Shuru
Apke Nagar Ki App…
ಖಚಿತ ಮಾಹಿತಿ ಮೇರೆಗೆ ಪೊಲೀಸ್ ದಾಳಿ; ಅಕ್ರಮ ಜಾನುವಾರು ಸಾಗಾಟ ಪತ್ತೆ ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆ ಹಚ್ಚಿರುವ ಕಡಬ ಠಾಣಾ ಪೊಲೀಸರು, ಓರ್ವನನ್ನು ಬಂಧಿಸಿ, 18 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಹೊಸೂರು ಮೂಲದ ಅಕ್ರಮ್ ಪಾಷಾ ಎಂದು ಗುರುತಿಸಲಾಗಿದೆ. ಹಾಸನದಿಂದ ಕೇರಳ ಕಡೆಗೆ ಕಂಟೇನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯನ್ವಯ ಕಡಬ ಠಾಣಾ ಪೊಲೀಸರು ಶುಕ್ರವಾರ ಬೆಳಗಿನ ಜಾವ ಕಡಬದ ಕನ್ವರೆ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದಾರೆ. ಈ ವೇಳೆ ಕಂಟೇನರ್ ನಲ್ಲಿ ಸುಮಾರು 18 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ.
Shamsheer Budoli
ಖಚಿತ ಮಾಹಿತಿ ಮೇರೆಗೆ ಪೊಲೀಸ್ ದಾಳಿ; ಅಕ್ರಮ ಜಾನುವಾರು ಸಾಗಾಟ ಪತ್ತೆ ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆ ಹಚ್ಚಿರುವ ಕಡಬ ಠಾಣಾ ಪೊಲೀಸರು, ಓರ್ವನನ್ನು ಬಂಧಿಸಿ, 18 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಹೊಸೂರು ಮೂಲದ ಅಕ್ರಮ್ ಪಾಷಾ ಎಂದು ಗುರುತಿಸಲಾಗಿದೆ. ಹಾಸನದಿಂದ ಕೇರಳ ಕಡೆಗೆ ಕಂಟೇನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯನ್ವಯ ಕಡಬ ಠಾಣಾ ಪೊಲೀಸರು ಶುಕ್ರವಾರ ಬೆಳಗಿನ ಜಾವ ಕಡಬದ ಕನ್ವರೆ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದಾರೆ. ಈ ವೇಳೆ ಕಂಟೇನರ್ ನಲ್ಲಿ ಸುಮಾರು 18 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ.
More news from ಕರ್ನಾಟಕ and nearby areas
- *ಭಾರತ ನಲ್ಲಿ ವೈರಲ್*1
- Post by Suresh Belagere1
- ಹೊಸದುರ್ಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಬಂಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಹೊಸದುರ್ಗ ಪೊಲೀಸ್ ಠಾಣೆ ಸರಹದ್ದಿನಲ್ಲಿ ದಿನಾಂಕ 23.08.2025 ರಂದು ಹೊಸದುರ್ಗದ ಮಾರುತಿ ನಗರದ ವೀಣಾ ರವರ ಮನೆಗೆ ಬಂದ ಇಬ್ಬರು ಮನೆಯ ಬಾಗಿಲನ್ನು ಬಡಿದು ಮನೆಯಲ್ಲಿ ಗಂಡುಮಕ್ಕಳು ಇದ್ದಾರ ಅಂತ ಕೇಳಿ ನಂತರ ನಾವು ಜಲಜೀವನ್ ಬೀದಿ ಪೈಪ್ ನಿಂದ ನಿಮ್ಮ ಮನೆಯ ತೊಟ್ಟಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಬಂದಿದ್ದು ಅಂತ ತಿಳಿಸಿ ಮನೆಯ ಮೇಲಿನ ಟೆರೆಸ್ ಗೆ ಕರೆದುಕೊಂಡು ಹೋಗಿ ಅಲ್ಲಿ ಅಳತೆ ತೆಗೆದುಕೊಳ್ಳುವ ನೆಪ ಮಾಡಿದ್ದು ಅದೇ ಸಮಯದಲ್ಲಿ ಇನ್ನಿಬ್ಬರು ಮನೆಯ ಒಳಗೆ ಹೋಗಿ ಗಾಡೇಜ್ ಬೀರುವಿನಲ್ಲಿದ್ದ 1.45,000/- ರೂ ಬೆಲೆಯ 40 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.1
- ಶಿಗ್ಗಾವಿ ಸವಣೂರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ, ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿ ದಾವಣಗೆರೆ ಉಪ ಚನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಗೆಲುವು ನಿಶ್ಚಿತ ಎಂದು ಹೇಳಿದರು,1
- ಮಳವಳ್ಳಿ: ಡಿ.ಹಲಸಹಳ್ಳಿ ಗವಿ ಬಸವೇಶ್ವರ ಮಠದ ರಾಜಗೋಪುರ ಉದ್ಘಾಟನೆಗೆ ಸಕಲ ಸಿದ್ಧತೆ-ಗವಿಮಠದ ಶ್ರೀ ಷಡಕ್ಷರಿಸ್ವಾಮಿಗಳ ಹೇಳಿಕೆ ಮಳವಳ್ಳಿ:ತಾಲೂಕಿನ ಡಿ. ಹಲಸಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಇತಿಹಾಸ ಪ್ರಸಿದ್ದ ಗವಿಬಸವೇಶ್ವರ ಮಠ (ಗವಿಮಠ)ದ ಮುಂಭಾಗ ನೂತನವಾಗಿ ನಿರ್ಮಿಸಿರುವ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಭರದ ಸಿದ್ದತೆಗಳನ್ನು ನಡೆಸಲಾಗಿದೆ ಎಂದು ಗವಿಮಠದ ಶ್ರೀ ಷಡಕ್ಷರಸ್ವಾಮಿಗಳು ಹೇಳಿದರು. ಈ ಸಂಭ0ದ ಹಲಗೂರಿನಲ್ಲಿ ಗವಿಮಠದಲ್ಲಿ ನಡೆಯುವ ಏಪ್ರಿಲ್ 28ರಿಂದ ಮೇ 1 ರವರೆಗೆ ನಡೆಯಲಿರುವ ನಾಲ್ಕು ದಿನದ ಕಾರ್ಯಕ್ರಮಕ್ಕೆ ಹಲಗೂರಿನಲ್ಲಿ ಭಕ್ತರು ದಾಸೋಹಕ್ಕೆ ನೀಡುವ ಅಕ್ಕಿ, ದವಸ ಧಾನ್ಯಗಳನ್ನು ಸಂಗ್ರಹಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರಮ ಪೂಜ್ಯ ಸುತ್ತೂರಿನ ಜಗದ್ಗುರುಗಳು,ಸಿದ್ಧಗಂಗಾ, ಆದಿಚುಂಚನಗಿರಿ, ಕೊಪ್ಪಳದ ಗವಿಸಿದ್ದೇಶ್ವರ, ಕನಕಪುರ ಶ್ರೀಗಳು ಸೇರಿದಂತೆ ಇನ್ನೂ ಇತರ ಹರ ಚರ ಮೂರ್ತಿಗಳ ದಿವ್ಯಸಾನಿಧ್ಯದಲ್ಲಿ ರಾಜಗೋಪುರ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿದೆ ಎಂದರು. ಕಾರ್ಯಕ್ರಮದ ವಿವರ: ಏ.28 ರಿಂದ ಅರಂಭವಾಗಲಿರುವ ಕಾರ್ಯಕ್ರಮವು 29,30 ಮತ್ತು ಮೇ 1 ರವರೆಗೆ ನಡೆಯಲಿದ್ದು, ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಶ್ರೀ ಷಡಕ್ಷರ ಗವಿಮಠ, ಶ್ರೀ ಗವಿ ಬಸವೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ದಾಸೋಹ ಮಠ ಮತ್ತು ಮಹಾ ಕವಿ ಶ್ರೀ ಷಡಕ್ಷರ ದೇವರ ಮಂಗಳಮAಟಪದ ನೂತನ ಕಟ್ಟಡ ಉದ್ಘಾಟನೆ ಮತ್ತು ರಾಜಗೋಪುರ ಹಾಗೂ ಬಸವ ಮಹಾದ್ವಾರದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದರು. ಗವಿಮಠದಲ್ಲಿ ನಾಲ್ಕು ದಿನಗಳ ಕಾಲಪ್ರತಿ ದಿನ ದಾಸೋಹ ಸೇವೆ ಮಾಡಲಾಗಿದ್ದು,ಇದರ ಅಂಗವಾಗಿ ಹಲಗೂರಿನಲ್ಲಿ ಭಕ್ತಾದಿಗಳು ದಾಸೋಹಕ್ಕೆ ಸಹಕಾರ ನೀಡಿದ್ದಾರೆ.ಇದಲ್ಲದೆ ತಾಲೂಕಿನ ಸುತ್ತಮುತ್ತಲ ಗ್ರಾಮದ ಜನರು ಸಹ ಹೆಚ್ಚಿನ ಸಹಕಾರ ಕೋರಲಾಗಿದೆ ಎಂದ ಅವರು ದಾಸೋಹಕ್ಕೆ ಸಹಾಯ ಮಾಡುವುದರೊಂದಿಗೆ ನಾಲ್ಕು ದಿನಗಳ ಕಾಲ ಭಕ್ತಾದಿಗಳು ಭಾಗವಹಿಸಿ, ಷಡಕ್ಷರ ದೇವರ ಕೃಪೆಗೆ ಪಾತ್ರರಾಗುವಂತೆ ಭಕ್ತರಿಗೆ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಗೌರಿಶಂಕರ ಕಲ್ಯಾಣ ಮಂಟಪದ ಮಾಲೀಕರಾದ ಮಹದೇವಸ್ವಾಮಿ, ವಿದ್ಯುತ್ ಇಲಾಖೆಯ ನಿವೃತ್ತ ಅಧಿಕಾರಿ ನಂಜುAಡಸ್ವಾಮಿ, ಎಚ್.ಎಮ್.ಚಂದ್ರು, ಮಹದೇವಸ್ವಾಮಿ, ಕಿರಣ, ಸ್ವಾಮಿ, ಶಿವಪ್ರಸಾದ, ಮಹೇಶ ,ಪ್ರಮೋದ ,ರವಿ, ಚೇತ, ಗಿರೀಶ ,ಪ್ರಭು ,ಶಿವಣ್ಣ, ಇತರರು ಉಪಸ್ಥಿತರಿದ್ದರು.1
- ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನೀರಿನ ವಿಚಾರವಾಗಿ ಶುರುವಾದ ಗಲಾಟೆ ವಿಕೋಪಕ್ಕೆ ಹೋಗಿ ಕೈ ಕೈ ಮಿಗಿಲಾಯಿಸಿ ಮುಂಡರಗಿ ಪೊಲೀಸ್ ಠಾಣಾ ಮೆಟ್ಟಿಲೇರಿದೆ ಎರಡು ಸಮುದಾಯದ ನಡುವೆ ನಡೆದ ಗಲಾಟೆಯಲ್ಲಿ ಗಾಯ ಗೊಂಡವರು ಗದಗ ಜಿಲ್ಲಾ ಆಸ್ಪತ್ರೆ ಮತ್ತು ಮುಂಡರಗಿ ತಾಲೂಕ ಆಸ್ಪತ್ರೆ ಯಲ್ಲಿ ಚಿಕಿಸ್ತೆ ಪಡೆಯುತ್ತಿದ್ದಾರೆ1
