ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಕಪ್ಪು ಬಾವುಟ ಪ್ರದರ್ಶನ ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ಖಂಡಿಸಿ ಹಾಗೂ ಕರ್ನಾಟಕದ ವಿವಿಧ ಕನ್ನಡಪರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಇಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಸಮೀಪ ಕಪ್ಪು ಬಾವುಟ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಲಿರುವ ವಾಟಾಳ್ ನಾಗರಾಜ್ ಅವರು, "ಕನ್ನಡಿಗರ ಕಣ್ಣೀರು ಕಾವೇರಿ ನೀರು. ರಾಜ್ಯದಲ್ಲೇ ನೀರಿನ ಕೊರತೆ ಎದುರಾಗಿರುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಕಾವೇರಿ ನೀರು ನಿರ್ವಹಣಾ ಮಂಡಳಿಯ ತೀರ್ಪನ್ನು ಕರ್ನಾಟಕ ತೀವ್ರವಾಗಿ ತಿರಸ್ಕರಿಸಬೇಕು" ಎಂದು ಆಗ್ರಹಿಸಲಿದ್ದಾರೆ. ಪ್ರತಿಭಟನೆಯಲ್ಲಿ ಮಂಡಿಸಲಾಗುತ್ತಿರುವ ಪ್ರಮುಖ ಬೇಡಿಕೆಗಳು ಹೀಗಿವೆ: - ಕಾವೇರಿ ನೀರು ನಿರ್ವಹಣಾ ಮಂಡಳಿಯ ತೀರ್ಪು ತಿರಸ್ಕರಿಸಬೇಕು. - ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಬಾರದು. - ಮೇಕೆದಾಟು ಯೋಜನೆಯನ್ನು ತಕ್ಷಣ ಜಾರಿಗೊಳಿಸಬೇಕು. - ಮಹಾದಾಯಿ–ಕಳಸ ಬಂಡೂರಿ ಯೋಜನೆ ಕಾರ್ಯಗತಗೊಳಿಸಬೇಕು. - ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಬೆಳಗಾವಿ ಮಹಾನಗರ ಪಾಲಿಕೆ ಅಂಗೀಕರಿಸಬೇಕು. - ಎಂ.ಇ.ಎಸ್. ಸಂಘಟನೆಯನ್ನು ನಿಷೇಧಿಸಬೇಕು. - ಗಡಿನಾಡು ಬೆಳಗಾವಿ ಹಾಗೂ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. - ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಹಾಗೂ ಬ್ಯಾಂಕ್‌ಗಳಲ್ಲೂ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಬೇಕು. - ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಸರ್ಕಾರಿ ಶಾಲೆಗಳನ್ನು ಖಾಸಗೀಕರಣ ಮಾಡಬಾರದು. - ಗಡಿನಾಡಿನ ಕನ್ನಡ ಶಾಲೆಗಳಿಗೆ ವಾರ್ಷಿಕ ₹500 ಕೋಟಿ ಅನುದಾನ ನೀಡಬೇಕು. - ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಬೇಕು. - ರಾಜ್ಯದಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಿ, ಪರಭಾಷೆಗಳ ದಬ್ಬಾಳಿಕೆಯನ್ನು ತಡೆಯಬೇಕು. - ಬಿಡದಿ ಉಪನಗರ ಯೋಜನೆ ಕೈಬಿಡಬೇಕು ಹಾಗೂ ಆನೇಕಲ್ ಮತ್ತು ಬಿಡದಿ ರೈತರ ಜಮೀನು ಸ್ವಾಧೀನ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಬೇಕು. - ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸಮರ್ಪಕ ಸ್ಥಾನಮಾನ ನೀಡಬೇಕು. - ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. - ಪೊಲೀಸ್ ಸಿಬ್ಬಂದಿಯನ್ನು ಅವರವರ ಮೂಲ ಜಿಲ್ಲೆಗಳಿಗೆ ವರ್ಗಾವಣೆ ಮಾಡಬೇಕು. ಇದೇ ವೇಳೆ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಭೇಟಿ ಮುಂದೂಡಲ್ಪಟ್ಟಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಘೇರಾವ್ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಸಂಘಟನೆ ತಿಳಿಸಿದೆ. ಈ ಕಪ್ಪು ಬಾವುಟ ಪ್ರದರ್ಶನ ಕಾರ್ಯಕ್ರಮವನ್ನು ವರದಿ ಮಾಡಲು ತಮ್ಮ ಮಾಧ್ಯಮ ಸಂಸ್ಥೆಯ ವರದಿಗಾರರು ಹಾಗೂ ಛಾಯಾಗ್ರಾಹಕರನ್ನು ಕಳುಹಿಸಿಕೊಡುವಂತೆ ಕನ್ನಡ ಚಳವಳಿ ವಾಟಾಳ್ ಪಕ್ಷ ಮನವಿ ಮಾಡಿದೆ.

