ಮುಖ್ಯಮಂತ್ರಿಗಳ ಆಶ್ವಾಸನೆಗೆ ಹೋರಾಟ ವಿರಾಮ: ಬಜೆಟ್ ಅಧಿವೇಶನ ನಿರ್ಣಾಯಕ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ನಡೆಸಲು ಉದ್ದೇಶಿಸಿದ್ದ ಮಹಾ ಪ್ರತಿಭಟನೆಯನ್ನು ಮಾಳಿ ಮತ್ತು ಮಾಲಗಾರ.ಸಮಾಜ ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಬಾವಿ ಮತಕ್ಷೇತ್ರದ ಶಾಸಕರು ಬಾಲಚಂದ್ರ ಜಾರಕಿಹೊಳಿ. ಮಹೇಂದ್ರ ತಮ್ಮನವರ. ಹಾಗೂ ರಾಜು ಕಾಗೆ ಹಲವಾರು ಶಾಸಕರು ನೀಡಿದ ಭರವಸೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಾಜದ ಮುಖಂಡರು ತಿಳಿಸಿದ್ದಾರೆ. ಹಿರಿಯ ಮುಖಂಡ ಡಾ. ಸಿ. ಬಿ. ಕುಲಿಗೋಡ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿಸೆಂಬರ್ 9 ರಂದು ನಡೆಯಬೇಕಿದ್ದ ಹೋರಾಟವನ್ನು ಮುಂದಿನ ಬಜೆಟ್ ಅಧಿವೇಶನದವರೆಗೆ ಮುಂದೂಡಲಾಗಿದೆ ಎಂದು ವಿವರಿಸಿದರು. ಮುಖ್ಯಮಂತ್ರಿಗಳು ಫೆಬ್ರವರಿ–ಮಾರ್ಚ್ ಬಜೆಟ್ ಅಧಿವೇಶನದಲ್ಲಿ ಮಾಳಿ ಮತ್ತು ಮಾಲಗಾರ.ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ಮಾತು ನೀಡಿರುವುದಾಗಿ ತಿಳಿಸಿದರು. ಸರ್ಕಾರದ ಈ ಸಕಾರಾತ್ಮಕ ಸ್ಪಂದನೆಯ ಹಿನ್ನೆಲೆಯಲ್ಲಿ, ಡಿಸೆಂಬರ್ 8 ರಿಂದ ಪ್ರಾರಂಭವಾಗಲಿದ್ದ ಸತ್ಯಾಗ್ರಹವನ್ನೂ ಸದ್ಯಕ್ಕೆ ಕೈಬಿಡಲಾಗಿದೆ. ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರೂ, ಮುಂದಿನ ಬಜೆಟ್ ಅಧಿವೇಶನದಲ್ಲಿನ ನಿರ್ಧಾರವೇ ಮುಂದಿನ ಹೋರಾಟದ ದಿಕ್ಕನ್ನು ನಿರ್ಧರಿಸುವುದಾಗಿ ಮುಖಂಡರು ಸ್ಪಷ್ಟಪಡಿಸಿದರು. ಯುವ ಘಟಕದ ಮುಖಂಡ ಮಹಾಂತೇಶ್ ಮಾಳಿ.ಮಾತನಾಡಿ, ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನಿಗಮವನ್ನು ಘೋಷಿಸಿದ್ದರೂ ಅದು ಕಾಗದದಲ್ಲೇ ಉಳಿದಿತ್ತು ಎಂದು ಹೇಳಿದರು. ಇದೇ ಪರಿಸ್ಥಿತಿ ಪುನರಾವರ್ತಿತವಾದರೆ, 11 ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ 30–35 ಲಕ್ಷ ಜನಸಂಖ್ಯೆಯ ಮಾಳಿ ಸಮಾಜ ಸರ್ಕಾರಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದರು. ನಿಗಮ ಸ್ಥಾಪನೆಯ ಜೊತೆಗೆ, ನಿಲ್ಲೂರ ನಿಂಬೆಕ್ಕ ದೇವಿ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ ರಚನೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯ ಬೇಡಿಕೆಯನ್ನೂ ಸಮಾಜ ಮುಂದಿರಿಸಿದೆ. ಡಾ. ಕುಲಿಗೋಡ್ ಅವರು ಮಾತನಾಡಿ, ಮಾಳಿ ಮತ್ತು ಮಾಲಗಾರ ಸಮಾಜವು ಸುಮಾರು 25 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಶಕ್ತಿ ಹೊಂದಿದೆ ಎಂದು ತಿಳಿಸಿದರು. “ಬಜೆಟ್‌ನಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ, ಹೋರಾಟದ ದಾರಿ ಬದಲಾಗುವುದು,” ಎಂದು ಅವರು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಹಲವು ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

