Shuru
Apke Nagar Ki App…
ನಿಧನ ವಾರ್ತೆ ಗಂಗಾಧರ ಅವರೊಳ್ಳಿ ಅಳ್ನಾವರ: ಇಲ್ಲಿನ ನೆಹರು ನಗರ ನಿವಾಸಿ ಗಂಗಾಧರ ನಿಂಗಪ್ಪ ಅವರೊಳ್ಳಿ ( 73) ಮಂಗಳವಾರ ಸಂಜೆ ನಿಧನರಾದರು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರೀಯೆ ಬುಧವಾರ ದಿ. 11 ರಂದು ಬೆಳಿಗ್ಗೆ ಸ್ಥಳಿಯ ಮರಾಠಾ ಸಮಾಜದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಂಪರ್ಕಕ್ಕಾಗಿ : 9902465630
Vineetmiskin Alnavar
ನಿಧನ ವಾರ್ತೆ ಗಂಗಾಧರ ಅವರೊಳ್ಳಿ ಅಳ್ನಾವರ: ಇಲ್ಲಿನ ನೆಹರು ನಗರ ನಿವಾಸಿ ಗಂಗಾಧರ ನಿಂಗಪ್ಪ ಅವರೊಳ್ಳಿ ( 73) ಮಂಗಳವಾರ ಸಂಜೆ ನಿಧನರಾದರು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರೀಯೆ ಬುಧವಾರ ದಿ. 11 ರಂದು ಬೆಳಿಗ್ಗೆ ಸ್ಥಳಿಯ ಮರಾಠಾ ಸಮಾಜದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಂಪರ್ಕಕ್ಕಾಗಿ : 9902465630
More news from ಕರ್ನಾಟಕ and nearby areas
- ಕುಂದಗೋಳ: ತಾಲ್ಲೂಕಿನ ಹಿರೇನರ್ತಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ತಲೆದೋರಿದ ಹಳೆಯ ದ್ವೇಷವೊಂದು ವಿಕೋಪಕ್ಕೆ ತಿರುಗಿದ್ದು, ಒಂದೇ ಮನೆತನದವರ ನಡುವಿನ ಜಗಳದಲ್ಲಿ ಮುಂದುವರೆದು ಹಲ್ಲೆಯಲ್ಲಿ ಅಂತ್ಯಗೊಂಡಿದೆ. ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಈ ಭೀಕರ ಗಲಾಟೆಯಲ್ಲಿ ಕರಿಯಪ್ಪಗೌಡ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನದ ವೇಳೆಗೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜಾಗದ ವಿಷಯವಾಗಿ ಮಾತಿಗೆ ಮಾತು ಬೆಳೆದು, ಒಂದೇ ಮನೆತನದ ಅಣ್ಣತಮ್ಮಂದಿರಾದ ಪ್ರಜ್ವಲ್ ಗೌಡ , ಸಿದ್ದನಗೌಡ ಹಾಗೂ ಶಿವನಗೌಡ (ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು) ನಡುವೆ ಸಂಘರ್ಷ ಏರ್ಪಟ್ಟಿದೆ. ಕರಿಯಪ್ಪಗೌಡ ಅವರು ಬಣವೆ ಒಟ್ಟುತ್ತಿದ್ದ ಸಮಯದಲ್ಲಿ ಸ್ಥಳಕ್ಕೆ ಬಂದ ಪ್ರಜ್ವಲ್ ಗೌಡ ಹಾಗೂ ಆತನ ಸಹಚರರು, ಕಲ್ಲು ಮತ್ತು ಬಡಿಗೆಗಳಿಂದ ಏಕಾಏಕಿ ಅಟ್ಟಹಾಸ ಮೆರೆದಿದ್ದಾರೆ ಎಂದು ಸ್ವತಃ ಹಲ್ಲೆಗೊಳಗಾದ ಕರಿಯಪ್ಪಗೌಡರು ತಮ್ಮ ನೋವಿನ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಆರೋಪಿಗಳು ಕರಿಯಪ್ಪಗೌಡರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ, ಅವರ ತಲೆ ಹಾಗೂ ಮೈಮೇಲೆ ರಕ್ತಸಿಕ್ತ ಗಾಯಗಳಾಗಿವೆ. ರಕ್ತದ ಘಾಯದಿಂದ ಬಿದ್ದಿದ್ದ ಅವರನ್ನು ಗ್ರಾಮಸ್ಥರು ಕೂಡಲೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಗಾಯಾಳು ಕರಿಯಪ್ಪಗೌಡರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಸದ್ಯ ಕುಂದಗೋಲ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಯತ್ತಿದ್ದು ಇದು ಎಪ್ ಆಯ್ ಆರ್ ಆಗುತ್ತಾ ರಾಜಿ ಸಂಧಾನದ ಮೂಲಕ ಇಥ್ಯರ್ಥ ಆಗುತ್ತದೆಯಾ ಎಂದುದನ್ನು ಕಾದು ನೋಡಬೇಕು. ಘಟನೆಯಿಂದಾಗಿ ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.1
