಿಯಂತರರು ತಬಸ್ಸುಮ್ ಅಪ್ಜಾ, ಯಳಂದೂರು ಎಇಇ ಲಿಂಗರಾಜು, ಹನೂರು ರಂಗಸ್ವಾಮಿ, ವಿಭಾಗೀಯ ಕಚೇರಿ ಎಇಇ ಶ್ರೀನಿಧಿ, ಕೇಂದ್ರ ಕಾರ್ಯಕಾರಿಣಿ ಸದಸ್ಯರು ಕೆ.ಮಹದೇವ, ಲೆಕ್ಕಾಧಿಕಾರಿ ಮತ್ತು ಕಂಪನಿ ಉಪಾಧ್ಯಕ್ಷರು ಎನ್.ಮಹೇಶ್ ಸೇರಿದಂತೆ ಎಲ್ಲಾ ನೌಕರರು ಉಪಸ್ಥಿತರಿದ್ದರು.
    user_ಎನ್. ನಟರಾಜ್
    ಎನ್. ನಟರಾಜ್
    Kollegal, Chamarajanagara•
    2 hrs ago
  • ಯಳಂದೂರು ತಾಲೂಕಿನ ಇರಸವಾಡಿ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದ ಚರಂಡಿ ಕಾಮಗಾರಿಗಳು ಕಳಪೆಯಾಗಿವೆ ಎಂದು ಆರೋಪಿಸಿ ಗ್ರಾಮಸ್ಥರು ಗುತ್ತಿಗೆದಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ರೂಪಿಸಿರುವ ಯೋಜನೆಯಂತೆ ಕಾಮಗಾರಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಜಿ.ಎಲ್. ನಾಗರಾಜ ಅವರು ಈ ಕುರಿತು ಮಾತನಾಡಿ, ಚರಂಡಿಯು ಒಂದು ಮೀಟರ್ ಅಗಲವಿರಬೇಕಾಗಿದ್ದು, ಕೇವಲ 85 ಸೆಂಟಿಮೀಟರ್ ಮಾತ್ರ ನಿರ್ಮಿಸಲಾಗಿದೆ ಎಂದು ದೂರಿದ್ದಾರೆ. ಅಲ್ಲದೆ, ಚರಂಡಿಯ ಎರಡೂ ಗೋಡೆಗಳು ನಾಲ್ಕು ಇಂಚು ದಪ್ಪವಿರಬೇಕಿದ್ದರೂ, ಈಗಾಗಲೇ ಕಬ್ಬಿಣದ ಸಲಾಕೆಯನ್ನು ಅಳವಡಿಸಿ ಕಾಂಕ್ರೀಟ್ ಹಾಕಲು ಜಾಗವೇ ಇಲ್ಲದಂತಾಗಿದೆ. ಇದು ಕಾಮಗಾರಿಯು ಸ್ಪಷ್ಟವಾಗಿ ಕಳಪೆಯಾಗಿರುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಗ್ರಾಮಸ್ಥರು ತಕ್ಷಣವೇ ಚರಂಡಿ ಕಾಮಗಾರಿಯನ್ನು ನಿಲ್ಲಿಸಿ, ಈಗಾಗಲೇ ನಡೆದಿರುವ ಕಳಪೆ ಕಾಮಗಾರಿಯನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸಿ ಉತ್ತಮ ರೀತಿಯಲ್ಲಿ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಮಾದೇಶ್ ಸ್ವಾಮಿ, ಹರೀಶ್ ಪ್ರಸಾದ್, ಮಹೇಶ್, ಆನಂದ್, ರಂಜಿನಿ ಸೇರಿದಂತೆ ಸ್ಥಳೀಯ ಯುವಕರು ಒಂದಾಗಿ ಕಾಮಗಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.
