Shuru
Apke Nagar Ki App…
ಜಿಲ್ಲಾ ಉಪವಿಭಾಗ ಆಸ್ಪತ್ರೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಶಾಸಕ ಶರಣು ಸಲಗರ್ ಭಾಷಣ
Jk ಕನ್ನಡ news
ಜಿಲ್ಲಾ ಉಪವಿಭಾಗ ಆಸ್ಪತ್ರೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಶಾಸಕ ಶರಣು ಸಲಗರ್ ಭಾಷಣ
More news from Bidar and nearby areas
- ಆಸ್ಪತ್ರೆ ಕಾರ್ಯಕ್ರಮದಲ್ಲಿ ಕಾಣೆಯಾದ ಆರೋಗ್ಯ ಸಚಿವರ ಫೋಟೋ, ವಿಜಯಸಿಂಗ್ ಗರಂ: ಪಟ್ಟು ಬಿಡದ ಸಲಗರ್ ಬಸವಕಲ್ಯಾಣ: ಜಿಲ್ಲಾ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ವೇದಿಕೆಯಲ್ಲಿ ಹಾಕಲಾಗಿದ್ದ ಬ್ಯಾನರ್ನಲ್ಲಿ ಆರೋಗ್ಯ ಸಚಿವ ಯುಟಿ ಖಾದರ್ ಅವರ ಫೋಟೊ ಇಲ್ಲದಿರುವುದು ಕಾರ್ಯಕ್ರಮಕ್ಕೂ ಮುನ್ನ ಕೆಲ ಕಾಲ ಗೊಂದಲಕ್ಕೆ ಕಾರಣವಾಯಿತು. ಮಾಜಿ ಎಂಎಲ್ಸಿ ವಿಜಯಸಿಂಗ್ ಅವರು ಅಧಿಕಾರಿಗಳಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಆಸ್ಪತ್ರೆ ನಿರ್ಮಾಣ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರ ಫೋಟೋ ಹಾಕಲಿಲ್ಲ ಯಾಕೆ.? ಎಂದು ಪ್ರಶ್ನಿಸಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತೆನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವೇದಿಕೆಯಲ್ಲಿದ್ದ ಬ್ಯಾನರ್ ಬದಲಾವಣೆಗೆ ಅಧಿಕಾರಿಗಳು ಮುಂದಾಗಿದ್ದು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಶರಣು ಸಲಗರ್ ವಿಷಯ ಅರಿತು ಗರಂ ಆಗಿದ್ದು, ಯಾವುದೇ ಕಾರಣಕ್ಕೂ ಬ್ಯಾನರ್ ಬದಲಾವಣೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸಚಿವ ಈಶ್ವರ ಖಂಡ್ರೆ ಅವರಿಗೆ ಮೊಬೈಲ್ ಮೂಲಕ ಸಂಪರ್ಕಿಸಿದ ಶಾಸಕ ಶರಣು ಸಲಗರ್, ಇಲ್ಲಿ ನಿಮ್ಮ ಪಕ್ಷದ ಮುಖಂಡ ವಿನಕಾರಣ ಕಿರಕ್ ಮಾಡುತಿದ್ದಾರೆ, ಅವರಿಗೆ ನೀವೇ ಹೇಳಿ, ನಾನು ಬ್ಯಾನರ್ ಬದಲಾವಣೆಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದೇ ವೇಳೆ ನಗರದ ಬಿಕೆಡಿಬಿಗೆ ಆಗಮಿಸಿದ ಸಚಿವ ಈಶ್ವರ ಖಂಡ್ರೆ ಅವರು, ಶಾಸಕ ಶರಣು ಸಲಗರ್ ಹಾಗೂ ಮಾಜಿ ಎಂಎಲ್ಸಿ ವಿಜಯಸಿಂಗ್ ಅವರಿಬ್ಬರಿಗೂ ಕರೆಸಿಕೊಂಡು ಇಬ್ಬರಿಗೂ ಸಮಾಧಾನ ಮಾಡುವ ಮೂಲಕ ಇಬ್ಬರಿಗೂ ತಮ್ಮ ವಾಹನದಲ್ಲೇ ಕುಡಿಸಿಕೊಂಡು ಕಾರ್ಯಕ್ರಮದ ವೇದಿಕೆಗೆ ಆಗಮಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.1
- ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫೈಓವರ್ ಮೇಲೆ ಅಧಿಕ ಪ್ರಮಾಣದ ನೀರು ನಿಂತಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಬೆಳಗ್ಗೆಯಾದರೂ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯಲ್ಲೇ ನೀರು ನಿಂತಿದೆ. ಹೀಗಾಗಿ, ಸುಮಾರು 7KM ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತು, ಟ್ರಾಫಿಕ್ ಜಾಮ್ ಉಂಟಾಗಿದೆ. ಸಿಲ್ಕ್ ಬೋರ್ಡ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ 9KM ಉದ್ದದ ಈ ರಸ್ತೆಯಲ್ಲಿ ಬೆಳಗ್ಗೆ ವಾಹನ ಸವಾರರಿಗೆ ಬಹಳ ಸಮಸ್ಯೆಯಾಗಿದೆ. ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ನಿಂತ ಮಳೆ ನೀರು; 7 ಕಿ.ಮೀ ಸುದೀರ್ಘ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ!1
- ಚಿಂಚೋಳಿ : ತಾಲೂಕು ಮಟ್ಟದ ಶಾಲಾ ಕ್ರೀಡಾಕೂಟಕ್ಕೆ ಶಾಸಕರು ಅವಿನಾಶ್ ಜಾಧವ ಚಾಲನೆ ನೀಡಿದರು ಚಿಂಚೋಳಿ: ಜಿಲ್ಲಾ ಪಂಚಾಯತ್ ಕಲಬುರಗಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಚಿಂಚೋಳಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕ್ರೀಡಾಕೂಟಕ್ಕೆ ಶಾಸಕ ಅವಿನಾಶ್ ಜಾಧವ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು. ಕ್ರೀಡೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು, ಯುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವಲ್ಲಿ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಪೋಲಕಪಳ್ಳಿಯ ಉಮೇಶ್ ಜಾಧವ ಅವರ ಕನಸಿನ ಕ್ರೀಡಾಂಗಣವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಯುವಕರಿಗೆ ಉತ್ತಮ ಕ್ರೀಡಾ ಸೌಲಭ್ಯ ಕಲ್ಪಿಸಲು ನಿರಂತರ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಇಒ ಸಂತೋಷ್ ಚೌಹಾನ್, ಬಿಇಒ ದುಳಪ್ಪ ಮಲನೂರ್, ದೇವೀಂದ್ರಪ್ಪ ಹೊಲ್ಕರ್, ನಾಗಶೆಟ್ಟಿ ಭದ್ರಶೆಟ್ಟಿ, ಜಯಪ್ಪ ಚಪಲ, ಕುಪೇಂದ್ರ ಗೌನಳ್ಳಿ, ರಾಜಶೇಖರ್ ಮುಸ್ತರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.3
- ಕಲಬುರಗಿ: ಅನುಮತಿ ಇಲ್ಲದೆ ರಾತ್ರೋ ರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ ಕಲಬುರಗಿ- ಮಾಜಿ ಸಿಎಂ ಸಿದ್ದರಾಮಯ್ಯ ನವರ ಪ್ರತಿಮೆಯನ್ನು ರಾತ್ರೋರಾತ್ರಿ ಸ್ಥಾಪಿಸಿದ ಘಟನೆ ನಗರದ ಹೈಕೋರ್ಟ್ ಕ್ರಾಸ್ ಬಳಿ ನಡೆದಿದೆ. ಯಾವುದೇ ಅನುಮತಿ ಪಡೆಯದೇನೆ ಸುಮಾರು ಏಳೆಂಟು ಜನರಿಂದ ರಾತ್ರೋ ರಾತ್ರಿ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಎರಡು ವರ್ಷಗಳ ಹಿಂದೆಯೂ ಇದೆ ತರಹ ರಾತ್ರೋ ರಾತ್ರಿ ಸಿದ್ದರಾಮಯ್ಯ ಭಾವಚಿತ್ರದ ಬ್ಯಾನರ್ ಅಳವಡಿಸಿ ಸಿದ್ದರಾಮಯ್ಯ ಸರ್ಕಲ್ ನಿರ್ಮಾಣ ಮಾಡಲಾಗಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೆ ಸಿದ್ದರಾಮಯ್ಯ ಸರ್ಕಲ್ ನಿರ್ಮಾಣ ಮಾಡಿದ್ರು ಈ ಹಿಂದೆಯೋ ಸಿದ್ದರಾಮಯ್ಯ ಸರ್ಕಲ್ ಮಾಡೋದಕ್ಕು ಅನುಮತಿ ಪಡೆಯದೇನೆ ನಿರ್ಮಾಣ ಮಾಡಲಾಗಿತ್ತು. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಇದಿಗಾ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಲಬುರಗಿ ಪ್ರವಾಸದಲ್ಲಿರುವಾಗ್ಲೆ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಸಿದ್ದರಾಮಯ್ಯ ಮೂರ್ತಿ ಪ್ರತಿಷ್ಟಾಪನೆ ಮಾಡಿದ ಸರ್ಕಲ್ ನಿಂದಲೇ ಸಿಎಂ ಡಿಕೆಶಿ ಅಫಜಲಪುರಕ್ಕೆ ತೇರಳಲಿರುವರು.ಅನುಮತಿಯಿಲ್ಲದೆ ಮೂರ್ತಿ ಪ್ರತಿಮೆ ಸ್ಥಾಪನೆ ಮಾಡಿದ ಹಿನ್ನಲೆ ಜಿಲ್ಲಾಡಳಿತ ಏನು ಕ್ರಮ ಕೈಗೊಳ್ಳುತ್ತೆ ಅನ್ನೋದೆ ಕೂತುಹಲ ಮೂಡಿದೆ2
- ದೇವಲ ಗಣಗಪುರದ ಶ್ರೀ ದತ್ತ ಮಹಾರಾಜರ ದರ್ಶನ ಪಡೆದ ಕರ್ನಾಟಕದ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ. ದೇವಲ ಗಣಗಪುರದ ಶ್ರೀ ದತ್ತ ಮಹಾರಾಜರ ದರ್ಶನ ಪಡೆದ ಕರ್ನಾಟಕದ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ.1
- ಗುರುಮಠಕಲ್: ಯಾದಗಿರಿ–ರಾಯಚೂರು ಹೆದ್ದಾರಿಯ ಆರ್.ಹೊಸಳ್ಳಿ–ನಾಗಲಾಪುರ ಮಧ್ಯದ ಅವೈಜ್ಞಾನಿಕ ಟೋಲ್ ತೆರವಿಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ ಅವೈಜ್ಞಾನಿಕ ಟೋಲ್ ತೆರವುಗೊಳಿಸಿ; ಅನಾಹುತ ತಪ್ಪಿಸಿ ಈಗಾಗಲೇ ಹಲವು ಜೀವ ಬಲಿ; ಇನ್ನೆಷ್ಟು ಜೀವ ಬೇಕು? ಸರ್ಕಾರಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಪ್ರಶ್ನೆ ಯಾದಗಿರಿ: ಯಾದಗಿರಿ–ರಾಯಚೂರು ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಟೋಲ್‌ನ್ನು ತುರ್ತಾಗಿ ತೆರವುಗೊಳಿಸಿ, ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಲು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹಿಸಿದರು. ಯಾದಗಿರಿ ತಾಲೂಕಿನ ಆರ್.ಹೊಸಳ್ಳಿ ಹಾಗೂ ನಾಗಲಾಪುರ ಮಧ್ಯೆ ಯಾದಗಿರಿ–ರಾಯಚೂರು ಹೆದ್ದಾರಿಯಲ್ಲಿ ನಿರ್ಮಿಸಿರುವ ಟೋಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದರು. ಬಳಿಕ ಸ್ಥಳದಲ್ಲಿಯೇ ದಿಢೀರ್ ಪ್ರತಿಭಟನೆ ನಡೆಸಿ ಮಾತನಾಡಿದರು. ಟೋಲ್‌ನಲ್ಲಿ ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಅಗತ್ಯ ಸ್ಟಿಕ್ಕರ್‌ಗಳನ್ನು ಸರಿಯಾಗಿ ಅಳವಡಿಸದೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಈಗಾಗಲೇ ಸಾಕಷ್ಟು ಜೀವಗಳು ಬಲಿಯಾಗಿವೆ ಎಂದು ಆರೋಪಿಸಿದರು. ದಿನನಿತ್ಯ ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಇಂತಹ ಪ್ರಮುಖ ರಸ್ತೆಯಲ್ಲಿ ಟೋಲ್ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸಬೇಕಾಗಿದ್ದರೂ, ಮೂಲಸೌಕರ್ಯಗಳ ಕೊರತೆ ಕಂಡುಬರುತ್ತಿದೆ. ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದು ಹೇಳಿದರು. ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದು, ಮತ್ತಷ್ಟು ಅನಾಹುತ ಸಂಭವಿಸುವವರೆಗೆ ಕಾಯುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು. ವಾಹನ ಸವಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಟೋಲ್ ವ್ಯವಸ್ಥೆಯನ್ನು ಪರಿಶೀಲಿಸಿ, ಅಪಾಯಕಾರಿ ಅಂಶಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ರಸ್ತೆ ತಡೆಗೆ ಎಚ್ಚರಿಕೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಟೋಲ್‌ನ್ನು ತಕ್ಷಣ ತೆರವುಗೊಳಿಸಿ, ಮುಂದಾಗಬಹುದಾದ ಅಪಘಾತಗಳನ್ನು ತಡೆಯಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇದೇ ಟೋಲ್ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಉಮೇಶ ಕೆ. ಮುದ್ನಾಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸ್ಥಳೀಯರ ಆತಂಕ ಟೋಲ್ ವ್ಯವಸ್ಥೆ ಸುರಕ್ಷಿತವಾಗಿರಲಿ: ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸ್ಥಳೀಯರ ಸುರಕ್ಷತೆಗೆ ಆದ್ಯತೆ ನೀಡಿ, ಟೋಲ್ ಸ್ಥಳದಲ್ಲಿರುವ ಮೂಲಸೌಕರ್ಯಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿದೆ. ಈ ಸಂಧರ್ಭದಲ್ಲಿ ಮಲ್ಲೇಶಿ, ಪವನ, ತಿಪ್ಪಣ್ಣ, ಬಸಲಿಂಗಪ್ಪ, ಹಣಮಂತ, ಮರಲಿಂಗಪ್ಪ, ಮಹಾದೇವಪ್ಪ, ಮೋನಪ್ಪ, ಮಲ್ಲಪ್ಪ, ಚಂದ್ರು, ಸಿದ್ದು, ತಿಮ್ಮಪ್ಪ, ಆನಂದ, ಭೀಮಪ್ಪ, ಸಾಬು ಮಲ್ಲಪ್ಪ ಸೇರಿದಂತೆ ಹಲವರು ಇದ್ದರು. ಕೋಟ್: ೦೧ ಅವೈಜ್ಞಾನಿಕ ಟೋಲ್‌ನಿಂದ ಬಡ ವಾಹನ ಚಾಲಕರ ಜೀವಕ್ಕೆ ಅಪಾಯ ಎದುರಾಗಿದೆ. ಇನ್ನೆಷ್ಟು ಬಡಜೀವಿಗಳು ಬಲಿಯಾಗಬೇಕು? — ಉಮೇಶ ಕೆ. ಮುದ್ನಾಳ, ಸಾಮಾಜಿಕ ಹೋರಾಟಗಾರ4
- ಪಾದಯಾತ್ರೆ ನಂತರ ಹೋರಾಟದಲ್ಲಿ ಭಾಗವಹಿಸಿದ ಜನರ ಕಾಲಿಗೆ ಬಿದ್ದು ಅಭಿನಂದನೆ ಸಲ್ಲಿಸಿದ ಶಾಸಕ ಡಾ ಸಿದ್ದು ಪಾಟೀಲ್1
- ಅದ್ಧೂರಿಯಾಗಿ ಜರುಗಿದ ಶ್ರಾವಣ ಮಾಸದ ಪುರಾಣ ಮಂಗಲ: ಬಬಲಾದ ಶ್ರೀಗಳ ತುಲಾಭಾರ ಬಸವಕಲ್ಯಾಣ: ತಾಲ್ಲೂಕಿನ ಜಾಪೂರವಾಡಿ ಗ್ರಾಮದಲ್ಲಿ ಶ್ರಾವಣ ಮಾಸದ ಪುರಾಣ ಮಂಗಲ ಹಾಗೂ ಬಬಲಾದ ಶ್ರೀಗಳ ತುಲಾಭಾರ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು1
- ಅಫಜಲಪುರ ತಾಲೂಕಿನ ಚೌಡಾಪುರ ಬ್ರಿಡ್ಜ್ ಹತ್ತಿರ ಶಿವಕುಮಾರ ನಾಟೀಕಾರ ಅವರನ್ನು ಹಾಗೂ ಸ್ವಾಭಿಮಾನಿ ತಳವಾರ ಬಂಧುಗಳನ್ನು ಪೋಲಿಸರು ಬಂಧಿಸಿ ನಿಂಬರ್ಗಾ ಪೋಲಿಸ್ ಠಾಣೆಗೆ ಕರೆದೊಯ್ದಿದ್ದಾರೆ ಅಫಜಲಪುರ ತಾಲೂಕಿನ ಚೌಡಾಪುರ ಬ್ರಿಡ್ಜ್ ಹತ್ತಿರ ಶಿವಕುಮಾರ ನಾಟೀಕಾರ ಅವರನ್ನು ಹಾಗೂ ಸ್ವಾಭಿಮಾನಿ ತಳವಾರ ಬಂಧುಗಳನ್ನು ಪೋಲಿಸರು ಬಂಧಿಸಿ ನಿಂಬರ್ಗಾ ಪೋಲಿಸ್ ಠಾಣೆಗೆ ಕರೆದೊಯ್ದಿದ್ದಾರೆ1