ಮಂಗಳೂರಿನ ತುಳು ಭವನದಲ್ಲಿ ಕೆ.ಅನಂತರಾಮ ಬಂಗಾಡಿ ಸಂಸ್ಮರಣಾ ಗೋಷ್ಠಿ ಮಂಗಳೂರು: ತನ್ನ ಅಮೂಲ್ಯ ತುಳು ಪ್ರಸಂಗಗಳ ಮೂಲಕ ಯಕ್ಷಗಾನ ರಂಗಕ್ಕೆ ಹೊಸ ನೆಲೆ ತೋರಿಸಿ ಆ ಮೂಲಕ ಅಪಾರ ತುಳು ಪ್ರೇಕ್ಷಕ ವರ್ಗದ ಸೃಷ್ಟಿಗೆ ಕಾರಣವಾದವರು ಅನಂತರಾಮ ಬಂಗಾಡಿಯವರು ಎಂದು ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ ಅವರು ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಯಕ್ಷ ಪ್ರತಿಭೆ ಮಂಗಳೂರು ಸಹಯೋಗದಲ್ಲಿ ಮಂಗಳೂರಿನ ತುಳು ಭವನದಲ್ಲಿ ಆಯೋಜಿಸಲಾದ ಕೆ.ಅನಂತರಾಮ ಬಂಗಾಡಿ ಸಂಸ್ಮರಣಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕನ್ನಡದಲ್ಲಷ್ಟೇ ಯಕ್ಷಗಾನ ನಡೆಯುತ್ತಿದ್ದ ಕಾಲದಲ್ಲಿ ಜನರು ತುಳು ಯಕ್ಷಗಾನ ನೋಡುವಂತೆ ಮಾಡಿದ್ದು ಮಾತ್ರವಲ್ಲದೆ ತುಳು ಯಕ್ಷಗಾನದ ಮೂಲಕ ಯಕ್ಷಗಾನ ಮೇಳಗಳಿಗೆ ಆದಾಯ ತಂದುಕೊಡಲು ಸಾಧ್ಯ ಅನ್ನುವುದನ್ನು ಸಾಬೀತು ಪಡಿಸಿದ ಅನಂತರಾಮ ಬಂಗಾಡಿಯರು ತುಳು ಯಕ್ಷಗಾನಕ್ಕೆ ಕೊಡುಗೆ ನೀಡಿದ ಅಗ್ರಗಣ್ಯರು ಎಂದು ನಾರಾಯಣ ಗೌಡರು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ಭಾಷೆಯ ಬೆಳವಣಿಗೆಗೆ ತುಳು ಯಕ್ಷಗಾನದ ಕೊಡುಗೆ ಅಪಾರವಾದದ್ದು, 65 ತುಳು ಯಕ್ಷಗಾನ ಪ್ರಸಂಗವನ್ನು ರಚಿಸಿದ ಬಂಗಾಡಿಯವರು ಈ ನಿಟ್ಟಿನಲ್ಲಿ ಸದಾ ಸ್ಮರಣೀಯರು ಎಂದು ಹೇಳಿದರು. ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ.ಪ್ರಭಾಕರ ನೀರುಮಾರ್ಗ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಟ್ರಸ್ಟಿ ಶ್ರೀಮತಿ ವೇಣಿ ಮರೋಳಿ, ಅನಂತರಾಮ ಬಂಗಾಡಿಯವರ ಅಳಿಯ ಕೇಶವ ಹೀರೆಬೆಟ್ಟು ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಬೂಬ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಜಯ್ ಕುಮಾರ್ ಗೋಣಿಬೀಡು ಅವರ ನೇತೃತ್ವದ ಯಕ್ಷ ಪ್ರತಿಭೆ ತಂಡದಿಂದ ಸಿರಿ ಕೃಷ್ಣೆ -ಚಂದ್ರಪಾಲಿ ತುಳು ಯಕ್ಷಗಾನ ನಡೆಯಿತು. ವರದಿ: ಶಂಶೀರ್ ಬುಡೋಳಿ
ಮಂಗಳೂರಿನ ತುಳು ಭವನದಲ್ಲಿ ಕೆ.ಅನಂತರಾಮ ಬಂಗಾಡಿ ಸಂಸ್ಮರಣಾ ಗೋಷ್ಠಿ ಮಂಗಳೂರು: ತನ್ನ ಅಮೂಲ್ಯ ತುಳು ಪ್ರಸಂಗಗಳ ಮೂಲಕ ಯಕ್ಷಗಾನ ರಂಗಕ್ಕೆ ಹೊಸ ನೆಲೆ ತೋರಿಸಿ ಆ ಮೂಲಕ ಅಪಾರ ತುಳು ಪ್ರೇಕ್ಷಕ ವರ್ಗದ ಸೃಷ್ಟಿಗೆ ಕಾರಣವಾದವರು ಅನಂತರಾಮ ಬಂಗಾಡಿಯವರು ಎಂದು ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ ಅವರು ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಯಕ್ಷ ಪ್ರತಿಭೆ ಮಂಗಳೂರು ಸಹಯೋಗದಲ್ಲಿ ಮಂಗಳೂರಿನ ತುಳು ಭವನದಲ್ಲಿ ಆಯೋಜಿಸಲಾದ ಕೆ.ಅನಂತರಾಮ ಬಂಗಾಡಿ ಸಂಸ್ಮರಣಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕನ್ನಡದಲ್ಲಷ್ಟೇ ಯಕ್ಷಗಾನ ನಡೆಯುತ್ತಿದ್ದ ಕಾಲದಲ್ಲಿ ಜನರು ತುಳು ಯಕ್ಷಗಾನ ನೋಡುವಂತೆ ಮಾಡಿದ್ದು ಮಾತ್ರವಲ್ಲದೆ ತುಳು ಯಕ್ಷಗಾನದ ಮೂಲಕ ಯಕ್ಷಗಾನ ಮೇಳಗಳಿಗೆ ಆದಾಯ ತಂದುಕೊಡಲು ಸಾಧ್ಯ ಅನ್ನುವುದನ್ನು ಸಾಬೀತು ಪಡಿಸಿದ ಅನಂತರಾಮ ಬಂಗಾಡಿಯರು ತುಳು ಯಕ್ಷಗಾನಕ್ಕೆ ಕೊಡುಗೆ ನೀಡಿದ
ಅಗ್ರಗಣ್ಯರು ಎಂದು ನಾರಾಯಣ ಗೌಡರು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ಭಾಷೆಯ ಬೆಳವಣಿಗೆಗೆ ತುಳು ಯಕ್ಷಗಾನದ ಕೊಡುಗೆ ಅಪಾರವಾದದ್ದು, 65 ತುಳು ಯಕ್ಷಗಾನ ಪ್ರಸಂಗವನ್ನು ರಚಿಸಿದ ಬಂಗಾಡಿಯವರು ಈ ನಿಟ್ಟಿನಲ್ಲಿ ಸದಾ ಸ್ಮರಣೀಯರು ಎಂದು ಹೇಳಿದರು. ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ.ಪ್ರಭಾಕರ ನೀರುಮಾರ್ಗ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಟ್ರಸ್ಟಿ ಶ್ರೀಮತಿ ವೇಣಿ ಮರೋಳಿ, ಅನಂತರಾಮ ಬಂಗಾಡಿಯವರ ಅಳಿಯ ಕೇಶವ ಹೀರೆಬೆಟ್ಟು ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಬೂಬ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಜಯ್ ಕುಮಾರ್ ಗೋಣಿಬೀಡು ಅವರ ನೇತೃತ್ವದ ಯಕ್ಷ ಪ್ರತಿಭೆ ತಂಡದಿಂದ ಸಿರಿ ಕೃಷ್ಣೆ -ಚಂದ್ರಪಾಲಿ ತುಳು ಯಕ್ಷಗಾನ ನಡೆಯಿತು. ವರದಿ: ಶಂಶೀರ್ ಬುಡೋಳಿ
- ಜನವರಿ 13 ಕ್ಕೆ ಮಂಗಳೂರು ಸುತ್ತಮುತ್ತ ಪವರ್ ಕಟ್; ಬಿಜೈನಲ್ಲಿ ಮೆಸ್ಕಾಂ ಇಲಾಖೆಯ ಪ್ರಕಟಣೆ ದಿನಾಂಕ 13.01.2026 ರಂದು ಬೆಳಿಗ್ಗೆ 10.00 ರಿಂದ ಸಂಜೆ 05:00 ಗಂಟೆಯವರೆಗೆ 110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಇಂಡಸ್ಟ್ರಿಯಲ್ ಮತ್ತು 11ಕೆವಿ ದತ್ತನಗರ ಫೀಡರ್‌ಗಳಲ್ಲಿ ವ್ಯವಸ್ಥೆ ಸುದಾರಣೆ ಹಾಗೂ ತುರ್ತು ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಬಿಕರ್ನಕಟ್ಟೆ, ಕಲಾಯಿ, ಕಂಡೆಟ್ಟು, ಜಯಶ್ರೀಗೇಟ್, ನಾಯ್ಗರಲೇನ್, ದತ್ತನಗರ, ಮಲ್ಲಕುಮೇರ್, ಪದವು, ಶರ್ಬತ್ ಕಟ್ಟೆ, ಯೆಯ್ಯಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. ವರದಿ: ಶಂಶೀರ್ ಬುಡೋಳಿ1
- *ಭಾರತ ನಲ್ಲಿ ವೈರಲ್*1
- Post by AAJ KI DASTAK NEWS KARNATAKA1
- ಗದಗ ನ್ಯೂಸ್ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿದೆ ತಾಮ್ರದ ಚಂಬಿಗೆಯಲ್ಲಿ ಅಂದಾಜು ಒಂದು ಕೆಜಿ ನಿಧಿ ಪತ್ತೆ.ಯಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿರಿವುದು ಬೆಳಕಿಗೆ ಬಂದಿದೆ. ಲಕ್ಕುಂಡಿ ವಾರ್ಡ ನಂ.4 ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬುವರ ಮನೆ ಜಾಗದಲ್ಲಿ ಪತ್ತೆ.. ಮನೆಯ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಸಿಕ್ಕ ನಿಧಿ. ಅಂದಾಜು 1 ಕೆಜಿ ತೂಕದ ಚಿನ್ನಾಭರಣಗಳು ಸಿಕ್ಕಿದೆ. ನಿಧಿ ನೋಡಲು ಕುತೂಹಲದಿಂದ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆ. ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ದುರಗೇಶ್, ಎಸ್ಪಿ ರೋಹನ್ ಜಗದೀಶ್, ಎಸಿ ಗಂಗಪ್ಪ, ತಹಶೀಲ್ದಾರ ಶ್ರೀನಿವಾಸ ಕುಲಕರ್ಣಿ. ಚಿನ್ನಾಭರಣಗಳು ಯಾರ ಕಾಲದ್ದು ಎಂದು ತನಿಖೆ.. ನಿಧಿಯನ್ನು ವಶಕ್ಕೆ ಪೋಲೀಸರು ವಶಕ್ಕೆ ಪಡೆದಿದ್ದಾರೆ..1
- "Indian monkey man" ಎಂದೆ ಖ್ಯಾತಿ ಹೊಂದಿದ ಚಿತ್ರದುರ್ಗದ ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜ್ ಅವರು ಬರಿಗೈಲಿ ಕೋಟೆ ಹತ್ತಿ ಪ್ರವಾಸಿಗರನ್ನ ರಂಜಿಸಿದ್ದಾರೆ1
- ಮಳವಳ್ಳಿ ತಾಲೂಕಿನ ಪೂರಿಗಾಲಿ ಶಾಸಕರ ನಿವಾಸಕ್ಕೆ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಶೋಭಾರಾಣಿ ಭೇಟಿ ಶಾಸಕರಿಗೆ ಅಭಿನಂದನೆ ಮಂಡ್ಯ ಜಿಲ್ಲೆಗೆ ನೂತನವಾಗಿ ನೇಮಕವಾಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀಮತಿ ವಿ.ಜೆ. ಶೋಭಾರಾಣಿ ಅವರು ಇಂದು ನನ್ನನ್ನು ಭೇಟಿ ಮಾಡಿ, ಅಭಿನಂದಿಸಿ, ಆರೋಗ್ಯವಿಚಾರಿಸಿದರು. ಈ ವೇಳೆ ಡಿವೈಎಸ್ಪಿ ಯಶ್ವಂತ್ ಕುಮಾರ್ ಅವರು ಹಾಗೂ ಆರಕ್ಷಕ ವೃತ್ತ ನಿರೀಕ್ಷಕರಾದ ಶ್ರೀಧರ್ ಅವರು ಉಪಸ್ಥಿತರಿದ್ದರು.1
- ಮೈಸೂರು-ನಾಗಲಿಂಗ ಸ್ವಾಮಿ ನಿವಾಸಕ್ಕೆ ಮುತಾಲಿಕ್ ಬೇಟೆ #onlinetv24x7 #Mysore #Pramodmuthali1
- *ಭಾರತ ನಲ್ಲಿ ವೈರಲ್*1