    2
    ಯಳಂದೂರು ತಾಲೂಕಿನ ಇರಸವಾಡಿ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದ ಚರಂಡಿ ಕಾಮಗಾರಿಗಳು ಕಳಪೆಯಾಗಿವೆ ಎಂದು ಆರೋಪಿಸಿ ಗ್ರಾಮಸ್ಥರು ಗುತ್ತಿಗೆದಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ರೂಪಿಸಿರುವ ಯೋಜನೆಯಂತೆ ಕಾಮಗಾರಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಹಿರಿಯ ಮುಖಂಡ ಜಿ.ಎಲ್. ನಾಗರಾಜ ಅವರು ಈ ಕುರಿತು ಮಾತನಾಡಿ, ಚರಂಡಿಯು ಒಂದು ಮೀಟರ್ ಅಗಲವಿರಬೇಕಾಗಿದ್ದು, ಕೇವಲ 85 ಸೆಂಟಿಮೀಟರ್ ಮಾತ್ರ ನಿರ್ಮಿಸಲಾಗಿದೆ ಎಂದು ದೂರಿದ್ದಾರೆ. ಅಲ್ಲದೆ, ಚರಂಡಿಯ ಎರಡೂ ಗೋಡೆಗಳು ನಾಲ್ಕು ಇಂಚು ದಪ್ಪವಿರಬೇಕಿದ್ದರೂ, ಈಗಾಗಲೇ ಕಬ್ಬಿಣದ ಸಲಾಕೆಯನ್ನು ಅಳವಡಿಸಿ ಕಾಂಕ್ರೀಟ್ ಹಾಕಲು ಜಾಗವೇ ಇಲ್ಲದಂತಾಗಿದೆ. ಇದು ಕಾಮಗಾರಿಯು ಸ್ಪಷ್ಟವಾಗಿ ಕಳಪೆಯಾಗಿರುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಗ್ರಾಮಸ್ಥರು ತಕ್ಷಣವೇ ಚರಂಡಿ ಕಾಮಗಾರಿಯನ್ನು ನಿಲ್ಲಿಸಿ, ಈಗಾಗಲೇ ನಡೆದಿರುವ ಕಳಪೆ ಕಾಮಗಾರಿಯನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸಿ ಉತ್ತಮ ರೀತಿಯಲ್ಲಿ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಮಾದೇಶ್ ಸ್ವಾಮಿ, ಹರೀಶ್ ಪ್ರಸಾದ್, ಮಹೇಶ್, ಆನಂದ್, ರಂಜಿನಿ ಸೇರಿದಂತೆ ಸ್ಥಳೀಯ ಯುವಕರು ಒಂದಾಗಿ ಕಾಮಗಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.
    user_S.Puttaswamyhonnur
    S.Puttaswamyhonnur
    Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
    2 hrs ago
  • ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಬೆಂಗಳೂರಿನ ವಕ್ಫ್ ಸಮಿತಿಗಳಿಗೆ ಸಂಬಂಧಿಸಿದಂತೆ ಅಕ್ರಮಗಳು ನಡೆದಿರುವ ಬಗ್ಗೆ ವಿಷಯವು ಭಾರತದಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ವಿಚಾರವು ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
    1
    ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಬೆಂಗಳೂರಿನ ವಕ್ಫ್ ಸಮಿತಿಗಳಿಗೆ ಸಂಬಂಧಿಸಿದಂತೆ ಅಕ್ರಮಗಳು ನಡೆದಿರುವ ಬಗ್ಗೆ ವಿಷಯವು ಭಾರತದಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ವಿಚಾರವು ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    7 hrs ago
  • ಮೈಸೂರು ಜನರಿಗೆ ಉತ್ತಮ ನಿದ್ರೆಗಾಗಿ ಆರಾಮದಾಯಕ ಮ್ಯಾಟ್ರೆಸ್ ಹುಡುಕುತ್ತಿರುವವರಿಗೆ ಒಂದು ವಿಶೇಷ ಸಿಹಿಸುದ್ದಿ ಇಲ್ಲಿದೆ. ಮೈಸೂರಿನ 'AR ಡೈಮಂಡ್ ಮ್ಯಾಟ್ರೆಸ್' ಈಗ ಭರ್ಜರಿ ಆಫರ್‌ನೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇಲ್ಲಿ ಕಿಂಗ್ ಸೈಜ್ ಅಥವಾ ಕ್ವೀನ್ ಸೈಜ್ ಮ್ಯಾಟ್ರೆಸ್ ಖರೀದಿಸುವವರಿಗೆ ಎರಡು ಮೆಮೊರಿ ಫೋಮ್ ಪಿಲ್ಲೋಗಳು ಸಂಪೂರ್ಣ ಉಚಿತವಾಗಿ ಸಿಗಲಿವೆ. 'AR ಡೈಮಂಡ್ ಮ್ಯಾಟ್ರೆಸ್' 4 ಇಂಚಿನಿಂದ 10 ಇಂಚಿನವರೆಗಿನ ವಿವಿಧ ಗಾತ್ರ ಮತ್ತು ಎತ್ತರದ ಮ್ಯಾಟ್ರೆಸ್‌ಗಳನ್ನು ಹೊಂದಿದೆ. ಗ್ರಾಹಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ದಿವಾನ ಕಾಟ್ ಅಥವಾ ಸಾಮಾನ್ಯ ಮಂಚಕ್ಕೂ ಬೇಕಾದ ಹಾಸಿಗೆಗಳನ್ನು ಇಲ್ಲಿ ಆಯ್ಕೆ ಮಾಡಬಹುದು. ಹೆಚ್ಚಿನ ಮಾಹಿತಿ ಅಥವಾ ಅಂಗಡಿಯ ವಿಳಾಸಕ್ಕಾಗಿ 9886734233 ಸಂಖ್ಯೆಗೆ ವಾಟ್ಸಾಪ್ ಮಾಡುವ ಮೂಲಕ ಮನೆಯಲ್ಲಿ ನಿದ್ರೆಯ ಗುಣಮಟ್ಟವನ್ನು ಇಂದೇ ಹೆಚ್ಚಿಸಿಕೊಳ್ಳಬಹುದು.
    1
    ಮೈಸೂರು ಜನರಿಗೆ ಉತ್ತಮ ನಿದ್ರೆಗಾಗಿ ಆರಾಮದಾಯಕ ಮ್ಯಾಟ್ರೆಸ್ ಹುಡುಕುತ್ತಿರುವವರಿಗೆ ಒಂದು ವಿಶೇಷ ಸಿಹಿಸುದ್ದಿ ಇಲ್ಲಿದೆ. ಮೈಸೂರಿನ 'AR ಡೈಮಂಡ್ ಮ್ಯಾಟ್ರೆಸ್' ಈಗ ಭರ್ಜರಿ ಆಫರ್‌ನೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇಲ್ಲಿ ಕಿಂಗ್ ಸೈಜ್ ಅಥವಾ ಕ್ವೀನ್ ಸೈಜ್ ಮ್ಯಾಟ್ರೆಸ್ ಖರೀದಿಸುವವರಿಗೆ ಎರಡು ಮೆಮೊರಿ ಫೋಮ್ ಪಿಲ್ಲೋಗಳು ಸಂಪೂರ್ಣ ಉಚಿತವಾಗಿ ಸಿಗಲಿವೆ. 'AR ಡೈಮಂಡ್ ಮ್ಯಾಟ್ರೆಸ್' 4 ಇಂಚಿನಿಂದ 10 ಇಂಚಿನವರೆಗಿನ ವಿವಿಧ ಗಾತ್ರ ಮತ್ತು ಎತ್ತರದ ಮ್ಯಾಟ್ರೆಸ್‌ಗಳನ್ನು ಹೊಂದಿದೆ. ಗ್ರಾಹಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ದಿವಾನ ಕಾಟ್ ಅಥವಾ ಸಾಮಾನ್ಯ ಮಂಚಕ್ಕೂ ಬೇಕಾದ ಹಾಸಿಗೆಗಳನ್ನು ಇಲ್ಲಿ ಆಯ್ಕೆ ಮಾಡಬಹುದು. ಹೆಚ್ಚಿನ ಮಾಹಿತಿ ಅಥವಾ ಅಂಗಡಿಯ ವಿಳಾಸಕ್ಕಾಗಿ 9886734233 ಸಂಖ್ಯೆಗೆ ವಾಟ್ಸಾಪ್ ಮಾಡುವ ಮೂಲಕ ಮನೆಯಲ್ಲಿ ನಿದ್ರೆಯ ಗುಣಮಟ್ಟವನ್ನು ಇಂದೇ ಹೆಚ್ಚಿಸಿಕೊಳ್ಳಬಹುದು.
    user_ಸೈಯದ್ ಅತೀಕ್
    ಸೈಯದ್ ಅತೀಕ್
    Furniture Manufacturer ಮೈಸೂರು, ಮೈಸೂರು, ಕರ್ನಾಟಕ•
    22 hrs ago
  • ಮಳವಳ್ಳಿ ಪಟ್ಟಣದಲ್ಲಿರುವ ಮಾಮರ ಸೌಹಾರ್ದ ಸಹಕಾರ ಸಂಘದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಮುಂಗಾರು ಬೆಳೆ ವಿಮೆಗಾಗಿ ನೊಂದಣಿ ಪ್ರಕ್ರಿಯೆ ಆರಂಭವಾಗಿದೆ. ಮಳವಳ್ಳಿ ತಾಲೂಕಿನ ರೈತರು ತಮ್ಮ ಜಮೀನಿನ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಈ ಕೇಂದ್ರಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವ ಉದ್ದೇಶದಿಂದ ಈ ಬೆಳೆ ವಿಮೆ ನೊಂದಣಿಗೆ ರೈತರು ಮುಂದೆ ಬರಬೇಕು ಎಂದು ಕೋರಲಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಬೆಳೆ ವಿಮೆ ಮಾಡಿಸಲು, ಮಳವಳ್ಳಿ ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ಇರುವ ಮಾಮರ ಸೌಹಾರ್ದ ಸಹಕಾರ ಸಂಘದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
    1
    ಮಳವಳ್ಳಿ ಪಟ್ಟಣದಲ್ಲಿರುವ ಮಾಮರ ಸೌಹಾರ್ದ ಸಹಕಾರ ಸಂಘದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಮುಂಗಾರು ಬೆಳೆ ವಿಮೆಗಾಗಿ ನೊಂದಣಿ ಪ್ರಕ್ರಿಯೆ ಆರಂಭವಾಗಿದೆ. ಮಳವಳ್ಳಿ ತಾಲೂಕಿನ ರೈತರು ತಮ್ಮ ಜಮೀನಿನ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಈ ಕೇಂದ್ರಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.

ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವ ಉದ್ದೇಶದಿಂದ ಈ ಬೆಳೆ ವಿಮೆ ನೊಂದಣಿಗೆ ರೈತರು ಮುಂದೆ ಬರಬೇಕು ಎಂದು ಕೋರಲಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಬೆಳೆ ವಿಮೆ ಮಾಡಿಸಲು, ಮಳವಳ್ಳಿ ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ಇರುವ ಮಾಮರ ಸೌಹಾರ್ದ ಸಹಕಾರ ಸಂಘದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.