ಎನ್.ಎಸ್.ಎಸ್ ನಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ವೃದ್ಧಿ: ಸದಪ್ಪ ಬಟಕುರ್ಕಿ ============================== ಎಂಡಿಎಲ್-19-4 ಎನ್.ಎಸ್.ಎಸ್ ನಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ವೃದ್ಧಿ: ಸದಪ್ಪ ಬಟಕುರ್ಕಿ ವಿಜಯವಾಣಿ ಸುದ್ದಿಜಾಲ ಮುಧೋಳ: ಉತ್ತಮ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ಎನ್.ಎಸ್.ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಾಮರಸ್ಯ, ಸ್ನೇಹ, ತಾಳ್ಮೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ ಎಂದು ಸೋಮೇಶ್ವರ ಪ್ರೌಢಶಾಲೆಯ ಅಧ್ಯಕ್ಷ ಸದಪ್ಪ ಬಟಕುರ್ಕಿ ಹೇಳಿದರು. ತಾಲೂಕಿನ ಗುಲಗಾಲ ಜಂಬಗಿ ಗ್ರಾಮದಲ್ಲಿ ಭಾನುವಾರ ನಡೆದ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯ ಸಂಯೋಜಿತ ಮುಧೋಳದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕ 1 ಮತ್ತು 2ರ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಶಕ್ತಿಯನ್ನು ಈ ಶಿಬಿರಗಳು ನೀಡುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಂ.ಎಂ. ಹಿರೇಮಠ ಮಾತನಾಡಿ ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಸೇವಾ ಮನೋಭಾವ, ಶಿಸ್ತು ಮತ್ತು ಸಂಯಮವನ್ನು ಶಿಬಿರ ಕಲಿಸಿಕೊಡುತ್ತದೆ. ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಶಿಬಿರಾಧಿಕಾರಿ ಡಾ. ಪಿ.ವಿ. ಮನಗೂಳಿ ಸ್ವಾಗತಿಸಿದರು. ಪ್ರೊ. ಎಸ್.ಕೆ. ಸಾರವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಜಿ.ಎ. ಮೇತ್ರಿ, ಪ್ರೊ. ಎಸ್.ಬಿ. ಕಬ್ಬಿಣದ, ಅಕ್ಷತಾ ಬಡಿಗೇರ . ಸೋಮಪ್ಪ ಮುಳ್ಳೂರ, ಸಂಗಪ್ಪ ಬಟಕುರ್ಕಿ, ಬಸಪ್ಪ ಮುಳ್ಳೂರ, ದುಂಡಪ್ಪ ಲಿಂಗರೆಡ್ಡಿ, ಜಗದೀಶ ಮುಳ್ಳೂರ, ಸಿದ್ಧಲಿಂಗಪ್ಪ ಅಕ್ಕಮರಡಿ ಇತರರಿದ್ದರು. ಚಿತ್ರಶಿರ್ಷಿಕೆ ಎಂಡಿಎಲ್-19-3 ಮುಧೋಳ ತಾಲೂಕಿನ ಗುಲಗಾಲ ಜಂಬಗಿ ಗ್ರಾಮದಲ್ಲಿ ಭಾನುವಾರ ನಡೆದ ನಗರದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕ 1 ಮತ್ತು 2ರ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿದ ಸದಪ್ಪ ಬಟಕುರ್ಕಿ ಡಾ.ಎಂ.ಎಂ.ಹಿರೇಮಠ ಇದ್ದರು.