- *ಭಾರತ ನಲ್ಲಿ ವೈರಲ್*1
- STOP CONSUMING DRUGS AND SAVE OUR YOUNG GENERATION ITS NECESSARY1
- ಹನೂರು ಶಾಸಕರಾದ ಎಂ ಎಂ. ಆರ್. ಮಂಜುನಾಥ್ ಅವರು ಜಿಲ್ಲಾಧಿಕಾರಿ ಶಿಲ್ಪನಾಗ್ ಜೊತೆಗೂಡಿ ಕೊಳ್ಳೇಗಾಲ ತಾಲೂಕಿನ ನರೀಪುರ -ಸತ್ತೇಗಾಲ ಗ್ರಾಮಗಳ ಮಾರ್ಗ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿ 948 ರ ರಸ್ತೆ ಕಾಮಗಾರಿ ಹಾಗೂ ಮದ್ಯರಂಗನಾಥ ದೇವಾಲಯ ಜೀರ್ಣೋದ್ದಾರ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು, ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಜರುಗುತ್ತಿದೆ, ರಸ್ತೆ ಕಾಮಗಾರಿ ವೈಜ್ಞಾನಿಕವಾಗಿ ನಡೆದಿಲ್ಲ ರಸ್ತೆ ಕಾಮಗಾರಿಯಲ್ಲಿ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಕಾಮಗಾರಿ ನಡೆಸಿಲ್ಲ ನಾಲ್ಕು ರಸ್ತೆ ಕೂಡುವ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಬೈಪಾಸ್ ರಸ್ತೆ ನರೀಪುರ ಮಹದೇಶ್ವರ ಬೆಟ್ಟ ಬೈಪಾಸ್ ಗಳಲ್ಲಿ ಸರ್ಕಲ್ ಹಾಗೂ ಸರ್ವಿಸ್ ರಸ್ತೆಗಳಿಗೆ ಅಂಡರ್ ಪಾಸ್ ಗಳನ್ನು ನಿರ್ಮಿಸಿದೆ ಕಾಮಗಾರಿಗಳನ್ನು ಮುಗಿಸಲಾಗಿದೆ ರಸ್ತೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ ಆದ್ದರಿಂದ ಟೆಂಡರ್ ಪಡೆದ ಕನ್ಸ್ಟ್ರಕ್ಷನ್ ನವರು ಇಂಜಿನಿಯರ್ ಗಳು ಜವಾಬ್ದಾರಿವಹಿಸಿ ಸುರಕ್ಷಿತ ಅಂಡರ್ ಪಾಸ್ ಗಳು ಹಾಗೂ ಸರ್ಕಲ್ ಗಳನ್ನು ನಿರ್ಮಿಸಬೇಕು ಮೂರು ರಸ್ತೆಗಳು ಕೂಡುವ ಕಡೆ ಸರ್ಕಲ್ ಗಳನ್ನು ನಿರ್ಮಿಸಿಲ್ಲ ಹೆದ್ದಾರಿ ಮತ್ತು ಸರ್ವಿಸ್ ರಸ್ತೆಗಳಲ್ಲಿ ಡಿವೈಡರ್ ಗಳನ್ನು ನಿರ್ಮಿಸದೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಸಲಾಗಿದೆ, ಆದ್ದರಿಂದ ಅಪಘಾತ ಸಂಭವಿಸುತ್ತಿವೆ ಆದ್ದರಿಂದ ಇದನ್ನು ತಡೆಗಟ್ಟಲು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಆರ್ ಮಂಜುನಾಥ್ ತಿಳಿಸಿದರು. ಇದೆ ವೇಳೆ ಸತ್ತೇಗಾಲ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ರೈತ ಮುಖಂಡರುಗಳ ಮನವಿಯಂತೆ ಹೆದ್ದಾರಿಗಳಲ್ಲಿ ವಿದ್ಯುತ್ ಲೈಟ್ ಗಳು, ಅಪಘಾತಗಳು ಜರುಗುವ ಸ್ಥಳಗಳಲ್ಲಿ ರೋಡ್ ಹಮ್ಸ್ ನಿರ್ಮಿಸಿ ಕೊಡಲಾಗುವುದು ಮತ್ತು ಈ ಮಾರ್ಗವಾಗಿ ಸ್ಥಳೀಯರ ರಸ್ತೆ ಸಂಚಾರಕ್ಕೆ ಅವಕಾಶವಾಗಲೆಂದು ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು ಹಾಗೂ ಸತ್ತೇಗಾಲ ಬೈಪಾಸ್ ಸೇತುವೆಯಿಂದ ಅಂಡರ್ ಪಾಸ್ ರಸ್ತೆ ನಿರ್ಮಿಸಿ ಉಗನಿಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಅಂಡರ್ ಪಾಸ್ ಸೇತುವೆ ನಿರ್ಮಾಣ ಮಾಡಲಾಗುವುದು. ಮತ್ತು ಹೆದ್ದಾರಿ ಉದ್ದಕ್ಕೂ, ವಿದ್ಯುತ್ ಬಲ್ಪ್ ಗಳನ್ನು ಅಳವಡಿಸಲು ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಎಂಆರ್ ಮಂಜುನಾಥ್ ಮತ್ತು ಜಿಲ್ಲಾಧಿಕಾರಿ ಶಿಲ್ಪಾನಾಥ್ ತಿಳಿಸಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ದಿಲೀಪ್ ಕುಮಾರ್ ಮೀನಾ, ತಹಶೀಲ್ದಾರ್ ಬಸವರಾಜು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಎನ್.ಹೆಚ್ ಚಾರುಲತಾ ಜೈನ್, ವಿಶ್ವ ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಸೆಸ್ಕ್ ಎಇಇ ರಾಜು, ಸತ್ತೇಗಾಲದ ಗ್ರಾಮಸ್ಥರು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.2
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1
- ಕೊಳ್ಳೇಗಾಲ ಸುದ್ದಿ ವಾಸವಿ ವಾರ್ಷಿಕೋತ್ಸವ ಕುರಿತು ಕುಮಾರ ಕೃಷ್ಣ ಪತ್ರಿಕಾಗೋಷ್ಠಿ ಕುಮಾರ ಕೃಷ್ಣ ನೇತೃತ್ವದಲ್ಲಿ ವಾಸವಿ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಕುಮಾರ ಕೃಷ್ಣ ಮಾತನಾಡಿ ಅಕಾಡೆಮಿಕ್ ಸಂಸ್ಕೃತಿ ಎಂಬ ಹೆಸರಿನಲ್ಲಿ ವಾರ್ಷಿಕೋತ್ಸವವನ್ನು ನಡೆಸಲಾಗುತ್ತಿದೆ ಕಾರಣ ವಿದ್ಯಾರ್ಥಿಗಳಿಗೆ ಮತ್ತು ಪೋಷಕರುಗಳುಗೆ ಶಿಕ್ಷಣ ಸಂಸ್ಕೃತಿ ಅಕಾಡೆಮಿಕ್ ಬಗ್ಗೆ ತಿಳಿಸಿ ಕೊಡಬೇಕು ಎಂಬ ಕಾರಣದಿನ ಸಂಸ್ಕೃತಿ ಎಂಬ ಹೆಸರಿನಲ್ಲಿ ಕಾಲೇಜು ವಾರ್ಷಿಕೋತ್ಸವವನ್ನು ನಡೆಸಲಾಗುವುದು ದಿನಾಂಕ, 6 ಮತ್ತು 7 ನೇ ತಾರೀಕು ಕಾಲೇಜು ವಾರ್ಷಿಕೋತ್ಸವವನ್ನು ನಡೆಸಲಾಗುವುದು ಮೊದಲ ದಿನದ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಎ. ಆರ್. ಕೃಷ್ಣಮೂರ್ತಿಯವರು ಆಗಮಿಸಲಿದ್ದಾರೆ, ಎರಡನೇ ದಿನ ಮೈಸೂರು ಶ್ರೀ ರಾಮಕೃಷ್ಣ ವಿದ್ಯಾಶಾಲಾ ನಿವೃತ್ತ ಪ್ರಾಂಶುಪಾಲರಾದ ಎಸ್. ಬಾಲಾಜಿಯವರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ಕಾರ್ಯಕ್ರಮದ ಮುಖಾಂತರ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಗೆ ತರುವ ಕೆಲಸವನ್ನು ಮಾಡಲಾಗುವುದು, ಎಂದರು ಇದೆ ವೇಳೆ ಕೊಳ್ಳೇಗಾಲ ತಾಲ್ಲೂಕು ನಾಲ್ವರು ಪತ್ರಕರ್ತ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಪಾಧ್ಯಕ್ಷರು ಮತ್ತು ನಿರ್ದೇಶಕರುಗಳಾಗಿ ಆಯ್ಕೆಯಾಗಿರುವುದು ನಮ್ಮ ತಾಲ್ಲೂಕಿಗೆ ಹೆಮ್ಮೆ ಜಿಲ್ಲಾ ಸಂಘಕ್ಕೆ ಆಯ್ಕೆಯಾಗಿರುವ ಪತ್ರಕರ್ತರನ್ನು ಸನ್ಮಾನಿಸಲಾಗುವುದು ಎಂದರು ಪತ್ರಿಕಾಗೋಷ್ಠಿಯಲ್ಲಿ ವಾಸವಿ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ವಾಸವಾಂಬ, ಶಾಲೆ ಮುಖ್ಯಶಿಕ್ಷಕರಾದ ಶ್ರೀಮತಿ ಗೀತಾ ದೈಹಿಕ ಶಿಕ್ಷಕರಾದ ನಾಗೇಂದ್ರ ಹಾಗೂ ಇತರರು ಇದ್ದರು1