logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕರ್ನಾಟಕ ರಾಜಕಾರಣದಲ್ಲಿ ಶಾಶ್ವತ ಶತ್ರುಗಳಾಗಲೀ, ಮಿತ್ರರಾಗಲೀ ಇಲ್ಲ ಎನ್ನುವ ಮಾತು ಸತ್ಯವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವ ರಾಜಕೀಯ ಪಲ್ಲಟಗಳು ಇಡೀ ರಾಜ್ಯದ ಗಮನ ಸೆಳೆದಿವೆ. ಗದ್ದುಗೆಯ ಆಟಕ್ಕಿಂತಲೂ ಹೆಚ್ಚಾಗಿ ಮುಂದಿನ ‘ಅಹಿಂದ’ ನಾಯಕ ಯಾರು ಎಂಬ ಜಿದ್ದಾಜಿದ್ದಿ ತಾರಕಕ್ಕೇರಿದ್ದು, ಸಿದ್ದರಾಮಯ್ಯ ಅವರ ಪರಮಾಪ್ತ ಬಳಗದಲ್ಲೇ ಗುರುತಿಸಿಕೊಂಡಿದ್ದ ಸತೀಶ್ ಜಾರಕಿಹೊಳಿ ಅವರ ಇತ್ತೀಚಿನ ನಡೆ ಮತ್ತು ಹೇಳಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿ, ದೊಡ್ಡ ಮಟ್ಟದ ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ರಾಜಕೀಯ ಪಡಸಾಲೆಯಿಂದ ಕೇಳಿಬರುತ್ತಿರುವ ಅತ್ಯಂತ ಸ್ಫೋಟಕ ಮಾಹಿತಿ ಏನೆಂದರೆ, ಸತೀಶ್ ಜಾರಕಿಹೊಳಿ ಅವರು ಕಳೆದ ಆರು ತಿಂಗಳಿನಿಂದಲೂ ಸಿದ್ದರಾಮಯ್ಯ ವಿರುದ್ಧ ತೆರೆಮರೆಯಲ್ಲಿ ವ್ಯವಸ್ಥಿತ ಕುತಂತ್ರ ನಡೆಸಿದ್ದರು ಎನ್ನಲಾಗುತ್ತಿದೆ. ಕೇವಲ ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದಷ್ಟೇ ಅಲ್ಲದೇ, ಸಿದ್ದರಾಮಯ್ಯ ವಿರುದ್ಧ ಶಾಸಕರ ಸಹಿ ಸಂಗ್ರಹಿಸಿ, ಆ ಪಟ್ಟಿಯನ್ನು ಡಿಕೆ ಶಿವಕುಮಾರ್ ಕೈಗೆ ಕೊಟ್ಟಿದ್ದರು ಎಂಬ ಮಾತುಗಳು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಬಲವಾಗಿ ಹರಿದಾಡುತ್ತಿವೆ. ಈ ಸುದ್ದಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ವರ್ಗದ ಜನರಿಗೆ ಸಿಡಿಲುಹೊಡೆದಂತಾಗಿದ್ದು, ಸದಾ ಸೌಮ್ಯ ಸ್ವಭಾವದ ಮತ್ತು ಬುದ್ಧ, ಬಸವ, ಅಂಬೇಡ್ಕರ್ ವಿಚಾರವಾದಿ ಎಂದು ಬಿಂಬಿಸಿಕೊಳ್ಳುವ ಸತೀಶ್ ಇಂತಹ ರಾಜಕೀಯಕ್ಕೆ ಇಳಿಯಲು ಸಾಧ್ಯವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಆದರೆ, ಕಳೆದ ಕೆಲವು ದಿನಗಳಿಂದ ಕರ್ನಾಟಕ ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ, ಈ ಅನುಮಾನ ನಿಜವಿರಬಹುದೇ ಎಂಬ ಆತಂಕ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಲೇಬೇಕು, ಮುಂದಿನ ದಿನಗಳಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂಬ ಲೆಕ್ಕಾಚಾರದಲ್ಲಿ, ಸತೀಶ್ ಜಾರಕಿಹೊಳಿ ಮುಳುಗುವ ಹಡಗಿನಂತಿರುವ ಸಿದ್ದು ಬಣದಲ್ಲೇ ಉಳಿಯುವ ಬದಲು, ಉದಯೋನ್ಮುಖ ಡಿಕೆ ಶಿವಕುಮಾರ್ ಅವರೊಂದಿಗೆ ಕೈ ಜೋಡಿಸಿ ರಾಜಕೀಯದಲ್ಲಿ ಉಜ್ವಲ ಭವಿಷ್ಯ ಕಂಡುಕೊಳ್ಳುವ ಸ್ವಾರ್ಥ ಲೆಕ್ಕಾಚಾರಕ್ಕೆ ಬಂದಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಕಳೆದ ಆರು ತಿಂಗಳಿನಿಂದ ಡಿಕೆ ಶಿವಕುಮಾರ್ ಜೊತೆಗೆ ತೆರೆಮರೆಯಲ್ಲಿ ಸತತ ಮಾತುಕತೆ ನಡೆಸುತ್ತಿದ್ದ ಜಾರಕಿಹೊಳಿ, ಸಿದ್ದರಾಮಯ್ಯರವರಿಂದ ನಿಧಾನವಾಗಿ ದೂರ ಉಳಿಯುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ ಎನ್ನಲಾಗುತ್ತಿದೆ. ಇದರ ಪ್ರತ್ಯಕ್ಷ ದರ್ಶನ ಎಂಬಂತೆ, ಕಳೆದ ಎರಡು ದಿನಗಳಿಂದ ಸಿದ್ದರಾಮಯ್ಯ ಹತ್ತಿರವೂ ಸುಳಿಯದ ಸತೀಶ್ ನಡೆ ಅತ್ಯಂತ ನಿಗೂಢವಾಗಿತ್ತು. ಸತೀಶ್ ಜಾರಕಿಹೊಳಿ ತಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ ಎನ್ನುವ ಮಾತುಗಳು ಸಿದ್ದರಾಮಯ್ಯ ಬಣಕ್ಕೆ ತಲುಪುತ್ತಿದ್ದಂತೆ, ಸಿದ್ದರಾಮಯ್ಯ ಕೂಡ ಸುಮ್ಮನೆ ಕೂತಿಲ್ಲ ಎನ್ನಲಾಗಿದೆ. ಸತೀಶ್ ಅವರ ರಾಜಕೀಯ ಆಸೆಗಳಿಗೆ ತಣ್ಣೀರು ಸುರಿಯುವ ಮೂಲಕ ಗುರು ತಕ್ಕ ಶಾಸ್ತಿ ಮಾಡುತ್ತಿದ್ದಾರಾ ಎಂಬ ಅನುಮಾನಗಳು ಮೂಡಿವೆ. ಮೂಲಗಳ ಪ್ರಕಾರ, ಡಿಕೆ ಶಿವಕುಮಾರ್ ಸಿಎಂ ಆದ್ರೆ ತಾನು ತೆರವಾಗುವ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಳ್ಳಬಹುದು ಎನ್ನುವ ಬಹುದೊಡ್ಡ ಆಸೆಯನ್ನು ಸತೀಶ್ ಹೊಂದಿದ್ದರು. ಆದರೆ ದೆಹಲಿಯಲ್ಲಿ ಬೀಡುಬಿಟ್ಟಿರುವ ಸಿದ್ದರಾಮಯ್ಯ, ಹೈಕಮಾಂಡ್ ಮೇಲೆ ಸತೀಶ್ ಬದಲಿಗೆ ಹಿರಿಯ ನಾಯಕ ಜಿ. ಪರಮೇಶ್ವರ್ ಅವರನ್ನು ಮತ್ತೊಮ್ಮೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ತೀವ್ರ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ, ಇಂದು ಪರಮೇಶ್ವರ್‌ ಅವರಿಗೆ ಹೈಕಮಾಂಡ್‌ನಿಂದ ಬುಲಾವ್‌ ಬಂದಿದ್ದು, ನಿನ್ನೆ ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್ ಹಾಗೂ ಜಂಟಿ ಸುದ್ದಿಗೋಷ್ಠಿ ಸಮಯದಲ್ಲಿ ಸಿದ್ದರಾಮಯ್ಯ ತಮ್ಮ ಒಂದು ಕಡೆ ಡಿಕೆ ಶಿವಕುಮಾರ್ ಅವರನ್ನು ಕೂರಿಸಿಕೊಂಡಿದ್ದರೆ, ಮತ್ತೊಂದು ಕಡೆ ಜಿ. ಪರಮೇಶ್ವರ್ ಅವರನ್ನು ಕೂರಿಸಿಕೊಂಡು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಜಾರಕಿಹೊಳಿ ಅವರ ತೆರೆಮರೆಯ ಕುತಂತ್ರಕ್ಕೆ ಸಿದ್ದರಾಮಯ್ಯ ಅತ್ಯಂತ ರಾಜತಾಂತ್ರಿಕವಾಗಿ ಹಾಗೂ ಖಡಕ್ ಆಗಿ ಉತ್ತರ ನೀಡುತ್ತಿದ್ದಾರಾ ಎಂಬ ಪ್ರಶ್ನೆ ರಾಜಕೀಯ ವಿಶ್ಲೇಷಕರಲ್ಲಿ ಮೂಡಿದೆ. ಇವೆಲ್ಲದರ ಮಧ್ಯೆ ಸತೀಶ್ ಜಾರಕಿಹೊಳಿ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ತಾವೇ ಮುಂದಿನ ಅಹಿಂದ ನಾಯಕ ಎನ್ನುವ ರೀತಿಯಲ್ಲಿ ಅಹಂಕಾರದ ಧಾಟಿಯಲ್ಲಿ ಮಾತನಾಡಿದ್ದಾರೆ. “ರಾಜ್ಯದಲ್ಲಿ ಸುಮಾರು 500 ಜಾತಿಗಳ ದೊಡ್ಡ ಸಂಖ್ಯೆಯಿದೆ. ಇವರೆಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಮುನ್ನಡೆಯಲು ಯಾರಾದರೂ ಒಬ್ಬರು ಅಹಿಂದ ಧ್ವಜವನ್ನು ಹಿಡಿಯಲೇಬೇಕು. ಸಿದ್ದರಾಮಯ್ಯ ಅವರ ಸ್ಥಾನ ತುಂಬಲು ನಾನು ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ” ಎಂದು ಹೇಳಿದ್ದಾರೆ. ಸತೀಶ್ ಅವರ ಈ ಮಾತುಗಳು ಸದ್ಯದ ಪರಿಸ್ಥಿತಿಯಲ್ಲಿ ಹಾಸ್ಯಾಸ್ಪದವಾಗಿವೆ, ಏಕೆಂದರೆ ಸಿದ್ದರಾಮಯ್ಯ ಸದ್ಯಕ್ಕೆ ಸಿಎಂ ಸ್ಥಾನದಿಂದ ಇಳಿದಿದ್ದಾರಷ್ಟೇ ಹೊರತು, ತಾವು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಸ್ವತಃ ಅವರೇ ಹೇಳಿದ್ದಾರೆ. ಸಿಎಂ ಕುರ್ಚಿಯಿಂದ ಇಳಿದ ತಕ್ಷಣ ಸಿದ್ದರಾಮಯ್ಯ ರಾಜಕೀಯ ಮುಗಿಯಿತು ಅಂದುಕೊಂಡು, ಸಿದ್ದು ಇನ್ನೂ ಉಸಿರಾಡುತ್ತಿರುವಾಗಲೇ ಅಹಿಂದ ನಾಯಕರಾಗಲು ಓಡುತ್ತಿರುವುದು ಸತೀಶ್ ಅವರ ರಾಜಕೀಯ ಅಪಕ್ವತೆಯನ್ನು ತೋರಿಸುತ್ತದೆ. 2004-05ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಬೃಹತ್ ಸಮಾವೇಶದ ಮೂಲಕ ಸಿದ್ದರಾಮಯ್ಯ ಅಹಿಂದ ನಾಯಕರಾಗಿ ಮುಂಚೂಣಿಗೆ ಬಂದಾಗ, ಆರ್ಥಿಕವಾಗಿ ಅಷ್ಟೊಂದು ಸಬಲರಲ್ಲದಿದ್ದ ಕಾಲದಲ್ಲಿ ಈ ಚಳವಳಿಯನ್ನು ಮುನ್ನಡೆಸಲು ಜಾರಕಿಹೊಳಿ ಕುಟುಂಬ ಹಣದ ಹೊಳೆಯನ್ನೇ ಹರಿಸಿತ್ತು. ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯರೊಂದಿಗೆ ಮೊದಲಿನಂತೆಯೇ ಪ್ರಾಮಾಣಿಕವಾಗಿ ಇದ್ದಿದ್ದರೆ, ಸಿದ್ದರಾಮಯ್ಯ ನಂತರ ಇಡೀ ಕರ್ನಾಟಕದಲ್ಲಿ ನಿರ್ವಿವಾದವಾಗಿ ಏಕೈಕ ಅಹಿಂದ ಲೀಡರ್ ಆಗಿ ಹೊರಹೊಮ್ಮುತ್ತಿದ್ದರು. ಆದರೆ ಈಗ ಅಧಿಕಾರದ ಆಸೆಗಾಗಿ, ಸಿದ್ದರಾಮಯ್ಯ ಸಂಕಷ್ಟದಲ್ಲಿರುವಾಗಲೇ ಇಂತಹ ಕುತಂತ್ರದ ಆಟ ಆಡಿದ ಮೇಲೆ, ಈ ಸತೀಶ್ ಜಾರಕಿಹೊಳಿಯನ್ನು ಅಹಿಂದ ಜನರು ತಮ್ಮ ನಾಯಕ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೋಟ್ಯಂತರ ರೂಪಾಯಿ ಹಣದ ಹೊಳೆ ಹರಿಸಿ ಚುನಾವಣೆಗಳನ್ನು ಗೆಲ್ಲಬಹುದಷ್ಟೇ ಹೊರತು, ಜನರ ಹೃದಯ ಗೆದ್ದು ನಾಯಕನಾಗಲು ಸಾಧ್ಯವಿಲ್ಲ ಎನ್ನುವುದನ್ನು ನಾಯಕನಾಗಲು ಬಯಸುವ ಸಾಹುಕಾರರು ಮೊದಲು ತಿಳಿಯಬೇಕಿದೆ. ಅಹಿಂದ ವರ್ಗದ ನಾಯಕತ್ವ ಕೇವಲ ತೋಳ್ಬಲ ಅಥವಾ ಧನಬಲದಿಂದ ಬರುವುದಿಲ್ಲ; ಅದು ನಂಬಿಕೆ, ಹೋರಾಟ ಮತ್ತು ತ್ಯಾಗದಿಂದ ಬರುತ್ತದೆ. ಗುರುವಿಗೆ ಗುನ್ನಾ ಇಟ್ಟು ಬಂದವನನ್ನು ಅಹಿಂದ ವರ್ಗ ಎಂದಿಗೂ ನಾಯಕ ಎಂದು ಸ್ವೀಕರಿಸುವುದಿಲ್ಲ. ಸಿದ್ದರಾಮಯ್ಯ ಅವರ ನಿರ್ಗಮನದ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಹಿರಿಯ ಸಚಿವರಿಗೆ ಕೊಡಲಿಪೆಟ್ಟು ಬೀಳುವುದು ಬಹುತೇಕ ಖಚಿತವಾಗಿದ್ದು, ಹೊಸ ಸಂಪುಟದಲ್ಲಿ 15 ಕ್ಕೂ ಹೆಚ್ಚು ಹಿರಿಯ ಸಚಿವರಿಗೆ ಹೈಕಮಾಂಡ್ ಕೋಕ್ ನೀಡುವ ಮುನ್ಸೂಚನೆ ಸಿಕ್ಕಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಪರಮಾಪ್ತರಾದ ಎಚ್.ಸಿ. ಮಹದೇವಪ್ಪ ಮತ್ತು ಜಮೀರ್ ಅಹಮದ್ ಖಾನ್ ಅವರು ರಹಸ್ಯ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ. ಸತೀಶ್ ಜಾರಕಿಹೊಳಿ ಅವರು ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ಸ್ವತಃ ತಾವೇ ತೋಡಿಕೊಂಡ ಹಳ್ಳಕ್ಕೆ ಬೀಳುವ ಮುನ್ಸೂಚನೆಗಳು ದಟ್ಟವಾಗಿವೆ. ರಾಜಕೀಯ ಚಾಣಕ್ಷತನದ ಹೆಸರಲ್ಲಿ ನಡೆಸಿದ ಈ ನಂಬಿಕೆದ್ರೋಹದ ಆಟಕ್ಕೆ ಕಾಲವೇ ಉತ್ತರ ನೀಡಬೇಕಿದೆ.