- ಅತ್ತಾವರ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಏಪ್ರಿಲ್ 19 ರಿಂದ 23ರ ತನಕ ಬ್ರಹ್ಮ ಕಳಶ ನಡೆಯಲಿದೆ. ಎಂದು ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿ ಅಧ್ಯಕ್ಷರಾದ ಸೂರಜ್ ರಾಘವನ್ ತಿಳಿಸಿದರು. ಪುರಾಣ ಇತಿಹಾಸ ಹೊಂದಿರುವ ಈ ಕ್ಷೇತ್ರದಲ್ಲಿ ಬ್ರಹ್ಮ ಕಳಸ ಸೌಭಾಗ್ಯ ಒದಗಿರುವುದು ನಮ್ಮೆಲ್ಲರ ಭಾಗ್ಯವೆಂದರು. ಮೊದಲು ಮೈದಾನದಲ್ಲಿ ಫೋಟೋ ಇಟ್ಟು ಪೂಜೆ ನಡೆಯುತ್ತಿತ್ತು. ಪ್ರಸ್ತುತ ಇರುವ ಗುಡಿಯ ದುರಸ್ತಿ ಕಾರ್ಯ ನಡೆದು ಎರಡುವರೆ ಕೋಟಿ ವೆಚ್ಚದಲ್ಲಿ ನೂತನ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣಗೊಳ್ಳಲಿದೆ ಎಂದರು .ಅಯ್ಯಪ್ಪ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಕ್ಷಿತಿ ಮಂಗ್ಳೂರು ಬೃಹ್ಮ ಕಲಶ ಹೊರೆ ಕಾಣಿಕೆ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು .ಅಯ್ಯಪ್ಪ ಭಕ್ತ ಸಮಿತಿ ಕಾರ್ಯಾಧ್ಯಕ್ಷರಾದ ಗೋಕುಲ್ ದಾಸ್ ರವರು ಸಾವಿರಾರು ಮಾಲಾಧಾರಿಗಳು ಈ ಕ್ಷೇತ್ರದಲ್ಲಿ ಮಾಲೆ ಹಾಕಿ ಶಬರಿಮಲೆ ಯಾತ್ರೆ ಮಾಡಿದ್ದು, ವಿಶೇಷವಾಗಿ ಈ ಕಾರ್ಯಕ್ರಮಕ್ಕೆಪಂದಳ ರಾಜಾ ವಂಶಸ್ಥರಾದ. ಶ್ರೀ ನಾರಾಯಣ ವರ್ಮಾ ತಾಂಬುರಾನ್ ಬರುವುದು ವಿಶೇಷವಾಗಿದೆ ಎಂದರು .ಅಯ್ಯಪ್ಪ ಭಕ್ತಿ ಸಮಿತಿ ಕಾರ್ಯಾಧ್ಯಕ್ಷರಾದ ಮುರಳೀಧರ್ ,ಅಯ್ಯಪ್ಪ ಸ್ವಾಮಿ ಬ್ರಹ್ಮ ಕಳಸ ಸಮಿತಿ ಅಧ್ಯಕ್ಷರಾದ ರಾಜರತ್ನ ಸನಿಲ್ ,ಸ್ವಾಗತ ಸಮಿತಿಯ ಗೌರವ ಕಾರ್ಯದರ್ಶಿ ಜನಾರ್ಧನ್ ಅತ್ತಾವರ ,ಸ್ವಾಗತ ಸಮಿತಿಯ ಉಪಾಧ್ಯಕ್ಷೆ ಡಾ. ಮಾಲತಿ ಶೆಟ್ಟಿ ಮಾಣೂರು ,ಅಯ್ಯಪ್ಪ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸೂರ್ಯಕಾಂತ ಎ. ಉಪಸ್ಥಿತರಿದ್ದರು. ಡಾ. ಮಾಲತಿ ಶೆಟ್ಟಿ ಮಾಣೂರು ಕಾರ್ಯಕ್ರಮ ನಿರೂಪಿಸಿ , ಸ್ವಾಗತಿಸಿ, ವಂದಿಸಿದರು.1
- *ಭಾರತ ನಲ್ಲಿ ವೈರಲ್*1
- ಅವಳೇನಹಟ್ಟಿ ಕ್ರಾಸ್ ಬಳಿ ಅಶೋಕಾ ಲೈಲ್ಯಾಂಡ್ ವಾಹನ ಡಿಕ್ಕಿ ಹೊಡೆದು ಹಸು ಮೃತಪಟ್ಟ ಘಟನೆ ನಡೆದಿದೆ. ಚಿತ್ರದುರ್ಗ ತಾಲ್ಲೂಕಿನ ಹೊಸಪೇಟೆ ರಸ್ತೆಯ ಅವಳೇನಹಳ್ಳಿ ಬಳಿ ಘಟನೆ ನಡೆದಿದ್ದು ಚಿಕ್ಕಗೊಂಡನಹಳ್ಳಿ ಗ್ರಾಮದ ತಿಮ್ಮಣ್ಣ ಅವರಿಗೆ ಸೇರಿದ ಎರಡು ಹಸುಗಳು ಮೃತಪಟ್ಟಿದ್ದು ರೈತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.1