Shuru
Apke Nagar Ki App…
ಸಂಗಮೇಶ್ವರ ಪೇಟೆಯಿಂದ ಬಾಳೆಹೊನ್ನೂರುವರೆಗೂ ಬೃಹತ್ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಲು ನಿರ್ಧಾರ. ಚಿಕ್ಕಮಗಳೂರು : ಮಲೆನಾಡಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿ ಜಾರಿಯನ್ನ ವಿರೋಧಿಸಿ ಮಲೆನಾಡಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇದೇ 19 ರಂದು ಸಿಎಂ ಡಿ.ಕೆ ಶಿವಕುಮಾರ್ ಬಾಳೆಹೊನ್ನೂರು ಪಟ್ಟಣದಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿರುವ ರೈತರು ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹಾಗೂ ಜಾಗರ ಹೋಬಳಿಯ ಎಲ್ಲ ನಾಗರೀಕರು ಹಾಗೂ ರೈತರು ಸಂಗಮೇಶ್ವರ ಪೇಟೆಯಿಂದ ಬೃಹತ್ ಪಾದಯಾತ್ರೆ ಮೂಲಕ ತೆರಳಿ ಸಿಎಂಗೆ ಮನವಿ ಸಲ್ಲಿಸಲು ಸಿರ್ಧರಿಸಿದ್ದಾರೆ. ಈ ಪಾದಯಾತ್ರೆಯಲ್ಲಿ ಸರ್ವ ಪಕ್ಷ ಹಾಗೂ ಎಲ್ಲ ಸಂಘಟನೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.
Ckm 18
ಸಂಗಮೇಶ್ವರ ಪೇಟೆಯಿಂದ ಬಾಳೆಹೊನ್ನೂರುವರೆಗೂ ಬೃಹತ್ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಲು ನಿರ್ಧಾರ. ಚಿಕ್ಕಮಗಳೂರು : ಮಲೆನಾಡಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿ ಜಾರಿಯನ್ನ ವಿರೋಧಿಸಿ ಮಲೆನಾಡಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇದೇ 19 ರಂದು ಸಿಎಂ ಡಿ.ಕೆ ಶಿವಕುಮಾರ್ ಬಾಳೆಹೊನ್ನೂರು ಪಟ್ಟಣದಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿರುವ ರೈತರು ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹಾಗೂ ಜಾಗರ ಹೋಬಳಿಯ ಎಲ್ಲ ನಾಗರೀಕರು ಹಾಗೂ ರೈತರು ಸಂಗಮೇಶ್ವರ ಪೇಟೆಯಿಂದ ಬೃಹತ್ ಪಾದಯಾತ್ರೆ ಮೂಲಕ ತೆರಳಿ ಸಿಎಂಗೆ ಮನವಿ ಸಲ್ಲಿಸಲು ಸಿರ್ಧರಿಸಿದ್ದಾರೆ. ಈ ಪಾದಯಾತ್ರೆಯಲ್ಲಿ ಸರ್ವ ಪಕ್ಷ ಹಾಗೂ ಎಲ್ಲ ಸಂಘಟನೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.
More news from ಕರ್ನಾಟಕ and nearby areas