2 hrs ago
user_SAMATA NEWS KANNADA 1
SAMATA NEWS KANNADA 1
Advertising agency ಬೆಳಗಾವಿ, ಬೆಳಗಾವಿ, ಕರ್ನಾಟಕ•
2 hrs ago
6fa75453-fbc2-4a15-ac34-c2fd54d24bca

More news from ಕರ್ನಾಟಕ and nearby areas
  • ಗೋಕಾಕ ತಾಲ್ಲೂಕಿನಲ್ಲಿರುವ ದೊಡ್ಡ ಗ್ರಾಮ ಖನಗಾವ, ಸುತ್ತಮುತ್ತಲಿನ ಪುಟ್ಟ ಗ್ರಾಮಗಳಿಗೆ ಕೇಂದ್ರವಾಗಿರುವ ಕಾರಣ ಇದನ್ನು 'ಏಳೂರ ತಗ್ಗು' ಎಂದೂ ಕರೆಯಲಾಗುತ್ತದೆ. ಇಲ್ಲಿನ ಖನ್ನಮ್ಮ ದೇವಿ ದೇವಸ್ಥಾನಕ್ಕೆ ದೂರದ ಊರುಗಳಿಂದಲೂ ಭಕ್ತರು ಆಗಮಿಸುತ್ತಾರೆ. ಖನಗಾವ ಸುತ್ತಮುತ್ತಲಿನ ಗಿಳಿಹೊಸೂರ, ಮಿಡಕನಟ್ಟಿ, ಶಿಲ್ತಿಭಾವಿ, ಕೈತನಾಳ ಮುಂತಾದ ಊರುಗಳನ್ನು ಆವರಿಸಿರುವ ಅರಣ್ಯ ಪ್ರದೇಶವು ಚಿಕ್ಕಪುಟ್ಟ ಪ್ರಾಣಿಗಳು ಮತ್ತು ಗಿಡಮೂಲಿಕೆಗಳಿಗೆ ನೆಲೆಯಾಗಿದೆ. ಈ ಕಾಡಿನಲ್ಲಿ 'ಗುಡ್ಡದ ಹೊನ್ನಾರಿ' ಎಂಬ ವಿಶೇಷ ತರಕಾರಿ ದೊರೆಯುತ್ತದೆ. ಇಂದಿನ ಅನೇಕರಿಗೆ ಇದರ ಬಗ್ಗೆ ತಿಳಿದಿಲ್ಲವಾದರೂ, ಈ ಲೇಖನದ ಲೇಖಕರು ತಮ್ಮ ಬಾಲ್ಯದಲ್ಲಿ ಈ ತರಕಾರಿಯನ್ನು ನೋಡಿ ಅದರ ರುಚಿಯನ್ನು ಮರೆತಿರಲಿಲ್ಲ. ಕಾಲಕಾಲಕ್ಕೆ ಕಾಡಿನಲ್ಲಿ ಇದನ್ನು ಅನ್ವೇಷಿಸಿದರೂ, ಈ ತರಕಾರಿ ಸಿಕ್ಕಿರಲಿಲ್ಲ. ಆದರೆ, ಕಳೆದ ವಾರ ಲೇಖಕರು ಕೈತನಾಳ ಪಕ್ಕದ ಕಾಡಿನ ಬಳಿ ಇರುವ ತಮ್ಮ ಸ್ನೇಹಿತ ಸತೀಶ ಡಬ್ಬನವರ ಅವರ ಹೊಲಕ್ಕೆ ಭೇಟಿ ನೀಡಿದಾಗ, ಈ ಕುರಿತು ವಿಚಾರಿಸಿದರು. ಸತೀಶ ಅವರು 'ಗುಡ್ಡದ ಹೊನ್ನಾರಿ' ಗಿಡಗಳನ್ನು ತೋರಿಸಿ, ಈ ರುಚಿಕರ ತರಕಾರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನೂ ನೀಡಿದರು. ಈ ಮೂಲಕ ಹಲವು ವರ್ಷಗಳ ಹುಡುಕಾಟಕ್ಕೆ ಫಲ ದೊರೆತಿದೆ.
    4
    ಗೋಕಾಕ ತಾಲ್ಲೂಕಿನಲ್ಲಿರುವ ದೊಡ್ಡ ಗ್ರಾಮ ಖನಗಾವ, ಸುತ್ತಮುತ್ತಲಿನ ಪುಟ್ಟ ಗ್ರಾಮಗಳಿಗೆ ಕೇಂದ್ರವಾಗಿರುವ ಕಾರಣ ಇದನ್ನು 'ಏಳೂರ ತಗ್ಗು' ಎಂದೂ ಕರೆಯಲಾಗುತ್ತದೆ. ಇಲ್ಲಿನ ಖನ್ನಮ್ಮ ದೇವಿ ದೇವಸ್ಥಾನಕ್ಕೆ ದೂರದ ಊರುಗಳಿಂದಲೂ ಭಕ್ತರು ಆಗಮಿಸುತ್ತಾರೆ. ಖನಗಾವ ಸುತ್ತಮುತ್ತಲಿನ ಗಿಳಿಹೊಸೂರ, ಮಿಡಕನಟ್ಟಿ, ಶಿಲ್ತಿಭಾವಿ, ಕೈತನಾಳ ಮುಂತಾದ ಊರುಗಳನ್ನು ಆವರಿಸಿರುವ ಅರಣ್ಯ ಪ್ರದೇಶವು ಚಿಕ್ಕಪುಟ್ಟ ಪ್ರಾಣಿಗಳು ಮತ್ತು ಗಿಡಮೂಲಿಕೆಗಳಿಗೆ ನೆಲೆಯಾಗಿದೆ.

ಈ ಕಾಡಿನಲ್ಲಿ 'ಗುಡ್ಡದ ಹೊನ್ನಾರಿ' ಎಂಬ ವಿಶೇಷ ತರಕಾರಿ ದೊರೆಯುತ್ತದೆ. ಇಂದಿನ ಅನೇಕರಿಗೆ ಇದರ ಬಗ್ಗೆ ತಿಳಿದಿಲ್ಲವಾದರೂ, ಈ ಲೇಖನದ ಲೇಖಕರು ತಮ್ಮ ಬಾಲ್ಯದಲ್ಲಿ ಈ ತರಕಾರಿಯನ್ನು ನೋಡಿ ಅದರ ರುಚಿಯನ್ನು ಮರೆತಿರಲಿಲ್ಲ. ಕಾಲಕಾಲಕ್ಕೆ ಕಾಡಿನಲ್ಲಿ ಇದನ್ನು ಅನ್ವೇಷಿಸಿದರೂ, ಈ ತರಕಾರಿ ಸಿಕ್ಕಿರಲಿಲ್ಲ.

ಆದರೆ, ಕಳೆದ ವಾರ ಲೇಖಕರು ಕೈತನಾಳ ಪಕ್ಕದ ಕಾಡಿನ ಬಳಿ ಇರುವ ತಮ್ಮ ಸ್ನೇಹಿತ ಸತೀಶ ಡಬ್ಬನವರ ಅವರ ಹೊಲಕ್ಕೆ ಭೇಟಿ ನೀಡಿದಾಗ, ಈ ಕುರಿತು ವಿಚಾರಿಸಿದರು. ಸತೀಶ ಅವರು 'ಗುಡ್ಡದ ಹೊನ್ನಾರಿ' ಗಿಡಗಳನ್ನು ತೋರಿಸಿ, ಈ ರುಚಿಕರ ತರಕಾರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನೂ ನೀಡಿದರು. ಈ ಮೂಲಕ ಹಲವು ವರ್ಷಗಳ ಹುಡುಕಾಟಕ್ಕೆ ಫಲ ದೊರೆತಿದೆ.
    user_Basavraj Pattansheti
    Basavraj Pattansheti
    Artist ಗೋಕಾಕ, ಬೆಳಗಾವಿ, ಕರ್ನಾಟಕ•
    6 hrs ago
  • ಧಾರ್ವಾಡ್ ನಗರದ ರವೀಂದ್ರ ನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೀವ್ರ ವಿಳಂಬವಾಗಿದೆ. ಈ ಕುರಿತು 2015ರಿಂದ ವರದಿಗಳನ್ನು ಸಲ್ಲಿಸಲಾಗಿದ್ದರೂ, ಇಲ್ಲಿಯವರೆಗೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಈ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ. ರವೀಂದ್ರ ನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ವಿಚಾರದಲ್ಲಿನ ಈ ಸಮಸ್ಯೆಯನ್ನು ಎತ್ತಿ ಹಿಡಿಯಲು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.