- ಈಗಲಾದರೂ ನಮ್ಮ ಜನ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ನಮ್ಮ ಜಾತಿಯ ನಾಯಕ ನಮ್ಮ ಸಮಾಜದ ನಾಯಕ ಅನ್ನೋದನ್ನ ಬಿಟ್ಟು ಅಭಿವೃದ್ಧಿ ಕಡೆ ಗಮನಕೊಟ್ಟರೆ ರಾಜ್ಯ ಅಭಿವೃದ್ಧಿ ಆಗಲಿಕ್ಕೆ ಮಾತ್ರ ಸಾಧ್ಯ1
- ..... ಪೊಲೀಸ್ ಅಧಿಕಾರಿ ಮೇಲೆ ..... ಅಧಿಕಾರಿಗಳಿಂದ ಕಿರುಕುಳ ವಿಡಿಯೋ ಮಾಡಿ ನ್ಯಾಯಕ್ಕಾಗಿ ಅಂಗಲಾಚಿದ ಇನ್ಸ್‌ಪೆಕ್ಟರ್ ಶ್ರೀನಿವಾಸ್ . . . #suddipoint #enrisamasse #policeofficer1
- Post by Uday Chougale1
- ದುರಂತ: ಕಾವೇರಿ ನದಿಯಲ್ಲಿ ಈಜಲು ಹೋದ ಆರು ಮಂದಿ ಜಲಸಮಾಧಿ ಮೈಸೂರು: ಜಿಲ್ಲೆಯ ಕೆ.ಆರ್. ನಗರದ ಪ್ರಸಿದ್ಧ ಅರ್ಕೇಶ್ವರ ದೇಗುಲದ ಬಳಿ ಹರಿಯುವ ಕಾವೇರಿ ನದಿಯಲ್ಲಿ ಈಜಲು ಹೋದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಅತ್ಯಂತ ಘೋರ ಘಟನೆ ನಡೆದಿದೆ. 1
- Post by Onlinetv24x71
- Post by Mayur TV Hangal YouTube c1
- ಏ. 20 : ಅರಸೀಕೆರೆ ತಾಲೂಕು ರಾಮಸಾಗರ ಗ್ರಾಮದ ಬಸವ ತತ್ವ ಪ್ರಸಾರ ಕೇಂದ್ರದಲ್ಲಿ ಶರಣ ಸಿದ್ದಪ್ಪ ಶರಣೆ ಮಲ್ಲಮ್ಮನವರು ಸ್ಥಾಪಿಸಿರುವ ಶ್ರೀ ಬಸವ ತತ್ವ ಪ್ರಸಾರ ಕೇಂದ್ರವನ್ನು 2013ರಲ್ಲಿ 12ನೇ ಶತಮಾನದ ಆಗಿಹೋದ ಶರಣರ ಆಚರಣೆ ಅನುಭಾವ, ಅನುಕರಣೆ, ಪ್ರಚಾರಕ್ಕೋಸ್ಕರ ಸ್ಥಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ಯಾರ ಸಹಾಯವಿಲ್ಲದೆ ತನು-ಮನ ಧನವನ್ನು ಬಸವ ತತ್ವ ಪ್ರಚಾರಕ್ಕೆ ಮುಡುಪಾಗಿಟ್ಟಂತಹ ದಂಪತಿಗಳಿವರು. ಈವರು ಸ್ಥಾಪಿಸಲ್ಪಟ್ಟ ಬಸವ ತತ್ವ ಪ್ರಸಾರ ಕೇಂದ್ರದಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆ ಮಾಡಲಾಯಿತು. ಪ್ರತಿ ತಿಂಗಳು ಒಂದರಂದು ಲಿಂಗ ಪೂಜೆ, ಅನುಭಾವ, ಪ್ರಸಾದ, ಪ್ರಚಾರ ಈತರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ ಈ ಕಾರ್ಯಕ್ರಮಗಳಿಗೆ ನಾವೆಲ್ಲರೂ ಅಭಿನಂದಿಸೋಣ. ಇಂದು ಈ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಶರಣ ಹಾಲಪ್ಪ ಹಿರಿಯೂರ್, ಶರಣ ಸಿದ್ದೇಶ, ಪುಟಾಣಿ ಮಕ್ಕಳು ಹಾಗೂ ಶರಣ ಶ್ರೀ ವಿನಯ್ ಪಾಟೀಲ್ ರವರು ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರಾಮಸಾಗರ ಗ್ರಾಮಸ್ಥರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.2