ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ತೆರಳಿ ಧಮ್ಕಿ ಹಾಕಿರುವ ಅಕ್ಕಿ ಕಳ್ಳರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರಿಗೆ ಕಾನಿಪ ಜಿಲ್ಲಾ ಘಟಕ, ಆಮ್ ಆದ್ಮಿ ಪಕ್ಷ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು ವಿಜಯಪುರ: ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ತೆರಳಿ ಧಮ್ಕಿ ಹಾಕಿರುವ ಅಕ್ಕಿ ಕಳ್ಳರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರಿಗೆ ಕಾನಿಪ ಜಿಲ್ಲಾ ಘಟಕ, ಆಮ್ ಆದ್ಮಿ ಪಕ್ಷ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ವೇಳೆ ಕಾನಿಪ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಹಳ್ಳಿ ಮಾತನಾಡಿ, ಪತ್ರಕರ್ತರನ್ನು ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎಂದು ಕರೆಯಲಾಗುತ್ತಿದೆ ಆದರೆ ವಿಜಯಪುರದಲ್ಲಿ ಆ ಅಂಗವನ್ನು ಕುಸಿಯುವಂತಹ ವಾತಾವರಣ ನಿರ್ಮಾಣವಾಗಿದೆ. ಪತ್ರಕರ್ತರು ನಿರ್ಭೀತಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಸೃಷ್ಠಿಯಾಗಿದೆ. ಹಿರಿಯ ಪತ್ರಕರ್ತ ಪರಶುರಾಮ ಶಿವಶರಣ ಅವರು ಅಕ್ಕಿ ಕಳ್ಳತನದ ಕುರಿತು ಬರೆದ ವರದಿ ತಪ್ಪಾಗಿದ್ದರೆ ಪ್ರಕರಣ ದಾಖಲಿಸಲಿ ನಾವು ಅದನ್ನು ಸ್ವೀಕರಿಸಿ ಕಾನೂನು ಹೋರಾಟ ಮಾಡುತ್ತೇವೆ. ಆದರೆ ಪತ್ರಕರ್ತರ ಮನೆಗೆ ತೆರಳಿ ದಮ್ಕಿ ಹಾಕುವುದು, ಕುಟುಂಬದವರಲ್ಲಿ ಆತಂಕ ಉಂಟಾಗುವ ರೀತಿಯಲ್ಲಿ ವರ್ತನೆ ತೋರುವುದು, ಅಲ್ಲದೇ ಪತ್ರಕರ್ತರಲ್ಲಿ ಭಯದ ವಾತಾವರಣ ಸೃಷ್ಠಿಸುತ್ತಿರುವದು ಅತ್ಯಂತ ಖಂಡನೀಯ ಎಂದರು. ಜಿಲ್ಲಾಡಾಳಿತ, ಜಿಲ್ಲಾ ಪೊಲೀಸ್ ಅಧಿಕಾರಿಗಳು ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ಹೋಗಿರುವ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ಅವರ ಮೇಲೆ ಸೂಕ್ತ ಕ್ರಮ ಆಗದಿದ್ದಲ್ಲಿ ರಾಜ್ಯಾಧ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಮಾತನಾಡಿ, ಪತ್ರಕರ್ತ ಪರಶುರಾಮ ಶಿವಶರಣ ಅವರ ಮೇಲೆ ಹಲ್ಲೆಗೆ ಯತ್ನಿಸುವ ಭಾಗವಾಗಿ ಅವರ ಮನೆಗೆ ತೆರಳಿ ಭಯಪಡಿಸಲು ಪ್ರಯತ್ನ ಮಾಡಿರುವವರನ್ನು ಸುಮ್ಮನೆ ಬಿಡಬಾರದು. ನಾವು ಸಮಾಜದ ಧ್ವನಿಯಾಗಿ, ಜನಧ್ವನಿಯಾಗಿ ಕೆಲಸ ಮಾಡುವ ಪತ್ರಕರ್ತರು. ಸಮಾಜದಲ್ಲಿ ನಡೆಯುವ ಅನ್ಯಾಯ, ಅಕ್ರಮ ಚಟುವಟಿಕೆಗಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡುವ ನಮ್ಮ ಧ್ವನಿಯನ್ನು ಹತ್ತಿಕ್ಕಲು ದುಷ್ಟಶಕ್ತಿಗಳ ಪ್ರಯತ್ನ ಆಗಾಗ ನಡೆಯುತ್ತಲೇ ಇರುವುದು ಖಂಡನೀಯ. ಸರ್ಕಾರ ಪತ್ರಕರ್ತರ ರಕ್ಷಣೆಗೆ ಸೂಕ್ತ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಸ್ವಾಸ್ತ್ಯ ಸಮಾಜ ನಿರ್ಮಾಣ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಅಕ್ಕಿ ಕಳ್ಳರ ಮೇಲೆ ಜಿಲ್ಲಾಡಳಿತ ಹಾಗೂ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ತೆರಳಿ ಅವಾಚ್ಯ ಶಬ್ದಗಳನ್ನು ಬಳಸಿ ಕುಟುಂಬಕ್ಕೆ ಬೆದರಿಕೆ ಹಾಕಿರುವ ಅಕ್ಕಿ ಕಳ್ಳರನ್ನು ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವ ಕಾಣದ ಕೈಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ರಾಷ್ಟ್ರೀಯ ಕಾರ್ಯಕಾರಣಿ ಮಂಡಳಿ ಸದಸ್ಯ ಶರಣು ಮಸಳಿ ಮಾತನಾಡಿ, ರಾಜ್ಯಾಧ್ಯಂತ ಪತ್ರಕರ್ತರ ಮೇಲೆ ಹಲ್ಲೆಗಳು ನಡೆಯುತ್ತಲೇ ಇವೆ. ಪತ್ರಕರ್ತರು ನಾಲ್ಕನೇ ಅಂಗ ಆದರೆ ಅವರ ರಕ್ಷಣೆಗೆ ಯಾರೂ ಇಲ್ಲದಂತಾಗಿದೆ. ಜೀವ ಪಣಕ್ಕಿಟ್ಟು ಸುದ್ದಿ ಮಾಡುವ ಪತ್ರಕರ್ತರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು. ಶಿವಶರಣ ಅವರ ಮನೆಗೆ ಹೋಗಿ ಭಯ ಹುಟ್ಟಿಸಲು ಪ್ರಯತ್ನಿಸಿರುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದರು. ಹಿರಿಯ ವರದಿಗಾರ ಬಸವರಾಜ ಸಂಪಳ್ಳಿ ಮಾತನಾಡಿ, ಅಕ್ಕಿ ಮಾಫಿಯಾಗಳು ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸುವ ಯತ್ನ ಮಾಡಿದ್ದಾರೆ. ಅಲ್ಲದೇ ಜಾತಿ ನಿಂದನೆಯನ್ನು ಸಹಿತ ಮಾಡಿರುವುದನ್ನು ಜಿಲ್ಲಾಡಳಿತ ಹಗುರವಾಗಿ ಪರಿಗಣಿಸದೆ ಸೂಕ್ತ ಕ್ರಮ ಜರುಗಿಸಬೇಕು. ಅಕ್ಕಿ ಮಾಫಿಯಾಗಳಿಗೆ ಅಧಿಕಾರಿಗಳೂ ಸಹಿತ ಸಾತ್ ನೀಡುತ್ತಿರುವ ಮಾಹಿತಿಯೂ ಇದೆ. ಜಿಲ್ಲಾಡಳಿತ ಅಕ್ಕಿ ಕಳ್ಳರನ್ನು ಈಗಾಗಲೇ ಬಂಧಿಸಿದೆ. ಎಲ್ಲ ಅಕ್ಕಿ ಕಳ್ಳರಿಗೂ ಜಿಲ್ಲಾಡಳಿತ ಒಂದು ಸಂದೇಶ ರವಾನೆ ಮಾಡಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಸಹಿತ ತನಿಖೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು. ಎಎಪಿ ಜಿಲ್ಲಾಧ್ಯಕ್ಷ ಭೋಗೇಶ ಸೊಲಾಪೂರ ಹಾಗೂ ಪತ್ರಕರ್ತ ಪರಶುರಾಮ ಶಿವಶರಣ ಮಾತನಾಡಿದರು. ಈ ಸಂದರ್ಭದಲ್ಲಿ ಕಾನಿಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೋಹನ ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷ ಸಮೀರ ಇನಾಮದಾರ, ಜಿಲ್ಲಾ ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ವಿನೋದ ಸಾರವಾಡ, ಪತ್ರಕರ್ತರಾದ ಗೋಪಾಲ ಕನಿಮನಿ, ಶಿವಾನಂದ ಶಿವಶರಣ, ಗುರುರಾಜ ಗದ್ದನಕೇರಿ, ಷಡಕ್ಷರಿ ಕಂಪಣ್ಣನವರ, ಬಾಬು ತಡಲಗಿ, ಸುನೀಲ ಭಾಸ್ಕರ್, ಮೋಹನ ಕುಲಕರ್ಣಿ, ಮಂಜು ಕಲಾಲ್, ಶರಣು ಮರನೂರ, ಕಲ್ಲು ಶಿವಶರಣ, ಸಂಜೀವ ಕುಲಕರ್ಣಿ, ವೆಂಕಟೇಶ ಭೈರಾಮಡಗಿ, ಫಯಾಜ ಕಲಾದಗಿ, ರಾಜೇಂದ್ರಸಿಂಗ್ ಹಜೇರಿ, ಚಂದ್ರಕಾಂತ ಮಾವುರ, ಸಂತೋಷ, ಸುರೇಶ, ದಯಾನಂದ ಸಾವಳಗಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ವರದಿ ಮಹಾಲಿಂಗ ಗಗ್ಗರಿ

- Post by N24kannadanews1
- नृसिंहवाडी येथे उद्या नारळी पौर्णिमा निमित्त भाविकांची गर्दी पाहायला मिळते, गुरूवार पासून लोकांच्या रांगा पाहायला मिळतात नृसिंहवाडी येथे नारळी पौर्णिमा निमित्त भाविकांची गर्दी पाहायला मिळते गुरूवार पासून लोकांच्या रांगा लागल्या होत्या दत्तगुरु श्री दत्तात्रेय यांच्या दर्शनासाठी गर्दी मोठ्या संख्येने उपस्थित होती, प्रतिनिधी डॉ अनिल माने सरकार चंदुरकर2
- Supreme Court: Interim Protection Does Not Bar Filing of Chargesheet. Case: Arun Kumar Mandal v. State of Jharkhand *Appeal (Crl.) No(s). 2130/2026 Supreme Court: Interim Protection Does Not Bar Filing of Chargesheet. Case: Arun Kumar Mandal v. State of Jharkhand *Appeal (Crl.) No(s). 2130/2026 to subscribe my channel1
- ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕನ ಮನೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ಭಾಸ್ಕರ ರಾವ್ ಮನೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಜೊತೆಯಲ್ಲಿ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ನಡೆಯಿತು. 1994 ರಲ್ಲಿ ಕಲಿತ ಸುಮಾರು 26 ಜನ ಗೆಳೆಯರನ್ನು ಪೂಜೆಗೆ ಕರೆಯಿಸಿ ಒಟ್ಟಾಗಿ ಪೂಜೆ ನೆರೆವೇರಿಸಿದರು, ನಂತರ ಎಲ್ಲಾ ಗೆಳೆಯರು ಪ್ರಸ್ತುತ ತಾವು ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದರು1
- ಅಥಣಿ : ಕಬ್ಬಿಗೆ 6500 ರೇಟ್ ಕೊಡು ಸಲುವಾಗಿ ಪ್ರಲ್ಹಾದ ಜೋಶಿ ಮನೆಗೆ ಮುತ್ತಿಗೆ..! ಅಥಣಿ : ಕಬ್ಬಿಗೆ 6500 ರೇಟ್ ಕೊಡು ಸಲುವಾಗಿ ಪ್ರಲ್ಹಾದ ಜೋಶಿ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಶಶಿಕಾಂತ ಪಡಸಲಗಿ ಹೇಳಿಕೆ1
- ಜಮಖಂಡಿಯಲ್ಲಿ ಹಳೆ ರಸ್ತೆ ಬಂದ್‌ಗೆ ನಾಗರಿಕರ ಆಕ್ರೋಶ ! ಹಳೆ ರಸ್ತೆಯನ್ನು ಪುನಃ ಸಂಚಾರಕ್ಕೆ ಮುಕ್ತಗೊಳಿಸುವಂತೆ ಒತ್ತಾಯ ! ಹೊಸ ಡಿವಿಯೇಷನ್‌ನಿಂದ ರಾಂಗ್ ಸೈಡ್ ಸಂಚಾರ ಹೆಚ್ಚಳ: ಆರೋಪ1