    1
    ಧಾರ್ವಾಡ್ ನಗರದ ರವೀಂದ್ರ ನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೀವ್ರ ವಿಳಂಬವಾಗಿದೆ. ಈ ಕುರಿತು 2015ರಿಂದ ವರದಿಗಳನ್ನು ಸಲ್ಲಿಸಲಾಗಿದ್ದರೂ, ಇಲ್ಲಿಯವರೆಗೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಈ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ. ರವೀಂದ್ರ ನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ವಿಚಾರದಲ್ಲಿನ ಈ ಸಮಸ್ಯೆಯನ್ನು ಎತ್ತಿ ಹಿಡಿಯಲು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.
    user_Kushal Hiremath
    Kushal Hiremath
    ಧಾರವಾಡ, ಧಾರವಾಡ, ಕರ್ನಾಟಕ•
    1 hr ago
  • ಧಾರವಾಡದಲ್ಲಿ ತಡಸಿನಕೊಪ್ಪ ಬಳಿ ಇತ್ತೀಚೆಗೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಗಾಯಗೊಂಡ ವಿಠಲ ವಾಲೀಕಾರನ ಆರೋಗ್ಯ ವಿಚಾರಿಸಲು ಎಸ್‌ಡಿಎಂ ಆಸ್ಪತ್ರೆಗೆ ಬಂದಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಥಳಕ್ಕೆ ಆಗಮಿಸದ ಕಾರಣ ತೀವ್ರವಾಗಿ ಗರಂ ಆಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಸಚಿವರು ಆಸ್ಪತ್ರೆಗೆ ಬರುವ ಬಗ್ಗೆ ಮಾಹಿತಿ ಇದ್ದರೂ ಆಯುಕ್ತರು ಗೈರುಹಾಜರಾಗಿದ್ದರು. ಈ ಘಟನೆಯಿಂದ ಕೋಪಗೊಂಡ ಜೋಶಿ, ಗುಂಡಿನ ದಾಳಿ ಪ್ರಕರಣದಲ್ಲಿ ಪೊಲೀಸರೇ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಗುಂಡಿನ ದಾಳಿ ನಡೆದು ನಾಲ್ಕು ದಿನಗಳಾದರೂ ಮುಖ್ಯ ಆರೋಪಿಯನ್ನು ಬಂಧಿಸಲು ಸಾಧ್ಯವಾಗದಿರುವುದು ವಿಚಿತ್ರ ಎಂದ ಅವರು, ಅಲ್ಲಿ ಉಪಸ್ಥಿತರಿದ್ದ ಡಿಸಿಪಿ ಶ್ರುತಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, "ನಿಮ್ಮ ಕಮಿಷನರ್ ಎಲ್ಲಿ? ಇಲ್ಲಿಗೆ ಬರುವುದು ಅವರ ಕೆಲಸ ಅಲ್ಲವೇ?" ಎಂದು ಪ್ರಶ್ನಿಸಿದರು.
    1
    ಧಾರವಾಡದಲ್ಲಿ ತಡಸಿನಕೊಪ್ಪ ಬಳಿ ಇತ್ತೀಚೆಗೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಗಾಯಗೊಂಡ ವಿಠಲ ವಾಲೀಕಾರನ ಆರೋಗ್ಯ ವಿಚಾರಿಸಲು ಎಸ್‌ಡಿಎಂ ಆಸ್ಪತ್ರೆಗೆ ಬಂದಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಥಳಕ್ಕೆ ಆಗಮಿಸದ ಕಾರಣ ತೀವ್ರವಾಗಿ ಗರಂ ಆಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಸಚಿವರು ಆಸ್ಪತ್ರೆಗೆ ಬರುವ ಬಗ್ಗೆ ಮಾಹಿತಿ ಇದ್ದರೂ ಆಯುಕ್ತರು ಗೈರುಹಾಜರಾಗಿದ್ದರು.