- BESCOM| ಅದು ನಮ್ಮದಲ್ಲ ನಾವು ಮಾಡಿಲ್ಲ ಕೆಪಿಟಿಸಿಎಲ್ ಅವರನ್ನ ಕೇಳಿ ಅಂತಾರೆ...! BESCOM| ಅದು ನಮ್ಮದಲ್ಲ ನಾವು ಮಾಡಿಲ್ಲ ಕೆಪಿಟಿಸಿಎಲ್ ಅವರನ್ನ ಕೇಳಿ ಅಂತಾರೆ...!1
- ಯಾರೇ ರಾಜೀನಾಮೆ ಕೊಟ್ಟರು 5 ನಿಮಿಷದಲ್ಲಿ ಸ್ವೀಕರಿಸುತ್ತೇನೆ:ಸಿಎಂ ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಶಾಸಕರ ರಾಜೀನಾಮೆ ಹೈಡ್ರಾಮಾಗಳು ಹಾಗೂ ಅಸಮಾಧಾನದ ಹೊಗೆಯಾಡುತ್ತಿರುವ ಬೆನ್ನಲ್ಲೇ, ಸಿಎಂ ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನಿನ್ನೆ ರಾತ್ರಿಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಹೊಸದಾಗಿ ಹೇಳಲು ಏನೂ ಇಲ್ವ ಯಾರಾದರೂ ರಾಜೀನಾಮೆ ನೀಡಲು ಮುಂದಾದರೆ ಅದನ್ನು ಕೇವಲ 5 ನಿಮಿಷಗಳಲ್ಲಿ ಸ್ವೀಕರಿಸುವುದಾಗಿ ಖಡಕ್ ಸಂದೇಶ ರವಾನಿಸಿದ್ದಾರೆ. ಬೋರ್ಡ್ ಮತ್ತು ಕಾರ್ಪೊರೇಷನ್ ಸಂಸ್ಥೆಗಳಿಗೆ ಮೊದಲೇ ಹೇಳಿದಂತೆ 2.5 ವರ್ಷಗಳ ಅಧಿಕಾರಾವಧಿ ಮುಗಿದಿದ್ದು, ತಕ್ಷಣವೇ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ. ರಾಜಕೀಯದಲ್ಲಿ ರಾಜೀನಾಮೆ ನೀಡುವ ನಿರ್ಧಾರಗಳು ಸಾಮಾನ್ಯವಾಗಿದ್ದು, ಹೋಗುವವರನ್ನು ತಡೆಯಲು ಸಾಧ್ಯವಿಲ್ಲ. ಆದರೆ ಪಕ್ಷ ಮತ್ತು ರಾಜಕೀಯ ಭವಿಷ್ಯ ಮುಖ್ಯ ಎಂದುಕೊಳ್ಳುವವರು ತಾಳ್ಮೆಯಿಂದ ಇರಬೇಕು. ಪ್ರತಿಯೊಬ್ಬರಿಗೂ ಪಕ್ಷವೇ ತಾಯಿ ಇದ್ದಂತೆ, ಪಕ್ಷವಿದ್ದರೆ ಮಾತ್ರ ಅಧಿಕಾರ ಮತ್ತು ಭವಿಷ್ಯ ಸಾಧ್ಯ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.1
- ಸಚಿವ ಸ್ಥಾನದ ಭರವಸೆ ಈಡೇರಿದೆ, ಉಪಸಭಾಪತಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ: ರುದ್ರಪ್ಪ ಲಮಾಣಿ ಬೆಂಗಳೂರು: "ಆರಂಭದಲ್ಲೇ ನನಗೆ ನೀಡಲಾಗಿದ್ದ ಸಚಿವ ಸ್ಥಾನದ ಭರವಸೆಯನ್ನು ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಈಗ ಈಡೇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ವಿಧಾನಸಭೆಯ ಉಪಸಭಾಪತಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ" ಎಂದು ನೂತನ ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ. ರಾಜೀನಾಮೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಉಪಸಭಾಪತಿ ಹುದ್ದೆಯನ್ನು ನೀಡುವ ಮುನ್ನವೇ ನನಗೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ಈಗ ನನ್ನನ್ನು ಸಚಿವನನ್ನಾಗಿ ಮಾಡಲಾಗಿದೆ. ಈವರೆಗೆ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು" ಎಂದರು. ತಮ್ಮ ಸಮುದಾಯದ ಪ್ರಾತಿನಿಧ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, "ನಮ್ಮ ಸಮುದಾಯದಿಂದ ಉಪಸಭಾಪತಿಯಾಗಿದ್ದ ಏಕೈಕ ವ್ಯಕ್ತಿ ನಾನಾಗಿದ್ದೆ. ಇದೀಗ ಉಪಸಭಾಪತಿ ಹುದ್ದೆಯ ನಂತರ ಮಂತ್ರಿಯಾಗುತ್ತಿರುವುದು ನನಗೆ ಅತ್ಯಂತ ಸಂತೋಷ ತಂದಿದೆ" ಎಂದು ಹರ್ಷ ಹಂಚಿಕೊಂಡರು.1
- very important message city next News 24 7 WhatsApp Account Hack very important message city next News 24 7 WhatsApp Account Hack1
- ಶಿಡ್ಲಘಟ್ಟ ತಾಲೂಕಿನ ತಹಶಿಲ್ದಾರರ ಕಚೇರಿ ಗೆ ಜಾಂಭವ ಯುವ ಸೇನೆಯಿಂದ ಮುತ್ತಿಗೆ1
- ಲಿಂಕ್ ಕೆನಾಲ್ ಕಾಮಗಾರಿ ಬಿಡುವ ಪ್ರಶ್ನೆಯೇ ಇಲ್ಲ ಮಾಡಿಯೇ ತೀರುತ್ತೇವೆ ನೂತನ ಸಚಿವ ಹೆಚ್ ಸಿ ಬಾಲಕೃಷ್ಣ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಜೋಡಿ ಹೊಸಳ್ಳಿ ಗ್ರಾಮದ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದ ನೂತನ ಸಚಿವರಾದ ಹೆಚ್ ಸಿ ಬಾಲಕೃಷ್ಣ , ಶಾಸಕ ಡಾಕ್ಟರ್ ಎಚ್ ಡಿ ರಂಗನಾಥ್, ಯಾವುದೆ ಖಾತೆ ಕೊಟ್ಟರು ನಿಭಾಯಿಸುವೆ ಎಂದು ನೂತನ ಸಚಿವ ಹೆಚ್.ಸಿ ಬಾಲಕೃಷ್ಣ ತಿಳಿಸಿದರು. ಲಿಂಕ್ ಕೆನಾಲ್ ಯೋಜನೆಯ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.1
- ಬಿಎಂಟಿಸಿ ಕಂಡಕ್ಟರ್ ನಿಂದ ದರ್ಪ ಬಿಕ್ಷುಕನ ಮೇಲೆ ದರ್ಪ ನಡೆಸಿರುವ ಬಿಎಂಟಿಸಿ ಕಂಡಕ್ಟರ್ ನೆಲಮಂಗಲ ತಾಲೂಕಿನ ಅರಿಶಿನ ಕುಂಟೆಯಲ್ಲಿ ನಡೆದ ಘಟನೆ ನೆಲಮಂಗಲ ಬಿಎಂಟಿಸಿ ಕಂಡಕ್ಟರ್ ನಿಂದ ದರ್ಪ ಬಿಕ್ಷುಕನ ಮೇಲೆ ದರ್ಪ ನಡೆಸಿರುವ ಬಿಎಂಟಿಸಿ ಕಂಡಕ್ಟರ್ ನೆಲಮಂಗಲ ತಾಲೂಕಿನ ಅರಿಶಿನ ಕುಂಟೆಯಲ್ಲಿ ನಡೆದ ಘಟನೆ ಅರಿಶಿನಕುಂಟೆ ಕೆಸ್ ಆರ್ ಟಿಸಿ ಬಸ್ ಸ್ಟಾಂಡ್ ಬಳಿ ಘಟನೆ ಬಸ್ ಹತ್ತಲು ಹೋಗಿದ್ದ ಬಿಕ್ಷುಕನನ್ನ ಕಾಲಿನಿಂದ ಒದ್ದು ದರ್ಪ ಬೈಕ್ ನಲ್ಲಿ ಬರ್ತಿದ್ದ ಹೆಲ್ಮೆಟ್ ಕ್ಯಾಮೆರಾಕಣ್ಣಿನಲ್ಲಿ ಅವಮಾನಿಯ ದೃಶ್ಯ ಸೆರೆ ಘಟನೆ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಕಂಡಕ್ಟರ್ ದರ್ಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ1