ಕೊಳ್ಳೇಗಾಲ. ತಮಿಳುನಾಡಿಗೆ ಕಾವೇರಿ ನೀರು ಬೀಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಖಂಡಿಸಿ ಶುಕ್ರವಾರ ಇಲ್ಲಿನ. ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಪಟ್ಟಣದ ಮುಡಿಗುಂಡ ಸೇತುವೆ ಸಮೀಪದ ರಸ್ತೆಯಲ್ಲಿ ಜಮಾಯಿಸಿದ್ದ ರೈತ ಮುಖಂಡರು ಧಿಕ್ಕಾರ ಘೋಷಣೆ ಕೂಗುವ ಮೂಲಕ ಪ್ರತಿಭಟಿಸಿದರು. ಜಿಲ್ಲಾಧ್ಯಕ್ಷರು ಗೌಡೇಗೌಡ ಮಾತನಾಡಿ, ತಮಿಳುನಾಡು ರಾಜ್ಯದ ಬೆಳೆಗಳಿಗೆ 3.500 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು 15 ದಿನಗಳ ಕಾಲ ಬೀಡುವಂತೆ ಆದೇಶ ಮಾಡಿರುವುದನ್ನು ಇಂದು ನಮ್ಮ ರಾಜ್ಯ ರೈತ ಸಂಘದ ವತಿಯಿಂದ ಖಂಡಿಸುತ್ತೇವೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಮತ್ತು ಕಾವೇರಿಯ ಕಣಿವೆಗಳಲ್ಲಿ ಮಳೆಯಾಗದೇ ಎಲ್ಲಾ ಜಲಾಶಯಗಳಲ್ಲಿ ನೀರಿಲ್ಲದ ಪರಿಸ್ಥಿತಿಯಲ್ಲಿ ಆದೇಶ ಮಾಡಿರುವುದು ನಿಜಕ್ಕೂ ಖಂಡನೀಯ ಎಂದರು. 1997 ರಲ್ಲಿ ಬಂಗಾರಪ್ಪ ರವರು ಮುಖ್ಯಮಂತ್ರಿಗಾಗಿದ್ದ ಸಂಧರ್ಭದಲ್ಲಿ ಗಟ್ಟಿಧ್ವನಿಯಿಂದ ತಮಿಳುನಾಡಿಗೆ ನೀರು ಬೀಡಲ್ಲ ಅಂತ ಉತ್ತರ ನೀಡಿದ್ದಂತೆ, ಈಗಿನ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್ ರವರು ಯಾವುದೇ ಆದೇಶಗಳಿಗೆ ಮನ್ನಣೆ ನೀಡದೇ ನಮ್ಮಗೆ ಕುಡಿಯಲು ನೀರು ಇಲ್ಲದ ಸಂಧರ್ಭದಲ್ಲಿ ತಮಿಳುನಾಡು ಬೆಳೆಗೆ ನೀರು ಬೀಡಲು ಸಾಧ್ಯವಿಲ್ಲ ಎಂದು ಹೇಳಿ ನೀರು ಬೀಡಬಾರದು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮನ್ನು ಸಹಾ ಕಿತ್ತೋಗಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ಬರದಿಂದಾಗಿ ರೈತರು ನೀರಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದರೂ, ಅಧಿಕಾರಕ್ಕಾಗಿ ದೆಹಲಿಯಲ್ಲಿ ಸೇರಿರುವ ಶಾಸಕರು ನಿಮ್ಮಗೆ ನಾಚಿಕೆ, ಮಾನ ಇದ್ದರೇ ಕೂಡಲೇ ರಾಜ್ಯಕ್ಕೆ ವಾಪಸ್ಸು ಆಗಿ ನಿಮ್ಮ ನಿಮ್ಮ ಕ್ಷೇತ್ರಗಳಿಗೆ ಹೋಗಿ ಏನೇನೂ ಬರ ಬಂದಿದೆ, ಎಲ್ಲೆಲ್ಲಿ ಫಸಲು ನಷ್ಟವಾಗಿದೆ ಅಂತಹವರಿಗೆ ಏಕ್ಟೆರ್ ಗೆ 50 ಸಾವಿರ ಘೋಷಣೆ ಮಾಡಬೇಕು. ಇಲ್ಲವಾದರೇ ರೈತರ ಪರಿಸ್ಥಿತಿ ಶೋಚನೆಯಾಗಲಿದೆ. ನಮ್ಮ ಜಿಲ್ಲೆಯಲ್ಲಿ ಕುಡಿಯಲು ನೀರಿಲ್ಲ, ಕೆರೆಕಟ್ಟೆಗಳಲ್ಲಿ ಒಣಗಿ ಹೋಗಿರುವುದ್ದರಿಂದ ಅಂತರಜಾಲ ಹೆಚ್ಚಲು ಹಾಗೂ ದನ, ಕರು, ಜಾನುವಾರುಗಳಿಗೆ ಅನುಕೂಲವಾಗಲು ಕಬಿನಿ ಜಲಾಶಯದಿಂದ ಕೂಡಲೇ ನೀರು ಬೀಡಿಸಬೇಕು. ಇಲ್ಲವಾದಲ್ಲಿ ಕಬಿನಿ ಜಲಾಶಯಕ್ಕೆ ನಮ್ಮ ಸಂಘಟನೆಯ ವತಿಯಿಂದ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಗೌರವಧ್ಯಕ್ಷ ಶಿವಮಲ್ಲು, ತಾಲ್ಲೂಕು ಅಧ್ಯಕ್ಷ ನಟೇಶ್, ಜಿಲ್ಲಾ ಉಪಾಧ್ಯಕ್ಷ ರವಿನಾಯ್ಡು, ಹನೂರು ತಾಲ್ಲೂಕು ಅಧ್ಯಕ್ಷ ರಾಜಣ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮ್ಜಾದ್ ಖಾನ್, ಹಸಿರು ಸೇನೆ ಅಧ್ಯಕ್ಷ ಕುಮಾರ್ ಚಿಕ್ಕಲ್ಲೂರು, ಕೂಡ್ಲೂರು ವೆಂಕಟೇಶ್, ರಾಜಣ್ಣ, ಮಸಣಶೆಟ್ಟಿ, ಕುಮಾರ್, ದೊಡ್ಡಯ್ಯ, ಪರಮೇಶ್, ಶಿವರಾಜು, ಮಾದೇಶ್, ಮೋಳೆ ವೆಂಕಟೇಶ್, ಸಿದ್ದಶೆಟ್ಟಿ, ತಾಂಡವಮೂರ್ತಿ ಹಾಗೂ ಇತರರು ಇದ್ದರು.
ಕೊಳ್ಳೇಗಾಲ. ತಮಿಳುನಾಡಿಗೆ ಕಾವೇರಿ ನೀರು ಬೀಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಖಂಡಿಸಿ ಶುಕ್ರವಾರ ಇಲ್ಲಿನ. ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಪಟ್ಟಣದ ಮುಡಿಗುಂಡ ಸೇತುವೆ ಸಮೀಪದ ರಸ್ತೆಯಲ್ಲಿ ಜಮಾಯಿಸಿದ್ದ ರೈತ ಮುಖಂಡರು ಧಿಕ್ಕಾರ ಘೋಷಣೆ ಕೂಗುವ ಮೂಲಕ ಪ್ರತಿಭಟಿಸಿದರು. ಜಿಲ್ಲಾಧ್ಯಕ್ಷರು ಗೌಡೇಗೌಡ ಮಾತನಾಡಿ, ತಮಿಳುನಾಡು ರಾಜ್ಯದ ಬೆಳೆಗಳಿಗೆ 3.500 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು 15 ದಿನಗಳ ಕಾಲ ಬೀಡುವಂತೆ ಆದೇಶ ಮಾಡಿರುವುದನ್ನು ಇಂದು ನಮ್ಮ ರಾಜ್ಯ ರೈತ ಸಂಘದ ವತಿಯಿಂದ ಖಂಡಿಸುತ್ತೇವೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಮತ್ತು ಕಾವೇರಿಯ ಕಣಿವೆಗಳಲ್ಲಿ ಮಳೆಯಾಗದೇ ಎಲ್ಲಾ ಜಲಾಶಯಗಳಲ್ಲಿ ನೀರಿಲ್ಲದ ಪರಿಸ್ಥಿತಿಯಲ್ಲಿ ಆದೇಶ ಮಾಡಿರುವುದು ನಿಜಕ್ಕೂ ಖಂಡನೀಯ ಎಂದರು. 1997 ರಲ್ಲಿ
ಬಂಗಾರಪ್ಪ ರವರು ಮುಖ್ಯಮಂತ್ರಿಗಾಗಿದ್ದ ಸಂಧರ್ಭದಲ್ಲಿ ಗಟ್ಟಿಧ್ವನಿಯಿಂದ ತಮಿಳುನಾಡಿಗೆ ನೀರು ಬೀಡಲ್ಲ ಅಂತ ಉತ್ತರ ನೀಡಿದ್ದಂತೆ, ಈಗಿನ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್ ರವರು ಯಾವುದೇ ಆದೇಶಗಳಿಗೆ ಮನ್ನಣೆ ನೀಡದೇ ನಮ್ಮಗೆ ಕುಡಿಯಲು ನೀರು ಇಲ್ಲದ ಸಂಧರ್ಭದಲ್ಲಿ ತಮಿಳುನಾಡು ಬೆಳೆಗೆ ನೀರು ಬೀಡಲು ಸಾಧ್ಯವಿಲ್ಲ ಎಂದು ಹೇಳಿ ನೀರು ಬೀಡಬಾರದು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮನ್ನು ಸಹಾ ಕಿತ್ತೋಗಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ಬರದಿಂದಾಗಿ ರೈತರು ನೀರಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದರೂ, ಅಧಿಕಾರಕ್ಕಾಗಿ ದೆಹಲಿಯಲ್ಲಿ ಸೇರಿರುವ ಶಾಸಕರು ನಿಮ್ಮಗೆ ನಾಚಿಕೆ, ಮಾನ ಇದ್ದರೇ ಕೂಡಲೇ ರಾಜ್ಯಕ್ಕೆ ವಾಪಸ್ಸು ಆಗಿ ನಿಮ್ಮ ನಿಮ್ಮ ಕ್ಷೇತ್ರಗಳಿಗೆ ಹೋಗಿ ಏನೇನೂ ಬರ ಬಂದಿದೆ, ಎಲ್ಲೆಲ್ಲಿ ಫಸಲು ನಷ್ಟವಾಗಿದೆ ಅಂತಹವರಿಗೆ ಏಕ್ಟೆರ್ ಗೆ 50 ಸಾವಿರ
ಘೋಷಣೆ ಮಾಡಬೇಕು. ಇಲ್ಲವಾದರೇ ರೈತರ ಪರಿಸ್ಥಿತಿ ಶೋಚನೆಯಾಗಲಿದೆ. ನಮ್ಮ ಜಿಲ್ಲೆಯಲ್ಲಿ ಕುಡಿಯಲು ನೀರಿಲ್ಲ, ಕೆರೆಕಟ್ಟೆಗಳಲ್ಲಿ ಒಣಗಿ ಹೋಗಿರುವುದ್ದರಿಂದ ಅಂತರಜಾಲ ಹೆಚ್ಚಲು ಹಾಗೂ ದನ, ಕರು, ಜಾನುವಾರುಗಳಿಗೆ ಅನುಕೂಲವಾಗಲು ಕಬಿನಿ ಜಲಾಶಯದಿಂದ ಕೂಡಲೇ ನೀರು ಬೀಡಿಸಬೇಕು. ಇಲ್ಲವಾದಲ್ಲಿ ಕಬಿನಿ ಜಲಾಶಯಕ್ಕೆ ನಮ್ಮ ಸಂಘಟನೆಯ ವತಿಯಿಂದ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಗೌರವಧ್ಯಕ್ಷ ಶಿವಮಲ್ಲು, ತಾಲ್ಲೂಕು ಅಧ್ಯಕ್ಷ ನಟೇಶ್, ಜಿಲ್ಲಾ ಉಪಾಧ್ಯಕ್ಷ ರವಿನಾಯ್ಡು, ಹನೂರು ತಾಲ್ಲೂಕು ಅಧ್ಯಕ್ಷ ರಾಜಣ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮ್ಜಾದ್ ಖಾನ್, ಹಸಿರು ಸೇನೆ ಅಧ್ಯಕ್ಷ ಕುಮಾರ್ ಚಿಕ್ಕಲ್ಲೂರು, ಕೂಡ್ಲೂರು ವೆಂಕಟೇಶ್, ರಾಜಣ್ಣ, ಮಸಣಶೆಟ್ಟಿ, ಕುಮಾರ್, ದೊಡ್ಡಯ್ಯ, ಪರಮೇಶ್, ಶಿವರಾಜು, ಮಾದೇಶ್, ಮೋಳೆ ವೆಂಕಟೇಶ್, ಸಿದ್ದಶೆಟ್ಟಿ, ತಾಂಡವಮೂರ್ತಿ ಹಾಗೂ ಇತರರು ಇದ್ದರು.
- ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ 4 ದಿನಕ್ಕೆ: ಜಿಲ್ಲಾಧಿಕಾರಿ ಭೇಟಿ, ನೀರು ಬಿಡುವ ಭರವಸೆ. ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ 4 ದಿನಕ್ಕೆ: ಜಿಲ್ಲಾಧಿಕಾರಿ ಭೇಟಿ, ನೀರು ಬಿಡುವ ಭರವಸೆ. ಅಹೋರಾತ್ರಿ ಧರಣಿಗೆ ಬಿಜೆಪಿ ಬೆಂಬಲ, ಕೆರೆಗಳಿಗೆ ನೀರು ತುಂಬಿಸುವ ತನಕ ಅಹೋರಾತ್ರಿ ಧರಣಿ ಕೈ ಬಿಡಲ್ಲ ರೈತರು. ಚಾಮರಾಜನಗರ : ಮೂರನೆಯ ಹಂತದ ಕೆರಗಳಿಗೆ ಕಳೆದ ಮೂರು ವರ್ಷಗಳಿಂದಲ್ಲೂ ನೀರು ತುಂಬಿಸುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಮೂರನೆಯ ಹಂತದ ಅಚ್ಚಕಟ್ಟು ಗ್ರಾಮದ ರೈತರು ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಪಂಪ್‌ಹೌಸ್ ಮುಂಭಾಗದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣೆ ಸ್ಥಳಕ್ಕೆ ಜಿಲ್ಲಾಧಿಕಾರಿ ಶ್ರೀ ರೂಪ ಅಧಿಕಾರಿಗಳೊಂದಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಮೂರನೇ ಹಂತದ ಕೆರೆಗಳಿಗೆ ನೀರು ಭರವಸೆ ನೀಡಿದರು. ವಾರದೊಳಗೆ ನೀರಾವರಿ ನಿಗಮದ ಮುಖ್ಯ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಭವನದಲ್ಲಿ ಸಭೆ ಕರೆಯಲಾಗುವುದು. ನೀವೆಲ್ಲರೂ ಸಭೆ ಬನ್ನಿ ಸಮಸ್ಯೆಗಳ ಬಗ್ಗೆ ಚರ್ಚಿ ಪರಿಹರಿಸೋಣ ಎಂದರು. ಬಿಜೆಪಿ ಬೆಂಬಲ: ಅಹೋರಾತ್ರಿಧರಣಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ಜಿಲ್ಲಾ ವಕ್ತಾರ ಮನೋಜ್ ಪಟೇಲ್, ಜಿಲ್ಲಾ ಕಾರ್ಯದರ್ಶಿ ನಟರಾಜು ಇತರರು ಭಾಗವಹಿಸಿ ಬೆಂಬಲ ಸೂಚಿಸಿದರು. ಬಿಜೆಪಿ ಜಿಲ್ಲಾ ವಕ್ತಾರ ಮನೋಜ್ ಪಟೇಲ್ ಮಾತನಾಡಿ, ಹುತ್ತೂರು ಪಂಪ್ ಹೌಸ್ ನಿಂದ ಚಾಮರಾಜನಗರ ತಾಲೂಕಿನ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಆ ಭಾಗದ ರೈತರು ಹುತ್ತೂರು ಪಂಪ್ ಹೌಸ್ ಮುಂಭಾಗದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಬಿಜೆಪಿ ಬೆಂಬಲ ಸೂಚಿಸಿಸಿದೆ. ಅಧಿಕಾರಿಗಳು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಮೂರನೇ ಹಂತ ಕೆರೆಗಳಿಗೆ ನೀರು ಹರಿಸದೆ ನಾಲ್ಕನೆಯ ಹಂತದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತಿದ್ದಾರೆ. ಇದು ಎಷ್ಟರ ಮಟ್ಟಿಗೆ ಹರಿ ಎಂದು ಪ್ರಶ್ನಿಸಿದರು. ಇದು ಸ್ಥಳೀಯ ಶಾಸಕರಿಗೆ ಇಚ್ಛೆ ಇಲ್ಲವೋ ಅಥವಾ ಗುಂಡ್ಲುಪೇಟೆ ಶಾಸಕರ ಪ್ರಭಾವ ಹೆಚ್ಚಾಗುತ್ತಿದಿಯೋ ಗೊತ್ತಿಲ್ಲ. ಕಾನೂನು ಪ್ರಕಾರ 1ನೇ ಹಂತ, 2ನೇ ಹಂತ, 3ನೇ ಹಂತ ಪ್ರಕಾರವೇ ಕರೆಗಳಿಗೆ ನೀರು ತುಂಬಿಸಲಿ ಎಂದು ಒತ್ತಾಯಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ ಮಾತನಾಡಿ, ಹುತ್ತೂರು ಪಂಪ್‌ಹೌಸ್‌ನಿಂದ ಕೇವಲ ಮೂರನೇ ಹಂತದಲ್ಲಿ ಒಂದೇ ಒಂದು ಬಾರಿ ನೀರು ತುಂಬಿಸುವ ಕೆಲಸ ಮಾಡಿದರೆ ಅದನ್ನು ಬಿಟ್ಟರೆ ನೀರು ತುಂಬಿಸಿಲ್ಲ. ಒಂದುನೇ ಹಂತ, ಎರಡನೇ ಹಂತ, ಮೂರನೆಯ ಹಂತ ಬಿಟ್ಟು ಸ್ವಾರ್ಥ, ರಾಜಕಾರಣದಿಂದ 4ನೇ ಹಂತಕ್ಕೆ ನೀರು ಬಿಟ್ಟಿರುವುದು ರೈತ ಅಹೋರಾತ್ರಿ ಹೋರಾಟಕ್ಕೆ ಕಾರಣವಾಗಿದೆ. ಬರಗಾಲ ಕಾರಣದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವ ಸಂದರ್ಭದಲ್ಲಿ 900, 100 ಅಡಿಗೆ ಅಂತರ್ಜಲ ಕುಸಿದಿದೆ. ಇದೇ ರೀತಿ ಆದರೆ ಜನ, ಜಾನುವಾರುಗಳು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ನೀರು ಬಿಡುವ ಭರವಸೆ ನೀಡಿದ್ದಾರೆ. ಅವರಿಗೆ ರೈತರ ಪರವಾಗಿ ಧನ್ಯವಾದ ಅರ್ಪಿಸುತ್ತೇವೆ ಎಂದರು. ಕ್ಷೇತ್ರದ ಶಾಸಕರು ಮಂತ್ರಿಗಿರಿಗಾಗಿ ಪ್ರವಾಸಕ್ಕೆ ಹೋಗಿದ್ದಾರೆ. ಈ ಭಾಗದಲ್ಲಿ ರೈತರು ನೀರು ಇಲ್ಲದೆ... ತುಂಬಾ ತೊಂದರೆಯಲ್ಲಿದ್ದಾರೆ, ರೈತರ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಾವು... ದಯಾಮಾಡಿ ನಿಮಗೆ ವೋಟ್ ಹಾಕಿದ ತಪ್ಪಿಗಾಗಿ ಕೆರೆಗಳಿಗೆ ನೀರು ತುಂಬಿಸಿ ರೈತರ ಹಿತಕಾಪಾಡುವಂತೆ ಮನವಿ ಮಾಡಿದರು. ರೈತ ಮೋಹನ್ ರಾಜ್ ಮಾತನಾಡಿ, ಆಲಂಬೂರು ಏತ ಕುಡಿಯುವ ನೀರು ಯೋಜನೆಯಲ್ಲಿ ಮೂರನೆ ಹಂತದ ಕೊನೆಯ ಕೆರೆ ಅಮಚವಾಡಿ ಕೆರೆ. ಅಮಚವಾಡಿ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 15 ಸಾವಿರ ಜನಸಂಖ್ಯೆ ಇದ್ದು, 8-10 ಸಾವಿರ ಜಾನುವಾರುಗಳಿವೆ. ಮೂರನೇಯ ಹಂತ ಅಚ್ಚಕಟ್ಟು ಪ್ರದೇಶದಲ್ಲಿ ಹುಮಾರು 40 ಸಾವಿರ ಜನಸಂಖ್ಯೆ ಇದ್ದು ಸುಮಾರು 25 ಸಾವಿರ ಜಾನುವಾರು ಇದೆ. ಪ್ರತಿವರ್ಷವೂ ಅಧಿಕಾರಿಗಳು ಜನಪ್ರತಿನಿಧಿಗಳ ಒತ ಡಕ್ಕೆ ಮಣಿದು ಯಾವುದನ್ನು ಪರಿಪೂರ್ಣ ಮಾಡಿದೆ 1ನೇ ಹಂತ ಅಥವಾ 3ನೇ ಹಂತಕ್ಕೆ ವಾಪನ್ ನೀರು ಬಿಡುವ ಕೆಲಸ ಮಾಡುತಿದ್ದಾರೆ. ಇದು ದಯಮಾಡಿ ಯಾವ ಕಾರಣಕ್ಕೂ ಆಗಬಾರದು. ಜಿಲ್ಲಾಡಳಿತ ಆಲಂಬೂರಿಯಿಂದ ಯಾವುದೇ ಅಡತಡೆ ಇಲ್ಲದೆ ಹುತ್ತೂರು ಪಂಪ್‌ಹೌನ್‌ಗೆ ನೀರು ಶೇಖರಣೆ ಮಾಡಿ ಅಮಚವಾಡಿ ಕೆರೆ ತುಂಬಿಸಬೇಕು. ಎಣ್ಣೆಹೊಳೆ ಕೆರೆಭರ್ತಿ ಮಾಡಿ ಕೋಡಿ ಹರಿಸಬೇಕು. ಕೆರೆಗಳಿಗೆ ನೀರು ತುಂಬಿಸುವಲ್ಲಿ ವಿಫಲರಾಗಿರುವ ಅಧಿಕಾರಗಳನ್ನು ವರ್ಗಾವಣೆ ಮಾಡಿ ಸಮರ್ಥ, ಜಬಾಬ್ದಾರಿಯುತ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ನೀರು ಬಿಡುವ ತನಕ ಅಹೋರಾತ್ರಿ ಮುಂದುವರಿಯುತ್ತದೆ : ನಮ್ಮ ಕೆರೆಗಳಿಗೆ ನೀರು ತುಂಬಿಸುವ ತನಕ ಪ್ರತಿಭಟನೆ ಮುಂದುವರಿಸುವುದಾಗಿ ರೈತರು ಪಟ್ಟು ಹಿಡಿದಿದ್ದಾರೆ. .3
- ಚಾಮರಾಜನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಕುಡಿಯುವ ನೀರಿಗಾಗಿ ಹೋರಾಟ ಕರ್ನಾಟಕ ರಾಜ್ಯ ರೈತ ಸಂಘದಿಂದ ಚಾಮರಾಜನಗರದಲ್ಲಿ ಕುಡಿಯುವ ನೀರಿಗಾಗಿ ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿ ಅವರಿಗೆ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು1
- ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ : ತಮಿಳುನಾಡಿಗೆ ಹೋಗುವ ಹೆದ್ದಾರಿ ತಡೆದು ರೈತರ ಪ್ರತಿಭಟನೆ ಚಾಮರಾಜನಗರ, ಜು.31: ಕಾವೇರಿ ನೀರು ನಿರ್ವಹಣಾ ಮಂಡಳಿ ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3,500 ಕ್ಯುಸೆಕ್ ನೀರು ಹರಿಸುವಂತೆ ನೀಡಿರುವ ಆದೇಶವನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ ಇಂದು (ಜು.31) ರಸ್ತೆ ತಡೆ ಪ್ರತಿಭಟನೆ ನಡೆಸಲಾಗುತ್ತಿದೆ. ನಗರದ ಸೋಮವಾರಪೇಟೆ ಪೆಟ್ರೋಲ್ ಬಂಕ್ ಸಮೀಪ ನಡೆಯಲಿರುವ ಪ್ರತಿಭಟನೆಯಲ್ಲಿ ಜಿಲ್ಲೆಯ ರೈತರು ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಸಮರ್ಪಕ ಮಳೆಯಿಲ್ಲದೆ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಬೆಳೆದ ಬೆಳೆಗಳು ಒಣಗುತ್ತಿವೆ. ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿರುವುದು ರಾಜ್ಯದ ಹಿತಕ್ಕೆ ವಿರುದ್ಧವಾಗಿದೆ ಎಂದು ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.1
- ಕನ್ನಡ ಚಿತ್ರರಂಗ ಕೆಟ್ಟು ಕೆರ ಹಿಡಿದಿದೆ, ನಟಿ ರಾಗಿಣಿ ವರ್ತನೆಗೆ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಆಕ್ರೋಶ ಮಂಡ್ಯ-ಮಂಡ್ಯದಲ್ಲಿ ಕಾವೇರಿ ವಿಚಾರವಾಗಿ ನಟಿ ರಾಗಿಣಿ ವರ್ತನೆಗೆ ವಿರೋಧವ್ಯಕ್ತ ಪಡಿಸಿದ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಹೇಳಿದ್ದಿಷ್ಟು1
- Post by ರಾಮಲಿಂಗೇಗೌಡ ಎನ್1
- ಮೂರನೇ ಆಷಾಢ ಶುಕ್ರವಾರ ಅಂಗವಾಗಿ 2000 ಜನರಿಗೆ ಅನ್ನಸಂತರ್ಪಣೆ ಮಾಡಿದ್ದಾರೆ ಮೈಸೂರು, ಜು.31: ಮೈಸೂರಿನಲ್ಲಿ ಮೂರನೇ ಆಷಾಢ ಶುಕ್ರವಾರದ ಅಂಗವಾಗಿ ಗ್ಯಾರೇಜ್ ಹಾಗೂ ಟ್ಯಾಂಕರ್ ಮಾಲೀಕರ ಸಂಘದ ವತಿಯಿಂದ ಸುಮಾರು 2000 ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು. ನಗರದ ಪ್ರಮುಖ ವೃತ್ತದ ಸಮೀಪ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಗ್ಯಾರೇಜ್‌ಗಳ ಮಾಲೀಕರು, ಟ್ಯಾಂಕರ್ ಮಾಲೀಕರು, ಚಾಲಕರು, ಕಾರ್ಮಿಕರು ಹಾಗೂ ಸಾರ್ವಜನಿಕರು ಭಾಗವಹಿಸಿದರು. ಆಷಾಢ ಶುಕ್ರವಾರವನ್ನು ವಿಶೇಷವಾಗಿ ದೇವಿ ಆರಾಧನೆಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಪೂಜೆ, ಅಲಂಕಾರ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಬಳಿಕ ಅನ್ನಸಂತರ್ಪಣೆ ಆರಂಭಿಸಲಾಯಿತು. ಬಡವರು, ಕೂಲಿ ಕಾರ್ಮಿಕರು, ಪ್ರಯಾಣಿಕರು ಹಾಗೂ ಅಗತ್ಯವಿರುವ ಜನರಿಗೆ ಊಟ ವಿತರಿಸಲಾಯಿತು. ಕಾರ್ಯಕ್ರಮದ ಆಯೋಜಕರು ಮಾತನಾಡಿ, ಸಮಾಜಕ್ಕೆ ಸೇವೆ ಮಾಡುವ ಉದ್ದೇಶದಿಂದ ಪ್ರತಿವರ್ಷವೂ ಇಂತಹ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಗ್ಯಾರೇಜ್ ಮತ್ತು ಟ್ಯಾಂಕರ್ ವೃತ್ತಿಯಲ್ಲಿ ತೊಡಗಿರುವ ಎಲ್ಲರೂ ಒಗ್ಗಟ್ಟಿನಿಂದ ಈ ಸೇವಾ ಕಾರ್ಯದಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ ಎಂದರು. ಅನ್ನಸಂತರ್ಪಣೆಯಲ್ಲಿ ಅನ್ನ, ಸಾಂಬಾರ್, ಪಲ್ಯ, ಪಾಯಸ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಲಾಗಿತ್ತು. ಸೇವೆ ಸಲ್ಲಿಸಿದ ಸ್ವಯಂಸೇವಕರು ಶಿಸ್ತಿನಿಂದ ಊಟ ವಿತರಣೆ ಮಾಡಿ ಭಕ್ತರ ಮೆಚ್ಚುಗೆ ಪಡೆದರು. ಸ್ಥಳೀಯ ಮುಖಂಡರು ಮತ್ತು ಸಾರ್ವಜನಿಕರು ಕಾರ್ಯಕ್ರಮವನ್ನು ಪ್ರಶಂಸಿಸಿ, ಧಾರ್ಮಿಕ ಆಚರಣೆಯ ಜೊತೆಗೆ ಮಾನವೀಯ ಸೇವೆಯೂ ಸಮಾಜದಲ್ಲಿ ಬೆಳೆಬೇಕು ಎಂದು ಅಭಿಪ್ರಾಯಪಟ್ಟರು. ಮೈಸೂರಿನಲ್ಲಿ ಇಂತಹ ಸೇವಾ ಚಟುವಟಿಕೆಗಳು ಸಾಮರಸ್ಯ ಮತ್ತು ಸಹಕಾರದ ಸಂಕೇತವಾಗಿವೆ ಎಂದು ಅವರು ಹೇಳಿದರು.2
- All About,Greatfull and Thankful for Our #CEO #KarnatakaStateBoardOfAuqaf #Bengaluru for his Performance of Duty Regards *ಭಾರತ ನಲ್ಲಿ ವೈರಲ್*1
- ಧ್ರುವ ನಾರಾಯಣ್ ಸರಳ ಸಜ್ಜನ ರಾಜಕಾರಣಿ : ಪಿ.ಮರಿಸ್ವಾಮಿ ಆರ್.ಧ್ರುವನಾರಾಯಣ್ ಹುಟ್ಟುಹಬ್ಬ: ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ, 268 ಮಂದಿ ತಪಾಸಣೆ ಮಾಡಿಸಿಕೊಂಡರು. ಧ್ರುವ ನಾರಾಯಣ್ ಸರಳ ಸಜ್ಜನ ರಾಜಕಾರಣಿ : ಪಿ.ಮರಿಸ್ವಾಮಿ ದಿವಂಗತ ಮಾಜಿ ಸಂಸದ ಆರ್.ಧ್ರುವನಾರಾಯಣ್ ಹುಟ್ಟುಹಬ್ಬ: ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ, 268 ಮಂದಿ ತಪಾಸಣೆ ಮಾಡಿಸಿಕೊಂಡರು. ವರ್ತಕರ ಭವನದಿಂದ ರಾಮಸಮುದ್ರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿರವರಗೆ ರಸ್ತೆಯ 2 ಬದಿಗಳಲ್ಲಿ 65 ಗಿಡಗಳ ನೆಡುವ ಕಾರ್ಯಕ್ರಮ. ಚಾಮರಾಜನಗರ: ಆರ್. ಧ್ರುವನಾರಾಯಣ ಅವರು ದೇಶಕಂಡ ಅತ್ಯಂತ ಸರಳ, ಸಜ್ಜನಿಕೆ ರಾಜಕಾರಣಿಯಾಗಿದ್ದರು ಎಂದು ಕಾಡಾಧ್ಯಕ್ಷ ಪಿ.ಮರಿಸ್ವಾಮಿ ಗುಣಗಾನ ಮಾಡಿದರು. ನಗರದ ರೋಟರಿ ಭವನದಲ್ಲಿ ಧ್ರುವನಾರಾಯಣ್ ಅಭಿಮಾನಿಗಳ ಬಳಗ, ರೋಟರಿ ಸಂಸ್ಥೆ ವತಿಯಿಂದ ನಡೆದ ಮಾಜಿ ಸಂಸದ ದಿವಂಗತ ಆರ್. ಧ್ರುವನಾರಾಯಣರವರ 65ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಹಾಗೂ 65 ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ, ಪುಷ್ಷಾರ್ಚನೆ ಮಾಡಿ ಮಾತನಾಡಿದರು. ಧ್ರುವನಾರಾಯಣ್ ಅವರು ಅಜಾತಶತ್ರು ರಾಜಕಾರಣಿಯಾಗಿದ್ದರು. ಎರಡು ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾಗಿ, ಶಾಸಕರಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಪಕ್ಷಾತೀತವಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು ಎಂದರು. ಧ್ರುವನಾರಾಯಣ್ ಅವರು ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ಗಾಗಿ ಶ್ರಮಿಸಿದರು. ಅವರು ಮಾಡಿರುವ ಜನಪರ ಕಾರ್ಯಗಳು ಜೀವಂತವಾಗಿವೆ. ಅವರು ನಮಗೆ ಆದರ್ಶವಾಗಿದ್ದು,ಅವರ ಪಕ್ಷ ಸಂಘಟನೆ, ಶಿಸ್ತು ಪ್ರತಿಯೊಬ್ಬರಿಗೂ ಮಾದರಿ, ಅವರ ಆಡಳಿತಾವಧಿಯಲ್ಲಿ ಜಿಲ್ಲೆಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಇಂದಿಗೂ ಸ್ಮರಣೀಯವಾಗಿದೆ ಎಂದರು. ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗೌರ್ನರ್ ಡಾ. ನಾಗಾರ್ಜುನ ಮಾತನಾಡಿ, ಧ್ರುವನಾರಾಯಣ್ ಅವರೊಬ್ಬ ದೂರದೃಷ್ಠಿ ರಾಜಕಾರಣಿಯಾಗಿದ್ದು, ಮೊದಲ ಬಾರಿ ಸಿಎಸ್‌ಆರ್ ಅನುದಾನದಲ್ಲಿ 2.2. ಕೋಟಿ ಬಿಡುಗಡೆ ಮಾಡಿ ಎಲ್ಲ ಶಾಲೆಗಳಲ್ಲೂ ಶೌಚಾಲಯ ನಿರ್ಮಿಸಿಕೊಡುವ ಕೆಲಸ ಮಾಡಿದರು. ಅವರ ಹುಟ್ಟುಹಬ್ಬದಲ್ಲಿ ಅವರ ಅಭಿಮಾನಿ ಬಳಗ ಸಮಾಜಮುಖಿ ಕೆಲಸ ನಿಜಕ್ಕೂ ಶ್ಲಾಘನೀಯ ಎಂದರು. ಧ್ರುವನಾರಾಯಣ ಅಭಿಮಾನಿ ಬಳಗದ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ಧ್ರುವನಾರಾಯಣ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳ ಬಳಗದಿಂದ ಕಳೆದ 18 ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯಕ್ರಮಗಳೊಂದಿಗೆ ಆಚರಿಸಿಕೊಂಡು ಬರಲಾಗಿದ್ದು ಅದೇ ರೀತಿ ಇಂದು ಕೂಡ ಆರೋಗ್ಯ ತಪಾಸಣಾ ಶಿಬಿರ, ಅವರ 65ನೇ ಹುಟ್ಟುಹಬ್ಬದ ಅಂಗವಾಗಿ ನಗರದ ವರ್ತಕರ ಭವನದಿಂದ ರಾಮಸಮುದ್ರದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಯವರಗೆ ರಸ್ತೆ, 2 ಬದಿಯಲ್ಲೂ 65 ಗಿಡ ನಡೆಯುವ ಕಾರ್ಯಕ್ರಮ. ಅಲ್ಲದೆ ರೋಟರಿ ಸಂಸ್ಥೆ ನಡೆಸುತ್ತಿರುವ ಡಯಾಲಿಸಸ್ ಕೇಂದ್ರಕ್ಕೆ ಧ್ರುವನಾರಾಯಣ್ ನೆನಪಿನಲ್ಲಿ ಒಂದು ದಿನದ ವೆಚ್ಚವನ್ನು ನೀಡಲಾಗಿದೆ ಎಂದರು. ಧ್ರುವನಾರಾಯಣ್ ರವರ ಅಭಿಮಾನಿಗಳ ಬಳಗ, ರೋಟರಿ ಸಂಸ್ಥೆ, ಈಶ್ವರಿ ಟ್ರಸ್ಟ್ ವತಿಯಿಂದ ವರ್ತಕರ ಭವನದಿಂದ ರಾಮಸಮುದ್ರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿರವರಗೆ ರಸ್ತೆಯ 2 ಬದಿಗಳಲ್ಲಿ 65 ಗಿಡಗಳ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ರೋಟರಿ ಸಂಸ್ಥೆ ನಡೆಸುತ್ತಿರುವ ಡಯಾಲಿಸಸ್ ಕೇಂದ್ರಕ್ಕೆ ಧ್ರುವನಾರಾಯಣ್ ನೆನಪಿನಲ್ಲಿ ಒಂದು ದಿನದ ವೆಚ್ಚವನ್ನು ನೀಡಲಾಯಿತು, ಅನೀಮಿಯಾ ತಪಾಸಣಾ ಶಿಬಿರ ಹಾಗೂ ಔಷಧಿ ವಿತರಣೆ ಮಾಡಲಾಯಿತು.268 ಮಂದಿ ತಪಾಸಣೆ ಮಾಡಿಸಿಕೊಂಡರು. ಕಾರ್ಯಕ್ರಮದಲ್ಲಿ ಆರ್. ಧ್ರುವನಾರಾಯಣ ಅಭಿಮಾನಿ ಬಳಗ ಅಧ್ಯಕ್ಷ ಕಾಗಲವಾಡಿ ಚಂದ್ರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ವಿ.ಚಂದ್ರು, ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಜಿ.ಪಂ.ಮಾಜಿ ಸದಸ್ಯ ಸದಾಶಿವಮೂರ್ತಿ, ನಗರಸಭಾ ಮಾಜಿ ಅಧ್ಯಕ್ಷೆ ಚಿನ್ನಮ್ಮ,ಮಾಜಿ ಪದ್ಮಪುರಷೋತ್ತಮ, ಬಿ.ಕೆ.ರವಿಕುಮಾರ್, ಪರಿಸರ ಪ್ರೇಮಿ ವೆಂಕಟೇಶ್, ಹೊಮ್ಮದ ನಾಗನಾಯಕ, ರೋಟರಿ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ, ಡಾ.ನಾಗಾರ್ಜುನ, ತಾ.ಪಂ.ಮಾಜಿ ಸದಸ್ಯ ಪ್ರಕಾಶ್, ಕುಮಾರ್ ನಾಯಕ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು ಚೂಡಾ ಮಾಜಿ ಅಧ್ಯಕ್ಷ, ಸುಹೇಲ್ , ಮಹದೇವಯ್ಯ, ನಲ್ಲೂರು ಮಹಾದೇವಸ್ವಾಮಿ, , ಜಿ.ರಾಚಪ್ಪ ಮಹಾದೇವಸ್ವಾಮಿ, ಮಹದೇವಶೆಟ್ಟಿ, ಎಪಿಎಂಸಿ ಸದಸ್ಯರಾದ ಆಲೂರು ಪ್ರದೀಪ್, ಸೋಮೇಶ್, ಮೋಹನ್ ನಗು, ಅಕ್ಷಯ್,ನಾಗೇಂದ್ರ, ಪುರುಷೋತ್ತಮ, ಶಿವಸ್ವಾಮಿ, ಬ್ಯಾಡಮೂಡ್ಲು ನಾಗರಾಜು, ಮರಿಸ್ವಾಮಿ, ಸೋಮಣ್ಣ, ಇತರರು ಹಾಜರಿದ್ದರು.4