ಈ ಘಟನೆಯಿಂದ ಕೋಪಗೊಂಡ ಜೋಶಿ, ಗುಂಡಿನ ದಾಳಿ ಪ್ರಕರಣದಲ್ಲಿ ಪೊಲೀಸರೇ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಗುಂಡಿನ ದಾಳಿ ನಡೆದು ನಾಲ್ಕು ದಿನಗಳಾದರೂ ಮುಖ್ಯ ಆರೋಪಿಯನ್ನು ಬಂಧಿಸಲು ಸಾಧ್ಯವಾಗದಿರುವುದು ವಿಚಿತ್ರ ಎಂದ ಅವರು, ಅಲ್ಲಿ ಉಪಸ್ಥಿತರಿದ್ದ ಡಿಸಿಪಿ ಶ್ರುತಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, "ನಿಮ್ಮ ಕಮಿಷನರ್ ಎಲ್ಲಿ? ಇಲ್ಲಿಗೆ ಬರುವುದು ಅವರ ಕೆಲಸ ಅಲ್ಲವೇ?" ಎಂದು ಪ್ರಶ್ನಿಸಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    17 hrs ago
  • ಕಲಘಟಗಿ ತಾಲ್ಲೂಕಿನ ಬಮ್ಮಿಗಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ (ಕೆಪಿಎಸ್) ಮಕ್ಕಳನ್ನು ದಾಖಲಿಸಲು ಪೋಷಕರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳತ್ತ ಜನರು ಹೆಚ್ಚು ಒಲವು ತೋರಿಸುತ್ತಿದ್ದರೂ, ಈಗ ಸರ್ಕಾರಿ ಶಾಲೆಗಳತ್ತ ಗಮನ ಹರಿಸುತ್ತಿರುವುದು ಅವುಗಳ ಬೇಡಿಕೆಯನ್ನು ಹೆಚ್ಚಿಸಿದೆ. ಸರ್ಕಾರಿ ಶಾಲೆಯ ಬೇಡಿಕೆಗೆ ಸಾಕ್ಷಿಯಾಗಿ, ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಿಕೊಳ್ಳಲು ಹಗಲು-ರಾತ್ರಿ ಎನ್ನದೆ ಅರ್ಜಿ ಹಿಡಿದು ಶಾಲೆಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. 2009ರಲ್ಲಿ ಮೇಲ್ದರ್ಜೆಗೇರಿದ ಈ ಕೆಪಿಎಸ್ ಶಾಲೆಯಲ್ಲಿ ಕಳೆದ ವರ್ಷ 800ಕ್ಕೂ ಹೆಚ್ಚು ಮಕ್ಕಳು ಅಧ್ಯಯನಕ್ಕೆ ದಾಖಲಾಗಿದ್ದರು. ಈ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಶಾಲಾ ಶಿಕ್ಷಕರು ತಿಳಿಸಿದ್ದಾರೆ. ಕೆಪಿಎಸ್ ಶಾಲೆಯಲ್ಲಿ ಎಲ್‌ಕೆಜಿಯಿಂದ ಪಿಯುಸಿಯವರೆಗೂ ಒಂದೇ ಸೂರಿನಡಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕೆಪಿಎಸ್ ಪಠ್ಯಕ್ರಮದ ಜೊತೆಗೆ, ಎಲ್‌ಕೆಜಿ ಹಾಗೂ ಯುಕೆಜಿಗೆ ಪೂರಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಕೆಪಿಎಸ್ ಪ್ರಭಾರಿ ಶಿಕ್ಷಕ, ಪ್ರಾಥಮಿಕ ವಿಭಾಗದ ಸುರೇಶ ಯಲ್ಲಾರಿ ಮಾಹಿತಿ ನೀಡಿದ್ದಾರೆ.
    1
    ಕಲಘಟಗಿ ತಾಲ್ಲೂಕಿನ ಬಮ್ಮಿಗಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ (ಕೆಪಿಎಸ್) ಮಕ್ಕಳನ್ನು ದಾಖಲಿಸಲು ಪೋಷಕರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳತ್ತ ಜನರು ಹೆಚ್ಚು ಒಲವು ತೋರಿಸುತ್ತಿದ್ದರೂ, ಈಗ ಸರ್ಕಾರಿ ಶಾಲೆಗಳತ್ತ ಗಮನ ಹರಿಸುತ್ತಿರುವುದು ಅವುಗಳ ಬೇಡಿಕೆಯನ್ನು ಹೆಚ್ಚಿಸಿದೆ.

ಸರ್ಕಾರಿ ಶಾಲೆಯ ಬೇಡಿಕೆಗೆ ಸಾಕ್ಷಿಯಾಗಿ, ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಿಕೊಳ್ಳಲು ಹಗಲು-ರಾತ್ರಿ ಎನ್ನದೆ ಅರ್ಜಿ ಹಿಡಿದು ಶಾಲೆಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. 2009ರಲ್ಲಿ ಮೇಲ್ದರ್ಜೆಗೇರಿದ ಈ ಕೆಪಿಎಸ್ ಶಾಲೆಯಲ್ಲಿ ಕಳೆದ ವರ್ಷ 800ಕ್ಕೂ ಹೆಚ್ಚು ಮಕ್ಕಳು ಅಧ್ಯಯನಕ್ಕೆ ದಾಖಲಾಗಿದ್ದರು. ಈ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಶಾಲಾ ಶಿಕ್ಷಕರು ತಿಳಿಸಿದ್ದಾರೆ.

ಕೆಪಿಎಸ್ ಶಾಲೆಯಲ್ಲಿ ಎಲ್‌ಕೆಜಿಯಿಂದ ಪಿಯುಸಿಯವರೆಗೂ ಒಂದೇ ಸೂರಿನಡಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕೆಪಿಎಸ್ ಪಠ್ಯಕ್ರಮದ ಜೊತೆಗೆ, ಎಲ್‌ಕೆಜಿ ಹಾಗೂ ಯುಕೆಜಿಗೆ ಪೂರಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಕೆಪಿಎಸ್ ಪ್ರಭಾರಿ ಶಿಕ್ಷಕ, ಪ್ರಾಥಮಿಕ ವಿಭಾಗದ ಸುರೇಶ ಯಲ್ಲಾರಿ ಮಾಹಿತಿ ನೀಡಿದ್ದಾರೆ.
    user_Kallappa m mirji
    Kallappa m mirji
    Farmer ಕಳಘಟಗಿ, ಧಾರವಾಡ, ಕರ್ನಾಟಕ•
    19 hrs ago
  • ಜಮಖಂಡಿ ನಗರದ ಶ್ರೀ ಹನುಮಾನ್ ದೇವಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳು ತಂಡದ ಬಗ್ಗೆ ಭಾರಿ ಉತ್ಸಾಹದಲ್ಲಿದ್ದು, ಇದೇ ಸಂಭ್ರಮದಲ್ಲಿ ಇಂದು ಸಂಜೆ 7 ಗಂಟೆಗೆ ತಾಲೂಕು ಕ್ರೀಡಾಂಗಣದ ಮುಂಭಾಗದಲ್ಲಿ ಫೈನಲ್ ಪಂದ್ಯವನ್ನು ಬಿಗ್ ಸ್ಕ್ರೀನ್‌ನಲ್ಲಿ ನೇರಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದೆ.
    1
    ಜಮಖಂಡಿ ನಗರದ ಶ್ರೀ ಹನುಮಾನ್ ದೇವಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳು ತಂಡದ ಬಗ್ಗೆ ಭಾರಿ ಉತ್ಸಾಹದಲ್ಲಿದ್ದು, ಇದೇ ಸಂಭ್ರಮದಲ್ಲಿ ಇಂದು ಸಂಜೆ 7 ಗಂಟೆಗೆ ತಾಲೂಕು ಕ್ರೀಡಾಂಗಣದ ಮುಂಭಾಗದಲ್ಲಿ ಫೈನಲ್ ಪಂದ್ಯವನ್ನು ಬಿಗ್ ಸ್ಕ್ರೀನ್‌ನಲ್ಲಿ ನೇರಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದೆ.