- ಮುಧೋಳ: ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಮುಧೋಳ ನಗರ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಸಂಜೆ ಹಠಾತ್ ಗಾಳಿ ಸಮೇತ ಸುರಿದ ಆಲಿಕಲ್ಲು ಮಳೆ ಜನತೆಗೆ ತಂಪೆರೆಯುವ ಜೊತೆಗೆ ರೈತರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮಧ್ಯಾಹ್ನದವರೆಗೆ ಸುಡುವ ಬಿಸಿಲಿನಿಂದ ಕೂಡಿದ್ದ ವಾತಾವರಣವು ಸಂಜೆ ಹೊತ್ತಿಗೆ ಏಕಾಏಕಿ ಬದಲಾಗಿ, ಗುಡುಗು ಸಿಡಿಲಿನ ಆರ್ಭಟದೊಂದಿಗೆ ಭಾರಿ ಮಳೆ ಸುರಿಯಿತು. ಮಳೆಯ ಜೊತೆಗೆ ಗೋಲಿ ಗಾತ್ರದ ಆಲಿಕಲ್ಲುಗಳು ಬಿಳಿಯ ಹಾಸಿನಂತೆ ರಸ್ತೆ ಹಾಗೂ ತೋಟಗಳಲ್ಲಿ ಬಿದ್ದಿರುವುದು ಕಂಡುಬಂತು. ಆಲಿಕಲ್ಲು ಮಳೆಯ ಹೊಡೆತಕ್ಕೆ ಈ ಭಾಗದ ಪ್ರಮುಖ ಬೆಳೆಗಳಾದ ಕಬ್ಬು, ದ್ರಾಕ್ಷಿ ಮತ್ತು ಬಾಳೆ ತೋಟಗಳಿಗೆ ಹಾನಿಯಾದ ವರದಿಯಾಗಿದೆ. ವಿಶೇಷವಾಗಿ ಕಟಾವಿಗೆ ಬಂದಿರುವ ಬೆಳೆಗಳು ನೆಲಕಚ್ಚುವ ಭೀತಿ ಎದುರಾಗಿದ್ದು, ಅನ್ನದಾತರು ಆತಂಕಕ್ಕೀಡಾಗಿದ್ದಾರೆ. ನಗರದ ತಗ್ಗು ಪ್ರದೇಶಗಳ ರಸ್ತೆಗಳಲ್ಲಿ ನೀರು ನುಗ್ಗಿ1
- Post by @april14news1
- ಬೆವನೂರ ಗ್ರಾಮದಲ್ಲಿ ರವಿವಾರ ಗಾಳಿ ಮಳೆಗೆ ನೆಲಕ್ಕುರುಳಿದ 50 ಕ್ಕೂ ಅಧಿಕ ಲೈಟ್ ಕಂಬಗಳು . ಅಥಣಿ :ಬೆವನೂರ ಗ್ರಾಮದಲ್ಲಿ ರವಿವಾರ ಗಾಳಿ ಮಳೆಗೆ 50 ಕ್ಕೂ ಅಧಿಕ ಲೈಟ್ ಕಂಬಗಳು ನೆಲಕ್ಕುರುಳಿವೆ. ಅಕಸ್ಮಾತ್ ಅಷ್ಟೇ ಅಲ್ಲ ಸುದೈವ ವಶಾತ ಜೀವಹಾನಿ ಸಂಭವಿಸಿಲ್ಲ.1
- ಬಸವ ಜಯಂತಿ ನಿಮಿತ್ತ ಈ ದಿನ ವಿಜಯಪುರ ನಗರದಲ್ಲಿನ ಬಸವಣ್ಣನವರ ಪುತ್ಥಳಿಗೆ ವಿವಿಧ ಗಣ್ಯರು ಭಕ್ತಿಯಿಂದ ಮಾಲಾರ್ಪಣೆ ಮಾಡಿದರು. ಆ ಮೇರು ಪುರುಷನ ಆದರ್ಶಗಳು ಹಾಗೂ ವಚನ ಸಂದೇಶಗಳನ್ನು ಸ್ಮರಿಸುತ್ತಾ ನಮಸ್ಕರಿಸಿದರು. ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ ಸೇರಿದಂತೆ ಹಲವು ಗಣ್ಯರು ಗೌರವ ಸಲ್ಲಿಸಿದರು. ವಿಶ್ವಗುರು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ಬಸವ ಜ್ಯೋತಿಯನ್ನು ಹಿಡಿದು, ವಿಜಯಪುರ ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ಕೈಗೊಂಡಿದ್ದ ವಿಜಯಪುರ ಸೈಕ್ಲಿಂಗ್ ಗ್ರೂಪ್ ಸದಸ್ಯರನ್ನು, ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಹಾಗೂ ನೂರಾರು ಬಸವಭಕ್ತರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಉತ್ಸಾಹಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಗೌರವಿಸಿದರು. ಭಕ್ತಿಪೂರ್ವಕ ಪಾದಯಾತ್ರೆಯು ನಮ್ಮ ನಾಡಿನಲ್ಲಿ ಬಸವ ತತ್ವದ ಜಾಗೃತಿಯನ್ನು ಮತ್ತಷ್ಟು ಹೆಚ್ಚಿಸಲಿ ಎಂಬ ಆಶಯ ವ್ಯಕ್ತವಾಯಿತು.1
- ಚಿಕ್ಕೋಡಿ : ಬಿರುಗಾಳಿಯಿಂದ ರಸ್ತೆ ಮೇಲೆ ಬಿದ್ದ ಮರ ಮತ್ತು ಲೈಟ್ ಕಂಬ ಕುಸಿತ,ಚಿಕ್ಕೋಡಿ ಟು ಜೋಡಕುರಳಿ ರಸ್ತೆ ಬಂದ, ಸ್ಥಳಕೆ ಭೇಟೆ ನೀಡಿದ ಹೆಸ್ಕಾಂ ಸಿಬ್ಬಂದಿ2
- ಕರ್ನಾಟಕದಲ್ಲಿ ಎಷ್ಠೇ ಬಡತನವಿರಲ್ಲಿ ಹೆತ್ತ ಮಕ್ಕಳಿಗೆ ಏನು ಕಡೆಮೆ ಮಾಡಲ ಅನ್ನೋದಕ್ಕೆ ಇದೆ ಉದಾಹರಣಿ. ತಂದೆ ಹೇಳುತಾನೆ ನಮಗೆ ಕಷ್ಠ ಇದ್ದಾಂಗೆ ನಿಮಗೆ ಇಲ್ಲಾ ಕಷ್ ಪಟ್ಟು ಓದಿ ನಿಮ್ಮ ತಾಯಿ ತಂದೆ ಹೆಸರು ತಂದರೆ ಸಾಕು ಇದು ತಂದೆಯ ಮಾತ್ತು1
- ರೋಣ ಮತಕ್ಷೇತ್ರದ ವ್ಯಾಪ್ತಿಗೆ ಬರುವಂತ ಎಲ್ಲಾ ಗ್ರಾಮಗಳಿಗೂ ಮತ್ತು ಪಟ್ಟಣಗಳಿಗೂ ಬೇಸಿಗೆ ಯಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಅಭಾವ ಆಗದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಹಾಗೂ ಜಾನುವಾರು ಗಳಿಗೆ ಕುಡಿಯುವ ನೀರು ಮೇವುನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ರೋಣ ಮತಕ್ಷೇತ್ರದ ಶಾಸಕ ಜಿ ಎಸ್ ಪಾಟೀಲ್ ಹೇಳಿದರು, ಅವರು ರೋಣ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ರವಿವಾರ ರೋಣ ಮತಕ್ಷೇತ್ರಕ್ಕೆ ಒಳಪಡುವ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಬೇಸಿಗೆ ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ರೋಣ ಮತಕ್ಷೇತ್ರಕ್ಕೆ ಒಳಪಡುವ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದ್ದು ಅದರಲ್ಲೂ ಡಿಬಿ ಓಟಿ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ ತಹಸೀಲ್ದಾರರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಎಲ್ಲಾ ಇಲಾಖೆ ಅಧಿಕಾರಿಗಳು ಕೂಡಿಕೊಂಡು ಬೇಸಿಗೆ ಮುಗಿಯುವವರೆಗೆ ನೀರಿನ ಅಭಾವ ಆಗದಂತೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಎಚ್ಚರಿಕೆ ನೀಡಿದರು,ಬಾಸಲಾಪುರ, ಮುಗಳಿ, ಗುಳಗುಳಿ ಪಂಚಾಯತಿ ಅಮರಗಟ್ಟಿ,ರುದ್ರಾಪುರ,ರಾಂಪುರ, ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದರು,ಬಾಸಲಾಪುರಲ್ಲಿ ಡಿಬಿಒಟಿ ನೀರು ಪೂರೈಕೆ ಸರಿಯಿಲ್ಲ ಎಂದು ಪಿಡಿಒ ಸಭೆಗೆ ತಿಳಿಸಿದರು, ಚಿಕ್ಕಮನ್ನೂರು ವ್ಯಾಪ್ತಿಯ ಗ್ರಾಮಗಳಲ್ಲಿ ಡಿಬಿಒಟಿ ನೀರು ಪೂರೈಕೆ ಸರಿ ಇಲ್ಲ ಎಂದು ಪಿಡಿಒ ಕಲ್ಪನಾ ಕಡಗದ ತಿಳಿಸಿದರು,ಅಧಿಕಾರಿಗಳು ಎಲ್ಲರೂ ಕೂಡಿಕೊಂಡು ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿ ಸರಿಪಡಿಸಿ ಎಂದು ಶಾಸಕರು ತಿಳಿಸಿದರು ,ವಿದ್ಯುತ್ ವ್ಯತ್ಯಯಗಳಿಂದ ಸಹ ನೀರಿನ ಸರಬರಾಜು ಮಾಡಲು ಸಮಸ್ಯೆ ಉಂಟಾಗುತ್ತದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ರಶ್ಮಿ ನಡುವಿನಮನಿ ಹೇಳಿದರು,ಸವಡಿ ಪಂಚಾಯತಿ ವ್ಯಾಪ್ತಿಯಲ್ಲಿ ಆರು ದಿನಕ್ಕೊಂದು ಸರಿ ನೀರನ್ನು ಬಿಡಲಾಗುತ್ತದೆ, ಐದು ಲಕ್ಷ ಲೀಟರ ಬದಲು ಕೇವಲ ಎರಡು ಲಕ್ಷ ಲೀಟರ್ ನೀರು ಬರುತ್ತಿದೆ ಎಂದು ಪಿಡಿಒ ಮೆಣಸಗಿ ತಿಳಿಸಿದರು,ಹಿರೇಹಾಳ ಪಂಚಾಯತಿ ವ್ಯಾಪ್ತಿಯ ಯರೇಕುರುಬಾನಾಳ ನೀರಿನ ಸಮಸ್ಯೆ ಇದೆ,ನೈನಾಪುರ ,ಬಸರಕೋಡ ನವಗ್ರಾಮ,ಚಿಕ್ಕಳಗುಂಡಿ ಹಿರೇಅಳಗುಂಡಿ,ಹಾಲಕೆರೆ,ಮಾಟರಂಗಿ, ಗೊಗೇರಿ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದರು, ಯಾವ ಯಾವ ಗ್ರಾಮಗಳಲ್ಲಿ ನೀರಿನ ಕೊರತೆ ಇದೆ ಅಧಿಕಾರಿಗಳು ಕೂಡಲೇ ಗ್ರಾಮಗಳಿಗೆ ತೆರಳಿ ಪರಿಶೀಲಿಸಿ ನೀರಿನ ಅಭಾವ ಉಂಟಾಗದಂತೆ ಕ್ರಮ ವಹಿಸಬೇಕು, ನೀರನ್ನು ಪರೀಕ್ಷೆ ಮಾಡದೇ ಸರಬರಾಜು ಮಾಡಬಾರದು ಶುದ್ಧ ನೀರನ್ನು ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಪಂಚಾಯತಿ ಆಡಳಿತ ಅಧಿಕಾರಿಗಳು ಸಹ ಹೆಚ್ಚಿನ ಜವಾಬ್ದಾರರಾಗಿದ್ದಿರಿ ನೀರಿನ ಸಮಸ್ಯೆ ಬಾರದ ಹಾಗೆ ನೀವು ಜಾಗೃತ ವಹಿಸಬೇಕು,ಜಾನುವಾರುಗಳಿಗೆ ಮೇವು ನೀರು ಕೊರತೆಯಾಗದಂತೆ ನೋಡಿಕೊಳ್ಳಿ ಎಂದರು, ಸಭೆಯಲ್ಲಿ ರೋಣ ತಾಲೂಕು ಗಜೇಂದ್ರಗಡ ತಾಲೂಕು ಮುಂಡರಗಿ ತಾಲೂಕು ತಹಸೀಲ್ದಾರರು ತಾಲೂಕು ಪಂಚಾಯಿತಿ ಕಾರ್ಯನಿರ್ವಣ ಅಧಿಕಾರಿಗಳು ಪುರಸಭೆ ಮುಖ್ಯ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು1