- ಹುಳಿಯಾರು ವಾರ್ಡ್ ನಂಬರ್ 10 ರಲ್ಲಿ ಕಾಮಶೇಟಿ ಪಾಳ್ಯ ಗ್ರಾಮದಲ್ಲಿ ಈ ಸ್ವರ್ಣ ಗೌರಿ ಹಬ್ಬದ ಪ್ರಯುಕ್ತ ಬನಶಂಕರಿ ಬಸವೇಶ್ವರ ದೇವಸ್ಥಾನದ ಮುಂದೆ ಲಿಂಗಪ್ಪನ ಪಾಳ್ಯ ಮತ್ತು ನಾಗಪ್ಪ ಕಟೆ ಯುವಕರಿಂದ ಕೋಲಾಟ ನಡೆಸಲಾಯಿತು. ನಡೆಸಿಕೊಟ್ಟ ಯುವಕರಿಗೆ ಗ್ರಾಮಸ್ಥರಿಂದ ಧನ್ಯವಾದಗಳು. ಹುಳಿಯಾರು ವಾರ್ಡ್ ನಂಬರ್ 10 ರಲ್ಲಿ ಕಾಮಶೇಟಿ ಪಾಳ್ಯ ಗ್ರಾಮದಲ್ಲಿ ಈ ಸ್ವರ್ಣ ಗೌರಿ ಹಬ್ಬದ ಪ್ರಯುಕ್ತ ಬನಶಂಕರಿ ಬಸವೇಶ್ವರ ದೇವಸ್ಥಾನದ ಮುಂದೆ ಲಿಂಗಪ್ಪನ ಪಾಳ್ಯ ಮತ್ತು ನಾಗಪ್ಪ ಕಟೆ ಯುವಕರಿಂದ ಕೋಲಾಟ ನಡೆಸಲಾಯಿತು. ನಡೆಸಿಕೊಟ್ಟ ಯುವಕರಿಗೆ ಗ್ರಾಮಸ್ಥರಿಂದ ಧನ್ಯವಾದಗಳು.1
- ‘ಮಾನವೀಯ ನೆರವಿಗೆ ಕೃತಜ್ಞತೆಯಾಗಿ ನಾವೇ ಜಿಪಿಎ ಕೊಟ್ಟಿದ್ದೇವೆ’: ಅಕ್ರಮ ಖಾತೆ ಆರೋಪ ತಳ್ಳಿಹಾಕಿದ ಕುಟುಂಬಸ್ಥರು, ದಾಖಲೆ ಸಮೇತ ರಮೇಶ್ ಸ್ಪಷ್ಟನೆ. ತುರುವೇಕೆರೆ: ರೈತ ಸಂಘ ತನ್ನ ವಿರುದ್ಧ ಮಾಡಿರುವ ಅಕ್ರಮ ಖಾತೆ ವರ್ಗಾವಣೆ ಆರೋಪ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದ ಹಳೆಯ ರಾಜಕೀಯ ದ್ವೇಷದಿಂದ ಸುಳ್ಳು ವಿವಾದ ಸೃಷ್ಟಿಸಲಾಗುತ್ತಿದೆ ಎಂದು ನಾಗೇಗೌಡನಪಾಳ್ಯದ ಮಾಜಿ ವಿಎಸ್‌ಎಸ್‌ಎನ್ ಅಧ್ಯಕ್ಷ ರಮೇಶ್ ಪಿ. ಸ್ಪಷ್ಟಪಡಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಮೀನಿನ ಮೂಲ ದಾಖಲೆಗಳು ಹಾಗೂ ಆಸ್ಪತ್ರೆಯ ಚಿಕಿತ್ಸೆಯ ಫೋಟೋಗಳನ್ನು ಪ್ರದರ್ಶಿಸಿ ಅವರು ಮಾತನಾಡಿದರು. ಮಾನವೀಯ ನೆರವು ಮತ್ತು ಕಾನೂನುಬದ್ಧ ಒಪ್ಪಂದ: ಮುಹಮ್ಮದ್ ಗೌಸ್ ಎಂಬುವವರಿಗೆ ಸರ್ಕಾರದಿಂದ ಸುಮಾರು 3 ಎಕರೆ ದರಖಾಸ್ತು ಜಮೀನು ಮಂಜೂರಾಗಿತ್ತು. 1991–92ರಲ್ಲಿ ಅರ್ಜಿ ಸಲ್ಲಿಸಿ, 2008ರಲ್ಲಿ ಸಾಗುವಳಿ ಚೀಟಿ ಪಡೆದು, 2015ರಲ್ಲಿ ಖಾತೆ ಮಾಡಿಸಿಕೊಂಡು ಅವರೇ ಸಾಗುವಳಿ ಅನುಭವದಲ್ಲಿದ್ದರು. 80 ವರ್ಷ ದಾಟಿದ್ದ ಮುಹಮ್ಮದ್ ಗೌಸ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ಸಂದರ್ಭದಲ್ಲಿ ಕುಟುಂಬದ ಕೋರಿಕೆಯಂತೆ ಮಾನವೀಯ ನೆಲೆಯಲ್ಲಿ ಸಂಪೂರ್ಣ ವೈದ್ಯಕೀಯ ವೆಚ್ಚ ಹಾಗೂ ಆರ್ಥಿಕ ನೆರವು ನೀಡಲಾಗಿತ್ತು. ಆ ಸಮಯದಲ್ಲಿ ನಿಯಮಾನುಸಾರ ಒಪ್ಪಂದ (ಅಗ್ರಿಮೆಂಟ್) ಮಾಡಿಕೊಳ್ಳಲಾಗಿತ್ತು ಎಂದು ರಮೇಶ್ ವಿವರಿಸಿದರು. ಮುಹಮ್ಮದ್ ಗೌಸ್ ಅವರ ನಿಧನದ ಬಳಿಕ, ತಮಗೆ ಯಾವುದೇ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಅವರ ಪತ್ನಿ ಮುಮ್ತಾಜ್ ಹಾಗೂ ಐವರು ಮಕ್ಕಳು ಸ್ವಇಚ್ಛೆಯಿಂದ ಕಾನೂನುಬದ್ಧವಾಗಿ ತಮ್ಮ ಹೆಸರಿಗೆ ಜನರಲ್ ಪವರ್ ಆಫ್ ಅಟಾರ್ನಿ (GPA) ನೋಂದಣಿ ಮಾಡಿಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಕಣ್ಣೀರಿಟ್ಟ ಮುಹಮ್ಮದ್ ಗೌಸ್ ಕುಟುಂಬಸ್ಥರು: ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮುಹಮ್ಮದ್ ಗೌಸ್ ಅವರ ಪತ್ನಿ ಮುಮ್ತಾಜ್ ಭಾವುಕರಾಗಿ ಕಣ್ಣೀರು ಹಾಕುತ್ತಾ ಮಾತನಾಡಿ, "ಸುಮಾರು 20 ವರ್ಷಗಳಿಂದ ನಾವೇ ಜಮೀನಿನ ಸ್ವಾಧೀನ ಅನುಭವದಲ್ಲಿದ್ದೇವೆ. ಸರ್ಕಾರದ ಸಾಗುವಳಿ ಚೀಟಿ, ಖಾತೆ ಸೇರಿದಂತೆ ಎಲ್ಲಾ ಸಕ್ರಮ ದಾಖಲೆಗಳು ನಮ್ಮ ಬಳಿಯೇ ಇವೆ. ನಮ್ಮ ಸಂಕಷ್ಟದ ಪರಿಸ್ಥಿತಿಯಲ್ಲಿ ರಮೇಶ್ ಅವರು ಚಿಕಿತ್ಸೆಗೆ ನೆರವಾಗಿ ಜೀವ ಉಳಿಸಲು ಪ್ರಯತ್ನಿಸಿದರು. ಅವರಿಗೆ ಮೋಸವಾಗಬಾರದೆಂದು ಇಡೀ ಕುಟುಂಬ ಒಟ್ಟಾಗಿ ಜಿಪಿಎ ಮಾಡಿಕೊಟ್ಟಿದ್ದೇವೆ. ಇದರಲ್ಲಿ ಯಾರ ಒತ್ತಾಯವೂ ಇಲ್ಲ, ಯಾವುದೇ ಅಕ್ರಮವೂ ನಡೆದಿಲ್ಲ" ಎಂದು ತಿಳಿಸಿದರು. ಎಲ್ಲವೂ ಕಾನೂನುಬದ್ಧ, ತನಿಖೆಗೆ ಸಿದ್ಧ: ತಹಶೀಲ್ದಾರ್ ಅವರ ಆದೇಶದಂತೆ ತಾಲೂಕು ಸರ್ವೆ ಇಲಾಖೆಯಿಂದ ಜಾಗದ ಅಧಿಕೃತ ನಕ್ಷೆ (ಸ್ಕೆಚ್) ಮಾಡಿಸಲಾಗಿದೆ. ಜಮೀನು ನೀಡಿದ ಕುಟುಂಬಕ್ಕಾಗಲಿ ಅಥವಾ ಅಕ್ಕಪಕ್ಕದ ರೈತರಿಗಾಗಲಿ ಯಾವುದೇ ತಕರಾರಿಲ್ಲದಿರುವಾಗ, ಕೆಲವರು ರೈತ ಸಂಘದ ಹೆಸರನ್ನು ಮುಂದಿಟ್ಟುಕೊಂಡು ರಾಜಕೀಯ ದುರುದ್ದೇಶದಿಂದ ತೇಜೋವಧೆ ಮಾಡುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ತಾನು ಸರ್ಕಾರಕ್ಕಾಗಲಿ, ಜನರಿಗಾಗಲಿ ನಯಾಪೈಸೆ ಮೋಸ ಮಾಡಿಲ್ಲ. ಈ ವಿಚಾರದಲ್ಲಿ ಎಂತಹ ತನಿಖೆ ಎದುರಿಸಲೂ ಸಿದ್ಧ ಎಂದು ರಮೇಶ್ ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ಗೌಸ್ ಅವರ ಪತ್ನಿ ಮುಮ್ತಾಜ್ ಬೀ ಹಾಗೂ ಪುತ್ರ ನೂರುಲ್ಲಾ ಉಪಸ್ಥಿತರಿದ್ದರು.4
- 23ನೇ ವರ್ಷದ ಬಂಟ್ವಾಳ ಜಕ್ರಿಬೆಟ್ಟು ಶ್ರೀ ಗಣೇಶೋತ್ಸವದ ಮೂರನೇ ದಿನದ ಸಂಭ್ರಮ ಭಕ್ತಿ, ಸಡಗರ ಹಾಗೂ ಸಂಭ್ರಮ ಶ್ರೀ ಗಣೇಶನಿಗೆ ವಿಶೇಷ ಪೂಜೆ, ಅಲಂಕಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆಯಿತು. ಈ ಸಂದರ್ಭದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ದರ್ಶನ ಪಡೆದು ಪುನೀತರಾದರು. ಕಾರ್ಯಕ್ರಮದ ಅಂಗವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ನೂರಾರು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಭಕ್ತಿ, ಸೇವೆ ಮತ್ತು ಸೌಹಾರ್ದತೆಯೊಂದಿಗೆ ಜಕ್ರಿಬೆಟ್ಟಿನ ಗಣೇಶೋತ್ಸವದ ಮೂರನೇ ದಿನ.1