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    4 hrs ago
  • ಶಿಗ್ಗಾವಿ ತಾಲೂಕಿನ ಹುಕ್ಕೇರಿಯಲ್ಲಿರುವ ನೀರಾವರಿ ಅನ್ನದಾತರ ಹೋರಾಟ ವೇದಿಕೆಗೆ ಎಂಡಿ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಎಂಡಿ ಅವರು ಅನ್ನದಾತರು ಎದುರಿಸುತ್ತಿರುವ ನೀರಾವರಿ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.
    1
    ಶಿಗ್ಗಾವಿ ತಾಲೂಕಿನ ಹುಕ್ಕೇರಿಯಲ್ಲಿರುವ ನೀರಾವರಿ ಅನ್ನದಾತರ ಹೋರಾಟ ವೇದಿಕೆಗೆ ಎಂಡಿ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಎಂಡಿ ಅವರು ಅನ್ನದಾತರು ಎದುರಿಸುತ್ತಿರುವ ನೀರಾವರಿ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    4 hrs ago
  • ರಾಜ್ಯ ಸರ್ಕಾರ ಸಚಿವ ಸಂಪುಟ ಪುನರ್‌ರಚನೆಗೆ ಮುಂದಾದಲ್ಲಿ, ಬಂಜಾರಾ ಸಮಾಜದಿಂದ ಕಾಂಗ್ರೆಸ್‌ನ ಏಕೈಕ ಶಾಸಕರಾಗಿರುವ ಹಾವೇರಿ ಶಾಸಕ ಹಾಗೂ ವಿಧಾನ ಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಸಮಾಜದ ಯುವ ಮುಖಂಡ ಸುಧೀರ ಲಮಾಣಿ ಒತ್ತಾಯಿಸಿದ್ದಾರೆ. ಶಿಗ್ಗಾವಿಯಲ್ಲಿ ಈ ಕುರಿತು ಪ್ರಕಟಣೆ ನೀಡಿರುವ ಸುಧೀರ ಲಮಾಣಿ, ರಾಜ್ಯದ ಪರಿಶಿಷ್ಟ ಜಾತಿಯ ೩೬ ಮೀಸಲು ಮತಕ್ಷೇತ್ರಗಳು ಹಾಗೂ ಪರಿಶಿಷ್ಟ ಪಂಗಡದ ೧೫ ಮೀಸಲು ಮತಕ್ಷೇತ್ರಗಳಲ್ಲಿ ಬಂಜಾರ ಸಮುದಾಯದ ಮತ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ. ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ, ಕಳೆದ ಬಿಜೆಪಿ ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ಮತ್ತು ಶಿಫಾರಸುಗಳನ್ನು ಖಂಡಿಸಿ, "ಬಿಜೆಪಿ ಹಠಾವೋ-ತಾಂಡಾ ಬಚಾವೋ" ಘೋಷಣೆಯೊಂದಿಗೆ ರಾಜ್ಯದ ೪೦ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವಲ್ಲಿ ಸಮುದಾಯ ಪ್ರಮುಖ ಪಾತ್ರ ವಹಿಸಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ರಾಜ್ಯದ ೩೦ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಬಂಜಾರ ಸಮುದಾಯದವರು, ಏಕೈಕ ಶಾಸಕರಾದ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ಕೆಲವು ರಾಜಕೀಯ ಕಾರಣಗಳಿಂದ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೂರು ಬಾರಿ ಶಾಸಕರಾಗಿರುವ ರುದ್ರಪ್ಪ ಲಮಾಣಿ ಅವರು ೨೦೧೪ರಿಂದ ಸಂತ ಸೇವಾಲಾಲ್ ಗುರೂಜಿ ಜನ್ಮಸ್ಥಳವಾದ ಸೂರಗೊಂಡನಕೊಪ್ಪ ಮಹಾಮಠ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಮಹಾಮಠದ ಅಭಿವೃದ್ಧಿಗಾಗಿ ಸರ್ಕಾರದಿಂದ ₹೫೦ ಕೋಟಿ ಅನುದಾನ ತಂದು, ೧೫ ಎಕರೆ ಜಾಗವನ್ನು ೨೮ ಎಕರೆಗೆ ವಿಸ್ತರಿಸಿ, ಅದನ್ನು ಧಾರ್ಮಿಕ ಹಾಗೂ ಶೈಕ್ಷಣಿಕ ಉದ್ದೇಶಗಳಿಗಾಗಿ ಮೀಸಲಿಟ್ಟಿದ್ದಾರೆ. ಸರ್ಕಾರ ಬಂದು ಈಗಾಗಲೇ ಮೂರು ವರ್ಷಗಳು ಕಳೆದಿವೆ ಎಂದು ಸುಧೀರ ಲಮಾಣಿ ಉಲ್ಲೇಖಿಸಿದ್ದಾರೆ. ಹೈಕಮಾಂಡ್ ನಿರ್ದೇಶನದ ಮೇರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ಹೇಳಿರುವ ಅವರು, ಮುಂದಿನ ಸಂಪುಟ ಪುನರ್‌ರಚನೆ ಸಂದರ್ಭದಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಪುನರುಚ್ಚರಿಸಿದ್ದಾರೆ.