- 'ಶ್ರಮಿಕ ವಸತಿ ಶಾಲೆ'ಯ ನಿರ್ಮಾಣಕ್ಕೆ ಅಥಣಿ ಶಾಸಕ ಲಕ್ಷ್ಮಣ ಸವದಿ ಭೂಮಿಪೂಜೆ. ಅಥಣಿ : ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ವತಿಯಿಂದ ಅಥಣಿ ತಾಲ್ಲೂಕಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ 'ಶ್ರಮಿಕ ವಸತಿ ಶಾಲೆ'ಯ ನಿರ್ಮಾಣಕ್ಕೆ ಮಾಜಿ ಉಪಮುಖ್ಯ ಮಂತ್ರಿಗಳು ಹಾಗೂ ಅಥಣಿ ಶಾಸಕರಾದ ಲಕ್ಷ್ಮಣ ಸಂಗಪ್ಪ ಸವದಿ ಅವರು ಭೂಮಿ ಪೂಜೆ ನೆರವೇರಿಸಿದರು. ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ವತಿಯಿಂದ ಅಥಣಿಯ ಚಿಕ್ಕಟ್ಟಿ ಗ್ರಾಮದ ಸತ್ತಿ ರಸ್ತೆ ಬಳಿ ನಿರ್ಮಿಸಲಾಗುತ್ತಿರುವ 'ಶ್ರಮಿಕ ವಸತಿ ಶಾಲೆ'ಗೆ ಭೂಮಿಪೂಜೆ ನೆರವೇರಿಸಿದರು. ನಮ್ಮ ತಾಲೂಕಿನಲ್ಲಿ ಇರುವ ಏಳು ಸಾವಿರ ಕಾರ್ಮಿಕರ ಕಾರ್ಮಿಕ ವರ್ಗದ ಮಕ್ಕಳು ಆರ್ಥಿಕ ಸಂಕಷ್ಟದಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶ್ರಮಿಕ ವಸತಿ ಶಾಲೆಯನ್ನು ಅಥಣಿಯಲ್ಲಿ ಸ್ಥಾಪಿಸಲಾಗುತ್ತಿದೆ. ಅಥಣಿ ತಾಲ್ಲೂಕಿನಲ್ಲಿ 36.25 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಶಾಲೆ 6ರಿಂದ 12 ನೇ ತರಗತಿ ಓದುವ ಈ ಭಾಗದ ನೂರಾರು ಕಾರ್ಮಿಕ ಕುಟುಂಬಗಳ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ಹಾಗೂ ವಸತಿ ಸೌಲಭ್ಯವನ್ನು ಒದಗಿಸಲಿದೆ.ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳು ಈ ಶಾಲೆಯ ಫಲಾನುಭವಿಗಳಾಗಿದ್ದು ಬಡ ದುರ್ಬಲ ವರ್ಗದ ಮಕ್ಕಳ ಪಾಲಿಗೆ ಶೈಕ್ಷಣಿಕವಾಗಿ ಕಾರ್ಮಿಕರು ಇದರ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಸವದಿ ಹೇಳಿದರು. ಈ ಸಂದರ್ಭದಲ್ಲಿ ಶೆಟ್ಟರ್ ಮಠದ ಪರಮಪೂಜ್ಯ ಮರುಳಸಿದ್ದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು ,ಪುರಸಭೆ ಉಪಾಧ್ಯಕ್ಷರಾದ ಭುವನೇಶ್ವರಿ ಯಕ್ಕಂಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಡಿ ಜಿ ನಾಗೇಶ ಉಪನಿರ್ದೇಶಕರು,ಜಿಲ್ಲಾ ಅಧಿಕಾರಿ ಮಲ್ಲಿಕಾರ್ಜುನ ಜೋಗುರ , ಅಥಣಿ ತಾಲೂಕು ಕಾರ್ಮಿಕ ಇಲಾಖೆಯ ಅಧಿಕಾರಿ ಭುವನೇಶ್ವರಿ ಢಾಲೇ,ಪ್ರಕಾಶ ಮಹಾಜನ, ಪುರಸಭೆ ಚುನಾಯಿತ ಹಾಗೂ ನಾಮನಿರ್ದೆಶೀತ ಸದಸ್ಯರು ,ಮುಖಂಡರು ಉಪಸ್ಥಿತರಿದ್ದರು.3