- ಭಾರತದ ಪ್ರಧಾನ ಮಂತ್ರಿ ಶ್ರೀಯುತ ನರೇಂದ್ರ ಮೋದಿಜಿ ರವರ 25 ವರ್ಷಗಳ ಜನ ಸೇವೆಯ ಗೌರವಾರ್ಥ ಆಶೀರ್ವಾದದ ದೀಪ ಹಚ್ಚೋಣ. ಜನಪ್ರಿಯ ಸಂಸದ ಬಿ ವೈ ರಾಘವೇಂದ್ರ. ಭಾರತ ದೇಶದ ಪ್ರಧಾನ ಮಂತ್ರಿ ಶ್ರೀಯುತ ನರೇಂದ್ರ ಮೋದಿಜಿ ರವರ 25 ವರ್ಷಗಳ ಜನ ಸೇವೆಯ ಗೌರವಾರ್ಥ ಆಶೀರ್ವಾದದ ದೀಪ ಹಚ್ಚೋಣ. " ಬಿಜೆಪಿ ಸೇವಾ ಸಂಕಲ್ಪ ಅಭಿಯಾನ" ಬಿ. ವೈ .ರಾಘವೇಂದ್ರ ರವರು ಜನಪ್ರಿಯ ಸಂಸದರು ಶಿವಮೊಗ್ಗ ಲೋಕಸಭಾ ಕ್ಷೇತ್ರ.1
- ಸೋಲಾರ್ ಪ್ಲಾಂಟ್ ಅಳವಡಿಕೆ ಖಂಡಿಸಿ ಈಚಘಟ್ಟ ಗ್ರಾಮಸ್ತರು ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಸೋಲಾರ್ ಪ್ಲಾಂಟ್ ಅಳವಡಿಕೆ ಖಂಡಿಸಿ ಈಚಘಟ್ಟ ಗ್ರಾಮಸ್ತರು ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ. ಗೋಮಾಳ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಲು ನೀಡಿರುವ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ಈಚಘಟ್ಟ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಹೊಳಲ್ಕೆರೆ ತಾಲ್ಲೂಕಿನ ಈಚಘಟ್ಟ ಗ್ರಾಮದ ಸರ್ವೆ ನಂಬರ್ 6ರಲ್ಲಿರುವ 52 ಎಕರೆ ಗೋಮಾಳ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಲು ಸರ್ಕಾರ ಅನುಮತಿ ನೀಡಿದೆ. 2022ರಲ್ಲಿ ಈ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದವರನ್ನು ಅರಣ್ಯ ಇಲಾಖೆಯಿಂದ ಸಸಿ ನೆಡಲಾಗುತ್ತದೆ ಎಂದು ಹೇಳಿ ಅಲ್ಲಿಂದ ಒಕ್ಕಲೆಬ್ಬಿಸಲಾಗಿತ್ತು. ಆದರೆ ಇದೀಗ ಸರ್ಕಾರ ಏಕಾಏಕಿ ಇದೇ ಜಾಗದಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಲು ಅನುಮತಿ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಚಘಟ್ಟ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ದನಕರುಗಳನ್ನು ಮೇಯಿಸಲು ಈ ಜಾಗ ಬಿಟ್ಟರೆ ಬೇರೆ ಯಾವುದೇ ಜಾಗವಿಲ್ಲ. ಹೀಗಾಗಿ ಗೋಮಾಳ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಲು ನೀಡಿರುವ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.1
- ಸರ್ವಧರ್ಮ ಸಮಾನತೆ ಸಾರುವ ದೇವನು ಒಬ್ಬನೇ ನಾಮ ಹಲವು ಸರ್ವ ಧರ್ಮ ಸಮಾನತೆ ಸಾರುವ. ಚಳ್ಳಕೆರೆ ನಗರದ ಮಹದೇವಿಯ ರಸ್ತೆಯ ಇಬ್ರಾಹಿಂಪುರ ಓಂ ಗಣಪತಿ ಯುವಕ ಬಳಗದ ವತಿಯಿಂದ ದೇವನು ಒಬ್ಬನೇ ನಾಮವು ಹಲವು ಎನ್ನುವ ವಿನಾಯಕನ ಪ್ರತಿಷ್ಠಾಪನೆ ಮಾಡಲಾಗಿತ್ತು.1
- ಹುಳಿಯಾರಿನ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ1
- ಮಂಗಳೂರಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಕೆ.ಡಿ.ಪಿ. ತ್ರೈಮಾಸಿಕ ಸಭೆ ಮಂಗಳೂರಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿಂದು ನಡೆದ ಜಿಲ್ಲಾ ಮಟ್ಟದ ಕೆ.ಡಿ.ಪಿ. ತ್ರೈಮಾಸಿಕ ಸಭೆಯ ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು. ದ.ಕ. ಜಿಲ್ಲೆಯ ಹಲವೆಡೆಯಿಂದ ತಮ್ಮ ಮನವಿಗಳು ಈಡೇರುವ ನಿರೀಕ್ಷೆಯನ್ನು ಹೊತ್ತು ಬಂದಿದ್ದ ನಾಗರಿಕರನ್ನು ಎಂದಿಗೂ ನಿರ್ಲಕ್ಷ್ಯ ಮಾಡಲಾರೆವು. ಅವರುಗಳು ಸಲ್ಲಿಸಿದ ಮನವಿಯಂತೆ ಅಗತ್ಯ ಸೇವೆಗಳು ಕೂಡ ಅವರ ಬಳಿಗೆ ತಲುಪಿಸಲಾಗುವುದು ಎಂಬ ಭರವಸೆಯನ್ನು ನೀಡಲಾಯಿತು.1
- ಶಿವಮೊಗ್ಗ,: ತನು ಜ್ಯೂಸ್ ಸೆಂಟರ್ ಬೇಟಿ ನೀಡಿದ ಅಧಿಕಾರಿಗಳ ತಂಡ ಜ್ಯೂಸ್ ಮಾಲಿಕನ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ತನು ಜ್ಯೂಸ್ ಸೆಂಟರ್ ಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದಾಗ ಕೊಳೆತ ಹಣ್ಣುಗಳನ್ನು ಶೇಖರಿಸಿಟ್ಟಿದ್ದ ಬ್ರಿಡ್ಜ್ ತಪಾಸಣೆ ಮಾಡಿದಾಗ ಸೇಬು, ಮೂಸಂಬಿ, ಕಲ್ಲಂಗಡಿ, ಅವಕೊಡ,ದ್ರಾಕ್ಷಿ, ಬಾಳೆಹಣ್ಣು, ಮಾವಿನಹಣ್ಣು , ಬೆಣ್ಣೆ ಹಣ್ಣು,ಹೀಗೆ ಹಲವಾರು ಹಣ್ಣುಗಳಿಂದ ಜ್ಯೂಸ್ ತಯಾರಿಸಿ ಸಾರ್ವಜನಿಕರಿಗೆ ಕೊಡುತ್ತಿರುವುದು ಕಂಡುಬಂದಿದ್ದು ಹಾಗೂ ಕೆಲವರು ಆಸ್ಪತ್ರೆಯ ರೋಗಿಗಳಿಗೂ ಸಹ ಇದೇ ಕೊಳೆತ ಹಣ್ಣಿನಿಂದ ಜ್ಯೂಸ್ ತೆಗೆದುಕೊಂಡು ಹೋಗಿರುವುದು ಕೂಡ ಗಮನಕ್ಕೆ ಬಂದಿರುವುದು ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ ಕೂಡಲೇ ಇದನ್ನು ಸೀಜ್ ಮಾಡಲಾಗಿದೆ. ಜ್ಯೂಸ್ ಮಾಲಿಕನ ಮೇಲೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.1