- 📍 ಖಾನಾಪುರ | ಕೇಸರೆಕರ ದಂಪತಿ ಹತ್ಯೆ ಪ್ರಕರಣ ನ್ಯಾಯಕ್ಕಾಗಿ ಖಾನಾಪುರದಲ್ಲಿ ಭವ್ಯ ಪ್ರತಿಭಟನಾ ಮೆರವಣಿಗೆ ಸಾಂಗ್ಲಿಯಲ್ಲಿ ನಡೆದ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಕೇಸರೆಕರ ದಂಪತಿ ಹತ್ಯೆ ಪ್ರಕರಣವನ್ನು ಖಂಡಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಮೃತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಖಾನಾಪುರದಲ್ಲಿ ಭವ್ಯ ಪ್ರತಿಭಟನಾ ಮೆರವಣಿಗೆ ನಡೆಯಿತು. 📍 ಖಾನಾಪುರ | ಕೇಸರೆಕರ ದಂಪತಿ ಹತ್ಯೆ ಪ್ರಕರಣ ನ್ಯಾಯಕ್ಕಾಗಿ ಖಾನಾಪುರದಲ್ಲಿ ಭವ್ಯ ಪ್ರತಿಭಟನಾ ಮೆರವಣಿಗೆ ಸಾಂಗ್ಲಿಯಲ್ಲಿ ನಡೆದ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಕೇಸರೆಕರ ದಂಪತಿ ಹತ್ಯೆ ಪ್ರಕರಣವನ್ನು ಖಂಡಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಮೃತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಖಾನಾಪುರದಲ್ಲಿ ಭವ್ಯ ಪ್ರತಿಭಟನಾ ಮೆರವಣಿಗೆ ನಡೆಯಿತು. ಸಮಸ್ತ ಖಾನಾಪುರ ತಾಲ್ಲೂಕಿನ ಹಿಂದೂ ಬಾಂಧವರು ಹಾಗೂ ನಾಗರಿಕರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಜನಪ್ರಿಯ ಶಾಸಕ ಶ್ರೀ ವಿಠ್ಠಲರಾವ್ ಹಲಗೇಕರ ಅವರು ಭಾಗವಹಿಸಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಬೇಕು ಎಂಬ ಆಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು. ಖಾನಾಪುರದ ಲಕ್ಷ್ಮೀ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ತಹಶೀಲ್ದಾರ್ ಕಚೇರಿವರೆಗೆ ಸಾಗಿತು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನೂರಾರು ನಾಗರಿಕರು ಭಾಗವಹಿಸಿ, ಹತ್ಯೆ ಪ್ರಕರಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಕೇಸರೆಕರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶಾಸಕ ವಿಠ್ಠಲರಾವ್ ಹಲಗೇಕರ, ಶ್ರೀ ಪ್ರಮೋದ ಕೊಚೇರಿ ,ಮಾಜಿ ಶಾಸಕಅರವಿಂದ್ ಪಾಟೀಲ್ ,ಪಂಡಿತ ಒಗಲೆ ,ಸದಾನಂದ ಪಾಟೀಲ್ ,ಧನಶ್ರೀ ಸರ ದೇಸಾಯಿ ಬಾಬುರಾವ ದೇಸಾಯಿ ,ಬಸವರಾಜ ಸಾಣಿಕೊಪ್ಪ , ವಸಂತ ದೇಸಾಯಿ ,ಸುರೇಶ್ ದೇಸಾಯಿ ,ಸುನಿಲ್ ಮಡ್ಡಿಮಣಿ ಶ್ರೀಕಾಂತ ಇಟಗಿ ಮಲ್ಲಪ್ಪ ಮಾರಿಹಾಳ ಗುಂಡು ತೋಪಿನಕಟೀ ಅವರು, ಹಾಗೂ ಹಿಂದೂ ಸಂಘಟನ ಪ್ರಮೋಕ ಅವರ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನ್ಯಾಯಕ್ಕಾಗಿ ನಡೆದ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿ ಒಗ್ಗಟ್ಟಿನ ಸಂದೇಶ ಸಾರಿದರು. 📰 ಶುರು ನ್ಯೂಸ್ 🎙️ ನಿಮ್ಮ ಸಿಂಪಲ್ ಸಿದ್ದು1
- ಜನಜಾಗೃತಿಗಾಗಿ ಮೋಟಾರ್ ಬೈಕ್ ಜಾಥಾ !ಗ್ರಾಮೀಣರಿಗೆ ಉದ್ಯೋಗದ ಜೊತೆಗೆ ಅಭಿವೃದ್ಧಿ ಕಾಮಗಾರಿಗಳ ಅವಕಾಶ ! ಗ್ರಾಮದ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ: ಮಲ್ಲಿಕಾರ್ಜುನ ಬಡಗೇರ1