    1
    ರಾಜ್ಯ ಸರ್ಕಾರ ಸಚಿವ ಸಂಪುಟ ಪುನರ್‌ರಚನೆಗೆ ಮುಂದಾದಲ್ಲಿ, ಬಂಜಾರಾ ಸಮಾಜದಿಂದ ಕಾಂಗ್ರೆಸ್‌ನ ಏಕೈಕ ಶಾಸಕರಾಗಿರುವ ಹಾವೇರಿ ಶಾಸಕ ಹಾಗೂ ವಿಧಾನ ಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಸಮಾಜದ ಯುವ ಮುಖಂಡ ಸುಧೀರ ಲಮಾಣಿ ಒತ್ತಾಯಿಸಿದ್ದಾರೆ. ಶಿಗ್ಗಾವಿಯಲ್ಲಿ ಈ ಕುರಿತು ಪ್ರಕಟಣೆ ನೀಡಿರುವ ಸುಧೀರ ಲಮಾಣಿ, ರಾಜ್ಯದ ಪರಿಶಿಷ್ಟ ಜಾತಿಯ ೩೬ ಮೀಸಲು ಮತಕ್ಷೇತ್ರಗಳು ಹಾಗೂ ಪರಿಶಿಷ್ಟ ಪಂಗಡದ ೧೫ ಮೀಸಲು ಮತಕ್ಷೇತ್ರಗಳಲ್ಲಿ ಬಂಜಾರ ಸಮುದಾಯದ ಮತ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ, ಕಳೆದ ಬಿಜೆಪಿ ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ಮತ್ತು ಶಿಫಾರಸುಗಳನ್ನು ಖಂಡಿಸಿ, "ಬಿಜೆಪಿ ಹಠಾವೋ-ತಾಂಡಾ ಬಚಾವೋ" ಘೋಷಣೆಯೊಂದಿಗೆ ರಾಜ್ಯದ ೪೦ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವಲ್ಲಿ ಸಮುದಾಯ ಪ್ರಮುಖ ಪಾತ್ರ ವಹಿಸಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ರಾಜ್ಯದ ೩೦ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಬಂಜಾರ ಸಮುದಾಯದವರು, ಏಕೈಕ ಶಾಸಕರಾದ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ಕೆಲವು ರಾಜಕೀಯ ಕಾರಣಗಳಿಂದ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೂರು ಬಾರಿ ಶಾಸಕರಾಗಿರುವ ರುದ್ರಪ್ಪ ಲಮಾಣಿ ಅವರು ೨೦೧೪ರಿಂದ ಸಂತ ಸೇವಾಲಾಲ್ ಗುರೂಜಿ ಜನ್ಮಸ್ಥಳವಾದ ಸೂರಗೊಂಡನಕೊಪ್ಪ ಮಹಾಮಠ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಮಹಾಮಠದ ಅಭಿವೃದ್ಧಿಗಾಗಿ ಸರ್ಕಾರದಿಂದ ₹೫೦ ಕೋಟಿ ಅನುದಾನ ತಂದು, ೧೫ ಎಕರೆ ಜಾಗವನ್ನು ೨೮ ಎಕರೆಗೆ ವಿಸ್ತರಿಸಿ, ಅದನ್ನು ಧಾರ್ಮಿಕ ಹಾಗೂ ಶೈಕ್ಷಣಿಕ ಉದ್ದೇಶಗಳಿಗಾಗಿ ಮೀಸಲಿಟ್ಟಿದ್ದಾರೆ.

ಸರ್ಕಾರ ಬಂದು ಈಗಾಗಲೇ ಮೂರು ವರ್ಷಗಳು ಕಳೆದಿವೆ ಎಂದು ಸುಧೀರ ಲಮಾಣಿ ಉಲ್ಲೇಖಿಸಿದ್ದಾರೆ. ಹೈಕಮಾಂಡ್ ನಿರ್ದೇಶನದ ಮೇರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ಹೇಳಿರುವ ಅವರು, ಮುಂದಿನ ಸಂಪುಟ ಪುನರ್‌ರಚನೆ ಸಂದರ್ಭದಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಪುನರುಚ್ಚರಿಸಿದ್ದಾರೆ.
    user_ವಿಶ್ವನಾಥ ಬಂಡಿವಡ್ಡರ
    ವಿಶ್ವನಾಥ ಬಂಡಿವಡ್ಡರ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    21 hrs ago
  • ‘ಋಣಮುಕ್ತ’ ಕಿರುತೆರೆ ಚಿತ್ರದಿಂದ ತಾಯಿ ಮತ್ತು ಮಗನ ಪ್ರೀತಿಯನ್ನು ಬಿಂಬಿಸುವ ಒಂದು ಹೃದಯಸ್ಪರ್ಶಿ ಭಾವನಾತ್ಮಕ ದೃಶ್ಯವನ್ನು ಹಂಚಿಕೊಳ್ಳಲಾಗಿದೆ. ಈ ಭಾವನಾಮಯ ದೃಶ್ಯಕ್ಕೆ ಬಸವರಾಜ ಪಟ್ಟಣಶೆಟ್ಟಿ ಅವರು ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ. ದೃಶ್ಯದಲ್ಲಿ ಸ್ವತಃ ಬಸವರಾಜ ಪಟ್ಟಣಶೆಟ್ಟಿ ಮತ್ತು ಅಮ್ಮಾಜಿ (ಶ್ರೀಮತಿ ರಜನಿ ಡಾ. ಅಶೋಕ ಜೀರಗ್ಯಾಳ) ಅವರು ಕಲಾವಿದರಾಗಿ ಅಭಿನಯಿಸಿದ್ದಾರೆ.
    1
    ‘ಋಣಮುಕ್ತ’ ಕಿರುತೆರೆ ಚಿತ್ರದಿಂದ ತಾಯಿ ಮತ್ತು ಮಗನ ಪ್ರೀತಿಯನ್ನು ಬಿಂಬಿಸುವ ಒಂದು ಹೃದಯಸ್ಪರ್ಶಿ ಭಾವನಾತ್ಮಕ ದೃಶ್ಯವನ್ನು ಹಂಚಿಕೊಳ್ಳಲಾಗಿದೆ. ಈ ಭಾವನಾಮಯ ದೃಶ್ಯಕ್ಕೆ ಬಸವರಾಜ ಪಟ್ಟಣಶೆಟ್ಟಿ ಅವರು ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ. ದೃಶ್ಯದಲ್ಲಿ ಸ್ವತಃ ಬಸವರಾಜ ಪಟ್ಟಣಶೆಟ್ಟಿ ಮತ್ತು ಅಮ್ಮಾಜಿ (ಶ್ರೀಮತಿ ರಜನಿ ಡಾ. ಅಶೋಕ ಜೀರಗ್ಯಾಳ) ಅವರು ಕಲಾವಿದರಾಗಿ ಅಭಿನಯಿಸಿದ್ದಾರೆ.
    user_Basavraj Pattansheti
    Basavraj Pattansheti
    Artist ಗೋಕಾಕ, ಬೆಳಗಾವಿ, ಕರ್ನಾಟಕ•
    20 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.